Tag: ಇಲಿಯಾಸ್

  • ನ್ಯಾಯ ಕೊಡ್ಸಿ, ಇಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೋತೀನಿ- ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ವೈರಲ್

    ನ್ಯಾಯ ಕೊಡ್ಸಿ, ಇಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೋತೀನಿ- ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ವೈರಲ್

    ಮಂಗಳೂರು: ಟಾರ್ಗೆಟ್ ಗ್ರೂಪ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಕೇಳಿ ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪತ್ರದಲ್ಲಿ ದಾವೂದ್, ಸಫ್ವಾನ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯನೊಬ್ಬನ ಹೆಸರು ಉಲ್ಲೇಖವಾಗಿದೆ. ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ನಾನು ನೇಣಿಗೆ ಶರಣಾಗಿ ಸಾಯುತ್ತೇನೆಂದು ಪತ್ರದಲ್ಲಿ ಇಲಿಯಾಸ್ ಪತ್ನಿ ಫರ್ಜಾನಾ ಹೆಸರಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಹತ್ಯೆ ಆರೋಪಿಗಳಿಗೆ ಸಚಿವ ಯು.ಟಿ.ಖಾದರ್ ಆಪ್ತನಾಗಿರುವ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು ಬೆಂಗಾವಲಿದ್ದಾನೆ ಎಂಬಂತೆ ಬಿಂಬಿಸಿ ಸುದ್ದಿ ಹರಡಲಾಗುತ್ತಿದೆ. ಅಲ್ಲದೆ ದಾವೂದ್ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾನೆ. ಆತನಿಗೆ ಸಫ್ವಾನ್, ಉಸ್ಮಾನ್ ಕಲ್ಲಾಪು, ರಹೀಮ್ ಮಂಚಿಲ ಸಪೋರ್ಟ್ ಇದೆ. ಆದರೆ ತಾನು ಮಾತ್ರ ಇನ್ನು ಯಾವುದೇ ಜಗಳ ಮಾಡುವುದಿಲ್ಲ ಅಂತಾ ಇಲಿಯಾಸ್ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದನೆಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ನನಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ನನ್ನ ಸಾವಿಗೆ ನೀವೇ ಹೊಣೆಯಾಗುತ್ತೀರಿ ಅಂತಾ ಫರ್ಜಾನಾ ಹೆಸರಲ್ಲಿ ಬರೆದಿರುವ ಪತ್ರ ವಾಟ್ಸಪ್ ಗ್ರೂಪ್ ಗಳಲ್ಲಿ ತಲ್ಲಣ ಮೂಡಿಸಿದೆ. ಆದರೆ ಪತ್ರ ಆಕೆಯೇ ಬರೆದಿದ್ದಾರಾ ಹಾಗೂ ಯಾರಿಗೆ ಬರೆದ ಪತ್ರ ಅನ್ನೋದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

     

  • ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕೊಲೆ, ಗುಪ್ತಚರ ಇಲಾಖೆ ಏನ್ ಮಾಡ್ತಿದೆ?- ಶೋಭಾ ಪ್ರಶ್ನೆ

    ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕೊಲೆ, ಗುಪ್ತಚರ ಇಲಾಖೆ ಏನ್ ಮಾಡ್ತಿದೆ?- ಶೋಭಾ ಪ್ರಶ್ನೆ

    ಬೆಂಗಳೂರು: ಕರಾವಳಿಯಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿಯೇ ಕೊಲೆಗಳು ನಡೆಯುತ್ತಿವೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ಮಂಗಳೂರಿನ ಇಲಿಯಾಸ್ ಕೊಲೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಹತ್ಯೆ ಮಾಡ್ತಾರೋ ಗೊತ್ತಿಲ್ಲ. ಸರ್ಕಾರಕ್ಕೆ ಇಷ್ಟೆಲ್ಲ ಆಗುತ್ತಿದ್ರೂ, ಅವರ ಹತ್ತಿರವೇ ಗುಪ್ತಚರ ಇಲಾಖೆ ಇದ್ದರೂ ಏನೂ ಮಾಡ್ತಿಲ್ಲ. ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿ ಹಿಂದೂ-ಮುಸ್ಲಿಂ ಮಧ್ಯೆ ಜಗಳ ಹಚ್ಚುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ ಅಂತ ಆರೋಪಿಸಿದ ಅವರು, ಹಿಂದೂಗಳನ್ನು ಮುಸಲ್ಮಾನರು ಕೊಲೆ ಮಾಡಬೇಕು. ಮುಸಲ್ಮಾನರನ್ನು ಹಿಂದೂಗಳು ಕೊಲೆ ಮಾಡಬೇಕು ಅನ್ನೋ ಕುಮ್ಮಕ್ಕನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಅಪರಾಧಿಗಳನ್ನು ಬಂಧಿಸುವಂತಹ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅದರ ಬದಲಾಗಿ ಉಗ್ರವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಅಂದ್ರು. ಇದನ್ನೂ ಓದಿ: `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    ಮುಸಲ್ಮಾನರಲ್ಲಿ ಕೆಲವೇ ಜನ ಉಗ್ರವಾದಿಗಳು, ಜಿಹಾದಿಗಳು ಹಾಗೂ ಪಿಎಫ್‍ಐ ಸಂಘಟನೆ ಜೊತೆ ಇದ್ದಾರೆ. ಇಂತಹವರಿಗೆ ಪ್ರೇರಣೆ ನೀಡಿ ಒಡೆದು ಆಳುವಂತಹ ನೀತಿಯನ್ನು ಮಾಡಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಂಘರ್ಷವನ್ನು ಉಂಟುಮಾಡುವಂತಹ ವ್ಯವಸ್ಥಿತ ಷಡ್ಯಂತ್ರದ ಫಲವಾಗಿ ಇಂತಹ ಘಟನೆಗಳು ನಡೆಯುತ್ತಿದೆ ಅಂತ ಕಿಡಿಕಾರಿದ್ರು.

    ತಕ್ಷಣ ಕೊಲೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಹಾಗೆಯೇ ಇನ್ನುಳಿದ 3 ತಿಂಗಳಾದ್ರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊರಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ರು.

    https://www.youtube.com/watch?v=vmgH5FDGx6Y

    https://www.youtube.com/watch?v=pnLn279DzSc

  • `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    ಧಾರವಾಡ: ಯಾವುದೇ ಹತ್ಯೆಯಾದಾಗ ನಾವು ಆ ವ್ಯಕ್ತಿಯ ಹಿನ್ನೆಲೆಗಳನ್ನು ಅರಿಯಬೇಕು. ಇಲಿಯಾಸ್ ಕಾಂಗ್ರೆಸ್ ಕಾರ್ಯಕರ್ತ ಆಗಿದ್ದ. ನಮಗೆ ಎಲ್ಲರೂ ಕೂಡ ಸಹಚರರೇ. ಆದ್ರೆ ಯಾರೇ ತಪ್ಪು ಮಾಡಿದ್ರು ನಾವು ಸಹಿಸೊಲ್ಲ ಅಂತ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಟಾರ್ಗೆಟ್ ಗ್ರೂಪ್ ರೂವಾರಿ, ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಾರ್ಗೆಟ್ ಗ್ರೂಪ್ ಏನು ಮಾಡ್ತಾ ಇತ್ತು ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ. ಯಾರೆಲ್ಲ ಕೊಲೆಯಲ್ಲಿ ಭಾಗಿಯಾಗ್ತಾರೆ? ಅಶಾಂತಿ ಸೃಷ್ಟಿಸ್ತಾರೆ? ಅವೆಲ್ಲ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ. ಅಂತಹ ಸಂಘಟನೆಗಳು ಕೇಂದ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತವೆ. ಹೀಗಾಗಿ ಕೇಂದ್ರ ಸರ್ಕಾರವೇ ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅಂತ ಹೇಳಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಕೇಳುವ ಬಿಜೆಪಿಯವರು ತಮ್ಮದೇ ಕೇಂದ್ರ ಸರ್ಕಾರದ ಮೂಲಕ ಬ್ಯಾನ್ ಮಾಡಿಸಲಿ. ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿದ್ರೆ ಅವರು ಬೇರೆ ಬೇರೆ ರಾಜ್ಯದಲ್ಲಿ ಕುಳಿತು ಕಾರ್ಯನಿರ್ವಹಿಸಬಹುದು. ಹಾಗಾಗಿ ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರವೇ ಗುರುತಿಸಬೇಕು. ಮಂಗಳೂರಿನಲ್ಲಿ ಕೆಲ ಹತ್ಯೆಗಳಾದಾಗ ಅದನ್ನು ಇನ್ನಷ್ಟು ಗೊಂದಲ ಮಾಡಿ ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರಿಗೆ ತನಿಖೆ ಮಾಡಲು ಬಿಡದಂತೆ ಗಲಾಟೆಗಳನ್ನು ಸೃಷ್ಟಿಸುತ್ತಾ ಇದ್ದಾರೆ ಅಂದ್ರು. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಮಂಗಳೂರಿನಲ್ಲಿ ಕೆಲವರು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ರೂ ಮಂಗಳೂರು ಜನ ಸಹಬಾಳ್ವೆ ಬಿಡಲಿಲ್ಲ. ದೀಪಕ್ ಹತ್ಯೆ ಮಾಡಿದವರು ಸುಪಾರಿ ಕಿಲ್ಲರ್ ಅಂತ ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಕುರಿತು ಪೊಲೀಸರೇ ಹೆಚ್ಚಿನ ತನಿಖೆ ಮಾಡಬೇಕು. ಬಿಜೆಪಿಯವರು ಒಬ್ಬೊಬ್ಬರೂ ಒಂದೊಂದು ಕಡೆ ಬೆಂಕಿ ಹಾಕುತ್ತೀವಿ ಅಂತ ಹೇಳಿಕೊಳ್ತಾ ಹೋಗುತ್ತಿದ್ದಾರೆ. ಒಬ್ಬರು ಮೈಸೂರು, ಇನ್ನೊಬ್ಬರು ಮಂಗಳೂರು, ಮತ್ತೊಬ್ಬರು ಇನ್ನೆಲ್ಲೋ ಬೆಂಕಿ ಹಾಕುತ್ತೇವೆ ಅಂದ್ರೆ ರಾಜ್ಯಾಧ್ಯಕ್ಷರು ಇಡೀ ರಾಜ್ಯಕ್ಕೆ ಬೆಂಕಿ ಹಾಕ್ತೇನೆ ಅಂತ ಹೊರಟಿದ್ದಾರೆ ಅಂದ್ರು.