Tag: ಇಲಿಯಾನಾ ಡಿಕ್ರೂಜ್‌

  • ಕೊನೆಗೂ ರಿವೀಲ್‌ ಆಯ್ತು ನಟಿ ಇಲಿಯಾನಾ ಮದುವೆ ಗುಟ್ಟು

    ಕೊನೆಗೂ ರಿವೀಲ್‌ ಆಯ್ತು ನಟಿ ಇಲಿಯಾನಾ ಮದುವೆ ಗುಟ್ಟು

    ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ(Ileana)  ಅವರು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿ ರಿವೀಲ್ ಆಗಿರುವ ಬೆನ್ನಲ್ಲೇ ನಟಿಯ ಬಗ್ಗೆ ಮತ್ತೊಂದು ಬ್ಲಾಸ್ಟಿಂಗ್ ಸುದ್ದಿಯೊಂದು ಸಿಕ್ಕಿದೆ. ಇಲಿಯಾನಾ ಮದುವೆಯಾಗಿರುವ ಬಗ್ಗೆ ನಯಾ ಖಬರ್ ಸಿಕ್ಕಿದೆ. ಸಿನಿಮಾರಂಗ, ಅಭಿಮಾನಿಗಳು ಸೇರಿದಂತೆ ಅನೇಕರು ಇಲಿಯಾನಾ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. ಆದರೆ ಈ ಸುದ್ದಿಗೆ ಈಗ ನಯಾ ಟ್ವಿಸ್ಟ್‌ ಸಿಕ್ಕಿದೆ. ಮದುವೆಯಾಗಿದ್ರೂ (Wedding) ನಟಿ ಸುಮ್ಮನೆ ಇರೋದ್ಯಾಕೆ? ಎಂಬ ಅನುಮಾನ ಎಲ್ಲರನ್ನೂ ಕಾಡ್ತಿದೆ. ಇಲ್ಲಿದೆ ಮಾಹಿತಿ.

    ಇಲಿಯಾನಾ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ವಿಚಾರವನ್ನ ತಡವಾಗಿ ರಿವೀಲ್ ಮಾಡಿದ್ದಾರೆ. ಕೋವಾ ಫೀನಕ್ಸ್ ಡೋಲನ್ (Koa Phoenix Dolan) ಎಂದು ಮಗುವಿಗೆ ಹೆಸರಿಟ್ಟಿದ್ದಾರೆ. ಮಗುವಿನ ಜನನದ ವಿಚಾರ ಹೇಳ್ತಿದ್ದಂತೆ, ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

    ಜಗತ್ತಿಗೆ ತಮ್ಮ ಖಾಸಗಿ ಬದುಕಿನ ಬಗ್ಗೆ ಎಲ್ಲೂ ರಿವೀಲ್ ಮಾಡದೇ ಗುಟ್ಟಾಗಿ ಇಟ್ಟಿದ್ದಾರೆ ಇಲಿಯಾನಾ. ಮದುವೆಯಾಗದೇ ಮಗುವಿನ ತಾಯಿಯಾಗ್ತಿದ್ದಾರೆ ಎಂದೇ ಈ ಬಗ್ಗೆ ಸುದ್ದಿಯಾಗಿತ್ತು. ಈಗ ಆಂಗ್ಲ ಮಾಧ್ಯಮವೊಂದು, ಇಲಿಯಾನಾಗೆ ಈಗಾಗಲೇ ಮದುವೆಯಾಗಿದ್ದಾರೆಂದು ಎಂದು ಮದುವೆ ಡೇಟ್ ಸಹಿತ ವರದಿ ಮಾಡಿದ್ದಾರೆ. ಇದನ್ನೂ ಓದಿ:ಕೆರಿಯರ್‌ನಲ್ಲಿ ಪ್ರಚಾರ ಬೇಕು ಅಂದ್ರೆ ಇದನ್ನೆಲ್ಲಾ ಮಾಡಬೇಕು- ತಮನ್ನಾ ಭಾಟಿಯಾ

    ಮೈಕಲ್ ಡೋಲನ್ (Michael Dolan) ಎಂಬುವವರ ಜೊತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿದೆ. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೋವನ್ನ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆತನ ಪರಿಚಯವನ್ನ ನಟಿ ತಿಳಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಮದುವೆ ಮಾತನಾಡುತ್ತಾರಾ? ಮೇ 13ರಂದು ಮದುವೆ ಆಗಿರೋದು ನಿಜಾನಾ ಈ ಎಲ್ಲದರ ಬಗ್ಗೆ ಇಲಿಯಾನಾ ಅಧಿಕೃತ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ

    ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ

    ಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ (Ileana Dcruze) ಅವರು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಗೂ ಮುನ್ನವೇ ತಾಯಿಯಾಗಿರುವ ಇಲಿಯಾನಾ, ಮಗುವಿನ ತಂದೆ ಯಾರೆಂದು ಇದುವರೆಗೂ ರಿವೀಲ್ ಮಾಡಿಲ್ಲ. ಆದರೆ ಈಗ ತಮ್ಮ ಮಗುವಿನ ತಂದೆ ಯಾರು ಎಂದು ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಡೇಟ್ ನೈಟ್ ಎಂದು ಬಾಯ್‌ಫ್ರೆಂಡ್ (Boyfriend) ಜೊತೆಯಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.

    ಧ್ಯಾನ್ ಜೊತೆ ಕನ್ನಡದ ‘ಹುಡುಗ-ಹುಡುಗಿ’ (Huduga HudugI0 ಸಿನಿಮಾದಲ್ಲಿ ಇಲಿಯಾನಾ ಸೊಂಟ ಬಳುಕಿಸಿದ್ದರು. ಸೌತ್- ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಈ ಸುಂದರಿ ಏಪ್ರಿಲ್‌ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾಗೆ ಇನ್ನೂ ಮದುವೆ ಆಗಿಲ್ಲ. ಹೀಗಾಗಿ, ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಇಷ್ಟು ದಿನ ಮಗುವಿನ ತಂದೆ ಬಗ್ಗೆ ನಟಿ ಗುಟ್ಟಾಗಿ ಇಟ್ಟಿದ್ದರು. ಈಗ ಬಾಯ್‌ಫ್ರೆಂಡ್ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದಾರೆ. ಅಚ್ಚರಿ ಎಂದರೆ ಆ ವ್ಯಕ್ತಿಯ ಹೆಸರನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ರಚನಾ- ಲೋಕೇಶ್ ದಂಪತಿ

    ಸೆಲೆಬ್ರಿಟಿಗಳ ಲೈಫಿನಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಸರ್ವೇ ಸಾಮಾನ್ಯ. ಇದರ ಜೊತೆಗೆ ಮದುವೆ ಆಗದೆ ಮಗು ಪಡೆಯೋದು, ಮದುವೆ ಆದ ಕೆಲವೇ ತಿಂಗಳಿಗೆ ತಂದೆ- ತಾಯಿ ಆಗೋದು ಕಾಮನ್. ಇಲಿಯಾನಾ ಕೂಡ ಇದೇ ಸಾಲಿಗೆ ಸೇರುತ್ತಾರೆ. ಈಗ ನಟಿ ಶೇರ್ ಮಾಡಿರುವ ಫೋಟೋದಲ್ಲಿ ಅವರ ಪಕ್ಕ ಓರ್ವ ವ್ಯಕ್ತಿ ಇದ್ದಾರೆ. ಈ ಸ್ಟೇಟಸ್‌ಗೆ ಡೇಟ್ ನೈಟ್ ಎನ್ನುವ ಅಡಿಬರಹ ನೀಡಿದ್ದಾರೆ. ಈ ಮೂಲಕ ಇಷ್ಟು ದಿನ ಗುಟ್ಟಾಗಿ ಇಟ್ಟ ವಿಚಾರ ರಿವೀಲ್ ಮಾಡಿದ್ದಾರೆ. ಅವರ ಹೆಸರನ್ನು ನಟಿ ತಿಳಿಸಿಲ್ಲ.

    ಇಲಿಯಾನಾ ಅವರು ಅನೇಕರ ಜೊತೆ ಡೇಟಿಂಗ್ ಮಾಡಿದ್ದಾರೆ. ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಮಗುವಿನ ತಂದೆ ಕತ್ರಿನಾ ಸಹೋದರ ಸೆಬಾಸ್ಟಿನ್ ಎಂದೇ ಸುದ್ದಿಯಾಗಿತ್ತು. ಈಗ ಹೆಸರು ಹೇಳದೇ ಬಾಯ್‌ಫ್ರೆಂಡ್ ಮುಖ ತೋರಿಸುವುದು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ಬಾಲಿವುಡ್ (Bollywood) ನಟಿ ಇಲಿಯಾನಾ ಡಿಕ್ರೂಜ್ (Ileana D’cruz) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಹಳದಿ ಬಣ್ಣದ ಬಿಕಿನಿ ಧರಿಸಿ ಬೀಚ್‌ನಲ್ಲಿ ಸೂರ್ಯ ಕಿರಣಗಳ ಸ್ಪರ್ಶವನ್ನ ನಟಿ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

    ನಟಿ ಇಲಿಯಾನಾ ಕೆಲ ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಷ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಆಗಾಗ ಬೇಬಿ ಬಂಪ್ ಫೋಟೋ ಶೇರ್ ಮಾಡುತ್ತಾ ನಟಿ ಸದ್ದು ಮಾಡ್ತಿರುತ್ತಾರೆ. ಚೊಚ್ಚಲ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ.

     

    View this post on Instagram

     

    A post shared by Ileana D’Cruz (@ileana_official)

    ಮದುವೆಯಾಗದೇ ತಾಯಿಯಾಗಿರುವ ನ್ಯೂಸ್ ಹಂಚಿಕೊಂಡ ನಟಿ ಇಲಿಯಾನಾಗೆ, ಮಗುವಿನ ತಂದೆ ಯಾರು ಎಂಬ ಟೀಕೆಗಳಿಗೆ ಕ್ಯಾರೆ ಎನ್ನದೇ ಮುಂದೆ ಸಾಗುತ್ತಿದ್ದಾರೆ. ಸದ್ಯ ನಟಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಹಳದಿ ಬಣ್ಣದ ಬಿಕಿನಿ ಧರಿಸಿ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ.

    ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹೋದರ ಸಬಾಸ್ಟಿನ್ ಜೊತೆ ಇಲಿಯಾನಾ ಡೇಟಿಂಗ್ ಮಾಡ್ತಿದ್ದರು. ಹಲವು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

  • ನಟಿ ಇಲಿಯಾನಾ ಡಿಕ್ರೂಸ್ ಬೇಬಿ ಬಂಪ್ ಫೋಟೋಶೂಟ್

    ನಟಿ ಇಲಿಯಾನಾ ಡಿಕ್ರೂಸ್ ಬೇಬಿ ಬಂಪ್ ಫೋಟೋಶೂಟ್

    ಬಾಲಿವುಡ್ (Bollywood) ನಟಿ ಇಲಿಯಾನಾ ಡಿಕ್ರೂಸ್ (Ileana D’cruze) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ತಿಳಿಸಿದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಇದುವೆಗೂ ರಿವೀಲ್ ಮಾಡಿಲ್ಲ. ಅವರು ಆಗಾಗ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ನಟಿ ತಾಯಿ ಆಗುತ್ತಿರುವ ಅವರು ಬಹಳ ಖುಷಿಯಲ್ಲಿದ್ದಾರೆ.

    ಇಲಿಯಾನಾ ಮದುವೆ ಆಗದೇ ಮಗು ಪಡೆಯುತ್ತಿರುವ ಇಲಿಯಾನಾ ಡಿಕ್ರೂಸ್ ಅವರ ನಿರ್ಧಾರಕ್ಕೆ ಅವರ ಕುಟುಂಬದವರ ಒಪ್ಪಿಗೆ ಕೂಡ ಇದೆ. ಈಗ ಇಲಿಯಾನಾ ಅವರು ಸಾಮಾಜಿಕ ಹೊಸ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ನಟಿಯ ಫೋಟೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಇಲಿಯಾನಾ ಡಿಕ್ರೂಸ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸದ್ಯ ಅವರು ಪ್ರೆಗ್ನೆನ್ಸಿ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಏಪ್ರಿಲ್ 18ರಂದು ನಟಿ ಇಲಿಯಾನಾ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಅಂದಿನಿಂದ ನಟಿಗೆ ಮಗುವಿನ ತಂದೆ ಯಾರು ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ಈಗಲೂ ಅದೇ ಪ್ರಶ್ನೆ ಎದುರಾಗಿದೆ. ಸದ್ಯ ನಟಿ ಮಿರರ್ ಸೆಲ್ಫಿಯ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

    ನಟಿ ಇಲಿಯಾನಾ ಕತ್ರಿನಾ ಕೈಫ್ ಸಹೋದರ ಜೊತೆ ಡೇಟಿಂಗ್ ಮಾಡ್ತಿರುವ ಬಗ್ಗೆ ಈ ಹಿಂದೆ ವರದಿ ಮಾಡಲಾಗಿತ್ತು. ಸೆಬಾಸ್ಟಿಯನ್ ಲೊರಾನ್ ಜೊತೆ ಎಂಗೇಜ್ ಆಗಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಇದೀಗ ಇಲಿಯಾನಾ ಪ್ರೆಗ್ನೆಂಟ್ ಆಗಿರುವ ಬೆನ್ನಲ್ಲೇ ನಟಿಯ ಡೇಟಿಂಗ್ ವಿಚಾರ ಮುನ್ನೆಲೆಗೆ ಬರುತ್ತಿದೆ.

  • ಆಸ್ಪತ್ರೆಗೆ ದಾಖಲಾದ‌ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್

    ಆಸ್ಪತ್ರೆಗೆ ದಾಖಲಾದ‌ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್

    ಬಾಲಿವುಡ್ (Bollywood) ನಟಿ ಇಲಿಯಾನಾ ಡಿಕ್ರೂಜ್ (Ileana D’cruz) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸ್ವತಃ ನಟಿಯೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಸಿನಿ ಜರ್ನಿಗೆ 27 ವರ್ಷಗಳ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ಸುದೀಪ್

    ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇಲಿಯಾನಾ ಸ್ಯಾಂಡಲ್‌ವುಡ್‌ನ ಧ್ಯಾನ್ ನಟನೆಯ `ಹುಡುಗ ಹುಡುಗಿ’ ಸಿನಿಮಾದಲ್ಲಿಯೂ ಇಲಿಯಾನಾ ನಟಿಸಿದ್ದರು.

    ನಟಿ ಇಲಿಯಾನಾ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಲಿಯಾನಾ ಆಸ್ಪತ್ರೆಗೆ ದಾಖಲಾಗಿರುವುದೇಕೆ. ಅವರಿಗೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ ಏನು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿದೆ. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿರೋದಾಗಿ ನಟಿ ತಿಳಿಸಿದ್ದಾರೆ.

    ಈ ಹಿಂದೆ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ ಹೇಳಿದ್ದರು. ಇದೀಗ ಈ ಸಮಸ್ಯೆಯಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರಾ ಎಂಬುದು ಯಾವುದೇ ಮಾಹಿತಿಯಿಲ್ಲ. ಆದರೆ ನಟಿಯ ಪೋಸ್ಟ್ ನೋಡುತ್ತಿದ್ದಂತೆ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k