Tag: ಇರ್ಫಾನ್ ಅನ್ಸಾರಿ

  • ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    ರಾಂಚಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ ಎಂದು ಜಾರ್ಖಂಡ್ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ತನ್ನ ಕ್ಷೇತ್ರದ ರಸ್ತೆಯ ಅಭಿವೃದ್ಧಿ ಬಗ್ಗೆ ಜನರಿಗೆ ಆಶ್ವಾಸನೆ ನೀಡುವಾಗ ವಿವಾದಿತ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಗಮವಾಗಿಸುತ್ತೇನೆ. ಅಂತಹ ರಸ್ತೆಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಹಾಗೂ ರಾಜ್ಯದ ಯುವಕರು ಓಡಾಡಬಹುದು. ಅಂತಹ ಹದಿನಾಲ್ಕು ರಸ್ತೆಗಳ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ಶಾಸಕ ಅನ್ಸಾರಿ ಹೇಳಿದ್ದಾರೆ.

    ಶಾಸಕ ಡಾ.ಇರ್ಫಾನ್ ಅನ್ಸಾರಿ ವೈದ್ಯ ವೃತ್ತಿಯ ಹಿನ್ನೆಲೆಯವರು. ಈ ಹಿಂದೆ ಕೂಡ ವಿವಾದಿತ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಮಾಸ್ಕ್‌ಗಳನ್ನು ಹೆಚ್ಚುಕಾಲ ಧರಿಸಬೇಕಾಗಿಲ್ಲ. ಮಾಸ್ಕ್‌ಗಳನ್ನು ದೀರ್ಘಕಾಲ ಧರಿಸಬಾರದು. ವೃತ್ತಿಯಲ್ಲಿ ವೈದ್ಯನಾಗಿರುವ ನಾನೇ ಹೇಳುತ್ತಿದ್ದೇನೆ- ಮಾಸ್ಕ್ ದೀರ್ಘಕಾಲ ಧರಿಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಧರಿಸಿ. ಕೋವಿಡ್ ಮೂರನೇ ಅಲೆಯ ಬಗ್ಗೆ ಭಯಬೇಡ. ಐದಾರು ದಿನದಲ್ಲಿ ಕೊವಿಡ್ ಸೊಂಕು ದೂರಾಗುತ್ತವೆ ಎಂದು ಹೇಳಿಕೆ ನೀಡಿದ್ದರು. ಸಮಾರಂಭವೊಂದರಲ್ಲಿ ಮಾಸ್ಕ್ ಧರಿಸದ ಅನ್ಸಾರಿ, ಅದಕ್ಕೆ ಕಾರಣವನ್ನು ಕೇಳಿದಾಗ ಮೇಲಿನ ಉತ್ತರ ನೀಡಿ ಸುದ್ದಿಯಾಗಿದ್ದರು.

    ಇತ್ತೀಚೆಗಷ್ಟೇ ಶಿವಸೇನೆ ನಾಯಕ, ಮಹಾರಾಷ್ಟ್ರ ಸಚಿವ ಗುಲಾಬ್‍ರಾವ್ ಪಾಟೀಲ್ ಹೇಮಾ ಮಾಲಿನಿ ಕೆನ್ನೆಗಳಿಗೆ ರಸ್ತೆಗಳನ್ನು ಹೋಲಿಸಿದ್ದರು. ನಂತರ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಕ್ಷಮೆ ಕೋರಿದ್ದರು. ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದು ಕೂಡ ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ನಂತರ ಅವರೂ ಕ್ಷಮೆ ಕೋರಿದ್ದರು. ಇದೀಗ ಇರ್ಫಾನ್ ಅನ್ಸಾರಿ ಅವರ ಹೇಳಿಕೆ ಸುದ್ದಿಯಾಗುತ್ತಿದೆ. ಇದನ್ನೂ ಓದಿ: ಎಸ್‌ಪಿ ಕಚೇರಿಯಲ್ಲಿ ಕೋವಿಡ್‌ ರೂಲ್ಸ್‌ ಬ್ರೇಕ್‌ – 2,500 ಮಂದಿ ವಿರುದ್ಧ ಎಫ್‌ಐಆರ್‌