Tag: ಇರುವುದೆಲ್ಲವ ಬಿಟ್ಟು

  • ಕಾರ್ಪೊರೇಟ್ ಯುಗದ ಹೆಣ್ಣೊಬ್ಬಳ ‘ಇರುವುದೆಲ್ಲವ ಬಿಟ್ಟು’ ಕತೆ..!

    ಕಾರ್ಪೊರೇಟ್ ಯುಗದ ಹೆಣ್ಣೊಬ್ಬಳ ‘ಇರುವುದೆಲ್ಲವ ಬಿಟ್ಟು’ ಕತೆ..!

    ಸರಿಯಾದ ನೆಟ್ ವರ್ಕ್ ಕೂಡಾ ಇಲ್ಲದ ಊರಿಂದ ಬಂದು ಕಾರ್ಪೊರೇಟ್ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡ ಹೊರಟ ಹುಡುಗಿಯ ಕತೆ ಇರುವುದೆಲ್ಲವ ಬಿಟ್ಟು. ಅಪಾರ ಸಂಬಳ, ಸಂಸ್ಥೆಗಳಲ್ಲಿನ ಪ್ರಮೋಷನ್ನು, ಕಾರು, ಮನೆಯಂಥಾ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತಾ ಸಾಗಿದರೆ ಸಂಸ್ಕೃತಿಯನ್ನೂ ಮರೆತುಬಿಡುತ್ತಾರೆ. ಇವತ್ತು ಕಾರ್ಪೊರೇಟ್ ವಲಯಗಳಲ್ಲಿ ದುಡಿಯುವ ಎಷ್ಟೋ ಜನರ ಕಥೆಯನ್ನೇ ನಿರ್ದೇಶಕ ಕಾಂತ ಕನ್ನಲ್ಲಿ ಕಥೆಯ ರೂಪಕ್ಕಿಳಿಸಿ `ಇರುವುದೆಲ್ಲವ ಬಿಟ್ಟು’ ಸಿನಿಮಾವನ್ನು ರೂಪಿಸಿದ್ದಾರೆ.

    ಸಿಟಿಲೈಫಿಗೆ ಹೊಂದಿಕೊಂಡವರು ಮನೆಯವರ ಅನುಮತಿಯನ್ನು ಧಿಕ್ಕರಿಸಿ, ವಿರೋಧಗಳ ನಡುವೆಯೂ, ಹಲವು ಸಲ ಗೌಪ್ಯವಾಗಿ ಲಿವ್ ಇನ್ ರಿಲೇಷನ್ನುಗಳಲ್ಲಿ ತೊಡಗಿಕೊಳ್ಳುತ್ತಾರೆ. ಆರಂಭದಲ್ಲಿ ಎಲ್ಲವೂ ಚೆಂದ. ಆದರೆ ಒಮ್ಮೆ ಇಬ್ಬರ ಸಮಾಗಮ ಮತ್ತೊಂದು ಜೀವದ ಹುಟ್ಟಿಗೆ ಕಾರಣವಾಗುತ್ತದೋ ಅಲ್ಲಿಗೆ ಎಲ್ಲವೂ ಅಯೋಮಯ.

    ಸಂಗಾತಿಗಳ ನಡುವೆ ಎದುರಾಗುವ ಸಮಯದ ಸಮಸ್ಯೆ, ಈಗೋಗಳು ಸಂಬಂಧಗಳು ಮುರಿದುಬೀಳುವಂತೆ ಮಾಡುತ್ತದೆ. ಜನ್ಮೇಪಿ ಬಿಟ್ಟೂ ಬಿಡಲಾರದಂಥವರು ಒಬ್ಬರ ಮುಖ ಒಬ್ಬರು ನೋಡದಂತೆ ದೂರಾಗಿಬಿಡುತ್ತಾರೆ. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಘಟಿಸುವುದು ಕೂಡಾ ಇಂಥದ್ದೇ ಪ್ರಸಂಗ.

    ಇತ್ತ ಪ್ರೀತಿಯ ಕಾರಣಕ್ಕೆ ಹೆತ್ತವರನ್ನೂ ದೂರ ಮಾಡಿಕೊಂಡು, ಜೊತೆಗಾರನೊಟ್ಟಿಗೂ ಮುನಿಸಿಕೊಂಡ ಗರ್ಭಿಣಿ ಹೆಣ್ಣುಮಗಳು ಪಡುವ ಪಡಿಪಾಟಲುಗಳನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿದೆ. ಈ ನಡುವೆ ಎಂಟ್ರಿಯಾಗುವ ಮತ್ತೊಬ್ಬ ಹುಡುಗ, ಆತನ ಉದಾರ ಮನೋಭಾವ, ಜೀವನ ಪ್ರೀತಿ, ಒಂಟಿತನಗಳು… ಇರುವುದೆಲ್ಲವ ಬಿಟ್ಟವಳಿಗೆ ಈತ ಆಸರೆಯಾಗುತ್ತಾನಾ ಅನ್ನುವಷ್ಟರಲ್ಲಿ ಒಂದಷ್ಟು ತಿರುವುಗಳು, ಭಾವುಕ ಸನ್ನಿವೇಶಗಳು.. ಇದು ಇರುವೆ ಬಿಟ್ಟುಕೊಂಡವರ ಕಥೆಯ ಸಾರ.

    ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣದ ‘ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೆ ಕಥೆ-ಚಿತ್ರಕಥೆ-ನಿರ್ದೇಶನ ಕಾಂತ ಕನ್ನಲ್ಲಿ, ಸಂಭಾಷಣೆ-ಮಹೇಶ್ ಮಳವಳ್ಳಿ, ಛಾಯಾಗ್ರಹಣ – ವಿಲಿಯಂ ಡೇವಿಡ್, ಸಂಗೀತ – ಶ್ರೀಧರ್ ವಿ ಸಂಭ್ರಮ್, ಕಲೆ-ಶ್ರೀನಿವಾಸ್, ನೃತ್ಯ-ಮುರಳಿ ಧನಕುಮಾತ್, ಸಂಕಲನ-ಕೆ.ಎಂ. ಪ್ರಕಾಶ್, ಸಾಹಿತ್ಯ – ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕಾಂತಕನ್ನಲ್ಲಿ ರಚಿಸಿದ್ದಾರೆ. ತಾರಾಗಣದಲ್ಲಿ ಮೇಘನರಾಜ್, ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ.

    https://youtu.be/NVpC5vBcLLM

    ಮೇಘನಾ ರಾಜ್ ತೀರಾ ಮಾಗಿದ ನಟನೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ತಿಲಕ್ ಶೇಖರ್ ಮತ್ತು ಶ್ರೀ ಮಹದೇವ್ ಕೂಡಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಲ ಕಲಾವಿದ ಅಭಿಷೇಕ್ ರಾಯಣ್ಣ ಎಂಥವರನ್ನೂ ಮೋಡಿ ಮಾಡುವಂತೆ ನಟಿಸಿದ್ದಾನೆ.

    ಇಡೀ ಸಿನಿಮಾದ ದೊಡ್ಡ ಶಕ್ತಿ ಛಾಯಾಗ್ರಾಹಕ ವಿಲಿಯಂ ಡೇವಿಡ್. ಅದ್ಭುತವೆನಿಸುವ ಲೊಕೇಷನ್ನುಗಳನ್ನು ಅಷ್ಟೇ ಕ್ರಿಯಾಶೀಲವಾಗಿ ಸೆರೆ ಹಿಡಿದಿರುವ ವಿಲಿಯಂ ಎಲ್ಲ ಪಾತ್ರಧಾರಿಗಳನ್ನೂ ಸುಂದರವಾಗಿಸುವುದರ ಜೊತೆಗೆ ಇಡೀ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ.

    ರೇಟಿಂಗ್: 4/5

  • ‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

    ‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

    ಬೆಂಗಳೂರು: ಮದುವೆಯಾದ ನಂತರ ಮೇಘನಾ ರಾಜ್ ನಟಿಸಿರುವ ಮೊದಲ ಸಿನಿಮಾ ತೆರೆಗೆ ಬಂದಿದೆ.

    ಕಾಂತಾ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸಾಗಿದೆ. ಈ ಸಿನಿಮಾವನ್ನು ಮೊದಲ ದಿನದ ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ಮತ್ತು ಧೃವಾ ಸರ್ಜಾ ಮೆಜೆಸ್ಟಿಕ್ ನ ಅನುಪಮಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇವರಿಬ್ಬರೂ ಬರೋ ಸುದ್ದಿ ತಿಳಿದ ಅಭಿಮಾನಿಗಳು ಕಿಕ್ಕಿರಿದು ಥಿಯೇಟರ್ ಬಳಿ ಜಮಾಯಿಸಿದ್ದರು.

    ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

    ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸಿದೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಇರುವುದೆಲ್ಲವ ಬಿಟ್ಟು ಅಮಿಕಂಡಿರೋ ಹಾಡು ಬರೆದ ಯೋಗರಾಜ ಭಟ್!

    ಇರುವುದೆಲ್ಲವ ಬಿಟ್ಟು ಅಮಿಕಂಡಿರೋ ಹಾಡು ಬರೆದ ಯೋಗರಾಜ ಭಟ್!

    ಬೆಂಗಳೂರು: ನಿರ್ದೇಶಕ ಕಾಂತ ಕನ್ನಲಿ ಕಡೇ ಕ್ಷಣಗಳಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದ ಬಗ್ಗೆ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವಂಥಾದ್ದೊಂದು ಕೆಲಸ ಮಾಡಿದ್ದಾರೆ. ಕಾಂತ ಕನಸಿಗೆ ನಿರ್ದೇಶಕ ಯೋಗರಾಜ ಭಟ್ಟರೂ ಕೈ ಜೋಡಿಸಿದ್ದಾರೆ. ಇದರಿಂದಾಗಿಯೇ ಸಿದ್ಧಗೊಂಡಿರೋ ಪ್ರಮೋಷನ್ ಸಾಂಗ್ ಈಗ ಸೂಪರ್ ಹಿಟ್ ಆಗಿ ಬಿಟ್ಟಿದೆ!

    ಇರುವುದೆಲ್ಲವ ಬಿಟ್ಟು ಚಿತ್ರದ ಪ್ರಮೋಷನ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹುಮ್ಮಸ್ಸಿನಿಂದ ಹರಿಡಾಡಲಾರಂಭಿಸಿದೆ. `ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಹಾಡನ್ನು ಯೋಗರಾಜ ಭೌಟ್ ಬರೆದಿದ್ದಾರೆ. ಅದಕ್ಕೆ ಸಮ್ಮೋಹಕ ಸಂಗೀತ ಸ್ಪರ್ಶ ನೀಡಿರುವವರು ಅನಂತ್ ಕಿಶನ್. ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್ ಹಾಡಿರೋ ಈ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ.

    ಇದು ಈ ಚಿತ್ರದ ಒಟ್ಟಾರೆ ಆಂತರ್ಯವನ್ನು ಧ್ವನಿಸುವಂಥಾ ಹಾಡು. ಅಷ್ಟೇ ಆಗಿದ್ದರೆ ಬಹುಶಃ ಇದು ಈ ಪಾಟಿ ಪ್ರಸಿದ್ಧಿ ಪಡೆದುಕೊಳ್ಳುತ್ತಿರಲಿಲ್ಲವೇನೋ. ಇದು ಬದುಕಿಗೂ ಅನ್ವಯಿಸುವಂತಿದೆ. ಹಾಗಂದ ಮೇಲೆ ಈ ಚಿತ್ರ ಕೂಡಾ ಹಾಡಿನಂತೆಯೇ ಹಿಟ್ ಆಗೋದರಲ್ಲಿ ಸಂದೇಹವೇನಿಲ್ಲ!

    ಇರುವುದೆಲ್ಲವ ಬಿಟ್ಟು ಚಿತ್ರ ಇದೇ ತಿಂಗಳು 21 ರಿಲೀಸ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=GRMSXFPmuCQ

  • ‘ಇರುವುದೆಲ್ಲವ ಬಿಟ್ಟು’ – ಮದುವೆ ನಂತರ ಮೇಘನಾ ರಾಜ್‍ಗೆ ಸಿಕ್ಕ ಮೊದಲ ಮೋಹಕ ಪಾತ್ರ!

    ‘ಇರುವುದೆಲ್ಲವ ಬಿಟ್ಟು’ – ಮದುವೆ ನಂತರ ಮೇಘನಾ ರಾಜ್‍ಗೆ ಸಿಕ್ಕ ಮೊದಲ ಮೋಹಕ ಪಾತ್ರ!

    ಬೆಂಗಳೂರು: ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

    ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸೋ ಲಕ್ಷಣಗಳೂ ಕಾಣಿಸುತ್ತಿವೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ.

    ಈ ಚಿತ್ರದಲ್ಲಿ ಮೇಘನಾ ಐಟಿ ಉದ್ಯೋಗಿಯಾಗಿ ನಟಿಸಿದ್ದಾರೆ. ಅವರದ್ದಿಲ್ಲಿ ಪಕ್ಕಾ ಬೋಲ್ಡ್ ಪಾತ್ರ. ಇದರ ಕೆಲ ಫೋಟೋಗಳು ಜಾಹೀರಾಗಿ ಅಭಿಮಾನಿಗಳನ್ನು ಮುದಗೊಳಿಸಿವೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

    ಬೋಲ್ಡ್ ನೆಸ್ ಮಾತ್ರವಲ್ಲದೇ ಭಾವುಕವಾಗಿಯೂ ಕಾಡುವಂತಿರುವ ಈ ಪಾತ್ರವನ್ನು ಮೇಘನಾ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿದ್ದರಂತೆ. ಬಿಡುಗಡೆಗೂ ಮುಂಚೆಯೇ ಅದರ ಬಗ್ಗೆ ಬರುತ್ತಿರೋ ಸಕಾರಾತ್ಮಕ ಅಭಿಪ್ರಾಯಗಳು ಮೇಘನಾರಲ್ಲಿ ಥ್ರಿಲ್ ಮೂಡಿಸಿವೆ. ಸದ್ಯ ಈ ಚಿತ್ರ ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇರುವುದೆಲ್ಲವ ಬಿಟ್ಟು ಏನಿದರ ಒಳಗುಟ್ಟು?

    ಇರುವುದೆಲ್ಲವ ಬಿಟ್ಟು ಏನಿದರ ಒಳಗುಟ್ಟು?

    ಬೆಂಗಳೂರು: ಈ ಹಿಂದೆ ಜಲ್ಸಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಕಾಂತ ಕನ್ನಲಿ ನಿರ್ದೇಶನದ ಎರಡನೇ ಚಿತ್ರ ‘ಇರುವುದೆಲ್ಲವ ಬಿಟ್ಟು’. ತನ್ನ ಕಾವ್ಯಾತ್ಮಕ ಶೀರ್ಷಿಕೆಯಿಂದಲೇ ಸೂಕ್ಷ್ಮ ಕಥಾ ಹಂದರದ ಸೂಚನೆ ನೀಡುತ್ತಿರೋ ಈ ಚಿತ್ರ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿದೆ. ಇದೊಂದು ಸೂಕ್ಷ್ಮ ಸಂಬಂಧಗಳ ಹುಡುಕಾಟದ ಚಿತ್ರವಾ? ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವಂಥಾ ಅಡಿಬರಹಕ್ಕೆ ಸೂಟ್ ಆಗುವಂಥಾ ಕಥೆಯನ್ನು ಈ ಚಿತ್ರ ಹೊಂದಿದೆಯಾ… ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ.

    ಪ್ರೇಕ್ಷಕರ ನಡುವೆ ಇಂಥಾ ಪ್ರಶ್ನೆಗಳನ್ನು ಹುಟ್ಟು ಹಾಕೋದೇ ಒಂದು ಚಿತ್ರದ ಗೆಲುವಿನ ಮುನ್ಸೂಚನೆ. ಆ ನಿಟ್ಟಿನಲ್ಲಿ ಚಿತ್ರತಂಡ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ಖುಷಿಗೊಂಡಿದೆ. ಈಗ ಪ್ರೇಕ್ಷಕರ ನಡುವೆ ಹುಟ್ಟಿಕೊಂಡಿರೋ ಇಂಥಾ ಪ್ರಶ್ನೆಗಳಿಗೆಲ್ಲ ಉತ್ತರದಂಥಾ ಕೆಲ ವಿಚಾರಗಳನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.

    ಅಷ್ಟಕ್ಕೂ ಕಾಂತ ಕನ್ನಲಿ ತಾನು ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ತಿರುಗುತ್ತಿದ್ದ ಕಾಲದಲ್ಲಿಯೇ ರೆಡಿ ಮಾಡಿಟ್ಟುಕೊಂಡಿದ್ದ ಕಥೆ ಇದು. ನಿರ್ದೇಶಕನಾಗಬೇಕೆಂಬ ಕನಸು ಅವರದ್ದಾಗಿತ್ತು. ಆದರೆ ಇದೊಂದು ಸಂಕೀರ್ಣವಾದ ಕಥಾ ಹಂದರ ಹೊಂದಿದ್ದ ಚಿತ್ರವಾದ್ದರಿಂದ ಅದಕ್ಕಾಗಿ ಕಾಯೋದು ಅನಿವಾರ್ಯವಾಗಿತ್ತು.

    ನಮ್ಮ ಬಳಿಯಿರುವ ಎಲ್ಲದರಾಚೆಗೆ ಮತ್ತೇನನ್ನೋ ಬಯಸೋದು ಎಲ್ಲರ ಮನಸ್ಥಿತಿ. ಅದರಂತೆಯೇ ಅನಾಥಾಶ್ರಮದಲ್ಲಿಯೇ ಕಣ್ಣು ಬಿಟ್ಟು ಯಾವ ಸಂಬಂಧಗಳ ಅರಿವೂ ಇಲ್ಲದ ಹುಡುಗನೊಬ್ಬ ಮತ್ತೇನನ್ನೋ ಹುಡುಕಿ ಹೊರಡುತ್ತಾನೆ. ಅನಾಥ ಪ್ರಜ್ಞೆಯ ನಡುವೆಯೂ ಬೇರೇನಕ್ಕೂ ಕೊರತೆ ಇಲ್ಲದಂತೆ ಬೆಳೆದು ನಿಂತ ಆತನದ್ದು ಸುಂದರ ಕುಟುಂಬವೊಂದನ್ನು ತನ್ನದಾಗಿಸಿಕೊಳ್ಳೋ ಕನಸು. ಹಾಗೆ ಹೊರಟವನಿಗೆ ತಾನು ಏನೋ ಇದೆ ಅಂದು ಕೊಂಡಲ್ಲಿ ಮತ್ತೇನೋ ಇರುವುದು ಅರಿವಾಗೋದರ ಸುತ್ತ ಕಥೆ ಬಿಚ್ಚಿಕೊಳ್ಳುತ್ತೆ.

    ಇಡೀ ಕಥೆ ಗಂಭೀರ ಭಾವ ಹೊಂದಿರುವಂತೆ ಕಂಡರೂ ಮನೋರಂಜನೆಯೇ ಈ ಚಿತ್ರದ ಮೂಲ ಉದ್ದೇಶ. ಆದ್ದರಿಂದಲೇ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=GRMSXFPmuCQ

  • ‘ಇರುವುದೆಲ್ಲವ ಬಿಟ್ಟು’ ಮುಂದಿನ ತಿಂಗಳು ಬಿಡುಗಡೆ

    ‘ಇರುವುದೆಲ್ಲವ ಬಿಟ್ಟು’ ಮುಂದಿನ ತಿಂಗಳು ಬಿಡುಗಡೆ

    ಬೆಂಗಳೂರು: ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣದ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಮಂಗಳೂರು, ಊಟಿ ಮುಂತಾದೆಡೆಗಳಲ್ಲಿ ನಡೆದಿದೆ.

    ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಕಾಂತಕನ್ನಲ್ಲಿ, ಸಂಭಾಷಣೆ-ಮಹೇಶ್ ಮಳವಳ್ಳಿ, ಛಾಯಾಗ್ರಹಣ – ವಿಲಿಯಂ ಡೇವಿಡ್, ಸಂಗೀತ – ಶ್ರೀಧರ್ ವಿ ಸಂಭ್ರಮ್, ಕಲೆ-ಶ್ರೀನಿವಾಸ್, ನೃತ್ಯ-ಮುರಳಿ ಧನಕುಮಾತ್, ಸಂಕಲನ-ಕೆ.ಎಂ. ಪ್ರಕಾಶ್, ಸಾಹಿತ್ಯ – ಜಯಂತ್ ಕಾಯ್ಕಿಣಿ, ವಿ ನಾಗೇಂದ್ರಪ್ರಸಾದ್, ಕವಿರಾಜ್, ಕಾಂತಕನ್ನಲ್ಲಿ ರಚಿಸಿದ್ದಾರೆ. ಸಹ ನಿರ್ದೇಶನ ಸೋಮುಗೌಡ, ತಾರಾಗಣದಲ್ಲಿ ಮೇಘನರಾಜ್, ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ.