Tag: ಇಮ್ರಾನ್ ಹಶ್ಮಿ

  • ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

    ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

    ಬಾಲಿವುಡ್ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೆ ಸುದ್ದಿಯಲ್ಲಿದ್ದಾರೆ. ಮುನಿಸು ಮರೆತು 20 ವರ್ಷಗಳ ನಂತರ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ.

    ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಇಡೀ ಹಿಂದಿ ಸೆಲೆಬ್ರೆಟಿಗಳ ದಂಡೇ ಹಾಜರಿ ಹಾಕಿತ್ತು. ಈ ವೇಳೆ, ಅನಿರೀಕ್ಷಿತವಾಗಿ ಈ ಕಾರ್ಯಕ್ರಮಲ್ಲಿ ಇಮ್ರಾನ್ ಮತ್ತು ಮಲ್ಲಿಕಾ ಭೇಟಿಯಾಗಿದ್ದಾರೆ. ಮುನಿಸೆಲ್ಲಾ ಮರೆತು ಇಬ್ಬರೂ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಸಂಭ್ರಮಿಸಿದ್ದಾರೆ.

    20 ವರ್ಷಗಳ ಹಿಂದೆ ಸಿನಿಮಾವೊಂದರ ವಿಚಾರವಾಗಿ ಮನಸ್ತಾಪವಾಗಿತ್ತು. ಹಾಗಾಗಿ ಮಾತು ಬಿಟ್ಟಿದ್ದರು. ಈಗ ಸಮಯ ಬದಲಾಗಿದೆ. ಇಬ್ಬರ ನಡುವೆ ಅದೇನೇ ಆಗಿರಲಿ ಎಲ್ಲಾ ಮರೆತು ಖುಷಿಯಾಗಿರೋದನ್ನ ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಮತ್ತೆ ಮುಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ:ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ‘ವೀರಕನ್ನಡಿಗ’ ನಟ ಸಯಾಜಿ ಶಿಂಧೆ

    ಮಲ್ಲಿಕಾ (Mallika Sherawat) ಮತ್ತು ಇಮ್ರಾನ್ ಜೋಡಿಯಾಗಿ ಮರ್ಡರ್, ಮರ್ಡರ್ ಚಿತ್ರದ ಸೀಕ್ವೆಲ್, ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • ಅಡಿವಿ ಶೇಷ್ ‘ಗೂಢಾಚಾರಿ-2’ಗೆ ಇಮ್ರಾನ್ ಹಶ್ಮಿ ಎಂಟ್ರಿ

    ಅಡಿವಿ ಶೇಷ್ ‘ಗೂಢಾಚಾರಿ-2’ಗೆ ಇಮ್ರಾನ್ ಹಶ್ಮಿ ಎಂಟ್ರಿ

    ಟಾಲಿವುಡ್‌ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿ ಶೇಷ್ (Aditi Sesh) ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. ‘ಗೂಢಚಾರಿ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ‘ಗೂಢಚಾರಿ’ ಸೀಕ್ವೆಲ್‌ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.

    ‘ಗೂಢಚಾರಿ 2’ (Goodachari 2) ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ಅವರೀಗ ಟಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ‘ಗೂಢಚಾರಿ’ ಬಳಗ ಇಮ್ರಾನ್ (Emraan Hashmi) ಫಸ್ಟ್ ಲುಕ್ ರಿಲೀಸ್ ಮಾಡಿ ಅವರನ್ನು ಸ್ವಾಗತಿಸಿದೆ. ಆದ್ರೆ ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. ಇದನ್ನೂ ಓದಿ:ಕಾಟೇರ ನಿರ್ದೇಶಕನಿಗೆ ಎರಡು ಸಿನಿಮಾಗಳ ಕಾಲ್ ಶೀಟ್ ಕೊಟ್ಟ ದರ್ಶನ್

    ‘ಗೂಢಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ ‘ಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ‘ಗೂಢಚಾರಿ 2’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

    ‘ಗೂಢಚಾರಿ 2’ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ‘ಕಾರ್ತೀಕೇಯ 2’, ‘ಮೇಜರ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ಗೂಢಚಾರಿ 2 ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಹಾಗೂ ‘ಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬನಿತಾ ಸಂಧು ಅಡಿವಿ ಶೇಷ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

  • ಕಾಶ್ಮೀರದಲ್ಲಿ ಕಲ್ಲೆಸೆದಿಲ್ಲ ಎಂದು ಉಲ್ಟಾ ಹೊಡೆದ್ರಾ ಬಾಲಿವುಡ್ ನಟ ಇಮ್ರಾನ್ ಹಶ್ಮಿ?: ನೆಟ್ಟಿಗರ ಅನುಮಾನ

    ಕಾಶ್ಮೀರದಲ್ಲಿ ಕಲ್ಲೆಸೆದಿಲ್ಲ ಎಂದು ಉಲ್ಟಾ ಹೊಡೆದ್ರಾ ಬಾಲಿವುಡ್ ನಟ ಇಮ್ರಾನ್ ಹಶ್ಮಿ?: ನೆಟ್ಟಿಗರ ಅನುಮಾನ

    ಕಾಶ್ಮೀರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi) ಮೇಲೆ ಕಲ್ಲು ತೂರಲಾಗಿದೆ ಎಂದು ಹೇಳಲಾಗಿತ್ತು. ಏಕಾಏಕಿ ನಡೆದ ದಾಳಿಯಿಂದ ಇಮ್ರಾನ್ ವಿಚಲಿತರಾಗಿದ್ದರು ಎನ್ನುವ ಮಾಹಿತಿಯೂ ಹೊರ ಬಿದ್ದಿತ್ತು. ಅವರ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿರುವುದರಿಂದ, ಅವರು ಅಲ್ಲಿಯೇ ಇದ್ದಾರೆ ಎಂದು, ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದ್ಯಾವುದೂ ಸುಳ್ಳು ಎಂದಿದ್ದಾರೆ ಇಮ್ರಾನ್.

    ತಮ್ಮ ಮೇಲೆ ಯಾವುದೇ ದಾಳಿ ಆಗಿಲ್ಲ. ಯಾರೂ ಕಲ್ಲು ತೂರಿಲ್ಲ. ಹರಡಿರುವ ಸುದ್ದಿ ಸುಳ್ಳು. ಗಾಸಿಪ್ ಹರಡಿಸಿದ್ದಾರೆ. ನಾನು ಕಾಶ್ಮೀರದಲ್ಲಿ ಸೇಫ್ ಆಗಿದ್ದೇನೆ. ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇನೆ ಎಂದು ಹಶ್ಮಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಇಮ್ರಾನ್ ಸುಳ್ಳು ಹೇಳಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ತಮ್ಮ ರಕ್ಷಣೆಗಾಗಿ ನಡೆದಿರುವ ಘಟನೆಯನ್ನೂ ನಡೆದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ಬಾಲಿವುಡ್ ನ ಹೆಸರಾಂತ ನಟ ಇಮ್ರಾನ್ ಹಶ್ಮಿ, ಮೂರು ದಿನಗಳಿಂದ ಕಾಶ್ಮೀರದಲ್ಲಿ (Kashmir) ಬೀಡು ಬಿಟ್ಟಿದ್ದರು. ‘ಗ್ರೌಂಡ್ ಜೀರೊ’ (Ground Zero) ಸಿನಿಮಾದ ಶೂಟಿಂಗ್ ಗಾಗಿ ಅವರು ಅಲ್ಲಿದ್ದರು. ಎರಡು ದಿನಗಳಿಂದ ಸತತ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಏಕಾಏಕಿಯಾದ ಈ ದಾಳಿ ಕಂಡು ಇಮ್ರಾನ್ ಆಘಾತಗೊಂಡಿದ್ದಾರೆ ಎಂದು ಹೇಳಲಾಗಿತ್ತು.

    ಕಾಶ್ಮೀರದ ಪಹಲ್ಗಾಂನಲ್ಲಿ ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೊ ಸಿನಿಮಾದ ಚಿತ್ರೀಕರಣ (Shooting) ನಡೆಯುತ್ತಿತ್ತು. ಈ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಪಹಲ್ಗಾಂ ಮಾರುಕಟ್ಟೆಗೆ ಇಮ್ರಾನ್ ಬಂದಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ (Stone pelting)  ಮಾಡಲಾಗಿದೆ. ಏಕಾಏಕಿ ನಡೆದ ಈ ದಾಳಿಗೆ ಇಮ್ರಾನ್  ಶಾಕ್ ಗೆ ಒಳಗಾಗಿದ್ದಾರೆ. ಯಾರು ಇದನ್ನು ಮಾಡಿದ್ದು, ಯಾಕೆ ಕಲ್ಲು ತೂರಾಟ ಮಾಡಿದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು.

    ಇಮ್ರಾನ್ ಮೇಲೆ ದಾಳಿ ಆಗುತ್ತಿದ್ದಂತೆಯೇ ಕೂಡಲೇ ಪೊಲೀಸರು (Police) ಸ್ಥಳಕ್ಕೆ ಬಂದಿದ್ದಾರೆ. ಆಮೇಲೆ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಮ್ರಾನ್ ಹಶ್ಮಿ ತಮ್ಮ ಮೇಲೆ ಈ ರೀತಿಯಲ್ಲಿ ಯಾವುದೇ ದಾಳಿ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

    ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

    ಬಾಲಿವುಡ್ ನ ಹೆಸರಾಂತ ನಟ ಇಮ್ರಾನ್ ಹಶ್ಮಿ (Emraan Hashmi), ಮೂರು ದಿನಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದರು. ‘ಗ್ರೌಂಡ್ ಜೀರೊ’ ಸಿನಿಮಾದ ಶೂಟಿಂಗ್ ಗಾಗಿ ಅವರು ಅಲ್ಲಿದ್ದರು. ಎರಡು ದಿನಗಳಿಂದ ಸತತ ಈ ಸಿನಿಮಾದ ಚಿತ್ರೀಕರಣ ನಡೆಯಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಏಕಾಏಕಿಯಾದ ಈ ದಾಳಿ ಕಂಡು ಇಮ್ರಾನ್ ಆಘಾತಗೊಂಡಿದ್ದಾರೆ.

    ಕಾಶ್ಮೀರದ (Kashmir) ಪಹಲ್ಗಾಂನಲ್ಲಿ ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೊ (Ground Zero) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ಸಿನಿಮಾದ ಶೂಟಿಂಗ್ (Shooting) ಮುಗಿಸಿಕೊಂಡು ಪಹಲ್ಗಾಂ ಮಾರುಕಟ್ಟೆಗೆ ಇಮ್ರಾನ್ ಬಂದಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ (Stone pelting) ಮಾಡಲಾಗಿದೆ. ಏಕಾಏಕಿ ನಡೆದ ಈ ದಾಳಿಗೆ ಇಮ್ರಾನ್  ಶಾಕ್ ಗೆ ಒಳಗಾಗಿದ್ದಾರೆ. ಯಾರು ಇದನ್ನು ಮಾಡಿದ್ದು, ಯಾಕೆ ಕಲ್ಲು ತೂರಾಟ ಮಾಡಿದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಇಮ್ರಾನ್ ಮೇಲೆ ದಾಳಿ ಆಗುತ್ತಿದ್ದಂತೆಯೇ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಮೇಲೆ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸನ್ನಿ ಲಿಯೋನ್, ಇಮ್ರಾನ್ ಹಶ್ಮಿ ನನ್ನ ಪೋಷಕರು ಎಂದ ವಿದ್ಯಾರ್ಥಿ

    ಸನ್ನಿ ಲಿಯೋನ್, ಇಮ್ರಾನ್ ಹಶ್ಮಿ ನನ್ನ ಪೋಷಕರು ಎಂದ ವಿದ್ಯಾರ್ಥಿ

    – ಪರೀಕ್ಷಾ ಪ್ರವೇಶ ಪತ್ರದಲ್ಲಿ ಹೆಸರು ಉಲ್ಲೇಖ

    ಪಾಟ್ನಾ: ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷಾ ಪ್ರವೇಶ ಪತ್ರದಲ್ಲಿ ಪೋಷಕರ ಹೆಸರನ್ನು ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಭೀಮ್ ರಾವ್ ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯದ ಧನರಾಜ್ ಮಹತೋ ಪದವಿ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ಕುಂದನ್ ಕುಮಾರ್ ತನ್ನ ಪರೀಕ್ಷಾ ಪ್ರವೇಶ ಪತ್ರದಲ್ಲಿ ಈ ರೀತಿ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಅಲ್ಲದೆ ಈ ಸುದ್ದಿಗೆ ಸ್ವತಃ ಇಮ್ರಾನ್ ಹಶ್ಮಿ ಪ್ರತಿಕ್ರಿಯಿಸಿದ್ದು, ಪ್ರತಿಜ್ಞೆ ಮಾಡುತ್ತೇನೆ, ಅವನು ನನ್ನವನಲ್ಲ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿ ಇಮ್ರಾನ್ ಹಾಗೂ ಸನ್ನಿ ಲಿಯೋನ್ ತನ್ನ ಪೋಷಕರೆಂದು ಬರೆದಿರುವ ಪ್ರವೇಶ ಪತ್ರವನ್ನು ವಿವಿಯ ಅಧಿಕಾರಿಗಳು ಗಮನಿಸಿದ್ದು, 20 ವರ್ಷದ ವಿದ್ಯಾರ್ಥಿಯ ನಕಲಿ ಪ್ರವೇಶ ಪತ್ರದ ಸ್ಕ್ರೀನ್ ಶಾಟ್‍ನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಇದಕ್ಕೆ ಸ್ವತಃ ಇಮ್ರಾನ್ ಹಶ್ಮಿ ಸಹ ಪ್ರತಿಕ್ರಿಯಿಸಿದ್ದಾರೆ.

    ತಂದೆಯ ಹೆಸರಿನ ಜಾಗದಲ್ಲಿ ಇಮ್ರಾನ್ ಹಶ್ಮಿ ಹೆಸರು ಬರೆಯಲಾಗಿದ್ದು, ಸ್ಪೆಲ್ಲಿಂಗ್ ತಪ್ಪಾಗಿದೆ. ಆದರೂ ನಟನ ಹೆಸರನ್ನು ಗುರುತಿಸಲಾಗಿದೆ. ಇನ್ನು ಸನ್ನಿ ಲಿಯೋನ್ ಹೆಸರನ್ನು ತಾಯಿಯ ಹೆಸರಿನ ಜಾಗದಲ್ಲಿ ಬರೆಯಲಾಗಿತ್ತು. ಅಲ್ಲದೆ ಊರಿನ ಹೆರಿನಲ್ಲಿ ರೆಡ್ ಲೈಟ್ ಏರಿಯಾ ಆಗಿರುವ ಚತುರ್ಭುಜ್ ಸ್ಥಾನ್ ಎಂದು ಕಿಡಿಗೇಡಿ ವಿದ್ಯಾರ್ಥಿ ಬರೆದಿದ್ದ.

    ಈ ಕುರಿತು ತನಿಖೆಗೆ ಆದೇಶಿಸಿದ್ದು, ನಿಸ್ಸಂಶಯವಾಗಿ ಇದು ಕಿಡಿಗೇಡಿತನ ಹಾಗೂ ವಿದ್ಯಾರ್ಥಿಯೇ ಇದಕ್ಕೆ ಹೊಣೆ. ವಿಚಾರಣೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರಾಮ್ ಕೃಷ್ಣ ಠಾಕೂರ್ ಹೇಳಿದ್ದಾರೆ.

    ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದ್ದ ಮೊಬೈಲ್ ನಂಬರ್ ಸಹಾಯದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.

  • ಮಾವನ ಮೇಲೆ ಮುನಿಸಿಕೊಂಡ್ರಂತೆ ಐಶ್ವರ್ಯಾ ರೈ!

    ಮಾವನ ಮೇಲೆ ಮುನಿಸಿಕೊಂಡ್ರಂತೆ ಐಶ್ವರ್ಯಾ ರೈ!

    ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮಾವ ಅಮಿತಾಬ್ ಬಚ್ಚನ್ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಐಶ್ವರ್ಯ ರೈ ತಮ್ಮ ಬಿಡುವಿನ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಇಚ್ಚಿಸುವ ಮಹಿಳೆ. ಶೂಟಿಂಗ್ ನಿಂದ ಬಿಡುವು ಸಿಕ್ಕ ಕೂಡಲೇ ಪತಿ ಅಭಿಷೇಕ್ ಬಚ್ಚನ್, ಪುತ್ರಿ ಆರಾಧ್ಯ, ಮಾವ ಅಮಿತಾಬ್ ಬಚ್ಚನ್ ಮತ್ತು ಅತ್ತೆ ಜಯಾ ಬಚ್ಚನ್ ಜೊತೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ಪತಿ ಮತ್ತು ಪುತ್ರಿಯೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಮಾವನ ಮೇಲಿನ ಮುನಿಸಿನಿಂದಾಗಿಯೇ ಅಮಿತಾಬ್ ಬಚ್ಚನ್ ಜೊತೆ ಐಶ್ವರ್ಯಾ ಕಾಣಿಸಿಕೊಳ್ಳುತ್ತಿಲ್ಲ ಎಂದು ಬಾಲಿವುಡ್ ಗಲ್ಲಿಗಳು ಹೇಳುತ್ತಿವೆ.

    ಮುನಿಸ್ಯಾಕೆ? ಬಾಲಿವುಡ್ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಜೊತೆ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಈ ಇಮ್ರಾನ್ ಹಶ್ಮಿ ಹೇಳಿಕೆಯಿಂದ ಐಶ್ವರ್ಯಾ ರೈ ಮುನಿಸಿಕೊಂಡಿದ್ದರು. ಈಗ ಇಮ್ರಾನ್ ಹಶ್ಮಿ ಸಿನಿಮಾದಲ್ಲಿ ಬಿಗ್ ಬಿ ಬಣ್ಣ ಹಚ್ಚುತ್ತೀರೋದಕ್ಕೆ ಐಶ್ ಮುನಿಸಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ಬಿತ್ತರಿಸಿದೆ.

    ಇಮ್ರಾನ್ ಹಶ್ಮಿ ಹೇಳಿದ್ದೇನು? ಎರಡು ವರ್ಷಗಳ ಹಿಂದೆ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಭಾಗಿಯಾಗಿದ್ದರು. ರ್ಯಾಪಿಡ್ ಫೈರ್ ಸುತ್ತಿನ ವೇಳೆ ಐಶ್ವರ್ಯಾ ರೈ ಅವರ ಸೌಂದರ್ಯವನ್ನು ಪ್ಲಾಸ್ಟಿಕ್ ಸರ್ಜರಿ ಎಂಬರ್ಥದಲ್ಲಿ ಹೇಳಿದ್ದರು. ಹೇಳಿಕೆ ವಿವಾದವಾಗುತ್ತಿದಂತಲೇ ಇಮ್ರಾನ್ ಹಶ್ಮಿ ಕ್ಷಮೆಯನ್ನು ಕೇಳಿದ್ದರು.

    ಇನ್ನು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಐಶ್ವರ್ಯಾಗೆ ಇದೂವರೆಗೂ ನಿಮ್ಮ ಬಗ್ಗೆ ಯಾವ ಹೇಳಿಕೆ ನಿಮಗೆ ಬೇಸರ ತರಿಸಿದೆ ಎಂದು ಕೇಳಲಾಗಿತ್ತು. ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರು ಹೇಳಿದ್ದು ಬೇಸರ ತರಿಸಿದೆ ಎಂದು ಹೇಳಿದ್ದರು.

  • ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

    ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

    ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಎಲ್ಲಾ ತಪ್ಪು ಕಾರಣಗಳಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಪಿಲ್ ಮತ್ತೊಮ್ಮೆ ತನ್ನ ಶೋನ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಬಾರಿ ಅಜಯ್ ದೇವ್‍ಗನ್ ಜೊತೆ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡುವ ಮೂಲಕ ಅಜಯ್ ಕೋಪಕ್ಕೆ ಗುರಿಯಾಗಿದ್ದಾರೆ.

    ಅಜಯ್ ದೇವ್‍ಗನ್ ತಮ್ಮ ಮುಂಬರುವ `ಬಾದ್‍ಶಾವೊ’ ಸಿನಿಮಾದ ಪ್ರಮೋಷನ್ ಗಾಗಿ ಕಪಿಲ್ ಶರ್ಮಾಗೆ ಆಗಮಿಸಿದ್ದರು. ಈ ವೇಳೆ ಅಜಯ್ ಚಿತ್ರದ ಸಹ ನಟರಾದ ಇಲಿಯಾನ ಡಿಕ್ರೂಸ್, ಇಮ್ರಾನ್ ಹಶ್ಮಿ, ಇಶಾ ಗುಪ್ತಾ ಮತ್ತು ನಿರ್ದೇಶಕ ಮಿಲನ್ ಲುತ್ರಿಯ ಸಹ ಬಂದಿದ್ದರು. ಈ ವೇಳೆ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಾರ್ಯಕ್ರಮ ರದ್ದಾಗಿದೆ.

     

    ಒಂದು ಗಂಟೆಗಳವರೆಗೆ ಕಾದ ನಂತರ ಅಜಯ್ ದೇವ್‍ಗನ್ ಕೋಪಗೊಂಡು ಕಪಿಲ್ ಶರ್ಮಾ ಶೋ ಸೆಟ್‍ನಿಂದ ಹೊರ ನಡೆದಿದ್ದು, ಇನ್ನ್ಮುಂದೆ ಯಾವತ್ತು ಹಿಂದಿರುಗುವುದಿಲ್ಲ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಶಾರೂಖ್ ಖಾನ್, ಅನಿಲ್ ಕಪೂರ್, ಅರ್ಜುನ್ ರಾಂಪಾಲ್ ಸೆಟ್ಟಗೆ ಬಂದಾಗಲೂ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿತ್ತು.

    ಕೆಲವು ದಿನಗಳಿಂದ ಕಪಿಲ್ ಕಾರ್ಯಕ್ರಮಕ್ಕೂ ಮುನ್ನ ಒತ್ತಡಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಕಪಿಲ್ ಅವರಲ್ಲಿ ಬಿಪಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಪಿಲ್ ಹೀಗೆ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಮತ್ತೆ ಈ ರೀತಿ ಮಾಡಿದ್ದಾರೆ. ಸ್ಟಾರ್‍ಗಳು ಹಿಂದುರುಗಿ ಹೋಗುವುದು ನಮಗೆ ಬೇಸರ ತಂದಿದ್ದೆ. ‘ಲೇಕಿನ್ ಕ್ಯಾ ಕರೇ’ ಇದು ಅವರ ಆರೋಗ್ಯದ ವಿಷಯ ಎಂದು ಕಪಿಲ್ ಶರ್ಮಾ ಶೋ ತಂಡದವರು ಹೇಳಿದ್ದಾರೆ.