Tag: ಇಮ್ರಾನ್ ಪಾಶಾ

  • ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕನ್ನಡಮಯವಾದ ಶಿಕ್ಷಣ ಸ್ಥಾಯಿ ಸಮಿತಿ ಕೊಠಡಿ

    ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕನ್ನಡಮಯವಾದ ಶಿಕ್ಷಣ ಸ್ಥಾಯಿ ಸಮಿತಿ ಕೊಠಡಿ

    ಬೆಂಗಳೂರು: ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಶಿಕ್ಷಣ ಸ್ಥಾಯಿ ಸಮಿತಿ ಕೊಠಡಿ ಈಗ ಕನ್ನಡಮಯವಾಗಿದೆ.

    ಬಿಬಿಎಂಪಿ ಶಿಕ್ಷಣ ಸಮಿತಿಯಲ್ಲಿ ಮಾಜಿ ರೌಡಿ ಶೀಟರ್ ದರ್ಬಾರ್ ಎದ್ದು ಕಾಣುತ್ತಿತ್ತು. ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಸಾಹಿತಿಗಳಿಗೆ ಅವಮಾನ ಮಾಡಿ ಕಚೇರಿಯನ್ನು ಸಂಪೂರ್ಣ ಹಸಿರುಮಯ ಮಾಡಿಕೊಂಡಿದ್ದರು. ಈ ಬಗ್ಗೆ ಮಂಗಳವಾರ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಆದರೆ ಈಗ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಪೂರ್ಣ ಕವಿಗಳು, ಶಿಕ್ಷಣ ಕ್ಷೇತ್ರದ ಸಾಧಕರು ಹಾಗೂ ಸ್ವಾಮೀಜಿಗಳ ಫೋಟೋ ಹಾಕಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಕಚೇರಿ ಹಸಿರುಮಯ – ಗಣ್ಯರ ಫೋಟೋಗಳು ಮಾಯ

    ಅಷ್ಟೇ ಅಲ್ಲದೇ ಸರ್ವಪಲ್ಲಿ ರಾಧಾಕೃಷ್ಣ, ಕುವೆಂಪು, ದ.ರಾ ಬೇಂದ್ರೆ, ಶಿವಕುಮಾರ ಸ್ವಾಮೀಜಿ ಸೇರಿದಂತೆ ಎಲ್ಲರ ಫೋಟೋಗಳನ್ನು ಮತ್ತೆ ಕಚೇರಿಯಲ್ಲಿ ಹಾಕಲಾಗಿದ್ದು, ಹಸಿರು ಮಾಯವಾಗಿದ್ದ ಕಚೇರಿ ಮತ್ತೆ ಮೊದಲ ರೂಪ ಪಡೆದಿದೆ. ಇತ್ತ ಶಿಷ್ಟಾಚಾರದಂತೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಕುಮಾರಸ್ವಾಮಿ ಫೋಟೋ ಸಹ ಹಾಕಲಾಗಿದೆ.

    ಇಮ್ರಾನ್ ಪಾಷಾ ಮೇಲೆ ಹತ್ತಾರು ಕೇಸ್‍ಗಳಿದ್ದು, ಈಗ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಅವಾಂತರ ಸೃಷ್ಟಿಸಿದ್ದರು. ಕಮಿಟಿ ಕಚೇರಿಯಲ್ಲಿದ್ದ ಕವಿಗಳು, ಸಾಹಿತಿಗಳ ಫೋಟೋಗಳಿಗೆ ಕೊಕ್ ಕೊಟ್ಟಿದ್ದು, ಕುವೆಂಪು, ದ.ರಾ.ಬೇಂದ್ರೆ, ಸರ್ವಪಲ್ಲಿ ರಾಧಾಕೃಷ್ಣನ್ ಫೋಟೋಗಳನ್ನು ತೆರವು ಮಾಡಿ ಶಿಕ್ಷಣ ಕಮಿಟಿಯಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅವಮಾನ ಮಾಡಲಾಗಿತ್ತು. ಕಮಿಟಿ ಕಚೇರಿಯಲ್ಲಿದ್ದ ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರ ಸ್ವಾಮೀಜಿಯವರ ಭಾಚಿತ್ರವನ್ನು ತೆರವು ಮಾಡಿದ್ದರು. ಇತ್ತ ಸಿಎಂ, ಡಿಸಿಎಂ, ಪ್ರಧಾನಿ ಫೋಟೋ ಹಾಕದೇ ಉದ್ಧಟತನ ತೋರಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಕಚೇರಿ ಹಸಿರುಮಯ – ಗಣ್ಯರ ಫೋಟೋಗಳು ಮಾಯ

    ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಕಚೇರಿ ಹಸಿರುಮಯ – ಗಣ್ಯರ ಫೋಟೋಗಳು ಮಾಯ

    –  ಕಾರ್ಪೊರೇಟರ್ ಇಮ್ರಾನ್ ಪಾಶಾ ದರ್ಬಾರ್

    ಬೆಂಗಳೂರು: ಬಿಬಿಎಂಪಿ ಶಿಕ್ಷಣ ಸಮಿತಿಯಲ್ಲಿ ಮಾಜಿ ರೌಡಿ ಶೀಟರ್ ದರ್ಬಾರ್ ಎದ್ದು ಕಾಣುತ್ತಿದೆ. ಸಾಹಿತಿಗಳಿಗೆ ಅವಮಾನ ಮಾಡಿ ಕಚೇರಿಯನ್ನು ಸಂಪೂರ್ಣ ಹಸಿರುಮಯ ಮಾಡಲು ಹೊರಟ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಹೌದು. ಇಮ್ರಾನ್ ಪಾಷಾ ಮೇಲೆ ಹತ್ತಾರು ಕೇಸ್‍ಗಳಿದ್ದು, ಈಗ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಅವಾಂತರ ಸೃಷ್ಟಿಸಿದ್ದಾರೆ. ಕಚೇರಿಯಲ್ಲಿ ಹಿರಿಯ ಸಾಹಿತಿಗಳು, ಪರಮಪೂಜ್ಯರಾದ ಸಿದ್ದಗಂಗಾ ಶ್ರೀಗಳು, ಶಿಕ್ಷಣ ಕ್ರಾಂತಿ ಮಾಡಿದ ಸರ್ವಪಲ್ಲಿ ರಾಧಕೃಷ್ಣ ಯಾರಿಗೂ ಇಲ್ಲಿ ಜಾಗ ಇಲ್ಲ.

    ಕಮಿಟಿ ಕಛೇರಿಯಲ್ಲಿದ್ದ ಕವಿಗಳು, ಸಾಹಿತಿಗಳ ಫೋಟೋಗಳಿಗೆ ಕೊಕ್ ಕೊಟ್ಟಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಸರ್ವಪಲ್ಲಿ ರಾಧಾಕೃಷ್ಣನ್ ಫೋಟೋಗಳನ್ನು ತೆರವು ಮಾಡಿದ್ದು ಶಿಕ್ಷಣ ಕಮಿಟಿಯಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅವಮಾನ ಮಾಡಲಾಗಿದೆ. ಕಮಿಟಿ ಕಛೇರಿಯಲ್ಲಿದ್ದ ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರ ಸ್ವಾಮೀಜಿಯವರ ಭಾಚಿತ್ರವನ್ನು ತೆರವು ಮಾಡಿದ್ದಾರೆ. ಸಿಎಂ, ಡಿಸಿಎಂ, ಪ್ರಧಾನಿ ಫೋಟೋ ಹಾಕದೇ ಉದ್ಧಟತನ ತೋರಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.

    ಇಮ್ರಾನ್ ಪಾಷಾ ಪಕ್ಕದ ವಾರ್ಡ್ ಬಾಪೂಜಿ ನಗರದಲ್ಲೂ ಹೀಗೆ ವಿವಾದ ಎದ್ದಿತ್ತು. ರಸ್ತೆಗಳಿಗೆ ಹೆಸರು ಇಟ್ಟು ಧರ್ಮದ ಬಣ್ಣ ಹಾಕಲು ಹೊರಟಿದ್ದ ನಿದರ್ಶನವಿದೆ. ಶಿಕ್ಷಣದಲ್ಲೂ ಈ ರಾಜಕೀಯ ಬೇಕೇ? ಹಳೆ ಚಾಳಿಗಳನ್ನು ಈ ಸದಸ್ಯರು ಬಿಡುವುದಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv