Tag: ಇಮಾಮ್-ಉಲ್-ಹಕ್

  • ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಆಟಗಾರ ಮೊಹಮ್ಮದ್ ಹಫೀಜ್ ಬ್ಯಾಟಿಂಗ್ ಮಧ್ಯದಲ್ಲಿ ಮೂತ್ರವಿಸರ್ಜನೆಗೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಗೆಪಾಟಲಿಗೀಡಾಗಿದ್ದಾರೆ.

    ಕೊರೊನಾ ಅಬ್ಬರಿಸುವ ಮುಂಚೆಯೇ ಲೀಗ್ ಹಂತದ ಪಿಎಸ್‍ಎಲ್ ಪಂದ್ಯಗಳು ಮುಗಿದಿದ್ದವು. ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗುವ ಮೊದಲೇ ಕೊರೊನಾ ಆರಂಭವಾಗಿತ್ತು. ಈಗ ಕೊರೊನಾ ನಂತರ ಮತ್ತೆ ಪಿಎಸ್‍ಎಲ್ ಶುರುವಾಗಿ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತಿವೆ.

    ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯ ಪೇಶಾವರ್ ಜಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಸುಲಭ ಜಯ ಸಾಧಿಸಿದೆ. ಆದರೆ ಪೇಶಾವರ್ ಜಲ್ಮಿ ತಂಡ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿದ್ದ ಲಾಹೋರ್ ಖಲಂದರ್ಸ್ ತಂಡದ ಮೊಹಮ್ಮದ್ ಹಫೀಜ್, ಬ್ಯಾಟಿಂಗ್ ಆಡುವ ಮಧ್ಯದಲ್ಲಿ ಮೈದಾನದಿಂದ ಹೊರಹೋಗಿ ಮೂತ್ರ ವಿಸರ್ಜನೆ ಮಾಡಿ ಬಂದಿದ್ದಾರೆ. ಈ ಕಾರಣಕ್ಕೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

    ಹಫೀಜ್‍ನನ್ನು ಪೇಶಾವರ್ ಜಲ್ಮಿ ತಂಡದ ವಿಕೆಟ್ ಕೀಪರ್ ಇಮಾಮ್-ಉಲ್-ಹಕ್ ಟ್ರೋಲ್ ಮಾಡಿದ್ದು, ಆತ ಕಳೆದ ಎರಡು ಓವರಿನಿಂದ ಸೂಸು ಮಾಡಬೇಕು ಎನ್ನುತ್ತಿದ್ದ ಎಂದು ಹೇಳಿ ಹಾಸ್ಯ ಮಾಡಿದ್ದಾರೆ. ಪಂದ್ಯದ ಮಧ್ಯೆ ಕಮೆಂಟೆಟರ್ ಜೊತೆ ವಹಾಬ್ ರಿಯಾಜ್, ಶೊಯೇಬ್ ಮಲ್ಲಿಕ್ ಮತ್ತು ಇಮಾಮ್-ಉಲ್-ಹಕ್ ಮಾತನಾಡುತ್ತಿರುತ್ತಾರೆ. ಈ ವೇಳೆ ಇಮಾಮ್ ಹಫೀಜ್ ಎರಡು ಓವರಿನಿಂದ ಸೂಸು ಮಾಡಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.

  • 36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ

    36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ ದಾಖಲೆಯನ್ನು ಪಾಕಿಸ್ತಾನದ ಯುವ ಆಟಗಾರ ಇಮಾಮ್-ಉಲ್-ಹಕ್ ಮುರಿದಿದ್ದಾರೆ.

    ಕಪಿಲ್ ದೇವ್ ತಮ್ಮ 24 ನೇ ವಯಸ್ಸಿನಲ್ಲಿ 1983ರ ವಿಶ್ವಕಪ್ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ 175 ರನ್ ಸಿಡಿಸಿದ್ದರು. ಈ ಮೂಲಕ 150 ಕ್ಕೂ ಅಧಿಕ ರನ್ ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಆದರೆ ಸುದೀರ್ಘ 36 ವರ್ಷದ ನಂತರ ಈ ದಾಖಲೆಯನ್ನು ಇಮಾಮ್-ಉಲ್-ಹಕ್ ಅವರು ಅಳಿಸಿ ಹಾಕಿದ್ದಾರೆ.

    ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ನಡೆದ 3 ನೇ ಏಕದಿನ ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರು 151 ರನ್ (131 ಎಸೆತ, 16 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ತನ್ನ 23ನೇ ವಯಸ್ಸಿನಲ್ಲೇ ಈ ಸಾಧನೆಯನ್ನು ಮಾಡಿದ್ದಾರೆ.

    ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರ 151 ರನ್‍ಗಳ ಭರ್ಜರಿ ಆಟದಿಂದ ಪಾಕಿಸ್ತಾನ 359 ರನ್‍ಗಳನ್ನು ಕಲೆಹಾಕಿತ್ತು. ಆದರೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೈರ್ ಸ್ಟೋವ್ (128 ರನ್, 93 ಎಸೆತ, 15 ಬೌಂಡರಿ, 5 ಸಿಕ್ಸರ್) ಅವರ ಶತಕದ ನೆರವಿನಿಂದ ಸುಲಭವಾಗಿ 6 ವಿಕೆಟ್‍ಗಳ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2 ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.