Tag: ಇನ್ ಸ್ಟಾಗ್ರಾಮ್

  • ಇನ್‌ಸ್ಟಾಗ್ರಾಮ್‌ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ

    ಇನ್‌ಸ್ಟಾಗ್ರಾಮ್‌ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ

    ಜಾಗತಿಕ ಮಟ್ಟದಲ್ಲಿ ಇನ್‌ಸ್ಟಾಗ್ರಾಮ್ ಪ್ರಭಾವಿಗಳ ಸಮೀಕ್ಷೆಯಾಗಿದ್ದು, ಆ ಸಮೀಕ್ಷೆಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ 19ನೇ ಸ್ಥಾನ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ 31 ಮಿಲಿಯನ್‌ಗೂ ಹೆಚ್ಚು ಹಿಂಬಾಲಕರಿದ್ದಾರೆ. ಈವರೆಗೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಕನ್ನಡದ ಏಕೈಕ ಸ್ಟಾರ್ ಆಗಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

    ಬಾಲಿವುಡ್‌ನಿಂದ ಆಲಿಯಾ ಭಟ್ 6ನೇ ಸ್ಥಾನದಲ್ಲಿದ್ದರೆ, ಪ್ರಿಯಾಂಕಾ ಚೋಪ್ರಾಗೆ 13ನೇ ಸ್ಥಾನ, ಅಕ್ಷಯ್ ಕುಮಾರ್ ಅವರಿಗೆ 14ನೇ ಸ್ಥಾನ, ಶ್ರದ್ಧಾ ಕಪೂರ್ ಅವರಿಗೆ 18ನೇ ಸ್ಥಾನ ದೊರೆತಿದೆ. ದಕ್ಷಿಣದ ತಾರೆಯರು ಮೊದಲ ಇಪ್ಪತ್ತು ಸ್ಥಾನಗಳಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೂ ಕಾರಣವಾಗಿದೆ. 64.1 ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಭಾರತೀಯ ಸೆಲೆಬ್ರಿಟಿಗಳಲ್ಲಿ ಆಲಿಯಾ ಭಟ್ ಮುಂದಿದ್ದಾರೆ ಎನ್ನುವುದು ವಿಶೇಷ. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

    ಮೊದಲನೇ ಸ್ಥಾನ ಅಮೆರಿಕಾದ ನಟ ಜೆಂಡಾಯ ಪಾಲಾಗಿದ್ದರೆ, ಎರಡನೇ ಸ್ಥಾನದಲ್ಲಿ ಸ್ಪೈಡರ್ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲಂಡ್ ಇದ್ದಾರೆ. ನಂತರ ಸ್ಥಾನಗಳು ಡಾನ್ ಜಾನ್ಸನ್, ಜೆ ಹೋಪ್, ವಿಲ್ ಸ್ಮಿತ್ ಪಾಲಾಗಿವೆ. ಜನ್ನಿಫರ್ ಲೊಜೆಪ್, ಕ್ರಿಸ್ ಹೆಮ್ಸ್ ವರ್ಥ್, ರಾಬರ್ಟ್ ಡೌನಿ ಜ್ಯೂನಿಯನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

    ರಶ್ಮಿಕಾ ಕನ್ನಡ ಸಿನಿಮಾಗಳ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರೂ, ಇದೀಗ ದಕ್ಷಿಣದ ಬಹುಬೇಡಿಕೆಯ ತಾರೆಯಾಗಿ ಬೆಳೆದಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಕನ್ನಡದ ನಟಿಯಾಗಿಯೂ ದಾಖಲೆ ಬರೆದಿದ್ದಾರೆ. ಕಡಿಮೆ ಸಮಯದಲ್ಲಿ ದಕ್ಷಿಣದ ಬಹುತೇಕ ನಟರ ಜೊತೆ ಅಭಿನಯಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ.

  • ಮುಂದೆಯೂ ಹೀಗೆ ಬಾಳೋಣ – ಪತ್ನಿಗೆ ಯುವಿ ಶುಭಾಶಯ

    ಮುಂದೆಯೂ ಹೀಗೆ ಬಾಳೋಣ – ಪತ್ನಿಗೆ ಯುವಿ ಶುಭಾಶಯ

    ನವದೆಹಲಿ: ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಹಾಗೂ ಅವರ ಪತ್ನಿ ಹ್ಯಾಝೆಲ್ ಕೀಚ್ ಇಂದು ತಮ್ಮ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ರಣಜಿ ಟ್ರೋಫಿಯಲ್ಲಿ ದೆಹಲಿ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಉತ್ತಮ ಆಟದ ಪ್ರದರ್ಶನ ನೀಡಿರಲಿಲ್ಲ. ಆದರೆ ವೃತ್ತಿಯಲ್ಲಾದ ಬೇಸರವನ್ನು ವೈಯಕ್ತಿಕ ವಿಚಾರದ ನಡುವೆ ತರದೇ ಇಂದು ಪತ್ನಿ ಜೊತೆ ತಮ್ಮ ಎರಡನೇ ಮದುವೆ ವಾರ್ಷಿಕೋತ್ಸವವನ್ನು ಸಂತೋಷದಿಂದ ಆಚರಿಸುತ್ತಿದ್ದಾರೆ.

    ಯುವರಾಜ್ ಸಿಂಗ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ, ನಾವಿಬ್ಬರು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಖುಷಿಯಿಂದ ಎರಡು ವರ್ಷ ಕಳೆದಿದ್ದೇವೆ. ಜೀವನದಲ್ಲಿ ಬಂದ ಒಳ್ಳೆಯ ಹಾಗೂ ಕೆಟ್ಟ ಸಂದರ್ಭವನ್ನು ಇಬ್ಬರು ಜೊತೆಗೂಡಿ ನಿಭಾಯಿಸಿದ್ದೇವೆ. ಮುಂದೆಯೂ ಹೀಗೆ ಬಾಳೋಣ, ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಪತ್ನಿ ಎಂದು ಹ್ಯಾಝೆಲ್ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಯುವರಾಜ್ ಸಿಂಗ್ ಭಾರತದ ಪರ ಒಟ್ಟು 40 ಟೆಸ್ಟ್, 304 ಏಕದಿನ, 58 ಟಿ-20 ಪಂದ್ಯ ಆಡಿದ್ದಾರೆ. ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಯುವರಾಜ್ ಟೀಂ ಇಂಡಿಯಾ ಆಯ್ಕೆಗಾರರನ್ನು ಸೆಳೆಯಲು ವಿಫಲರಾಗಿದ್ದಾರೆ.

    https://www.instagram.com/p/BqzSzswDRof/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹೆಚ್ಚು ತೂಕವಿರುವ ಯುವತಿ ಮಾಡೋ ಸ್ಟಂಟ್ ನಿಮಗೆ ಸಾಧ್ಯವೇ! – ವಿಡಿಯೋ ನೋಡಿ

    ಹೆಚ್ಚು ತೂಕವಿರುವ ಯುವತಿ ಮಾಡೋ ಸ್ಟಂಟ್ ನಿಮಗೆ ಸಾಧ್ಯವೇ! – ವಿಡಿಯೋ ನೋಡಿ

    – ಯೋಗಾಸನದ ಮೂಲಕವೇ ಫಾಲೋವರ್ಸ್ ಹೆಚ್ಚಿಸಿಕೊಂಡ್ಲು ದೆಹಲಿ ಬೆಡಗಿ

    ನವದೆಹಲಿ: ಯೋಗಾಸನ ಹಾಗೂ ವಿವಿಧ ರೀತಿಯ ಸ್ಟಂಟ್ ಗಳ ಪೋಸ್ಟ್ ಮೂಲಕವೇ ಯುವತಿಯೊಬ್ಬರು ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ನವದೆಹಲಿ ನಿವಾಸಿ ಮೋನಿಕಾ ಸಾಹು ಯೋಗಾಸನ ಹಾಗೂ ಸ್ಟಂಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೆಚ್ಚು ತೂಕ ಹೊಂದಿರುವ ಮೋನಿಕಾ ಯೋಗಾಸನದ ಮೂಲಕ, ನಾನು ಆಕ್ಟೀವ್ ಆಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೋ ಹಂಚಿಕೊಂಡಿರುವ ಮೋನಿಕಾ ಅವರನ್ನು ನವೆಂಬರ್ 16ರವರೆಗೆ ಒಟ್ಟು 33.3 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಫೇಸ್ ಬುಕ್‍ನಲ್ಲಿ 1.3 ಸಾವಿರಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ.

    ಭಾರವಾದ ದೇಹವಿದ್ದರೂ ಮೋನಿಕಾ ಸಾಹಸ ರೀತಿಯ ಯೋಗಾಸನ ಮಾಡುತ್ತಾರೆ. ಈ ಮೂಲಕ ಹಂತ ಹಂತವಾಗಿ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡು, ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ. ಸತತ ಪ್ರಯತ್ನದಿಂದ ಮೋನಿಕಾ ಯೋಗಾಸದಲ್ಲಿ ಪಳಗಿದ್ದು, ಈಗ ಅನೇಕ ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

    ಸಾಮಾನ್ಯರು ಮಾಡಲು ಸಾಧ್ಯವಾಗದ ಯೋಗಾಸನ, ಸ್ಟಂಟ್‍ಗಳನ್ನು ಮೋನಿಕಾ ಮಾಡುತ್ತಾರೆ. ಜೊತೆಗೆ ತನ್ನ ಆತ್ಮೀಯರಿಗೂ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಕಾಲು ಅಗಲಿಸಿ ನೆಲಕ್ಕೆ ನೇರವಾಗಿ ಕೂರುವುದಕ್ಕೆ ಸಾಮಾನ್ಯರು ಭಾರೀ ಕಷ್ಟಪಡಬೇಕಾಗುತ್ತದೆ. ಆದರೆ ಮೋನಿಕಾ ಯಾವುದೇ ಕಷ್ಟಪಡದೇ ಈ ಆಸನವನ್ನು ಮಾಡುತ್ತ, ಹೆಜ್ಜೆ ಹಾಕುತ್ತಾರೆ.

    ಆರೋಗ್ಯಯುತ ಜೀವನಕ್ಕೆ ಪ್ರೇರಣೆ ನೀಡುವುದು ನನ್ನ ಉದ್ದೇಶ. ಹೆಚ್ಚು ತೂಕವಿದ್ದರೂ, ಯೋಗಾಸನದ ಮೂಲಕ ಚಟುವಟಿಕೆಯಿಂದ ಇರಬಹುದು ಎನ್ನುವುದಕ್ಕೆ ನಾನೇ ಉದಾಹರಣೆ. ನನ್ನ ಸ್ನೇಹಿತರಿಗೂ ಇದನ್ನು ಕಲಿಸಿಕೊಡುತ್ತಿರುವೆ ಎಂದು ಇನ್ ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಮೋನಿಕಾ ಹೇಳಿಕೊಂಡಿದ್ದಾರೆ.

    ಮೋನಿಕಾ ಅವರು, ತಾವು ಮಾಡುವ ಆಸನ ಹಾಗೂ ಸ್ಟಂಟ್‍ಗಳ ಮಾಹಿತಿ ನೀಡಿ, ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಅನೇಕ ಮಂದಿ ಅವರನ್ನು ಅನುಕರಣೆ ಮಾಡಿ, ತಾವು ಮಾಡಲು ಯತ್ನಿಸುತ್ತಾರೆ. ಈ ಮೂಲಕ ಮೋನಿಕಾ ತಮ್ಮ ಅಭಿಮಾನಿಗಳ ಗೆದ್ದಿದ್ದಾರೆ.

    ಓದುತ್ತಲೇ ಹೇಗೆ ಆಸನ ಮಾಡಬಹುದು. ಗೃಹಿಣಿಯರು, ಮಹಿಳೆಯರು ಮೇಕಪ್ ಮಾಡುಕೊಳ್ಳುತ್ತಲೇ ಯೋಗ ಮಾಡಬಹುದು. ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಬಳಕೆ, ವಸ್ತುಗಳನ್ನು ಜೋಡಿಸುವುದು ಹೀಗೆ ವಿವಿಧ ಕೆಲಸಗಳಲ್ಲಿ ತಾವು ಹೇಗೆಲ್ಲ ಯೋಗಾಸನ ಮಾಡುತ್ತಾರೆ ಎನ್ನುವುದನ್ನು ಮೋನಿಕಾ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

    https://www.instagram.com/p/BpQvO8Hl3xE/

    https://www.instagram.com/p/BpD-iIBlD_8/

    https://www.instagram.com/p/BmX3-kFgzHM/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

    ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝಿವಾ ಈಗಾಗಲೇ ವಿಶ್ವ ಕ್ರೀಡಾ ಅಭಿಮಾನಿಗಳ ಮನಸೆಳೆದಿದ್ದು, ಜೀವಾಳೊಂದಿಗೆ ಧೋನಿ ಕಳೆಯುವ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿ ಪಡುತ್ತಾರೆ. ಸದ್ಯ ಝೀವಾ ಪ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಶೇರ್ ಮಾಡಿದ್ದಾರೆ.

    ಹೌದು, ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಮುದ್ದಾಗಿ ಕಾಣುವ ಝೀವಾ ವ್ಯಾಯಾಮ ಮಾಡುವುದನ್ನು ಕಾಣಬಹುದಾಗಿದೆ. ಲೀಲಾಜಾಲವಾಗಿ ಪ್ಲಾಂಕ್ ಮಾಡುತ್ತಿರುವ ಝೀವಾ, ಎಷ್ಟು ಸಮಯ ಕಾಲ ಬ್ಯಾಲೆನ್ಸ್ ಮಾಡಿದ್ದಾಳೆ ನೋಡಿ. ನಾನು ಫೋನ್ ತೆಗೆದುಕೊಂಡು ಫೋಟೋ ಸೆರೆಹಿಡಿಯುವವರೆಗೂ ಹಾಗೇ ಇದ್ದಳು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Bo87xwrFmS5/?utm_source=ig_embed

    ಝೀವಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಫಾಲೋ ಮಾಡುತ್ತಿದ್ದು, ಈ ಹಿಂದೆ ಝೀವಾ ಮಾಡಿದ್ದ ಡಾನ್ಸ್ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಝೀವಾ ಪ್ಲಾಂಕ್ ಮಾಡುವ ರೀತಿ ನೋಡಿ ಹಲವರು ಫಿದಾ ಆಗಿದ್ದು, ತಮ್ಮದೇ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ವಿಡಿಯೋವನ್ನ 4 ಲಕ್ಷಕ್ಕೂ ಅಧಿಕ ಬಾರಿ ವಿಕ್ಷೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BmvM8ypHbEe/?hl=en&taken-by=mahi7781

    https://www.instagram.com/p/BiJkeWeney1/?hl=en&taken-by=mahi7781

  • ಅವಳೇ ನನ್ನ ಶಕ್ತಿ, ನನ್ನ ಆತ್ಮೀಯ ಗೆಳತಿ: ವಿರಾಟ್ ಕೊಹ್ಲಿ

    ಅವಳೇ ನನ್ನ ಶಕ್ತಿ, ನನ್ನ ಆತ್ಮೀಯ ಗೆಳತಿ: ವಿರಾಟ್ ಕೊಹ್ಲಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ “ನನ್ನ ಶಕ್ತಿ, ನನ್ನ ಆತ್ಮೀಯ ಅವಳೇ” ಎಂದು ಪತ್ನಿ ಅನುಷ್ಕಾ ಅವರ ಬಗ್ಗೆ ಇನ್ ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊಹ್ಲಿ ಬುಧವಾರ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಸಂಭ್ರಮದಲ್ಲಿದ್ದರು. ಅದೇ ವೇಳೆ ಪತ್ನಿ ಅನುಷ್ಕಾ ಅವರ ಫೋಟೋವನ್ನು ಪೋಸ್ಟ್ ಮಾಡಿ ಅವರ ಬಗ್ಗೆ ಭಾವನಾತ್ಮಕ ಪದಗಳನ್ನು ಬರೆದುಕೊಂಡಿದ್ದಾರೆ.

    ಎಲ್ಲ ಅಡೆತಡೆಗಳ ನಡುವೆಯೂ ನನ್ನನ್ನು ಪ್ರೇರೇಪಿಸುವ ವ್ಯಕ್ತಿ ಅನುಷ್ಕಾ. ತನ್ನ ಜೀವನದಲ್ಲಿ ಸರಿಯಾದ ಕೆಲಸವನ್ನು ಮಾಡಲು ನನಗೆ ಮಾರ್ಗದರ್ಶನ ನೀಡುವ ವ್ಯಕ್ತಿ. ನನ್ನನ್ನು ಬದಲಿಸಿದ ವ್ಯಕ್ತಿ ಮತ್ತು ನಿಜವಾದ ಪ್ರೀತಿಯ ಅರ್ಥವನ್ನು ನನಗೆ ಅರ್ಥ ಮಾಡಿಸಿದ ಶಕ್ತಿ, ಎಲ್ಲ ಅವಳೇ ಎಂದು ಬರೆದು ಲವ್ ಎಮೋಜಿಯನ್ನು ಹಾಕಿ ತನ್ನ ಪ್ರೀತಿಯ ಭಾವನೆಯನ್ನು ಬರೆದಿದ್ದರು. ಈ ಫೋಟೋವನ್ನು 27.99 ಲಕ್ಷ ಮಂದಿ ಲೈಕ್ ಮಾಡಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    https://www.instagram.com/p/BoL2HGuA6kQ/?hl=en&taken-by=virat.kohli

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಹೆಸರು ಈ ಹಿಂದೆ 2016 ಹಾಗೂ 2017 ರಲ್ಲೂ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. 2017 ರಲ್ಲಿ ಕೊಹ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.  ಖೇಲ್ ರತ್ನ ಪ್ರಶಸ್ತಿಯನ್ನು ಬುಧವಾರ ಪಡೆಯುವ ಮೂಲಕ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಸದ್ಯಕ್ಕೆ ಕೊಹ್ಲಿ ವಿಶ್ರಾಂತಿಯಲ್ಲಿದ್ದು, ಅಕ್ಟೋಬರ್ 4 ರಂದು ವೆಸ್ಟ್ ಇಂಡಿಸ್ ವಿರುದ್ಧದ ಭಾರತದ ಟೆಸ್ಟ್ ಸರಣಿಗೆ ಮರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಬೆಂಗಳೂರು: ಮದುವೆಯಾದ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ನಿಂತಿದ್ದರೂ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಪತಿಯೊಂದಿಗೆ ವಿದೇಶ ಸಂಚಾರವನ್ನೂ ಮಾಡಿ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದವರು ಅಮೂಲ್ಯ. ಇದೀಗ ಮತ್ತೊಂದು ಖುಷಿ ಅವರ ಬೆನ್ನೇರಿಕೊಂಡಿದೆ!

    ಅಮೂಲ್ಯ ಹೊಸಾದೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೆನ್ನಿನ ಮೇಲೆ ಇತ್ತೀಚೆಗಷ್ಟೇ ಹಾಕಿಸಿಕೊಂಡಿರೋ ಈ ಆಂಕರ್ ಟ್ಯಾಟೂ ಫೋಟೋವನ್ನು ಇನ್ ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಮುಂದೆ ಪ್ರದರ್ಶಿಸಿ ಅಮೂಲ್ಯ ಸಂಭ್ರಮಿಸಿದ್ದಾರೆ.

     

    ಇಂಥಾ ಖುಷಿಗಳ ಮೂಲಕವೇ ಅಮೂಲ್ಯ ಮತ್ತೆ ಚಿತ್ರರಂಗದತ್ತಲೂ ಮುಖ ಮಾಡಿದ್ದಾರೆ. ದರ್ಶನ್ ಅವರ ಚಿತ್ರದಲ್ಲಿ ತಂಗಿಯಾಗಿ ನಟಿಸೋ ಮೂಲಕ ಅಮಾಲ್ಯಾ ನಟನೆಗೆ ಮರಳೋ ಸೂಚನೆಗಳಿವೆ. ಮದುವೆಯಾದ ನಂತರ ಒಂದಷ್ಟು ಕಾಲದ ಬಳಿಕವಾದರೂ ಅಮೂಲ್ಯ ನಟಿಸಲು ಶುರು ಮಾಡುತ್ತಾರೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಅದಾಗಲೇ ಚುನಾವಣೆ ಬಂದಿದ್ದರಿಂದ ಮಾವನ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಅವರು ಇದೀಗ ಪತಿಯೊಂದಿಗೆ ಜಾಲಿ ಟ್ರಿಪ್ಪನ್ನೂ ಮುಗಿಸಿಕೊಂಡು ನಟಿಸಲು ಮನಸು ಮಾಡಿದ್ದಾರೆ.

    ಆದರೆ ಅಮೂಲ್ಯ ಅಭಿಮಾನಿಗಳದ್ದು ಅವರು ಮತ್ತೆ ನಾಯಕಿಯಾಗಿ ಮಿಂಚಬೇಕೆಂಬ ಆಸೆ. ಅಮೂಲ್ಯ ಇದನ್ನು ಮನಗಂಡು ಸಾಕಾರಗೊಳಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bm0LZ3mAkql/?hl=en&taken-by=amulya_moulya

  • ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ರು ಕೊಹ್ಲಿ!

    ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ರು ಕೊಹ್ಲಿ!

    ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಏಪ್ರಿಲ್ 1 ರ ವಿಶೇಷವಾಗಿ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಏಪ್ರಿಲ್ 1 ಮೂರ್ಖರ ದಿನ ವಿಶೇಷವಾಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೊದಲು ಆಸಕ್ತಿಯಿಂದ ಏನು ಹೇಳುತ್ತಿದ್ದಾರೆ ಎಂದು ಕೇಳುವ ವೇಳೆಗೆ ಮೂರ್ಖರ ದಿನದ ಸಂದೇಶ ಸ್ಕ್ರಿನ್ ಮೇಲೆ ಕಾಣಿಸಿಕೊಳ್ಳುತ್ತದೆ.

    https://www.instagram.com/p/BhBB81AgCp_/?hl=en&taken-by=virat.kohli

    ಅಭಿಮಾನಿಗಳಿಗೆ ಧನ್ಯವಾದ: 2017 ವರ್ಷದಲ್ಲಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿದ್ದ ಇನ್ ಸ್ಟಾಗ್ರಾಮ್ ಅವಾರ್ಡ್ ಸಿಕ್ಕಿದ್ದು ಅದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

    `ನನಗೆ ಈ ಅವಾರ್ಡ್ ಸಿಕ್ಕಲು ಕಾರಣರಾದ ನಿಮಗೆ ಧನ್ಯವಾದಗಳು. ನಾನು ಥ್ಯಾಂಕ್ಸ್ ಹೇಳುವುದು ಕೊಂಚ ತಡವಾಯಿತು ಎಂದು ನನಗೆ ಗೊತ್ತು. ಹಾಗಿದ್ದರೂ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿದ್ದೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

    ಸದ್ಯಕ್ಕೆ ಕೊಹ್ಲಿ ಐಪಿಎಲ್ ಗಾಗಿ ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಕೊಹ್ಲಿ ತಂಡದೊಂದಿಗೆ ಸೇರಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

    https://www.instagram.com/p/Bg-9XrZA54d/?hl=en&taken-by=virat.kohli

  • ತನ್ನ ಒಂದು ಪೇಂಟಿಂಗ್ ನಿಂದಾಗಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ 87ರ ಅಜ್ಜಿ

    ತನ್ನ ಒಂದು ಪೇಂಟಿಂಗ್ ನಿಂದಾಗಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ 87ರ ಅಜ್ಜಿ

    ಲಂಡನ್: ಅಜ್ಜ-ಅಜ್ಜಿಯರು ಹೆಚ್ಚಾಗಿ ಉದ್ಯಾನವನದಲ್ಲಿ, ತಮ್ಮ ಮೊಮ್ಮಕ್ಕಳ ಜೊತೆ ಆಟವಾಡುತ್ತ ಅಥವಾ ಟಿವಿ ನೋಡುತ್ತ ಕಾಲ ಕಳೆಯುತ್ತಾರೆ. ಆದರೆ ಲಂಡನ್ ಅಜ್ಜಿಯೊಬ್ಬರು ಮೈಕ್ರೋಸಾಫ್ಟ್ ಪೇಂಟ್ ಬಳಸಿ ಅದ್ಭುತವಾದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಕ್ವಾಚಾ ಗಾರ್ಸಿಯಾ ಝೈರಾ (87) ಅದ್ಭುತ ಚಿತ್ರ ಬಿಡಿಸಿದ ಮಹಿಳೆ. ಸಾಮಾನ್ಯವಾಗಿ ಕಂಪ್ಯೂಟರ್ ನ ಮೈಕ್ರೋಸಾಫ್ಟ್ ಪೇಂಟ್ ಬಳಸಿ ಚಿತ್ರಗಳನ್ನು ಬಿಡಿಸಿದ್ದು, ಈ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

    https://www.instagram.com/p/BgPT42RAUnt/?hl=en&taken-by=conchagzaera

    ಕ್ವಾಚಾ ಅವರು ತಾವು ಬಿಡಿಸಿರುವ ಈ ಚಿತ್ರಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಮೊಮ್ಮಕ್ಕಳ ಸಲಹೆ ಮೇರೆಗೆ ಇನ್ ಸ್ಟಾಗ್ರಾಮ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಅಂದರೆ ಮಾರ್ಚ್ 9 ಇವರ ಖಾತೆಗೆ ಕೇವಲ 300 ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದರು. ಆದರೆ ಈ ಚಿತ್ರಗಳನ್ನು ಹಂಚಿಕೊಂಡ ಅಲ್ಪ ಸಮಯದಲ್ಲಿ 1.36 ಲಕ್ಷ ಜನರು ಅಜ್ಜಿಯನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕ್ವಾಚಾ, `ನನ್ನ ಪತಿ ಅನಾರೋಗ್ಯಕ್ಕೆ ಒಳಗಾದ ಮೇಲೆ ನಾನು ಅವರನ್ನು ನೋಡಿಕೊಳ್ಳಬೇಕಿತ್ತು. ನನಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ತಮ್ಮ ಪತಿ ನನಗೆ ಪೋಸ್ಟ್ ಮಾಡಿದ್ದ ಕಾರ್ಡ್ ಗಳಿಂದ ಸ್ಫೂರ್ತಿ ಪಡೆದು ಈ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೆನೆಂದು ಹೇಳಿದ್ದಾರೆ.

    https://www.instagram.com/p/BfipO3YHI_Y/?hl=en&taken-by=conchagzaera

    ಈ ಮುನ್ನ ಕ್ವಾಚಾ ಅವರ ಮಕ್ಕಳು ಇವರಿಗೆ ಸಮಯ ಕಳೆಯಲು ಕಂಪ್ಯೂಟರ್ ಒಂದನ್ನು ತಂದುಕೊಟ್ಟಿದ್ದರು. ಆಗ ಅವರು ಎಂಎಸ್ ಪೇಂಟ್ ನಲ್ಲಿ ಸಣ್ಣ ಮನೆ, ಮರಗಳನ್ನು ಬಿಡಿಸಲು ಪ್ರಾರಂಭಿಸಿದರು. ಬಳಿಕ ಇದು ಹವ್ಯಾಸವಾಗಿ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.

    ಕ್ವಾಚಾ ಅವರ ಈ ಚಿತ್ರಗಳನ್ನು ಗಮನಿಸಿದ್ರೆ ಎಂಎಸ್ ಪೈಂಟ್ ಮೂಲಕ ಇಂತಹ ಚಿತ್ರ ಬಿಡಿಸಲು ಕಷ್ಟ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ.

    https://www.instagram.com/p/BbWu9xGn7SB/?hl=en&taken-by=conchagzaera

  • 53ನೇ ಹುಟ್ಟುಹಬ್ಬಕ್ಕೆ ಅಮೀರ್ ಖಾನ್‍ಗೆ ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್

    53ನೇ ಹುಟ್ಟುಹಬ್ಬಕ್ಕೆ ಅಮೀರ್ ಖಾನ್‍ಗೆ ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್

    ಮುಂಬೈ: ಬಾಲಿವುಡ್ ಮಿ.ಪರ್ಫೆಕ್ಟ್ ನಟ ಅಮೀರ್ ಖಾನ್ ಅವರಿಗೆ ಇಂದು 53 ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದು, ಒಂದು ಫೋಟೋವನ್ನು ಶೇರ್ ಮಾಡದೇ ಇದ್ದರೂ 2.35 ಲಕ್ಷ ಫಾಲೋವರ್ಸ್ ಗಳನ್ನು ಗಳಿಸಿದ್ದಾರೆ.

    ಅಮೀರ್ ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕೋಟಿಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಈಗ ಇನ್ ಸ್ಟಾಗ್ರಾಮ್ ತೆರೆದ ಸ್ವಲ್ಪ ಸಮಯದಲ್ಲೇ ಈ ಪ್ರತಿಕ್ರಿಯೆಯನ್ನು ಕಂಡು ಸಂತೋಷಗೊಂಡಿದ್ದಾರೆ.

    ಅಮೀರ್ ಭಾರತದಲ್ಲಿ ಮಾತ್ರವಲ್ಲದೆ ಚೀನಾ, ಟರ್ಕಿ, ತೈವಾನ್ ಮತ್ತು ರಷ್ಯಾಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೀರ್ ಖಾನ್ ಅವರಿಗೆ ಟ್ವಿಟ್ಟರ್ ನಲ್ಲಿ 2.3 ಕೋಟಿ ಜನ ಫಾಲೋವರ್ ಗಳಿದ್ದರೆ, ಫೇಸ್ ಬುಕ್ ನಲ್ಲಿ 1.53 ಲಕ್ಷ ಮಂದಿ ಅಭಿಮಾನಿಗಳಿದ್ದಾರೆ.

    ಅಮೀರ್ ಖಾನ್ ಪ್ರಸ್ತುತ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ `ಥಗ್ಸ್ ಆಫ್ ಹಿಂದೊಸ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಮಿತಾಬ್ ಬಚ್ಚನ್, ಫಾತಿಮಾ ಸನಾ ಶೇಖ್ ಮತ್ತು ಕತ್ರಿನಾ ಕೈಫ್ ನಟಿಸುತ್ತಿದ್ದಾರೆ.

  • ಕಣ್ಸನ್ನೆ ಬೆಡಗಿ ಒಂದು ಪೋಸ್ಟ್ ಗೆ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ!

    ಕಣ್ಸನ್ನೆ ಬೆಡಗಿ ಒಂದು ಪೋಸ್ಟ್ ಗೆ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ!

    ಮುಂಬೈ: ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಣಿಯಾಗಿ ಮಿಂಚುತ್ತಿದ್ದಾರೆ.

    ಇನ್ ಸ್ಟಾಗ್ರಾಮ್ ಇತಿಹಾಸದಲ್ಲಿ ಭಾರತದ ಪರ ಹೊಸ ದಾಖಲೆ ಬರೆದ ಪ್ರಿಯಾ ಒಂದು ಪೋಸ್ಟ್ ಗೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

    ಸಾಧಾರಣವಾಗಿ ಚಿತ್ರರಂಗದ ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಂಪೆನಿಗಳ ಪೋಸ್ಟ್ ಗಳನ್ನು ಪ್ರಚಾರ ಮಾಡುತ್ತಾರೆ. ಆದರೆ ಅವರು ಯಾರು ಇಷ್ಟೊಂದು ಮೊತ್ತವನ್ನು ಪಡೆಯುವುದಿಲ್ಲ ಎಂದು ವರದಿಯಾಗಿದೆ. ಈಗ ಇನ್ ಸ್ಟಾಗ್ರಾಮ್ ನಲ್ಲೇ 8 ಲಕ್ಷ ರೂ. ಪಡೆಯುತ್ತಿರುವ ಪ್ರಿಯಾ, ಇನ್ನು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಿಂದ ಎಷ್ಟು ಸಂಭಾವನೆ ಪಡೆಯಬಹುದು ಎಂದು ಅಭಿಮಾನಿಗಳು ಈಗ ಲೆಕ್ಕಾಚಾರ ಹಾಕುತ್ತಿದ್ದಾರೆ.

    ಪ್ರಿಯಾ ವಾರಿಯರ್ ಜನಪ್ರಿಯತೆ ಎಷ್ಟಿದೆ ಅಂದರೆ ಇನ್ ಸ್ಟಾಗ್ರಾಮ್ ನಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹಿಂದಿಕ್ಕಿದ್ದಾರೆ. ಪ್ರಿಯಾಗೆ 51 ಲಕ್ಷ ಮಂದಿ ಫಾಲೋವರ್ ಗಳಿದ್ದರೆ, 41 ಲಕ್ಷ ಮಂದಿ ಜುಕರ್ ಬರ್ಗ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇದನ್ನು ಓದಿ: ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್‍ಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ ಪ್ರಥಮ್!

    ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ ‘ಒರು ಆಡಾರ್ ಲವ್’ ಜೂನ್ ತಿಂಗಳಲ್ಲಿ ತೆರೆಕಾಣಲಿದೆ. ಬರಿ ಟೀಸರ್ ಮೂಲಕವೇ ಈ ಮಟ್ಟದ ಯಶಸ್ಸು ಪಡೆದುಕೊಂಡಿರುವ ನಟಿಯಾಗಿದ್ದಾರೆ.