Tag: ಇನ್ಶುರೆನ್ಸ್

  • ಇನ್ಶುರೆನ್ಸ್ ಹಣಕ್ಕಾಗಿ ಸಾವಿನ ನಾಟಕವಾಡ್ದ-ಆದ್ರೆ ಸತ್ತಿದ್ದು ಮಾತ್ರ ಪತ್ನಿ, ಮಕ್ಕಳು!

    ಇನ್ಶುರೆನ್ಸ್ ಹಣಕ್ಕಾಗಿ ಸಾವಿನ ನಾಟಕವಾಡ್ದ-ಆದ್ರೆ ಸತ್ತಿದ್ದು ಮಾತ್ರ ಪತ್ನಿ, ಮಕ್ಕಳು!

    ಬೀಜಿಂಗ್: ವ್ಯಕ್ತಿಯೊಬ್ಬ ಇನ್ಶುರೆನ್ಸ್ ಹಣದ ಆಸೆಯಿಂದ ಸ್ವತಃ ತಾನೇ ಸತ್ತಿದ್ದೇನೆ ಎಂದು ಬಿಂಬಿಸಿದ್ದಾನೆ. ಆದರೆ ಪತ್ನಿ ಮತ್ತು ಮಕ್ಕಳು ನಿಜವಾಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಈ ಘಟನೆ ಚೀನಾದ ದಕ್ಷಿಣ ಪ್ರಾಂತ್ಯದಲ್ಲಿ ನಡೆದಿದೆ. 34 ವರ್ಷ ವಯಸ್ಸಿನ ವ್ಯಕ್ತಿ ಇಂತಹ ನಾಟಕವಾಡಿ, ಪತ್ನಿ-ಮಕ್ಕಳ ಸಾವಿಗೆ ಕಾರಣವಾಗಿದ್ದಾನೆ. ಈತ ಇನ್ಶುರೆನ್ಸ್ ಹಣದ ಆಸೆಗಾಗಿ ತಾನು ಮೃತಪಟ್ಟಿದ್ದೇನೆ ಎಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಈತನ ಪತ್ನಿ ನಿಜವಾಗಿಗೂ ಪತಿ ಮೃತಪಟ್ಟಿದ್ದಾನೆ ಎಂದು ನೊಂದು ಮಕ್ಕಳೊಂದಿಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ವ್ಯಕ್ತಿಯೊಬ್ಬ 2018ರ ಸೆಪ್ಟೆಂಬರ್ ನಲ್ಲಿ ಒಂದು ಕೋಟಿ ರೂಪಾಯಿಯ ಇನ್ಶುರೆನ್ಸ್ ಪಾಲಿಸಿಯನ್ನು ತೆಗೆದುಕೊಂಡಿದ್ದನು. ಆ ವಿಚಾರವನ್ನ ಆತ ತನ್ನ ಪತ್ನಿಗೂ ತಿಳಿಸಿರಲಿಲ್ಲ. ಸಂಸಾರದಲ್ಲಿ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದನು. ಇದರಿಂದ ಬೇಸತ್ತ ಆತ ಇನ್ಶುರೆನ್ಸ್ ಹಣ ಪಡೆದುಕೊಳ್ಳಲು ಒಂದು ಪ್ಲಾನ್ ಮಾಡಿದ್ದಾನೆ.

    ತಾನು ಮೃತಪಟ್ಟಂತೆ ನಾಟಕ ಮಾಡಿ ಇನ್ಶುರೆನ್ಸ್ ಹಣವನ್ನು ತೆಗೆದುಕೊಳ್ಳುವುದು ಆತನ ಪ್ಲಾನ್ ಆಗಿತ್ತು. ಅದೇ ಪ್ರಕಾರ ಅವನು ತನ್ನ ಸಹೋದ್ಯೋಗಿಗಳಿಂದ ಒಂದು ಕಾರನ್ನು ಬಾಡಿಗೆಗೆ ಪಡೆದುಕೊಂಡು ನೀರಿನಲ್ಲಿ ಮುಳುಗಿಸಿದ್ದಾನೆ. ಆ ಮೂಲಕ ತಾನು ಮೃತಪಟ್ಟಂತೆ ಸಂದರ್ಭ ಸೃಷ್ಟಿಮಾಡಿದ್ದಾನೆ. ಇದರಿಂದಾಗಿ ಇನ್ಶುರೆನ್ಸ್ ಹಣ ತನ್ನ ಕುಟುಂಬದ ಕೈಸೇರುತ್ತೆ ಅಂತ ಅಂದುಕೊಂಡಿದ್ದನು. ಆದರೆ ಅಲ್ಲಿ ಆಗಿದ್ದೆ ಬೇರೆ.

    ಇತ್ತ ಪತಿಯ ಸಾವಿನ ಸುದ್ದಿ ತಿಳಿದ 31 ವರ್ಷದ ಡೈ ಗುಹಾವ್ ಖಿತ್ತನೆಗೆ ಒಳಗಾಗಿದ್ದು, ಪತಿ ಇಲ್ಲದೇ ತನ್ನ ಇಬ್ಬರು ಮಕ್ಕಳನ್ನು ಹೇಗೆ ಸಾಕುವುದು ಎಂದು ಚಿಂತಿಸಿದ್ದಾರೆ. ಹೀಗೆ ತನ್ನ ಮುಂದಿನ ಜೀವನವನ್ನು ನೆನೆದು, ಪರಿಸ್ಥಿತಿಯ ಬಗ್ಗೆ ಒಂದು ಸುದೀರ್ಘ ಪತ್ರವೊಂದನ್ನು ಬರೆದು ತನ್ನಿಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿ ಸಮೀಪದ ಕೊಳವೊಂದಕ್ಕೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮರುದಿನ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ತಿಳಿದ ಪತಿ ತನ್ನ ತಪ್ಪಿನ ಅರಿವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯಕ್ಕೆ ಪತ್ನಿ ಮತ್ತು ಮಕ್ಕಳ ಸಾವಿಗೆ ಕಾರಣನಾದ ವ್ಯಕ್ತಿ ವಿರುದ್ಧ ಪೊಲೀಸರು ವಂಚನೆ ಮತ್ತು ಆಸ್ತಿ ಹಾನಿಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2 ಕೋಟಿ ರೂ. ಇನ್ಶುರೆನ್ಸ್ ಹಣದ ಆಸೆಗೆ ಗಂಡನನ್ನ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿದ್ಳು

    2 ಕೋಟಿ ರೂ. ಇನ್ಶುರೆನ್ಸ್ ಹಣದ ಆಸೆಗೆ ಗಂಡನನ್ನ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿದ್ಳು

    ಕುರ್ನೂಲು: ಮಹಿಳೆಯೊಬ್ಬಳು ಇನ್ಶುರೆನ್ಸ್ ಹಣಕ್ಕೆ ಆಸೆ ಬಿದ್ದು ಗಂಡನನ್ನೇ ಕೊಲೆ ಮಾಡಿರುವ ಘಟನೆ ಜನವರಿ 25ರಂದು ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

    ಆಂಧ್ರಪ್ರದೇಶದ ಕುರ್ನೂಲಿನಲ್ಲಿ ಈ ಘಟನೆ ನಡೆದಿದೆ. ಮೃತ ದರ್ದೈವಿಯನ್ನು ಶ್ರೀನಿವಾಸಲು ಎಂದು ಗುರುತಿಸಲಾಗಿದೆ. ಇವರ ಪತ್ನಿ ರಮಾದೇವಿ 2 ಕೋಟಿ ರೂ. ವಿಮೆ ಹಣ ಸಿಗುತ್ತದೆಂಬ ಆಸೆಯಿಂದ ಗಂಡನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಶ್ರೀನಿವಾಸಲು ಪ್ರಕಾಶಂ ಜಿಲ್ಲೆಯ ಚೋಳವೀಡು ಗ್ರಾಮದವರಾಗಿದ್ದು ಅದೇ ಗ್ರಾಮದ ರಮಾದೇವಿಯನ್ನು ಮದುವೆಯಾಗಿದ್ದರು. ರಮಾದೇವಿಯ ಸಹೋದರ್ ರಮೇಶ್ ಜೊತೆ ಸೇರಿ ಹೈದರಾಬಾದ್‍ನಲ್ಲಿ ಆಯಿಲ್ ಬ್ಯುಸಿನೆಸ್ ಮಾಡುತ್ತಿದ್ದರು. ರಮಾದೇವಿ ಗ್ರಾಮದ ಮುಖ್ಯಸ್ಥ ಮಧುಸೂಧನ್ ರೆಡ್ಡಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

    ರಮಾದೇವಿಗೆ ತನ್ನ ಗಂಡನೊಂದಿಗೆ ಜೀವನ ಮುಂದುವರಿಸಲು ಇಷ್ಟವಿರಲಿಲ್ಲ. ಹಾಗೇ ರಮೇಶ್ ಹಾಗೂ ಪತ್ನಿ ಶಿವಪ್ರಣಿತಾ ಕೂಡ ಹಣಕ್ಕಾಗಿ ಅತಿಯಾಸೆ ಪಡುತ್ತಿದ್ದರು. ಹೀಗಾಗಿ ಈ ಮೂವರು ಮಧುಸೂಧನ್ ರೆಡ್ಡಿ ಜೊತೆ ಸೇರಿ ಶ್ರೀನಿವಾಸಲು ಅವರನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು.

    ಮೊದಲಿಗೆ ಶ್ರಿನಿವಾಸಲು ಅವರಿಗೆ ವಿವಿಧ ಇನ್ಶುರೆನ್ಸ್ ಪಾಲಿಸಿಗಳನ್ನ ಮಾಡಿಸುವಂತೆ ಮಾಡಿದ್ದರು. ಈ ಪಾಲಿಸಿಗಳ ಮೇಲೆ ಶ್ರೀನಿವಾಸಲು ಹಲವಾರು ಬಾರಿ ಸಾಲ ಕೂಡ ಪಡೆದಿದ್ದರು. ಆರೋಪಿಗಳು ಈ ಎಲ್ಲಾ ಪಾಲಿಸಿಗಳನ್ನ ಇಟ್ಟುಕೊಂಡು ಶ್ರೀನಿವಾಸಲು ಅವರನ್ನ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದರು. ತಮ್ಮ ಈ ಸಂಚಿನ ಭಾಗವಾಗಿ ಶ್ರೀನಿವಾಸಲು ಅವರನ್ನ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಇವರೊಂದಿಗೆ ಆಯಿಲ್ ಬ್ಯುಸಿನೆಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಮಣ ಹಾಗೂ ಮೋಯಿನ್ ಬಾಷಾ ಎಂಬವರು ಕೂಡ ಜೊತೆಯಲ್ಲಿ ಹೋಗಿದ್ದರು.

    ಜನವರಿ 25ರಂದು ಏನೋ ಮಾತನಾಡಬೇಕು ಎಂದು ಹೇಳಿ ಹೆದ್ದಾರಿಯಲ್ಲಿ ಓರ್ವಾಕಲ್ಲು ಬಳಿ ತಾವು ಪ್ರಯಾಣಿಸುತ್ತಿದ್ದ ವಾಹನವನ್ನ ನಿಲ್ಲಿಸಿದ್ದರು. ಎಲ್ಲರೂ ಕೆಳಗಿಳಿದು ಮಾತನಾಡುತ್ತಿದ್ದ ವೇಳೆ ಲಾರಿ ಬರುವುದನ್ನು ಗಮನಿಸಿ ಶ್ರೀನಿವಾಸಲು ಅವರನ್ನ ಅದರ ಕೆಳಗೆ ತಳ್ಳಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ಶ್ರೀನಿವಾಸಲು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಇದು ಹಿಟ್ ಅಂಡ್ ರನ್ ಪ್ರಕರಣ ಎಂದು ಎಲ್ಲರೂ ಹೇಳಿದ್ದರು.

    ಆದ್ರೆ ಶ್ರೀನಿವಾಸಲು ಅವರ ಸಂಬಂಧಿಕರಿಗೆ ಈ ಬಗ್ಗೆ ಅನುಮಾನ ಮೂಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರಮಣ ಹಾಗೂ ಮೋಯಿನ್ ಬಾಷಾನನ್ನು ವಿಚಾರಣೆ ಮಡಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಪೊಲೀಸರು ಈ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಾದ ರಮಾದೇವಿ, ರಮೇಶ್, ಶಿವಪ್ರಣಿತಾ ಹಾಗೂ ಮಧುಸೂಧನ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ.

    ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ಇನ್ಮುಂದೆ ಈ ಒಂದು ಸರ್ಟಿಫಿಕೇಟ್ ಇಲ್ಲವಾದ್ರೆ ನಿಮ್ಮ ವಾಹನದ ಇನ್ಶುರೆನ್ಸ್ ನವೀಕರಣ ಆಗಲ್ಲ

    ಇನ್ಮುಂದೆ ಈ ಒಂದು ಸರ್ಟಿಫಿಕೇಟ್ ಇಲ್ಲವಾದ್ರೆ ನಿಮ್ಮ ವಾಹನದ ಇನ್ಶುರೆನ್ಸ್ ನವೀಕರಣ ಆಗಲ್ಲ

    ನವದೆಹಲಿ: ಮಾಲಿನ್ಯವನ್ನ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಹಲವು ನಿರ್ದೇಶನಗಳನ್ನ ನೀಡಿದೆ. ವಾಹನ ಮಾಲೀಕರು ಪೊಲ್ಯೂಷನ್ ಅಂಡರ್ ಕಂಟ್ರೋಲ್(ಪಿಯುಸಿ) ಸರ್ಟಿಫಿಕೇಟ್ ನೀಡದಿದ್ರೆ ಇನ್ಶುರೆನ್ಸ್ ಕಂಪೆನಿಗಳು ಇನ್ಮುಂದೆ ಇನ್ಶುರೆನ್ಸ್ ನವೀಕರಣ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ರಾಷ್ಟ್ರ ರಾಜಧಾನಿಯ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಪಿಯುಸಿ ಸೆಂಟರ್‍ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಮದನ್ ಬಿ ಲೊಕುರ್ ನೇತೃತ್ವದ ಪೀಠ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯುಕ್ಕೆ ಸೂಚಿಸಿದೆ.

    ರಾಷ್ಟ್ರರಾಜಧಾನಿಯಲ್ಲಿ ವಾಹನ ಸವಾರರು ಪಿಯುಸಿ ಸರ್ಟಿಫಿಕೇಟ್ ಹೊಂದಿರುವಂತೆ ಮಾಡಲು ಪಿಯುಸಿ ಸೆಂಟರ್‍ಗಳು ಕಾರ್ಯಗತವಾಗಿರುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ 4 ವಾರಗಳ ಗಡುವು ನೀಡಿದೆ.

    ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸಲಹೆಯ ಮೇರೆಗೆ ಕೋರ್ಟ್ ಈ ಆದೇಶ ನೀಡಿದೆ. ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರವಾದಿ ಎಂಸಿ ಮೆಹ್ತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರರಣೆ ವೇಳೆ ಪೀಠ ಈ ಆದೇಶ ನೀಡಿದೆ.

  • ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಕೊಂದ್ರು?

    ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಕೊಂದ್ರು?

    ಅಹಮ್ಮದಾಬಾದ್: ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಎನ್‍ಆರ್‍ಐ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಸದ್ಯ ಲಂಡನ್‍ನಲ್ಲಿ ನೆಲೆಸಿರೋ 28 ವರ್ಷದ ಆರತಿ ಲೋಕನಾಥ್ ಹಾಗೂ 53 ವರ್ಷದ ಕನ್ವಾಲ್ಜಿತ್ ಸಿನ್ಹ ರಾಯ್ಜಾಡಾ ಈ ಆರೋಪವನ್ನು ಎದುರಿಸುತ್ತಿದ್ದು, ದಂಪತಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. 13 ವರ್ಷದ ಗೋಪಾಲ್ ಎಂಬ ಬಾಲಕನ ಹತ್ಯೆಯಲ್ಲಿ ಈ ದಂಪತಿಯ ಕೈವಾಡವಿದೆ ಅಂತಾ ಕೆಶೋದ್ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ತಿಲ್ವಾ ಹೇಳಿದ್ದಾರೆ.

    ಏನಿದು ಪ್ರಕರಣ?: ಆರತಿ ಹಾಗೂ ಕನ್ವಲ್ಜಿತ್ ಸಿನ್ಹಾ ದಂಪತಿ ನಿತೀಶ್ ಮುಂಡ್ ಎಂಬಾತನ ಜೊತೆ ಪಿತೂರಿ ನಡೆಸಿ ಗೋಪಾಲ್‍ನನ್ನು ದತ್ತು ಪಡೆದಿದ್ದರು. ಬಳಿಕ ಗೋಪಾಲ್ ಹೆಸರಲ್ಲಿ 1.20 ಕೋಟಿ ರೂಪಾಯಿ ಇನ್ಶುರೆನ್ಸ್ ಮಾಡಿಸಲಾಗಿತ್ತು. ಮೊದಲು ಲಂಡನ್‍ನಲ್ಲೇ ವಾಸವಿದ್ದ ನಿತೀಶ್ ವೀಸಾ ಅವಧಿ ಮುಗಿದ ಬಳಿಕ ಅಹಮದಾಬಾದ್‍ಗೆ ಮರಳಿದ್ದ. ಆದ್ರೆ ಈತ ಹಾಗೂ ದಂಪತಿ ಜೊತೆಗೂಡಿ 2015ರಲ್ಲೇ ಗೋಪಾಲ್‍ನನ್ನು ಕೊಂದು ಇನ್ಶುರೆನ್ಸ್ ಹಣವನ್ನು ಲಪಟಾಯಿಸಲು ಸ್ಕೆಚ್ ಹಾಕಿದ್ರು ಎಂದು ತಿಲ್ವಾ ಹೇಳಿದ್ದಾರೆ.

    2017ರ ಫೆಬ್ರವರಿ 8ರಂದು ಗೋಪಾಲ್, ನಿತೀಶ್, ಹರ್ಸುಖ್ ಪಟೇಲ್ ಹಾಗೂ ಮಹದೇವ್ ಎಂಬವರ ಜೊತೆ ರಾಜ್‍ಕೋಟ್‍ನಿಂದ ಮಲಿಯಾದ ತನ್ನ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‍ನಲ್ಲಿ ಬಂದ ಅಪರಿಚಿತರು ಜುನಾಗಢ್ ಜಿಲ್ಲೆಯ ಕೆಶೋದ್ ಬಳಿ ಗೋಪಾಲ್‍ಗೆ ಚಾಕುವಿನಿಂದ ಇರಿದಿದ್ದರು. ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗೋಪಾಲ್ ಮೃತಪಟ್ಟಿದ್ದ.

    ಗೋಪಾಲ್ ನಿತೀಶ್‍ನೊಂದಿಗೆ ವಾಸವಿದ್ದ. ಬಾಲಕನ ಹತ್ಯೆಗಾಗಿ ಈ ಹಿಂದೆಯೇ ಸಂಚು ಹೂಡಿದ್ದ ನಿತೀಶ್ ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಹಣ ನೀಡಿ ಸುಫಾರಿ ಕೊಟ್ಟಿದ್ದ. ಸೋಮವಾರದಂದು ನಿತೀಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗೋಪಾಲ್ ಹತ್ಯೆಯಲ್ಲಿ ಎನ್‍ಆರ್‍ಐ ದಂಪತಿಯ ಕೈವಾಡವಿರುವ ಕುರಿತು ಬೆಳಕಿಗೆ ಬಂದಿದೆ. ಸದ್ಯ ಲಂಡನ್‍ನಲ್ಲಿರುವ ಎನ್‍ಆರ್‍ಐ ದಂಪತಿಯನ್ನು ಬಂಧಿಸಲು ತಯಾರಿ ನಡೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ತಿಲ್ವಾ ತಿಳಿಸಿದ್ದಾರೆ.