Tag: ಇನ್ನೋವಾ ಕಾರ್

  • ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಬೆಂಕಿ- ಸುಟ್ಟು ಕರಕಲಾಯ್ತು ಇನ್ನೋವಾ!

    ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಬೆಂಕಿ- ಸುಟ್ಟು ಕರಕಲಾಯ್ತು ಇನ್ನೋವಾ!

    ಕೋಲಾರ: 2018ರ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ.

    ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇನ್ನೋವಾ ಕಾರ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಪರಿಣಾಮ ಮನೆಮುಂದೆ ನಿಲ್ಲಿಸಿದ್ದ ಇನ್ನೋವಾ ಹೊತ್ತಿ ಉರಿದಿದೆ. ಜೊತೆಗೆ ಇನ್ನೋವಾ ಕಾರ್ ಪಕ್ಕದಲ್ಲಿದ್ದ ಮತ್ತೊಂದು ಮಾರುತಿ-800 ಕಾರ್ ಗೂ ಬೆಂಕಿ ಆವರಿಸಿ ಎರಡು ಕಾರ್ ಗಳು ಸುಟ್ಟು ಕರಕಲಾಗಿವೆ.

    ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಿಜೆಪಿ ಅಭ್ಯರ್ಥಿ ಓಂ ಶಕ್ತಿ ಚಲಪತಿಗೆ ಸೇರಿದ ಇನ್ನೋವಾ ಕಾರ್ ಇದಾಗಿದ್ದು, ಸೋಮವಾರವಷ್ಟೇ ನಾಮಪತ್ರ ಸಲ್ಲಿಕೆ ಮಾಡಿದ್ರು. ಯಾರೋ ಕಿಡಿಗೇಡಿಗಳು ಬೇಕಂತಲೆ ಈ ಕೃತ್ಯವೆಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರಾದ್ರು, ಎರಡು ಕಾರ್ ಸಂಪೂರ್ಣವಾಗಿ ಸುಟ್ಟು ಕರಕಾಲಾಗಿವೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=lVl-4mh01gQ

     

  • ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಕೋಲಾರ: ಎರಡು ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಕೋಲಾರ ತಾಲೂಕು ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬೆಂಗಳೂರು ರಾಮಮೂರ್ತಿ ನಗರ ನಿವಾಸಿ ರೂಪಾ(28) ಮೃತ ದುರ್ದೈವಿ ಮಹಿಳೆ. ಇವರು ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆಯಲ್ಲಿ ಕೋಲಾರ ನಗರಸಭೆ 27 ನೇ ವಾರ್ಡ್ ಸದಸ್ಯೆ ಸಾಕಮ್ಮ ಹಾಗೂ ಪ್ರಭಾಕರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.