Tag: ಇನಾಮ್ದಾರ್

  • ಆ್ಯಕ್ಸಿಡೆಂಟ್ ಲೆಕ್ಕಿಸದೇ ‘ ಇನಾಮ್ದಾರ್’ ಗಾಗಿ ಚೇಸಿಂಗ್ ಮಾಡಿದ್ರು ಶರತ್ ಲೋಹಿತಾಶ್ವ

    ಆ್ಯಕ್ಸಿಡೆಂಟ್ ಲೆಕ್ಕಿಸದೇ ‘ ಇನಾಮ್ದಾರ್’ ಗಾಗಿ ಚೇಸಿಂಗ್ ಮಾಡಿದ್ರು ಶರತ್ ಲೋಹಿತಾಶ್ವ

    ನಾಮ್ದಾರ್… ಇನಾಮ್ದಾರ್… ಇನಾಮ್ದಾರ್ (Inamdar)…ಎಲ್ಲಿ ನೋಡಿದರೂ ಈ‌ ಚಿತ್ರದ್ದೇ ಸದ್ದು ಸುದ್ದಿ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ, ನೆಲಮೂಲದ ಕಥೆ ಹಾಗೂ ಪಾತ್ರವರ್ಗದಿಂದ ಗಮನ ಸೆಳೆಯುತ್ತಲೇ ಇದೆ.  ಹಿರಿಯ ನಟ ಅವಿನಾಶ್, ಥ್ರಿಲ್ಲರ್ ಮಂಜು, ಎಂ.ಕೆ ಮಠ, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತಾರಾಗಣವಿರುವ ಈ ಮೂವೀ ಯಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ (Sarath Lohitashwa) ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಥಾನಾಯಕನಿಗೆ ಸರಿಸಮನಾಗಿ ನಿಲ್ಲುವ ಕ್ಯಾರೆಕ್ಟರ್ ಇದಾಗಿದ್ದು, ಸ್ಪೆಷಲ್ ಪೊಲೀಸ್ ಆಫೀಸರ್ ಪಾತ್ರ ಪೋಷಣೆ ಮಾಡಿದ್ದಾರೆ.

    ಕಳೆದ ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ ಶರತ್ ಲೋಹಿತಾಶ್ವ ಅವರು ನಾನಾ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿ ಐದು ಭಾಷೆಯಲ್ಲೂ ಗುರ್ತಿಸಿಕೊಂಡಿರುವ ಇವರು ಬಹು ಬೇಡಿಕೆಯ ಪೋಷಕ ನಟನ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ಧಗಧಗಿಸಿದ್ದು ಈಗ ಹೊಸಬರಿಗೂ ಸಾಥ್ ಕೊಡ್ತಿದ್ದಾರೆ. ಆ್ಯಕ್ಸಿಡೆಂಟ್ ಆಗಿ ಕಾಲಿಗೆ ಆಪರೇಷನ್ ಆಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಇನಾಮ್ದಾರ್ ಸಿನಿಮಾದ ಚೇಸಿಂಗ್ ಸೀಕ್ವೆನ್ಸ್ ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿರ್ದೇಶಕ ಸಂದೇಶ್ ಶೆಟ್ಟಿ, ಇವತ್ತಿನ ಯಂಗ್ ಸ್ಟಾರ್ಸ್ ಬೆಚ್ಚಿಬೀಳೋ ರೇ‌ಂಜ್ ಗೆ ಶರತ್ ಸರ್ ಸಾಹಸ ಮಾಡಿದ್ದಾರೆಂದಿದ್ದಾರೆ.

    ನಮ್ಮ ಸಿನಿಮಾದ 70 ಪರ್ಸೆಂಟ್ ಶೂಟಿಂಗ್ ಆಗಿರುವುದು ಕಾಡಲ್ಲೇ‌. ಕರಡಿ ಗುಡ್ಡ, ನಾಗನಕಲ್ಲು ಬರೆ, ಬೆಳಕಲ್ ಆಸುಪಾಸಿನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಸವಾಲಿನ ಕೆಲಸವೇ. ಅಂತಹ ಕಡೆಯಲೆಲ್ಲಾ ತಂಡದ ಜೊತೆ ಬೆನ್ನೆಲುಬಾಗಿ ನಿಂತು ಶರತ್ ಲೋಹಿತಾಶ್ವ ಕೆಲಸ ಮಾಡಿದ್ರಂತೆ. ಅವರ ಈ ಮನೋಭಾವವನ್ನು ಶ್ಲಾಘಿಸುವ ನಿರ್ದೇಶಕರು, ಹಿರಿಯ ಹಾಗೂ ಕಿರಿಯ ಕಲಾವಿದರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ.

    ಅಂದ್ಹಾಗೇ, ನಮ್ಮ ಮಣ್ಣಿನ ಸೊಗಡು, ನಮ್ಮ ನೆಲದ ಶ್ರೀಮಂತಿಕೆಯನ್ನು ಸಾರುವಂತಹ ಸಿನಿಮಾಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ನಿರ್ದೇಶಕರು ಶ್ರಮವಹಿಸ್ತಿದ್ದಾರೆ. ಆ ದಿಸೆಯಲ್ಲಿ ಸಾಗಿದ ಸಂದೇಶ್ ಶೆಟ್ಟಿ ಆಜ್ರಿ, ಪಶ್ಚಿಮ ಘಟ್ಟದಲ್ಲಿ ಪರಶಿವನನ್ನು ಆರಾಧಿಸುವ ಬುಡಕಟ್ಟು ಜನಾಂಗ ಹಾಗೂ ಬಯಲು ಸೀಮೆಯಲ್ಲಿ ಶಿವಾಜಿ ಮಹರಾಜ್ ನ ಆರಾಧಿಸುವ  ಮನೆತನದ ಕಥೆನಾ ಮುನ್ನಲೆಗೆ ತಂದಿದ್ದಾರೆ. ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥನವನ್ನು ಇನಾಮ್ದಾರ್ ಒಡಲಲ್ಲಿಟ್ಟು ಜಗತ್ತಿನ ಮುಂದೆ ಹರವಿಡಲು ರೆಡಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ಕರಡಿ ಕಾಮ ಹಾಗೂ ಕಮರ ಕಾಳ ಹೆಸರಿನ ಪಾತ್ರಗಳನ್ನ ನಿಭಾಯಿಸಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗಿದೆ. ಚಿತ್ರಕಲಾ ರಾಜೇಶ್,ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ,  ಹಾಲಂಬಿಯಂತಹ ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ. ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿತೆರೆ ಅಂಗಳಕ್ಕೆ ತರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹೆಡ್ಡಿಂಗ್ ನೋಡಿದ್ಮೇಲೆ ಹಿರಿಯ ನಟ ಅವಿನಾಶ್ (Avinash) ಯಾವಾಗ ಖಾದಿ ತೊಟ್ಟು ಕಣಕ್ಕಿಳಿದಿದ್ದರು? ಯಾರ ವಿರುದ್ದ ಸ್ಪರ್ಧೆ ಮಾಡಿದ್ದರು? ನಮಗೆ ಗೊತ್ತಿಲ್ಲದೇ ಅದ್ಯಾವಾಗ ಪಶ್ವಿಮ ಘಟ್ಟದ ಸ್ಥಳೀಯ ಎಂಎಲ್ಎ (MLA) ಸ್ಥಾನಕ್ಕೇರಿದರು ? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಒಮ್ಮೆಲೆ ದಾಂಗುಡಿ ಇಡುವುದು ಸಹಜ. ಆ ಪ್ರಶ್ನೆಗೆ ಉತ್ತರಿಸಬೇಕು ಅಂದರೆ ಅಸಲಿಯತ್ತು ಹರವಿಡಬೇಕು. ರಿಯಲ್ ಅಲ್ಲ ರೀಲ್ ಎನ್ನುವ ಸತ್ಯ ಒಪ್ಪಿಕೊಳ್ಳಬೇಕು

    ರೀಲ್ ಲೈಫ್ ನಲ್ಲಿ ಅಂದರೆ ಸಿನಿಮಾಗಳಲ್ಲಿ ಸಾಕಷ್ಟು ಭಾರಿ ಎಂಎಲ್ಎ ಆಗಿದ್ದಾರೆ. ಸದ್ಯ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ನಿರ್ದೇಶಿಸಿರುವ ಇನಾಮ್ದಾರ್ (Inamdar) ಚಿತ್ರದಲ್ಲಿ   ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಸುಕುಮಾರ್ ಪಾತ್ರ ನಿರ್ವಹಿಸಿದ್ದಾರೆ.ಇದೊಂದು ಕ್ಲೀನ್ ಹ್ಯಾಂಡ್ ಎಂಎಲ್ಎ ಪಾತ್ರವಾಗಿದ್ದು ಖುದ್ದು ಅವಿನಾಶ್ ಅವರೇ ತಮ್ಮ ರೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ.  ಅಭಯಾರಣ್ಯದಲ್ಲಿ  ವಾಮಮಾರ್ಗದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಹ ಕ್ಯಾರೆಕ್ಟರ್ ಅವ್ರದ್ದು ಎಂದು ಹೇಳುವ ನಿರ್ದೇಶಕರು, ಥ್ರಿಲ್ಲರ್ ಮಂಜು ಸರ್ ಹಾಗೂ ಅವಿನಾಶ್ ಸರ್ ಮುಖಾಮುಖಿಯಾಗುವ ಸೀಕ್ವೆನ್ಸ್ ಹಾಗೂ ಡೈಲಾಗ್ಸ್ ಪ್ರೇಕ್ಷಕರಿಗೆ ವಾವ್ ಫೀಲ್ ಕೊಡುತ್ತೆ ಎಂದಿದ್ದಾರೆ.

    ಡಾ. ರಾಜ್ ಕುಮಾರ್, ರಜನಿಕಾಂತ್, ವಿಷ್ಣುವರ್ಧನ್ ರಂತಹ ಲೆಜೆಂಡರಿ ಆ್ಯಕ್ಟರ್ ಗಳಿಂದ ಹಿಡಿದು ಈಗೀನ ಬಡ್ಡಿಂಗ್ ಆರ್ಟಿಸ್ಟ್ ಗಳ ತನಕ ಎಲ್ಲರ ಸಿನಿಮಾಗಳಲ್ಲೂ ನಟ ಅವಿನಾಶ್ ಅವರು ಮೇಜರ್ ರೋಲ್ ಪ್ಲೇ ಮಾಡುತ್ತಾ ಬರುತ್ತಿದ್ದಾರೆ. ನಾನಾ ತರಹದ ಪಾತ್ರಗಳಿಗೆ ಜೀವತುಂಬಿ ವರ್ಸಟೈಲ್ ಆ್ಯಕ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  3 ದಶಕಗಳಿಂದ ಮಾಯಾಲೋಕದಲ್ಲಿ ಸಕ್ರಿಯರಾಗಿರೋ ಮೈಸೂರಿನ ಹೀರೋ, ಇವತ್ತಿಗೂ ಡಿಮ್ಯಾಂಡ್ ಕಳೆದುಕೊಳ್ಳದೇ ಪೋಷಕ ನಟನಾಗಿ ಬ್ಯುಸಿಯಾಗಿದ್ದಾರೆ. ಕನ್ನಡ ,ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈಗ ಇನಾಮ್ದಾರ್ ಹೆಸರಿನ ಸಿನಿಮಾದಲ್ಲಿ ಎಂಎಲ್ಎ ಸುಕುಮಾರ್ ಆಗಿ ನಿಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ

    ಇನಾಮ್ದಾರ್ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆಯ ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥೆಯುಳ್ಳ ಸಿನಿಮಾ. ಬೆಳಗಾವಿ, ಕುಂದಾಪುರ, ಚಿಕ್ಕಮಗಳೂರು ಒಳಗೊಂಡಂತೆ ಬಹುತೇಕ ಚಿತ್ರೀಕರಣ ನಡೆದಿರುವುದು ಕಾಡಲ್ಲೇ. ಕರಡಿ ಗುಡ್ಡ,  ನಾಗನಕಲ್ಲು ಬರೆ, ಮುದೂರು, ಬೆಳಕಲ್ಲು ಆಸುಪಾಸಿಲ್ಲಿ ಶೂಟಿಂಗ್ ಮಾಡಿದ್ದು ಚಿತ್ರತಂಡಕ್ಕೆ ಸವಾಲ್ ಆಗಿತ್ತು. ಆದರೆ, ಎಲ್ಲವೂ ಸುಸೂತ್ರವಾಗಿ ಸಾಗೋದಕ್ಕೆ ಹಿರಿಯ ಕಲಾವಿದರಾದ ಅವಿನಾಶ್ ಕೂಡ ಸಾಥ್ ಕೊಟ್ಟರು. ಹೊಸ ತಂಡವಾದರೂ ಸಿನಿಮಾ ಮೇಲಿರುವ ಬದ್ದತೆ ಹಾಗೂ ಪ್ಯಾಷನ್ ನೋಡಿ ಇನಾಮ್ದಾರ್ ಗೆ ಬೆಂಬಲವಾಗಿ ನಿಂತರು. ಫೈನಲೀ ಶೂಟಿಂಗ್ ಕಂಪ್ಲೀಟ್ ಆಗಿದೆ, ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು ಇದೇ ಅಕ್ಟೋಬರ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ಈ ಸಿನಿಮಾದಲ್ಲಿ ವರ್ಸಟೈಲ್ ಆ್ಯಕ್ಟರ್ ಅವಿನಾಶ್ ಜೊತೆಗೆ ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಿರಿಯ ಪ್ರತಿಭಾನ್ವಿತ ಕಲಾವಿದರ ಸಮಾಗಮವೂ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಡಕಟ್ಟು ಜನರ ರಕ್ಷಣೆಗೆ ನಿಂತ  ಇನಾಮ್ದಾರ್: ನಟಿ ಚಿರಶ್ರೀ ಅಂಚನ್

    ಬುಡಕಟ್ಟು ಜನರ ರಕ್ಷಣೆಗೆ ನಿಂತ ಇನಾಮ್ದಾರ್: ನಟಿ ಚಿರಶ್ರೀ ಅಂಚನ್

    ಚಿರಶ್ರೀ ಅಂಚನ್ ಮೂಲತಃ ಕರಾವಳಿಯವರು. ತುಳು ಚಿತ್ರರಂಗದಿಂದ ಬಣ್ಣದ ಪಯಣ ಆರಂಭಿಸಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾ ಮಾಡಿದರೂ ಕಾಡುವ ಕಥೆಗಳ ಭಾಗವಾಗಿದ್ದಾರೆ. ಸವಾಲೆನಿಸುವ ಪಾತ್ರಗಳಿಗೆ ಜೀವತುಂಬುತ್ತಾ ಸೈ ಎನಿಸಿಕೊಂಡು ಬರುತ್ತಿರುವ ಇವರೀಗ, ಇನಾಮ್ದಾರ್ (Inamdar) ಚಿತ್ರದಿಂದ ಮತ್ತೆ ಸಂಚಲನ ಮೂಡಿಸಲು ಹೊರಟಿದ್ದಾರೆ. ಬುಡಕಟ್ಟು ಜನಾಂಗದ ಜನರ ರಕ್ಷಣೆಗೆ ನಿಲ್ಲುವ ಮೂಲಕ ನಟಿ ಚಿರಶ್ರೀ ಅಂಚನ್ (Chirasree Anchan) ಸುದ್ದಿ ಕೇಂದ್ರ ತಲುಪಿದ್ದಾರೆ.

    ಬಯಲು ಸೀಮೆ ಹಾಗೂ ಪಶ್ಚಿಮ ಘಟ್ಟಗಳ ಎರಡು ಜನಾಂಗಗಳ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ನಿರ್ದೇಶಕ ಸಂದೇಶ್ ಶೆಟ್ಟಿ  (Sandesh Shetty Azri) ಇನಾಮ್ದಾರ್ ಚಿತ್ರವನ್ನಾಗಿಸಿದ್ದಾರೆ. ಇದರಲ್ಲಿ ಭುವಿ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡಿರುವ ಚಿರಶ್ರೀ, ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹುಡುಗಿಯಾಗಿ ಕಾಣಸಿಗಲಿದ್ದಾರೆ. ಕಾಡಿನಲ್ಲಿ ತಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳುವ ದಿಟ್ಟ ನಾಯಕಿಯ ಪಾತ್ರವನ್ನು ನಿಭಾಯಿಸಿದ್ದು ತಮ್ಮೊಟ್ಟಿಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

    ಸಿನಿಮಾದಲ್ಲಿ ನಾಲ್ಕೈದು ಸೀನ್ ಬಂದು ಹೋಗುವ ಪಾತ್ರ ನಿಭಾಯಿಸಲು ನಂಗಿಷ್ಟವಿಲ್ಲ ಎನ್ನುವ ಚಿರಶ್ರೀ, ಸ್ಕೋಪ್ ಇರುವ ಪಾತ್ರಗಳನ್ನು, ಅಭಿನಯಕ್ಕೆ ಅವಕಾಶವಿರುವ ಕ್ಯಾರೆಕ್ಟರ್ ಗಳನ್ನೇ ಎದುರು ನೋಡ್ತಾರಂತೆ. ಆ ದಾಟಿಯಲ್ಲಿ ಸಿಕ್ಕಂತಹ ಸಿನಿಮಾವೇ ಇನಾಮ್ದಾರ್ ಅಂತೆನ್ನುವ ನಟಿ ಚಿರಶ್ರೀ ಅಂಚನ್, ‘ಭುವಿ’ ಪಾತ್ರದಿಂದ ತನ್ನ ವೃತ್ತಿಬದುಕು ಬದಲಾಗಬಹುದು. ಬಿಗ್ ಬ್ರೇಕ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    ಅಂದ್ಹಾಗೆ, ಭುವಿ ಪಾತ್ರಕ್ಕಾಗಿ ನಟಿ ಚಿರಶ್ರೀ ಅಂಚನ್ ಸಾಕಷ್ಟು ಶ್ರಮವಹಿಸಿದ್ದಾರೆ. ಮಳೆ ಗಾಳಿ ಎನ್ನದೇ ಬೆಟ್ಟ- ಗುಡ್ಡ ಹತ್ತಿ ಶೂಟಿಂಗ್ ಮಾಡಿದ್ದಾರೆ. ದಟ್ಟ ಕಾಡಲ್ಲಿ ಬರಿಗಾಲಲ್ಲೇ  ಚೇಸ್  ಸೀಕ್ವೆನ್ಸ್ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಚಿರಶ್ರೀ ಕಾಲಿಗೆ ಕಲ್ಲು ತಾಗಿ ದೊಡ್ಡ ಮಟ್ಟದ ಗಾಯ ಆಗಿತ್ತಂತೆ. ಹಾಗಂತ, ಬ್ರೇಕ್ ಪಡೆಯದೇ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡೇ ಪಾತ್ರ ಪೋಷಣೆ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ಹೇಳಿಕೊಳ್ಳುವ ಚಿರಶ್ರೀ, ಭುವಿ ಪಾತ್ರ ಮನಸ್ಸಿಗೆ ನೆಮ್ಮದಿ ಮತ್ತು ಸಾರ್ಥಕತೆ ತಂದುಕೊಟ್ಟಿದೆ ಅಂತಾರೇ.

    ಇದೇ ಅಕ್ಟೋಬರ್ 27 ರಂದು ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿರುವ, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಿಸಿರುವ ಇನಾಮ್ದಾರ್ ಬಿಡುಗಡೆಯಾಗ್ತಿದೆ. ಈ ಚಿತ್ರ ರಿಲೀಸ್ ಗಾಗಿ ಎದುರುನೋಡ್ತಿರುವ ಚಿರಶ್ರೀ, ಬಿಗ್ ಬಾಸ್ ಖ್ಯಾತಿಯ  ಶಶಿ ಜೊತೆ ‘ಪ್ರೇಮಿಗಳ ಗಮನಕ್ಕಾಗಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾವೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಪರೂಪದ ಕಥಾಹಂದರವುಳ್ಳ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ ‘ಇನಾಮ್ದಾರ್’ ಹೀರೋ

    ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ ‘ಇನಾಮ್ದಾರ್’ ಹೀರೋ

    ನಾಮ್ದಾರ್… (Inamdar)  ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸುದ್ದಿ ಮಾಡುತ್ತಿರುವ ಸಿನಿಮಾ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಡೈರೆಕ್ಟ್ ಮಾಡಿರುವ ಈ ಚಿತ್ರ, ಕಥಾವಸ್ತು ಹಾಗೂ ಪಾತ್ರವರ್ಗದಿಂದ ಕುತೂಹಲ ಹುಟ್ಟಿಸಿದೆ. ವಿಶೇಷ ಅಂದರೆ ಈ ಸಿನಿಮಾದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆಗೊಳ್ಳುತ್ತಿರುವ ರಂಜನ್ ಛತ್ರಪತಿ (Ranjan Chhatrapati), ಮೊದಲ ನೋಟದಲ್ಲೇ ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ್ದಾರೆ.ಸ್ಯಾಂಡಲ್ ವುಡ್ ನ ಆ್ಯಕ್ಟರ್ ಕಂ ಆ್ಯಕ್ಷನ್ ಕಂಪೋಸರ್ ಥ್ರಿಲ್ಲರ್ ಮಂಜು ರಂಜನ್ ಪ್ರತಿಭೆನಾ ಗುರ್ತಿಸಿ ಹೊಸ ಹುರುಪು ತುಂಬುವ ಕೆಲಸ ಮಾಡಿದ್ದಾರೆ.

    ರಂಜನ್ ಛತ್ರಪತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಸಿನಿಮಾ ಕುಟುಂಬದ ಹಿನ್ನಲೆಯೇನು ಇಲ್ಲ. ಆದರೆ, ಕಲಾವಿದನೆನಿಸಿಕೊಳ್ಳಬೇಕು ಎನ್ನುವ ಹುಚ್ಚು ಮಾತ್ರ ಮೊದಲಿನಿಂದಲೂ ಇತ್ತು. ಹಲವು ವರ್ಷಗಳ ಹಿಂದೆ ಗಾಂಧಿನಗರಕ್ಕೆ ಬಂದು ಅಲೆದಿದ್ದು ಉಂಟಂತೆ. ಆದರೆ, ಅವಕಾಶ ಅಷ್ಟು ಸುಲಭವಾಗಿ ದಕ್ಕದ ಅಸಲಿಯತ್ತು ಅರಿವಾಗಿ ಹುಟ್ಟೂರಿಗೆ ವಾಪಾಸ್ ಆದ್ರಂತೆ. ಜೀವನೋಪಾಯಕ್ಕಾಗಿ ಹೋಟೆಲ್ ಮಾಡಿಕೊಂಡು ಇರುವ ಹೊತ್ತಲ್ಲೇ ರಂಜನ್ ಛತ್ರಪತಿಗೆ ನಿರ್ದೇಶಕ ಸಂದೇಶ್ ಶೆಟ್ಟಿಯವರ ಪರಿಚಯವಾಗಿದೆ. ಅಲ್ಲಿಂದ ಶುರುವಾದ ಇವರಿಬ್ಬರ ಒಡನಾಟ ಈಗ ‘ ಇನಾಮ್ದಾರ್’ ಚಿತ್ರದವರೆಗೆ ಬಂದು ನಿಂತಿದೆ.

    ಸಂದೇಶ್ ಶೆಟ್ಟಿಯ (Sandesh Shetty) ನಿರ್ದೇಶನದ ಇನಾಮ್ದಾರ್ ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಇನಾಮ್ದಾರ್ ವಂಶದ ಮಗನ ಪಾತ್ರವನ್ನು ನಿಭಾಯಿಸಿದ್ದಾರೆ. ಯಾವುದೇ ಅಭಿನಯ ತರಬೇತಿಯನ್ನ ಪಡೆದಿಲ್ಲವಾದರೂ ಕೂಡ ನಿರ್ದೇಶಕರ ಅಣತಿಯನ್ನ ಚಾಚೂ ತಪ್ಪದೇ ಪಾಲಿಸಿ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ನಮ್ಮೊಟ್ಟಿಗೆ ಮಾತುಕತೆಗಿಳಿದ ನಾಯಕ ರಂಜನ್, ನಂಗೊಂದು ಇಂಟ್ರುಡಕ್ಷನ್ ಫೈಟ್ ಇದೆ. ಅದನ್ನು ಥ್ರಿಲ್ಲರ್ ಮಂಜು ಸರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಬಾಡಿ ಡಬಲ್ ಮಾಡಿಸದೇ, ಡ್ಯೂಪ್ ಹಾಕಿಸದೇ ನನ್ನಿಂದ ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ಮಾಡಿಸಿದ್ದಾರೆ. ಆ ಸಾಹಸ ಸನ್ನಿವೇಶ ಸಿನಿಮಾ ಪ್ರೇಮಿಗಳ ಮೈ ರೋಮಾಂಚನಗೊಳಿಸುತ್ತವೆ. ಖುಷಿಯ ವಿಚಾರ ಅಂದರೆ ನಾನು ಅಗ್ರೇಸೀವ್ ಆಗಿ ಫೈಟ್ ಮಾಡಿದ್ದನ್ನು ನೋಡಿ ಥ್ರಿಲ್ಲರ್ ಮಂಜು ಸರ್ ಹೊಗಳಿದರು. ಮಾಸ್ ಸಿನಿಮಾಗಳಿಗೆ ಪಕ್ಕಾ ಸ್ಯೂಟ್ ಆಗ್ತೀಯಾ ಟ್ರೈ ಮಾಡು ಅಂತೇಳಿದ್ದಾರೆ ಎಂದು ರಂಜನ್ ಹೇಳಿಕೊಳ್ತಾರೆ.

    ಇನ್ನೂ ಇಂಟ್ರುಡಕ್ಷನ್ ಫೈಟ್ಸ್ ಜೊತೆಗೆ ಮೂರು ಹಾಡುಗಳಲ್ಲಿ ರಂಜನ್ ಛತ್ರಪತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿಲ್ಕು ಮಿಲ್ಕು ಹಾಡಿನಲ್ಲಿ ಎಸ್ತರ್ ನರೋನ್ಹಾ ಜೊತೆಗೆ ಪಡ್ಡೆಹೈಕ್ಳ ಬೆವರಿಳಿಸಿದ್ದಾರೆ. ಚೆಂದಾನೇ ಚೆಂದಾನೇ ಹಾಡಿನ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಇನ್ನೊಂದು ಹಾಡು ಬೆಳ್ಳಿತೆರೆ ಮೇಲೆ ಮೂಡಲಿದೆ.

     

    ಇನ್ನೇನು ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಿಸೋಕೆ ತಯಾರಿ ನಡೆಸಿದೆ. ಗೆಳೆಯ ರಂಜನ್ ಛತ್ರಪತಿನಾ ಕೈ ಹಿಡಿದು ನಿರ್ದೇಶಕ ಸಂದೇಶ್ ಹೀರೋ ಚಾನ್ಸ್ ಕೊಟ್ಟಂತೆ, ಅರ್ಧಕ್ಕೆ ನಿಂತು ಹೋದ ಇನಾಮ್ದಾರ್ ಚಿತ್ರವನ್ನು ಟೇಕಾಫ್ ಮಾಡುವ ಮೂಲಕ ಸ್ನೇಹಿತ ಸಂದೇಶ್ ಶೆಟ್ಟಿನಾ ನಿರಂಜನ್ ಶೆಟ್ಟಿ ಕೈಹಿಡಿದಿದ್ದಾರೆ. ಸೋ, ದೋಸ್ತಿಗಳು ಜೊತೆಯಾಗಿ ತಯಾರಿಸಿರೋ ಇನಾಮ್ದಾರ್ ಕಥೆ ಗಟ್ಟಿತನದಿಂದ ಕೂಡಿದ್ದರೆ ಗಲ್ಲಾಪೆಟ್ಟಿಗೆ ಗ್ಯಾರಂಟಿ ಉಡೀಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹ-ಸಂಬಂಧಕ್ಕೆ ಸಾಕ್ಷಿಯಾದ ಇನಾಮ್ದಾರ್

    ಸ್ನೇಹ-ಸಂಬಂಧಕ್ಕೆ ಸಾಕ್ಷಿಯಾದ ಇನಾಮ್ದಾರ್

    ಸಿನಿ ದುನಿಯಾದಲ್ಲಿ ಸ್ನೇಹ- ಸಂಬಂಧಕ್ಕೆ ಸಾಕ್ಷಿಯಾಗಿ ಸಹಸ್ರಾರು ಸಿನಿಮಾಗಳು ನಿರ್ಮಾಣಗೊಂಡಿವೆ.  ಆ ಸಾಲಿಗೆ ಸಂದೇಶ್ ಶೆಟ್ಟಿ ಆಜ್ರಿ  (Sandesh Shetty Ajri) ನಿರ್ದೇಶನದ, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ‘ಇನಾಮ್ದಾರ್’ (Inamdar) ಚಿತ್ರ ಹೊಸದಾಗಿ ಸೇರ್ಪಡೆಗೊಳ್ಳಲು ರೆಡಿಯಾಗಿದೆ. ಇದೇ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಚಿತ್ರ  ತೆರೆಗಪ್ಪಳಿಸಲು ಸಜ್ಜಾಗಿದ್ದು ಚಿತ್ರದ ನಿರ್ಮಾಪಕರಾದ ನಿರಂಜನ್ ಶೆಟ್ಟಿ ತಲ್ಲೂರು ತಮ್ಮ ನಿರೀಕ್ಷೆಯನ್ನು ಹೊರಹಾಕಿದ್ದಾರೆ. ಇನಾಮ್ದಾರ್ ಗಾಗಿ ಖಜಾನೆ ತೆರೆದಿಟ್ಟಿದ್ದರ ಹಿಂದಿನ ಸ್ನೇಹದ ಕಥೆಯನ್ನು ಹಾಗೂ ಶ್ರಮದ ವ್ಯಥೆಯನ್ನು ಜಗಜ್ಜಾಹೀರು ಮಾಡಿದ್ದಾರೆ.

    ನಿರಂಜನ್ ಶೆಟ್ಟಿ ಕರಾವಳಿ ಭಾಗದವರು. ಮೂಲತಃ ಉದ್ಯಮಿಯಾಗಿರುವ ಇವರಿಗೆ ಸಿನಿಮಾರಂಗದ ನಂಟಿರಲಿಲ್ಲ. ಆದರೆ, ಸ್ನೇಹಕ್ಕೋಸ್ಕರ ಸಿನಿಮಾಲೋಕ ಪ್ರವೇಶಿಸಿದರು. ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾಗೆ ಬಂಡವಾಳ ಸುರಿಯುವ ಮೂಲಕ ಕುಸಿದುಬಿದ್ದಿದ್ದ ಗೆಳೆಯ ಕಂ ನಿರ್ದೇಶಕ ಸಂದೇಶ್ ಶೆಟ್ಟಿನಾ ಕೈ ಹಿಡಿದರು. ಇವತ್ತು ಇನಾಮ್ದಾರ್ ಸಿನಿಮಾ ರಿಲೀಸ್ ಹಂತ ತಲುಪಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಗುಣಮಟ್ಟ ಕಾಯ್ದಿರಿಸಿಕೊಂಡಿದೆ ಅಂದರೆ ಅದಕ್ಕೆ ಮೊದಲ ಕಾರಣ ನಿರ್ದೇಶಕರಾದರೆ, ಮೂಲ ಕಾರಣ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರ್ ಅವರು.

    ಇವರಿಗೆ ಸಿನಿಮಾದ ಮೇಲೆ ಅಪಾರವಾದ ಆಸಕ್ತಿ. ಅದರಲ್ಲೂ ತಾವು ಬಂಡವಾಳ ಸುರಿದು ತಯಾರಿಸಿರುವ ಇನಾಮ್ದಾರ್ ಮೇಲಂತೂ ಬೆಟ್ಟದ್ದಷ್ಟು ನಿರೀಕ್ಷೆಯಿದೆ.  ನಮ್ಮ ಸಿನಿಮಾ ನಮಗೆ ಹೇಗಿದ್ದರೂ ಚೆಂದಾನೆ ಎನ್ನುವ ನಿರಂಜನ್, ಫೈನಲೀ ಪ್ರೇಕ್ಷಕರು ಒಪ್ಪಿಕೊಳ್ಳಬೇಕು. ಅವರು ಇನಾಮ್ದಾರ್ ನ ಅಕ್ಸೆಪ್ಟ್ ಮಾಡೇ ಮಾಡ್ತಾರೆ, ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತೆನ್ನುವ ಆತ್ಮವಿಶ್ವಾಸ ಹೊರಹಾಕಿದ್ದಾರೆ.

    ಅಂದ್ಹಾಗೇ, ಇನಾಮ್ದಾರ್ ಚಿತ್ರ ಶೀರ್ಷಿಕೆಯಿಂದಲೇ ಸುದ್ದಿಮನೆ ಬಾಗಿಲು ಬಡಿದಿತ್ತು. ಟೀಸರ್, ಹಾಡುಗಳ ಮೂಲಕಪ್ರೇಕ್ಷಕ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿತ್ತು. ಇತ್ತೀಚೆಗೆ ಇದರ  ಟ್ರೇಲರ್ ಹೊರಬಿದ್ದಿದ್ದು ಮತ್ತಷ್ಟು ನಿರೀಕ್ಷೆ ಹೆಚ್ಚಿದೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜನನ್ನು ಆರಾಧಿಸುವ ವಂಶ ಹಾಗೂ ಕರಾವಳಿಯಲ್ಲಿ ಪರಶಿವನನ್ನು ಆರಾಧಿಸುವ ಕಾಡು ಜನಾಂಗವನ್ನು ಮುಖ್ಯ ಭೂಮಿಕೆಗೆ ತಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ವರ್ಣ ಸಂಘರ್ಷದ ಕಥೆ ಎಣೆದಿದ್ದಾರೆ.

    ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ (Pramod Shetty), ಎಂಕೆ ಮಠ ಅವ್ರಂತ ಹಿರಿಕರ ಜೊತೆಗೆ ಚಿತ್ರಕಲಾ ರಾಜೇಶ್,ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ,  ಹಾಲಂಬಿಯಂತಹ ಪ್ರತಿಭೆಗಳು ಇದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

     

    ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗೆ ಶಕ್ತಿತುಂಬಿದೆ.  ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ. ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿಭೂಮಿಗೆ ತರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಇನಾಮ್ದಾರ್’ಗೆ ಪ್ಯಾನ್ ಇಂಡಿಯಾ ಬೇಡಿಕೆ: ಡೈರೆಕ್ಟರ್ ಸಂದೇಶ್ ಗೆ ಸಿಗ್ತು ನಾನಾ ಪಾಟೇಕರ್ ಕಾಲ್ ಶೀಟ್

    `ಇನಾಮ್ದಾರ್’ಗೆ ಪ್ಯಾನ್ ಇಂಡಿಯಾ ಬೇಡಿಕೆ: ಡೈರೆಕ್ಟರ್ ಸಂದೇಶ್ ಗೆ ಸಿಗ್ತು ನಾನಾ ಪಾಟೇಕರ್ ಕಾಲ್ ಶೀಟ್

    ಪಂಚಭಾಷೆಯಲ್ಲಿ ತಯ್ಯಾರಾಗುತ್ತಾ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಮಧ್ಯೆ ಕನ್ನಡದಲ್ಲಿ ನಿರ್ಮಾಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿರುವ `ಇನಾಮ್ದಾರ್’ (Inamdar) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಳ್ತಿದೆ. ಹೌದು, ಟ್ರೇಲರ್ ನೋಡಿ ಇಂಪ್ರೆಸ್ ಆಗಿರುವ ಪರಭಾಷಾ ಸಿನಿಮಾ ಮಂದಿ `ಇನಾಮ್ದಾರ್’ ಚಿತ್ರದ ಹಕ್ಕುಗಳನ್ನು ತಮ್ಮ ಸ್ವಾದೀನಕ್ಕೆ ಪಡೆಯಲು ಮುಂದೆ ಬರುತ್ತಿದ್ದಾರಂತೆ. ಈ ಕುರಿತು ಸಂತೋಷ ಹಂಚಿಕೊಂಡ ಚಿತ್ರದ ನಿರ್ದೇಶಕರಾದ ಸಂದೇಶ್ ಶೆಟ್ಟಿ (Sandesh Shetty) ಆಜ್ರಿಯವರು `ಇನಾಮ್ದಾರ್’ ಸೃಷ್ಟಿಸಲಿರುವ ಸಂಚಲನ ಹಾಗೂ ತಲ್ಲಣದ ಬಗ್ಗೆ ಮಾತಿಗಿಳಿದರು. ಹೆಸರಾಂತ ಹಿರಿಯ ನಟ ನಾನಾ ಪಾಟೇಕರ್ ಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರುವ ಕುರಿತು ಮಾಹಿತಿ ಹೊರಹಾಕಿದರು. ಪಂಕಜ್ ತ್ರಿಪಾಠಿ ಹಾಗೂ ನಾನಾ ಪಾಟೇಕರ್ (Nana Patekar) ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡಲಿದ್ದು, ಬಾಲಿವುಡ್ ನಿರ್ಮಾಪಕರು ಬಂಡವಾಳ ಹೂಡಲು ಮುಂದೆ ಬಂದಿರುವುದಾಗಿ ಹೇಳಿಕೊಂಡರು.

    ಸಂದೇಶ್ ಶೆಟ್ಟಿ ಆಜ್ರಿ ಕರಾವಳಿ ಭಾಗದ ನಿರ್ದೇಶಕರು. ಕಳೆದ ಮೂರು ವರ್ಷಗಳ ಹಿಂದೆ `ಕತ್ತಲೆ ಕೋಣೆ’ ಎಂಬ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಈಗ ಭಿನ್ನ ಕಥಾಹಂದರವುಳ್ಳ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಟೀಸರ್ ನಲ್ಲಿ ದಟ್ಟಕಾನನ ಹಾಗೂ ಬುಡಕಟ್ಟು ಜನಾಂಗದ ದರ್ಶನ ಮಾಡಿಸಿ ಸಿನಿಮಾಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದ್ದರು. ಕೌತುಕದ ಜೊತೆಗೆ ಕಿಕ್ ಇರಲೆಂದು `ಸಿಲ್ಕು ಮಿಲ್ಕು’ ಸುಂದರಿನಾ ಕಣಕ್ಕಿಳಿಸಿದ್ದರು. ಆಕೆ ಅಖಾಡವನ್ನ ಕಬ್ಜ ಮಾಡಿಕೊಂಡ ಬೆನ್ನಲ್ಲೇ ಈಗ ಟ್ರೈಲರ್ ಹೊರಬಿದ್ದಿದೆ. ಮಾಸ್, ಕ್ಲಾಸ್ ಎನ್ನದೇ ಎಲ್ಲಾ ವರ್ಗದ ಸಿನಿಮಾ ಪ್ರೇಮಿಗಳನ್ನ ತನ್ನತ್ತ ಸೆಳೆಯುತ್ತಿದೆ. ಅಚ್ಚರಿಯೆಂಬಂತೆ `ಇನಾಮ್ದಾರ್’ಗೆ ಪರಭಾಷೆಯಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಡಬ್ಬಿಂಗ್ ರೈಟ್ಸ್ ಕೊಳ್ಳಲು ಹಲವರು ಮುಂದೆ ಬಂದಿದ್ದು `ಇನಾಮ್ದಾರ್’ ತಂಡಕ್ಕೆ ಹೊಸ ಹುರುಪು ತುಂಬಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗೂ ಸಿನಿಮಾನ ಡಬ್ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ನಿರ್ದೇಶಕರಿಗಿದೆ.

    ಇನ್ನೂ `ಇನಾಮ್ದಾರ್’ ಚಿತ್ರಕ್ಕಾಗಿ ನಿರ್ದೇಶಕ ಸಂದೇಶ್ ಶೆಟ್ಟಿ ಎರಡು ವರ್ಷ ಶ್ರಮಪಟ್ಟಿದ್ದಾರೆ. ಛತ್ರಪತಿ ಶಿವಾಜಿ ಮಹರಾಜ್ ರಿಂದ ಇನಾಮ್ ಪಡೆದಂತಹ ವಂಶಸ್ಥರನ್ನು ಸಂಪರ್ಕ ಮಾಡಿ ಮಾಹಿತಿ ಕಲೆಹಾಕಿರುವ ನಿರ್ದೇಶಕರು, ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನು ಆಧಾರಗ್ರಂಥವನ್ನಾಗಿಸಿಕೊಂಡು `ಇನಾಮ್ದಾರ್’ ಚಿತ್ರ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಕರಾವಳಿಯಲ್ಲಿ ಸಾಕ್ಷಾತ್ ಶಿವನನ್ನು ಪೂಜಿಸುವ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ಕೆಳಜಾತಿಯವರ ಮೇಲೆ ಮೇಲ್ವರ್ಗದ ದಬ್ಬಾಳಿಕೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಸಮಾನತೆ-ಸೌಹಾರ್ದತೆ ಬರೀ ಬಾಯಿಮಾತಿಗಷ್ಟೇ ಸೀಮಿತವಾಗಿರಬಾರದು, ಅದು ಜಾರಿಯಾಗ್ಬೇಕು ಎನ್ನುವ ನಿಟ್ಟಿನಲ್ಲಿಯೇ ಶೆಟ್ರು ಅಖಾಡಕ್ಕಿಳಿದಿದ್ದಾರೆ. ತನ್ನ ಕನಸಿನ `ಇನಾಮ್ದಾರ್’ ಮೂಲಕ ಕರಾಳತೆಯನ್ನು ಬಟಾಬಯಲು ಮಾಡಿ ಜನರನ್ನೂ ಜಾಗೃತಗೊಳಿಸ್ತೇನೆ ಎಂತಲೂ ತಿಳಿಸಿದ್ದಾರೆ.

    ಇಂತಹದ್ದೊಂದು ಸಾಹಸಕ್ಕೆ ಕೈಹಾಕಿರುವ ಸಂದೇಶ್ ಶೆಟ್ಟಿ, ಸ್ಯಾಂಡಲ್ವುಡ್ನ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ, ಚಿತ್ರಕಲಾ ರಾಜೇಶ್ ಸೇರಿದಂತೆ ಹಲವರನ್ನ ಒಟ್ಟುಗೂಡಿಸಿದ್ದಾರೆ. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕರಡಿ ಕಾಮ ಮತ್ತು ಕಮರಕಾಳ ಈ ಎರಡು ಪಾತ್ರಗಳನ್ನೂ ಪೋಷಣೆ ಮಾಡಿದ್ದಾರೆ. ಸಿನಿದುನಿಯಾದಲ್ಲಿ ತಮ್ಮದೊಂದು ಛಾಪು ಮೂಡಿಸಲೇಬೇಕು ಅಂತ ಪಣತೊಟ್ಟಿರುವ ಸಂದೇಶ್ ಗೆ ನೆಗೆಟೀವ್ ಶೇಡ್ ಪಾತ್ರಗಳಲ್ಲಿ ಗುರ್ತಿಸಿಕೊಳ್ಳಬೇಕು ಎನ್ನುವ ಹೆಬ್ಬಯಕೆ. ಅದನ್ನು ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಈಡೇರಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮೂರ್ನಾಲ್ಕು ಗಂಟೆಗಳ ಕಾಲ ಮೇಕಪ್ ಹಾಕಿಸಿಕೊಂಡು ನಟಿಸುವುದರ ಜೊತೆಗೆ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಳೆಬೇರು-ಹೊಸ ಚಿಗುರು ಎನ್ನುವಂತೆ ಸೀನಿಯರ್ಸ್ ಜೊತೆಗೆ ಜೂನಿಯರ್ಸ್ ಗಳು ಇದ್ದಾರೆ. ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ, ಸಂಜು ಬಸಯ್ಯ ಜೊತೆಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಸಾಂಗ್ ಮೂಲಕ ಎಸ್ತರ್ ಎಕ್ಕಾಮಕ್ಕಾ ಕಿಕ್ ಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಹೆಣ್ಣುಮಗಳ ಪಾತ್ರದಲ್ಲಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ರಂಜನ್ ಛತ್ರಪತಿ ನಾಯಕನಟನಾಗಿ ಧಗಧಗಿಸಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ `ಇನಾಮ್ದಾರ್’ ಶೂಟಿಂಗ್ ನಡೆದಿದೆ. ಚಿತ್ರದಲ್ಲಿ ಒಟ್ಟು 6 ಫೈಟ್ ಸೀಕ್ವೆನ್ಸ್ ಗಳಿದ್ದು ಥ್ರಿಲ್ಲರ್ ಮಂಜು ಅವರು 5 ಆ್ಯಕ್ಷನ್ ಸೀಕ್ವೆನ್ಸ್ ನ ಕಂಪೋಸ್ ಮಾಡಿಕೊಟ್ಟಿದ್ದಾರೆ. ನಿರ್ದೇಶನ, ನಟನೆ ಜೊತೆಗೆ ಟೈಗರ್ ಫೈಟ್ ಸೀಕ್ವೆನ್ಸ್ ಸಂಯೋಜನೆ ಮಾಡಿದ್ದಾರಂತೆ ಡೈರೆಕ್ಟರ್ ಸಂದೇಶ್ ಶೆಟ್ಟಿ. ಈಗಾಗಲೇ ಟ್ರೇಲರ್ ನಲ್ಲಿ ಟೈಗರ್ ಫೈಟ್ ಸೀಕ್ವೆನ್ಸ್ ಝಲಕ್ ಹೊರಬಿದ್ದಿದೆ. ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗೆ ಶಕ್ತಿತುಂಬಿದೆ. ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದು, ಶಿವರಾಜ್ ಮೇಹು ಸಂಕಲನ ತೋರಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು `ಇನಾಮ್ದಾರ್’ಗೆ ಬಂಡವಾಳ ಹೂಡಿದ್ದು, ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದು, ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದೆ. ಇದೇ ಅಕ್ಟೋಬರ್ 27ರಂದು ಚಿತ್ರ ತೆರೆಗಪ್ಪಳಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನಾಮ್ದಾರ್ ‘ಚೆಂದಾನೆ ಚೆಂದ’ ಗೀತೆಗೆ ಮನಸೋತರು ಸಿನಿಮಾ ಪ್ರೇಮಿಗಳು

    ಇನಾಮ್ದಾರ್ ‘ಚೆಂದಾನೆ ಚೆಂದ’ ಗೀತೆಗೆ ಮನಸೋತರು ಸಿನಿಮಾ ಪ್ರೇಮಿಗಳು

    ಚಂದನವನದಲ್ಲಿ ಇನಾಮ್ದಾರ್ (Inamdar) ಹವಾ ಹೇಗಿದೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾ, ಸಿನಿದುನಿಯಾದಲ್ಲಿ ಸದ್ದು ಮಾಡುತ್ತಿರುವ ಸಂದೇಶ್ ಶೆಟ್ಟಿ ಆಜ್ರಿ  (Sandesh Shetty Aj) ನಿರ್ದೇಶನದ ಇನಾಮ್ದಾರ್ ಚಿತ್ರವೀಗ ‘ ಚೆಂದಾನೇ ಚೆಂದ’ ಹಾಡಿನ (Song) ಮೂಲಕ ಚಿತ್ರಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ವಿಶೇಷ ಅಂದರೆ ವೀರ ಬಾಲು (Veera Balu) ( ರಂಜನ್ ಛತ್ರಪತಿ)  ಹಾಗೂ ಭುವಿ (ಚಿರಶ್ರೀ ಅಂಚನ್) ಜೋಡಿ ಕಾಂತಾರ ಚಿತ್ರದ ಶಿವಲೀಲಾರನ್ನ ನೆನಪಿಸುವಂತಿದೆ.

    ಇಂಟ್ರೆಸ್ಟಿಂಗ್ ಅಂದರೆ  ‘ಸಿಂಗಾರ ಸಿರಿಯೇ’ ಸಾಂಗ್ ರಚಿಸಿ ಶಿವಲೀಲಾ ಜೋಡಿನಾ ಒಂದು ಮಾಡಿದ್ದ ಖ್ಯಾತ ಲಿರಿಸಿಸ್ಟ್ ಪ್ರಮೋದ್ ಮರವಂತೆ, ರಂಜನ್ ಹಾಗೂ ಚಿರಶ್ರೀ ಜೋಡಿಗೆ ‘ ಚೆಂದಾನೇ ಚೆಂದ’ ಹಾಡು ಕಟ್ಟಿದ್ದಾರೆ. ‘ ಜೀವಕ್ಕೆ ಜೀವ ಒಂದಾದ ಭಾವ…ಪ್ರೀತಿಯ ನೀಡೋ ಜೀವಾನೇ ದೈವ’ ಎಂದು ಸಾಗುವ ಈ ಸೊಗಸಾದ ಗೀತೆಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ.

    ರಮ್ಯಾ ಭಟ್ ಜೊತೆ ಸೇರಿ ಕಂಠ ಕುಣಿಸಿ ಕಲಾರಸಿಕರ ಹೃದಯ ತಟ್ಟುವಂತೆ ಮಾಡಿದ್ದಾರೆ. ನಿನ್ನೆಯಷ್ಟೇ ಕುಂದಾನಗರಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಈ ಸುಮಧುರ ಸಾಂಗ್, ಬೆಳಗಾವಿಯ ಕುಂದಾದಷ್ಟೇ ರುಚಿ ಎನಿಸಿದೆ. ಕಿವಿಗೆ ಅಷ್ಟೇ ಹಿತವಾಗಿ, ಕಣ್ಣಿಗೆ ಹಬ್ಬದಷ್ಟೇ ಮುದ ನೀಡಿದೆ.

    ಇನ್ನೂ ‘ಚೆಂದಾನೇ ಚೆಂದ’ ಗೀತೆ ಇಷ್ಟೊಂದು ಅಂದವಾಗಿ ಕಾಣುವುದಕ್ಕೆ ಎನ್ ಮುರುಳೀಧರ್ ಕ್ಯಾಮರಾ ಕೈಚಳಕವೂ ಕೂಡ ಕಾರಣವಾಗಿದೆ.ಗೀತಾ ಸಾಯಿ ನೃತ್ಯ ಸಂಯೋಜನೆ ಈ ಹಾಡಿಗಿದ್ದು ನ್ಯಾಚುರಲ್ ಆಗಿ ಮೂಡಿಬಂದಿದೆ. ಈ ಹಿಂದೆ ‘ ಸಿಲ್ಕು ಮಿಲ್ಕು’ ಹಾಡಿನ ಮೂಲಕ ಪಡ್ಡೆಹೈಕ್ಳ ಮೈ ಚಳಿ ಬಿಡಿಸಿದ್ದ ಇನಾಮ್ದಾರ್ ಚಿತ್ರ ಇದೀಗ ‘ ಚೆಂದಾನೇ ಚೆಂದ’ ಸಾಂಗ್ ಮೂಲಕ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಚಿತ್ರದಲ್ಲಿ ನಟಿ ಚಿರಶ್ರೀ ಅಂಚನ್ ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹೆಣ್ಣುಮಗಳಾಗಿ ಮಿಂಚಿದರೆ, ಉತ್ತರ ಕರ್ನಾಟಕದ ಪ್ರತಿಭೆ ರಂಜನ್ ಛತ್ರಪತಿ ‘ ಇನಾಮ್ದಾರ್’ ಕುಟುಂಬದ ಮಗನ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅವಿನಾಶ್, ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಎಂ.ಕೆ. ಮಠ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಆಜ್ರಿ, ಪ್ರಶಾಂತ್ ಸಿದ್ದಿ, ಎಸ್ತರ್ ನರೋನ್ಹಾ ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    ಕಪ್ಪು ಸುಂದರಿಯ ಸುತ್ತ ಎನ್ನುವ ಟ್ಯಾಗ್ ಲೈನ್ ಹೊತ್ತು ಬರುತ್ತಿರುವ ‘ ಇನಾಮ್ದಾರ್’ ಚಿತ್ರ,  ಶಿವಾಜಿ ಆರಾಧಕರು ಮತ್ತು ಶಿವನ ಆರಾಧಕರ ನಡುವೆ ಹೊತ್ತಿಕೊಳ್ಳುವ ವರ್ಣ ಸಂಘರ್ಷದ ಕಥನವನ್ನೊಳಗೊಂಡಿದೆ. ಈಗಾಗಲೇ ಹೊರಬಿದ್ದಿರುವ ಟೀಸರ್, ಟ್ರೇಲರ್, ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ನಿರಂಜನ್ ಶೆಟ್ಟಿ ತಲ್ಲೂರ್ ಬಂಡವಾಳದಲ್ಲಿ  ತಸ್ಮೈ ಪ್ರೊಡಕ್ಷನ್ ಅಂಡ್ ಶ್ರೀ ಕುಂತಿಯಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಇದೇ ಅಕ್ಟೋಬರ್ 27 ರಂದು ಇನಾಮ್ದಾರ್ ಚಿತ್ರ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ನಾಮ್ದಾರ್ ಈ ಹೆಸರು ಕಿವಿಗೆ ಬಿದ್ದಾಕ್ಷಣ ಛತ್ರಪತಿ ಶಿವಾಜಿ ಮಹರಾಜ್ ನೆನಪಾಗೋದು ಸಹಜ. ಯಾಕಂದ್ರೆ, `ಇನಾಮ್ದಾರ್’ ಪದ್ದತಿಯನ್ನ ಭೂಮಿ ಮೇಲೆ ಅನುಷ್ಕಾನಕ್ಕೆ ತಂದಿದ್ದೇ ಅವರು. ಹೀಗ್ಯಾಕೆ, ನಾವು `ಇನಾಮ್ದಾರ್’ ಪದ್ದತಿ ಕುರಿತಾಗಿ ಮಾತನಾಡ್ತಿದ್ದೇವೆ ಅಂದರೆ ಅದೇ ಹೆಸರಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಬರುತ್ತಿದೆ. ಕರಾವಳಿ ಮೂಲದ ನಿರ್ದೇಶಕ ಸಂದೇಶ್ ಶೆಟ್ಟಿ ಆ ಚಿತ್ರವನ್ನು ನಿರ್ದೇಶನ ಮಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್ ಮೂಲಕ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ `ಇನಾಮ್ದಾರ್’ ಚಿತ್ರ ಈಗ ಟ್ರೈಲರ್  ನಿಂದ ರಾಜಕೀಯ ಪಡಸಾಲೆಯಲ್ಲೂ ಚರ್ಚೆಗೊಳಪಟ್ಟಿದೆ. ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎಂದು ಕೂಗಿ ಕೂಗಿ ಹೇಳ್ತಿರುವ `ಇನಾಮ್ದಾರ್’ ಮೇಲೆ ಕನ್ನಡಪರ ಹೋರಾಟಗಾರರು ಹಾಗೂ ಸಂಘಟನೆಗಳು ಮುಗಿಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

    ಮರಾಠ ಸಾಮ್ರಾಜ್ಯದ ಚಕ್ರವರ್ತಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡಿಗನಾ? ಈ ಪ್ರಶ್ನೆ ಇಂದು ನಿನ್ನೆ ಚರ್ಚೆಗೊಳಪಟ್ಟಿರುವುದಿಲ್ಲ. ತಲೆತಲಾಂತರದಿಂದ ಬುಗಿಲೆದ್ದಿರುವ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ವಾದ-ವಿವಾದಗಳಂತೂ ನಡೆಯುತ್ತಲೇ ಇದೆ. ಶಿವಾಜಿ ಮಹರಾಜ್ ಮೂಲತಃ ಕನ್ನಡಿಗರೇ ಎನ್ನುವವರು ಇದ್ದಾರೆ. ಶಿವಾಜಿ ಕನ್ನಡಿಗನಲ್ಲ ಅಂತ ಕೆಂಡಕಾರುವವರು ಇದ್ದಾರೆ. ಹೀಗಿರುವಾಗ ನಿರ್ದೇಶಕ ಸಂದೇಶ್ ಶೆಟ್ಟಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎನ್ನುತ್ತಾ ಅಖಾಡಕ್ಕಿಳಿದಿದ್ದಾರೆ. ಔರಂಗಜೇಬನ ಫ್ಲೆಕ್ಸ್ ಹಾಕೋಕೆ ಅವಕಾಶ ಕೊಡ್ತಾರೆ. ಅದೇ ಶಿವಾಜಿ ಪುತ್ಥಳಿ ಅನಾವರಣ ಮಾಡ್ತೀವಿ ಎಂದರೆ ರೊಚ್ಚಿಗೇಳ್ತಾರೆ. ಇದ್ಯಾವ ನ್ಯಾಯ ಎನ್ನುತ್ತಾ ಕಣ್ಣಲ್ಲೇ ಕೆಂಡ ಉಗುಳುತ್ತಿರುವ ಡೈರೆಕ್ಟರ್ ಸಂದೇಶ್, ಶಿವಾಜಿ ಮಹರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬದ ಮೇಲೆ ಸಿನಿಮಾ ಮಾಡಿ ಮುಗಿಸಿದ್ದಾರೆ. 2 ನಿಮಿಷ 34 ಸೆಕೆಂಡಿನ ಟ್ರೈಲರ್ ಮೂಲಕವೇ ಕಿಚ್ಚು ಹಚ್ಚಿ ವಾದ-ವಿವಾದಕ್ಕೆ ನಾಂದಿಹಾಡಿದ್ದಾರೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್‌ನಲ್ಲಿ ‘ಗೀತಾ’ ಸೀರಿಯಲ್ ನಟಿ

    `ಇನಾಮ್ದಾರ್’ ಚಿತ್ರ ಕೈಗೆತ್ತಿಕೊಳ್ಳುವ ಮೊದಲು ನಿರ್ದೇಶಕ ಸಂದೇಶ್ ಶೆಟ್ಟಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನೂ ಆಧಾರವಾಗಿಟ್ಟುಕೊಂಡು ಕಥೆ ಸಿದ್ದಪಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ ಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಶಾಂತಿಧೂತರು, ಸಮಾನತೆ-ಸೌಹಾರ್ದತೆಯಿಂದ ಬಾಳಬೇಕು ಅನ್ನೋದು ಬರೀ ಬಾಯಿ ಮಾತಿಗೆ ಸೀಮಿತವಾಗಿದೆ. ಜಾತಿ, ಧರ್ಮದಿಂದ ಲಿಂಗ ತಾರತಮ್ಯದಿಂದ ಕಚ್ಚಾಡಿಕೊಳ್ಳುವುದು ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವ ನಿಟ್ಟಿನಲ್ಲಿ, ಸಮಾಜಕ್ಕೆ ಒಂದು ಸಂದೇಶ ಕೊಡುವ ಹಾದಿಯಲ್ಲಿ ಸಂದೇಶ್ ಶೆಟ್ಟಿ ಆಜ್ರಿಯವರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಸಿನಿಮಾ ಮಾಡಿದ್ದಾರೆ. `ಇನಾಮ್ದಾರ್’ ಮೂಲಕ ಬದಲಾವಣೆ ತರಲು ಹೊರಟು ನಿಂತಿದ್ದಾರೆ.

    ಈ ಸಿನಿಮಾದಿಂದ ಬೆಳಗಾವಿ ಮೂಲದ ರಂಜನ್ ಛತ್ರಪತಿ ಅನ್ನೋರು ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ಸಂದೇಶ್ ಶೆಟ್ಟಿ ಆಜ್ರಿಯವರು ಪ್ರಮುಖ ಪಾತ್ರ ಪೋಷಣೆ ಮಾಡಿದ್ದಾರೆ. ಹಿರಿಯ ನಟರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಾಂತಾರ ಖ್ಯಾತಿಯ ಬೈಂದೂರು, ಪ್ರಶಾಂತ್ ಸಿದ್ದಿ, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಈ ಚಿತ್ರದಲ್ಲಾಗಿದೆ. ಕುಡ್ಲದ ಬೆಡಗಿ ಚಿರಶ್ರೀ ಅಂಚನ್ ಹಾಗೂ ಬಹುಭಾಷೆಯಲ್ಲಿ ಗುರ್ತಿಸಿಕೊಂಡಿರುವ ಎಸ್ತರ್ ನರೋನ್ಹಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಹಾಡಿನ ಮೂಲಕ ಬಂಟ್ವಾಳದ ಬ್ಯೂಟಿ ನಟಿ ಎಸ್ತರ್ ನರೋನಾ, ಪಡ್ಡೆಹುಡುಗರ ಮೈ ಬೆವರುವಂತೆ ಮಾಡಿದ್ದಾರೆ. ಉತ್ತರ ಕರ್ನಾಟಕದ ದಾಟಿಯಲ್ಲಿ, ರಾಕಿ ಸೋನು ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ `ಸಿಲ್ಕು ಮಿಲ್ಕು’ ಸಾಂಗ್ ಯೂಟ್ಯೂಬ್‍ನಲ್ಲಿ ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದಿದೆ. ಗೀತಾ ಸಾಯಿ ಅವರ ನೃತ್ಯ ನಿರ್ದೇಶನ ಈ ಸಿನಿಮಾಕ್ಕಿದೆ.

    ಇನ್ನೂ ಬೆಳಗಾವಿ, ಕುಂದಾಪುರ ಸೇರಿದಂತೆ ಹಲವೆಡೆ `ಇನಾಮ್ದಾರ್’ ಚಿತ್ರೀಕರಣ ನಡೆದಿದೆ. ಮುರುಳಿ ಛಾಯಾಗ್ರಹಣದಲ್ಲಿ, ಶಿವರಾಜ್ ಮೇಹು ಸಂಕಲನದಲ್ಲಿ ಸಿನಿಮಾ ತಯಾರಾಗಿದೆ. ಕತ್ತಲೆ ಕೋಣೆ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, 3 ವರ್ಷಗಳ ಗ್ಯಾಪ್ ಬಳಿ ಈ ಬಾರಿ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ.   ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ `ಇನಾಮ್ದಾರ್’ ಅದ್ದೂರಿಯಾಗಿಯೇ ಮೂಡಿಬಂದಿದೆ. ಅಕ್ಟೋಬರ್ 27ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲ್ಕು ಮಿಲ್ಕು ಹಾಡಿಗೆ ಕುಣಿದ ಏಸ್ತಾರ್ ನೆರೋನಾ

    ಸಿಲ್ಕು ಮಿಲ್ಕು ಹಾಡಿಗೆ ಕುಣಿದ ಏಸ್ತಾರ್ ನೆರೋನಾ

    ಹು ನಿರೀಕ್ಷೆಯ ಇನಾಮ್ದಾರ್ ಸಿನಿಮಾ, ಟೀಸರ್  ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಇದೀಗ ಕೊಪ್ಪದಲ್ಲಿ ತನ್ನ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು  ಬಂಡವಾಳ ಹೂಡಿದ್ದಾರೆ.

    ಕೊಪ್ಪದಲ್ಲಿ ಸಿಲ್ಕು ಮಿಲ್ಕು ಹಾಡನ್ನು ಬಿಡುಗಡೆ ಮಾಡುವ ಮೂಲಕ ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಕಲಾವಿದರ ದಂಡೆ ಇರುವ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ ಎಂದು ನಿರ್ದೇಶಕರು ಹೇಳುತ್ತಾರೆ. ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಕೊಪ್ಪದ ಮಕ್ಕಳ ಕೈಯಲ್ಲಿ ಸಿಲ್ಕು ಮಿಲ್ಕು ಸಾಂಗ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಕೊಪ್ಪದ ಜನತೆಯನ್ನು ಸ್ಮರಿಸಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಖಡಕ್ ಧ್ವನಿಯಲ್ಲಿ ಪ್ರಮೋದ್ ಶೆಟ್ಟಿಯ ಡೈಲಾಗ್ ಕೇಳಿ ಹುಚ್ಚೆದ್ದು ಕುಣಿದ ಕೊಪ್ಪದ ಜನತೆಗೆ ನಿರ್ದೇಶಕ ಸಂದೇಶ ಶೆಟ್ಟಿ ಪ್ರಮೋದ್ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್  ಘಟೋದ್ಗಜ ಎಂದು ಬಿರುದನ್ನು ನೀಡಿದ್ದಾರೆ, ಇದು ಕೊಪ್ಪದ ಜನತೆಯಲ್ಲಿ ಮತ್ತಿಷ್ಟು ಜೋಶ್ ತಂದು ಕೊಟ್ಟಿದೆ. ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಹಾಗೂ ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಉಳಿಯಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ಪ್ರಮೋದ್ ಶೆಟ್ಟಿ ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರಂಜನ್ ಶೆಟ್ಟಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ, ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ, ನಿಮಗೆಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತೆ ನಮ್ಮ ತಂಡವನ್ನ ಬೆಂಬಲಿಸಿ, ನೀವು ನಮಗೆ ಶಕ್ತಿಯಾಗಿ ಎಂದು ತಿಳಿಸಿದರು. ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಮಾತನಾಡಿ ಇದೊಂದು ಸೂಕ್ಷ್ಮವಾದ ಕಥಾಹಂದರ ಬಲು ಅಚ್ಚುಕಟ್ಟಾಗಿ ಈ ಸಿನಿಮಾವನ್ನ ತೆರೆಯ ಮೇಲೆ ತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ ಈ ಸಿನಿಮಾದಲ್ಲಿ ನಾನು ಮೂರು ಹಾಡುಗಳನ್ನ ಮಾಡಿದ್ದೇನೆ ನಿಮ್ಮೆಲ್ಲರ ಬೆಂಬಲ ಈ ಸಿನಿಮಾದ ಮೇಲೆ ಇರಲಿ ಎಂದು ಕೇಳಿಕೊಂಡರು.

    ನಾಯಕ ನಟ ರಂಜನ್  ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ  ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪದ ವೇದಿಕೆಯಲ್ಲಿ ಸಂತೋಷವನ್ನು ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k