Tag: ಇದ್ರೆ ನೆಮ್ದಿಯಾಗಿರ್ಬೇಕ್‌

  • ಇದ್ರೆ ನೆಮ್ಮದಿಯಾಗಿ ಇರ್ಬೇಕು ಎಂದ ವೈಷ್ಣವಿಗೌಡ – ದಪ್ಪ ಆಗಿದ್ದೀರಾ ಅಂದ್ರು ಫ್ಯಾನ್ಸ್

    ಇದ್ರೆ ನೆಮ್ಮದಿಯಾಗಿ ಇರ್ಬೇಕು ಎಂದ ವೈಷ್ಣವಿಗೌಡ – ದಪ್ಪ ಆಗಿದ್ದೀರಾ ಅಂದ್ರು ಫ್ಯಾನ್ಸ್

    ಬಿಗ್ ಬಾಸ್ ಖ್ಯಾತಿಯ ವೈಷ್ಣವಿಗೌಡ (Vaishnavi Gowda) ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಮದುವೆಯ ಬಳಿಕ ಪತಿ ಜೊತೆಗೆ ರೀಲ್ಸ್ ಮಾಡಿ ಆಗಾಗ ಹಂಚಿಕೊಳ್ತಿರ್ತಾರೆ. ಅವರ ವಿಡಿಯೋಗಳಿಗೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತವೆ. ಇದೀಗ ಡೆವಿಲ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದ್ರೆ ನೆಮ್ಮದಿಯಾಗ್ ಇರ್ಬೇಕು ಎಂದು ಮಸ್ತ್ ಸ್ಟೆಪ್ ಹಾಕಿದ್ದಾರೆ ವೈಷ್ಣವಿಗೌಡ.

     

    View this post on Instagram

     

    A post shared by Vaisshnavi (@iamvaishnavioffl)

    ವೈಷ್ಣವಿಗೌಡ ಡೆವಿಲ್ ಹಾಡಿನ ಹುಕ್ ಸ್ಟೆಪ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ಅಟ್ರ್ಯಾಕ್ಟ್ ಮಾಡ್ತಿದೆ. ಈ ವಿಡಿಯೋಗೆ ತಹರೇವಾರಿ ಕಮೆಂಟ್ಸ್ ಬರುತ್ತಿವೆ. ಬಹುತೇಕರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಕೆಲವರು ವೈಷ್ಣವಿ ಅವರ ಕಾಲೆಳೆದಿದ್ದಾರೆ. ಕೆಲವರು ವೈಷ್ಣವಿ ಅವರು ಮದುವೆ ಆದ್ಮೇಲೆ ದಪ್ಪ ಆಗಿದ್ದಾರೆ ಅಂತಾ ಕಮೆಂಟ್ಸ್ ಮಾಡಿದ್ದಾರೆ. ಇದನ್ನೂ ಓದಿ: ಕಲಾವಿದ ಅಂತ ಲೋನ್‌ ಸಿಗ್ಲಿಲ್ಲ, ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದ್ದೆ: ರಂಜಿತ್

    ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವೈಷ್ಣವಿಗೌಡ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಿರುತೆರೆ ಜಗತ್ತಿನಿಂದ ಅಂತರ ಕಾಯ್ದುಕೊಂಡು ಪತಿಯ ಜೊತೆಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಡೆವಿಲ್ ಚಿತ್ರದ ಟ್ರೆಂಡಿಂಗ್ ಸಾಂಗ್‌ಗೆ ಮೈ ಬಳುಕಿಸಿದ್ದಾರೆ.

  • ದರ್ಶನ್ ಜೈಲಲ್ಲಿ – `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್

    ದರ್ಶನ್ ಜೈಲಲ್ಲಿ – `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್

    ದರ್ಶನ್ ನಟನೆಯ ಡೆವಿಲ್ ಸಿನಿಮಾದ (The Devil) `ಇದ್ರೆ ನೆಮ್ದಿಯಾಗ್ ಇರ್ಬೇಕ್‌ʼ (Idre Nemdiyaag Irbek) ಹಾಡು ಇಂದು ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಹಲವಾರು ದಿನಗಳಿಂದ ಕುತೂಹಲದಿಂದ ಕಾಯ್ತಿದ್ದ ಈ ಹಾಡು ಕೊನೆಗೂ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ.

    ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ 15ರಂದು ಈ ಹಾಡು ಬಿಡುಗಡೆ ಆಗಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿದ ಕಾರಣದಿಂದಾಗಿ, ಆಗಸ್ಟ್ 14ರಂದು ದರ್ಶನ್ ಮತ್ತೆ ಜೈಲುಪಾಲಾದರು. ಇಂದು ಈ ಹಾಡನ್ನು ರಿಲೀಸ್‌ ಮಾಡಲಾಗಿದೆ. ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ (Darshan) ಜೊತೆ ಚರ್ಚಿಸಿ ಇಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಡೆವಿಲ್ ಹಾಡು ನೋಡಿ ದರ್ಶನ್ ಅಭಿಮಾನಿಗಳು ಒಂದು ಕಡೆ ಸಂಭ್ರಮ ಪಡುತ್ತಿದ್ದಾರೆ. ಮತ್ತೊಂದು ಕಡೆ ದಚ್ಚು ಜೈಲಿನಲ್ಲಿರುವ ಕಾರಣದಿಂದ ಫ್ಯಾನ್ಸ್ ಸಂಕಟ ಪಟುವಂತಾಗಿದೆ.

    ದರ್ಶನ್ ಜೈಲಿನಲ್ಲಿದ್ದಾಗಲೇ ಹಾಡನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ತೆರೆಗೆ ಬರಲು ಕೂಡಾ ಸೂಚನೆ ಸಿಕ್ಕಿದೆ. ಸಿನಿಮಾದ ಎಲ್ಲಾ ಕಾರ್ಯಗಳು ಮುಗಿದಿದ್ದು, ಸಿನಿಮಾ ತೆರೆಗೆ ಬರೋದು ಮಾತ್ರ ಬಾಕಿ ಇದೆ. ಹೀಗಾಗಿ ದರ್ಶನ್ ಜೊತೆ ಚರ್ಚಿಸಿ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಕೂಡಾ ನಿರ್ಧರಿಸಿದೆಯಂತೆ.

    ಡೆವಿಲ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ದರ್ಶನ್ ಮೈಸೂರಿನಲ್ಲಿ ಬಂಧನವಾಗಿದ್ದರು. ಆನಂತರ ನೂರಾರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಜಾಮೀನು ಸಿಕ್ಕು ಆಚೆ ಬಂದ ಮೇಲೆ ಡೆವಿಲ್ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು. ಈಗ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈಗ ಮತ್ತೆ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ ಇಲ್ಲದೇ ಸಿನಿಮಾ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.