Tag: ಇಥಿಯೋಪಿಯಾ

  • ಇಥಿಯೋಪಿಯಾ ವಿಮಾನ ಪತನ: ಆರು ಭಾರತೀಯರ ಸಾವು

    ಇಥಿಯೋಪಿಯಾ ವಿಮಾನ ಪತನ: ಆರು ಭಾರತೀಯರ ಸಾವು

    ನವದೆಹಲಿ: ಇಥಿಯೋಪಿಯನ್ ವಿಮಾನ ಪತನಗೊಂಡ ದುರಂತದಲ್ಲಿ ಭಾರತದ 6 ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಚಿತಪಡಿಸಿದ್ದಾರೆ. ಮೃತರಲ್ಲಿ ವಿಶ್ವಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ) ಸಲಹೆಗಾರ್ತಿ ಶಿಖಾ ಗರ್ಗ್ ಸಹ ಪತನಗೊಂಡ ವಿಮಾನದಲ್ಲಿದ್ದರು ಎಂದು ಕೇಂದ್ರ ಸಚಿವ ಹರ್ಷವರ್ಧನ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸಂತಾಪ ಸೂಚಿಸಿ, ನಾನು ಮೃತ ಪನ್ನಗೇಶ್ ವೈದ್ಯರ ಪುತ್ರನೊಂದಿಗೆ ಮಾತನಾಡಿದ್ದೇನೆ. ಇಥಿಯೋಪಿಯನ್ ವಿಮಾನ ದುರಂತದ ಭಾರತೀಯ ಕುಟುಂಬದ ಆರು ಜನರನ್ನು ಕಳೆದುಕೊಂಡ ವಿಷಯ ಕೇಳಿ ಶಾಕ್ ಆಯ್ತು. ಈಗಾಗಲೇ ಕೀನ್ಯಾ ಮತ್ತು ಇಥಿಯೋಪಿಯಾದಲ್ಲಿರುವ ಭಾರತದ ರಾಯಭಾರಿಯ ಕಚೇರಿಯ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದೇನೆ. ಅಲ್ಲಿಯ ನಮ್ಮ ಸಿಬ್ಬಂದಿ ಮೃತ ಕುಟುಂಬಸ್ಥರಿಗೆ ಸಹಾಯ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು ಸುಷ್ಮಾ ಸ್ವರಾಜ್ ವಿಮಾನ ದುರಂತದಲ್ಲಿ ಭಾರತ ಮೂಲದ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಮತ್ತೊಮ್ಮೆ ಇಂದು ಬೆಳಗ್ಗೆ ಟ್ವೀಟ್ ಮಾಡಿ ಆರು ಜನರು ಎಂದು ತಿಳಿಸಿದ್ದಾರೆ. ಮೃತರನ್ನು ವೈದ್ಯ ಪನ್ನಗೇಶ್ ಭಾಸ್ಕರ್, ವೈದ್ಯ ಹಂಸಿನಿ ಅನ್ನಗೇಶ್, ನುಕುವಾರಾಪೂ ಮನೀಷಾ ಮತ್ತು ಶಿಖಾ ಗಾರ್ಗ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ತಿಳಿದು ಬಂದಿಲ್ಲ.

    ಶಿಖಾ ಗರ್ಗ್ ಸಾವಿಗೆ ಕೇಂದ್ರ ಸಚಿವರ ಸಂತಾಪ:
    ಶಿಖಾ ಗರ್ಗ್ ನೌರೊಬಿಯಲ್ಲಿ ನಡೆಯುತ್ತಿರುವ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಶಿಖಾ ಅವರು ಪರಿಸರ ಸಚಿವಾಲಯದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿಸುತ್ತಿದ್ದರು. ಶಿಖಾರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವರಾದ ಹರ್ಷವರ್ಧನ್ ಸಂತಾಪ ಸೂಚಿಸಿದ್ದಾರೆ.

    ಇಥಿಯೋಪಿಯನ್ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿತ್ತು. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೊಫ್ಟು ಬಳಿ ವಿಮಾನ ಪತನಗೊಂಡಿದ್ದು, ಒಟ್ಟು 157 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಥಿಯೋಪಿಯಾ ವಿಮಾನ ದುರಂತ – ಭಾರತ ಮೂಲದ ನಾಲ್ವರ ಸಾವು

    ಇಥಿಯೋಪಿಯಾ ವಿಮಾನ ದುರಂತ – ಭಾರತ ಮೂಲದ ನಾಲ್ವರ ಸಾವು

    ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದು, ಇದರಲ್ಲಿ ನಾಲ್ವರು ಭಾರತೀಯರು ಕೂಡ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ವಿಮಾನ ಪತನ ಆಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 32 ದೇಶಗಳ ಪ್ರಯಾಣಿಕರಿದ್ದರು.

    ಇದರಲ್ಲಿ ಅತಿ ಹೆಚ್ಚು ಅಂದರೆ 32 ಮಂದಿ ಕೀನ್ಯಾ, ಕೆನಡಾ 18, ಇಥಿಯೋಪಿಯಾ 9, ಇಟಲಿ, ಅಮೆರಿಕ, ಚೀನಾ ದೇಶಗಳ ತಲಾ 8 ಮಂದಿ ಸೇರಿದ್ದಾರೆ ಎಂದು ಮಾಧ್ಯಮವೊಂದು ಮಾಹಿತಿ ವರದಿ ಮಾಡಿದೆ.

    ಉಳಿದಂತೆ ಇಂಗ್ಲೆಂಡ್‍ನ ಮತ್ತು ಫ್ರಾನ್ಸಿನ ತಲಾ 7 ಮಂದಿ ಹಾಗೂ ಈಜಿಪ್ಟ್ 6, ನೆದಲ್ರ್ಯಾಂಡ್ಸ್‍ನ 5, ಭಾರತ 4 ಮಂದಿ ಪ್ರಯಾಣಿಸುತ್ತಿದ್ದರು. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿತ್ತು. 10:05 ಗಂಟೆಗೆ ವಿಮಾನ ನೈರೋಬಿಯಗೆ ತಲುಪಬೇಕಾಗಿತ್ತು. ಸದ್ಯ ಪ್ರಯಾಣಿಕರ ಸ್ನೇಹಿತರು, ಪೊಲೀಸರು ನೈರೋಬಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತ್ತಿದ್ದಾರೆ.

    ವಿಮಾನ ಅವಘಡದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೇಕಾಫ್ ಆದ 6 ನಿಮಿಷಕ್ಕೆ ಪತನ : ವಿಮಾನ ದುರಂತಕ್ಕೆ 157 ಮಂದಿ ಬಲಿ

    ಟೇಕಾಫ್ ಆದ 6 ನಿಮಿಷಕ್ಕೆ ಪತನ : ವಿಮಾನ ದುರಂತಕ್ಕೆ 157 ಮಂದಿ ಬಲಿ

    ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದಾರೆ. ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ.

    ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೊಫ್ಟು ಬಳಿ ವಿಮಾನ ಪತನಗೊಂಡಿದೆ. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿದೆ. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    ಈ ಬಗ್ಗೆ ಏರ್ ಲೈನ್ಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 8 ಮಂದಿ ಸಿಬ್ಬಂದಿ 147 ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737-8 ಮ್ಯಾಕ್ಸ್ ಹೆಸರಿನ ವಿಮಾನ ಪತನವಾಗಿದೆ. ಬೆಳಗ್ಗೆ 8.40ರ ವೇಳೆಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

    ವಿಮಾನ ಅವಘದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

    ಇತ್ತ ಶನಿವಾರ ಕೊಲಂಬಿಯಾದ ಮೆಟಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ವಿಮಾನ ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೊಲಂಬಿಯಾ ಸಿವಿಲ್ ಎರೋನಾಟಿಕ್ಸ್ ವಿಶೇಷ ಆಡಳಿತ ಮಂಡಳಿ ವಿಭಾಗ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ ಡಿಸಿ-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವಿನ ಮೆಟಾ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಮಾನ ಹಾರಾಟ ವೇಳೆ ಎಂಜಿನ್ ಫೇಲ್ ಆದ ಪರಿಣಾಮ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv