Tag: ಇಡ್ಲಿ ಅಮ್ಮ

  • ಮದರ್ಸ್ ಡೇ ಪ್ರಯುಕ್ತ ಇಡ್ಲಿ ಅಮ್ಮನಿಗೆ ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಮದರ್ಸ್ ಡೇ ಪ್ರಯುಕ್ತ ಇಡ್ಲಿ ಅಮ್ಮನಿಗೆ ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಚೆನ್ನೈ: ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ಕೊಡುವ ಮೂಲಕ ನೀಡಿದ್ದ ಭರವಸೆಯನ್ನು ಈಡೇರಿದ್ದಾರೆ.

    ಈ ಕುರಿತ ಪುಟ್ಟ ವೀಡಿಯೋವನ್ನು ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ತಾಯಂದಿರ ದಿನದಂದೇ ಉಡುಗೊರೆ ನೀಡುವ ಸಲುವಾಗಿ ಸರಿಯಾದ ಸಮಯಕ್ಕೆ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿ ನಮ್ಮ ತಂಡ ಇಡ್ಲಿ ಅಮ್ಮನಿಗೆ ಮನೆಯನ್ನು ನೀಡಿದಕ್ಕೆ ಧನ್ಯವಾದಗಳು. ಅವರು ತಾಯಿಯ ಸದ್ಗುಣಗಳ ಸಾಕಾರ. ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥತೆ ಅವರಲ್ಲಿದೆ. ಅವರನ್ನು ಮತ್ತು ಅವರ ಕೆಲಸವನ್ನು ಸಾಧ್ಯವಾದಷ್ಟು ಬೆಂಬಲಿಸೋಣ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಕಮಲಾತಾಲ್ (ಇಡ್ಲಿ ಅಮ್ಮ) ಅವರು ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

    2019ರಲ್ಲಿ ಆಕೆಯ ಕಥೆ ವೈರಲ್ ಆಗಿತ್ತು. ಈ ಕುರಿತಂತೆ ಮಾಹಿತಿ ಪಡೆದ ಮಹೀಂದ್ರಾ ಅವರು ಆಕೆಯ ಮೇಲೆ ಬಂಡವಾಳ ಹೂಡಿಕೆ ಮಡಲು ಸಂತೋಷಪಡುತ್ತೇನೆ ಎಂದು ತಿಳಿಸಿದ್ದರು. ಇದೀಗ ನೀಡಿದ ಭರವಸೆಯಂತೆ ತಾಯಂದಿರ ದಿನದಂದು ಮಹೀಂದ್ರಾ ಅವರು ಹೊಸ ಮನೆಯನ್ನು ನೀಡಿದ್ದು, ಇದೀಗ ಆನಂದ್ ಮಹೀಂದ್ರಾ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.