Tag: ಇಡ್ಲಿ

  • ಆರೋಗ್ಯಕರ ರಾಗಿ ಇಡ್ಲಿ ಹೀಗೆ ಮಾಡಿ

    ಆರೋಗ್ಯಕರ ರಾಗಿ ಇಡ್ಲಿ ಹೀಗೆ ಮಾಡಿ

    ರಾಗಿ ಇಡ್ಲಿ ಎಂಬುದು ಆರೋಗ್ಯಕರ ಇಡ್ಲಿಯ ಒಂದು ವಿಧಾನ. ಸಾಮಾನ್ಯವಾಗಿ ರಾಗಿ ಗಂಜಿ, ರಾಗಿ ದೋಸೆ, ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿಯನ್ನು ಮಾಡುತ್ತಾರೆ ಇವುಗಳ ಪೈಕಿ ರಾಗಿ ಇಡ್ಲಿ ಮಾಡುವವರು ತುಂಬಾ ಕಡಿಮೆ. ಇದನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಡಬಹುದು. ಅದಲ್ಲದೇ ಇದರಲ್ಲಿ ಸ್ಟಫ್ಡ್‌ ರೀತಿಯಲ್ಲಿಯೂ ಮಾಡಬಹುದು. ರಾಗಿ ಹಿಟ್ಟು, ಉದ್ದಿನ ಬೇಳೆ ಮತ್ತು ಇತರ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ.

    ಬೇಕಾಗುವ ಸಾಮಗ್ರಿಗಳು
    ರಾಗಿ ಕಾಳು
    ಇಡ್ಲಿ ಅಕ್ಕಿ
    ಉದ್ದಿನ ಬೇಳೆ
    ಮೆಂತ್ಯ ಕಾಳು
    ದಪ್ಪ ಅವಲಕ್ಕಿ
    ಉಪ್ಪು
    ಎಣ್ಣೆ

    ಮಾಡುವ ವಿಧಾನ
    ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಹಾಕಿ 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇನ್ನೊಂದು ಪಾತ್ರೆಯಲ್ಲಿ ರಾಗಿ ಕಾಳು ಮತ್ತು ಇಡ್ಲಿ ಅಕ್ಕಿಯನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಮೊದಲು ನೆನೆಸಿದ ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣುಪಾದ, ನೊರೆಬರುವ ಹಿಟ್ಟಿನ ರೀತಿಯಲ್ಲಿ ರುಬ್ಬಿಕೊಳ್ಳಿ. ಇದಾದ ಬಳಿಕ ಅಕ್ಕಿ ಹಾಗೂ ರಾಗಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಉದ್ದಿನ ಬೇಳೆ ಮತ್ತು ರಾಗಿ-ಅಕ್ಕಿ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು 8-10 ಗಂಟೆಗಳ ಕಾಲ ಮುಚ್ಚಿಡಿ.

    ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿ. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ, ಹಿಟ್ಟನ್ನು ಹಾಕಿ. ಸುಮಾರು 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ರಾಗಿ ಇಡ್ಲಿಯನ್ನು ಬಿಸಿ ಇರುವಾಗಲೇ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ. ಈ ಹಿಟ್ಟನ್ನು ದೋಸೆ ಮತ್ತು ಉತ್ತಪ್ಪ ಮಾಡಲು ಕೂಡ ಬಳಸಬಹುದು

  • ಬೆಂಗ್ಳೂರಿನ ಅರ್ಧದಷ್ಟು ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಗ್ತಿಲ್ಲ ಇಡ್ಲಿ!

    ಬೆಂಗ್ಳೂರಿನ ಅರ್ಧದಷ್ಟು ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಗ್ತಿಲ್ಲ ಇಡ್ಲಿ!

    ಬೆಂಗಳೂರು: ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗಳ ಮತ್ತೊಂದು ಅವ್ಯವಸ್ಥೆಯಿದು. ಅರ್ಧ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ (Indira Canteen) ಇಡ್ಲಿ ಸೇರಿ ಕೆಲ ಉಪಹಾರವನ್ನ ನಿಲ್ಲಿಸಲಾಗಿದೆ.

    ಕೆ.ಆರ್ ಸಮೀಪದ ಎಸ್ ಪಿ ರಸ್ತೆಯಲ್ಲಿರೋ ಇಂದಿರಾ ಕಿಚನ್ ನಲ್ಲಿ ಇಡ್ಲಿ (Idli) ಸೇರಿ ಕೆಲ ಉಪಹಾವನ್ನ ತಯಾರಿಸುವ ಯಂತ್ರೋಪಕರಣಗಳು ಹಳೆಯದಾಗಿ, ಹಾಳಾಗಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಗಳಿಗೆ ಇಡ್ಲಿ ಸಪ್ಲೈ ಆಗ್ತಿಲ್ಲ. ಇನ್ನೂ ಕೆಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ ಸಪ್ಲೈ ಆಗ್ತಿದೆ. ಇತ್ತ ವಿಶ್ವೇಶ್ವಪುರಂ ವಾರ್ಡ್ 174 ರ ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಕೇಳಿದ ಗ್ರಾಹಕರ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬರು ದರ್ಪ ಮೆರೆದಿದ್ದಾರೆ. ಇಡ್ಲಿ ಸಿಗಲ್ಲ, ನಾವು ಕೊಟ್ಟಾಗಷ್ಟೆ ತಿನ್ನಬೇಕು. ಬೇಕಿದ್ರೆ ಪಕ್ಕದಲ್ಲೇ ಖಾಸಗಿ ಹೊಟೇಲ್ ಇದೆ. ಅಲ್ಲಿಗೆ ಹೋಗ್ರಿ ಅಂತ ಧಿಮಾಕು ತೋರಿಸ್ತಿದ್ದ ಅಸಾಮಿಯ ನಿಜ ಬಣ್ಣ ಪಬ್ಲಿಕ್ ಕ್ಯಾಮರಾದಲ್ಲಿ ಲಾಕ್ ಆಗಿದೆ.

    ಎರಡ್ಮೂರು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಬೆಳಗ್ಗಿನ ಸಮಯದಲ್ಲಿ ತಿಂಡಿ, ರಾತ್ರಿ ಹೊತ್ತಲ್ಲಿ ಊಟ ಸಿಗ್ತಿಲ್ಲ. ಇಂದಿರಾ ಕ್ಯಾಂಟೀನ್ ಗಳಿಗೆ ಊಟ ಸಪ್ಲೈ ಮಾಡೋಕೆ ಟೆಂಡರ್ ಪಡೆದಿದ್ದ ಮೂರು ಕಂಪನಿಗಳಿಗೆ ಬಿಬಿಎಂಪಿ ಹಣ ನೀಡಿಲ್ಲ. ಅಡ್ವಾನ್ಸ್ ಆಗಿ ಶೇ. 50% ರಷ್ಟು ಹಣವನ್ನ ನೀಡಬೇಕಿತ್ತು. ಈ ಹಣವನ್ನ ನೀಡದ ಕಾರಣ ಕ್ವಾಲಿಟಿ ಊಟ ಹಾಗೂ ಟೈಂ ಟು ಟೈಂ ಊಟ ತಲುಪಿಸೋಕೆ ಟೆಂಡರ್ ಪಡೆದ ಕಂಪನಿಗಳಿಗೂ ಆಗ್ತಿಲ್ಲ. ಇದನ್ನೂ ಓದಿ: ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ

    ಈ ಬಗ್ಗೆ ಕೇಳಿದ್ರೆ ಇಂದಿರಾ ಕ್ಯಾಂಟೀನ್ ಉಸ್ತುವಾರಿ ತ್ರಿಲೋಕ್ ಚಂದ್ರ, ಲೋಗೋ ತಳ್ಳಿ ನಾವೇನು ಮಾಡೋಕೆ ಆಗುತ್ತೆ ಎಂದು ಜಾರಿಕೊಳ್ಳಲು ನೋಡಿದ್ದಾರೆ.. ಇನ್ನು, ನ್ಯೂನ್ಯತೆ ಸರಿಪಡಿಸೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ.

  • ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ

    ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ

    ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಇಡ್ಲಿ ರವೆ/ ಅಕ್ಕಿ ರವೆ – 1 ಕಪ್
    ಸಬ್ಬಕ್ಕಿ – ಮುಕ್ಕಾಲು ಕಪ್
    ಹುಳಿ ಮೊಸರು – ಒಂದೂವರೆ ಕಪ್
    ನೀರು – 1 ಕಪ್
    ತುರಿದ ತೆಂಗಿನಕಾಯಿ – ಕಾಲು ಕಪ್
    ಅಡುಗೆ ಸೋಡಾ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು

    ಒಗ್ಗರಣೆಗೆ:
    ಸಾಸಿವೆ – ಅರ್ಧ ಟೀಸ್ಪೂನ್
    ಮುರಿದ ಗೋಡಂಬಿ – 10
    ಹಸಿರು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ – ಕೆಲವು
    ಎಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ಜೋಳದ ಪಡ್ಡು ಮಾಡಿ ರುಚಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ರವೆ ಹಾಗೂ ಸಬ್ಬಕ್ಕಿಯನ್ನು ತೆಗೆದುಕೊಂಡು, ಚೆನ್ನಾಗಿ ತೊಳೆಯಿರಿ. ಬಳಿಕ ನೀರನ್ನು ಸಂಪೂರ್ಣವಾಗಿ ಹರಿದು ಹೋಗುವಂತೆ ಮಾಡಿ.
    * ಈಗ ಮಿಶ್ರಣಕ್ಕೆ ಮೊಸರು, ನೀರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಈ ಮಿಶ್ರಣವನ್ನು ರಾತ್ರಿಯಿಡೀ ಅಥವಾ 6-8 ಗಂಟೆ ಮುಚ್ಚಿ ಇಡಿ.
    * ಬೆಳಗ್ಗೆ ಹಿಟ್ಟು ಒಣಗಿದೆ ಎನಿಸಿದರೆ ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಒಂದು ಸಣ್ಣ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಗೋಡಂಬಿ ಸೇರಿಸಿ ಸ್ವಲ್ಪ ಫ್ರೈ ಮಾಡಿ, ಬಳಿಕ ಇಡ್ಲಿ ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿ.
    * ಬಳಿಕ ಮಿಶ್ರಣಕ್ಕೆ ತೆಂಗಿನ ತುರಿ, ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಸೋಡಾ ಹಾಕಿ. ನೀವು ಬೇಕಿಂಗ್ ಸೋಡಾ ಇಷ್ಟಪಡುವುದಿಲ್ಲ ಎಂದರೆ ಹಾಕುವುದು ಬೇಡ.
    * ನೀವೀಗ ಇಡ್ಲಿ ತಟ್ಟೆಗಳಲ್ಲಿ ಹಿಟ್ಟನ್ನು ಹಾಕಿ, 15 ನಿಮಿಷ ಹಬೆಯಲ್ಲಿ ಬೇಯಿಸಿಕೊಳ್ಳಿ.
    * ಇದೀಗ ರುಚಿಯಾದ ಸಬ್ಬಕ್ಕಿ ಇಡ್ಲಿ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಚಟ್ನಿ ಅಥವಾ ಸಾಗುವಿನೊಂದಿಗೆ ಸವಿಯಿರಿ. ಇದನ್ನೂ ಓದಿ: ಚಿರೋಟಿ ರವೆಯ ರೊಟ್ಟಿ ಮಾಡಿ ನೋಡಿದ್ದೀರಾ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫಟಾಫಟ್ ಅಂತ ಮಾಡಿ ಮಂಡಕ್ಕಿ ಇಡ್ಲಿ

    ಫಟಾಫಟ್ ಅಂತ ಮಾಡಿ ಮಂಡಕ್ಕಿ ಇಡ್ಲಿ

    ಕ್ಷಿಣ ಭಾರತದ ಫೇಮಸ್ ಉಪಹಾರಗಳಲ್ಲೊಂದು ಇಡ್ಲಿ. ರವೆ, ಅಕ್ಕಿ ಬಳಸಿ ಮಾಡುವ ಇಡ್ಲಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಬೆಳಗ್ಗೆ ಉಪಹಾರವಾಗಿ ಇಡ್ಲಿ ಮಾಡಬೇಕೆಂದರೆ ರಾತ್ರಿಯಿಡೀ ಹಿಟ್ಟಿಗೆ ವಿಶ್ರಾಂತಿ ನೀಡುವ ಅಗತ್ಯವಿರುತ್ತದೆ. ಆದರೆ ನಾವಿಂದು ಮಂಡಕ್ಕಿಯಿಂದ ಸರಳವಾಗಿ ಹಾಗೂ ಬೇಗನೆ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಂಡಕ್ಕಿ – ಒಂದೂವರೆ ಕಪ್
    ರವೆ – 1 ಕಪ್
    ಉಪ್ಪು – ಅರ್ಧ ಟೀಸ್ಪೂನ್
    ಮೊಸರು – 1 ಕಪ್
    ನೀರು – ಅಗತ್ಯವಿರುವಂತೆ
    ಇನೋ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಹೀಗೆ ಮಾಡಿ ತೆಂಗಿನಕಾಯಿ ದೋಸೆ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿಯನ್ನು ನೀರಿನಿಂದ ತೊಳೆಯಿರಿ.
    * ನೀರನ್ನು ಹಿಂಡಿ ಮಂಡಕ್ಕಿಯನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಅರ್ಧ ಕಪ್ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
    * ಈಗ ಮಂಡಕ್ಕಿ ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, ಅದಕ್ಕೆ ರವೆ, ಉಪ್ಪು, ಮೊಸರು ಹಾಗೂ ಇಡ್ಲಿ ಹಿಟ್ಟಿನಂತೆ ದಪ್ಪನೆಯ ಹದ ಬರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ 20 ನಿಮಿಷಗಳ ಕಾಲ ಹಿಟ್ಟಿಗೆ ವಿಶ್ರಾಂತಿ ನೀಡಿ.
    * 20 ನಿಮಿಷಗಳ ಬಳಿಕ ಅದಕ್ಕೆ ಅರ್ಧ ಟೀಸ್ಪೂನ್ ಇನೋ ಹಾಕಿ, ಹಿಟ್ಟು ನೊರೆ ಬರುವವರೆಗೆ ನಿಧಾನವಾಗಿ ಮಿಶ್ರಣ ಮಾಡಿ.
    * ಈಗ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, ಹಿಟ್ಟನ್ನು ತುಂಬಿ.
    * ಅವುಗಳನ್ನು ಸ್ಟೀಮರ್‌ಗಳಲ್ಲಿ ಇರಿಸಿ, 15 ನಿಮಿಷಗಳ ಕಾಲ ಬೇಯಿಸಿ.
    * ಇದೀಗ ಮಂಡಕ್ಕಿ ಇಡ್ಲಿ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಚಟ್ನಿ ಅಥವಾ ಸಾಂಬರ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಕಾಜು ಬರ್ಫಿ ಮಾಡುವ ಸುಲಭ ವಿಧಾನ

    Live Tv
    [brid partner=56869869 player=32851 video=960834 autoplay=true]

  • ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ಟ್ಸ್ ಉತ್ತಮ ಪೌಷ್ಟಿಕಾಂಶ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಡ್ಲಿ ಬೆಳಗ್ಗಿನ ಉಪಹಾರಕ್ಕೆ ಪರ್ಫೆಕ್ಟ್ ಆಗಿದೆ. ಇವೆರಡರ ಕಾಂಬಿನೇಶನ್‌ನಿಂದ ತುಂಬಾ ರುಚಿಯಾದ ಇಡ್ಲಿ ತಯಾರಿಸಿದರೆ ಹೇಗಿರುತ್ತೆ? ಸುಲಭವಾಗಿ ಮಾಡಬಹುದಾದ ಓಟ್ಸ್ ಇಡ್ಲಿ ರೆಸಿಪಿ ಇಲ್ಲಿದೆ. ನೀವೂ ಕೂಡಾ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 1 ಕಪ್ (ಇನ್‌ಸ್ಟಂಟ್ ಓಟ್ಸ್/ಸ್ಟೀಲ್ ಕಟ್ ಓಟ್ಸ್/ರೋಲ್ಡ್ ಓಟ್ಸ್)
    ರವೆ – ಅರ್ಧ ಕಪ್
    ಮೊಸರು – ಅರ್ಧ ಕಪ್
    ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ತುರಿದ ಕ್ಯಾರೆಟ್ – 1 (ಅಂದಾಜು ಅರ್ಧ ಕಪ್)
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 1 ಕಪ್
    ಅಡುಗೆ ಸೋಡಾ – ಮುಕ್ಕಾಲು ಟೀಸ್ಪೂನ್

    ಒಗ್ಗರಣೆಗೆ:
    ಎಣ್ಣೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಉದ್ದಿನ ಬೇಳೆ – ಅರ್ಧ ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆಗಳು – 7-8
    ಜೀರಿಗೆ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಓಟ್ಸ್ ಅನ್ನು 4-5 ನಿಮಿಷಗಳ ಕಾಲ ಹುರಿಯಿರಿ.
    * ಈಗ ಓಟ್ಸ್ ಅನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್‌ನಲ್ಲಿ ಸಣ್ಣಗೆ ಗ್ರೈಂಡ್ ಮಾಡಿ.
    * ಈಗ ಒಗ್ಗರಣೆಗೆ 1 ಚಮಚ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಎಲೆಗಳು ಹಾಗೂ ಜೀರಿಗೆ ಹಾಕಿ, ಬೇಳೆ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣವಾಗುವವರೆಗೆ ಕೈಯಾಡಿಸಿ.
    * ಬಳಿಕ ಅದಕ್ಕೆ ರವೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ 4-5 ನಿಮಿಷ ಹುರಿಯಿರಿ.
    * ಈಗ ಗ್ರೈಂಡ್ ಮಾಡಿದ ಓಟ್ಸ್ ಹಾಕಿ, ಮಿಕ್ಸ್ ಮಾಡಿ.
    * ಈಗ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ, ಅದನ್ನು ಆರಲು ಬಿಡಿ.
    * ಬಳಿಕ ಮೊಸರು, ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ.
    * ಈಗ ಇಡ್ಲಿ ಮಾಡಲು ಅಗತ್ಯವಿರುವಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿ 15-20 ನಿಮಿಷ ಬಿಡಿ.
    * ಈಗ ಇಡ್ಲಿ ತಯಾರಿಸಲು ಇಡ್ಲಿ ಮೇಕರ್ ಅಥವಾ ಸ್ಟೀಮರ್‌ನಲ್ಲಿ ಮೊದಲು ನೀರು ಹಾಕಿ ಬಿಸಿ ಮಾಡಿ.
    * ಹಿಟ್ಟಿಗೆ ಈಗ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ, ಇಡ್ಲಿ ತಟ್ಟೆಗಳಿಗೆ ಸುರಿಯಿರಿ.
    * ಅವುಗಳನ್ನು ಸ್ಟೀಮರ್‌ನಲ್ಲಿ ಹಾಕಿ, 15 ನಿಮಿಷಗಳ ಕಾಲ ಬೇಯಿಸಿ.
    * ಓಟ್ಸ್ ಇಡ್ಲಿಗಳು ಈಗ ಬಡಿಸಲು ಸಿದ್ಧವಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಬೆಳಗಿನ ಉಪಾಹಾರಕ್ಕೆ ಮಾಡಿ ಮಂಡಕ್ಕಿ ಇಡ್ಲಿ

    ಬೆಳಗಿನ ಉಪಾಹಾರಕ್ಕೆ ಮಾಡಿ ಮಂಡಕ್ಕಿ ಇಡ್ಲಿ

    ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದಾ ಎಂದು ಎಲ್ಲರಿಗೂ ಅಚ್ಚರಿಯಾಗುತ್ತಿರಬಹುದು. ಆದರೆ ಇದು ನಿಜ. ಅಕ್ಕಿ, ರವೆಗಿಂತ ಸರಳವಾಗಿ ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದು. ಈ ಇಡ್ಲಿಯನ್ನು ತುಂಬಾ ಸುಲಭ ವಿಧಾನದಲ್ಲಿ ಮಾಡಬಹುದು.

    ಬೇಕಾಗಿರುವ ಪದಾರ್ಥಗಳು:
    * ಮಂಡಕ್ಕಿ – 4 ಕಪ್
    * ರೆವೆ – 1 ಕಪ್
    * ಉಪ್ಪು – ಅರ್ಧ ಟೀಸ್ಪೂನ್


    * ಮೊಸರು – 1 ಕಪ್
    * ನೀರು (ಅಗತ್ಯವಿರುವಷ್ಟು)

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿಯನ್ನು ನೀರಿನಿಂದ ತೊಳೆಯಿರಿ. ನೀರನ್ನು ಹಿಂಡಿ ಮಂಡಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ಮಂಡಕ್ಕಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ ರೆವೆ, ಉಪ್ಪು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಹಿಟ್ಟನ್ನು ತಯಾರಿಸಿ. 20 ನಿಮಿಷಗಳ ಕಾಲ ಮುಚ್ಚಿಡಿ.


    * 20 ನಿಮಿಷಗಳ ನಂತರ, ಸರಿಯಾಗಿ ಹಿಟ್ಟು ಮಿಶ್ರಣವಾಗಿದೆಯೇ ಪರೀಕ್ಷಿಸಿಕೊಳ್ಳಿ.
    * ಇಡ್ಲಿ ಪಾತ್ರೆಗೆ ಹಿಟ್ಟನ್ನು ಹಾಕಿ 15 ನಿಮಿಷಗಳ ಕಾಲ ಸ್ಟೀಮ್ ಮಾಡಿ.

    ಅಂತಿಮವಾಗಿ, ಟೊಮೆಟೊ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಮಂಡಕ್ಕಿ ಇಡ್ಲಿಯನ್ನು ಸವಿಯಿರಿ.

  • ಮೃದುವಾದ ರವೆ ಇಡ್ಲಿ ಮಾಡುವ ಸರಳ ವಿಧಾನ

    ಮೃದುವಾದ ರವೆ ಇಡ್ಲಿ ಮಾಡುವ ಸರಳ ವಿಧಾನ

    ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಮಾಡುವ ಹಾಗೆ ನಾನೂ ಕೂಡ ಇಡ್ಲಿ ಮಾಡಬೇಕು. ಯಾಕೋ ನಾನ್ ಮಾಡೋ ಇಡ್ಲಿ ಕೆಲವೊಮ್ಮೆ ಗಟ್ಟಿ ಆಗಿ ಬಿಡುತ್ತವೆ. ಮಲ್ಲಿಗೆ ಥರ ಬರೋದೇ ಇಲ್ಲ ಎನ್ನುವವರೇ ಹೆಚ್ಚು. ನೀವು ಮಾಡೋ ಇಡ್ಲಿ ಮೃದುವಾಗಿ, ಉದುರುದುರಾಗಿ ಬರಬೇಕಾ? ಹಾಗಾದರೆ ನಾವು ಹೇಳುವಂತೆ ಒಮ್ಮೆ ಮಾಡಿ ನೋಡಿ.

    ಬೇಕಾಗಿರುವ ಸಾಮಗ್ರಿಗಳು:
    * ರವೆ – 1 ಕಪ್
    * ಮೊಸರು – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 2 ಚಮಚ
    * ಬೇಕಿಂಗ್ ಸೋಡಾ – ಸ್ವಲ್ಪ


    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ರವೆಗೆ ಸೇರಿಸಿ ಅವೆರಡನ್ನು ಹದವಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನೂ ಓದಿ: ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    * ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ ಸ್ಟೀಮರ್‌ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ. ದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಇಡ್ಲಿ ಬೆಂದಿದ್ಯಾ ಎಂದು ನೋಡುತ್ತಿರಬೇಕು. ನಂತರ ಸ್ಟೀಮರ್‌ನಿಂದ ಹೊರತೆಗೆದು ಹಾಟ್ ಬಾಕ್ಸ್‌ನಲ್ಲಿ ಇಟ್ಟರೆ ರುಚಿಯಾದ ಇಡ್ಲಿ ಸಿದ್ಧ.

  • ಬಿಸಿ ಬಿಸಿಯಾದ ಸೋಯಾಬೀನ್ ಇಡ್ಲಿ ಮಾಡುವ ವಿಧಾನ

    ಬಿಸಿ ಬಿಸಿಯಾದ ಸೋಯಾಬೀನ್ ಇಡ್ಲಿ ಮಾಡುವ ವಿಧಾನ

    ಪ್ರತಿದಿನ ಬೆಳಗ್ಗೆ ಎದ್ದು ಏನಪ್ಪಾ, ತಿಂಡಿ ಮಾಡುವುದು ಯಾವ ತಿಂಡಿ ಮಾಡಿದರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತದೆ  ಎಂದು  ಯೋಚನೆ ಮಾಡ್ತಿದ್ರೆ, ನೀವು ಸೋಯಾಬೀನ್ ಇಡ್ಲಿ ಮಾಡಬಹುದು. ಇದನ್ನ ಮಾಡುವುದು ಕಷ್ಟಕರವಲ್ಲ, ಬಹಳ ಸುಲಭವಾಗಿದೆ, ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ.


    ಬೇಕಾಗುವ ಸಾಮಗ್ರಿಗಳು:
    * ಸೋಯಾಬೀನ್- 1 ಕಪ್‌
    * ಬಿಳಿ ಉದ್ದಿನ ಬೇಳೆ 1 ಕಪ್‌
    * ಮೆಂತ್ಯ – ಸ್ವಲ್ಪ
    * ಇಡ್ಲಿ ರೈಸ್ 2 ಕಪ್‌
    * ಚನ್ನಾ ದಾಲ್- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಬೇಳೆ, ಅಕ್ಕಿ ಮತ್ತು ಸೋಯಾಬೀನ್‌ ನೆನೆಸಿಟ್ಟುಕೊಳ್ಳಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನೆನೆಸಿದ ನಂತರ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ದಪ್ಪ ಮತ್ತು ಸ್ಥಿರವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿದರೆ ಸಾಕು.  ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಅದಕ್ಕೆ ಉಪ್ಪನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕನಿಷ್ಠ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಇಟ್ಟಿರಬೇಕು. ಇದನ್ನೂ ಓದಿ: ಕ್ರಿಸ್‍ಮಸ್ ಆಚರಣೆಗೆ ಮನೆಯಲ್ಲಿಯೇ ಮಾಡಿ ಸಿಹಿಯಾದ ಕೇಕ್

    * ಬೆಳಗ್ಗೆ ಅದನ್ನು ಮತ್ತೊಮ್ಮೆ ಮಿಶ್ರಣ ಮಾಡಿ ಇಡ್ಲಿ ಸ್ಟೀಮರ್‌ನಲ್ಲಿ ಹಾಕಿ ಸ್ಟೀಮ್ ಮಾಡಿದರೆ ರುಚಿಯಾದ ಇಡ್ಲಿ ಸವಿಯಲು  ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    – ಆನಂದ್ ಮಹೀಂದ್ರಾ ಟ್ವೀಟ್‍ಗೆ ಭರ್ಜರಿ ಪ್ರತಿಕ್ರಿಯೆ

    ಬೆಂಗಳೂರು: ಗ್ರಾಹಕರನ್ನು ಸೆಳೆಯಲು ಹೋಟೆಲ್‍ಗಳು ವಿವಿಧ ರೀತಿಯ ಐಡಿಯಾಗಳನ್ನು ಮಾಡುತ್ತವೆ. ಅದೇ ರೀತಿ ಇಲ್ಲೊಂದು ಹೋಟೆಲ್ ಐಸ್ ಕ್ಯಾಂಡಿ ಆಕಾರದಲ್ಲಿ ಇಡ್ಲಿ ಮಾಡಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಈ ವಿಶೇಷ ಇಡ್ಲಿಯ ಫೋಟೋವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಫೋಟೋಗೆ ಅದ್ಭುತ ಸಾಲು ಬರೆದಿರುವ ಅವರು, ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ.  ಐಸ್ ಕಡ್ಡಿಯ ಮೇಲೆ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ, ಯಾರು ಇದರ ವಿರುದ್ಧವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

    ಹೀಗೆ ಪ್ರಶ್ನೆ ಕೇಳಿದ್ದೇ ತಡ, ಹಲವರು ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಹೀಗಾಗಿ ಟ್ವಿಟ್ಟರ್ ನಲ್ಲಿ ಫುಲ್ ಟ್ರೆಂಡ್ ಆಗಿದೆ. ಇಡ್ಲಿ ಕುರಿತು ಇದೀಗ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪರ ವಿರೋಧದ ಕಮೆಂಟ್‍ಗಳು ಬರುತ್ತಿವೆ.

    ತಟ್ಟೆಯಲ್ಲಿ ಮೂರು ಇಡ್ಲಿ ಇಡಲಾಗಿದ್ದು, ಇನ್ನೊಂದನ್ನು ಸಾಂಬಾರ್ ಕಪ್‍ನಲ್ಲಿ ಅದ್ದಿ ಇಡಲಾಗಿದೆ. ಇದರ ಪಕ್ಕ ಚಟ್ನಿಯ ಕಪ್ ಸಹ ಇಡಲಾಗಿದೆ. ಈ ಚಿತ್ರವನ್ನು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

  • 20 ರೂ. ಇಡ್ಲಿ ಹಣವನ್ನು ಕೇಳಿದ್ದಕ್ಕೆ ವ್ಯಾಪಾರಿಯನ್ನು ಕೊಂದ ಗ್ರಾಹಕರು

    20 ರೂ. ಇಡ್ಲಿ ಹಣವನ್ನು ಕೇಳಿದ್ದಕ್ಕೆ ವ್ಯಾಪಾರಿಯನ್ನು ಕೊಂದ ಗ್ರಾಹಕರು

    ಮುಂಬೈ: ಇಡ್ಲಿ ತಿಂದು 20 ರೂಪಾಯಿ ಹಣ ಕೊಡದೆ ಹೋಗುತ್ತಿದ್ದ ಮೂವರು ಗ್ರಾಹಕರ ಬಳಿ ಹಣ ಕೇಳಿದ್ದಕ್ಕೆ ವ್ಯಾಪಾರಿಯನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಡ್ಲಿ ವ್ಯಾಪಾರಸ್ಥನನ್ನು ವೀರೇಂದ್ರ ಯಾದವ್ (26) ಎಂದು ಗುರುತಿಸಲಾಗಿದೆ. ಈತ ಇಡ್ಲಿಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಇಡ್ಲಿ ತಿಂದು ಹಣ ಕೊಡಲು ನಿರಾಕರಿಸಿದ ಮೂವರನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಮೂವರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಇಡ್ಲಿ ತಿಂದು ಹಣ ನೀಡದೆ ಹೋಗಿದ್ದವರಿಗೆ ವ್ಯಾಪಾರಸ್ಥ ವೀರೇಂದ್ರ ನೀವು 20 ರೂಪಾಯಿ ಹಣ ಕೊಡುವುದು ಬಾಕಿ ಇದೆ ಎಂದು ಹೇಳಿದ್ದಾನೆ. ಹಣ ವಿಚಾರವಾಗಿ ಜಗಳವಾಗಿದೆ. ಈ ಜಗಳದಲ್ಲಿ ಕೋಪಗೊಂಡ ಮೂವರು ಗ್ರಾಹಕರು ಇಡ್ಲಿ ವ್ಯಾಪಾರಸ್ಥನನ್ನು ತಳ್ಳಿದ್ದಾರೆ. ಈ ವೇಳೆ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹತ್ತಿರದಲ್ಲಿ ಇದ್ದವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಮುಂಬೈನ ಮೀರಾ ರಸ್ತೆಯ ನಯಾ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೀರಾ ಭಯಂದರ್ ವಾಸೈ ವಿರಾರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ ಎಂದು ಹೇಳಿದ್ದಾರೆ.