Tag: ಇಡಿ ವಿಚಾರಣೆ

  • ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ

    ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ (ಆ.12) ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ನೋಟಿಸ್ ನೀಡಿ, ಬುಧವಾರ (ಆ.13) ವಿಚಾರಣೆ ಹಾಜರಾಗುವಂತೆ ತಿಳಿಸಿತ್ತು. ಅದರಂತೆ ದೆಹಲಿಯಲ್ಲಿರುವ ಇಡಿ ಕಚೇರಿಗೆ ಆಗಮಿಸಿ, ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ವಿಚಾರಣೆ ವೇಳೆ ರೈನಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ.

    ಇದಕ್ಕೂ ಮುನ್ನ ನಟ ಪ್ರಕಾಶ್ ರೈ, ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರನ್ನು ಇಡಿ ವಿಚಾರಣೆ ನಡೆಸಿದೆ.ಇದನ್ನೂ ಓದಿ: ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ಕಳುಹಿಸಿದ್ದಾರೆ – ಧ್ರುವ ಮ್ಯಾನೇಜರ್ ಸ್ಪಷ್ಟನೆ

  • 17,000 ಕೋಟಿ ಬ್ಯಾಂಕ್ ಲೋನ್ ವಂಚನೆ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

    17,000 ಕೋಟಿ ಬ್ಯಾಂಕ್ ಲೋನ್ ವಂಚನೆ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

    ನವದೆಹಲಿ: 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣ ಸಂಬಂಧ ಮಂಗಳವಾರ ರಿಲಯನ್ಸ್ ಗ್ರೂಪ್ಸ್ (Reliance Groups) ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ಇಡಿ ವಿಚಾರಣೆಗೆ (ED) ಹಾಜರಾಗಿದ್ದರು.ಇದನ್ನೂ ಓದಿ: 3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

    ದೆಹಲಿಯಲ್ಲಿರುವ (Delhi) ಇಡಿ ಕಚೇರಿಗೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅನಿಲ್ ಅಂಬಾನಿಯವರು ಆಗಮಿಸಿದ್ದರು. ಇಡಿ ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಂದ ಹಣಕಾಸು ಅಕ್ರಮಗಳು ಮತ್ತು 17,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ.

    ಜು.24ರಂದು ಮುಂಬೈನಲ್ಲಿನ 50 ಕಂಪನಿಗಳು ಮತ್ತು ಅವರ ವ್ಯವಹಾರಗಳಿಗೆ ಸಂಬAಧಿಸಿದ 25 ವ್ಯಕ್ತಿಗಳು ಸೇರಿದಂತೆ 35 ಕಡೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಬಳಿಕ ಸಮನ್ಸ್ ಜಾರಿ ಮಾಡಿತ್ತು. 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್ ನೀಡಿದ ಸುಮಾರು 3,000 ಕೋಟಿ ರೂ.ಗಳ ಸಾಲವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 3,000 ಕೋಟಿ ರೂ. ಸಾಲ ತೀರಿಸಲು ಯೆಸ್ ಬ್ಯಾಂಕ್ ಅಧಿಕಾರಿಗಳಿಗೆ ಅನಿಲ್ ಅಂಬಾನಿ ಲಂಚ ನೀಡಲು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ.ಇದನ್ನೂ ಓದಿ: ಆವತ್ತು ಸೈಕಲ್; ಇವತ್ತು ಸ್ಕೂಟರ್ – ಹೊಸ ಫ್ಲೈಓವರ್ ಮೇಲೆ ಡಿಕೆಶಿ ಸ್ಕೂಟರ್ ಸವಾರಿ

  • ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣ; ಇಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್

    ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣ; ಇಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್

    ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಸಂಬಂಧ ನಟ ಪ್ರಕಾಶ್ ರಾಜ್ (Prakash Raj) ಬುಧವಾರ ಇಡಿ (Enforcement Directorate) ವಿಚಾರಣೆಗೆ ಹಾಜರಾಗಿದ್ದಾರೆ.

    ಹೈದರಾಬಾದ್‌ನ (Hyderabad) ಬಶೀರ್‌ಬಾಗ್‌ನಲ್ಲಿರುವ ಇಡಿ ಕಚೇರಿಗೆ ಹಾಜರಾದ ನಟ ಪ್ರಕಾಶ್ ರಾಜ್‌ಗೆ ಇಡಿ ಫುಲ್ ಗ್ರಿಲ್ ನಡೆಸಿತು ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದಾರೆಂದು ಪ್ರಕಾಶ್ ರಾಜ್‌ಗೆ ಇಡಿ ಸಮನ್ಸ್ ನೀಡಿತ್ತು. ಇದನ್ನೂ ಓದಿ: ಮತಾಂತರ ಕೇಸ್;‌ ಬಂಧಿತ ಕೇರಳ ಸನ್ಯಾಸಿನಿಯರಿಗೆ ಜಾಮೀನು ನೀಡಲ್ಲ ಎಂದ ಕೋರ್ಟ್‌

    ಪ್ರಕಾಶ್ ರಾಜ್ ಜೊತೆಗೆ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಲಕ್ಷ್ಮಿ ಮಂಚು ಅವರಿಗೂ ಇ.ಡಿ ವಿಚಾರಣೆಗೆ ಸಮನ್ಸ್ ನೀಡಿತ್ತು. ಆಗಸ್ಟ್ 6 ರಂದು ವಿಜಯ್ ದೇವರಕೊಂಡ, ಆಗಸ್ಟ್ 13 ರಂದು ಲಕ್ಷ್ಮಿ ಮಂಚು ವಿಚಾರಣೆಗೆ ಹಾಜರಾಗುವಂತೆ ಇಡಿ ತಿಳಿಸಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ

    ಏನಿದು ಪ್ರಕರಣ?
    ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್, ಬಹುಭಾಷಾ ನಟ ಪ್ರಕಾಶ್ ರಾಜ್, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

  • ಮುಡಾ ಕೇಸ್‌ ಸಿಬಿಐಗೆ ವರ್ಗಾಯಿಸಲು ಮನವಿ – ಆದೇಶ ಕಾಯ್ದಿರಿಸಿದ ಕೋರ್ಟ್‌

    ಮುಡಾ ಕೇಸ್‌ ಸಿಬಿಐಗೆ ವರ್ಗಾಯಿಸಲು ಮನವಿ – ಆದೇಶ ಕಾಯ್ದಿರಿಸಿದ ಕೋರ್ಟ್‌

    – 50:50 ಸೈಟು ಪಡೆದ ಫಲಾನುಭವಿಗಳಿಗೆ ಮತ್ತೆ ಸಂಕಷ್ಟ
    – 631 ಸೈಟುಗಳು ಜಪ್ತಿಯಾಗುತ್ತಾ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸನ್ನು ಸಿಬಿಐಗೆ ವರ್ಗಾಯಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೇ, ಈ ಆದೇಶ ಹೊರಬೀಳುವವರೆಗೂ, ಲೋಕಾಯುಕ್ತ ತನಿಖೆಯ ವರದಿಯನ್ನು ಕೆಳಹಂತದ ಕೋರ್ಟ್‌ಗೆ ಸಲ್ಲಿಕೆ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

    ಸೋಮವಾರ ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ರವಿ ವರ್ಮಾಕುಮಾರ್ ವಾದ ಮಂಡಿಸಿದ್ರು. ದೇವರಾಜ್ ಪರ ದುಶ್ಯಂತ್ ದವೆ, ದೂರುದಾರನ ಪರವಾಗಿ ಮಣಿಂದರ್ ಸಿಂಗ್, ಸರ್ಕಾರದ ಪರ ಕಪಿಲ್ ಸಿಬಲ್, ಸಿಬಿಐ ಪರವಾಗಿ ಪ್ರಸನ್ನಕುಮಾರ್ ವಕಾಲತ್ತು ವಹಿಸಿದ್ರು.

    ಸಿದ್ದರಾಮಯ್ಯಗೆ `ಹೈ’ ಟೆನ್ಶನ್ – ವಾದ-ಪ್ರತಿವಾದ ಹೇಗಿತ್ತು?

    * ಮಣೀಂದರ್ ಸಿಂಗ್ – ಮುಡಾದ 141 ಫೈಲ್ ಕಳುವಾಗಿವೆ.
    * ಮಣೀಂದರ್ ಸಿಂಗ್ – ಲೋಕಾಯುಕ್ತದಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ
    * ಮಣೀಂದರ್ ಸಿಂಗ್ – ಸಿಎಂ ಇಸಿಗೆ ಸಲ್ಲಿಸಿರೋ ಅಫಿಡವಿಟ್‌ನಲ್ಲಿ 14 ಸೈಟ್ ಬಗ್ಗೆ ಉಲ್ಲೇಖಿಸಿಲ್ಲ
    * ಮಣೀಂದರ್ ಸಿಂಗ್- ಲೋಕಾಯುಕ್ತ ತನಿಖೆ ವೇಳೆ ಸಿಎಂ ಪತ್ನಿ ಸೈಟ್ ಏಕೆ ಹಿಂತಿರುಗಿಸಿದ್ರು?
    * ಮಣೀಂದರ್ ಸಿಂಗ್ – ಆರೋಪಿಗೆ ತನಿಖಾ ಸಂಸ್ಥೆ ನಿರ್ಧಾರ ಮಾಡೋ ಅಧಿಕಾರ ಇಲ್ಲ
    * ಮಣೀಂದರ್ ಸಿಂಗ್ – ಹೀಗಾಗಿ ಮುಡಾ ಕೇಸನ್ನು ಸಿಬಿಐಗೆ ವಹಿಸುವ ಅಗತ್ಯವಿದೆ
    * ಕಪಿಲ್ ಸಿಬಲ್ – ಸಿಎಂ ಮೇಲೆ ಆರೋಪ ಇದ್ದ ಮಾತ್ರಗೆ ಸಿಬಿಐಗೆ ಕೊಡಲಾಗದು
    * ಕಪಿಲ್ ಸಿಬಲ್ – ಪ್ರಕರಣವನ್ನು ಸಿಬಿಐಗೆ ವಹಿಸುವುದು ಶಾಸನಕ್ಕೆ ವಿರುದ್ಧವಾದ ನಡೆ
    * ಕಪಿಲ್ ಸಿಬಲ್ – ಸಿಎಂ ವಿರುದ್ಧ ತನಿಖೆ ನಡೆಸುವ ಹಕ್ಕು ಲೋಕಾಯುಕ್ತರಿಗೆ ಇದೆ
    * ಕಪಿಲ್ ಸಿಬಲ್ – ಹೀಗಾಗಿ ಕೇಸನ್ನು ಸಿಬಿಐಗೆ ವಹಿಸುವುದು ಉಚಿತವಲ್ಲ
    * ಕಪಿಲ್ ಸಿಬಲ್ – ಸಿಬಿಐ ಅನ್ನು ಪಂಜರದ ಗಿಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ
    * ಕಪಿಲ್ ಸಿಬಲ್ – ಹಾಗಿದ್ದಾಗ ಸಿಬಿಐನಿಂದ ಪಾರದರ್ಶಕ ತನಿಖೆ ಹೇಗೆ ಸಾಧ್ಯ?

    ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಮುಡಾದ 50:50 ಅನುಪಾತದಲ್ಲಿ ಸೈಟ್ ಪಡೆದ ಫಲಾನುಭವಿಗಳಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಜಪ್ತಿ ಮಾಡಿರುವ 142 ಆಸ್ತಿಗಳ ಪಟ್ಟಿಯನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಇಡಿ ಕಳಿಸಿಕೊಟ್ಟಿದೆ. ಮೈಸೂರಿನ ನಾಲ್ಕು ಉಪನೋಂದಣಾಧಿಕಾರಿಗಳಿಗೆ ಪಟ್ಟಿ ರವಾನಿಸಿರುವ ಇಡಿ, ಮುಂದಿನ ಆದೇಶದವರೆಗೂ ಈ ಆಸ್ತಿಗಳನ್ನ ಬೇರೆಯವರಿಗೆ ನೋಂದಣಿ ಮಾಡಿಕೊಡಬಾರದು ಎಂದು ನಿರ್ದೇಶನ ನೀಡಿದೆ.

    ಇನ್ನೂ 50:50 ಅನುಪಾತದ ಅನುಸಾರ ಕೆಲವರು ಪಡೆದಿದ್ದ 631 ಸೈಟ್‌ಗಳ ದಾಖಲೆಗಳನ್ನು ಇಡಿ ಕೇಳಿತ್ತು. ಈ ಎಲ್ಲಾ ದಾಖಲೆಗಳನ್ನು ಆಯುಕ್ತರು ಇಡಿಗೆ ಕಳುಹಿಸಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಬಹುತೇಕ ಇದೇ ವಾರದಲ್ಲಿ 631 ಸೈಟ್‌ಗಳನ್ನು ಇಡಿ ಜಪ್ತಿ ಮಾಡುವ ಸಾಧ್ಯತೆ ಇದೆ. ಇದರ ನಡ್ವೆ, ಇಡಿ 3ನೇ ಹಂತದ ಸೈಟ್ ಸೀಜ್ ಪ್ರಕ್ರಿಯೆಯನ್ನು ಆರಂಭಿಸಿದೆ. ಮತ್ತೆ 550 ಸೈಟ್‌ಗಳ ಮಾಹಿತಿಯನ್ನು ಮುಡಾ ಬಳಿ ಕೇಳಿದೆ. ಇಡಿ ಕ್ರಮವನ್ನು ಬಿಜೆಪಿಯ ಸಿಟಿ ರವಿ ಸ್ವಾಗತಿಸಿದ್ದಾರೆ.

  • ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ಬೆಂಗಳೂರು: ಸಿಎಂ ವಿರುದ್ಧದ ಮುಡಾ ಹಗರಣಕ್ಕೆ ಇಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಲೋಕಾ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಕ್ಲೀನ್‌ಚಿಟ್ ಕೊಡಲಾಗಿದೆ ಎಂಬ ವದಂತಿ ಬೆನ್ನಲ್ಲೇ, ಇಡಿ ಶಾಕ್ ಕೊಟ್ಟಿತ್ತು. ಈ ಬೆನ್ನಲ್ಲೇ ಇಡಿ ಸಮನ್ಸ್‌ಗೆ ಹೈಕೋರ್ಟ್‌ ತಡೆ ನೀಡಿ ಮತ್ತೊಂದು ಟ್ವಿಸ್ಟ್‌ ಕೊಟ್ಟಿದೆ.

    ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ (byrathi suresh) ಇಡಿ ಸಮನ್ಸ್ ಜಾರಿಮಾಡಿತ್ತು. ಇದ್ರ ಪ್ರಕಾರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಇಬ್ಬರೂ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ, ತಡ ಮಾಡದ ಸಿಎಂ ಮತ್ತು ಸಚಿವ ಬೈರತಿ ಸುರೇಶ್, ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಇಡಿ ಸಮನ್ಸ್‌ಗೆ (ED Summons) ತಡೆ ನೀಡಿದೆ. ಮುಂದಿನ ವಿಚಾರಣೆವರೆಗೂ ಇಡಿ ಯಾವುದೇ ಪ್ರಕ್ರಿಯೆ ನಡೆಸುವಂತಿಲ್ಲ. ಸಿಎಂ ಪತ್ನಿ ಮತ್ತು ಸಚಿವ ಬೈರತಿ ಸುರೇಶ್ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದಿದೆ.

    ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ. ಅಲ್ಲಿಗೆ ಸಿಎಂ ಪತ್ನಿ ಮತ್ತು ಸಚಿವ ಬೈರತಿ ಸುರೇಶ್‌ಗೆ ರಿಲೀಫ್ ಸಿಕ್ತು.. ಇದಕ್ಕೂ ಮುನ್ನ, ಇಡಿ ಸಮನ್ಸ್ ಪ್ರಶ್ನಿಸಿದ್ದ ಮಾಜಿ ಆಯುಕ್ತ ನಟೇಶ್‌ಗೆ ಹೈಕೋರ್ಟ್ ರಿಲೀಫ್ ನೀಡಿತ್ತು. ನಟೇಶ್‌ಗೆ ನೀಡಿದ್ದ ಸಮನ್ಸ್ ಅನ್ನು ರದ್ದು ಮಾಡಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಸಚಿವ ಬೈರತಿ ಸುರೇಶ್ ಪರ ವಕೀಲರು ವಾದ ಮಂಡಿಸಿದ್ರು.

    ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?
    * ಸಿಎಂ ಪರ ವಕೀಲ : ಪಾರ್ವತಿ ಅವರಿಗೆ ನೀಡಲಾದ ಸಮನ್ಸ್‌ಗೆ ತಡೆ ನೀಡಬೇಕು
    * ನ್ಯಾಯಪೀಠ: ಈ ಅರ್ಜಿ ವಿಚಾರಣೆ ನಡೆಯಲಿ.. ನಿಮಗೇಕೆ ಆತುರ?
    * ಇಡಿ ಪರ ವಕೀಲ: ಸೈಟ್ ವಾಪಸ್ಸು ನೀಡಿರೋದೇ ಅಪರಾಧದ ಒಂದು ಭಾಗ
    * ಇಡಿ ಪರ ವಕೀಲ: ಅಪರಾಧ ಮಾಡಿದ್ದೇನೆ ಎಂದು ಎ2 ಒಪ್ಪಿಕೊಂಡಿದ್ದಾರೆ
    * ಸಿಎಂ ಪರ ವಕೀಲ: ಲೋಕಾಯುಕ್ತ ತನಿಖೆ ನಡೆಸ್ತಿದೆ.. ಹಾಗಿದ್ರೂ ಇಡಿ ತನಿಖೆ
    * ಬೈರತಿ ಪರ ವಕೀಲ: ಈ ಕೇಸಲ್ಲಿ ಆರೋಪಿ ಅಲ್ಲ.. ಆದರೂ ಇಡಿ ಸಮನ್ಸ್ ನೀಡಿದೆ
    * ಬೈರತಿ ಪರ ವಕೀಲ: ನಾಳೆಯಿಂದ ಪುತ್ರನ ಮದುವೆ ಕಾರ್ಯಕ್ರಮವಿದೆ. ನಾಳೆ ವಿಚಾರಣೆಗೆ ಕರೆದಿದ್ದಾರೆ
    * ಬೈರತಿ ಪರ ವಕೀಲ: ನಟೇಶ್ ಸಮನ್ಸ್ ರದ್ದು ಮಾಡಿ ಮತ್ತೊಂದು ಪೀಠ ಆದೇಶ ನೀಡಿದೆ..
    * ಬೈರತಿ ಪರ ವಕೀಲ: ಇಲ್ಲಿಯೂ ಅದೇ ನೋಟಿಸ್.. ಅದೇ ಆರೋಪ.. ಸಮನ್ಸ್ ರದ್ದು ಮಾಡಿ
    * ಇಡಿ ಪರ ವಕೀಲ: ಆ ಪೀಠದಲ್ಲಿ ಯಾವ ಆಧಾರದ ಮೇಲೆ ರದ್ದು ಮಾಡಿದೆ ಗೊತ್ತಿಲ್ಲ..
    * ಇಡಿ ಪರ ವಕೀಲ: ಸಮನ್ಸ್ ನೀಡುವ ಅಧಿಕಾರ ಇಡಿಗೆ ಇದೆ
    * ಇಡಿ ಪರ ವಕೀಲ: ತನಿಖೆ ಮಾಡುವಾಗ ಯಾರಿಗೆ ಬೇಕಾದರೂ ನೋಟಿಸ್ ನೀಡಬಹುದು
    * ನ್ಯಾಯಪೀಠ: ಪಾರ್ವತಿ, ಬೈರತಿ ಸುರೇಶ್‌ಗೆ ಇಡಿ ನೀಡಿದ್ದ ಸಮನ್ಸ್‌ಗೆ ತಡೆ
    * ನ್ಯಾಯಪೀಠ: ಮುಂದಿನ ಆದೇಶದ ತನಕ ವಿಚಾರಣೆಗೆ ತಡೆ

    ರಾಜಕೀಯ ವಾಕ್ಸಮರ:
    ಇನ್ನೂ ಮುಡಾ ಕೇಸಲ್ಲಿ ಸಿಎಂ ಪತ್ನಿ ಮತ್ತು ಸಚಿವ ಬೈರತಿ ಸುರೇಶ್‌ಗೆ ಇಡಿ ನೊಟೀಸ್ ನೀಡಿದ್ದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಇದು ರಾಜಕೀಯ ಪ್ರೇರಿತ ಎಂದು ಡಿಸಿಎಂ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ, ಯಡಿಯೂರಪ್ಪ, ಜನಾರ್ದನ ರೆಡ್ಡಿಗೆ ನೊಟೀಸ್ ಕೊಟ್ಟಾಗ ಅದು ರಾಜಕೀಯ ಪ್ರೇರಿತ ಆಗಿರಲಿಲ್ವಾ ಎಂದು ಬಿಜೆಪಿಯ ಅಶೋಕ್ ಪ್ರಶ್ನಿಸಿದ್ದಾರೆ. ಆದ್ರೆ, ಸಚಿವ ಸತೀಶ್ ಜಾರಕಿಹೊಳಿ ಮಾತ್ರ, ಇದನ್ನು ರಾಜಕೀಯವಾಗಿ ನೋಡಬಾರದು.. ನೊಟೀಸ್‌ಗೆ ಮಹತ್ವ ಕೊಡಬೇಕಿಲ್ಲ.. ಅಂದ್ರು. ಇನ್ನು, ಸಿಎಂ ಅಧಿಕಾರದಲ್ಲಿ ಮುಂದುವರೆಯೋದು ತಪ್ಪಲ್ಲವೇ ಎಂದು ಕೇಂದ್ರ ಸಚಿವ ಜೋಶಿ ಕೇಳಿದ್ರು.

  • MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

    MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

    ಬೆಂಗಳೂರು: ಮುಡಾ ಹಗರಣ ಕೇಸ್‌ನಲ್ಲಿ (MUDA Case) ಸಿಎಂ ಪತ್ನಿ ಪಾರ್ವತಿ ಹಾಗೂ ಸಿಎಂ ಅಪ್ತ ಸಚಿವ ಬೈರತಿ ಸುರೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮುಡಾ ಹಗರಣ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ (Highcourt) ತಡೆ ನೀಡಿದೆ.

    ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ (NagaPrasanna) ಅವರಿದ್ದ ಪೀಠ ಇಡಿ ಸಮನ್ಸ್‌ಗೆ ತಡೆ ನೀಡಿದ್ದು, ಮುಂದಿನ ಆದೇಶದ ವರೆಗೆ ಯಾವುದೇ ವಿಚಾರಣೆ ನಡೆಸದಂತೆ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿದೆ.

    ಏನಿದು ಕೇಸ್?
    ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಇಡಿ ಮೇಜರ್ ಟ್ವಿಸ್ಟ್ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ (BM Parvathi) ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿತ್ತು. ಇಡಿ ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕೃಷ್ಣನ್ ಅವರು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಬ್ಬರಿಗೂ ನೋಟಿಸ್ ಜಾರಿಮಾಡಿದ್ದರು.

    ಮಂಗಳವಾರ (ಜ.28) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಪಾರ್ವತಿ ಅವರಿಗೆ ಜನವರಿ 3ರಂದು ಮೊದಲ ನೋಟಿಸ್ ನೀಡಿದ್ದು, ಜ.9ಕ್ಕೆ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪುನಃ ಜನವರಿ 24ರಂದು ಎರಡನೇ ನೋಟಿಸ್ ಜಾರಿಮಾಡಲಾಗಿತ್ತು. ದಾಖಲೆ ಸಂಗ್ರಹದ ಅಗತ್ಯವಿದೆ ಎಂಬ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಕೋರಿ ಪಾರ್ವತಿ ಅವರು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ವಯಸ್ಸಿನ ಕಾರಣದಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆಯೂ ಕೋರಿದ್ದಾರೆ ಎನ್ನಲಾಗಿತ್ತು.

    ಇನ್ನು ಬೈರತಿ ಸುರೇಶ್ ಅವರಿಗೂ ಮುರಳಿಕೃಷ್ಣನ್ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಬಂದಿರುವುದನ್ನು ಸ್ವತಃ ಸಚಿವ ಸುರೇಶ್ ಅವರೇ ಖಚಿತಪಡಿಸಿದ್ದರು. ಮಗನ ಮದುವೆ ಇರುವ ಕಾರಣ. ಫೆ.6, 7 ರಂದು ವಿಚಾರಣೆಗೆ ಹಾಜರಾಗುವುದಾಗಿ ಬೈರತಿ ಸುರೇಶ್ ಮನವಿ ಮಾಡಿದ್ದರು. ನೋಟಿಸ್ ನೀಡಿರೋದನ್ನು ಸಿಎಂ ಸಿದ್ದರಾಮಯ್ಯ ಕೂಡ ಖಚಿತಪಡಿಸಿದ್ದರು.

    ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಮಧ್ಯಾಹ್ನ 2:30ರಿಂದ ವಿಚಾರಣೆ ಪ್ರಾರಂಭವಾಗಿತ್ತು. ಇಡಿ ಪರವಾಗಿ ವಕೀಲ ಅರವಿಂದ ಕಾಮತ್ ಹಾಗೂ ಬೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್, ಪಾರ್ವತಿ ಸಿದ್ದರಾಮಯ್ಯ ಅವರ ಪರವಾಗಿ ವಕೀಲ ಸಂದೇಶ್ ಚೌಟಾ ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಇಡಿ ಸಮನ್ಸ್‌ಗೆ ತಡೆ ನೀಡಿತು. ಅಲ್ಲದೇ ಪ್ರಕರಣದ ವಿಚಾರಣೆನ್ನು ಫೆ.10ಕ್ಕೆ ಮುಂದೂಡಿ ಆದೇಶ ಪ್ರಕಟಿಸಿತು.

  • ಇಂದು ಇಡಿ ವಿಚಾರಣೆಗೆ ಹಾಜರಾಗಲ್ಲ: ಡಿ.ಕೆ ಶಿವಕುಮಾರ್

    ಇಂದು ಇಡಿ ವಿಚಾರಣೆಗೆ ಹಾಜರಾಗಲ್ಲ: ಡಿ.ಕೆ ಶಿವಕುಮಾರ್

    ಬೆಂಗಳೂರು: ನ್ಯಾಷನಲ್ ಹೆರಾಲ್ಡ್ (National Herald Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ನೀಡಿದ್ದು, ಆದರೆ ಇಂದು ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡಿ (ED) ವಿಚಾರಣೆಗೆ ದೆಹಲಿಗೆ ಹೋಗಬೇಕಿತ್ತು. ಆದರೆ ನಿನ್ನೆ ಖರ್ಗೆಯವರ ಕಾರ್ಯಕ್ರಮ ಇತ್ತು. ಇಂದು ವಿನಯ್ ಕುಲಕರ್ಣಿಯವರ ಪೂರ್ವ ನಿಯೋಜಿತ ಕಾರ್ಯಕ್ರಮವಿದೆ. ಆದ್ದರಿಂದ ಇಡಿ ವಿಚಾರಣೆಗೆ ಹಾಜರಾಗಲು ಆಗಲ್ಲ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ ಎಂದು ಮನವಿ ಮಾಡಿದ್ದೇನೆ. ಸಂಸದ ಡಿ.ಕೆ.ಸುರೇಶ್ (D.K Suresh) ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಪ್ಲಾನ್: ಏಕನಾಥ್ ಶಿಂಧೆ

    ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಡಿಕೆ ಬ್ರದರ್ಸ್‍ಗೆ ಸಮನ್ಸ್ ನೀಡಿತ್ತು. ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಇಂದು ಕಿತ್ತೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಡಿಕೆಶಿ ಇಂದು ವಿಚಾರಣೆಗೆ ಗೈರಾಗಲಿದ್ದಾರೆ. ಅಲ್ಲದೆ ಬೇರೆ ದಿನಾಂಕ ನಿಗದಿಗೆ ಇ-ಮೇಲ್ ಮೂಲಕ ಇಡಿಗೆ ಮನವಿ ಮಾಡಿದ್ದಾರೆ. ಇಂದು ಸಂಸದ ಡಿಕೆ.ಸುರೇಶ್ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]