Tag: ಇಡಿ ದಾಳಿ

  • ಜಮೀರ್, ಬೇಗ್ ಮನೆಗೆ ಇಡಿ ದಾಳಿ- ಸಿದ್ದರಾಮಯ್ಯನವ್ರೇ ಇದರ ಫಲಾನುಭವಿಯಂತೆ!

    ಜಮೀರ್, ಬೇಗ್ ಮನೆಗೆ ಇಡಿ ದಾಳಿ- ಸಿದ್ದರಾಮಯ್ಯನವ್ರೇ ಇದರ ಫಲಾನುಭವಿಯಂತೆ!

    – ಸಿದ್ದು ಕುಟುಕಿದ ಬಿಜೆಪಿ

    ಬೆಂಗಳೂರು: ಗುರುವಾರ ಬೆಳಗ್ಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ರೋಷನ್ ಬೇಗ್ ಮನೆಗೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ನಡೆಸಿದ್ದಾರೆ. ಇಡಿ ದಾಳಿ ಖಂಡಿಸಿದ ಕಾಂಗ್ರೆಸ್ ಗೆ ಬಿಜೆಪಿ ಕುಟುಕಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಜಮೀರ್ ಅಹ್ಮದ್ ಅವರು ಈಗ ಇಡಿ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯನವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆ! ಎಂದು ಹೇಳುತ್ತಾ ಬುರುಡೆರಾಮಯ್ಯ ಅಂತ ಹ್ಯಾಶ್ ಟ್ಯಾಗ್ ಬಳಸಿ ಜಮೀರ್ ಹಾಗೂ ಸಿದ್ದರಾಮಯ್ಯಗೆ ಟ್ಯಾಗ್ ಮಾಡಿದೆ.

    ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಜಮೀರ್ ಹಾಗೂ ರೋಷನ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಲವು ಗಂಟೆಗಳ ಕಾಲ ಮನೆಯನ್ನು ಜಾಲಾಡಿದ್ದಾರೆ. ಇಡಿ ದಾಳಿ ನಡೆಯುತ್ತಿದ್ದಂತೆಯೇ ಜಮೀರ್ ಹಾಗೂ ರೋಷನ್ ಬೇಗ್ ಅಭಿಮಾನಿಗಳು ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಕಾಂಗ್ರೆಸ್ ನಾಯಕರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕಟುವಾಗಿ ಖಂಡಿಸಿದ್ದರು. ಇದನ್ನೂ ಓದಿ: ಡಿಕೆಶಿ ಅವರೇ ಯಾಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು: ಎಸ್‍ಟಿಎಸ್

    ಇಡಿ ದಾಳಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸಮಾಧಾನ ಆಗಿ ನಾವು ಕರೆದಾಗ ಬರಬೇಕು ಅಂತ ಹೇಳಿ ಹೋಗಿದ್ದಾರೆ. ನೋಟಿಸ್ ಏನೂ ಕೊಟ್ಟಿಲ್ಲ. ಸಹೋದರರನ್ನು ತನಿಖೆ ಮಾಡಿಲ್ಲ. ನನ್ನ ಮನೆ ಹುಡುಕಾಡಿದರು ಅಷ್ಟೆ. ಒಟ್ಟಿನಲ್ಲಿ ಅವರು ಏನಿ ನಿರೀಕ್ಷೆ ಇಟ್ಕೊಂಡು ಬಂದಿದ್ದಾರೋ ಆ ನಿರೀಕ್ಷೆಗೆ ತಕ್ಕಂತೆ ಮನೆಯಲ್ಲಿ ಏನೂ ಸಿಕ್ಕಿಲ್ಲ. ನಾನು ಲೂಟಿ ಮಾಡಿಲ್ಲ. ಅಭಿಮಾನಿಗಳೇ ನನ್ನ ಆಸ್ತಿ. ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೀನಿ ಎಂದು ಜಮೀರ್ ಹೇಳಿದರು.

    3-4 ದೂರು ಬಂದಿತ್ತಂತೆ. ನನ್ನ ವ್ಯವಹಾರ ಎಲ್ಲ ವೈಟ್ ಅಮೌಂಟ್ ಎಂದಿದ್ದಾರೆ. ಎಲ್ಲರದ್ದೂ ನನ್ನ ಮೇಲೆಯೇ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ಐಎಂಎ ಬಗ್ಗೆ ಚರ್ಚೆಯೇ ಆಗಿಲ್ಲ. ಅಧ್ಯಕ್ಷರಿಗೆ ಧನ್ಯವಾದಗಳು. ಮನೆ ಕಟ್ಟಲು 7 ವರ್ಷ ಆಗಿದೆ. ಮನೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ರು ಕೊಟ್ಟಿದ್ದೀನಿ. ನನ್ನ ಮನೆ ಐಷಾರಾಮಿ ಆಗಿದೆ ಎಂದು ತಿಳಿಸಿದ್ದಾರೆ.

    ನನ್ನ 2006ರಲ್ಲಿ ಜಾಗ ತಗೆದುಕೊಂಡಿದ್ದೆ. ನನ್ನ ಮನೆ ಕಟ್ಟಲು 7 ವರ್ಷ ಆಗಿದೆ. ಐಎಂಎ ವಿಚಾರವಾಗಿ ದಾಳಿ ನಡೆದಿಲ್ಲ. ಇಡಿ ಅಧಿಕಾರಿಗಳು ಕೇಳಿದ ದಾಖಲೆ ಕೊಟ್ಟಿದ್ದೇನೆ. ರೋಷನ್ ಬೇಗ್ ನಿವಾಸದ ದಾಳಿ ಬಗ್ಗೆ ಗೊತ್ತಿಲ್ಲ. ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ. ನಾನು ದುಡಿದು ಸಂಪಾದನೆ ಮಾಡಿರುವೆ ಎಂದು ಹೇಳಿದರು.

  • ಡಿಕೆಶಿ ಅವರೇ ಯಾಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು: ಎಸ್‍ಟಿಎಸ್

    ಡಿಕೆಶಿ ಅವರೇ ಯಾಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು: ಎಸ್‍ಟಿಎಸ್

    – ಬೆಂಗಳೂರು ಉಸ್ತುವಾರಿ ಆಸೆ ಬಿಚ್ಚಿಟ್ಟ ಸಚಿವರು
    – ಡಿಕೆಶಿಗೆ ಇಡಿ, ಐಟಿಯ ಲಿಂಕ್ ಜಾಸ್ತಿ ಬೆಳೆದಿದೆ

    ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಯಾಕೆ ಶಾಸಕ ಜಮೀರ್ ಅಹ್ಮದ್ ಅವರ ಮನೆ ಮೇಲೆ ಇಡಿ ದಾಳಿ ಮಾಡಿಸಿರಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

    ಇಡಿ ದಾಳಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಪದೇ ಪದೇ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿಕೆ ಶಿವಕುಮಾರ್ ಅವರಿಗೆ ಅಜೀರ್ಣವಾಗಿರಬೇಕು. ಅದು ಅಲ್ಲದೆ ಡಿಕೆಶಿ ಅವರಿಗೆ ಇಡಿ- ಐಟಿಯ ಲಿಂಕ್ ಜಾಸ್ತಿ ಬೆಳೆದಿದೆ. ಅವರೇ ಯಾಕೆ ಜಮೀರ್ ಅವರ ಮನೆ ಮೇಲೆ ದಾಳಿ ಮಾಡಿಸಿರಬಾರದು. ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ನಾವು ಡಿಕೆ ಶಿವಕುಮಾರ್ ಅವರ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಎಂದು ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ಐಟಿ ಮತ್ತು ಇಡಿ ಅವರ ಕೆಲಸ ಅವರು ಮಾಡುತ್ತಾರೆ. ವ್ಯವಹಾರಗಳು ಸರಿಯಿದ್ದಾಗ ಯಾರು ಅದಕ್ಕೆ ಹೆದರುವ ಅಗತ್ಯವಿಲ್ಲ. ಐಟಿ, ಇಡಿ ಕೇಳುವ ದಾಖಲೆ ಕೊಟ್ಟರೆ ಮುಗಿಯಿತು. ಅದನ್ನು ಬಿಟ್ಟು ಇವರು ಬೇರೆ ರೀತಿಯೇ ಮಾತನಾಡುತ್ತಿದ್ದಾರೆ. ಇವರನ್ನು ನೋಡಿದರೆ ಏನೋ ವ್ಯವಹಾರ ಸರಿಯಿಲ್ಲ ಎನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್‍ಪಿಯಿಂದ ನನಗೆ ಮೋಸವಾಗಿದೆ, ನನ್ನಿಂದ ಬಿಎಸ್‍ಪಿಗೆ ಮೋಸ ಆಗಿಲ್ಲ: ಎನ್. ಮಹೇಶ್

    ಇದೇ ವೇಳೆ ಮೈಸೂರಿನ ಪ್ರವಾಸಿ ತಾಣಗಳು ತೆರದಿರಬೇಕೋ ಅಥವಾ ಮುಚ್ಚಬೇಕೋ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನದೊಳಗೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಡಳಿತವನ್ನು ಕೇಳಿದ್ದೇನೆ. ನಾಳೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಜನರಿಗೂ ತೊಂದರೆ ಆಗದಂತೆ, ವ್ಯಾಪಾರಸ್ಥರಿಗೆ ಅನಾನುಕೂಲವಾಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಲಾಕ್‍ಡೌನ್‍ನಿಂದ ಸಾಕಷ್ಟು ನಷ್ಟವಾಗಿವೆ. ಹೀಗಾಗಿ ಏಕಾಏಕಿ ಸಂಪೂರ್ಣ ಮುಚ್ಚುವುದು ಸಹ ಕಷ್ಟವಗುತ್ತೆ. ನಾಳೆ ಇದೆಲ್ಲವನ್ನು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಬೆಂಗಳೂರು ಉಸ್ತುವಾರಿ ಖಾತೆ ಬಗ್ಗೆ ಮಾತನಾಡಿದ ಅವರು, ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ, ಬೆಂಗಳೂರು ಉಸ್ತುವಾರಿ ಬೇಕು. ಸ್ಥಳೀಯ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ಖಾತೆ ನನಗೆ ಅಗತ್ಯವಿದೆ. ಸಿಎಂ ನಿನಗೆ ಯಾವ ಖಾತೆ ಬೇಕು ಎಂದು ನನಗೆ ಕೇಳಿದರೆ ನಾನು ಬೆಂಗಳೂರು ಖಾತೆ ಬೇಕು ಎಂದು ಹೇಳುತ್ತೇನೆ. ಆದರೆ ಅವರು ಕೇಳುವುದಿಲ್ಲ, ನಾನು ಹೇಳುವುದಿಲ್ಲ ಎಂದು ಗೊತ್ತಿದೆ. ನೀವು ಕೇಳುತ್ತಿದ್ದಿರಿ, ನಾನು ಹೇಳುತ್ತಿದ್ದೇನೆ ಅಷ್ಟೇ ಎಂದು ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

  • ಇಡಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ: ರೋಷನ್ ಬೇಗ್

    ಇಡಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ: ರೋಷನ್ ಬೇಗ್

    – 26 ಗಂಟೆಗಳ ದಾಳಿ ಮಾಡಿದ ಇಡಿ

    ಬೆಂಗಳೂರು: ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಕಾಂಗ್ರೆಸ್ ಮಾಜಿ ಸಚಿವ ರೋಷನ್ ಬೇಗ್ ಅವರು ತಿಳಿಸಿದ್ದಾರೆ.

    26 ಗಂಟೆಗಳ ಇಡಿ ದಾಳಿ ಬಳಿಕ ರೋಷನ್ ಬೇಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಮಗೆ 500, 1000 ಎಕರೆ ಜಾಗಗಳಿಲ್ಲ. ನನ್ನನ್ನು ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ದರೊ ಆ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದೇನೆ. ತನಿಖೆಯೂ 2-3 ಗಂಟೆಯಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಕೇಳಿದ್ದೇ ಕೇಳಿಕೊಂಡು ಏಕೆ ತಡಮಾಡಿದ್ದಾರೆ ಎಂದು ನನಗೂ ಗೊತ್ತಿಲ್ಲ. ಆದರೆ ಅವರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿದ್ದೇನೆ ಎಂದು ಸ್ವಷ್ಟನೆ ನೀಡಿದ್ದಾರೆ.

    ಮನಿ ಲಾಂಡ್ರಿಂಗ್ ಇದೆಯ ಎಂದು ಕೇಳಿದ್ದರು ಆದರೆ ನಾನು ಪ್ರಾಪರ್ಟಿ ಡಾಕ್ಯುಮೆಂಟ್ಸ್ ಕೊಟ್ಟಿದೇವೆ. ಲೋಕಾಯುಕ್ತ, ಐಟಿಗೆ ಹಾಗೂ 2004 ರಿಂದ ಇವರೆಗೆ ಎಲೆಕ್ಷನ್ ಅಫಿಡೆವೆಟ್ಸ್ ಫೈಲ್ ಮಾಡಿರುವುದನ್ನು ಸಹ ವಿಚಾರಿಸಿಕೊಂಡು ಹೋಗಿದ್ದಾರೆ. ಅವರಿಗೆ ಎಲ್ಲ ಮಾಹಿತಿಗಳನ್ನು ಕೊಟ್ಟು ವಿಚಾರಣೆಗೆ ಸಹಕಾರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

  • ನನ್ನ ಆಸ್ತಿಯೆಲ್ಲ ಬಡವರ ಬಳಿಯೇ ಇದೆ: ಜಮೀರ್

    ನನ್ನ ಆಸ್ತಿಯೆಲ್ಲ ಬಡವರ ಬಳಿಯೇ ಇದೆ: ಜಮೀರ್

    – ನನಗೆ ಇಡಿ ನೋಟಿಸ್ ಕೊಟ್ಟಿಲ್ಲ
    – ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ

    ಬೆಂಗಳೂರು: ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿಯವರು ಬಂದಿದ್ದಾರೆ. ಮನೆ ವಿಚಾರಕ್ಕೆ ಅವರು ಬಂದಿದ್ರು. ಯಾವಾಗ ಮನೆ ಕಟ್ಟಿದ್ದೀರಿ, ಯಾವಾಗ ಖರೀದಿಸಿದ್ದೀರಿ. ಅದರ ಅವಂಟ್ ಡೀಟೆಲ್ಸ್ ಎಲ್ಲಿ ಅಂತ ಕೇಳಿದ್ರು. ನಾನು ಅವರಿಗೆ ಎಲ್ಲಾ ಮಾಹಿತಿಗಳನ್ನು ನೀಡಿದ್ದೇನೆ. ನನ್ನ ಎಲ್ಲಾ ಸ್ತಿ ಬಡವರ ಬಳಿಯೇ ಇದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

    ಇಡಿ ದಾಳಿ ಬಳಿಕ ಮೊದಲ ಬಾರಿ ಮಾಧ್ಯಮಗಳೀಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸಮಾಧಾನ ಆಗಿ ನಾವು ಕರೆದಾಗ ಬರಬೇಕು ಅಂತ ಹೇಳಿ ಹೋಗಿದ್ದಾರೆ. ನೋಟಿಸ್ ಏನೂ ಕೊಟ್ಟಿಲ್ಲ. ಸಹೋದರರನ್ನು ತನಿಖೆ ಮಾಡಿಲ್ಲ. ನನ್ನ ಮನೆ ಹುಡುಕಾಡಿದರು ಅಷ್ಟೆ. ಒಟ್ಟಿನಲ್ಲಿ ಅವರು ಏನಿ ನಿರೀಕ್ಷೆ ಇಟ್ಕೊಂಡು ಬಂದಿದ್ದಾರೋ ಆ ನಿರೀಕ್ಷೆಗೆ ತಕ್ಕಂತೆ ಮನೆಯಲ್ಲಿ ಏನೂ ಸಿಕ್ಕಿಲ್ಲ. ನಾನು ಲೂಟಿ ಮಾಡಿಲ್ಲ. ಅಭಿಮಾನಿಗಳೇ ನನ್ನ ಆಸ್ತಿ. ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೀನಿ ಎಂದರು. ಇದನ್ನೂ ಓದಿ: ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ

    3-4 ದೂರು ಬಂದಿತ್ತಂತೆ. ನನ್ನ ವ್ಯವಹಾರ ಎಲ್ಲ ವೈಟ್ ಅಮೌಂಟ್ ಎಂದಿದ್ದಾರೆ. ಎಲ್ಲರದ್ದೂ ನನ್ನ ಮೇಲೆಯೇ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ಐಎಂಎ ಬಗ್ಗೆ ಚರ್ಚೆಯೇ ಆಗಿಲ್ಲ. ಅಧ್ಯಕ್ಷರಿಗೆ ಧನ್ಯವಾದಗಳು. ಮನೆ ಕಟ್ಟಲು 7 ವರ್ಷ ಆಗಿದೆ. ಮನೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ರು ಕೊಟ್ಟಿದ್ದೀನಿ. ನನ್ನ ಮನೆ ಐಷಾರಾಮಿ ಆಗಿದೆ ಎಂದು ತಿಳಿಸಿದ್ದಾರೆ.

    ನನ್ನ 2006ರಲ್ಲಿ ಜಾಗ ತಗೆದುಕೊಂಡಿದ್ದೆ. ನನ್ನ ಮನೆ ಕಟ್ಟಲು 7 ವರ್ಷ ಆಗಿದೆ. ಐಎಂಎ ವಿಚಾರವಾಗಿ ದಾಳಿ ನಡೆದಿಲ್ಲ. ಇಡಿ ಅಧಿಕಾರಿಗಳು ಕೇಳಿದ ದಾಖಲೆ ಕೊಟ್ಟಿದ್ದೇನೆ. ರೋಷನ್ ಬೇಗ್ ನಿವಾಸದ ದಾಳಿ ಬಗ್ಗೆ ಗೊತ್ತಿಲ್ಲ. ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ. ನಾನು ದುಡಿದು ಸಂಪಾದನೆ ಮಾಡಿರುವೆ ಎಂದು ತಿಳಿಸಿದರು.

  • ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

    ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

    ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

    ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐಟಿ, ಇಡಿ ಬಳಸಿಕೊಂಡು ಕಿರುಕುಳ ನೀಡುವ ಬಿಜೆಪಿಯ ವರ್ತನೆ ಖಂಡನೀಯ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!

    ಇಡಿ ದಾಳಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎರಡು ವರ್ಷದ ಹಿಂದೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೆ ಎಂದು ಜಮೀರ್ ಹೇಳಿದ್ದರು. ಈಗ ದಾಳಿ ನಡೆಯುವ ಅವಶ್ಯಕತೆ ಇರಲಿಲ್ಲ. ಈಗ ಕಿರುಕುಳ ನೀಡುತ್ತಿರೋದು ಯಾಕೆ? ಈ ಕಿರುಕುಳ ಹೇಗೆ ಇರುತ್ತೆ ನಂಗೂ ಗೊತ್ತಿದೆ. ಈಗ ತೊಂದರೆ ಕೊಡುತ್ತಿರುವುದು ಸರಿ ಇಲ್ಲ. ಯಾರ ಅನುಕೂಲಕ್ಕೆ ಈ ದಾಳಿ ನಡೆದಿದೆ ಗೊತ್ತಿಲ್ಲ ಎಂದರು. ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು. ಇದನ್ನೂ ಓದಿ: ಧರ್ಮ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದೆಯೂ ಅದೇ ಮಾಡಬೇಡಿ: ಶೃಂಗೇರಿ ಶಾಸಕ ರಾಜೇಗೌಡ

  • ಬಂಧನದ ಭೀತಿಯಲ್ಲಿ ಜಮೀರ್ ಅಹ್ಮದ್ ಖಾನ್, ರೋಷನ್ ಬೇಗ್!

    ಬಂಧನದ ಭೀತಿಯಲ್ಲಿ ಜಮೀರ್ ಅಹ್ಮದ್ ಖಾನ್, ರೋಷನ್ ಬೇಗ್!

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್ ಬೇಗ್ ಜಾರಿ ನಿರ್ದೇಶನಾಲಯದ ಬಂಧನದ ಭೀತಿಯಲ್ಲಿದ್ದಾರೆ. ಇಂದು ಬೆಳಗ್ಗೆ ಇಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.

    ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿದ್ದರು. 2.5 ಕೋಟಿ ಬೆಲೆ ಬಾಳುವ ಆಸ್ತಿಯನ್ನು 5 ಕೋಟಿ ರೂ.ಗೆ ಮಾರಿದ್ದರು. ಇದೇ ನಿವೇಶನ ಜಮೀರ್ ಅಹ್ಮದ್ ಅವರಿಗೆ ಕಂಟಕವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಸಂಬಂಧ ಎಸ್‍ಐಟಿ ಮತ್ತು ಸಿಬಿಐ ವಿಚಾರಣೆಗೂ ಜಮೀರ್ ಅಹ್ಮದ್ ಹಾಜರಾಗಿದ್ದರು. ಇದನ್ನೂ ಓದಿ: ಐಎಂಎ ದೋಖಾಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್-ಮನ್ಸೂರ್ ಖಾನ್ ಜೊತೆಗೆ ಸಚಿವ ಜಮೀರ್ ಗೂ ನಂಟು?

    ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರು ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇತ್ತ ಜಮೀರ್ ಅಹ್ಮದ್ ನಿವಾಸದ ದಾಳಿಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯಾಹ್ನ 12 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಇದನ್ನೂ ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ – ಮಾಜಿ ಸಚಿವ ಜಮೀರ್ ಗೆ ಭರ್ತಿ 10 ಗಂಟೆ ಡ್ರಿಲ್

  • ಹೆಚ್‌ಡಿಡಿ ದೂರಿನಿಂದಲೇ ಡಿಕೆಶಿ ಮೇಲೆ ಇಡಿ ದಾಳಿ: ಕೆ.ಎನ್ ರಾಜಣ್ಣ

    ಹೆಚ್‌ಡಿಡಿ ದೂರಿನಿಂದಲೇ ಡಿಕೆಶಿ ಮೇಲೆ ಇಡಿ ದಾಳಿ: ಕೆ.ಎನ್ ರಾಜಣ್ಣ

    ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಬರೆದ ಮೂಗರ್ಜಿಯಿಂದಲೇ ಡಿಕೆ ಶಿವಕುಮಾರ್ ಮೇಲೆ ಇ.ಡಿ ದಾಳಿ ನಡೆದು ಜೈಲಿಗೆ ಹೋಗುವಂತಾಯಿತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಾಜಿ ಪ್ರಧಾನಿಗಳು ಯಾವಾಗಲೂ ಮೂಗರ್ಜಿ ಗಿರಾಕಿಗಳು. ದೇವೇಗೌಡರೇ ಡಿಕೆಶಿ ವಿರುದ್ಧ ಈ ಹಿಂದೆ ಮೂಗರ್ಜಿ ಹಾಕಿರುತ್ತಾರೆ. ಅವೆಲ್ಲಾವನ್ನೂ ಕ್ರೋಢಿಕರಿಸಿ ಅವರು ದಾಳಿ ನಡೆಸಿ ಬಂಧಿಸಿದ್ದಾರೆ. ತಾನು ಮೂಗರ್ಜಿ ಹಾಕಿಲ್ಲ ಎಂದು ದೇವೇಗೌಡರು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ದೇವೇಗೌಡರು ಮೂಗರ್ಜಿ ಹಾಕಿರುವ ಬಗ್ಗೆ ಸ್ವತಃ ಡಿಕೆಶಿಗೂ ಗೊತ್ತು ಎಂದ ರಾಜಣ್ಣ ತಮ್ಮ ಹೇಳಿಕೆಯನ್ನ ಪ್ರಮಾಣೀಕರಿಸುವ ಪ್ರಯತ್ನ ಮಾಡಿದ್ದಾರೆ. ಮೈತ್ರಿ ಸರ್ಕಾರ ರಚಿಸೋ ಮುಂಚೆ ಡಿಕೆಶಿ ವಿರುದ್ಧ ದೇವೇಗೌಡರು ಎಲ್ಲಾ ರೀತಿಯ ಕೆಲಸ ಮಾಡಿದ್ದಾರೆ. ಪ್ರಧಾನಿ ಮಂತ್ರಿ ಅಲ್ಲಾ ಇವರು ಪಂಚಾಯ್ತಿ ಮೆಂಬರ್ ಅಂತಾ ಡಿಕೆಶಿನೇ ಹೇಳಿದ್ದರು. ಮೈತ್ರಿ ಸರ್ಕಾರ ರಚನೆಯಾದಾಗಿಂದ ದೇವೇಗೌಡರ ಕುಟುಂಬ ಡಿಕೆಶಿ ಪರ ಇದ್ದಾರೆ ಅಷ್ಟೇ. ಡಿಕೆಶಿ ಮೇಲೆ ಈಗ ದೇವೇಗೌಡರ ಕುಟುಂಬ ತೋರುವ ಅನುಕಂಪ, ಎಸ್‌ಎಂ ಕೃಷ್ಣ ಅವರ ಅಳಿಯ ಕಾಫಿ ಡೇ ಸಿದ್ದಾರ್ಥ ಮೇಲೆ ಯಾಕೆ ತೋರುತಿಲ್ಲ. ಸಿದ್ಧಾರ್ಥ 40-50 ಸಾವಿರ ಜನರಿಗೆ ಉದ್ಯೋಗವಾದ್ರೂ ನೀಡಿದ್ರು. ಅಂಥವರ ಬಗ್ಗೆ ಕಾಳಜಿ ತೋರುವ ಬದಲು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಡಿಕೆಶಿ ಮೇಲೆ ಅನುಕಂಪ ತೋರುತಿದ್ದಾರೆ ಎಂದು ರಾಜಣ್ಣ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.

    ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದಲ್ಲಿ ಮಾತನಾಡಿದ ರಾಜಣ್ಣ, ಹೆಚ್ಡಿಕೆ ವಚನಭ್ರಷ್ಟರು ಅನ್ನೋದು ಹಲವು ಬಾರಿ ರುಜುವಾತಾಗಿದೆ. ಅವರು ಯಾವುದೇ ಭರವಸೆ ಕೊಟ್ಟರು ಅದು ನಂಬಿಕೆಗೆ ಅರ್ಹವಲ್ಲ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿಗಳ ಕುಟುಂಬ ಅನ್ನೋ ಕಾರಣಕ್ಕೆ ಫೋನ್ ಕದ್ದಾಲಿಕೆ ತಪ್ಪುಗಳು ಮುಚ್ಚಿಹೋಗಬಹುದು. ಫೋನ್ ಕದ್ದಾಲಿಕೆ ಎಲ್ಲಾ ಸಿಎಂ ಗಳ ಕಾಲದಲ್ಲಿ ನಡೆದಿದ್ದು, ಯಾರು ಕೂಡ ಲಿಖಿತವಾಗಿ ಆದೇಶ ಮಾಡುವುದಿಲ್ಲ. ಮೌಖಿಕವಾಗಿ ಹೇಳಿರ್ತಾರೆ ಅಷ್ಟೇ. ಇವರ ತಪ್ಪಿಗೆ ಅಧಿಕಾರಿಗಳು ಬಲಿಯಾಗ್ತಾರೆ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.