Tag: ಇಡಿ ದಾಳಿ

  • ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

    ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

    ಮುಂಬೈ: ಹೈದರಾಬಾದ್‌ ಹಾಗೂ ಮುಂಬೈನ (Mumbai and Hyderabad) 13 ಸ್ಥಳಗಳಲ್ಲಿ ಎರಡು ದಿನಗಳ ಕಾಲ ನಡೆಸಿದ ದಾಳಿಯಲ್ಲಿ ಒಟ್ಟು 31 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.

    2009ರಿಂದ ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್‌ (VVMC) ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನ ನಿರ್ಮಿಸಿ ಭಾರೀ ಅಕ್ರಮ ನಡೆಸಿರುವ ಆರೋಪದ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ 9.04 ಕೋಟಿ ರೂ. ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ವಿವಿಎಂಸಿಯ ಉಪ ನಿರ್ದೇಶಕ (ಪಟ್ಟಣ ಯೋಜನೆ) ವೈ.ಎಸ್ ರೆಡ್ಡಿ ಅವರ ಮನೆಯಿಂದಲೇ ಬಹುಪಾಲು ಆಭರಣ, ನಗದು ಜಪ್ತಿಯಾಗಿದೆ ಎಂದು ವರದಿಗಳು ತಿಳಿಸಿವೆ.

    ವಸೈ ವಿರಾರ್ ನಗರದಲ್ಲಿ ʻಕೊಳಚೆನೀರಿನ ಸಂಸ್ಕರಣಾ ಘಟಕʼ ಮತ್ತು ʻಡಂಪಿಂಗ್ ಗ್ರೌಂಡ್‌ʼ (Dumping Ground) ನಿರ್ಮಾಣಕ್ಕಾಗಿ ಭೂಮಿಯನ್ನ ಕಾಯ್ದಿರಿಸಲಾಗಿತ್ತು. ಆದ್ರೆ ಕಾಲಕ್ರಮೇಣ 41 ಕಟ್ಟಡಗಳನ್ನ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    2009ರಿಂದ ವಿವಿಧ ವಿವಿಎಂಸಿ ಅಧಿಕಾರಿಗಳ ಸಹಕಾರದೊಂದಿಗೆ ಈ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಭಾರೀ ಅಕ್ರಮ ನಡೆದಿದೆ. ದಾಳಿ ಸಂದರ್ಭದಲ್ಲಿ ಇದಕ್ಕೆ ಪೂರಕವಾದ ದಾಖಲೆಗಳು ಪತ್ತೆಯಾಗಿವೆ. ಆರೋಪಿ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಅಕ್ರಮ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದಾರೆ. ನಂತರ ಸರ್ಕಾರಿ ದಾಖಲೆಗಳನ್ನು ನಕಲು ಮಾಡಿ ಮನೆಗಳನ್ನು ಜನರಿಗೆ ಮಾರಾಟ ಮಾಡಿದ್ದಾರೆ. ಅಪಾರ್ಟ್ಮೆಂಟ್‌ಗಳಲ್ಲಿ ಫ್ಲಾಟ್‌ ಖರೀದಿಸುವಂತೆ ಜನರನ್ನ ದಾರಿ ತಪ್ಪಿಸಿದ್ದಾರೆ ಎಂದು ಇಡಿ ತನಿಖಾ ವರದಿಯಲ್ಲಿ ತಿಳಿಸಿದೆ.

    ಈ ಕುರಿತು ಬಿಲ್ಡರ್‌ಗಳು, ಸ್ಥಳೀಯ ಸಹಾಯಕರು ಮತ್ತು ಇತರರ ವಿರುದ್ಧ ಮೀರಾ ಭಯಾಂದರ್ ಪೊಲೀಸ್ ಆಯುಕ್ತರು ದಾಖಲಿಸಿದ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಿದೆ.

    2 ದಿನ 13 ಸ್ಥಳಗಳಲ್ಲಿ ದಾಳಿ:
    ಮುಂಬೈ ವಲಯ ಕಚೇರಿಯ ಜಾರಿ ನಿರ್ದೇಶನಾಲಯವು ಇದೇ ಮೇ 14, 15ರಂದು ಮುಂಬೈ ಮತ್ತು ಹೈದರಾಬಾದ್‌ನಾದ್ಯಂತ 13 ವಿಭಿನ್ನ ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆಯಲ್ಲಿ 9.04 ಕೋಟಿ ರೂ. (ಅಂದಾಜು) ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣ, ಬೆಳ್ಳಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

  • ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

    ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

    ಬೆಂಗಳೂರು/ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡ ಮನೆ ಮೇಲೆ ಎರಡು ದಿನಗಳ ಹಿಂದೆ ಇಡಿ ದಾಳಿ ನಡೆಸಿತ್ತು. ದಾಳಿ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿರುವುದಾಗಿ ಇಡಿ ಪ್ರಕಟಣೆ ಮೂಲಕ ತಿಳಿಸಿದೆ.

    ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಸಹೋದರಿ ಎಂದು ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಐಶ್ವರ್ಯಗೌಡ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ತನಿಖೆಯ ಮುಂದುವರೆದ ಭಾಗವಾಗಿ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಮನೆ, ಕಚೇರಿ, ಶಾಸಕ ವಿನಯ್ ಕುಲಕರ್ಣಿ ಮನೆ ಸೇರಿ ಒಟ್ಟು 14 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದನ್ನೂ ಓದಿ: ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಯಕ್ಷಗಾನ ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

    ಗುರುವಾರ ಬೆಳಗ್ಗೆ ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿತ್ತು. ಜೊತೆಗೆ ಭದ್ರತೆಗೆ ಸಿಆರ್‌ಪಿಎಫ್ (CRPF) ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದರು. ಇಡಿ ದಾಳಿಯ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಒಂದಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿರುವ ಬಗ್ಗೆ ಇಡಿ ಸ್ಪಷ್ಟಪಡಿಸಿದೆ.

    ದಾಳಿ ಬಳಿಕ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡಳನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. 14 ದಿನ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ

  • `ಬಂಗಾರಿ’ಗೌಡಗೆ ED ಶಾಕ್: ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್

    `ಬಂಗಾರಿ’ಗೌಡಗೆ ED ಶಾಕ್: ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್

    ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡಗೆ (Aishwarya Gowda) ಇದೀಗ ಇಡಿ ಶಾಕ್ (ED Raid) ನೀಡಿದೆ. ಮಂಡ್ಯದ (Mandya) ನಿವಾಸಕ್ಕೆ ಬೆಳ್ಳಂಬೆಳಗ್ಗೆ ಎಂಟ್ರಿಕೊಟ್ಟ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಹಲವು ಮಹತ್ವದ ದಾಖಲೆ ವಸಪಡಿಸಿಕೊಂಡಿದ್ದಾರೆ.

    ಐಶ್ವರ್ಯಗೌಡ ಹೆಸರು ಕೆಲದಿನಗಳಿಂದ ರಾಜ್ಯದ್ಯಂತ ಬಾರಿ ಸದ್ದು ಮಾಡುತ್ತಿದೆ. ಚಿನ್ನ ವಂಚನೆ ಪ್ರಕರಣದಿಂದ ಹೊರ ಬಂದ ಈ ಹೆಸರು ರಾಜಕಾರಣಿಗಳು ಹಾಗೂ ಸಿನಿಮಾ ನಟರ ಬುಡವನ್ನ ಅಲ್ಲಾಡಿಸಿತ್ತು. ಅದಾದ ಬಳಿಕ ಈಕೆಯ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದೇ ವಿಚಾರ ಇಟ್ಟುಕೊಂಡು ಇದೀಗ ಇಡಿ ಕೂಡ ಈಕೆಯ ಬೆನ್ನು ಬಿದ್ದಿದೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

    ಇಂದು ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದಾರೆ.

    ಚಿನ್ನ ವಂಚನೆ, ಮನಿ ಡಬ್ಲಿಂಗ್, ಸೈಟ್ ವಂಚನೆ ಸೇರಿ ಐಶ್ವರ್ಯಗೌಡ ಮೇಲೆ ಹಲವು ಆರೋಪಗಳಿವೆ. ಈ ಎಲ್ಲಾ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುವ ಕಾರಣ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಷ್ಟೇ ಅಲ್ಲದೆ ಈಕೆಗೆ ಹಲವು ರಾಜಕಾರಣಿ ಹಾಗೂ ಸಿನಿಮಾ ನಟರ ಸಂಪರ್ಕ ಇದೆ ಎನ್ನುವ ಆರೋಪ ಇರುವ ಕಾರಣ, ಐಶ್ವರ್ಯ ಗೌಡಳ ವ್ಯವಹಾರದ ಇಂಚಿಂಚು ಮಾಹಿತಿಯನ್ನು ಇಡಿ ಅಧಿಕಾರಿಗಳು ಕಲೆಯಾಕಿದ್ದು, ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

    ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

  • ಬೋವಿ ನಿಗಮದ ಬಹುಕೋಟಿ ಹಗರಣ ಕೇಸ್‌ – 10 ಕಡೆ ಇಡಿ ದಾಳಿ

    ಬೋವಿ ನಿಗಮದ ಬಹುಕೋಟಿ ಹಗರಣ ಕೇಸ್‌ – 10 ಕಡೆ ಇಡಿ ದಾಳಿ

    ಬೆಂಗಳೂರು: ಬೋವಿ ನಿಗಮ ಹಗರಣ ಸಂಬಂಧ 10 ಕಡೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆದಿದೆ.

    ಬೆಂಗಳೂರು, ಶಿವಮೊಗ್ಗದಲ್ಲಿ ತಲಾ ಒಂದೊಂದು ಕಡೆ ಇಡಿ ರೇಡ್ ಮಾಡಿದೆ. ಮಾಜಿ ಎಂಡಿ ಲೀಲಾವತಿ ಸೇರಿ ಹಲವರ ಮನೆ, ಕಚೇರಿಗಳಲ್ಲಿ, ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ಬೀದರ್ | ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

    ಗಂಗಾ ಕಲ್ಯಾಣ ಯೋಜನೆ ಸೇರಿ ಹಲವು ಯೋಜನೆಗಳಲ್ಲಿ 160 ಕೋಟಿ ರೂಪಾಯಿ ಗೋಲ್ಮಾಲ್‌ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.

  • SDPI ಪ್ರಧಾನ ಕಚೇರಿ ಸೇರಿ 12 ಸ್ಥಳಗಳ ಮೇಲೆ ಇಡಿ ದಾಳಿ

    SDPI ಪ್ರಧಾನ ಕಚೇರಿ ಸೇರಿ 12 ಸ್ಥಳಗಳ ಮೇಲೆ ಇಡಿ ದಾಳಿ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಪ್ರಧಾನ ಕಚೇರಿ ಸೇರಿ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

    ಎಸ್‌ಡಿಪಿಐ (SDPI) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಬಂಧನದ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ. ನವದೆಹಲಿಯಲ್ಲಿರುವ ಎಸ್‌ಡಿಪಿಐ ಪ್ರಧಾನ ಕಚೇರಿ, ಕೇರಳದ ತಿರುವನಂತಪುರಂ ಮತ್ತು ಮಲಪ್ಪುರಂ, ಬೆಂಗಳೂರು, ಆಂಧ್ರಪ್ರದೇಶದ ನಂದ್ಯಾಲ್, ಥಾಣೆ, ಚೆನ್ನೈ, ಜಾರ್ಖಂಡ್‌ನ ಪಾಕೂರ್, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರ ಸೇರಿದಂತೆ 12 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇದನ್ನೂ ಓದಿ: ಹಾಸನ| ರಸ್ತೆ ವಿಚಾರಕ್ಕೆ ಸೈನಿಕ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

    ಎಸ್‌ಡಿಪಿಐಯು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾಗಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ, 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಿತ್ತು. ಎಸ್‌ಡಿಪಿಐಯು ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ಹಿನ್ನೆಲೆ ನಿಷೇಧ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಒಂದೂವರೆ ತಿಂಗಳ ಮಗುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿದ ವೈದ್ಯ

    ಪಿಎಫ್‌ಐ ನಿಷೇಧದ ಬಳಿಕ 2009ರಲ್ಲಿ ಸ್ಥಾಪನೆಯಾದ ಮತ್ತು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಸ್‌ಡಿಪಿಐ ಮೂಲಕ ಪಿಎಫ್‌ಐ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಡಿ ಆರೋಪಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಪಿಎಫ್‌ಐ ಬ್ಯಾಂಕ್ ಖಾತೆಗಳಿಂದ ಎಸ್‌ಡಿಪಿಐಗೆ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ: ಸಿ.ಟಿ.ರವಿ

    ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಅವರನ್ನು ಮಾ. 3ರಂದು ಬಂಧಿಸಿರುವ ಇಡಿ ಅಧಿಕಾರಿಗಳು ಎಸ್‌ಡಿಪಿಐ ಮತ್ತು ನಿಷೇಧಿತ ಪಿಎಫ್‌ಐ ನಡುವಿನ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಾಳಿಯ ಮೂಲಕ ಎಸ್‌ಡಿಪಿಐ ಆರ್ಥಿಕ ವ್ಯವಹಾರಗಳನ್ನು ಇಡಿ ಪರಿಶೀಲಿಸುತ್ತಿದೆ.

  • MUDA Scam | ನಾಪತ್ತೆಯಾಗಿದ್ದ ಮಾಜಿ ಆಯುಕ್ತ ಇಡಿ ಮುಂದೆ ಹಾಜರ್‌, ಬಂಧನ ಭೀತಿಯಿಂದ ಪಾರು!

    MUDA Scam | ನಾಪತ್ತೆಯಾಗಿದ್ದ ಮಾಜಿ ಆಯುಕ್ತ ಇಡಿ ಮುಂದೆ ಹಾಜರ್‌, ಬಂಧನ ಭೀತಿಯಿಂದ ಪಾರು!

    ಬೆಂಗಳೂರು/ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ (MUDA Scam)ಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ (ED) ದಾಳಿ ನಡೆಸಿದ ವೇಳೆ ನಾಪತ್ತೆಯಾಗಿದ್ದ ಮುಡಾದ ಮಾಜಿ ಆಯುಕ್ತ, ಐಎಎಸ್‌ ಅಧಿಕಾರಿ ದಿನೇಶ್‌ಕುಮಾರ್‌ (Dinesh Kumar) ಕೊನೆಗೂ ಪತ್ತೆಯಾಗಿದ್ದಾರೆ. ಶನಿವಾರವಾದ ಇಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

    ಕಳೆದ ಅಕ್ಟೋಬರ್‌ 28ರಂದು ದಿನೇಶ್‌ ಕುಮಾರ್‌ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡಿ ಅಧಿಕಾರಿಗಳ ದಾಳಿಯ ವೇಳೆ ವಾಕಿಂಗ್‌ಗೆ ತೆರಳಿದ್ದ ದಿನೇಶ್‌ ಕುಮಾರ್‌ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ಅದರಂತೆ ಶನಿವಾರ ಸಂಜೆ ವಿಚಾರಣೆ ಎದುರಿಸಿ ಮನೆಗೆ ಹೊರಟಿದ್ದಾರೆ. ಸದ್ಯ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್‌ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ: ಮುಡಾದ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಬಿಡುಗಡೆ – ಒಬ್ಬೊಬ್ಬರಿಗೆ 20ರಿಂದ 25 ಸೈಟ್ ಹಂಚಿಕೆ

  • ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!

    ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!

    – ಇ.ಡಿ ಕೇಳಿದ 9 ಪ್ರಶ್ನೆಗಳು `ಪಬ್ಲಿಕ್ ಟಿವಿ’ಗೆ ಲಭ್ಯ

    ಮೈಸೂರು: ಮುಡಾ ಹಗರಣ ಹಿನ್ನೆಲೆ ಇಡಿ ಟೀಂ ಬೆಂಗಳೂರು ಮತ್ತು ಮೈಸೂರಿನಲ್ಲಿ ಇಡಿ ದಾಳಿ (ED Raid) ಮಾಡಿದೆ. ದಾಳಿ ವೇಳೆ ಇಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ (DB Natesh) ವಿಚಾರಣೆ ಮುಕ್ತಾಯ ಮಾಡಿ ಪ್ರಮುಖ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ತಮ್ಮ ರಣಬೇಟೆ ಮುಂದುವರಿಸಲಿದ್ದಾರೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಆಕ್ರಮ ಹಂಚಿಕೆ ಹಗರಣದ (MUDA Scam) ತನಿಖೆಯನ್ನು ಇಡಿ ಚುರುಕುಗೊಳಿಸಿದೆ. ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ರಾಕೇಶ್ ಪಾಪಣ್ಣ (Rakesh Papanna) ಕೆಲವು ರಾಜಕಾರಣಿಗಳ ಬೇನಾಮಿ ಇರಬಹುದು ಹಾಗೂ ಮುಡಾದ ಹಲವು ವ್ಯವಹಾರಗಳಲ್ಲಿ ರಾಕೇಶ್ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಹಿನ್ನೆಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 2 ದಿನಗಳ ಕಾಲ 5 ಅಧಿಕಾಗಳಿಂದ ಸತತ 35 ಗಂಟೆಗಳ ತನಿಖೆ ನಡೆಸಿ ಬಳಿಕ ಇಡಿ ಅಧಿಕಾರಿಗಳು ವಾಪಸ್ ಆಗಿದ್ದಾರೆ.

    ಇತ್ತ ಬೆಂಗಳೂರಿನ (Bengaluru) ಮಲ್ಲೇಶ್ವರ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ಮಂಗಳವಾರ ಬೆಳ್ಳಿಗ್ಗೆ 8 ಗಂಟೆಯಿಂದ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ರು. ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿದ್ದರ ಬಗ್ಗೆ ದಾಖಲೆ ತಡಕಾಡಿದ್ರು. ಆದ್ರೆ ಇಡಿ ತನಿಖೆಗೆ ಮಾಜಿ ಆಯುಕ್ತ ನಟೇಶ್ ಸಹಕರಿಸದೇ ನಾನು ಪ್ರಕರಣದಲ್ಲಿ ತಪ್ಪೇ ಮಾಡಿಲ್ಲ. ಸರ್ಕಾರದ ಆದೇಶ ಚಾಚು ತಪ್ಪದೆ ಪರಿಪಾಲನೆ ಮಾಡಿದ್ದೀನಿ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲವೆಂದರು. ಸಂಜೆವರೆಗೂ ನಟೇಶ್ ಮನೆಯಲ್ಲಿ ಶೋಧ ಮಾಡಿದ ಅಧಿಕಾರಿಗಳು ಎರಡು ಬ್ಯಾಗ್‌ನಲ್ಲಿ ದಾಖಲೆಗಳನ್ನ ಕೊಂಡೊಯ್ದರು. ತನಿಖೆಗೆ ಸಹಕರಿಸದ ಕಾರಣ ನಟೇಶ್‌ನನ್ನು ಅಧಿಕಾರಿಗಳು ವಶಕ್ಕೆ ಪಡೆದ್ರು. ನಂತರ ಶಾಂತಿನಗರದ ಇಡಿ ಕಚೇರಿಗೆ ವಿಚಾರಣೆ ಮಾಡಿ ಕಳುಹಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿಂತೆ ಮುಂದಿನ ವಾರ ವಿಚಾರಣೆಗೆ ಹಾಜರಾಗಲು ರಾಕೇಶ್ ಪಾಪಣ್ಣಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಮುಡಾ ಹಗರಣದ ತನಿಖೆಯಲ್ಲಿ ಇನ್ನು ಯರ‍್ಯಾರಿಗ ಹಬ್ಬ ಕಾದಿದೆ ನೋಡಬೇಕಿದೆ. ಇದನ್ನೂ ಓದಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ 33000 ಸಾವು – ಬೆಂಗ್ಳೂರಿನ ಸ್ಥಿತಿ ಏನು? 

    ಇಡಿ ಅಧಿಕಾರಿಗಳ ಪ್ರಶ್ನೆಗಳು ಪಬ್ಲಿಕ್ ಟಿವಿಗೆ ಲಭ್ಯ:
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಸೈಟು ಹಂಚಿಕೆ ವಿಚಾರವಾಗಿ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದೆ ಎಂಬ ಮಾಹಿತಿ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಜಯರಾಮ್ ಎಂಬವರಿಗೆ ಸೇರಿದ್ದ ಎಂಎಂಜಿ ಕನ್ಸ್‌ಸ್ಟ್ರಕ್ಷನ್‌ ಕಚೇರಿ ಹಾಗೂ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದಲ್ಲೇ ಅಧಿಕಾರಿಗಳು ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದಾರೆ. ಪ್ರತಿಯೊಂದು ಪ್ರಶ್ನೆ ಮತ್ತು ಉತ್ತರವನ್ನು ಕಚೇರಿಯಲ್ಲೇ ಕುಳಿತು ಟೈಪ್ ಮಾಡಿಕೊಂಡಿದ್ದಾರೆ. ಜೊತೆಗೆ ದಾಖಲೆ ಪರಿಶೀಲನೆಯ ನಂತರ ಅನುಮಾನದ ಮೇಲೆ ಒಂದುಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. `ಇ.ಡಿ ಕೇಳಿದ ಪ್ರಶ್ನೆಗಳು ಉನ್ನತ ಮೂಲಗಳಿಂದ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮರ ಕಡಿದ ಆರೋಪ – ಸಚಿವರ ಆರೋಪಕ್ಕೆ ಚಿತ್ರತಂಡದ ಸ್ಪಷ್ಟನೆ ಏನು?

    ಇ.ಡಿ ಪ್ರಶ್ನೆಗಳೇನು?
    1. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ಎಷ್ಟು ಬ್ಯಾಂಕ್ ಅಕೌಂಟ್ ಗಳನ್ನ ಹೊಂದಿದ್ದೀರಾ?
    2. ಸಂಘದ ಸಾಮಾನ್ಯ ಸಭೆ ಯಾವಾಗ ನಡೆಸಿದ್ದೀರ? ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದು?
    3. ಸಹಕಾರ ಸಂಘದ ನಿರ್ದೇಶಕರ ವಿವರ ತಿಳಿಸಿ?
    4. ಇಲ್ಲಿಯವರೆಗೆ ಎಷ್ಟು ಲೇಔಟ್ ನಿರ್ಮಾಣ ಮಾಡಿದ್ದೀರಾ?
    5. ಎಷ್ಟು ಜನರಿಂದ ಮುಂಗಡವಾಗಿ ಹಣ ಪಡೆದಿದ್ದೀರಾ?
    6. ಇನ್ನೂ ಎಷ್ಟು ಜನರಿಗೆ ನಿವೇಶನ ಕೊಡಬೇಕು?
    7. ಹಲವು ಬ್ಯಾಂಕ್ ಖಾತೆಗಳಿಗೆ ಕೆವೈಸಿ ಲಿಂಕ್ ಆಗಿಲ್ಲ, ದಾಖಲೆಗಳು ಇಲ್ಲದಿದ್ದರು ಹೇಗೆ ವ್ಯವಹಾರ ಮಾಡುತ್ತಿದ್ದೀರಿ?
    8. ಮುಡಾದಿಂದ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘಕ್ಕೆ 50:50 ಅನುಪಾತದಡಿ ಮುಡಾದಿಂದ ಎಷ್ಟು ನಿವೇಶನ ಬಂದಿದೆ?
    9 ಕಚೇರಿಯಲ್ಲಿ ಪ್ರತಿಯೊಂದು ದಾಖಲೆಗಳನ್ನ ಪರಿಶೀಲನೆ ಪ್ರಶ್ನೆಗಳನ್ನ ಕೇಳುತ್ತಿರುವ ಇಡಿ ಅಧಿಕಾರಿಗಳು.

  • MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ

    MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ

    ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ (MUDA Scam) ಸಂಬಂಧಿಸಿದಂತೆ ಸೋಮವಾರ ಜಾರಿನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಮುಡಾದ ಮಾಜಿ ಆಯುಕ್ತ , ಐಎಎಸ್‌ ಅಧಿಕಾರಿ ದಿನೇಶ್‌ಕುಮಾರ್‌ (Dinesh Kumar) ಪರಾರಿಯಾಗಿದ್ದಾರೆ.

    ಇಂದು ಬೆಳಗ್ಗೆ ದಿನೇಶ್‌ ಕುಮಾರ್‌ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಡಿ ಅಧಿಕಾರಿಗಳ ದಾಳಿಯ ವೇಳೆ ದಿನೇಶ್‌ ಕುಮಾರ್‌ ವಾಕಿಂಗ್‌ ಮಾಡುತ್ತಿದ್ದರು.  ಇಡಿ ಅಧಿಕಾರಿಗಳು ಮನೆಗೆ ಬಂದ ವಿಚಾರ ತಿಳಿದು ವಾಕಿಂಗ್‌ ಮಾಡುತ್ತಿದ್ದ ಸ್ಥಳದಿಂದಲೇ ದಿನೇಶ್‌ ಕುಮಾರ್‌ ಪರಾರಿಯಾಗಿದ್ದಾರೆ.

     

    ಸದ್ಯ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಮಾಡಿರುವ ದಿನೇಶ್‌ ಕುಮಾರ್‌ಗಾಗಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್

    2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್‌ ಅವರನ್ನು  ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು.

     

  • ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ – ಹೆಚ್‌ಡಿ ಕುಮಾರಸ್ವಾಮಿ

    ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ – ಹೆಚ್‌ಡಿ ಕುಮಾರಸ್ವಾಮಿ

    ಮಂಡ್ಯ: ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

    ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ (Mandya To India) ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ? ನನ್ನ ಮೇಲೆ ಮೊನ್ನೆ ಯಾವ ಆಧಾರದ ಮೇಲೆ ಕಂಪ್ಲೇಟ್ ಕೊಟ್ಟಿದ್ದೀರಾ? ಮೊನ್ನೆ ಯಾವುದೋ ಒಂದು ಎನ್‌ಸಿಆರ್ ಹಾಕಿದ್ದಾರೆ. ಎಫ್‌ಐಆರ್ ಮಾಡಿಸಲೆಬೇಕೆಂದು ಸಿಎಂ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಮುಖ ಟಾರ್ಗೆಟ್ ಎಂದರೆ ನಾನೇ. ಆದರೆ ನಾನು ನ್ಯಾಯಬದ್ಧವಾಗಿ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ ಎಂದು ಹೇಳಿದರು.ಇದನ್ನೂ ಓದಿ: ರಚಿನ್‌ ಅಮೋಘ ಶತಕ, ಇತಿಹಾಸ ನಿರ್ಮಿಸಿದ ಕಿವೀಸ್‌; ಭಾರತದ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ

    ಕೇಂದ್ರ ಸರ್ಕಾರಕ್ಕೆ ಇಡಿ, ಎಸ್‌ಐಟಿ ಅಸ್ತ್ರ ಎಂದು ಹೇಳುತ್ತಾರೆ. ಸಿಎಂ ಮತ್ತು ಡಿಕೆಶಿಗೆ ಇನ್ವೇಸ್ಟಿಕೇಶನ್ ಟೀಮ್‌ಗಳಾಗಿವೆ. ಇವರ ಪ್ರಕಾರ ಎಸ್‌ಐಟಿ ಎಂದರೆ ಅಸ್ತ್ರಗಳು ಎಂದರ್ಥ. ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ. ಪರ ವಿರೋಧ ವಾದಗಳಾಗಿವೆ. ಅದರ ಆಧಾರದ ಮೇಲೆ ಕೋರ್ಟ್ ಯಾವ ರೀತಿ ತನಿಖೆ ಆಗಬೇಕೆಂದು ಹೇಳಿದ್ದು, ನ್ಯಾಯಯುತ ತನಿಖೆ ಆಗಬೇಕಿದೆ. ಲೋಕಾಯುಕ್ತದಲ್ಲಿ ನಿಮ್ಮ ಅಧಿಕಾರಿಗಳಿಂದ ತನಿಖೆ ಮಾಡಲು ಸಾಧ್ಯನಾ? ನಿಮ್ಮಂತ ನಡವಳಿಕೆ ಇರುವ ಸರ್ಕಾರದಲ್ಲಿ ಸತ್ಯಾಂಶ ಹೊರಬರಲ್ಲ. ಈಗ ಇಡಿ ಬಂದಿದೆ ಮುಂದೆ ಏನು ಆಗುತ್ತದೆ ಎಂಬುವುದನ್ನು ನೋಡೋಣ ಎಂದರು.

    ಸೈಟ್ ಕೊಟ್ಟಿದ್ದು ಯಾಕೆ?
    ಇಡಿ ಅಧಿಕಾರಿಗಳು ಮುಡಾ ಕಚೇರಿ (MUDA Office) ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿರುವ ಕುರಿತು ಮಾತನಾಡಿದ ಅವರು, ಮುಡಾ ಹಗರಣ (MUDA Scam) ಅತ್ಯಂತ ಕೆಟ್ಟ ರೀತಿಯಲ್ಲಿ ಆಗಿದೆ. ಸರ್ಕಾರದ ಭೂಮಿಯನ್ನು ಕಬಳಿಸಿದ್ದಾರೆ ಆದಕಾರಣ ಸೈಟ್‌ನ್ನು ವಾಪಸ್ಸು ಕೊಟ್ಟಿರಬಹುದು. ಕಾನೂನು ಬದ್ಧವಾಗಿ ಸೈಟ್ ಪಡೆದಿದ್ದರೆ ಯಾಕೆ ವಾಪಸ್ಸು ಕೊಟ್ಟಿದ್ದೀರಾ? ಸೈಟ್ ಹಂಚಿಕೆಯಲ್ಲಿ ತಪ್ಪು ಮಾಡಿದ್ದೀರಿ ಅದಕ್ಕೆ ವಾಪಸ್ ಕೊಟ್ಟಿದ್ದೀರಿ. ನಿಮ್ಮ ಲೋಕಾಯುಕ್ತ ಅಧಿಕಾರಿಗಳಿಂದ ಸರಿಯಾಗಿ ತನಿಖೆ ಆಗಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ:ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್

    ಬೆಂಗಳೂರು (Bengaluru) ನಗರದಲ್ಲಿ ತಮ್ಮ ಹಣದ ದಾಹಕ್ಕೆ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ನುಂಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಆಗುತ್ತಿದೆ. ನಿಮ್ಮ ಭೂ, ಹಣದ ದಾಹದಿಂದ ಬೆಂಗಳೂರು ಹೀಗೆ ಆಗಿದೆ. ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಮಳೆ ಬಂದು ಮುಳುಗುತ್ತಿಲ್ಲ. ಕೆರೆಗಳು, ರಾಜಕಾಲುವೆಗಳನ್ನು ಯಾಕೆ ಉಳಿಸಿಲ್ಲ. ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ಪುಟ್ಟೇನಹಳ್ಳಿ, ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿ ಡಾಲರ್ಸ್ ಕಾಲೋನಿ ಎಂದು ಮಾಡಿದರು. ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು ಎಂದರು.

    ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇವರಿಗೆ ಇಲ್ಲ. ಮಳೆ ಬಂದರೆ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ನೀರು ಖಾಲಿ ಮಾಡುತ್ತಾರಾ? ನಾನು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಗಾಗಿ (JNUM) 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿದ್ದೇನೆ. ಅದರಲ್ಲಿ ಡಿಸಿಎಂ 50 ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿ 50 ಲಕ್ಷ ಜನ ಇರಲು ಸಾಧ್ಯಾನಾ? ಒಂದು ವೇಳೆ ಇದ್ದರೆ ಬೆಂಗಳೂರು ಜನಸಂಖ್ಯೆ ಎಷ್ಟು? ಸುಳ್ಳು ಹೇಳಲು ಒಂದು ಇತಿಮಿತಿ ಬೇಡವಾ? ಇದೊಂದು ನಗೆಯ ಪಾಟಲು ಎಂದು ವ್ಯಂಗ್ಯವಾಡಿದರು.

    ಕೆರೆ ಎಷ್ಟು ಭರ್ತಿಯಾಗಿದೆ?
    ಕೆಆರ್‌ಎಸ್ ಡ್ಯಾಂ 2 ಬಾರಿ ಬರ್ತಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ (KRS Dam) ವ್ಯಾಪ್ತಿಯಲ್ಲಿ 900 ಕೆರೆಗಳು ಇವೆ. ಎಷ್ಟು ಕೆರೆಗಳನ್ನು ಈ ಸರ್ಕಾರ ತುಂಬಿಸಿದೆ? ಎಲ್ಲಾ ನೀರನ್ನು ತಮಿಳುನಾಡಿಗೆ (Tamilnadu) ಬಿಟ್ಟಿದ್ದಾರೆ. ನನಗೆ ಮೇಕೆದಾಟಿಗೆ ಪ್ರಧಾನಿಗಳ ಹತ್ತಿರ ಅನುಮತಿ ಕೊಡಿಸಿ ಎಂದು ಹೇಳುತ್ತಿರಾ? ತಮಿಳುನಾಡಿನವರು ನಿಮ್ಮ ಸ್ನೇಹಿತರು ಅವರ ಹತ್ತಿರ ಮಾತಾಡಿ ಒಪ್ಪಿಸಿ. ಬಳಿಕ ಕರೆದುಕೊಂಡು ಬನ್ನಿ ಐದು ನಿಮಿಷದಲ್ಲಿ ಸಹಿ ಹಾಕಿಸಿಕೊಡ್ತೀನಿ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ ವಸಿಷ್ಠ ಸಿಂಹ

  • ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ

    ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಿಂದ ದಾಳಿ ನಡೆದಿದೆ.ಇದನ್ನೂ ಓದಿ: ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ, ಸಿಗಲಿದೆ ತಿಂಗಳಿಗೆ 5 ಸಾವಿರ ಭತ್ಯೆ – ಅರ್ಜಿ ಸಲ್ಲಿಸೋದು ಹೇಗೆ? ಮಾನದಂಡ ಏನು?

    ರಾಷ್ಟ್ರೀಕೃತ ಬ್ಯಾಂಕ್ (Nationalized Bank) ಸಿಬ್ಬಂದಿಯ ಮನೆ ಮೇಲೆ ದಾಳಿ ನಡೆದಿದ್ದು, ಸತತವಾಗಿ ಎರಡನೇ ಬಾರಿಗೆ ದಾಳಿ ನಡೆಸಿದ್ದಾರೆ.

    ಸದ್ಯ 5 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿಯಲ್ಲಿ (Delhi) ದಾಖಲಾಗಿದ್ದ ಇಡಿ ಪ್ರಕರಣದ ಹಿನ್ನೆಲೆ ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯ ಮೇಲೆ ಸತತವಾಗಿ ಎರಡು ದಿನಗಳಿಂದ ದಾಳಿ ನಡೆಸಿದ್ದಾರೆ. ಗುರುವಾರ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಇಂದು (ಅ.4) ಬೆಳಿಗ್ಗೆ ದಾಳಿ ಮಾಡಿದ್ದಾರೆ.ಇದನ್ನೂ ಓದಿ: ದಸರಾ ವಿಶೇಷ; ಉತ್ತರ ಕರ್ನಾಟಕ ಶೈಲಿಯ ತಾಲಿಪಟ್ಟು ರೆಸಿಪಿ ನಿಮಗಾಗಿ