ತಿರುವನಂತಪುರಂ: ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ (Mammootty), ದುಲ್ಕರ್ ಸಲ್ಮಾನ್ (Dulquer Salmaan), ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿರುವ ತಮಿಳು, ಮಲಯಾಳಂ ನಟರು ಹಾಗೂ ವಾಹನ ಮಾಲೀಕರು ಸೇರಿ 17 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಫೆಮಾ, 1999ರ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇಂಡೋ-ಭೂತಾನ್/ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿಯಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಸಿಂಡಿಕೇಟ್ ಅನ್ನು ಬಹಿರಂಗಪಡಿಸುವ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕಲಿ ದಾಖಲೆಗಳನ್ನು ಬಳಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳ ವಾಹನ ನೋಂದಣಿ ಪಡೆದುಕೊಂಡು ಅಕ್ರಮವಾಗಿ ಸಿನಿಮಾ ನಟರಿಗೆ, ಉದ್ಯಮಿಗಳಿಗೆ ಕಾರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಗೇಮಿಂಗ್ ಆ್ಯಪ್‌ಗಳಿಗೆ ಹಣ ಪೂರೈಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ (Veerendra Puppy) ಅವರನ್ನ ಮತ್ತೆ 6 ದಿನ ಇಡಿ (ED – ಜಾರಿ ನಿರ್ದೇಶನಾಲಯ) ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ?
ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿತ್ತು.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಸಚಿವ ಹಾಗೂ ಹಿರಿಯ ಆಮ್ ಆದ್ಮಿ ಪಕ್ಷದ ನಾಯಕ (AAP leader) ಸೌರಭ್ ಭಾರದ್ವಾಜ್ (Saurabh Bhardwaj) ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ (Enforcement Directorate) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಜಿಎನ್‌ಸಿಟಿಡಿ ಆರೋಗ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸೌರಭ್ ಭಾರದ್ವಾಜ್ ಭಾಗಿಯಾಗಿದ್ದಾರೆ ಎಂದು ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಪಿಸಿದ್ದರು. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ
2018-2019ರಲ್ಲಿ, ಆಪ್ ನೇತೃತ್ವದ ದೆಹಲಿ ಸರ್ಕಾರವು 24 ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ. ಹಣದ ಯೋಜನೆಗಳನ್ನು ಅನುಮೋದಿಸಿತ್ತು. ಐಸಿಯು ಆಸ್ಪತ್ರೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ಮೂರು ವರ್ಷಗಳ ನಂತರವೂ ಕೆಲಸ ಅಪೂರ್ಣವಾಗಿಯೇ ಇತ್ತು. 800 ಕೋಟಿ ರೂ. ಹಣ ಖರ್ಚು ಮಾಡಿದರೂ, 50% ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್ ದಾಖಲಿಸಿತ್ತು.
ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿಗಳ ವಿವರ ಮತ್ತು ಪತ್ತೆಯಾದ ಆರ್ಥಿಕ ಅಕ್ರಮಗಳ ವಿವರಗಳನ್ನು ಕೇಂದ್ರ ತನಿಖಾ ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ.
ಗ್ರೇಟರ್ ಕೈಲಾಶ್‌ನಿಂದ ಮೂರು ಬಾರಿ ಶಾಸಕರಾಗಿರುವ ಭಾರದ್ವಾಜ್, ದೆಹಲಿಯ ಆರೋಗ್ಯ, ನಗರಾಭಿವೃದ್ಧಿ ಮತ್ತು ಜಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದನ್ನೂ ಓದಿ: ರಾಹು-ಕೇತು ದೋಷಗಳನ್ನು ಗಣೇಶ ಹೇಗೆ ಗುಣಪಡಿಸುತ್ತಾನೆ?
आज सौरभ जी के यहाँ रेड क्यों हुई?
क्योंकि पूरे देश में मोदी जी की डिग्री पर सवाल उठ रहे हैं — क्या मोदी जी की डिग्री फर्जी है? इस चर्चा से ध्यान हटाने के लिए ही रेड डाली गई है।
जिस समय का केस बताया जा रहा है, उस समय सौरभ जी मंत्री भी नहीं थे। यानी पूरा केस ही झूठा है।…
ಇಡಿ ದಾಳಿ ಬೆನ್ನಲ್ಲೇ ಎಎಪಿ ನಾಯಕಿ, ಮಾಜಿ ಸಿಎಂ ಆತಿಶಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಇದು ಪ್ರಧಾನಿ ಮೋದಿ ಅವರ ಪದವಿ ವಿಚಾರದ ಕುರಿತ ವಿಷಯವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಎಎಪಿ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ಸೋಮವಾರ ಇಡೀ ದೇಶವೇ ಪ್ರಧಾನಿ ಮೋದಿಯವರ ಪದವಿ ಕುರಿತು ಪ್ರಶ್ನೆ ಎತ್ತಿತ್ತು. ಯಾವಾಗೆಲ್ಲಾ ಪದವಿ ವಿಚಾರ ಹೊರಬಂದಿದೆಯೋ ಆ ಸಂದರ್ಭಗಳಲ್ಲೆಲ್ಲ ಗಮನ ಬೇರೆಡೆ ಸೆಳೆಯಲು ಈ ರೀತಿ ದಾಳಿ ನಡೆಸಲಾಗಿತ್ತು ಎಂದು ದೂರಿದ್ದಾರೆ.
– 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನ, 10 ಕೆ.ಜಿ ಬೆಳ್ಳಿ ವಶಕ್ಕೆ ಪಡೆದ ಇ.ಡಿ
ಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (Veerendra Puppy) ಮನೆ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭ ಕಂತೆ ಕಂತೆ ಹಣ, ಚಿನ್ನ ಹಾಗೂ ಬೆಳ್ಳಿ ಪತ್ತೆಯಾದ ಹಿನ್ನೆಲೆ ವೀರೇಂದ್ರ ಪಪ್ಪಿಯವರನ್ನು ಸಿಕ್ಕಿಂನ (Sikkim) ಗ್ಯಾಂಗ್‌ಟಕ್‌ನಲ್ಲಿ ಬಂಧಿಸಲಾಗಿದೆ.
ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಶುಕ್ರವಾರ ಮುಂಜಾನೆ ಚಿತ್ರದುರ್ಗದ ಕಾಂಗ್ರೆಸ್ ಶಾಸನ ವೀರೇಂದ್ರ ಪಪ್ಪಿ ಮತ್ತು ಇತರರ ಮೇಲೆ ಒಟ್ಟು 30 ಸ್ಥಳಗಳಲ್ಲಿ ದಾಳಿ ನಡೆಸಿ ಇ.ಡಿ ದಾಖಲೆ ಪರಿಶೀಲನೆ ಮಾಡಿದೆ. ಈ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ಹಣ, 6 ಕೋಟಿ ಮೌಲ್ಯದ ಚಿನ್ನ, 10 ಕೆಜಿ ಬೆಳ್ಳಿ, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್‌ಗಳನ್ನು ಇ.ಡಿ ಸೀಜ್ ಮಾಡಿದೆ. ಇದನ್ನೂ ಓದಿ: ವೀರೇಂದ್ರ ಪಪ್ಪಿಯಿಂದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಸೈಟ್ – 30 ಕಡೆ ಇಡಿ ರೇಡ್
ಚಿತ್ರದುರ್ಗ ಜಿಲ್ಲೆಯಾದ್ಯಂತ 6, ಬೆಂಗಳೂರು ನಗರ 10, ಜೋಧ್‌ಪುರ 3, ಹುಬ್ಬಳ್ಳಿ 1, ಮುಂಬೈ 2 ಮತ್ತು ಗೋವಾದಲ್ಲಿರುವ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿದೆ. ವೀರೇಂದ್ರ ಪಪ್ಪಿ ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು, ನಾರ್ಕೋ ಅನಾಲಿಸಿಸ್ ಟೆಸ್ಟ್ ಮಾಡ್ಬೇಕು: ಗಿರೀಶ್ ಮಟ್ಟಣ್ಣನವರ್
ವೀರೇಂದ್ರ ಪಪಿ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ 3 ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಘಟಕಗಳು ಕೆಸಿ ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಇ.ಡಿ ತಿಳಿಸಿದೆ.
1 ಕೋಟಿ ಫಾರಿನ್ ಕರೆನ್ಸಿ ಪತ್ತೆ
ಇದಲ್ಲದೇ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊದಲ್ಲಿ ಕ್ಯಾಸಿನೊ ಆಭರಣ, ವಿವಿಧ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು, ತಾಜ್, ಹಯಾತ್ ಮತ್ತು ಲೀಲಾ ಪಂಚತಾರಾ ಹೋಟೆಲ್‌ಗಳ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳು, 6 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇದರ ಜೊತೆಗೆ ಐಷಾರಾಮಿ ಕಾರು, 12 ಕೋಟಿ ಮೌಲ್ಯದ ಇಂಡಿಯನ್ ಕರೆನ್ಸಿ, 1 ಕೋಟಿ ಫಾರಿನ್ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇಡಿ ದಾಳಿಗೆ ಕಾರಣ ಏನು?
ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿತ್ತು. ಇದನ್ನೂ ಓದಿ: ವೀರೇಂದ್ರ ಪಪ್ಪಿಯಿಂದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಸೈಟ್ – 30 ಕಡೆ ಇಡಿ ರೇಡ್
ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ (Veerendra Puppy) ಅವರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ಸಿಕ್ಕಿಂನಲ್ಲಿ (Sikkim) ಶಾಸಕರನ್ನ ವಶಕ್ಕೆ ಪಡೆಯಲಾಗಿದೆ.
ತನ್ನ ಒಡೆತನದ ಕಂಪನಿಗಳಿಂದ ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ (Illegal Money Transfer), ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಶುಕ್ರವಾರ ಬೆಳಿಗ್ಗೆಯೇ ಶಾಸಕರು, ಅವರ ಸಹೋದರಾದ ಕೆ.ಸಿ ನಾಗರಾಜ ಮತ್ತು ಕೆಸಿ ತಿಪ್ಪೇಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಗೋವಾ ಸೇರಿದಂತೆ 17 ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯಾಗಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ಈ ನಡುವೆ ಶಾಸಕರು ಸಿಕ್ಕಿಂನಲ್ಲಿ ಸ್ನೇಹಿತರೊಂದಿಗೆ ಇದ್ದಾಗ ವಶಕ್ಕೆ ಪಡೆಯಲಾಗಿದೆ.
ಇಡಿ ದಾಳಿಗೆ ಕಾರಣ ಏನು?
ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿತ್ತು. ದಾಳಿ ವೇಳೆ ಶಾಸಕರು ಸಿಕ್ಕಿಂ ಪ್ರವಾಸದಲ್ಲಿರುವುದಾಗಿ ತಿಳಿದುಬಂದಿತ್ತು. ಹೊರತಾಗಿಯೂ ಅಧಿಕಾರಿಗಳ ಶೋಧ ಮುಂದುವರಿದಿದೆ.
ಶಾಸಕರಿಗೆ ಸೇರಿದ ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸೊಲ್ಯೂಷನ್ಸ್, ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್ ಕಂಪನಿಗಳು ಅಕ್ರಮ ಎಸಗಿವೆ ಎಂದು ಆರೋಪಿಸಲಾಗಿದೆ. ಚಳ್ಳಕೆರೆ ಪಟ್ಟಣದಲ್ಲಿರುವ 4 ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶೋಧ ಕಾರ್ಯ ನಡೆಸುತ್ತಿದ್ದಾರೆ. 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದಾರೆ. ಮಹತ್ವದ ದಾಖಲೆಗಳನ್ನ ತೆಗೆಯುವ ಪ್ರಯತ್ನ ಮಾಡಲಾಗಿದೆ.
ಕುಸುಮಾ ಮನೆ ಮೇಲೂ ದಾಳಿ
ಇನ್ನೂ ಪಪ್ಪಿ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆ ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತ ರಾಯಪ್ಪ ಅವರ ಮುದ್ದಿಪಾಳ್ಯ ರಸ್ತೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆದಿದೆ. ಶೋಧ ಮುಂದುವರಿದಿದೆ.
ಬೆಂಗಳೂರು: 2029ಕ್ಕೆ ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ಬಿಜೆಪಿ ನಾಯಕರನ್ನು (BJP Leaders) ತಿಹಾರ್ ಜೈಲಿಗೆ (Tihar Jail) ತುಂಬೋದು ಖಚಿತ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ.
ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮಗ ಜಯ್ ಶಾ ಅಂತ ಇದ್ದಾರೆ. ಅವರ ಕಂಪನಿಗಳು ಪಾರದರ್ಶಕವಾಗಿ ಇದ್ಯಾ? ನಿತಿನ್ ಗಡ್ಕರಿ ಅವರದ್ದೂ 16 ಸಕ್ಕರೆ ಕಾರ್ಖಾನೆ ಇದೆ, ಅಲ್ಲಿ ಇ.ಡಿ, ಐಟಿ ಹೋಗಲ್ಲ. ಬರೀ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರು-ತಿರುಪತಿ ನಡುವೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭ
ಸುಬ್ಬಾರೆಡ್ಡಿಯವರು ತುಂಬಾ ಕಷ್ಟಪಟ್ಟು ಬಡತನದಲ್ಲಿ ಮೇಲೆಬಂದು ಬೆಂಗಳೂರಿನಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡು ಮೂರು ಬಾರಿ ಶಾಸಕರಾಗಿದ್ದಾರೆ. ಸುಬ್ಬಾರೆಡ್ಡಿ ಅಂದರೆ ಪಕ್ಷನಿಷ್ಠೆ, ಪಕ್ಷನಿಷ್ಠೆ ಅಂದರೆ ಅದು ಸುಬ್ಬಾರೆಡ್ಡಿ. ಅಂತಹ ವ್ಯಕ್ತಿಯ ಮನೆಮೇಲೆ ಇಂದು ಇಡಿ ರೇಡ್ ಮಾಡಿದೆ. ಅದಾನಿ, ಅಂಬಾನಿ ಮೇಲೆ ಇಡಿ ದಾಳಿ ಆಗಲ್ಲ. ಬಿಜೆಪಿ, ವಿಜಯೇಂದ್ರ ಮೇಲೆ ರೇಡ್ ಆಗಲ್ಲ. ಐಟಿ, ಇಡಿಯವರಿಗೆ ಕಾಂಗ್ರೆಸ್‌ನವರ ಮೇಲೆ ಬಹಳ ಪ್ರೀತಿ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಎಷ್ಟೇ ಟಾರ್ಗೆಟ್ ಮಾಡಿದರೂ ನಾವು ಹೆದರಲ್ಲ ಎಂದರು. ಇದನ್ನೂ ಓದಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ, ಚರ್ಚೆ ಇಲ್ಲ: ಹೆಚ್.ಸಿ.ಮಹದೇವಪ್ಪ
2029ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿಯವರನ್ನು ಹುಡುಕಿ ಹುಡುಕಿ ತಿಹಾರ್ ಜೈಲನ್ನು ತುಂಬಿಸುತ್ತೇವೆ. ಅವರು ಫ್ಲವರ್ ಹಾಕಿದರೆ ನಾವು ಪಾಟ್ ಸೇರಿಸಿ ಹಾಕುತ್ತೇವೆ. ಕಾಂಗ್ರೆಸ್ ಶಾಸಕರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ಇದು ಬಿಜೆಪಿಯವರಿಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: SSLC ಫಲಿತಾಂಶ ಹೆಚ್ಚಳಕ್ಕೆ ಕ್ರಮ – 29 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಶಿಕ್ಷಣ ಇಲಾಖೆ
ಬೆಂಗಳೂರು: ಮೋದಿ (Modi) ಅವರು ಕಳೆದ 11 ವರ್ಷಗಳಲ್ಲಿ ಸಾಧನಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರಕ್ಕೆ 11 ವರ್ಷ ಪೂರ್ಣಗೊಂಡ ಬಗ್ಗೆ ಮಾತನಾಡಿದರು. 11 ವರ್ಷಗಳಲ್ಲಿ ಮೋದಿಯವರು ಸಾಧನೆಗಳನ್ನು ಕಡಿದು ಕಟ್ಟೆ ಹಾಕಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ಟ್ರ್ಯಾಕ್ಟರ್ ಮೇಲೆ 12% ಜಿಎಸ್‌ಟಿ (GST), ಟೈರ್‌ಗೆ 18% ಜಿಎಸ್‌ಟಿ, ಟ್ರ್ಯಾಕ್ಟರ್ ಬಿಡಿ ಭಾಗಗಳ ಮೇಲೆ 28% ಜಿಎಸ್‌ಟಿ ಹಾಕ್ತಿದ್ದಾರೆ ಇದು ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ತೋತಾಪುರಿ ಮಾವು ಬೆಲೆ ಕುಸಿತ – ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ
ಎನ್‌ಡಿಎ ಅಂದ್ರೆ ನೇಷನ್ ಡೆಸ್ಟ್ರಾಯರ್ಸ್ ಅಲೈಯನ್ಸ್. ದೇಶದ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ, ರೈತರ ವಿಚಾರದಲ್ಲೂ ಫೇಲ್ ಆಗಿದೆ. ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡೋದ್ರಲ್ಲಿ ಮಾತ್ರ ಕೇಂದ್ರ ಸಕ್ಸಸ್ ಆಗಿದೆ. ಇವರ ಇಡಿ ದಾಳಿಗೆ ನಾವು ಹೆದರಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಜೂ.15 ರವರೆಗೆ ಭಾರೀ ಮಳೆ ಮುನ್ಸೂಚನೆ
ಚಕ್ರವರ್ತಿ ಸೂಲಿಬೆಲೆ ನನ್ ಲೆವೆಲ್ ಅಲ್ಲ
ಚಕ್ರವರ್ತಿ ಸೂಲಿಬೆಲೆ ಗಡೀಪಾರಿಗೆ ಗೃಹ ಇಲಾಖೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಲೆವಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ. ಇವರ ಬಗ್ಗೆ ಮಾತ್ರ ನಾನು ಮಾತಾಡ್ತೇನೆ, ಇದು ನನ್ನ ಲೆವೆಲ್. ಚಕ್ರವರ್ತಿ ಸೂಲಿಬೆಲೆ ನನ್ ಲೆವೆಲ್ ಅಲ್ಲ. ಚಕ್ರವರ್ತಿ ಬಗ್ಗೆ ನಮ್ಮ ಕಾರ್ಯಕರ್ತರು ಮಾತಾಡ್ತಾರೆ. ನಾನು ಮಾತಾಡಲ್ಲ ಅವ್ರು ನನ್ನ ಲೆವೆಲ್ ನಲ್ಲಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ʻಕೈʼ ನಾಯಕರ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವ್ರು ಗೆದ್ದಿರೋದು ಬಿಜೆಪಿಗೆ ಹೊಟ್ಟೆ ಉರಿ ತಂದಿದೆ. ಹೊಟ್ಟೆ ಉರಿಗೆ ಇಡಿ ದಾಳಿ ಮಾಡಿಸಿದ್ದಾರೆ. ಬಳ್ಳಾರಿಯಲ್ಲಿ ಸೋತಿದ್ದಕ್ಕೆ ಬಿಜೆಪಿಯವ್ರು ಇಡಿ ಕರೆಸಿ ದಾಳಿ ಮಾಡಿಸಿದ್ದಾರೆ. ನಾವು ಇದಕ್ಕೆಲ್ಲ ಹೆದರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ
– ಇಡಿ ದಾಳಿಗೆ ಸಿಡಿದೆದ್ದ ʻಕೈʼ ಪಡೆ – ಪರಮೇಶ್ವರ್ ಭೇಟಿ ಮಾಡಿ ಸ್ಥೈರ್ಯ ತುಂಬಿದ ನಾಯಕರು
ಬೆಂಗಳೂರು: ಅತ್ತ ತುಮಕೂರಿನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಇಂದೂ ಮುಂದುವರಿದಿದೆ. ಇತ್ತ ಗೃಹ ಸಚಿವ ಪರಮೇಶ್ವರ್ (G Parameshwar) ಪರ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಂದು ಬೆಳಗ್ಗೆ ಅನೇಕ ʻಕೈʼ ನಾಯಕರು (Congress Leaders) ಬೆಂಗಳೂರಿನ ನಿವಾಸದಲ್ಲಿ ಪರಮೇಶ್ವರ್ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ರು. ಇಡಿ ದಾಳಿ ಹಿನ್ನೆಲೆ ಕೇಂದ್ರದ ಬಿಜೆಪಿ ವಿರುದ್ಧ ಹೋರಾಟಕ್ಕೂ ಕಾಂಗ್ರೆಸ್ ಮುಂದಾಗಿದೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಇಡಿ ದಾಳಿ ಈಗ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅತ್ತ ತುಮಕೂರಿನಲ್ಲಿ ವಿರುದ್ಧ ಕೈ ದಾಳಿ 2ನೇ ದಿನಕ್ಕೆ ಕಾಲಿಟ್ರೆ, ಇತ್ತ ಪರಮೇಶ್ವರ್ ನಿವಾಸ ಒಂದಷ್ಟು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ಇಡಿ ದಾಳಿಯಾಗಿದ್ರೂ ನಿನ್ನೆಯಿಂದಲೂ ತುಮಕೂರಿಗೆ ಹೋಗದೇ ಪರಮೇಶ್ವರ್ ತಮ್ಮ ಬೆಂಗಳೂರು ನಿವಾಸದಲ್ಲೇ ಇದ್ದಾರೆ. ಇಂದು ಇಡಿ ದಾಳಿ (ED Raid) ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ಕೊಡೋದಾಗಿ ಹೇಳಿದ್ರು. ತಮ್ಮ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಯಾವುದೇ ಅಕೌಂಟ್ಸ್ ಕೇಳಿದ್ರೂ ಕೊಡಿ ಅಂತ ಹೇಳಿದ್ದೇನೆ. ನಾನು ಏನೂ ಮುಚ್ಚಿಟ್ಟಿಲ್ಲ. ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಏನೇ ಇದ್ರೂ ಕಾನೂನು ನನಗೂ ಒಂದೇ ಎಲ್ಲರಿಗೂ ಒಂದೇ. ತನಿಖೆಗೆ ಸಂಪೂರ್ಣ ಸಹಕಾರ ಕೊಡ್ತೇನೆ ಅಂತ ಪರಮೇಶ್ವರ್ ತಿಳಿಸಿದ್ರು.
ಇಡಿ ತನಿಖೆಗೆ ಸಹಕಾರ ಕೊಡುವ ಮತಾಡಿದ ಪರಮೇಶ್ವರ್, ರನ್ಯಾರಾವ್ ಗೋಲ್ಡ್ ಪ್ರಕರಣದ ಲಿಂಕ್ ಬಗ್ಗೆ ಪ್ರತಿಕ್ರಿಯೆ ಕೊಡಲಿಲ್ಲ. ನಾನು ಈ ಹಂತದಲ್ಲಿ ಏನನ್ನೂ ಮಾತಾಡಲ್ಲ. ಮಾಧ್ಯಮಗಳಲ್ಲಿ ಊಹೆ ಆಧಾರಿತ ಸುದ್ದಿಗಳು ಬರ್ತಿವೆ. ತನಿಖೆ ಬಳಿಕ ಮಾತಾಡ್ತೇನೆ ಅಂತ ಪರಮೇಶ್ವರ್ ಹೇಳಿದ್ರು. ಇನ್ನೂ ದಲಿತ ಅಂತ ಇಡಿ ದಾಳಿ ಆಗಿದೆ ಅಂತ ಅನ್ಸಲ್ಲ ಅಂದ ಪರಮೇಶ್ವರ್, ಸಿಎಂ ಹಾಗೂ ಸುರ್ಜೇವಾಲಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಅಂದ್ರು. ಮಾಜಿ ಶಾಸಕ ಶಫಿ ಅಹ್ಮದ್ ಅವರ ಕಾಲೇಜು ಮುಚ್ಚುವ ಸ್ಥಿತಿಗೆ ಬಂದ ಕಾರಣ ನಾವು ಖರೀದಿಸಿದ್ದೇವೆ. ನಾವೂ ಸಾಂಸ್ಥಿಕವಾಗಿ ಬೆಳೆಯಬಾರದೇ ಎಂದು ಹೊಸ ಆಸ್ತಿ ಖರೀದಿ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ಕೊಟ್ರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?
ಇನ್ನು ಬೆಳಗ್ಗೆಯಿಂದಲೂ ಬೆಂಗಳೂರಿನ ಪರಮೇಶ್ವರ್ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭೇಟಿ ಕೊಟ್ಟಿದ್ದು ಗಮನ ಸೆಳೆಯಿತು. ಬೆಳಗ್ಗೆಯೇ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ಸೈಬರ್ ಸೆಕ್ಯುರಿಟಿ ಎಡಿಜಿಪಿ ಪ್ರಣವ್ ಮೊಹಂತಿ ಹಾಗೂ ನೂತನ ಪ್ರಭಾರಿ ಡಿಜಿಐಜಿಪಿ ಡಾ.ಎ.ಎಮ್ ಸಲೀಮ್, ಗೃಹ ಸಚಿವ ಪರಮೇಶ್ವರ್ ಭೇಟಿ ಮಾಡಿದ್ರು. ಬಳಿಕ ಕಾಂಗ್ರೆಸ್ ನಾಯಕರ ದಂಡೇ ಪರಮೇಶ್ವರ್ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ರು. ಡಿಸಿಎಂ ಡಿಕೆಶಿ, ಸಚಿವರಾದ ಚೆಲುವರಾಯಸ್ವಾಮಿ, ಹೆಚ್ ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ ಎ.ಸಿ ಶ್ರೀನಿವಾಶ್, ಟಿ. ರಘುಮೂರ್ತಿ ಮುಂತಾದವರು ಪರಮೇಶ್ವರ್ ಭೇಟಿ ಮಾಡಿ ಧೈರ್ಯ ತುಂಬಿದ್ರು.
ಈ ವೇಳೆ ಮಾತಾಡಿದ ಡಿಸಿಎಂ ಡಿಕೆಶಿ, ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್, ಒಂದು ಚಾರಿಟಿ ಸಂಸ್ಥೆಯಾಗಿದ್ದು, ಮದುವೆ, ಮುಂಜಿ, ಸ್ಕೂಲ್ ಫೀ, ಆಸ್ಪತ್ರೆ ಫೀ ಅಂತ ಸಣ್ಣಪುಟ್ಟ ಹಣದ ಸಹಾಯ ಮಾಡಿರಬಹುದು. ಆದ್ರೆ ಈ ದಾಳಿ ಹಾಗೂ ಸೋನಿಯಾ ಗಾಂಧಿ ವಿರುದ್ಧದ ದಾಳಿ ಖಂಡಿಸಿ ಇಡೀ ದೇಶದಲ್ಲಿ ಹೋರಾಟ ಮಾಡ್ತೇವೆ ಅಂದ್ರು. ಇನ್ನೂ ಸಚಿವ ಚೆಲುವರಾಯಸ್ವಾಮಿ ಮಾತಾಡಿ, ಹಿಂದೆ ಐಟಿ ದಾಳಿ, ಈಗ ಇಡಿ ದಾಳಿ. ಪದೇ ಪದೇ ದಾಳಿ ಆಗ್ತಿದ್ದು ಇದು ಪಕ್ಕಾ ರಾಜಕೀಯ ಹಾಗೂ ಸೇಡಿನ ದಾಳಿ ಅಂದ್ರು. ಬಿಕೆ ಹರಿಪ್ರಸಾದ್ ಮಾತಾಡಿ, ಪರಮೇಶ್ವರ್ ಎತ್ತರಕ್ಕೆ ಬೆಳೆದ ದಲಿತ ನಾಯಕ. ದಲಿತರ ಸ್ವಾಭಿಮಾನಕ್ಕೆ ಕೇಂದ್ರದ ಬಿಜೆಪಿ ಧಕ್ಕೆ ತಂದಿದೆ ಅಂತ ಲೇವಡಿ ಮಾಡಿದ್ರು.
ಸಚಿವ ಸಂಪುಟ ಸಭೆಗೂ ಮುನ್ನ ಗೃಹ ಸಚಿವ ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ರು. ಇಡಿ ದಾಳಿ ಬಗ್ಗೆ ಸಿಎಂಗೆ ಪರಮೇಶ್ವರ್ ಮೌಖಿಕ ವಿವರಣೆ ಕೊಟ್ರು. ಈ ವೇಳೆ ಹಲವು ಸಚಿವರು ಇದ್ರು. ಇಡಿ ದಾಳಿ ಕುರಿತು ಸಿಎಂ ಕೆಲ ಹೊತ್ತು ತಮ್ಮ ನಿವಾಸದಲ್ಲೇ ಸಚಿವರ ಜತೆ ಸಮಾಲೋಚನೆ ನಡೆಸಿದ್ರು. ಇದನ್ನೂ ಓದಿ: ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಭೂಸ್ವಾಧೀನಕ್ಕೆ ಬಾಕಿ ಇರುವ 17 ಕೋಟಿ ಬಿಡುಗಡೆಗೆ ಕ್ರಮ
ಸದ್ಯಕ್ಕೆ ಇಡಿ ದಾಳಿ ಪ್ರಕರಣ ಕಾಂಗ್ರೆಸ್ ಒಳಗೆ ಕಿಚ್ಚು ತುಂಬಿಸಿದೆ. ಕೇಂದ್ರದ ಬಿಜೆಪಿ ವಿರುದ್ಧ ದಲಿತ ಅಸ್ತ್ರ ಮೂಲಕ ಹೋರಾಟಕ್ಕೆ ಕೈಪಡೆ ಸಿದ್ಧತೆಗಿಳಿದಿದೆ. ಆದ್ರೆ ಅಲ್ಲೀವರೆಗೂ ಇಡಿ ತನಿಖೆ ಇನ್ನೂ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ
– ದಲಿತ ನಾಯಕರ ಟರ್ಗೆಟ್: ಪರಮೇಶ್ವರ್ ಸಂಸ್ಥೆ ಮೇಲೆ ಇಡಿ ದಾಳಿ ಬಗ್ಗೆ ಸಿಎಂ ಪ್ರತಿಕ್ರಿಯೆ
ಬೆಂಗಳೂರು: ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ ಪ್ರಾಮಾಣಿಕರಾ? ಅವರ ಮೇಲೆ ರೇಡ್ ಯಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.
ಪರಮೇಶ್ವರ್ (G.Parameshwar) ಸಂಸ್ಥೆ ಮೇಲೆ ಇಡಿ ದಾಳಿ ಪರ‍್ಣ ಮಾಹಿತಿ ಗೊತ್ತಿಲ್ಲ. ನಿನ್ನೆ ಅಷ್ಟೆ 1 ಲಕ್ಷ ಜನರಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಪರಮೇಶ್ವರ್ ಅವರ ತಂದೆ ಗಂಗಯ್ಯ ಈ ವಿದ್ಯಾ ಸಂಸ್ಥೆ ಸ್ಥಾಪಿಸಿದವರು. ಪರಮೇಶ್ವರ್ ದಲಿತ ನಾಯಕರು. ರಾಜ್ಯ ರ‍್ಕಾರದ ಗೃಹ ಸಚಿವರು. ಅವರನ್ನು ಉದ್ದೇಶ ಪರ‍್ವಕವಾಗಿ ಟರ‍್ಗೆಟ್ ಮಾಡಲಾಗಿದೆ. ಯಡಿಯೂರಪ್ಪ ಹಾನೆಸ್ಟಾ? ವಿಜಯೇಂದ್ರ ಹಾನೆಸ್ಟಾ? ಕುಮಾರಸ್ವಾಮಿ ಹಾನೆಸ್ಟಾ? ಅವರ ಮೇಲೆ ರೇಡ್ ಯಾಕಿಲ್ಲಾ? ಕಾಂಗ್ರೆಸ್‌ನ ಹಿಂದುಳಿದ ದಲಿತ ನಾಯಕರ ಮೇಲೆ ದಾಳಿ ಆಗ್ತಿದೆ. ದಲಿತ ನಾಯಕರ ಟರ‍್ಗೆಟ್ ಮಾಡಿದ್ದಾರೆ ಅನ್ನಿಸುತ್ತೆ. ಮೊದಲು ಐಟಿಯವರು ಮಾಡಿದ್ದರು, ಈಗ ಇಡಿ ಮಾಡಿದ್ದಾರೆ ಎಂದು ಮಾತನಾಡಿದರು. ಇದನ್ನೂ ಓದಿ: ದೇವರು, ಧರ್ಮ ಬಿಜೆಪಿಯವರ ಆಸ್ತಿಯಾ..? ಟೀಕೆಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಮಳೆಹಾನಿ ವೀಕ್ಷಣೆಗೆ ನಾನು ಹೋಗುವ ಸ್ಥಳಕ್ಕೆ ರೆಡ್ ಕರ‍್ಪೆಟ್ ಹಾಕಿದ್ದು ಸುಳ್ಳು. ಅದು ಬಿಜೆಪಿ ಸೃಷ್ಟಿ. ನಾನು ಹೋದಾಗ ರೆಡ್ ಕರ‍್ಪೆಟ್ ಇರಲಿಲ್ಲ. ನಾನು ಹೋಗುವಾಗ ಎಲ್ಲಿತ್ತು? ಬಿಜೆಪಿಯವರೇ ರೆಡ್ ಕರ‍್ಪೆಟ್ ಹಾಕಿರುವುದು, ಅವರೇ ಮಾಡಿರುವುದು. ರೆಡ್ ಕರ‍್ಪೆಟ್ ಹಾಕಿದ್ದರೆ ತಪ್ಪು. ಆದರೆ, ನಾನಂತು ನೋಡಿಲ್ಲ. ಆ ರೀತಿ ವಿಡಿಯೋ ಮಾಡಿದ್ದರೆ ಅದು ಬಿಜೆಪಿಯವರೇ ಮಾಡಿದ್ದು ಎಂದು ಆರೋಪಿಸಿದರು.
ಪರಮೇಶ್ವರ್ ಪ್ರಕರಣಕ್ಕೆ ರನ್ಯಾ ರಾವ್ ಕೇಸ್ ಲಿಂಕ್ ಆರೋಪ ಬಗ್ಗೆ ಮಾತನಾಡಿ, ಅಶೋಕ್ ಗಂಭೀರವಾಗೇ ಇಲ್ಲ. ಗಂಭೀರ ಆರೋಪ ಹೇಗೆ ಮಾಡ್ತಾರೆ? ಅಶೋಕ್ ಅವರೇ ಇಡಿ ದಾಳಿ ಮಾಡಿಸಿರಬಹುದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್
ಬೈರತಿ ಬಸವರಾಜ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬೈರತಿ ಬಸವರಾಜ್ ಕರೆದೇ ಇಲ್ಲ. ನಾನೇ ಅಲ್ಲಿ ಹೋಗಿದ್ದೆನಲ್ಲ. ಜನರ ಹತ್ತಿರ ಮಾತನಾಡಿ ಸಮಸ್ಯೆ ಆಲಿಸಿದ್ದೇನೆ ಎಂದು ತಿಳಿಸಿದರು.