Tag: ಇಟ್ಟಿಗೆ ಲಾರಿ

  • ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    – ಮಧ್ಯಪ್ರದೇಶದ ಇಬ್ಬರು ಅರೆಸ್ಟ್

    ಚಿಕ್ಕೋಡಿ: ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಅಕ್ರಮವಾಗಿ ಗೋವಾ ರಾಜ್ಯದಿಂದ ಗುಜರಾತ್ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಮೌಲ್ಯದ 600 ಅಕ್ರಮ ಮದ್ಯದ ಬಾಟಲಿಗಳನ್ನು ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜೊತೆಗೆ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಮಧ್ಯಪ್ರದೇಶ ರಾಜ್ಯದ ಇಂದೋರಿನ ಧನಪಾಲಸಿಂಗ್ ತೋಮರ್, ರಾಜು ಕಂಠಿ ಬಂಧಿತರು. ಆರೋಪಿಗಳು ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಮದ್ಯದ ಬಾಟಲಿಗಳ ಬಾಕ್ಸ್ ಗಳನ್ನು ತುಂಬಿ ಸಾಗಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಧಾನಗರ ರಸ್ತೆ ಅಂಡರ್ ಪಾಸ್ ತಿರುವಿನ ಹತ್ತಿರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿದ್ದಾರೆ.

    ಜಪ್ತಾದ ಗೋವಾ ರಾಜ್ಯದ 15 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನದ ಮೌಲ್ಯ 20 ಲಕ್ಷ ಹೀಗೆ ಒಟ್ಟು 35 ಲಕ್ಷ್ಯದ ಮೌಲ್ಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರು ವಿಜಯಕುಮಾರ ಹೀರೆಮಠ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.