Tag: ಇಟಲಿ

  • ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಬೆಂಗಳೂರು: ಬಹುಭಾಷ ನಟಿ ಸುಹಾಸಿನಿಯ ಮಗ ನಂದನ್ ಅವರನ್ನ ಇಟಲಿಯ ಬೆಲ್ಯುನೊ ನಗರದಲ್ಲಿ ದರೋಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಹಾಸಿನಿ ತನ್ನ ಮಗನಿಗಾಗಿ ಸಹಾಯ ಕೇಳಿದ್ದರು.

    ವೆನಿಸ್ ಏರ್‍ಪೋರ್ಟ್ ಹತ್ತಿರ ಯಾರಾದರೂ ಇದ್ದರೆ ನನ್ನ ಮಗನಿಗೆ ಸಹಾಯ ಮಾಡಲು ಆಗುತ್ತಾ? ಬೆಲ್ಯುನೊ ನಗರದಲ್ಲಿ ಆತನನ್ನು ದರೋಡೆ ಮಾಡಲಾಗಿದೆ. ಮಗ ಏರ್‍ಪೋರ್ಟ್‍ಗೆ ಹೋಗಲು ಸಹಾಯ ಮಾಡಿ ಎಂದು ಟ್ವೀಟ್ ಮಾಡುತ್ತಾ ನಂದನ್‍ಯಿರುವ ಜಾಗವನ್ನು ವಿವರಿಸಿದ್ದರು. ವೆನಿಸ್ ಸ್ಟ ಮಾರ್ಕ್ ಸ್ಕ್ವೇರ್ ಪೊಲೀಸ್ ಸ್ಟೇಷನ್ ಹತ್ತಿರ ಇರುವವರು ಅವನಿಗೆ ಸಹಾಯ ಮಾಡಿ ಎಂದು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಸಹಾಯ ಮಾಡುವ ಬದಲು ಜನರು ಸುಹಾಸಿನಿಯವರ ಮಗನಿಗೆ ಅನಾವಶ್ಯಕವಾಗಿ ಕರೆಗಳನ್ನು ಮಾಡುತ್ತಿದ್ದರು. ಕರೆ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಾ ವೆನಿಸ್‍ನಲ್ಲಿರುವ ಜನರು ಸಹಾಯ ಮಾಡಲು ಆಗುವುದ್ದಿಲ್ಲ ಎಂದರೆ ನಾನು ಮೊದಲು ಪೋಸ್ಟ್ ಮಾಡಿದ ನಂಬರ್‍ಗೆ ಕರೆ ಮಾಡಬೇಡಿ. ಅವನ ಮೊಬೈಲ್ ಬ್ಯಾಟರಿ ಕಡಿಮೆಯಾಗುತ್ತಿದೆ. ಹೀಗಾಗಿ ಅವನು ಎಲ್ಲರ ಕಾಂಟ್ಯಾಕ್ಟ್ ಕಳೆದುಕೊಳುತ್ತಾನೆ. ಈಗಾಗಲೇ ತೊಂದರೆಯಲ್ಲಿ ಇರುವ ವ್ಯಕ್ತಿಗೆ ಅನಾವಶ್ಯಕವಾಗಿ ಕರೆ ಮಾಡುವ ಮೂಲಕ ತೊಂದರೆ ನೀಡುವುದನ್ನು ನಿಲ್ಲಿಸಿ ಎಂದು ಮತ್ತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು.

    ಬಹಳ ಬೇಗ ವ್ಯಕ್ತಿಯೊಬ್ಬ ನಂದನ್‍ಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ನಂತರ ಸಹಾಯಕ್ಕಾಗಿ ಬಂದ ಜನರಿಗೆ ಸುಹಾಸಿನಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮಗ ಇಂದು ರಾತ್ರಿ ಸುರಕ್ಷಿತವಾಗಿ ಹೋಟೆಲ್ ತಲುಪಿದ್ದಾನೆ ಎಂದು ಸುಹಾಸಿನಿ ತಮ್ಮ ಕೊನೆಯ ಟ್ವೀಟ್ ಪೋಸ್ಟ್ ಮಾಡಿದ್ದರು.

     

  • ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ.

    ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ ನಾಲಿಗೆಯಿಂದ ಜೋರಾಗಿ ತಿರುಗುತ್ತಿರುವ ಫ್ಯಾನ್ ರೆಕ್ಕೆಗಳನ್ನು ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಇತ್ತೀಚೆಗೆ ಇಟಾಲಿಯನ್ ಶೋ `ಲೊ ಶೋ ಡೈ ರೆಕಾರ್ಡ್’ ನಲ್ಲಿ ಅತ್ಯದ್ಭುತ ಸಾಹಸ ಮಾಡಿ ಗಿನ್ನಿಸ್ ರೆಕಾರ್ಡ್ ಪುಟ ಸೇರಿದ್ದಾರೆ.

    ಜೋರಾಗಿ ತಿರುಗುವ ಎರಡು ಫ್ಯಾನ್‍ಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಫ್ಯಾನ್‍ನ ರೆಕ್ಕೆಗಳನ್ನು 1 ನಿಮಿಷದಲ್ಲಿ 32 ಬಾರಿ ನಾಲಗೆಯಿಂದ ನಿಲ್ಲಿಸೋ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಝಿಯೋ ಇತಿಹಾಸ ಬರೆದಿರೋದು ಇದು ಮೊದಲೇನಲ್ಲ. ಈ ಹಿಂದೆ 1 ನಿಮಿಷದಲ್ಲಿ 20 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸಿದ್ದು, ಆ ರೆಕಾರ್ಡನ್ನ ಈ ಬಾರಿ ಮುರಿದಿದ್ದರು.

    ಆದ್ರೆ ಶೋದಲ್ಲಿ ತನ್ನ ಮೊದಲಿನ ರೆಕಾರ್ಡನ್ನ ಮುರಿದು ಮತ್ತೊಂದು ದಾಖಲೆ ಬರೆದ ಝಿಯೋ ದಾಖಲೆಯನ್ನು ಮತ್ತೊಬ್ಬ ಮಹಿಳೆ ಅರ್ಶಿಟಾ ಫರ್ಮನ್ ಮುರಿದಿದ್ದಾರೆ. ಅರ್ಶಿಟಾ 1 ನಿಮಿಷದಲ್ಲಿ 35 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

    https://www.youtube.com/watch?v=Lf814UKG0fk