Tag: ಇಕ್ಬಾಲ್ ಹುಸೇನ್

  • ನಾನೂ ರಾಮಭಕ್ತ, ಇದರಲ್ಲಿ ರಾಜಕೀಯ ಬೇಡ: ಶಾಸಕ ಇಕ್ಬಾಲ್ ಹುಸೇನ್

    ನಾನೂ ರಾಮಭಕ್ತ, ಇದರಲ್ಲಿ ರಾಜಕೀಯ ಬೇಡ: ಶಾಸಕ ಇಕ್ಬಾಲ್ ಹುಸೇನ್

    ರಾಮನಗರ: ಅತ್ತ ರಾಮಮಂದಿರ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ (Congress- BJP) ನಡುವೆ ಧರ್ಮಯುದ್ಧ ನಡೆಯುತ್ತಿದ್ದರೆ ಇತ್ತ ರಾಮನಗರದ ಕೈ ಶಾಸಕರೊಬ್ಬರು ರಾಮೋತ್ಸವದ ಜಪ ಮಾಡಿದ್ದಾರೆ. ನಾನು ಕೂಡಾ ರಾಮಭಕ್ತ, ನಾನು ರಾಮನನ್ನು ಪೂಜೆ ಮಾಡ್ತೀನಿ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ತಿಳಿಸಿದ್ದಾರೆ.

    ರಾಮಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಅಂತ ಚಿಂತನೆ ಮಾಡಿದ್ವಿ. ಅದನ್ನ ಭಕ್ತಿ ಪೂರ್ವಕವಾಗಿ ಮಾಡಿಯೇ ಮಾಡ್ತೀವಿ. ನಾನೂ ರಾಮನ ಭಕ್ತ, ನಾನು ಎಲ್ಲಾ ದೇವರನ್ನ ಪೂಜಿಸ್ತೇನೆ ಎಂದರು.

    ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡುತ್ತೇನೆ. ರಾಮಮಂದಿರ ವಿಚಾರವನ್ನ ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲ್ಲ. ಜನರನ್ನ ಒಡೆದು ಕೆಲವರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ ಗೆ ತನ್ನದೇ ಆದ ಬದ್ಧತೆ, ಸಿದ್ದಾಂತ ಇದೆ ಎಂದು ಶಾಸಕರು ಹೇಳಿದರು. ಇದನ್ನೂ ಓದಿ: ರಾಮ ಮಾಂಸಹಾರಿಯಲ್ಲ, ವನವಾಸದಲ್ಲಿ ಹಣ್ಣುಗಳನ್ನು ಸ್ವೀಕರಿಸುತ್ತಿದ್ದ: ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಲೋಕಸಭಾ ಚುನಾವಣೆ (Loksabha Election) ದೃಷ್ಟಿಯಿಂದ ಮಾಡ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರೋ ವಿಚಾರ. ಆದರೆ ನಾವು ರಾಮನನ್ನ ಮನೆ ದೇವರು ಅಂತ ಪೂಜೆ ಮಾಡ್ತೀವಿ. ಅವರಿಗೆ ರಾಮನ ಪೂಜೆ ಹೊಸದಿರಬಹದು, ಆದರೆ ನಮಗೆ ಹೊಸದೇನಲ್ಲ. ಅದಕ್ಕಾಗಿ ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ರು.

  • ಒಂದೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ: ಇಕ್ಬಾಲ್ ಹುಸೇನ್

    ಒಂದೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ: ಇಕ್ಬಾಲ್ ಹುಸೇನ್

    ರಾಮನಗರ: ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರದಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಟಾಂಗ್ ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್‌ ಸಿಎಂ ಆಗೇ ಆಗ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ‌

    ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ (D.K.Shivakumar) ಸಿಎಂ ಆಗೇ ಆಗ್ತಾರೆ. ಅವರು ಸಿಎಂ ಆಗಬೇಕು ಅನ್ನೋದು ನಮ್ಮ ಆಸೆ. ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿಕೆಶಿ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದನ್ನೂ ಓದಿ: ಚಿಣ್ಣರ ಬಿಂಬ ಸಾಂಸ್ಕೃತಿಕ ಸಂಸ್ಥೆ ಮುಡಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

    ಡಿ.ಕೆ.ಶಿವಕುಮಾರ್‌ಗೆ ಅವಕಾಶ ಸಿಗಲೇಬೇಕು. ರಾಜ್ಯದ ಜನತೆ ಕೂಡಾ ಅದನ್ನೇ ಬಯಸಿದ್ದಾರೆ. ಈ ಭಾಗದ ಜನ ನಮಗೆ ಹೆಚ್ಚು ಸ್ಥಾನ ನೀಡಲೂ ಅದೇ ಕಾರಣ ಎಂದು ಡಿಕೆಶಿ ಸಂಘಟನೆಯನ್ನು ಬಣ್ಣಿಸಿದ್ದಾರೆ.

    ಸಿಎಂ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಇಲ್ಲಿ ಕೆಲಸಕ್ಕೆ ಬಾರದವರು ಯಾರೂ ಇಲ್ಲ. ಎಲ್ಲರೂ ಕೆಲಸಕ್ಕೆ ಬರುವವರೇ. ಅವರನ್ನ ಶಾಸಕ ಅಂತ ಕರೆಯುತ್ತಾರೆ. ಅವರ ಬಗ್ಗೆ ಕೀಳಾಗಿ ಮಾತನಾಡಬಾರದು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ. ಆದರೆ ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ಗ್ಯಾರಂಟಿ ಬರೆ – ಟಿಸಿ ಸಹಿತ ‌ವಿದ್ಯುತ್ ಸಂಪರ್ಕ ಯೋಜನೆ ರದ್ದು

    ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಈ ಕುರಿತು ಬಳ್ಳಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷದ ನಮ್ಮದೇ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮನಗರದಲ್ಲಿ ಶ್ರೀರಾಮನ ಉತ್ಸವ ನಡೆಸಲು ಶಾಸಕ ಇಕ್ಬಾಲ್ ಹುಸೇನ್ ಪ್ಲ್ಯಾನ್‌

    ರಾಮನಗರದಲ್ಲಿ ಶ್ರೀರಾಮನ ಉತ್ಸವ ನಡೆಸಲು ಶಾಸಕ ಇಕ್ಬಾಲ್ ಹುಸೇನ್ ಪ್ಲ್ಯಾನ್‌

    ರಾಮಮನಗರ: ಬಿಜೆಪಿ (BJP) ಬಳಿಕ ಇದೀಗ ಕಾಂಗ್ರೆಸ್‌ನ ಕೆಲ ನಾಯಕರು ರಾಮನ ಜಪಕ್ಕೆ ಮುಂದಾಗುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ರಾಮನಗರದಲ್ಲಿ ರಾಮೋತ್ಸವಕ್ಕೆ (Sri Rama Utsava) ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

    ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಾಂಗ್ರೆಸ್ (Congress) ಶಾಸಕ ಇಕ್ಬಾಲ್ ಹುಸೇನ್ (Iqbal Hussain) ನೇತೃತ್ವದಲ್ಲಿ ಶ್ರೀರಾಮನ ಉತ್ಸವ ನಡೆಸುವ ಕಾರ್ಯಕ್ರಮ ರೂಪಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    ಗುರುವಾರ ನಡೆದ ಯುವ ಉತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಈ ಬಗ್ಗೆ ಮಾತನಾಡಿದ್ದು, ಶೀಘ್ರದಲ್ಲೇ ರಾಮೋತ್ಸವ ಕಾರ್ಯಕ್ರಮ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಇದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೂ ಮತಗಳ ಓಲೈಕೆಗೆ ಕಾಂಗ್ರೆಸ್ ಮುಂದಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ರಾಮಮಂದಿರ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿತ್ತು. ಅದೇ ರಾಮಬಾಣ ಪ್ರಯೋಗಿಸಿರುವ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಶ್ರೀರಾಮನ ಉತ್ಸವಕ್ಕೆ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಸುಗಳ ಮಾಂಸ ಬಳಕೆ ಆರೋಪ- ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    ರಾಮನಗರ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಶಿಫ್ಟ್‌ಗೆ ವಿರೋಧಿಸಿ ಸೆಪ್ಟೆಂಬರ್ 8ಕ್ಕೆ ರಾಮನಗರ ಬಂದ್‌ಗೆ ಕರೆ ನೀಡಿರುವ ಕುರಿತು ರಾಮನಗರ (Ramanagara) ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಪ್ರತಿಕ್ರಿಯೆ ನೀಡಿದರು.

    ನಮ್ಮ ಕಾಲೇಜು, ನಮ್ಮ ಯೂನಿವರ್ಸಿಟಿ ಇಲ್ಲೇ ಇರುತ್ತದೆ. ಅದಕ್ಕಾಗಿ ಬಂದ್ ಮಾಡುವುದರಲ್ಲಿ ಅರ್ಥ ಇಲ್ಲ. ನಾನು ವೈದ್ಯಕೀಯ ಸಚಿವ ಶರಣಪ್ರಕಾಶ್ ಅವರನ್ನು ಭೇಟಿ ಆಗಿದ್ದೇನೆ. ಡಿಕೆ ಸುರೇಶ್ (DK Suresh) ಹಾಗೂ ನಾನು ಇಬ್ಬರೂ ಅವರ ಜೊತೆ ಮಾತನಾಡಿದ್ದೇವೆ. ಮೆಡಿಕಲ್ ಕಾಲೇಜು ರಾಮನಗರದಲ್ಲೇ ಉಳಿಯುತ್ತೆ. ಸಚಿವರೇ ಬಂದು ಗುದ್ದಲಿ ಪೂಜೆ ಮಾಡುತ್ತಾರೆ. ಸುರೇಶ್ ಅವರ ನೇತೃತ್ವದಲ್ಲಿ ನಾನೇ ಆ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಈ ಕಾಲೇಜಿಗೂ ಕನಕಪುರ ಕಾಲೇಜಿಗೂ ಸಂಬಂಧ ಇಲ್ಲ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು 20 ವರ್ಷದ ಹಿಂದೆ ಆಗಿರೋದು. ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಶಿಪ್ಟ್ ಆಗಿತ್ತು. ಈಗ ಮತ್ತೆ ಕನಕಪುರಕ್ಕೆ ನಮ್ಮ ನಾಯಕರು ಹೊಸ ಕಾಲೇಜು ತರುತ್ತಾರೆ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇಸ್ರೋಗೆ ಜಾಗ ಕೊಟ್ಟಿದ್ದು ಕಾಂಗ್ರೆಸ್: ಬಿ.ಕೆ ಹರಿಪ್ರಸಾದ್

    ಇದರಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಟೇಕಫ್ ಆಗ್ತಾ ಇದೆ. ಕಾಂಗ್ರೆಸ್ ಬಗ್ಗೆ ಜನರಿಗೆ ಒಳ್ಳೆಯ ಆಸಕ್ತಿ, ವಿಶ್ವಾಸ ಇದೆ. ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆಯಲ್ವಾ ಎನ್ನುವ ಹೊಟ್ಟೆಕಿಚ್ಚಿಗೆ ಹೀಗೆಲ್ಲಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ರಾಮನಗರ: 77ನೇ ಸ್ವಾತಂತ್ರ್ಯೋತ್ಸವ (77th Independence Day) ಸಂಭ್ರಮದ ಭಾಗವಾಗಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ (Iqbal Hussain) ಅವರು 2.70 ಲಕ್ಷ ಲಡ್ಡು ವಿತರಣೆ ಮಾಡಲಿದ್ದಾರೆ.

    ಆ.15 (ಮಂಗಳವಾರ) ಸ್ವತಂತ್ರ ದಿನಾಚರಣೆ ಆಚರಿಸಲು ದೇಶ ಸಜ್ಜಾಗಿದೆ. ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮಿಸುವ ಉದ್ದೇಶದಿಂದ ಲಾಡು ವಿತರಣೆಗೆ ಇಕ್ಬಾಲ್‌ ಹುಸೇನ್‌ ಅವರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 5 ತಾಲ್ಲೂಕಿನ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಡ್ಡು ಹಂಚಿಕೆ ಮಾಡಲಿದ್ದಾರೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬರೋಬ್ಬರಿ 2,70,000 ಲಡ್ಡು ತಯಾರಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಲಾಡು ಹಂಚಿಕೆ ಮಾಡಲಾಗುವುದು.

    100 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸಿದ್ದಾರೆ. ಸ್ವತಂತ್ರ ದಿನದಂದು ಹಂಚಲು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೂ ಲಡ್ಡು ನೀಡಲಾಗುವುದು. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಲಡ್ಡು ಹಂಚಿಕೆ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮನ ತ್ಯಾಗಕ್ಕೆ ಮರುಗದ ಮತದಾರ: ನಿಖಿಲ್ ಕುಮಾರಸ್ವಾಮಿ ಸೋಲು

    ಅಮ್ಮನ ತ್ಯಾಗಕ್ಕೆ ಮರುಗದ ಮತದಾರ: ನಿಖಿಲ್ ಕುಮಾರಸ್ವಾಮಿ ಸೋಲು

    ಟ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭಾರೀ ಅಂತರದಿಂದಲೇ ಗೆಲುವು ಸಾಧಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ಆ ನಂಬಿಕೆಯನ್ನು ಹುಸಿಮಾಡಿದ್ದಾರೆ ರಾಮನಗರ (Ramanagara) ವಿಧಾನಸಭಾ ಮತದಾರರು. ಮಗನಿಗಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗಾಗಿ ಫಲಿಸಲಿಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ (Iqbal Hussain) ಗೆಲುವು ಸಾಧಿಸಿದ್ದಾರೆ.

    ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ನಿಖಿಲ್ ಸ್ಪರ್ಧಿಸಿದ್ದರು. ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲಿಯೂ ನಿಖಲ್ ಸೋತಿದ್ದರು. ರಾಮನಗರದಲ್ಲಿ ಸತತವಾಗಿ ಗೆದ್ದಿದ್ದ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ ತಾಯಿಯ ಕ್ಷೇತ್ರವನ್ನೇ ನಿಖಿಲ್ ಕಾಂಗ್ರಸ್ ಗೆ ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: Karnataka Election 2023 Result – ಬಿಜೆಪಿ ಭದ್ರಕೋಟೆ ಕೊಡಗು ಛಿದ್ರಗೊಳಿಸಿದ ಕಾಂಗ್ರೆಸ್‌ LIVE Updates

    2018ರಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರು. ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಪತ್ನಿ ಅನಿತಾ ಕುಮಾರ್ ಸ್ವಾಮಿಗೆ ಟಿಕೆಟ್ ನೀಡಿದ್ದರು. ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ, ಈ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದರು.

    ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 85003 ಮತಗಳನ್ನು ಪಡೆದಿದ್ದರೆ, ನಿಖಿಲ್ ಕುಮಾರಸ್ವಾಮಿ 73910 ಮತಗಳನ್ನು ಪಡೆದಿದ್ದಾರೆ. ಗೆದ್ದ ಅಭ್ಯರ್ಥಿಗಿಂತ 11093 ಕಡಿಮೆ ಮತಗಳನ್ನು ನಿಖಿಲ್ ಪಡೆದುಕೊಳ್ಳುವ ಮೂಲಕ ಗೆಲುವಿನ ಹಾರವನ್ನು ಇಕ್ಬಾಲ್ ಕೊರಳಿಗೆ ಬೀಳುವಂತೆ ಮಾಡಿದ್ದಾರೆ.