Tag: ಇಕ್ಬಾಲ್ ಹುಸೇನ್

  • ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ರಾಮನಗರ: ಎಲ್ಲರೂ ಇಷ್ಟಪಡುವ ಆರ್‌ಸಿಬಿ (RCB) ತಂಡ ಕಪ್ ಗೆದ್ದಿತ್ತು, ಆದರೆ ಅದರ ಸಂಭ್ರಮ ಮಾಡಲು ಹೋಗಿ ಸಾವು-ನೋವು ಸಂಭವಿಸಿದೆ. ತಡವಾಗಿ ಆಲೋಚನೆ ಮಾಡಿ ವಿಜಯೋತ್ಸವ ಆಚರಣೆ ಮಾಡಬಹುದಿತ್ತು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ತ್ಯಾಗ ಬಲಿದಾನದ ಪ್ರತೀಕವಾಗಿ ಬಕ್ರೀದ್ ಆಚರಣೆ ಮಾಡುತ್ತಿದ್ದೇವೆ. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಶಾಂತಿ ಕೋರಿ ಇಂದು ಪ್ರಾರ್ಥನೆ ಮಾಡಿದ್ದೇವೆ. ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ್ದೇವೆ. ಈ ದುರ್ಘಟನೆ ನಡೆಯಬಾತದಿತ್ತು, ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    ಸಿದ್ಧತೆ, ಭದ್ರತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಆತುರದಿಂದ ಕಾರ್ಯಕ್ರಮ ಮಾಡಿ ತಪ್ಪು ಮಾಡಿದ್ದೇವೆ. ನಾವೂ ತಪ್ಪು ಮಾಡಿದ್ದೇವೆ, ಅಧಿಕಾರಿ ವರ್ಗದವರು ತಪ್ಪು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲೇ ಬಾರದಿತ್ತು. ಘಟನೆ ನಮಗೆ ಹೆಚ್ಚು ದುಖಃವನ್ನ ತಂದಿದೆ. ಘಟನೆಯನ್ನ ನಾವು ಖಂಡಿಸುತ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

  • Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು

    Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು

    – ನೀರೆತ್ತುವ ಯಂತ್ರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ

    ರಾಮನಗರ: ದಶಕಗಳಿಂದ ದುರಸ್ತಿಗೊಳ್ಳದೇ ನೀರಿನಿಂದ ವಂಚಿತವಾಗಿದ್ದ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ 20 ವರ್ಷಗಳ ಬಳಿಕ ನೀರು ಹರಿದಿದೆ.

    ಮಂಚನಬೆಲೆ ಜಲಾಶಯದ (Manchanabele Dam) ಎಡದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಚಾಲನೆ ನೀಡಿದ್ದಾರೆ. ನೀರನ್ನು ಲಿಫ್ಟ್ ಮಾಡುವ ಯಂತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಾಲೆಗೆ ನೀರು ಹರಿಬಿಟ್ಟಿದ್ದಾರೆ. ಮಂಚನಬೆಲೆ ಜಲಾಶಯದಿಂದ ರಾಮನಗರ ತಾಲೂಕಿನ ಕಸಬಾ ಹೋಬಳಿ ಕೃಷಿ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದ್ದು, ಸುಮಾರು 1500 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಗೆ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ಇದನ್ನೂ ಓದಿ:  ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಸದ್ಯ ಮಂಚನಬೆಲೆ ಜಲಾಶಯದಲ್ಲಿ 1.06 ಟಿಎಂಸಿ ನೀರು ಸಂಗ್ರಹವಾಗಿದ್ದು, ಅದರಲ್ಲಿ ಕೃಷಿಗೆ 51ಕ್ಯೂಸೆಕ್ ನೀರು ಬಳಕೆಗೆ ಚಿಂತನೆ ಮಾಡಲಾಗಿದೆ. ಬೇಸಿಗೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಾಲೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ಶಾಸಕ ಇಕ್ಬಾಲ್ ಹುಸೇನ್‌ಗೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ನಾಲೆಗೆ ನೀರು ಹರಿಸಿದ್ದರಿಂದ ರೈತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್‌ಗೆ ಮತ್ತೊಂದು ಸಂಕಷ್ಟ – 2014 ರ ಇಲವಾಲ ಪೊಲೀಸ್ ದರೋಡೆ ಕೇಸ್ ಮತ್ತೆ ಮುನ್ನೆಲೆಗೆ

  • ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    – ನ್ಯಾಯ ಒದಗಿಸದಿದ್ದರೆ ದಯಾಮರಣ ನೀಡುವಂತೆ ಮನವಿ

    ರಾಮನಗರ: ಶಾಸಕ ಇಕ್ಬಾಲ್ ಹುಸೇನ್ (Iqbal Hussain) ವಿರುದ್ಧ ಭೂಕಬಳಿಕೆ (Land Grabbing) ಆರೋಪ ವಿಚಾರ ಕುರಿತು ಕನಕಪುರ (Kanakapura) ತಾಲೂಕಿನ ಹೊಂಗಣಿದೊಡ್ಡಿ ಗ್ರಾಮಸ್ಥರು ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

    1957ರಲ್ಲಿ ಭೂ ಮಾಲೀಕರು ಗ್ರಾಮಸ್ಥರಿಗೆ ಹಿಂದೆ ಕ್ರಯ ಮಾಡಿಕೊಟ್ಟ ದಾಖಲಾತಿ ಹಾಗೂ 19 ಜನ ಗೇಣಿದಾರರ ಗೇಣಿ ಅರ್ಜಿಯನ್ನ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಗ್ರಾಮಸ್ಥರು ಮಾತನಾಡಿದರು. ಗ್ರಾಮದ 67 ಎಕರೆ ಜಮೀನನ್ನು ರಾಮನಗರ ಶಾಸಕರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಶಾಸಕರ ಹೆಸರಲ್ಲಿ ಇದೆ ಎಂಬುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಈಗ ಗ್ರಾಮವನ್ನ ಮಾತ್ರ ಬಿಟ್ಟುಕೊಡುತ್ತೇನೆ ಎನ್ನುತ್ತಾರೆ. ಕೇವಲ ಗ್ರಾಮದ ಜಮೀನು ಮಾತ್ರವಲ್ಲ ನಮ್ಮ ಕೃಷಿ ಭೂಮಿಯನ್ನೂ ನಮಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    19 ಗೇಣಿದಾರರ ಜಮೀನುಗಳನ್ನು ವಾಪಸ್ ನೀಡಿ. ಸ್ಥಳಕ್ಕೆ ಡಿಸಿ ಭೇಟಿ ನೀಡಿ ನಮ್ಮ ಜಾಗಕ್ಕೆ ಮಂಜೂರಾತಿ ಪತ್ರಗಳ ನೀಡಬೇಕು. ಕಳೆದ 60-70 ವರ್ಷದಿಂದ ನಾವು ಅಲ್ಲಿ ವ್ಯವಸಾಯ ಮಾಡ್ತಿದ್ದೇವೆ. ನಮ್ಮ ಜಮೀನುಗಳನ್ನ ನಮಗೆ ಉಳಿಸಿಕೊಡಿ. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನ್ಯಾಯ ಒದಗಿಸಲಿಲ್ಲ ಅಂದರೆ ದಯಾಮರಣ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

  • ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    – ಇಕ್ಬಾಲ್ ಹುಸೇನ್ ವಿರುದ್ದ ಲೋಕಾಯುಕ್ತಕ್ಕೆ ದೂರು

    ರಾಮನಗರ: ರಾಜ್ಯದಲ್ಲಿ ವಕ್ಫ್ ಜಮೀನಿಗೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಒಂದು ಕಡೆಯಾದರೆ ಮತ್ತೊಂದು ಕಡೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್‌ (Iqbal Hussain) ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

    ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಈಗ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ.

    ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ ಮಾಡಿ ಬಡಜನರಿಗೆ ಭೂಮಿ ಕೊಟ್ಟಿದ್ದೇವೆ ಎಂಬ ಹೆಗ್ಗಳಿಕೆಯನ್ನು ಕಾಂಗ್ರೆಸ್ (Congress) ಪಡೆದುಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಶಾಸಕರೇ ಈ ಕಾಯ್ದೆಯನ್ನು ಉಲ್ಲಂಘನೆ ಮಾಡಿ ರೈತರ ಜಮೀನು ಕಬಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

     

    ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಕನಕಪುರ ತಾಲೂಕಿನ ಯಡಮಾರನಹಳ್ಳಿ ದಾಖಲೆಯ ಹೊಂಗಣಿದೊಡ್ಡಿ ಗ್ರಾಮದಲ್ಲಿನ ಸುಮಾರು 67 ಎಕರೆ 30 ಗುಂಟೆ ಜಮೀನನ್ನು ಇಕ್ಬಾಲ್ ಹುಸೇನ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಊರು ಒಕ್ಕಲೆಬ್ಬಿಸುವ ಆತಂಕ ಸೃಷ್ಠಿಯಾಗಿದೆ. ಕಳೆದ 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಜೀವನ ನಡೆಸುತ್ತಿದ್ದ ಇಡೀ ಊರನ್ನೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಖರೀದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಶಾಸಕ ಇಕ್ಬಾಲ್ ಹುಸೇನ್ ಸೇರಿ 7 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಗ್ರಾಮಸ್ಥರು ದೂರು ನೀಡಿದ್ದಾರೆ. ಕನಕಪುರ ತಾಲೂಕಿನ ವಿಎ, ಆರ್ ಐ, ಶಿರಸ್ತೇದಾರ್, ಹಾಲಿ ತಹಶಿಲ್ದಾರ್ ಹಾಗೂ ಹಿಂದಿನ ತಹಶಿಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾವ್ಯಾರಿಗೂ ತೊಂದರೆ ಕೊಟ್ಟಿಲ್ಲ, ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ: ಪ್ರಮೋದಾ ದೇವಿ

     

    ಕಳೆದ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದೇವೆ. ಇದೀಗ ಏಕಾಏಕಿ ಬಂದು ಈ ಜಾಗ ನಮ್ಮದು ಎಂದರೆ ಹೇಗೆ, ನಾವು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದೇವೆ. ಕನಕಪುರದ ಕಂದಾಯ ಅಧಿಕಾರಿಗಳು ಶಾಮೀಲಾಗಿ ಈ ರೀತಿ ಮಾಡಿದ್ದಾರೆ, ಕನಕಪುರ, ಹಾರೋಹಳ್ಳಿಯಲ್ಲಿ ಇದ್ದಂತಹ ಭೂ ನ್ಯಾಯ ಮಂಡಲಿ ನ್ಯಾಯಾಲಯವನ್ನು ಬೇಕಂತಲೇ ಮುಚ್ಚಿಸಿದ್ದಾರೆ. ನಾವು ಬೆಂಗಳೂರಿನ ಭೂ ನ್ಯಾಯ ಮಂಡಲಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಕೇಸ್ ಇತ್ಯರ್ಥ ಆಗದೇ ಶಾಸಕರು ಹೇಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪ ಕುರಿತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡಾ ಪ್ರತಿಕ್ರಿಯೆ ನೀಡಿ ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಗ್ರಾಮ ಇರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

     ನಾನು ಖರೀದಿ ಮಾಡಿದ ಜಮೀನಿನ ಸರ್ವೆನಂಬರ್ ಒಂದರಲ್ಲಿ ಗ್ರಾಮ ಇದೆ. ಆ ಗ್ರಾಮದ ಜನರಿಗೆ ಹಕ್ಕುಪತ್ರ ಇಲ್ಲ. ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಆ ಗ್ರಾಮ ಇರುವ ಜಾಗವನ್ನು ಜನರಿಗೆ ಬಿಟ್ಟು ಕೊಡುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಹಕ್ಕುಪತ್ರ ಮಾಡಿಕೊಡಲು ಹೇಳಿದ್ದೇನೆ. ಆದರೆ ನನ್ನ ವಿರುದ್ಧದ ಆರೋಪದಲ್ಲಿ ಸತ್ಯವಿಲ್ಲ. ಯಾರೋ ಸಂಘ ಕಟ್ಟಿಕೊಂಡು ಬಂದು ರೋಲ್ ಕಾಲ್ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲೇ ತನಿಖೆ ಆಗಲಿ ಎಂದಿದ್ದಾರೆ.

  • ಪಕ್ಷ ಸಂಘಟನೆಗಾಗಿ ಡಿಕೆಶಿ ಹೋರಾಟ ಮಾಡ್ತಿದ್ದಾರೆ, ಸಮಯ ಬಂದಾಗ ಸ್ಥಾನಮಾನ ಸಿಕ್ಕೇ ಸಿಗುತ್ತೆ: ಇಕ್ಬಾಲ್ ಹುಸೇನ್

    ಪಕ್ಷ ಸಂಘಟನೆಗಾಗಿ ಡಿಕೆಶಿ ಹೋರಾಟ ಮಾಡ್ತಿದ್ದಾರೆ, ಸಮಯ ಬಂದಾಗ ಸ್ಥಾನಮಾನ ಸಿಕ್ಕೇ ಸಿಗುತ್ತೆ: ಇಕ್ಬಾಲ್ ಹುಸೇನ್

    ರಾಮನಗರ: ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಉತ್ಸಾಹಕ್ಕಾಗಿ ಡಿ.ಕೆ.ಶಿವಕುಮಾರ್ (DK Shivakumar) ಹೋರಾಟ ಮಾಡುತ್ತಿದ್ದಾರೆ. ಸಮಯ ಬಂದಾಗ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತೆ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ತಿಳಿಸಿದ್ದಾರೆ.

    ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆಯಾಗಬೇಕು ಎಂಬ ವಿಚಾರ ಕುರಿತು ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಈ ವಿಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ಯಾರೂ ಕೂಡ ಈ ಬಗ್ಗೆ ಮಾತನಾಡಬಾರದೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಯಾವ ಬದಲಾವಣೆಯೂ ಇಲ್ಲ, ಯಾವ ಚೇರು ಕೂಡ ಖಾಲಿ ಇಲ್ಲ ಎಂದರು. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದುಗೊಳಿಸಿ – ಸುಪ್ರೀಂಗೆ 1492 ಪುಟಗಳ ದಾಖಲೆ ಸಲ್ಲಿಸಿದ ಪೊಲೀಸರು

    ಇನ್ನೂ ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರ ಕುರಿತು ಮಾತನಾಡಿದ ಅವರು, ಜನರು ಅನಾವಶ್ಯಕವಾಗಿ ಸಂಘಗಳನ್ನ ಮಾಡಿಕೊಂಡು ಸಾಲ ಮಾಡಬಾರದು. ಬಿಡಿಸಿಸಿ ಬ್ಯಾಂಕ್‌ನಲ್ಲಿ 0%ನಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮೈಕ್ರೋ ಫೈನಾನ್ಸ್ ಅವರನ್ನು ದೂರವಿಡಿ ಎಂದು ಜನರಿಗೆ ಮನವಿ ಮಾಡುತ್ತೇನೆ. ದುಡಿದ ಹಣವನ್ನು ಮೈಕ್ರೋ ಫೈನಾನ್ಸ್‌ಗೆ ಬಡ್ಡಿಕಟ್ಟಿ ಹಾಳು ಮಾಡಿಕೊಳ್ಳಬೇಡಿ. ಮೈಕ್ರೋ ಫೈನಾನ್ಸ್ ನಡೆಸುವವರು ಯಾವುದೇ ಆರ್‌ಬಿಐ ನಿಯಮಗಳನ್ನು ಇಟ್ಟುಕೊಂಡಿಲ್ಲ. ಅಲ್ಲದೇ ಫೈನಾನ್ಸ್‌ಗಳಿಗೂ ಆರ್‌ಬಿಐಗೂ ಯಾವುದೇ ಸಂಬಂಧವಿಲ್ಲ. ಯಾವ್ಯಾವುದೋ ದೇವರ ಹೆಸರಿಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ಫೈನಾನ್ಸ್ ಕಂಪನಿಗಳಿಗೆ ಅಂತ್ಯ ಕಾಣಬೇಕು ಎಂದು ಇಕ್ಬಾಲ್ ಹುಸೇನ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ರೌಡಿಶೀಟರ್‌ ಹತ್ಯೆ; ಬೆಂಗಳೂರಲ್ಲಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಹಂತಕ

  • ರಾಮನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ – ಕಾಂಗ್ರೆಸ್‌ನ ಶೇಷಾದ್ರಿ ನೂತನ ಅಧ್ಯಕ್ಷ

    ರಾಮನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ – ಕಾಂಗ್ರೆಸ್‌ನ ಶೇಷಾದ್ರಿ ನೂತನ ಅಧ್ಯಕ್ಷ

    ರಾಮನಗರ: ಪ್ರತಿಷ್ಠಿತ ರಾಮನಗರ ನಗರಸಭೆ (Ramanagara Muncipal Council) ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ ಹಿನ್ನೆಲೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ (Comngress) ಕೆ.ಶೇಷಾದ್ರಿ (K Sheshadri) ಅವಿರೋಧ ಆಯ್ಕೆಯಾಗಿದ್ದಾರೆ.

    ಒಟ್ಟು 31 ಸದಸ್ಯರ ಸಂಖ್ಯಾಬಲವಿರುವ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್‌ನ 20 ಸದಸ್ಯರು ಹಾಗೂ ಜೆಡಿಎಸ್‌ನ 11 ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವ ಹಿನ್ನೆಲೆ ಅಧ್ಯಕ್ಷರಾಗಿ ಕೆ.ಶೇಷಾದ್ರಿ, ಉಪಾಧ್ಯಕ್ಷರಾಗಿ ಆಯಿಷಾ ಬಾನು ಅವಿರೋಧ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್

    ಜೆಡಿಎಸ್‌ಗೆ ಬಹುಮತ ಇಲ್ಲದ ಕಾರಣ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸಿರಲಿಲ್ಲ. ಜೊತೆಗೆ ಇಬ್ಬರು ಜೆಡಿಎಸ್ ಸದಸ್ಯರು ತಟಸ್ಥವಾಗಿದ್ದರಿಂದ ಕಾಂಗ್ರೆಸ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಹಿ ತಿನಿಸಿ, ಶುಭಕೋರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್‌

  • ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ – ಯುವತಿಯಿಂದ ದೂರು, ಎಫ್‌ಐಆರ್‌ ದಾಖಲು

    ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ – ಯುವತಿಯಿಂದ ದೂರು, ಎಫ್‌ಐಆರ್‌ ದಾಖಲು

    ರಾಮನಗರ: ಶಾಸಕ ಇಕ್ಬಾಲ್‌ ಹುಸೇನ್‌ (Ikbal Hussain) ಮತ್ತು ಯುವತಿಯ ವಾಟ್ಸಪ್‌ ವಿಡಿಯೋ ಕಾಲ್‌ (Whatsapp Video Call) ವೈರಲ್‌ ಆದ ಬೆನ್ನಲ್ಲೇ ರಾಮನಗರ ಮೂಲದ ಯುವತಿ ಸೆನ್‌ ಪೊಲೀಸ್‌ ಠಾಣೆಗೆ (Cyber Economic and Narcotics Crime Police Station) ದೂರು ನೀಡಿದ್ದಾರೆ.

    ನನ್ನ ಹಾಗೂ ಶಾಸಕರ ವೀಡಿಯೋವನ್ನ ಅಶ್ಲೀಲವಾಗಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಫೇಸ್‌ಬುಕ್‌ನಲ್ಲಿ (Facebook) ವೀಡಿಯೋ ಹರಿಬಿಟ್ಟು ನನ್ನ ತೇಜೋವಧೆ ಮಾಡುತ್ತಿದ್ದಾರೆ‌. ಇದರಿಂದ ನನ್ನ ಮಾನಹಾನಿಯಾಗಿದ್ದು ವೀಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮತ ಪ್ರಮಾಣ ದಿಢೀರ್‌ ಹೆಚ್ಚಳ – ಮತ್ತೆ ಇವಿಎಂ ವಿಶ್ವಾಸರ್ಹತೆಯನ್ನು ಪ್ರಶ್ನಿಸಿದ ಮಮತಾ

     ದೂರು ಸ್ವೀಕರಿಸಿ ಅನಾಮಧೇಯ ವ್ಯಕ್ತಿಯ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?

  • ಕಾಂಗ್ರೆಸ್‍ನಿಂದ ಸೀರೆ ಹಂಚಿಕೆ ಆರೋಪ- ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕಿಡಿ

    ಕಾಂಗ್ರೆಸ್‍ನಿಂದ ಸೀರೆ ಹಂಚಿಕೆ ಆರೋಪ- ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕಿಡಿ

    ರಾಮನಗರ: ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಈ ಸಂಬಂಧ ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್, 3,700 ಡ್ರೆಸ್ ಮೆಟೀರಿಯಲ್, ಸೀರೆಗಳ ಅಕ್ರಮ ಸಂಗ್ರಹ ಮಾಡಲಾಗಿದೆ. 14 ಲಕ್ಷ ಮೌಲ್ಯದ ವಸ್ತಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಶಾಸಕ ಇಕ್ಬಾಲ್ ಹುಸೇನ್‍ಗೆ ಸಂಬಂಧಿಸಿದ ವಸ್ತುಗಳು ಎಂದು ದಾಖಲೆ ಸಮೇತ ನಿಖಿಲ್ ಫೋಟೋ ಬಿಡುಗಡೆ ಮಾಡಿದ್ದಾರೆ.

    ಕಳೆದ 15-20ದಿನದಿಂದ ಕುಕ್ಕರ್, ಸೀರೆ ಹಂಚಲಾಗ್ತಿದೆ ಅಂತ ಆರೋಪಿಸಿರುವ ನಿಖಿಲ್, ಈ ಬಗ್ಗೆ ನಿನ್ನೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರೂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದ್ಯಾ ಎಂದು ಜಿಲ್ಲಾಡಳಿತವನ್ನು ನಿಖಿಲ್ (Nikhil Kumaraswamy) ಪ್ರಶ್ನೆ ಮಾಡಿದ್ದಾರೆ.

    ಕಾರ್ಯಕರ್ತರಿಗೆ ನಿಖಿಲ್ ಭರವಸೆ: ರಾಜ್ಯ ಚುನಾವಣಾ ಆಯೋಗದವರೇ ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಆಗ್ತಿದೆ. ಅಲ್ಲದೇ ಈ ಕುರಿತು ಇಂದು ನಾನು ಚುನಾವಣಾ ಆಯೋಗಕ್ಕೆ ದೂರು ನೀಡ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುವುದಾಗಿ ನಿಖಿಲ್ ಭರವಸೆ ನೀಡಿದರು.

    ಬಡವರ ಪಾಲಿನ ದೇವರು ಮಂಜುನಾಥ್: ಡಾ.ಮಂಜುನಾಥ್ (Dr C.N Manjunath) ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಬಡವರ ಪಾಲಿನ ದೇವರಾಗಿದ್ದಾರೆ. ಅಂತವರನ್ನ ಕಾಂಗ್ರೆಸ್ ಶಾಸಕರು ಟೀಕಿಸ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರು ಡಾ.ಮಂಜುನಾಥ್ ಗೆ ರಾಜಕೀಯ ತೆವಲು ಅಂದಿದ್ದಾರೆ. ತೆವಲು ಎನ್ನುವ ಪದದ ಅರ್ಥ ಗೊತ್ತಾ ನಿಮಗೆ..? ರಾಮನಗರ ಶಾಸಕರ ಪದ ಬಳಕೆಯನ್ನೂ ನೋಡಿದ್ದೇನೆ. ನಿಮ್ಮ ಎಲ್ಲಾ ವಿಚಾರಗಳೂ ನನಗೆ ಗೊತ್ತು. ನೀವು ಎಲ್ಲೆಲ್ಲಿ ಹಣ ಇಟ್ಟಿದ್ದೀರಿ ಎಂಬುದು ಗೊತ್ತು. ನಾನು ಕೂಡಾ ಇದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ನನ್ನ ಸೋಲಿಸಲು ನೀವು ಏನೇನು ಮಾಡಿದ್ರಿ ಎಲ್ಲಾ ಗೊತ್ತು. ಗಿಫ್ಟ್ ಕಾರ್ಡ್ ಕೊಟ್ಟು ಮತದಾರರನ್ನ ಯಾಮಾರಿಸಿದ್ದೀರಿ. ಮುಗ್ಧ ಜನರಿಗೆ ಆಮಿಷ ತೋರಿಸಿ ಎಲೆಕ್ಷನ್ ಮಾಡಿದ್ದೀರಿ. ಈಗ ಸಂಕ್ರಾಂತಿ ಗಿಫ್ಟ್ ಅಂತ ಮಾರ್ಚ್ ತಿಂಗಳಲ್ಲಿ ಕುಕ್ಕರ್ ಹಂಚುತ್ತಿದ್ದೀರಿ. ಕೂಡಲೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ರಾಮನಗರಕ್ಕೆ ಕಾಲಿಡಲ್ಲ: ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಹೆಚ್ಚಾಗ್ತಿದೆ. ನಮ್ಮ ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಲಿಲ್ಲ ಅಂದ್ರೆ ಕೇಸ್ ಹಾಕ್ತೀವಿ ಅಂತ ಹೆದರಿಸ್ತಿದ್ದೀರಿ. ನಿಮ್ಮ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ದಿನ ನಡೆಯಲ್ಲ. ನಮ್ಮ ಅಧಿಕಾರವಧಿಯಲ್ಲಿ ನಾವು ದುರುಪಯೋಗ ಮಾಡಿಕೊಂಡಿಲ್ಲ. ಒಬ್ಬ ಅಧಿಕಾರಿ, ಪೊಲೀಸರಿಗೆ ಫೋನ್ ಮಾಡಿ ಒತ್ತಡ ಹಾಕಿಲ್ಲ. ಹಾಗೇನಾದ್ರೂ ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರೆ ಇನ್ಮುಂದೆ ರಾಮನಗರಕ್ಕೆ ಕಾಲಿಡಲ್ಲ ಎಂದು ನಿಖಿಲ್ ಕಿಡಿಕಾರಿದರು.

  • ರಾಮನಗರದಲ್ಲಿ ಮತದಾರರಿಗೆ ಹಂಚಲು ಕಾಂಗ್ರೆಸ್‌ನಿಂದ ಸೀರೆ ಸಂಗ್ರಹ ಆರೋಪ – 10 ಸಾವಿರಕ್ಕೂ ಹೆಚ್ಚು ಸೀರೆ ಜಪ್ತಿ

    ರಾಮನಗರದಲ್ಲಿ ಮತದಾರರಿಗೆ ಹಂಚಲು ಕಾಂಗ್ರೆಸ್‌ನಿಂದ ಸೀರೆ ಸಂಗ್ರಹ ಆರೋಪ – 10 ಸಾವಿರಕ್ಕೂ ಹೆಚ್ಚು ಸೀರೆ ಜಪ್ತಿ

    ರಾಮನಗರ: ಮತದಾರರಿಗೆ ಹಂಚಲು ಕಾಂಗ್ರೆಸ್ (Congress) ಶಾಸಕರು ಸೀರೆ ಸಂಗ್ರಹಿಸಿರುವ ಆರೋಪ ಹಿನ್ನೆಲೆಯಲ್ಲಿ ಗೋಡೌನ್‌ನಲ್ಲಿದ್ದ ಸೀರೆಗಳನ್ನು (Sarees) ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ರಾಮನಗರದ (Ramangara) ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿರುವ ಖಾಸಗಿ ಗೋದಾಮು ಬಳಿ ಸೀರೆಗಳು ತುಂಬಿದ್ದ ವಾಹನವನ್ನು ಬಿಜೆಪಿ (BJP) ಮತ್ತು ಜೆಡಿಎಸ್ (JDS) ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಒಟ್ಟು 14 ಲಕ್ಷ ರೂ. ಮೌಲ್ಯದ 10 ಸಾವಿರಕ್ಕೂ ಅಧಿಕ ಸೀರೆಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮತದಾರರಿಗೆ ಹಂಚುವುದಕ್ಕಾಗಿ ಕಾಂಗ್ರೆಸ್‌ನವರು ವಾಹನದಲ್ಲಿ ಸೀರೆಗಳನ್ನು ತಂದು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ ಎಂದು ಜೆಡಿಎಸ್ ಕಾಯಕರ್ತರು ಆರೋಪಿಸಿದ್ದಾರೆ.  ಇದನ್ನೂ ಓದಿ: IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್‌ ಪಂತ್ ನಾಯಕ

    ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಆಪ್ತನೊಬ್ಬ ಸೀರೆ ಹಂಚುವ ಕೆಲಸ ಮಾಡಿದ್ದಾನೆ. ಎರಡು ವಾಹನಗಳಲ್ಲಿ ಸೀರೆ ಹಂಚಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

    ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರಪುರ ಠಾಣೆ ಪಿಎಸ್ ಐ ಆಕಾಶ್ ಸೇರಿದಂತೆ ಸ್ಥಳೀಯ ಚುನಾವಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಸೀರೆಗಳನ್ನು ಪರಿಶೀಲಿಸಿ ಗೋದಾಮು ಸಿಬ್ಬಂದಿಯಿಂದ ಸೀರೆಗಳನ್ನು ತಂದಿರುವುದಕ್ಕೆ ಸಂಬಂಧಿಸಿದ ರಸೀದಿ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ಸೀರೆ ಕವರ್ ಮೇಲೆ ಯಾವುದೇ ಸ್ಟಿಕ್ಕರ್, ಪೋಟೊ ಇಲ್ಲ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    ಈ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಪ್ರಕರಣ ಗಂಭೀರವಾಗುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಡಿಸಿ ಅವಿನಾಶ್ ಮೆನನ್ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     

  • ಗಣೇಶ್ ಭಟ್ ಕೆತ್ತಿರೋ ವಿಗ್ರಹವನ್ನು ರಾಮದೇವರ ಬೆಟ್ಟಕ್ಕೆ ನೀಡುವಂತೆ ಇಕ್ಬಾಲ್ ಹುಸೇನ್ ಪತ್ರ

    ಗಣೇಶ್ ಭಟ್ ಕೆತ್ತಿರೋ ವಿಗ್ರಹವನ್ನು ರಾಮದೇವರ ಬೆಟ್ಟಕ್ಕೆ ನೀಡುವಂತೆ ಇಕ್ಬಾಲ್ ಹುಸೇನ್ ಪತ್ರ

    ರಾಮನಗರ: ರಾಮನಗರದ (Ramanagara) ಶಾಸಕ ಇಕ್ಬಾಲ್ ಹುಸೇನ್ (H. A. Iqbal Hussain) ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ (Shri Ram Janmabhoomi Teerth Kshetra Trust) ಮನವಿಯೊಂದನ್ನು ಮಾಡಲು ಮುಂದಾಗಿದ್ದಾರೆ.

    ಕನ್ನಡಿಗ ಗಣೇಶ್ ಭಟ್ (Ganesh Bhat)  ಕೆತ್ತಿರುವ ಶ್ರೀರಾಮ ಮೂರ್ತಿಯನ್ನು ರಾಮದೇವರ ಬೆಟ್ಟದ ಅಭಿವೃದ್ಧಿಗೆ ನೀಡುವಂತೆ ಟ್ರಸ್ಟ್ಗೆ ಪತ್ರ ಬರೆಯಲು ಮುಂದಾಗಿದ್ದಾರೆ. ರಾಮನಗರವನ್ನು ದಕ್ಷಿಣ ಅಯೋಧ್ಯೆಯಾಗಿ ಅಭಿವೃದ್ಧಿ ಮಾಡಿ ವಿಗ್ರಹ ಪ್ರತಿಷ್ಠಾಪನೆ ಮಾಡಲು ಆ ವಿಗ್ರಹವನ್ನು ನೀಡುವಂತೆ ಮನವಿಯಲ್ಲಿ ತಿಳಿಸಲಿದ್ದಾರೆ. ಇದನ್ನೂ ಓದಿ: 2015ರಲ್ಲಿ ಕೆತ್ತಿದ್ದ ಜಯಚಾಮರಾಜೇಂದ್ರ ಪ್ರತಿಮೆಯ ಬಾಕಿ ಹಣ ಬಂದಿಲ್ಲ: ಅರುಣ್ ಯೋಗಿರಾಜ್ 

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಅಭಿವೃದ್ಧಿ ಸೂಕ್ಷ್ಮವಾದ ವಿಚಾರ. ಹೀಗಾಗಿ ಇಲ್ಲಿ ಪ್ರತಿಷ್ಠಾಪನೆ ಮಾಡಲು ಕನ್ನಡಿಗ ಕೆತ್ತಿರುವ ವಿಗ್ರಹ ಸೂಕ್ತ ಅಂತ ನಾವು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ಗೆ ಪತ್ರ ಬರೆಯುತ್ತೇನೆ. ಜೊತೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ (Arun Yogiraj) ಜೊತೆಗೂ ಮಾತನಾಡಿ, ಅಭಿನಂದಿಸುತ್ತೇವೆ. ದೇವರಿಗಿಂತ ದೊಡ್ಡದು ಯಾವುದೂ ಇಲ್ಲ ಎಂದಿದ್ದಾರೆ. ಈ ಬಜೆಟ್‌ನಲ್ಲಿ ರಾಮನಗರದ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಬೇಡಿಕೆಯಿಟ್ಟಿದ್ದೇನೆ. ಜೊತೆಗೆ ಪ್ರವಾಸೋದ್ಯಮ ಇಲಾಖೆಗೂ ಸಹ ಮನವಿ ಮಾಡಿದ್ದೇವೆ. ವಿಶೇಷವಾಗಿ ರಾಮೋತ್ಸವ ಹಾಗೂ ರಾಮಮಂದಿರ ಕಟ್ಟೋದಕ್ಕೆ ಸಿದ್ಧತೆ ಮಾಡಿದ್ದೇವೆ ಎಂದು ಶಾಸಕರು ಹೇಳಿದ್ದಾರೆ. ಇದನ್ನೂ ಓದಿ: ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!