ಕೊಪ್ಪಳ: ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗುತ್ತಾರೆ. ಇದು ನನ್ನ ಅಭಿಲಾಷೆ ಎಂದು ರಾಮನಗರ ‘ಕೈ’ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಮತ್ತೆ ಪುನರುಚ್ಚರಿಸಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿ (Koppal) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸ್ಪಷ್ಟ ಅಭಿಪ್ರಾಯವನ್ನು ನಾನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ನಾನು ಇದಕ್ಕೆ ಬದ್ಧ. ಕಾಂಗ್ರೆಸ್ (Congress) ಶಿಸ್ತಿನ ಪಕ್ಷ. ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ
ರಾಮನಗರ: ಸಚಿವ ಕೆ.ಎನ್ ರಾಜಣ್ಣರನ್ನ (KN Rajanna) ಸಂಪುಟದಿಂದ ವಜಾ ಮಾಡಿರುವುದು ಹೈಕಮಾಂಡ್ ತೀರ್ಮಾನ. ಕೇಂದ್ರದ ವರಿಷ್ಠರ ತೀರ್ಮಾನದಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ಈ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ನಮ್ಮದು ಶಿಸ್ತಿನ ಪಕ್ಷ, ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ತಲೆಬಾಗಲೇಬೇಕು. ರಾಹುಲ್ ಗಾಂಧಿಯವರು ನಮ್ಮ ರಾಷ್ಟ್ರ ನಾಯಕರು. ಚುನಾವಣಾ ಅಕ್ರಮದ ಬಗ್ಗೆ ದೊಡ್ಡ ಹೋರಾಟ ಮಾಡ್ತಿದ್ದಾರೆ. ಆ ಹೋರಾಟಕ್ಕೆ ನಾವೆಲ್ಲ ಬೆಂಬಲ ಕೊಡಬೇಕು, ಶಕ್ತಿ ತುಂಬಬೇಕು. ನಾವು ಆ ಕೆಲಸ ಮಾಡ್ತಿದ್ದೇವೆ, ಅದನ್ನ ಬಿಟ್ಟು ಬೇರೆ ವಿಚಾರ ಗೊತ್ತಿಲ್ಲ ಎಂದರು. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್
ರಾಜಣ್ಣ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡಿದ್ದಾರೆಂಬ ಬಿಜೆಪಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಸಿಎಂ ಡಿಕೆಶಿಯವರು ನಮ್ಮ ರಾಜ್ಯದ ಅಧ್ಯಕ್ಷರು. ಆದರೆ ಈ ತೀರ್ಮಾನ ಮಾಡಿರೋದು ನಮ್ಮ ಕೇಂದ್ರದ ನಾಯಕರು. ಇಲ್ಲಿ ಪಿತೂರಿ, ಷಡ್ಯಂತ್ರ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕಮಗಳೂರು | ಬ್ರೆಡ್ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು
ಕೆ.ಎನ್.ರಾಜಣ್ಣಗೆ ಬಿಜೆಪಿಯಿಂದ ಆಫರ್ ನೀಡುವ ಚರ್ಚೆ ವಿಚಾರ ಕುರಿತು ಮಾತನಾಡಿ, ರಾಜಣ್ಣ ಅವರ ಬಗ್ಗೆ ನಮಗೆ ಗೌರವವಿದೆ. ಅವರು ನಮ್ಮ ನಾಯಕರು, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನ ಹೊಂದಿರುವವರು. ಸಾಕಷ್ಟು ವರ್ಷದಿಂದ ಪಕ್ಷ ಕಟ್ಟಿ, ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ, ನಮ್ಮ ಪಕ್ಷದಲ್ಲೇ ಇರ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ಬಂಧನ
ರಾಮನಗರ: ಡಿ.ಕೆ.ಶಿವಕುಮಾರ್ (DK Shivakumar) ನಮ್ಮ ನಾಯಕರು. ಅವರ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂಬ ವಿಚಾರ ಚರ್ಚೆ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಆ ಸಂದರ್ಭದಲ್ಲಿ ಅದನ್ನ ಹೇಳಿದ್ದೀನಿ. ಆ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ. ಈಗಲೂ ನನ್ನ ಹೇಳಿಕೆಯನ್ನ ನಾನು ಸಮರ್ಥಿಸಿಕೊಳ್ಳುತ್ತೇನೆ. ಡಿಕೆಶಿಯವರಿಗೆ ಸ್ಥಾನಮಾನ, ಗೌರವ ಕೊಡಿ ಅಂತ ಕೇಳೋಕೆ ನನಗೆ ಹಕ್ಕಿಲ್ವಾ? ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದೀನಿ, ಅವರು ನಮ್ಮ ಜೊತೆ ಹುಟ್ಟಿದ್ದಾರೆ. ಅವರ ಹೋರಾಟಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದ ಇಕ್ಬಾಲ್ ಹುಸೇನ್, ಪರೋಕ್ಷವಾಗಿ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕು ಎಂದ್ರು ಆಗ್ರಹಿಸಿದರು. ಇದನ್ನೂ ಓದಿ: ದೇವಭೂಮಿಯಲ್ಲಿ ಮೇಘಸ್ಫೋಟ – ಧರಾಲಿಯಲ್ಲಿ ಈವರೆಗೆ ಐವರ ಸಾವು ದೃಢ; 150 ಜನರ ರಕ್ಷಣೆ
ಇನ್ನೂ ಆ.8ಕ್ಕೆ ಚುನಾವಣಾ ಅಕ್ರಮದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅವರಿಗೆ ಶಕ್ತಿತುಂಬುವ ಕೆಲಸವನ್ನ ನಾವು ಮಾಡುತ್ತೇವೆ. ನಮ್ಮ ಜಿಲ್ಲೆಯಿಂದ ಸುಮಾರು 20ಸಾವಿರ ಮಂದಿ ಭಾಗಿಯಾಗುತ್ತಿದ್ದೇವೆ. ಅವರ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ. ಇವಿಎಂ ತೊಂದರೆಯಾ? ಏನು ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವ ರೀತಿ ಅಕ್ರಮ ಆಗಿದೆ ಎಂಬುದರ ಬಗ್ಗೆ ನಮ್ಮ ರಾಷ್ಟ್ರ ನಾಯಕರು ಮಾಹಿತಿ ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ
ರಾಮನಗರ: ಶ್ರೀಗಳು ಹೇಳಿದ ಮಾತು ನಿಜ ಆಗುತ್ತದೆ. ಪವಿತ್ರವಾದ ನಾಲಿಗೆಯಲ್ಲಿ ಈ ವಿಚಾರವನ್ನು ನುಡಿದಿದ್ದಾರೆ. ಭಕ್ತಿಯಿಂದ ದೇವರ ಧ್ಯಾನ ಮಾಡುವ ಶ್ರೀಗಳು ಇದನ್ನ ಹೇಳಿದ್ದಾರೆ. ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನ ಹೇಳಿಸಿರಬಹುದು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain)ಹೇಳಿದ್ದಾರೆ.
ಡಿಸಿಎಂ ಡಿಕೆಶಿಗೆ (DK Shivakumar) ಉನ್ನತ ಸ್ಥಾನ ಸಿಗಬೇಕು ಎಂಬ ರಂಭಾಪುರಿ ಶ್ರೀ (Rambhapuri Shri) ಹೇಳಿಕೆ ವಿಚಾರ ಕುರಿತು ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾಕಷ್ಟು ಶ್ರೀಗಳು, ಕಾರ್ಯಕರ್ತರು ಇದನ್ನ ಹೇಳುತ್ತಿದ್ದಾರೆ. ನಾನು ಕೂಡಾ ಹೇಳಿದ್ದೆ, ಅದಕ್ಕೆ ಈಗಲೂ ಬದ್ಧ. ಶರಣರು ಭಕ್ತಿಯಿಂದ ಅವರ ಬಾಯಲ್ಲಿ ನುಡಿದಿರೋದು ಫಲ ಕೊಡುತ್ತದೆ. ಕೋಟಿಜನ ಹೇಳೋದು ಒಂದೇ, ಶ್ರೀಗಳು ಹೇಳೋದು ಒಂದೇ. ಭಗವಂತ ಎಲ್ಲರ ಮಾತನ್ನ ಕೇಳಲು ಸಾಧ್ಯವಿಲ್ಲ, ಅವರಿಗೆ ಹತ್ತಿವಿರುವವರ ಪ್ರಾರ್ಥನೆ ಕೇಳ್ತಾನೆ. ಹಾಗಾಗಿ ಅವರ ನಾಲಿಗೆಯಲ್ಲಿ ಈ ಮಾತು ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾಗಶಃ ಭರ್ತಿಯಾದ ತುಂಗಭದ್ರಾ ಜಲಾಶಯ
ಇನ್ನೂ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಒಬಿಸಿ ಸದಸ್ಯ ಸ್ಥಾನ ನೀಡಿರೋ ವಿಚಾರ ಕುರಿತು ಮಾತನಾಡಿ, ಸಿದ್ದರಾಮಯ್ಯಗೆ ಹಿಂದುಳಿದ ವರ್ಗದ ಮೇಲೆ ಬಹಳ ಪ್ರೀತಿ. ಅಲ್ಪಸಂಖ್ಯಾತರ ಸಮುದಾಯದ ಸೇರಿ ಸಣ್ಣಪುಟ್ಟ ಸಮುದಾಯಕ್ಕೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಆ ಜಾಗದಲ್ಲಿ ಅಂತವರಿದ್ದರೆ ಮಾತ್ರ ಹಿಂದುಳಿದ ವರ್ಗಕ್ಕೆ ಅನುಕೂಲ. ಸಿದ್ದರಾಮಯ್ಯನರಿಗೆ ಬಹಳ ಅನುಭವ ಇದೆ, ದಾಖಲೆ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನ ಎಐಸಿಸಿ ಆಯ್ಕೆ ಮಾಡಿದೆ. ಇದಕ್ಕೆ ಬಿಜೆಪಿ ನಾಯಕರು ಟೀಕೆ ಮಾಡೋದು ಸಹಜ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡೋದು. ಅಧಿಕಾರ ಇದ್ದಾಗ ಅವರು ಅಭಿವೃದ್ಧಿ ಮಾಡಲಿಲ್ಲ, ಈಗ ಕೇವಲ ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವರ ಕೆಲಸ ಅವರು ಮಾಡಲಿ. ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಹಿಂದುಳಿದ ವರ್ಗದ ಬಗ್ಗೆ ವಿಶೇಷ ಕಾಳಜಿ ಹೊಂದಿರುವವರು. ಅವರಿಗೆ ಎರಡೂ ಸ್ಥಾನವನ್ನ ನಿಭಾಯಿಸುವ ಸಾಮರ್ಥ್ಯ ಇದೆ ಎಂದರು. ಇದನ್ನೂ ಓದಿ: ಸ್ವಾಮೀಜಿಗಳು ಹೇಳಿಕೆ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ
ಕೊಪ್ಪಳ: ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯ ಮಾಡಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ್ (Rajshekar Hitnal) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯವನ್ನು ಮಾಡಿಲ್ಲ. ಸಿದ್ದರಾಮಯ್ಯ ಸಾಹೇಬರೇ 5 ವರ್ಷ ಸಿಎಂ ಆಗಿ ಮುಂದುವರೆಯತ್ತಾರೆಂದು ನಮ್ಮ ಎಲ್ಲ ಮುಖಂಡರು ಹೇಳಿದ್ದಾರೆ. ನಾನಷ್ಟೇ ಅಲ್ಲ, ಎಲ್ಲ ಮುಖಂಡರು ಹೇಳಿದ್ದಾರೆ. ಯಾರೋ ಒಬ್ಬರು ಹೇಳುತ್ತಾರೆ ಎಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಪಕ್ಷದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲ್ಲ ಎಂದರು.ಇದನ್ನೂ ಓದಿ: 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ
ಈಗಾಗಲೇ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಕೊಡಲಾಗಿದೆ. ಕೇವಲ ನೋಟಿಸ್ ಅಲ್ಲ, ಅವರ ಮೇಲೆ ಕ್ರಮ ಆಗುತ್ತದೆ. ಇನ್ನೂ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ಸಿದ್ದರಾಮಯ್ಯ ಸಾಹೇಬರ ಬಗ್ಗೆ ಯಾರೂ ಮಾತಾಡಿಲ್ಲ. ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಹಾಗೂ ಅನುದಾನ ಎಲ್ಲರಿಗೂ ಸಿಕ್ಕಿದೆ. ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.
ಮಂಗಳವಾರ ಸಹೋದರ ರಾಘವೇಂದ್ರ ಹಿಟ್ನಾಳ್ ಸಿಎಂ ಪರ ಬ್ಯಾಟ್ ಬೀಸಿದ್ದರು, ಇಂದು ಸಹೋದರನ ಹೇಳಿಕೆಗೆ ಸಂಸದ ರಾಜಶೇಖರ್ ಹಿಟ್ನಾಳ್ ಕೂಡ ಧ್ವನಿಗೂಡಿಸಿದರು. ಪಕ್ಷದಲ್ಲಿ ಅಸಮಾಧಾನ ಇದ್ರೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬಾರದಾ? ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರೇನೂ ಬಿಜೆಪಿ ಜೊತೆ ಹೋಗ್ತೀನಿ ಅಂತಾ ಹೇಳಿದಾರಾ ಎಂದು ಕಿಡಿಕಾರಿದರು.ಇದನ್ನೂ ಓದಿ: ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ
ರಾಮನಗರ: ಡಿಕೆಶಿ ನಮ್ಮ ನಾಯಕರು, ನೋಟಿಸ್ ಕೊಡಲಿ. ಅವರಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ರಾಮನಗರದಲ್ಲಿ (Ramanagar) ಮಾಧ್ಯಮದವರೊಂದಿಗೆ ಕೆಪಿಸಿಸಿ (KPCC) ಅಧ್ಯಕ್ಷರಿಂದ ನೋಟಿಸ್ ಜಾರಿಯಾಗಿರುವ ವಿಚಾರ ಕುರಿತು ಮಾತನಾಡಿದ ಅವರು, ಡಿಕೆಶಿ ನಮ್ಮ ನಾಯಕರು, ನೋಟಿಸ್ ಕೊಡಲಿ. ಅವರು ಕೆಪಿಸಿಸಿ ಅಧ್ಯಕ್ಷರು, ಯಾರ ಮೇಲೆ ಬೇಕಾದರೂ ಕ್ರಮ ತೆಗೆದುಕೊಳ್ಳುವ ಶಕ್ತಿಯಿದೆ. ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. I Stand By My Words. ಶಿಸ್ತನ್ನು ಉಲ್ಲಂಘನೆ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ನನ್ನ ಅಭಿಪ್ರಾಯವನ್ನು ನಾನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಇನ್ಮುಂದೆ ಹೇಳಿಕೆ ಕೊಡಲ್ಲ ಎಂದು ಹೇಳಿದ್ದೇನೆ ಎಂದರು.ಇದನ್ನೂ ಓದಿ: ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದ ಇಕ್ಬಾಲ್ ಹುಸೇನ್‌ಗೆ ವಾರ್ನಿಂಗ್ – ಡಿಕೆಶಿಯಿಂದ ನೋಟಿಸ್
ಬೇರೆಯವರಿಗೆ ನೋಟಿಸ್ ಯಾಕೆ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹಾಗೆ ಮಾತನಾಡಿದ ಎಲ್ಲರಿಗೂ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಅವರನ್ನೇ ಕೇಳಿ. ನನಗೆ ನೋಟಿಸ್ ಕೊಟ್ಟಿದ್ದಾರೆ ನಾನು ಉತ್ತರ ಕೊಡುತ್ತೇನೆ. ದೇವರಾಜ ಅರಸು ಬಿಟ್ಟರೆ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಉತ್ತಮ ಆಡಳಿತ ಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಾನು ಕೂಡಾ ಸಿದ್ದರಾಮಯ್ಯಗೆ ಬಹಳ ಹತ್ತಿರದವನು. ಆದರೆ ಬೇರೆಯವರಿಗೂ ಒಂದು ಅವಕಾಶ ಸಿಗಲಿ ಎಂದು ನಾನು ಹೇಳುತ್ತಿದ್ದೇನೆ. ಒಟ್ಟು ಏಳೂವರೆ ವರ್ಷ ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾರೆ. ಡಿಕೆಶಿ ಕಷ್ಟಪಟ್ಟು ಹೋರಾಟ ಮಾಡಿ, ಪಕ್ಷ ಕಟ್ಟಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಅವರಿಗೆ ಅವಕಾಶ ಸಿಕ್ಕರೆ ಪಕ್ಷದಲ್ಲಿ ಮತ್ತಷ್ಟು ಬೆಳವಣಿಗೆ ಆಗುತ್ತದೆ ಎಂದು ತಿಳಿಸಿದರು.
ಇನ್ನೂ ಈ ವಿಚಾರವಾಗಿ ನಾನು ಪದೇ ಪದೇ ಮಾತನಾಡಲ್ಲ. ಈಗಾಗಲೇ ನಾನು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದೇನೆ. ಬೇರೆಯವರಿಗೆ ನೋಟಿಸ್ ಕೊಡ್ತಾರೋ ಇಲ್ವೋ ಗೊತ್ತಿಲ್ಲ. ನನಗೆ ನೋಟಿಸ್ ಕೊಟ್ಟ ಬಗ್ಗೆ ಹಲವು ಶಾಸಕರು ಪೋನ್ ಮಾಡಿ ಮಾತನಾಡಿದ್ದಾರೆ. ನನ್ನ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಸುರ್ಜೇವಾಲಾ ಬಳಿ ಇದನ್ನೇ ತಿಳಿಸಿದ್ದೇನೆ. ಅವರು ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನೀವು ಮಾತನಾಡಬೇಡಿ ಎಂದಿದ್ದಾರೆ ಎಂದರು.ಇದನ್ನೂ ಓದಿ:
ಬೆಂಗಳೂರು: ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ಉಲ್ಲಂಘಿಸಿದರೂ ನೋಟಿಸ್ ಕೊಡ್ತೀನಿ ಎಂದು (DK Shivakumar) ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ (Iqbal Hussain) ನೋಟಿಸ್ ಜಾರಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಕ್ಬಾಲ್ ಹುಸೇನ್‌ಗೂ ನೋಟಿಸ್ ಕೊಡ್ತೀನಿ, ಬೇರೆ ಅವರಿಗೂ ನೋಟಿಸ್ ಕೊಡಬೇಕಾಗುತ್ತದೆ. ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ಯಾರಿಗೂ ನನ್ನ ಹೆಸರು ಹೇಳಿ, ಸಿಎಂ ಮಾಡಿ ಅಂತ ಹೇಳಿಲ್ಲ. ಸಿದ್ದರಾಮಯ್ಯ (CM Siddaramaiah) ಮುಖ್ಯಮಂತ್ರಿ ಇದ್ದಾಗ ಬೇರೆ ಯಾರೂ ಅಪಸ್ವರ ಎತ್ತಬಾರದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಬಿಗಿಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ಚಾಲನೆ
ಪಕ್ಷಕ್ಕೆ ಎಲ್ಲರೂ ಕಷ್ಟಪಟ್ಟಿದ್ದಾರೆ. ನನ್ನಂತ ನೂರಾರು ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ. ನಾನು ಒಬ್ಬನೇ ಕಷ್ಟಪಟ್ಟಿದ್ದೀನಾ? ಸಾವಿರಾರು ಜನ, ಲಕ್ಷಾಂತರ ಜನ ಕಷ್ಟಪಟ್ಟಿದ್ದಾರೆ. ಮೊದಲು ನಾವು ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಶಿಸ್ತು ಉಲ್ಲಂಘನೆ ಮಾಡುತ್ತಿರುವ ಶಾಸಕರಿಗೆ ಎಚ್ಚರಿಕೆ ಕೊಟ್ಟು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದೇ ವೇಳೆ ಶಾಸಕರಿಗೆ ಅಸಮಾಧಾನ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಗೆ ಸಿದ್ಧತೆ ಮಾಡುವ ದೃಷ್ಟಿಯಿಂದ ಸುರ್ಜೇವಾಲಾ (Randeep Surjewala) ಶಾಸಕರ ಸಭೆ ಮಾಡಿದ್ದಾರೆ. ಶಾಸಕರಿಗೆ ಎಲ್ಲೂ ಅಸಮಾಧಾನ ಇರಲಿಲ್ಲ. ಯಾರಿಗೂ ಅಸಮಾಧಾನ ಇಲ್ಲ. ಶಾಸಕರಿಗೆ ಪಕ್ಷ ಮತ್ತು ಸಂಘಟನೆ ವಿಚಾರದಲ್ಲಿ ಜವಾಬ್ದಾರಿ ನಿಗದಿ ಮಾಡುತ್ತಿದ್ದಾರೆ. ಶಾಸಕರು ಏನು ಮಾಡಬೇಕು? ನಾವೇನು ಮಾಡಬೇಕು? ಚುನಾವಣೆಗೆ ಈಗಿನಿಂದಲೇ ಹೇಗೆ ಸಿದ್ಧತೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ನಲ್ಲಿ ಖಾಸಗಿ ದೂರು – ಜು.5ಕ್ಕೆ ವಿಚಾರಣೆ
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗುವ ಕಾಲ ಹತ್ತಿರ ಇದೆ. 100 ಶಾಸಕರ ಸಂಖ್ಯಾಬಲವೂ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದ ರಾಮನಗರದ (Ramangar) ಶಾಸಕ ಇಕ್ಬಾಲ್ ಹುಸೇನ್‌ಗೆ (Iqbal Hussain) ನೋಟಿಸ್ ಜಾರಿಯಾಗಿದೆ.
ನೋಟಿಸ್‌ನಲ್ಲಿ ಏನಿದೆ?
ಮುಖ್ಯಮಂತ್ರಿಗಳ ಬದಲಾವಣೆ ವಿಷಯದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುತ್ತೀರಿ.
‘ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟಿಸ್ ನೀಡಲಾಗಿದೆ
ತಾವುಗಳು ಈ ನೋಟಿಸ್ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.
ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ನೀವು ಮಾತಾಡಿದರೆ ನಾವು ಮಾತನಾಡುತ್ತೇವೆ ಎಂಬ ಮುಯ್ಯಿಗೆ ಮುಯ್ಯಿ ಪಾಲಿಟಿಕ್ಸ್ ಶುರುವಾಗಿದೆ. ಸಿದ್ದು ಟೀಂ ಮೇಲೆ ಇಕ್ಬಾಲ್ ಹುಸೇನ್ ಬಲಾಬಲ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ಇತ್ತ ಸುರ್ಜೇವಾಲಾ ವಾರ್ನ್ ಮಾಡಿದ್ದು, ನೀವು ಕೈ ಹಿಡಿದು ನಿಂತಿದ್ದು ಸರಿ. ನಿಮ್ಮ ಆಪ್ತರ ರಿಪೇರಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಯಾರೇ ಕೂಗಾಡಲಿ, ಯಾರೇ ವಾರ್ನ್ ಮಾಡ್ಲಿ, ನಾವ್ ಏನ್ ಹೇಳ್ಬೇಕೋ ಹೇಳ್ತೀವಿ. ಇದು ಕಾಂಗ್ರೆಸ್ ಒಳಗಿನ ಎಸ್‌ಟೀಂ, ಡಿಟೀಂ, ಡಿಸಿಎಂ ಸಿಎಂ ಆಗ್ಬೇಕು, ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ತುಪ್ಪ ಸುರಿಯುತ್ತಲೇ ಇದ್ದಾರೆ. ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರು ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ ನೆಕ್ಸ್ಟ್ ಸಿಎಂ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ ಎಂದಿದ್ದಾರೆ.
ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಮಾತನಾಡಿ, ಕ್ರಾಂತಿ ಹೇಳಿದವರೇ ಡೇಟ್ ಕೊಟ್ಟಿದ್ದಾರೆ, ಡಿಸಿಎಂ ಸಿಎಂ ಆಗುವ ಕಾಲ ಹತ್ತಿರ ಇದೆ. ಶಾಸಕರ ಸಂಖ್ಯಾಬಲವೂ ಇದೆ ಎಂದು ಬಾಂಬ್ ಹಾಕಿದ್ದಾರೆ. ಇನ್ನೊಂದೆಡೆ ಸಿಎಂ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಿದ್ದರಾಮಯ್ಯ ಬದಲಾಗಲ್ಲ, ಫುಲ್ ಟರ್ಮ್ ಸಿಎಂ ಎಂದಿದ್ದಾರೆ. ಆದರೆ ಯಾರ ಸಹವಾಸವೂ ಬೇಡ, ಸಿದ್ದು, ಡಿಕೆಶಿ ನಮ್ಮ ಎರಡು ಕಣ್ಣು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಶಾಸಕ ನಂಜೇಗೌಡ ಜಾಣತನದ ಹೇಳಿಕೆ ಕೊಟ್ಟಿದ್ದಾರೆ.
ಅಂದಹಾಗೆ ಸೋಮವಾರ ಸುರ್ಜೇವಾಲಾ ನೇತೃತ್ವದಲ್ಲಿ ಸಿಎಂ, ಡಿಸಿಎಂ ಸಭೆ ನಡೆಯಿತು. ಸಭೆಯಲ್ಲಿ ಸಿಎಂ, ಡಿಸಿಎಂ ಆಪ್ತರಿಗೆ ಬಿಸಿ ಮುಟ್ಟಿಸುವ ಸಂದೇಶ ಹೊರಬಿತ್ತು ಎನ್ನಲಾಗಿದೆ. ಮೈಸೂರು ಏರ್‌ಪೋರ್ಟ್ನಲ್ಲಿ ನಡೆದ ಘಟನೆಯ ವಿಡಿಯೋ ಬಗ್ಗೆ ಸುರ್ಜೇವಾಲಾ ಸಭೆಯಲ್ಲಿ ಪ್ರಸ್ತಾಪ ಆಗಿದೆ.
ಸಿದ್ದರಾಮಯ್ಯ ಡಿಕೆಶಿಯ ಕೈ ಎತ್ತಿ ಹಿಡಿದ ವಿಡಿಯೋ ಬಗ್ಗೆ ಪ್ರಸ್ತಾಪಿಸಿ, ನಾನು ವಿಡಿಯೋ ನೋಡಿದೆ, ಕೆಪಿಸಿಸಿ ಕಚೇರಿಯಲ್ಲಿ ತೋರಿಸಿದರು. ಒಳ್ಳೆಯ ಬೆಳವಣಿಗೆ. ನೀವಿಬ್ಬರು ಒಗ್ಗಟ್ಟು ಪ್ರದರ್ಶಿಸಿದ್ದು ಓಕೆ, ಆದರೆ ಕೆಲ ಮಿನಿಸ್ಟರ್ಸ್, ಶಾಸಕರು ಗೊಂದಲದ ಹೇಳಿಕೆಗಳು ಯಾಕೆ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ರು ಎನ್ನಲಾಗಿದೆ. ಮೊದಲು ಅವರನ್ನ ಸರಿಮಾಡಬೇಕಿದೆ, ನೀವು ನಿಮ್ಮ ಆಪ್ತರನ್ನ ಎಂಟರ್ಟೈನ್ ಮಾಡ್ಬೇಡಿ. ಆಪ್ತರಿಗೆ ನೀವು ಬುದ್ಧಿ ಹೇಳಿ ಎಂದಿದ್ದಾರೆ. ನಾವು ವಾರ್ನ್ ಮಾಡುತ್ತೇವೆ, ನಾವು ಎಂಟರ್ಟೈನ್ ಮಾಡಲ್ಲ, ಮಾತಾಡ್ತೀವಿ ಎಂದು ಸಿಎಂ, ಡಿಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿ ಕಾಂಗ್ರೆಸ್ ಒಳಗೆ ಕದನಕ್ಕೆ ಮುನ್ನುಡಿ ಬರೆದಿದ್ದ ರಾಜಣ್ಣ ಈಗ ಸೈಲೆಂಟ್ ಆಗಿದ್ದಾರೆ. ಇವತ್ತು ಏನನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಒಟ್ನಲ್ಲಿ ಡಿಕೆಶಿ ಆಪ್ತ ಶಾಸಕನಿಂದ ಮತ್ತೆ ಬಹಿರಂಗ ಹೇಳಿಕೆ ಹೊರಬಿದ್ದಿದ್ದು, ಯಾರೂ ಹೇಳಿದ್ರೂ ನಿಲ್ಲೋದಿಲ್ಲವಾ? ಸೆಪ್ಟೆಂಬರ್ ಕ್ರಾಂತಿಗೂ ಮುನ್ನವೇ ಬಲಾಬಲ ಆಟ ನಡೆಯಲು ಶುರುವಾಯ್ತಾ? ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.
-ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ ಎಂದ ಶಾಸಕ
ರಾಮನಗರ: ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ, ಶೀಘ್ರದಲ್ಲೇ ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆಶಿ ಸಿಎಂ ಆಗುವ ವಿಚಾರ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಡಿಸಿಎಂ ಡಿಕೆಶಿಗೂ ಒಂದು ಬಾರಿ ಅವಕಾಶ ಸಿಗಬೇಕು. ಸಾಕಷ್ಟು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿ ಸರ್ಕಾರ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ. ಈ ವಿಚಾರವನ್ನ ಸುರ್ಜೇವಾಲ ಅವರ ಮುಂದೆ ಇಡುತ್ತೇವೆ. ಈ ವಿಚಾರ ಚರ್ಚೆ ಮಾಡಲ್ಲ ಎಂದ ಮೇಲೆ ಅಲ್ಲಿಗೆ ಯಾಕೆ ಹೋಗಬೇಕು? ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ
ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ ಮೇಲೆ ಪ್ರಬಲವಾಗಿ ಈ ವಿಚಾರವನ್ನೂ ಚರ್ಚೆ ಮಾಡ್ತೇನೆ. ಇದೇನು ಬಸ್ಸಾ? ಈ ಟ್ರಿಪ್ ಬೇಡ, ನೆಕ್ಸ್ಟ್ ಟ್ರಿಪ್ ಮಾಡಿ ಅಂತ ಹೇಳೋಕಾಗುತ್ತಾ? ಈ ಟರ್ಮ್ ಅಲ್ಲದೇ ಇನ್ಯಾವ ಟರ್ಮ್ ಮಾಡಿ ಅನ್ನೋದಕ್ಕೆ ಆಗುತ್ತಾ? ಡಿಕೆಶಿ ಸಿಎಂ ಆಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಅಂತ ಹೇಳಿರುವವರೇ ಡೇಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿದರು.
ಇದೇ ವೇಳೆ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಭೇಟಿ ವಿಚಾರವಾಗಿ ಮಾತನಾಡಿ, ಈಗಾಗಲೇ 40 ಜನ ಶಾಸಕರ ಜೊತೆ ಸುರ್ಜೇವಾಲ ಚರ್ಚೆ ಮಾಡಿದ್ದಾರೆ. ಇಂದು ಮಧ್ಯಾಹ್ನ 3ಕ್ಕೆ ನನ್ನನ್ನೂ ಕರೆದಿದ್ದಾರೆ. ಶಾಸಕರ ಅಹವಾಲು, ಸಮಸ್ಯೆ, ಅಭಿಪ್ರಾಯಗಳನ್ನ ಚರ್ಚೆ ಮಾಡಲಿದ್ದಾರೆ. ನಾನು ಹೋಗಿ ಕ್ಷೇತ್ರದ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾತನಾಡುತ್ತೇನೆ. ಮುಂದೆ ಪಕ್ಷ ಸಂಘಟನೆ ಆಗಬೇಕು ಅಂದರೆ ಕೆಲ ಸಚಿವರ ಮಾತಿಗೆ ಕಡಿವಾಣ ಬೀಳಬೇಕು. ಹಾಗಾಗಿ ಹೈಕಮಾಂಡ್‌ಗೆ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡುತ್ತೇನೆ. ನನ್ನನ್ನೂ ಸೇರಿದಂತೆ ಎಲ್ಲರನ್ನೂ ಹತೋಟಿಗೆ ತನ್ನಿ ಎಂದು ಹೇಳುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ