Tag: ಇಂಧನ ತೈಲ

  • ಹೆಬ್ಬೆಟ್‍ಗಿರಾಕಿ ಮೋದಿ ತನ್ನ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ: ಕಾಂಗ್ರೆಸ್

    ಹೆಬ್ಬೆಟ್‍ಗಿರಾಕಿ ಮೋದಿ ತನ್ನ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ: ಕಾಂಗ್ರೆಸ್

    – ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಮೋದಿ ಬಂಡವಾಳ
    – ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಪಿಸಿಸಿ ಟ್ವಿಟ್ವರ್ ನಲ್ಲಿ ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ.

    ಏನು ಮಾಯವೋ!

    ಬಿಜೆಪಿ ಟ್ವಿಟ್ವರ್ ನಲ್ಲಿ, ಏನು ಮಾಯವೋ! ಹಳ್ಳದ ಕಡೆಗೆ ನೀರು ಹರಿಯುವುದು, ಕಾಂಗ್ರೆಸ್ ಬಳಿಗೆ ಭ್ರಷ್ಟರು ಬರುವುದು. ಡಿಕೆಶಿ ಎಲ್ಲಿರುತ್ತಾರೋ ಅಲ್ಲಿ ಅಕ್ರಮ ವಹಿವಾಟು ಇದ್ದೇ ಇರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಈ ವ್ಯವಹಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾಲೆಷ್ಟು? ಎಂದು ಬರೆದು ಟ್ವೀಟ್ ಮಾಡಿತ್ತು. ಇದಕ್ಕೆ ಕರ್ನಾಟಕ ಕಾಂಗ್ರೆಸ್ ರೀ ಟ್ವೀಟ್ ಮಾಡಿ, ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ ಎಂದು ಕಿಡಿಕಾರಿದೆ.

    ಮೋದಿ ಅವರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ, ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ ಎಂದು ಟ್ವಿಟ್ವರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ

    ಇಷ್ಟಕ್ಕೆ ನಿಲ್ಲದೆ, ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್‍ಗಿರಾಕಿಮೋದಿ ಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಬಿಜೆಪಿ ಕರ್ನಾಟಕದ ನಾಯಕರಿಗಾದ ಹಂಚಿಕೆ ಎಷ್ಟು? ಎಂದು ಪ್ರಶ್ನೆಗಳನ್ನು ಕೇಳಿದೆ.

    ಇಂಧನ ತೈಲಗಳಲ್ಲಿ ಏರಿದ ಸರ್ಕಾರದ ಆದಾಯ. 2014 75 ಸಾವಿರ ಕೋಟಿ ರೂ., 2021 3.25 ಲಕ್ಷ ಕೋಟಿ ರೂ. ಆಗಿದೆ. ಆದರೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿತವಾಗಿದೆ. 2014ರಲ್ಲಿ 55, 2021ರಲ್ಲಿ 101 ಆಗಿದೆ ಎಂದು ತಿರುಗೇಟು ನೀಡಿದೆ.

    ಸರ್ಕಾರದ ಆದಾಯ ಹೆಚ್ಚಿದಂತೆ, ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. #ಹೆಬ್ಬೆಟ್‍ಗಿರಾಕಿಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ? ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

    ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಮೋದಿ ಅವರು ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

    ಮೌನೇಂದ್ರ ಮೋದಿ!

    ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ.
    * ಬೆಲೆ ಏರಿಕೆಯ ಬಗ್ಗೆ -ಮೌನ
    * ಕಾಶ್ಮೀರದ ದಳ್ಳುರಿಗೆ -ಮೌನ
    * ಚೀನಾ ಅತಿಕ್ರಮಣಕ್ಕೆ -ಮೌನ
    * ರೈತರ ಹತ್ಯೆಗೆ -ಮೌನ
    * ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ
    * ನಿರುದ್ಯೋಗದ ಬಗ್ಗೆ -ಮೌನ
    * ಪತ್ರಿಕಾಗೋಷ್ಠಿಗೆ -ಮೌನ
    #ಹೆಬ್ಬೆಟ್‍ಗಿರಾಕಿಮೋದಿ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ.

    ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66, ಡೀಸೆಲ್ 55 ಕ್ಕೆ ದೊರಕುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್‍ಗಿರಾಕಿಮೋದಿ ಯಿಂದ ದೇಶ ನಲುಗುತ್ತಿದೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

    ನರೇಂದ್ರ ಮೋದಿ ಅವರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಮಾನಗಳ ಮುಂದೆ ಬೈಕು, ಕಾರುಗಳಿಗೆ ‘ಮಾನ’ ತಂದುಕೊಟ್ಟರು. ಬಹುಶಃ ಬಿಜೆಪಿಗರು “ಮೋದಿ ಹೈ ತೊ ಮುಮ್ಕಿನ್ ಹೆ” ಎನ್ನುವುದು ಇದಕ್ಕಾಗಿಯೇ ಇರಬಹುದು. ಹಾರಾಟಕ್ಕಿಂತ ಸಾಗಾಟವನ್ನು ದುಬಾರಿ ಮಾಡಿದ್ದಕ್ಕಾಗಿ ಥ್ಯಾಂಕ್ಯು ಮೋದಿಜಿ ಎನ್ನುವುದಿಲ್ಲವೇ ಎಂದು ಪ್ರಶ್ನಿಸಿದೆ.