Tag: ಇಂಧನ ಟ್ಯಾಂಕರ್

  • ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ

    ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ

    ಕೇಪ್ ಟೌನ್: ದ್ರವ ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್  (Fuel Tanker) ಭೀಕರವಾಗಿ ಸ್ಫೋಟಗೊಂಡು ಘಟನೆಯಲ್ಲಿ 10 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಬೋಕ್ಸ್‌ಬರ್ಗ್‌ನ ಜೋಹಾನ್ಸ್‌ಬರ್ಗ್‌ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಈ ಭೀಕರ ಘಟನೆ ನಡೆದಿದೆ. ಆಸ್ಪತ್ರೆಯಿಂದ ಸುಮಾರು 100 ಮೀ. ದೂರದಲ್ಲಿರುವ ತಗ್ಗು ಸೇತುವೆಯ ಕೆಳಗೆ ಇಂಧನ ಟ್ಯಾಂಕರ್ ಸಿಲುಕಿದೆ ಎನ್ನಲಾಗಿದೆ. ಸ್ಫೋಟದ ಬಳಿಕ ಆಸ್ಪತ್ರೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ವರದಿಯಾಗಿದೆ.

    ಸ್ಫೋಟದ ಬಳಿಕ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಗ್ಯಾಸ್ ಟ್ಯಾಂಕರ್ ಸುರಂಗ ಮಾರ್ಗವನ್ನು ಪ್ರವೇಶಿಸಲು ಸೇತುವೆಯ ಕೆಳಗಡೆಯಿಂದ ಹೋಗಿದ್ದು, ಈ ವೇಳೆ ಅದು ಸಿಲುಕಿಕೊಂಡಿದೆ. ಬಳಿಕ ಘರ್ಷಣೆ ಉಂಟಾಗಿ ಸ್ಫೋಟ ಉಂಟಾಗಿದೆ. ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ 2ನೇ ಬಾರಿ ಸ್ಫೋಟ ಉಂಟಾಗಿದೆ. ಈ ವೇಳೆ ಅಗ್ನಿಶಾಮಕ ಎಂಜಿನ್, 2 ಮೋಟಾರ್ ವಾಹನಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಇದನ್ನೂ ಓದಿ: ರಣಭೀಕರ ಹಿಮ ಸುನಾಮಿಗೆ ತತ್ತರಿಸಿದ ಅಮೆರಿಕ – ಕುದಿಯುವ ನೀರು ಕ್ಷಣ ಮಾತ್ರದಲ್ಲಿ ಐಸ್ ಆಗ್ತಿದೆ

    ಘಟನೆಯಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡಿರುವ 40 ಜನರ ಪೈಕಿ 19 ಜನರ ಸ್ಥಿತಿ ಗಂಭೀರವಾಗಿದೆ. 15 ಜನರ ಸ್ಥಿತಿ ಸ್ಥಿರವಾಗಿದೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗು ಎಂದಿದ್ದಕ್ಕೆ ಗೆಳತಿಯನ್ನೆ ಥಳಿಸಿದ ಯುವಕ

    Live Tv
    [brid partner=56869869 player=32851 video=960834 autoplay=true]

  • ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ

    ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ

    ಮೆಕ್ಸಿಕೋ ಸಿಟಿ: ಇಂಧನ ಟ್ಯಾಂಕರ್‌ಗೆ (Fuel Tanker) ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ (Fire) ಅವಘಡ ಉಂಟಾಗಿದ್ದು, ಸ್ಥಳೀಯ ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮಧ್ಯ ಮೆಕ್ಸಿಕೋದಲ್ಲಿ (Mexico) ಗುರುವಾರ ನಡೆದಿದೆ.

    ಘಟನೆಯ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸರಕು ರೈಲೊಂದು ಸುತ್ತಲೂ ಬೆಂಕಿಯಿಂದ ಆವರಿಸಿರುವ ರೈಲ್ವೇ ಹಳಿಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಭಾರೀ ಬೆಂಕಿಗೆ ದಿಗ್ಭ್ರಮೆಗೊಂಡ ಸ್ಥಳೀಯರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.

    ವರದಿಗಳ ಪ್ರಕಾರ ಇಂಧನ ತುಂಬಿದ್ದ ಟ್ಯಾಂಕರ್ ಅನ್ನು ಚಲಾಯಿಸುತ್ತಿದ್ದ ಚಾಲಕ ರೈಲ್ವೇ ಹಳಿಯನ್ನು ದಾಟಲು ಪ್ರಯತ್ನಿಸುತ್ತಿದ್ದ. ಇದೇ ವೇಳೆ ಸರಕು ರೈಲು ಆಗಮಿಸಿದೆ. ಟ್ಯಾಂಕರ್ ಚಾಲಕ ಪ್ರಾಣ ಉಳಿಸಿಕೊಳ್ಳಲು ವಾಹನವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ಇಂಧನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾರೀ ಬೆಂಕಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ಇನ್ನೂ ಮುಗಿಯದ ಸುರತ್ಕಲ್ ಟೋಲ್‍ಗೇಟ್ ವಿವಾದ- ಹೋರಾಟಗಾರರ ಮೇಲೆ ಎಫ್‍ಐಆರ್

    ಘಟನೆಯಿಂದ ಉಂಟಾದ ಬೆಂಕಿ ಸ್ಥಳೀಯ ವಸತಿ ಪ್ರದೇಶಕ್ಕೆ ತಗುಲಿದೆ. ಹಲವು ಮನೆಗಳು ಸುಟ್ಟು ಕರಕಲಾಗಿದ್ದು, 800 ರಿಂದ 1,000 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಒಬ್ಬ ಸ್ಥಳೀಯನಿಗೆ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪೀಠೋಪಕರಣ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ

    Live Tv
    [brid partner=56869869 player=32851 video=960834 autoplay=true]

  • ಗಾಳಿಯಲ್ಲಿರುವಾಗಲೇ ನೆಲಕ್ಕುರುಳಿದ ತೇಜಸ್‍ನ 1,200 ಲೀಟರ್ ಇಂಧನ ಟ್ಯಾಂಕರ್

    ಗಾಳಿಯಲ್ಲಿರುವಾಗಲೇ ನೆಲಕ್ಕುರುಳಿದ ತೇಜಸ್‍ನ 1,200 ಲೀಟರ್ ಇಂಧನ ಟ್ಯಾಂಕರ್

    ಚೆನ್ನೈ: ಭಾರತೀಯ ವಾಯುಸೇನೆಯ ತೇಜಸ್ ಯುದ್ಧ ವಿಮಾನದ ಹೆಚ್ಚುವರಿ ಇಂಧನ ಟ್ಯಾಂಕರ್ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ನೆಲಕ್ಕುರುಳಿದ ಘಟನೆ ತಮಿಳುನಾಡಿನ ಕೊಯಮತ್ತೂರು ಬಳಿ ನಡೆದಿದೆ.

    ದಿನಚರಿಯಂತೆ ಇಂದು ಬೆಳಗ್ಗೆ ವಿಮಾನ ಹಾರಾಟ ನಡೆಸಿತ್ತು. ಈ ಸಮಯದಲ್ಲಿ ಏಕಾಏಕಿ ವಿಮಾನ ಹೆಚ್ಚುವರಿ 1200 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕರ್ ನೆಲಕ್ಕಪ್ಪಳಿಸಿದೆ. ಘಟನೆ ಬಳಿಕ ಜೇಟ್ ಫೈಲಟ್ ವಿಮಾನವನ್ನು ಯಶಸ್ವಿಯಾಗಿ ಸುಲೂರ್ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಿದ್ದಾರೆ.

    ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು, ಘಟನೆ ಹೇಗಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇಂಧನ ಟ್ಯಾಂಕರ್ ನೆಲಕ್ಕುರುಳಿದ ಪರಿಣಾಮ ಸ್ಥಳದಲ್ಲಿ ಸುಮಾರು 3 ಅಡಿಗಿಂತಲೂ ಹೆಚ್ಚು ಭೂಮಿ ಕುಸಿತವಾಗಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಆದರೆ ಬಯಲು ಪ್ರದೇಶದಲ್ಲಿ ಬಿದ್ದ ಪರಿಣಾಮ ಸಂಭವಿಸಬಹುದಾಗಿದ್ದ ಬಹುದೊಡ್ಡ ಅವಘಡ ತಪ್ಪಿದೆ.

    ಅಂದಹಾಗೇ ತೇಜಸ್ ಭಾರತದ ಮೊದಲ ಯುದ್ಧ ವಿಮಾನವಾಗಿದ್ದು, ಇಲ್ಲಿಯೇ ಅಭಿವೃದ್ಧಿ ಪಡಿಸಲಾಗಿತ್ತು. ಗಾಳಿಯಲ್ಲಿಯೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ತೇಜಸ್ ಹೊಂದಿದ್ದು, ಕಳೆದ ವರ್ಷವಷ್ಟೇ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು. ಘಟನೆ ನಡೆದ ಕೂಡಲೇ ಪೈಲಟ್ ಸಮಯ ಪ್ರಜ್ಞೆ ಮೆರೆದಿದ್ದು, ಸ್ಥಳೀಯ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ ಇಂಧನ ಟ್ಯಾಂಕರ್ ಬೀಳಲು ಕಾರಣವೆಂಬುವುದು ತಿಳಿದು ಬಂದಿಲ್ಲ. ತನಿಖೆಯ ಬಳಿಕ ಘಟನೆ ಕಾರಣ ತಿಳಿದು ಬರಲಿದೆ.