Tag: ಇಂದ್ರ ಕುಮಾರ್

  • ಸಿನಿಮಾ ನೋಡಿ ಬಂದು ಗೆಳೆಯನ ಮನೆಯಲ್ಲಿಯೇ ನಟ ನೇಣಿಗೆ ಶರಣು!

    ಸಿನಿಮಾ ನೋಡಿ ಬಂದು ಗೆಳೆಯನ ಮನೆಯಲ್ಲಿಯೇ ನಟ ನೇಣಿಗೆ ಶರಣು!

    ಚೆನ್ನೈ: ತಮಿಳು ನಟ ಇಂದ್ರಕುಮಾರ್ ಶುಕ್ರವಾರ ರಾತ್ರಿ ತನ್ನ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇಂದ್ರಕುಮಾರ್ ನಿನ್ನೆ ತಮ್ಮ ಸ್ನೇಹಿತರ ಜೊತೆ ಫಿಲಂ ನೋಡಲು ಹೋಗಿದ್ದರು. ಅಂತೆಯೇ ಸಿನಿಮಾ ಮುಗಿಸಿಕೊಂಡು ಸ್ನೇಹಿತರ ಮನೆಯಲ್ಲಿಯೇ ಉಳಿದುಕೊಂಡರು. ಆದರೆ ಬೆಳಗ್ಗೆ ನೋಡಿದಾಗ ಇಂದ್ರ ಕುಮಾರ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಂದ್ರ ಕುಮಾರ್ ಶವವನ್ನು ಫ್ಯಾನಿಂದ ಇಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಇಂದ್ರಕುಮಾರ್ ಶ್ರೀಲಂಕಾದ ತಮಿಳು ನಟರಾಗಿದ್ದು, ಚೆನ್ನೈನ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದರು. ವರದಿಗಳ ಪ್ರಕಾರ ಇಂದ್ರ ಕುಮಾರ್ ಅವರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸದ್ಯ ಅವರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ. ಇಂದಿರಾ ಕುಮಾರ್‍ಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇತ್ತು. ಆದರೆ ಅವರಿಗೆ ಯಾವ ಚಿತ್ರದಲ್ಲೂ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ಬಹಳ ಚಿಂತೆಯಲ್ಲಿದ್ದರು.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.