Tag: ಇಂದಿರಾನಗರ ಕೊಲೆ ಕೇಸ್

  • ಸದಾ ಫೋನ್‌ನಲ್ಲೇ ಮುಳುಗಿರುತ್ತಿದ್ದಳು, ಸ್ವರ್ಗದಲ್ಲಿ ಒಂದಾಗೋಣ ಅಂತ ಮುಗಿಸಿಬಿಟ್ಟೆ – ಸತ್ಯ ಬಾಯ್ಬಿಟ್ಟ ಆರೋಪಿ

    ಸದಾ ಫೋನ್‌ನಲ್ಲೇ ಮುಳುಗಿರುತ್ತಿದ್ದಳು, ಸ್ವರ್ಗದಲ್ಲಿ ಒಂದಾಗೋಣ ಅಂತ ಮುಗಿಸಿಬಿಟ್ಟೆ – ಸತ್ಯ ಬಾಯ್ಬಿಟ್ಟ ಆರೋಪಿ

    ಬೆಂಗಳೂರು: ಇಂದಿರಾನಗರದ (Indiranagar) ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರೇಯಸಿ ಕೊಲೆ ಪ್ರಕರಣದಲ್ಲಿ ರಹಸ್ಯಗಳು ಬಗೆದಷ್ಟೂ ಬಯಲಾಗುತ್ತಿವೆ. ವಿಚಾರಣೆ ವೇಳೆ ಕೊಲೆ ಆರೋಪಿ ಆರವ್‌ ಹನೋಯ್‌ ಹಲವು ವಿಚಾರಗಳನ್ನ ಬಾಯ್ಬಿಟ್ಟಿದ್ದಾನೆ. ಅತಿಯಾಗಿ ಫೋನ್‌ನಲ್ಲಿ ಮುಳುಗಿದ್ದೇ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನಂತೆ.

    ಕೊಲೆಗೂ ಮುನ್ನ ಆರವ್‌ ಹನೋಯ್‌, ಅಸ್ಸಾಂ ಯುವತಿ ಮಾಯ ಗೊಗಾಯ್‌ಳನ್ನ ಭೇಟಿಯಾಗೋಣ ಅಂತ ಹೊಟೇಲ್‌ಗೆ ಕರೆದಿದ್ದ. ಇಬ್ಬರು ಭೇಟಿಯಾಗಿ 3-4 ದಿನಗಳಾಗಿವೆ ಬಾ ಅಂತಾ ಕರೆದಿದ್ದ. ಕೊನೆಗೆ ತಾನೇ ಹೋಟೆಲ್‌ಗೆ ಕೆರೆದುಕೊಂಡು ಬಂದಿದ್ದ. ಪದೇ ಪದೇ ಫೋನ್‌ ಕರೆಗಳಲ್ಲಿ ಮುಳುಗಿರುತ್ತಿದ್ದ ಮಾಯಾ, ಹೊಟೇಲ್‌ಗೆ ಬಂದ್ರೂ ಅದರಲ್ಲೇ ಮುಳುಗಿದ್ದಳು. ಇದರಿಂದ ಅವಳಿಗೆ ಫೋನ್‌ ಮೇಲೆ ಇರೋ ಆಸಕ್ತಿ ನನ್ನ ಮೇಲಿಲ್ಲ ಅಂದುಕೊಂಡಿದ್ದನಂತೆ. ಇದೇ ವಿಚಾರಕ್ಕೆ ಮಾಯಾಳನ್ನ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ನಿರ್ಧರಿಸಿದ್ದ. ಸ್ವರ್ಗದಲ್ಲಿ ಇಬ್ಬರು ಒಂದಾಗೋಣ ಅಂತಾ ನಿಶ್ಚಯಿಸಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ಈ ಬೆನ್ನಲ್ಲೇ ಪೊಲೀಸರು ಆರೋಪಿ ಪೂರ್ವಪರ ವಿಚಾರಿಸಿದ್ದಾರೆ. ಚಿಕ್ಕಂದಿನಲ್ಲೇ ತಂದೆ-ತಾಯಿ ಕಳೆದುಕೊಂಡಿದ್ದ ಆರವ್‌ ಕೇರಳದ ಕಣ್ಣೂರಿನಲ್ಲಿರುವ ಅಜ್ಜಿ ಮನೆಯಲ್ಲಿ ಬೆಳೆದಿದ್ದ. ಕಳೆದ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ. ಇದನ್ನೂ ಓದಿ: ಇಂದಿರಾನಗರ ಕೊಲೆ ಕೇಸ್ – ಪ್ರೇಯಸಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಮನಸ್ಸು ಮಾಡಿದ್ದ ಆರೋಪಿ

    ಬಂದ ಹೊಸದರಲ್ಲಿ ಮಾಯಾ ಪರಿಚಯವಾಗಿದ್ದಳು. ಡೇಟಿಂಗ್‌ ಆಪ್‌ನಲ್ಲಿ ಮಾಯಾ ಪರಿಚಯವಾಗಿದ್ದಳು, ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆರಂಭದಲ್ಲಿ ತನ್ನನ್ನು ಹೆಚ್ಚು ಅಚ್ಚಿಕೊಂಡಿದ್ದ ಮಾಯಾ ಬಳಿಕ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಇದರಿಂದ ರೋಸಿಹೋದ ಆರವ್‌ ಆಕೆಯನ್ನು ಕೊಲೆ ಮಾಡಲು ಸ್ಕೆಚ್‌ ಆಗಿದ್ದಾನೆ. ಇದನ್ನೂ ಓದಿ: ಕೂಲ್‌ ಡ್ರಿಂಕ್ಸ್‌ ಕುಡಿಯುತ್ತ ಕುಳಿತಿದ್ದ ರೌಡಿಶೀಟರ್‌ ಮೇಲೆ ಏಕಾಏಕಿ ದಾಳಿ – ಮಾರಕಾಸ್ತ್ರಗಳಿಂದ ಕೊಚ್ಚಿ ಕಗ್ಗೊಲೆ

  • ಇಂದಿರಾನಗರ ಕೊಲೆ ಕೇಸ್ – ಪ್ರೇಯಸಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಮನಸ್ಸು ಮಾಡಿದ್ದ ಆರೋಪಿ

    ಇಂದಿರಾನಗರ ಕೊಲೆ ಕೇಸ್ – ಪ್ರೇಯಸಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಮನಸ್ಸು ಮಾಡಿದ್ದ ಆರೋಪಿ

    – ಅನುಮಾನಕ್ಕೆ ಪ್ರಿಯತಮೆಯನ್ನು ಕೊಂದ

    ಬೆಂಗಳೂರು: ಇಂದಿರಾನಗರದ (Indiranagar) ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರೇಯಸಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆಯನ್ನು ಭೀಕರವಾಗಿ ಕೊಂದು ತಲೆಮರಿಸಿಕೊಂಡಿದ್ದ ಪ್ರಿಯಕರನನ್ನು ಇಂದಿರಾನಗರ ಪೊಲೀಸರು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿ ಕೊಲೆ ಮಾಡಿದ ಬಳಿಕ ರಾಯಚೂರು, ಉತ್ತರ ಪ್ರದೇಶ ಸೇರಿದಂತೆ ಹಲವಡೆ ಸುತ್ತಾಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರ ಖೆಡ್ಡಾಕ್ಕೆ ಆರವ್ ಬಿದ್ದಿದ್ದಾನೆ. ವಿಚಾರಣೆ ವೇಳೆ ಮಾಯಾ ಕೊಲೆ ರಹಸ್ಯವನ್ನು ಹಂತಕ ರೀವಿಲ್ ಮಾಡಿದ್ದಾನೆ. ಪ್ರೇಯಸಿ ಮರ್ಡರ್ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಮನಸ್ಸು ಮಾಡಿದ್ದ ಬಗ್ಗೆ ಖಾಕಿ ಮುಂದೆ ಬಾಯ್ಬಿಟ್ಟಿದ್ದಾನೆ.

    ಹಂತಕ ಆರವ್ ಅನಯ್ ವಿಚಾರಣೆ ವೇಳೆ ಕೊಲೆ ಸತ್ಯ ಬಯಲಾಗಿದೆ. ಕೊಲೆಯಾದ ಮಾಯಾ ಗೋಗೋಯ್ ಜಯನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಹಂತಕ ಆರವ್ ಜೀವನ ಭೀಮಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಬಿಎ ಪದವೀಧರನಾಗಿದ್ದ ಆರವ್ ಅನೋಯ್‌ಗೆ ಡೇಟಿಂಗ್ ಆಪ್‌ನಲ್ಲಿ ಮಾಯಾ ಪರಿಚಯವಾಗುತ್ತದೆ. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಮಾಯಾಳನ್ನು ಪ್ರಾಣಕ್ಕಿಂತ ಹೆಚ್ಚು ಆರವ್ ಪ್ರೀತಿ ಮಾಡುತ್ತಿದ್ದ. ಆದರೆ ಇತ್ತೀಚೆಗೆ ಆರವ್‌ಗೆ ಪ್ರಿಯತಮೆ ಮಾಯಾ ಮೇಲೆ ಅನುಮಾನ ಶುರುವಾಗಿತ್ತು. ಮಾಯಾ ಹೆಚ್ಚು ಫೋನ್‌ನಲ್ಲಿ ಮಾತನಾಡುತ್ತಿದ್ದಳಂತೆ. ಹೀಗಾಗಿ ಬೇರೊಂದು ಸಂಬಂಧ ಮಾಯಾಗೆ ಇದೆ ಎಂಬ ಅನುಮಾನ ಆರೋಪಿಯ ನಿದ್ದೆಗೆಡಿಸಿತ್ತು. ಇದೇ ಕಾರಣಕ್ಕೆ ಮಾಯಾಳನ್ನು ಕೊಲೆ ಮಾಡಲು ನಿರ್ಧರಿಸಿ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಕರೆತಂದು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಳಗಾವಿ | ಯುವಕನ ಎದೆಗೆ ಚಾಕು ಇರಿದು ಬರ್ಬರ ಹತ್ಯೆ – ಐವರ ಮೇಲೆ ಶಂಕೆ

    ಇನ್ನು ಹಂತಕ ಆರವ್ ಅನೋಯ್ ಬದುಕೇ ಒಂದು ಟ್ರಾಜಿಡಿ ಸ್ಟೋರಿ. ಆರವ್‌ಗೆ 5 ತಿಂಗಳಿದ್ದಾಗ ತಂದೆ ಮೃತಪಟ್ಟಿದ್ದರು. ತಂದೆ ಸಾವಿನ ಬಳಿಕ ತಾಯಿ ಎರಡನೇ ವಿವಾಹವಾಗಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ಅಜ್ಜನ ಮನೆಯಲ್ಲಿ ಆರವ್ ಬೆಳೆದಿದ್ದ. ಇತ್ತೀಚೆಗೆ ತಾಯಿ ಎರಡನೇ ಪತಿಗೂ ಡಿವೋರ್ಸ್ ನೀಡಿ ಮೂರನೇ ವಿವಾಹವಾಗಿದ್ದರಂತೆ. ಮೂರನೇ ಗಂಡನ ಜೊತೆ ಇರುವ ತಾಯಿಗೆ 5 ತಿಂಗಳ ಮಗು ಇತ್ತು. ಈ ಎಲ್ಲಾ ಬೆಳವಣಿಗೆಯಿಂದ ಆರವ್ ಡಿಸ್ಟರ್ಬ್ ಆಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಹಂತಕನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: 93 ವರ್ಷದ ಅಜ್ಜಿಗೆ ಪರೋಲ್ – ಜೈಲಲ್ಲಿ ಅಜ್ಜಿಯ ಪರಿಸ್ಥಿತಿ ಕಂಡು ಮರುಗಿದ್ದ ಉಪಲೋಕಾಯುಕ್ತ