Tag: ಇಂದಿರಾಗಾಂಧಿ

  • ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಬೆಂಗಳೂರು: ದೇಶವು ಒಗ್ಗಟ್ಟಿನಲ್ಲಿರುವ ಸಂದರ್ಭದಲ್ಲಿ ಇಂದಿರಾಗಾಂಧಿಗೆ (Indira Gandhi) ಹೋಲಿಕೆ ಮಾಡುವ ಕಾಂಗ್ರೆಸ್ಸಿನವರು (Congress) ಮೊದಲು ಒಡಕು ಮಾತುಗಳನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಖಂಡಿಸಿದ್ದಾರೆ.ಇದನ್ನೂ ಓದಿ: ಪಕ್ಷಾತೀತವಾಗಿ ಮೇ 15ರಿಂದ 23ರವರೆಗೆ ಕರ್ನಾಟಕದಲ್ಲಿ ತಿರಂಗಾ ಯಾತ್ರೆ: ಆರ್.ಅಶೋಕ್

    ಬೆಂಗಳೂರಿನಲ್ಲಿ ಮಾತನಾಡಿದ ಅವರು, `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಗೂ ಮೊದಲು ಕಾಂಗ್ರೆಸ್‌ನವರು ಯುದ್ಧ ಬೇಡ, ಅದರ ಅವಶ್ಯಕತೆ ಇದೆಯೇ ಎಂದು ಹೇಳುತ್ತಿದ್ದರು. ಆಪರೇಷನ್ ಸಿಂಧೂರ ಪ್ರಾರಂಭವಾದ ಮೇಲೆ ಶಾಂತಿ ಸ್ಥಾಪನೆ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಬಳಿಕ ಕದನ ವಿರಾಮ ಘೋಷಣೆಯಾದ ಮೇಲೆ ಏತಕ್ಕೆ ಯುದ್ಧ ನಿಲ್ಲಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಟೀಕಿಸಿದರು.

    ಕಾಂಗ್ರೆಸ್ ಹೇಳಿಕೆಯಲ್ಲಿನ ನಿಲುವು ಮತ್ತು ಉದ್ದೇಶ ಏನು ಎಂಬುದನ್ನು ಮೊದಲು ತಿಳಿಸಬೇಕು. ಪಾಕಿಸ್ತಾನವು ಭಯೋತ್ಪಾದನೆ ಮೂಲಕ ಭಾರತದ ಮೇಲೆ ದಾಳಿ ಮಾಡಿರುವುದಕ್ಕೆ ತಕ್ಕ ಉತ್ತರ ನೀಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅಧಿವೇಶನ ಕರೆಯಬೇಕು, ಚರ್ಚೆಯಾಗಬೇಕು ಎಂಬ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

  • ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಮುಂಬೈ: ಸ್ವತಃ ಇಂದಿರಾ ಗಾಂಧಿ (Indira Gandhi) ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಗುಡುಗಿದರು.

    ಮಹಾರಾಷ್ಟ್ರದ ಚುನಾವಣಾ (Maharashtra Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರ್ಕಾರವು 370ನೇ ವಿಧಿಯನ್ನು (Article 370) ಮರುಸ್ಥಾಪಿಸಲು ನಿರ್ಣಯ ಮಂಡಿಸಿದೆ. ನಾನು ಈಗಲೂ ಹೇಳುತ್ತೇನೆ ಸ್ವತಃ ಇಂದಿರಾ ಗಾಂಧಿ ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್‌.ಕೆ ಪಾಟೀಲ್

    ಇದೇ ವೇಳೆ ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ನನಗೆ ಭಯವಾಗಿತ್ತು ಎಂಬ ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮನಮೋಹನ್ ಆಡಳಿತದ 10 ವರ್ಷಗಳ ಅವಧಿಯಲ್ಲಿ, ಭಯೋತ್ಪಾದಕರು ಪಾಕಿಸ್ತಾನದಿಂದ ಮುಕ್ತವಾಗಿ ಬಂದು ಇಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಬಾಂಬ್‌ ಸ್ಫೋಟಕ್ಕೂ ಪ್ರಚೋದನೆ ನೀಡುತ್ತಿದ್ದರು. ಶಿಂಧೇ ಜೀ, ಈಗ ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಬೇಕಾದ್ರೂ ಹೋಗಿ, ನಿಮಗೆ ಏನೂ ಆಗುವುದಿಲ್ಲ ಎಂದು ಹೇಳಿದರು.

    ಇತ್ತೀಚೆಗೆ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲೂ ಇದೇ ರೀತಿಯ ಹೇಳಿಕೆಗಳನ್ನು ಸಚಿವರು ನೀಡಿದ್ದರು. ರಾಹುಲ್ ಗಾಂಧಿಯವರ 4ನೇ ತಲೆಮಾರಿನವರು ಬಂದರೂ ಸಹ ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಗುಡುಗಿದ್ದರು. ಇದನ್ನೂ ಓದಿ:  ರಾಜ್ಯದ ಜನತೆಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ – ವೈಷ್ಣೋದೇವಿಗೆ ತೆರಳುವ ಭಕ್ತರಿಗೆ 5,000 ಸಹಾಯಧನ

  • ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಯತ್ನ: ಸಿಎಂ

    ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಯತ್ನ: ಸಿಎಂ

    ಬೆಂಗಳೂರು: ಬಿಜೆಪಿ (BJP) ನಾಯಕರು ಮತ್ತು ಬಿಜೆಪಿಗೆ ಬೆಂಬಲ ಕೊಟ್ಟಿರುವ ಪಕ್ಷದ ನಾಯಕರು ರಾಹುಲ್ ಗಾಂಧಿ(Rahul Gandhi) ವಿರುದ್ಧ ಜೀವ ಬೆದರಿಕೆ ಹಾಕುತ್ತಿದ್ದು ಕೂಡಲೇ ಎಲ್ಲರನ್ನು ಬಂಧಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಇತ್ತೀಚೆಗೆ ರಾಹುಲ್ ಗಾಂಧಿ ಮೇಲೆ ಬಿಜೆಪಿಯವರು ಗಧಾಪ್ರಹಾರ ನಡೆಸುತ್ತಿದ್ದಾರೆ. ಟೀಕೆಗಳನ್ನು ಮಾತ್ರ ಮಾಡುತ್ತಿಲ್ಲ. ಸುಳ್ಳು ಆರೋಪ ಮಾತ್ರ ಮಾಡುತ್ತಿಲ್ಲ. ಅವರಿಗೆ ಕೊಲೆ ಬೆದರಿಕೆ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುಗ್ಗಿಸಲು, ಅವರನ್ನ ಹಣಿಯಲು ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ, ಗೊಡ್ಡು ಬೆದರಿಕೆಗಳಿಗೆ, ಕೊಲೆ ಬೆದರಿಕೆಗೆ ರಾಹುಲ್ ಗಾಂಧಿ ಹೆದರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಯತ್ನಾಳ್‌ರನ್ನ ಪಕ್ಷದಲ್ಲಿ ಇಟ್ಟುಕೊಂಡಿರೋದೆ ಬೊಗಳಿಸೋಕೆ: ಸಿದ್ದರಾಮಯ್ಯ

    ರಾಹುಲ್ ಗಾಂಧಿ ಇಂದಿರಾಗಾಂಧಿ (Indira Gandhi) ಕುಟುಂಬದಿಂದ ಬಂದವರು. ದೇಶಕ್ಕಾಗಿ ಪ್ರಾಣ ತೆತ್ತವರು. ಅವರ ತಂದೆ ಕೂಡಾ ಬಾಂಬ್ ಸ್ಫೋಟದಲ್ಲಿ ಜೀವ ಕಳೆದುಕೊಂಡವರು. ಬಿಜೆಪಿ ನಾಯಕರು ಇತ್ತೀಚೆಗೆ ತಾರ್ವಿಂದರ್ ಸಿಂಗ್ ಮಾರ್ವ, ನೇರವಾಗಿ ರಾಹುಲ್ ಗಾಂಧಿಗೆ ನೀವು ಸರಿಯಾಗಿ ನಡೆದುಕೊಳ್ಳದೇ ಇದ್ದರೆ ಇಂದಿರಾಗಾಂಧಿಗೆ ಆದ ಗತಿಯೇ ನಿಮಗೂ ಆಗುತ್ತೆ ಎಂದು ಬೆದರಿಕೆ ಹಾಕಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರು ರವನೀತ್ ಬಿಟ್ಟು ಅವರು ರಾಹುಲ್ ಅವರಿಗೆ ನೀವು ಒಬ್ಬ ಭಯೋತ್ಪಾದಕ ಎಂದು ಕರೆದಿದ್ದಾರೆ. ಇದರ ಅರ್ಥ ಸಾರ್ವಜನಿಕರನ್ನ ಎತ್ತಿ ಕಟ್ಟೋದು. ಇಂತಹ ಪ್ರಚೋದನೆ ಮಾತು ಆಡಿ ರಾಹುಲ್ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಡ್ರಗ್ಸ್ ಹಾವಳಿ ತಡೆಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ: ಸಿಎಂ ಘೋಷಣೆ

    ಏಕನಾಥ್ ಶಿಂಧೆ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದರೆ 11 ಲಕ್ಷ ರೂ. ಕೊಡುತ್ತೇನೆ ಎಂದು ಹೇಳಿದ್ದಾರೆ. ಇದು ಕೂಡಾ ಕೊಲೆ ಬೆದರಿಕೆ. ಕೂಡಲೇ ಈ ದುಷ್ಟ ಶಾಸಕನನ್ನ ಕೊಲೆ ಬೆದರಿಕೆ ಕೇಸ್ ಹಾಕಿ ಬಂಧನ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

    ಯುಪಿ (Uattara Pradesh) ಸರ್ಕಾರದ ಮಂತ್ರಿ ರಘುರಾಜ್ ಸಿಂಗ್, ರಾಹುಲ್ ಗಾಂಧಿ ಅವರು ದೇಶದ ನಂಬರ್ 1 ಭಯೋತ್ಪಾದಕ ಎಂದು ಹೇಳಿದ್ದಾರೆ. ನೇರವಾಗಿ ಕೊಲೆ ಬೆದರಿಕೆ ಆಗಿದ್ದರು ಕೂಡಾ ಇವತ್ತಿನವರೆಗೂ ಯಾರ ಮೇಲು ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ. ಕೆಲವು ಕಡೆ ಕಾಟಾಚಾರಕ್ಕೆ ದೂರು ದಾಖಲು ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಜಯ್ ಗಾಯಕ್ವಾಡ್ ವಿರುದ್ಧ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡಿದ್ದಾರೆ. ಆಗ ಅವರಿಗೆ ನಿಮ್ಮನ್ನೆಲ್ಲ ಹೂತಾಕುತ್ತೇನೆ ಎಂದು ಹೇಳಿದ್ದಾನೆ. ಒಬ್ಬ ಶಾಸಕ ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾಮೀನು ಭವಿಷ್ಯ ಗುರುವಾರ ನಿರ್ಧಾರ: ಅಟ್ರಾಸಿಟಿ ಕಾಯ್ದೆ ಅನ್ವಯವಾಗಲ್ಲ – ಮುನಿರತ್ನ ವಕೀಲರ ವಾದ ಏನು?

    ಇಷ್ಟೆಲ್ಲ ಕೊಲೆ ಬೆದರಿಕೆ ಹಾಕಿದರೂ ಯಾವುದೇ ಕ್ರಮ ಆಗಲಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದನ್ನ ತೀವ್ರವಾಗಿ ಖಂಡಿಸುತ್ತದೆ. ಇದು ಸಣ್ಣ ವಿಷಯ ಅಲ್ಲ. ಪ್ರಾಣ ಭಯ ಉಂಟು ಮಾಡೋದು ಸರಿಯಲ್ಲ. ಶೋಕಿಗೋಸ್ಕರ ದೂರು ದಾಖಲು ಆಗಿದೆ. ಏನು ಕ್ರಮ ಆಗಿಲ್ಲ. ಪರೋಕ್ಷವಾಗಿ ಆರೋಪಿಗಳಿಗೆ ಇವರು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಹಾಕಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸುತ್ತೇವೆ ಎಂದು ಬಿಜೆಪಿಯವರು ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ಕಾಂಗ್ರೆಸ್ ಪಕ್ಷ ಇದನ್ನ ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ: ವಿಜಯೇಂದ್ರ

  • ತುರ್ತು ಪರಿಸ್ಥಿತಿಗೆ 50 ವರ್ಷ – ಕರಾಳ ದಿನಗಳನ್ನು ನೆನೆದ ಪ್ರಧಾನಿ

    ತುರ್ತು ಪರಿಸ್ಥಿತಿಗೆ 50 ವರ್ಷ – ಕರಾಳ ದಿನಗಳನ್ನು ನೆನೆದ ಪ್ರಧಾನಿ

    – ಸಂವಿಧಾನವನ್ನ ಕಾಂಗ್ರೆಸ್‌ ಹೇಗೆ ತುಳಿಯಿತು ಅನ್ನೋದು ನೆನಪಿದೆ: ಮೋದಿ

    ನವದೆಹಲಿ: ʻತುರ್ತು ಪರಿಸ್ಥಿತಿʼಯು (Emergency 1975) ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. 1975ರ ಜೂನ್‌ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಜೂನ್‌ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದು ಪ್ರಧಾನಿ ಮೋದಿ (Narendra Modi) ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ವಿರುದ್ಧವೂ ಕಿಡಿ ಕಾರಿದ್ದಾರೆ.

    ಮೋದಿ ಎಕ್ಸ್‌ ಖಾತೆಯಲ್ಲಿ ಏನಿದೆ?
    ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರಿಗೆ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. ತುರ್ತು ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷವು (Congress Party) ಮೂಲಭೂತ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಿತ್ತು? ಹಾಗೂ ಪ್ರತಿಯೊಬ್ಬ ಭಾರತೀಯರು ಗೌರವಿಸುವ ಸಂವಿಧಾನವನ್ನು (Constitution Of India) ಹೇಗೆ ತುಳಿಯಿತು? ಎಂಬುದನ್ನು ನಮಗೆ ನೆನಪಿಸುತ್ತದೆ.

    ಅಸಂಖ್ಯಾತ ಸಂದರ್ಭಗಳಲ್ಲಿ 356ನೇ ವಿಧಿಯನ್ನು ಹೇರಿದವರು, ಪತ್ರಿಕಾ ಸ್ವಾತಂತ್ರ್ಯವನ್ನು ನಾಶಮಾಡುವ ಮಸೂದೆಯನ್ನು ಪಡೆದವರು, ಫೆಡರಲಿಸಂ ಅನ್ನು ನಾಶಪಡಿಸಿದರು ಮತ್ತು ಸಂವಿಧಾನದ ಪ್ರತಿಯೊಂದು ಅಂಶವನ್ನು ಉಲ್ಲಂಘಿಸಿದವರು ಇದೇ ಜನರು. ಇದನ್ನೂ ಓದಿ: ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಆರೋಗ್ಯ – ಆಪ್‌ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

    ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿಯು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿದೆ. ಅವರು ತಮ್ಮ ಟೋಕನಿಸಂ ಮೂಲಕ ಸಂವಿಧಾನದ ಬಗ್ಗೆ ತಮ್ಮ ತಿರಸ್ಕಾರ ಮನೋಭಾವವನ್ನು ಮರೆಮಾಚುತ್ತಾರೆ. ತುರ್ತು ಪರಿಸ್ಥಿತಿ ಹೇರಿದವರಿಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ. ಆದ್ರೆ ದೇಶದ ಜನರು ಅವರ ಭಾವನೆಗಳನ್ನು ವರ್ತನೆಗಳ ಮೂಲಕ ನೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನ ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿ – ಇಂದು ಬೆಂಗ್ಳೂರು ಕೋರ್ಟ್‌ಮುಂದೆ ಹಾಜರ್‌ ಸಾಧ್ಯತೆ

  • ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ: ಬೊಮ್ಮಾಯಿ

    ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ: ಬೊಮ್ಮಾಯಿ

    – ಎಮರ್ಜೆನ್ಸಿ ವೇಳೆ ನಾನು ಹುಬ್ಬಳ್ಳಿಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಯಾಗಿದ್ದೆ
    – ಎಮರ್ಜೆನ್ಸಿ ನಮ್ಮ ಸಂವಿಧಾನಕ್ಕೆ, ದೇಶಕ್ಕೆ ಸವಾಲಾಗಿತ್ತು
    – ಭಾರತ ಒಂದೇ ಪ್ರಬಲ ಪ್ರಜಾಪ್ರಭುತ್ವ ಇಟ್ಟುಕೊಂಡು ಮುಂದೆ ಸಾಗುತ್ತಿದೆ

    ಬೆಂಗಳೂರು: ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಪರಿಸ್ಥಿತಿ ಸಮಯವನ್ನು ನೆನಪಿಸಿಕೊಂಡರು.

    ಚಾಲುಕ್ಯ ವೃತ್ತದಲ್ಲಿರುವ ಬಸವ ಸಮಿತಿ ಭವನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೊಮ್ಮಾಯಿ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಸಂಸದರಾದ ಡಿವಿಎಸ್, ಪಿ.ಸಿ.ಮೋಹನ್ ಭಾಗಿಯಾಗಿದ್ದರು.

    ಈ ವೇಳೆ ತುರ್ತು ಪರಿಸ್ಥಿತಿ ಕುರಿತು ಮಾತನಾಡಿದ ಸಿಎಂ, ಇಂದಿರಾಗಾಂಧಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದ್ರು. ಎಮರ್ಜೆನ್ಸಿ ವೇಳೆ ಅವರು ಮಾಡಬಾರದ್ದನ್ನು ಮಾಡಿದರು. ಎಲ್ಲ ರಾಜಕೀಯ ನಾಯಕರು, ಹಲವು ಸಂಘಟನೆಗಳ ನಾಯಕರನ್ನು ಜೈಲಿನಲ್ಲಿಟ್ಟಿದ್ರು. ಅವರದ್ದೇ ಪಕ್ಷದಲ್ಲಿ ಎಮರ್ಜೆನ್ಸಿ ಸರಿಯಿಲ್ಲ ಅಂದವರನ್ನೂ ಜೈಲಿಗಟ್ಟಿದ್ರು ಎಂದು ಕಿಡಿಕಾರಿದರು. ಇದನ್ನೂ ಓದಿ:  ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು 

    ಎಮರ್ಜೆನ್ಸಿ ವೇಳೆ ನಾನು ಸೆಕೆಂಡ್ ಪಿಯುಸಿ
    ಎಮರ್ಜೆನ್ಸಿ ವೇಳೆ ನಾನು ಹುಬ್ಬಳ್ಳಿಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಅನಂತ್ ಕುಮಾರ್ ನನ್ನ ಕ್ಲಾಸ್ ಮೇಟ್ ಆಗಿದ್ರು. ರಾತ್ರಿ ಆಯ್ತು ಅಂದ್ರೆ ಕರಪತ್ರಗಳನ್ನು ಹಂಚ್ತಿದ್ರು. ನಮ್ಮ ಊರಿನಲ್ಲಿ ಏನೂ ಆಗ್ತಿಲ್ವಲ್ಲ ಅಂತ ಎನಿಸಿತ್ತು. ಆಗ ಎಲ್ಲ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದೆವು. ಅದು ಬಹಳ ದೊಡ್ಡ ಸುದ್ದಿ ಆಯ್ತು. ಆಗ ಪೊಲೀಸರು ಬಂದ್ರು ನಾವೆಲ್ಲ ಓಡಿ ಹೋದೆವು. ಬಂಧಿಸಿದವರನ್ನು ರಕ್ಷಿಸಲು ಅನಂತ್ ಕುಮಾರ್ ಹೋದರು. ನಾನು ಹೋಗಬೇಡ, ನಿನ್ನನ್ನೂ ಬಂಧಿಸ್ತಾರೆ ಅಂದೆ. ಅನಂತ್ ಕುಮಾರ್‌ನನ್ನು ಬಂಧಿಸಿ ನಾಲ್ಕು ತಿಂಗಳು ಜೈಲಲ್ಲಿದ್ರು ಎಂದು ಎಮರ್ಜೆನ್ಸಿ ದಿನಗಳ ಬಗ್ಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

    ದೇಶ ಒಂದಾಗಿತ್ತು
    ಎಮರ್ಜೆನ್ಸಿ ವೇಳೆ ಇಡೀ ದೇಶ ಒಂದಾಗಿತ್ತು. ಜಾತಿ, ಮತ, ಪಂಥ ಮರೆತು ದೇಶ ಒಂದಾಗಿತ್ತು. ಕೆಲವರು ಕಾಂಗ್ರೆಸ್ ಬಗ್ಗೆ ಈಗ ಬಹಳ ಮಾತಾಡ್ತಾರೆ. ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಮಾತಾಡೋರೂ ಎಮರ್ಜೆನ್ಸಿ ವಿರೋಧಿಸಿದ್ರು. ಆತ್ಮವಂಚನೆ ಮಾಡಿಕೊಂಡು ಈಗ ಕಾಂಗ್ರೆಸ್‍ನ ಹೊಗಳ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‍ನ ಹಲವು ವಲಸಿಗ ನಾಯಕರಿಗೆ ಕಾಲೆಳೆದರು.

    ಎಮರ್ಜೆನ್ಸಿ ನಮ್ಮ ಸಂವಿಧಾನಕ್ಕೆ, ದೇಶಕ್ಕೆ ಸವಾಲಾಗಿತ್ತು. ಜನಶಕ್ತಿಯೇ ಗೆಲ್ಲುತ್ತದೆ ಅಂತ ಜೆಪಿ ಹೇಳಿದ್ರು. ದೈತ್ಯ ಶಕ್ತಿ ಎದುರು ಜನಶಕ್ತಿ ಗೆಲ್ಲುತ್ತೆ ಅಂದಿದ್ರು. ಆಗ ಎಲ್ಲ ಯುವಕರೂ ಸಿಡಿದೆದ್ದಿದ್ರು. ಸ್ವತಂತ್ರ ಕಾಲದ ಕಿಚ್ಚು ಜನತೆಯಲ್ಲಿ ಇತ್ತು. ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ಗೆಲ್ಲೋದು. ಇಂಥ ಕರಾಳ ಶಾಸನ, ದಿನಗಳು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಜೈಲಿನಲ್ಲಿ ಇದ್ದರು. ಅನೇಕರನ್ನು ಜೈಲಿಗೆ ಹಾಕಿದ್ದರು. ಆದರೂ ಯಾರೂ ಧೃತಿಗೆಡಲಿಲ್ಲ. ಎಲ್ಲರಿಗೂ ಅದಮ್ಯವಾದ ವಿಶ್ವಾಸವಿತ್ತು. ದೇಶದ ಪ್ರಜಾಪ್ರಭುತ್ವದ ದೊಡ್ಡ ಪ್ರಮಾಣದ ಬದಲಾವಣೆ ಕರಾಳ ದಿನದಿಂದ ಬಂದಿದೆ. ಜನಶಕ್ತಿಯೇ ಇದಕ್ಕೆ ಮುಖ್ಯ ಕಾರಣ. ಇದನ್ನು ಸಂಭ್ರಮಿಸೋದಲ್ಲ ಆದರೆ ಇಂಥ ದಿನ ಇತ್ತು ಅಂತ ತೋರಿಸುವುದು ಮುಖ್ಯ ಎಂದರು.

    ಪ್ರಜಾಪ್ರಭುತ್ವದ ಮಹತ್ವ ತಿಳಿಯಬೇಕು
    ಆಗಿನ ಯುವಕರು ದೇಶಕ್ಕಾಗಿ ಏನು ಮಾಡ್ತೀಯಾ ಅಂದರೆ ಪ್ರಾಣ ಕೊಡ್ತೀನಿ ಅಂತಿದ್ರು. ಆದರೆ ಈಗ ಕೇಳಿದ್ರೆ ದೇಶ ಕಟ್ಟಬೇಕು, ದೇಶಕ್ಕಾಗಿ ಬದುಕ್ತೀನಿ ಅನ್ನೋ ರೀತಿ ಇರಬೇಕು. ಪ್ರಜಾಪ್ರಭುತ್ವದ ಮಹತ್ವ ತಿಳಿಯಬೇಕು ಅಂದರೆ ಇವರನ್ನು ನೋಡಬೇಕು. ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಬ್ರಿಟನ್‍ನಲ್ಲಿ ಲಿಖಿತ ಸಂವಿಧಾನವಿಲ್ಲ. ನಮ್ಮ ಸಂವಿಧಾನ ಬದಲಾದ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುವ ಸಂವಿಧಾನವಾಗಿದೆ. ಎಲ್ಲರ ರಕ್ಷಣೆ, ಎಲ್ಲರ ಸ್ವಾಭಿಮಾನ ರಕ್ಷಣೆ ಅದರಲ್ಲಿ ಇದೆ ಎಂದು ಹೆಮ್ಮೆ ಪಟ್ಟರು.

    ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದರ ಹಾಗುಹೋಗುವಿನಲ್ಲಿ ಭಾಗಿಯಾಗಬೇಕು. ಅನೇಕ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಆದರೆ ಅವರ ಮೇಲೆಯೇ ಅನೇಕರು ಆರೋಪಗಳನ್ನು ಮಾಡುತ್ತಿದ್ದಾರೆ. 32% ಆದಾಯವನ್ನು 42% ಬರುವಂತೆ ಮಾಡಿದ್ರು ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ 

    ಟೀಕೆ ಮಾಡ್ತಾರೆ, ಮಾಡಲಿ
    ಸ್ವಚ್ಛ ಭಾರತ ಮಾಡಿದ್ದು ನರೇಂದ್ರ ಮೋದಿಯವರು. ನೇರವಾಗಿ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡಿದ್ದು ಮೋದಿ. ಮನೆ ಮನೆಗೆ ನೀರು ಕೊಡುವ ಯೋಜನೆ ಮಾಡಿದ್ದು ಮೋದಿ. ಆದರೆ ಅವರನ್ನೇ ಟೀಕೆ ಮಾಡ್ತಾರೆ, ಮಾಡಲಿ. ಯುವಕರೇ ಜೀವನ ನಿರ್ಮಿಸಿಕೊಳ್ಳಿ, ತರಬೇತಿ ತೆಗೆದುಕೊಳ್ಳಿ ಅಂದರೆ ಅದಕ್ಕೂ ಟೀಕೆ. ಆದರೆ ಒಂದೊಳ್ಳೆ ಯೋಜನೆ ಮಾಡಬೇಕಾದ್ರೆ ಹೀಗೆಲ್ಲಾ ಆಗುತ್ತದೆ ಎಂದು ವಿವರಿಸಿದರು.

    ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಿನಿಮಾ ಟ್ರೈಲರ್ ಇದ್ದಂಗೆ. ಅಮೆರಿಕಾದಲ್ಲೂ ಪ್ರಜಾಪ್ರಭುತ್ವ ಈಗ ಅಲ್ಲಾಡುತ್ತಿದೆ. ಭಾರತ ಒಂದೇ ಪ್ರಬಲ ಪ್ರಜಾಪ್ರಭುತ್ವ ಇಟ್ಟುಕೊಂಡು ಮುಂದೆ ಸಾಗುತ್ತಾ ಇರೋದು. ಇದು ನಮ್ಮ ನಾಯಕತ್ವ, ನರೇಂದ್ರ ಮೋದಿ ಅವರ ನಾಯಕತ್ವ ಎಂದು ಸಂತೋಷ ವ್ಯಕ್ತಪಡಿಸಿದರು.

    Live Tv

  • ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಕೊಟ್ಟಿಲ್ಲ ಅನ್ನೋ ಆರೋಪಕ್ಕೆ ಖುದ್ದು ದೇವೇಗೌಡರೇ ತಿರುಗೇಟು ಕೊಟ್ಟಿದ್ದಾರೆ.

    ತುಮಕೂರು ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ರಾಷ್ಟ್ರದಲ್ಲಿ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ಕೊಡೋದು ಎಂದು ಹೇಳಿದ್ದಾರೆ.

    ಕೆಲವರು ತಮ್ಮನ್ನು ವಿನಾಕಾರಣ ದೂಷಿಸುತ್ತಾರೆ. ಆದ್ರೆ ವಾಸ್ತವ ಬೇರೆ ಇದೆ. ಈ ಹಿಂದೆ ಇಂದಿರಾಗಾಂಧಿ ಇದ್ದಾಗ ನಾನು ನೀರಾವರಿ ಮಂತ್ರಿಯಾಗಿದ್ದೆನು. ಆ ಸಂದರ್ಭದಲ್ಲಿ ಎರಡು ದಿನ ಚರ್ಚೆಯಾಯ್ತು. ಇಡೀ ಹಿಂದೂಸ್ಥಾನದ ನೀರಾವರಿ ಖಾತೆ ಹೊಂದಿದ ಮಂತ್ರಿಗಳು ಸಭೆ ನಡೆಸಿದ್ರು.

    ನೀರಿನ ಬಳಕೆ ಹಾಗೂ ಎಲ್ಲಾ ನದಿಗಳ ಜೋಡಣೆ ಬಗ್ಗೆ ಅಭಿಪ್ರಾಯ ಕುರಿತು ಇಂದಿರಾಗಾಂಧಿ ಅವರು 2 ಕಮಿಟಿ ಮಾಡಿದ್ರು. ನದಿಗಳ ನೀರು ಎಲ್ಲಿ ಹೆಚ್ಚು ಪ್ರವಾಹ ಹರಿಯುತ್ತೋ, ಅಂತಹ ನದಿಗಳಿಂದ ನೀರು ಸಂಗ್ರಹದ ಬಗ್ಗೆ ಕಮಿಟಿಯಲ್ಲಿ ಚಿಂತನೆ ನಡೆದಿತ್ತು. ಆದ್ರೆ ತುಮಕೂರಿಗೂ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಏನಿಲ್ಲ ಎಂದು ಗೌಡರು ಸ್ಪಷ್ಟನೆ ನೀಡಿದ್ದಾರೆ.

  • ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

    ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

    ಶಿವಮೊಗ್ಗ: ಮಾಜಿ ಸಂಸದ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆತ್ಮಕತೆ ಸಾಲ ಮೇಳದ ಸಂಗ್ರಾಮ ಆತ್ಮಕತೆಯಲ್ಲ ಅದೊಂದು ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಬಂಗಾರಪ್ಪ ಪುತ್ರ, ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.

    ಕೃತಿಯಲ್ಲಿ ಬಂಗಾರಪ್ಪ ಅವರು, ಇಂದಿರಾಗಾಂಧಿ ಅವರಿಗೆ ಅವಾಚ್ಯವಾಗಿ ಮಾತನಾಡಿದ್ದರು, ಒಮ್ಮೆ ಇಂದಿರಾಗಾಂಧಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದರು ಎಂದು ಬರೆದಿದ್ದಾರೆ. ಇದು ನಿಜವಾಗಿದ್ದರೆ ರಾಜೀವ್ ಗಾಂಧಿ ಬಂಗಾರಪ್ಪ ಅವರನ್ನು ಸಿಎಂ ಮಾಡುತ್ತಿರಲಿಲ್ಲ. ಇದು ಆತ್ಮಕತೆಯಲ್ಲ- ಸುಳ್ಳಿನ ಕಂತೆ. ಅದು ಆಟೋಬಯೋಗ್ರಫಿ ಅಲ್ಲ. ಅವರ ಪಾಪದ ಕೊಡ ಎಂದು ಮಧು ಹೇಳಿದ್ದಾರೆ.

    ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ:
    ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪೂಜಾರಿ ತಮ್ಮ ಆತ್ಮಕತೆಯಲ್ಲಿ ಬಂಗಾರಪ್ಪ ಅವರ ಬಗ್ಗೆ ಬರೆದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಇದರಿಂದ ಬಂಗಾರಪ್ಪ ಅಭಿಮಾನಿಗಳಿಗೆ ನೋವಾಗಿದೆ. ಜನಾರ್ದನ ಪೂಜಾರಿ ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅರಳು ಮರಳಾಗಿರಬಹುದು ಅಥವಾ ಅವರಿಗೆ ತಲೆಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಬಂಗಾರಪ್ಪ ಅಧಿಕಾರದಿಂದ ಇಳಿದ ಮೇಲೆ ಕಾಂಗ್ರೆಸ್ಸಿಗರೇ ಅವರ ವಿರುದ್ದ ಕ್ಲಾಸಿಕ್ ಕಂಪ್ಯೂಟರ್ ಸೇರಿ ಮೂರು ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲೂ ಬಂಗಾರಪ್ಪ ನಿರ್ದೋಷಿ ಎಂದು ಕೋರ್ಟ್ ಖುಲಾಸೆಗೊಳಿಸಲಾಗಿದೆ. ಆದರೆ ಪೂಜಾರಿ ಬಂಗಾರಪ್ಪ ಭ್ರಷ್ಟಾಚಾರಿ ಎಂದು ಹೇಳಿದ್ದಾರೆ. ಇದು ನ್ಯಾಯಾಂಗ ನಿಂದನೆ ಆಗಲಿದೆ. ತಮ್ಮ ಕ್ಷೇತ್ರದಲ್ಲಿ ಕೋಮುಗಲಭೆ ತಡೆಯಲು ಯಾಕೆ ಸಾಧ್ಯವಾಗಿಲ್ಲ ಏಕೆ ಎಂಬುದನ್ನು ಮೊದಲು ಬರೆಯಿರಿ. ಅವರ ಪಕ್ಷದಲ್ಲಿ ಅವರಿಗೇ ಗೌರವ ಇಲ್ಲ. ಬೇರೆಯವರ ಮೇಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹಾಕುವುದಿಲ್ಲ. ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು

    ಸಾಲ ಮೇಳದ ಸಂಗ್ರಾಮದಲ್ಲಿ ಏನಿದೆ?:
    ನಾನೊಮ್ಮೆ ಬಂಗಾರಪ್ಪ ಅವರನ್ನು ಇಂದಿರಾಗಾಂಧಿಯವರಿಗೆ ಪರಿಚಯ ಮಾಡುವ ಸಂದರ್ಭ ಇಂದಿರಾಗಾಂಧಿ ‘ಹೂ ಈಸ್ ದ್ಯಾಟ್ ಬಂಗಾರಪ್ಪ’ ಎಂದು ಕೇಳಿದ್ದರು. ಅವರು ‘ದೇವರಾಜ ಅರಸರ ಕ್ಯಾಬಿನೆಟ್ನಲ್ಲಿದ್ದಾರೆ’ ಎಂದು ಹೇಳಿ ಪರಿಚಯಿಸಿದ್ದೆ. ಇದಾದ ಬಳಿಕ 1980ರ ಕಾಲಘಟ್ಟದಲ್ಲಿ ಚುನಾವಣೆಗಿಂತ ಮೊದಲು ಗುಂಡೂರಾಯರನ್ನು ರಾಜ್ಯಕ್ಕೆ ಎಲೆಕ್ಷನ್ ಕಮಿಟಿ ಚೇರ್ಮನ್ ಆಗಿ ನೇಮಿಸಿ ಪ್ರಕಟಣೆ ಮಾಡಿದರು. ಅಷ್ಟರವರೆಗೆ ಬಂಗಾರಪ್ಪಗೆ ಮುಖ್ಯಮಂತ್ರಿಯಾಗುವ ಕನಸಿತ್ತು. ಈಗ ಗುಂಡೂರಾಯರನ್ನು ನೇಮಕ ಮಾಡಿದ್ದು ಅವರಿಗೆ ಶಾಕ್ ಹೊಡೆದಂತಾಯಿತು. ಈ ಸಂದರ್ಭ ಇಂದಿರಾಗಾಂಧಿಯನ್ನು ಕೆಟ್ಟಮಾತುಗಳಿಂದ ಬೈದರು.

    ಆ ವೇಳೆ ಸಮಾಧಾನ ಹೇಳಿ ಸ್ವಲ್ಪ ದಿನ ಬಿಟ್ಟು ನಾನೊಮ್ಮೆ ಇಂದಿರಾಗಾಂಧಿ ಬಳಿ ಬಂಗಾರಪ್ಪ ಅವರನ್ನು ಕರೆದುಕೊಂಡು ಹೋದೆ. ಹೋದ ಕೂಡಲೇ ಬಂಗಾರಪ್ಪನವರು ಆರ್ಭಟ ಮಾಡಿದ್ದು, ನನಗೆ ಬಹಳ ಬೇಸರವಾಯಿತು. ಈ ಸಂದರ್ಭ ಇಂದಿರಾಗಾಂಧಿಯವರಿಗೆ ಹೊಡೆಯಲು ಹೋದರು. ನನಗೆ ಆಘಾತವಾಯಿತು. ಕೂಡಲೇ ಬಂಗಾರಪ್ಪರನ್ನು ಹಿಡಿದು ಹಿಂದಕ್ಕೆ ಎಳೆದೆ. ಇಂದಿರಾ ಹೆದರಿ ನಡುಗುತ್ತಿದ್ದರು. ಏನಾಗಿದೆ ನಿಮಗೆ? ತಲೆ ಸರಿ ಉಂಟಾ? ಹೋಗಿ ಹೊರಗೆ ನಿಲ್ಲಿ ಎಂದು ಹೇಳಿದೆ. ಆ ಬಳಿಕ ಇಂದಿರಾಗಾಂಧಿ ನನ್ನಲ್ಲಿ ‘ನನ್ನ ಮಕ್ಕಳು ಕೂಡಾ ಈ ರೀತಿ ಮಾಡಲಿಲ್ಲ. ಈ ರೀತಿ ಮಾಡಬಾರದಿತ್ತು,’ ಎಂದು ನೊಂದುಕೊಂಡರು ಅಂತಾ ಬರೆಯಲಾಗಿದೆ.

  • ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಮನಮೋಹನ್ ಸಿಂಗ್‍ಗೆ ಗೊತ್ತು: ಮೋದಿ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆದರಣೀಯ ವ್ಯಕ್ತಿ. ಅಷ್ಟು ಹಗರಣಗಳು ನಡೆದರೂ ಮನಮೋಹನ್ ಸಿಂಗ್ ಮೇಲೆ ಒಂದು ಕಪ್ಪು ಚುಕ್ಕೆಯೂ ಬರಲಿಲ್ಲ. ರೇನ್ ಕೋಟ್ ಹಾಕಿ ಸ್ನಾನ ಮಾಡುವುದು ಮನಮೋಹನ್‍ಗೆ ಚೆನ್ನಾಗಿ ಗೊತ್ತು ಅಂತಾ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ನೋಟ್ ಬ್ಯಾನ್, ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧದ ಹೋರಾಟವಲ್ಲ ಎಂದು ಹೇಳಿದರು. ಮನಮೋಹನ್ ಸಿಂಗ್ ವಿರುದ್ಧದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ನಡುವೆಯೇ ಸಭಾತ್ಯಾಗ ಮಾಡಿದರು.

    ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣದಂತೆಯೇ ಇಂದು ಕೂಡಾ ಮೋದಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ವಿಪಕ್ಷಗಳು 70 ವರ್ಷದ ಬಗ್ಗೆ ಟೀಕೆ ಮಾಡುತ್ತಿವೆ. ಆದರೆ ನನ್ನ ಸರ್ಕಾರಕ್ಕೆ ಈಗ ಕೇವಲ ಎರಡೂವರೆ ವರ್ಷ. ನಿಮ್ಮ ಅವಧಿಯ ಟಾಯ್ಲೆಟ್‍ಗಳಿಗೆ ಬೀಗ ಹಾಕಿದ್ನಾ?, ನಿಮ್ಮ ಅವಧಿಯ ರಸ್ತೆ ಕಿತ್ತು ಹಾಕಿದ್ನಾ?. ಎಲ್ಲದಕ್ಕೂ ನಾನೇ ಕಾರಣ ಎಂದು ಯಾಕೆ ಅಂದ್ಕೋತೀರಿ ಎಂದು ಮೋದಿ ಪ್ರಶ್ನಿಸಿದರು.

    1971ರಲ್ಲಿ ಇಂದಿರಾ ಗಾಂಧಿಗೆ ಅಂದಿನ ಹಣಕಾಸು ಸಚಿವರು ನೋಟ್ ಬ್ಯಾನ್‍ಗೆ ಸಲಹೆ ನೀಡಿದ್ದರು. ಆದರೆ ಇಂದಿರಾಗಾಂಧಿ ಅವರು ಇದನ್ನು ತಿರಸ್ಕರಿಸಿದ್ದರು. 1972ರಲ್ಲಿ ಜ್ಯೋತಿ ಬಸು ನೋಟ್ ಬ್ಯಾನ್ ಬಗ್ಗೆ ಮಾತನಾಡಿದರು. 1981ರಲ್ಲಿ ಹರ್‍ಕಿಶನ್ ಸಿಂಗ್ ಸುರ್ಜಿತ್ ಉಲ್ಲೇಖಿಸಿದ್ದರು ಎಂದು ಮೋದಿ ಹೇಳಿದರು.

    ನಾನು ಓಕೆ, ಆರ್‍ಬಿಐಗೆ ವಿರೋಧ ಯಾಕೆ?: ನೋಟ್ ಬ್ಯಾನ್‍ಗೆ ಸಂಬಂಧಪಟ್ಟ ವಿಚಾರದಲ್ಲಿ ನನ್ನ ಹಾಗೂ ಸರ್ಕಾರದ ವಿರುದ್ಧದ ಟೀಕೆಗಳು ನನಗೆ ಅರ್ಥವಾಗುತ್ತದೆ. ಆದರೆ ಆರ್‍ಬಿಐ, ಆರ್‍ಬಿಐ ಗವರ್ನರ್‍ರನ್ನು ವಿವಾದದಲ್ಲಿ ತರಬೇಡಿ. ಅವರಿಗೆ ಅವರದೇ ಆದ ಗೌರವವಿದೆ. ಅದನ್ನು ಹಾಳು ಮಾಡುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದರು.

    ದೇಶದಲ್ಲಿ ಒಂದೇ ಬಾರಿ ಬದಲಾವಣೆ ಅಸಾಧ್ಯ. ಬದಲಾವಣೆಗೆ ನಾವೆಲ್ಲರೂ ತಯಾರಾಗಬೇಕು. ನಾವೇನಾದರೂ ಬದಲಾವಣೆ ತರಲು ಯತ್ನಿಸಿದರೆ ಟೀಕೆಗಳೇ ಬರುತ್ತವೆ. ದೊಡ್ಡ ನಿರ್ಧಾರಗಳನ್ನು ಜಾರುಗೆ ತರುವಾಗ ತೊಂದರೆ ಸಹಜ. ಯಾವ ಸರ್ಕಾರವೂ ಮಲಗಬೇಕೆಂದು ಬರುವುದಿಲ್ಲ. ಕೆಂಪುಕೋಟೆಯ ಭಾಷಣದಲ್ಲಿ ನಾನು ಇದೇ ಮಾತನ್ನು ನಾನು ಹೇಳಿದ್ದೆ. ನಾನು ಸ್ವಚ್ಛ ಭಾರತದ ಬಗ್ಗೆ ಮಾತನಾಡಿದೆ. ಆದರೆ ಅದರ ಬಗ್ಗೆ ಲೇವಡಿ ಮಾಡುತ್ತಾರೆ. ಸ್ವಚ್ಛತಾ ಆಂದೋಲನದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದರು.

    ಮಹಿಳೆಯರ ಸುರಕ್ಷತೆಗಾಗಿ 24 ಗಂಟೆಗಳ ಹೆಲ್ಪ್‍ಲೈನ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಪಾವತಿಗೆ ನಾವೆಲ್ಲರೂ ಒತ್ತು ನೀಡಬೇಕಿದೆ. ನೋಟ್ ಬ್ಯಾನ್ ಮಾಡಿದ 40 ದಿನಗಳಲ್ಲಿ 700 ಮಾವೋವಾದಿಗಳು ಶರಣಾದರು. ಇದು ಮೊದಲ ಬಾರಿಗೆ ಆಯಿತು. ಅಪ್ರಮಾಣಿಕರಿಗೆ ಶಿಕ್ಷೆಯಾಗುವವರೆಗೆ ಪ್ರಾಮಾಣಿಕರಿಗೆ ಬಲ ಬರಲ್ಲ. ಬ್ಯಾಂಕ್‍ಗಳಿಗೆ ನಗದು ಹರಿದು ಬಂದಿದೆ. ಇದರಿಂದಾಗಿ ಬ್ಯಾಂಕ್‍ಗಳ ಬಡ್ಡಿ ದರದಲ್ಲಿ ಕಡಿತವಾಗಿವೆ. ಜನರ ಮೂಡ್ ರಾಜಕಾರಣಿಗಳ ಮೂಡ್‍ಗಿಂತ ತುಂಬಾ ಭಿನ್ನವಾಗಿದೆ ಎಂದು ಮೋದಿ ಹೇಳಿದರು.

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬ್ಯಾಲಟ್ ಪೇಪರ್ ಬದಲು ಬಟನ್ ಒತ್ತಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಿಶ್ವವೇ ಕಾಗದರಹಿತವಾಗಿ ಸಾಗುತ್ತದೆ ಎಂದಾದರೆ ಇದು ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.