Tag: ಇಂಡೋ-ಪಾಕ್ ಗಡಿ

  • ಬೀದರ್‌ನ ಯೋಧ ಪಂಜಾಬ್ ಗಡಿಯಲ್ಲಿ ಆತ್ಮಹತ್ಯೆ

    ಬೀದರ್‌ನ ಯೋಧ ಪಂಜಾಬ್ ಗಡಿಯಲ್ಲಿ ಆತ್ಮಹತ್ಯೆ

    ಬೀದರ್: ಪಂಜಾಬ್ ಗಡಿಯಲ್ಲಿ ಬೀದರ್‌ನ ಬಿಎಸ್‍ಎಫ್ ಯೋಧ ಸಾವು ಪ್ರಕರಣ ತಿರುವು ಪಡೆದುಕೊಂಡಿದ್ದು, ಪಂಜಾಬ್ ಗಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿವೆ.

    ಪಂಜಾಬ್ ನ ಇಂಡೋ-ಪಾಕ್ ಗಡಿಯಲ್ಲಿ ಬೀದರ್ ನ ಬಿಎಸ್‍ಎಫ್ ಯೋಧ ಬಸವರಾಜ್ ಗಣಪತಿ 66ರ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯೋಧನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಯೋಧನ ಆತ್ಮಹತ್ಯೆ ಬಗ್ಗೆ 66ರ ಬಟಾಲಿಯನ್ ಬಿಎಸ್‍ಎಫ್ ಕಮಾಂಡರ್ ಸುರೇಂದ್ರ ಕುಮಾರ್ ರಿಂದ ಬೀದರ್ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.

    ನಾಳೆ ಔರಾದ್ ತಾಲೂಕಿನ ಆಲೂರು ಕೆ ಸ್ವಗ್ರಾಮಕ್ಕೆ ಬಿಎಸ್‍ಎಫ್ ಯೋಧ ಬಸವರಾಜ್ ಗಣಪತಿ ಪಾರ್ಥಿವ ಶರೀರ ಬರಲಿದ್ದು, ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.