Tag: ಇಂಡೋನೇಷಿಯಾ

  • 210 ಕೆಜಿ ಭಾರ ಎತ್ತುವಾಗ ಕುತ್ತಿಗೆಗೆ ಬಿದ್ದು ಫಿಟ್‌ನೆಸ್‌ ಟ್ರೈನರ್‌ ಸಾವು

    210 ಕೆಜಿ ಭಾರ ಎತ್ತುವಾಗ ಕುತ್ತಿಗೆಗೆ ಬಿದ್ದು ಫಿಟ್‌ನೆಸ್‌ ಟ್ರೈನರ್‌ ಸಾವು

    ಬಾಲಿ: 210 ಕೆಜಿ ಭಾರ ಎತ್ತಲು ಹೋಗಿ ಕುತ್ತಿಗೆಗೆ ಬಿದ್ದು ಫಿಟ್‌ನೆಸ್‌ ಟ್ರೈನರ್‌ವೊಬ್ಬ (Fitness Trainer) ದಾರುಣ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ (Indonesia) ನಡೆದಿದೆ.

    33 ವಯಸ್ಸಿನ ಜಸ್ಟಿನ್ ವಿಕಿ ಸಾವನ್ನಪ್ಪಿದ ಫಿಟ್‌ನೆಸ್‌ ಟ್ರೈನರ್. ಈತ 210 ಕೆಜಿ ವೇಟ್‌ ಲಿಫ್ಟಿಂಗ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಭಾರ ಎತ್ತಲಾಗದೇ ಬಿಟ್ಟಿದ್ದಾರೆ. ಈ ವೇಳೆ ಭಾರವು ಅವರ ಕುತ್ತಿಗೆಗೆ ಬಿದ್ದಿದೆ. ಪರಿಣಾಮವಾಗಿ ಜಸ್ಟಿನ್‌ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಭಾರ ಬಿದ್ದ ಪರಿಣಾಮ ಅವರ ಕುತ್ತಿಗೆ ಮುರಿದು ಹೋಗಿದೆ. ಪರಿಣಾಮ ಹೃದಯ ಮತ್ತು ಶ್ವಾಸಕೋಶ ಸಂಪರ್ಕಿಸುವ ಪ್ರಮುಖ ನರಗಳಿಗೆ ಹಾನಿಯಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಒಳಗಾದ ಕೆಲವೇ ದಿನಗಳಲ್ಲಿ ಜಸ್ಟಿನ್‌ ಸಾವಿಗೀಡಾಗಿದ್ದಾನೆ.

    ಜಸ್ಟಿನ್‌ ದುರಂತ ಅಂತ್ಯಕ್ಕೆ ಬಂಧು-ಬಾಂಧವರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಜಸ್ಟಿನ್ ಫಿಟ್‌ನೆಸ್ ಪರಿಣಿತರಾಗಿದ್ದರು. ಇತರರಿಗೆ ಸ್ಫೂರ್ತಿ, ಪ್ರೇರಣೆ ಮತ್ತು ಅಚಲ ಬೆಂಬಲದ ದಾರಿದೀಪವಾಗಿದ್ದರು ಎಂದು ಆತನಿಂದ ತರಬೇತಿ ಪಡೆದ ಅನೇಕರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ಸೇನೆ ಹಿಮ್ಮೆಟ್ಟಿಸಲು USನ ಕ್ಲಸ್ಟರ್ ಬಾಂಬ್‌ ಬಳಸಿ ಉಕ್ರೇನ್‌ ದಾಳಿ – ವೈಟ್‌ಹೌಸ್‌ ರಿಯಾಕ್ಷನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗ್ನಿ ಅವಘಡದಿಂದ ಕುಸಿದ ಮಸೀದಿಯ ಗುಮ್ಮಟ- ವೀಡಿಯೋ ವೈರಲ್

    ಅಗ್ನಿ ಅವಘಡದಿಂದ ಕುಸಿದ ಮಸೀದಿಯ ಗುಮ್ಮಟ- ವೀಡಿಯೋ ವೈರಲ್

    ಜಕಾರ್ತ: ಅಗ್ನಿ ಅವಘಡದಿಂದಾಗಿ ಇಂಡೋನೇಷ್ಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯ ದೈತ್ಯ ಗುಮ್ಮಟ (ಮಿನಾರ್) (Indonesia Mosque) ಕುಸಿದಿದೆ.

    ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಗುಮ್ಮಟವು ಕುಸಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    https://twitter.com/NguyenK68421403/status/1582744382012559360

    ಮಸೀದಿಯನ್ನು ನವೀಕರಣಗೊಳಿಸಲಾಗುತ್ತಿತ್ತು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಲಾಯಿತು. ತಕ್ಷಣವೇ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದನ್ನೂ ಓದಿ: ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ

    ಗುಮ್ಮಟ ಉರುಳುವ ಮುನ್ನ ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟವಾದ ಹೊಗೆಯನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವರದಿಗಳ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಮಸೀದಿಯಲ್ಲಿ ನವೀಕರಣದ ಕೆಲಸ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

    ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾವ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುದೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ನವೀಕರಣದ ಸಮಯದಲ್ಲಿ ಮಸೀದಿಯ ಗುಮ್ಮಟದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅಕ್ಟೋಬರ್ 2002ರ ಬೆಂಕಿ ನಂದಿಸಲು ಐದು ಗಂಟೆಗಳನ್ನು ತೆಗೆದುಕೊಂಡಿತು ಎಂದು ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಕ್ಯಾರೊಲಿನಾ ಮರಿನ್ ವಿರುದ್ಧ ಸೈನಾ ಸೆಣಸಿದ್ರು. ಆದರೆ ಮರಿನ್ ಗಾಯಗೊಂಡು ಮೈದಾನದಿಂದ ಹೊರ ನಡೆದ ಪರಿಣಾಮ ಸೈನಾ ಜಯ ಪಡೆದರು.

    ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ಮರಿನ್ 10-4 ರಿಂದ ಮುನ್ನಡೆ ಪಡೆದಿದ್ರು, ಈ ವೇಳೆ ರಿಟರ್ನ್ ಮಾಡುವ ವೇಳೆ ಮೊಣಕಾಲಿಗೆ ಗಾಯವಾಗಿದೆ. ಗಾಯಗೊಂಡಿದ್ದರಿಂದ ಕಣ್ಣೀರಿಡುತ್ತಾಲೇ ಮೈದಾನದಿಂದ ಮರಿನ್ ಹೊರ ನಡೆದರು. ಇದರೊಂದೊಗೆ ಸೈನಾರನ್ನು ಜಯಶಾಲಿ ಎಂದು ಘೋಷಿಸಲಾಯಿತು.

    ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಹಿ ಬಿಂಗ್ ಜಿಯಾವೊರನ್ನು ಮಣಿಸುವ ಮೂಲಕ ಸೈನಾ ಫೈನಲ್ ಪ್ರವೇಶ ಮಾಡಿದ್ದರು. ಉಳಿದಂತೆ ಮರಿನ್ ಚೀನಾದ ಚೆನ್ ಯುಫೆಇ ಅವರಿಗೆ ಸೋಲುಣಿಸಿ ಫೈನಲಿಗೆ ಆಗಮಿಸಿದ್ದರು.

    ಸದ್ಯ ವರ್ಷದ ಆರಂಭದಲ್ಲೇ ಇಂಡೋನೇಷಿಯಾ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ಶುಭಾರಂಭ ಮಾಡಿದ್ದಾರೆ. 28 ವರ್ಷದ ಸೈನಾ ನೆಹ್ವಾಲ್ 2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋನೇಷ್ಯಾದಲ್ಲಿ ಸುನಾಮಿಯಿಂದಾಗಿ ಮೃತಪಟ್ಟವರ ಸಂಖ್ಯೆ 400ಕ್ಕೆ ಏರಿಕೆ

    ಇಂಡೋನೇಷ್ಯಾ: ದ್ವೀಪವಾದ ಸುಲವೇಸಿಯಲ್ಲಿ ಅಪ್ಪಳಿಸಿದ ಸುನಾಮಿ ಹಾಗೂ ಭೂಕಂಪದಿಂದ ಮೃತಪಟ್ಟಿರುವ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ.

    ಇಂಡೋನೇಷ್ಯಾ ವಿಪತ್ತು ನಿಯಂತ್ರಣಾ ಸಂಸ್ಥೆಯ ವಕ್ತಾರ ಸುಟೋಪೊ ಪುರ್ವೋ ನುಗ್ರೂಹೂ, 384 ಜನರನ್ನು ಪಾಲು ನಗರದಲ್ಲೇ ಸತ್ತರು. ಶುಕ್ರವಾರ ಸಂಜೆ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದರಿಂದಾಗಿ 540 ಜನ ಗಾಯಗೊಂಡಿದ್ದು, 29 ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವೂ ಇದೆ ಎಂದು ಹೇಳಿದರು. ಇದನ್ನು ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ- ಸುನಾಮಿ ಎಚ್ಚರಿಕೆ: ತೆರೆಗಳು ಅಪ್ಪಳಿಸೋ ವಿಡಿಯೋ ನೋಡಿ

    ಮುಂಜಾಗ್ರತಾ ಕ್ರಮವಾಗಿ ಸುಲವೆಸಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಿದ್ದೇವು. ಜೊತೆಗೆ ದುರಸ್ತಿಗೊಂಡ ಕಟ್ಟಡಗಳಲ್ಲಿ ವಾಸಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಸುಟೋಪೊ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಸುಲವೆಸಿ ದ್ವೀಪದಿಂದ 56 ಕಿ.ಮಿ ದೂರದಲ್ಲಿರುವ ಡೊಂಗಗಲ್ ನ 9 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿತ್ತು.

    2004ರಲ್ಲಿ ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದ್ದ ಪರಿಣಾಮ, ಹಿಂದೂ ಮಹಾಸಾಗರಲ್ಲಿ ಸುನಾಮಿ ಉಂಟಾಗಿತ್ತು. ಈ ವೇಳೆ 13 ದೇಶಗಳು ಸುನಾಮಿಗೆ ತತ್ತರಿಸಿದ್ದು, ಇಂಡೋನೇಷ್ಯಾದ 1.20 ಲಕ್ಷ, ಭಾರತದಲ್ಲಿ 12 ಸಾವಿರ, ಸೇರಿದಂತೆ ಒಟ್ಟು ಒಟ್ಟು 2.26 ಲಕ್ಷ ಮಂದಿ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    ನವದೆದಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಏರ್ ಪಿಸ್ತೂಲ್‍ನಲ್ಲಿ 16ನೇ ವರ್ಷದ ಸೌರಭ್ ಚೌಧರಿ ಚಿನ್ನ ಪದಕ ಜಯಿಸಿ ದೇಶದ ಜನರ ಮನ ಗೆದ್ದಿದ್ದಾರೆ.

    ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ ಪದಕ ಗೆದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸದ್ಯ ಭಾರತ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಗೆಲ್ಲುವ ಮೂಲಕ 6ನೇ ಸ್ಥಾನ ಗಳಿಸಿದೆ.

    ಖೇಲೋ ಇಂಡಿಯಾ ಪ್ರತಿಭೆ: ಸೌರಭ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಖೇಲೋ ಇಂಡಿಯಾ ಮೂಲಕ ಬೆಳಕಿಗೆ ಬಂದವರು. ಫೆಬ್ರವರಿಯಲ್ಲಿ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ ಭಾಗಹಿಸಿ ಪದಕ ಗೆದ್ದಿದ್ದರು. ಬಳಿಕ ತರಬೇತಿ ಪಡೆದು ಜುಲೈನಲ್ಲಿ ಜರ್ಮನಿಯಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್ ನಲ್ಲಿ 243.7 ಅಂಕ ಪಡೆದು ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಅರ್ಜೆಂಟೀನಾದಲ್ಲಿ ನಡೆಯಲಿರುವ ಕಿರಿಯರ ಒಲಿಂಪಿಕ್ಸ್ ಗೂ ಆರ್ಹತೆ ಪಡೆದಿದ್ದರು. ಉತ್ತರ ಪ್ರದೇಶದ ಪ್ರತಿಭೆಯಾಗಿರುವ ಸೌರಭ್ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಶೂಟಿಂಗ್ ಕ್ರೀಡೆ ಆಯ್ಕೆ ಮಾಡಿಕೊಂಡಿದ್ದರು. 2016 ರಲ್ಲಿ ತೆಹ್ರಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು.

    ಖೇಲೋ ಇಂಡಿಯಾ: ಗ್ರಾಮೀಣ ಹಾಗೂ ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ `ಖೇಲೋ ಇಂಡಿಯಾ’. ಇದರ ಮೊದಲ ಚೊಚ್ಚಲ ಆವೃತ್ತಿ ಫೆಬ್ರವರಿಯಲ್ಲಿ 8 ದಿನಗಳ ಕಾಲ ದೆಹಲಿಯಲ್ಲಿ ನಡೆದಿತ್ತು.

    ಪ್ರತಿಭಾವಂತರ ಆಯ್ಕೆ: ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರಿಗೆ ಪದಕ ಗೆಲ್ಲುವ ಅವಕಾಶವಿರುತ್ತದೆ. ಈ ಯೋಜನೆಯ ಅನ್ವಯ ಒಟ್ಟು 1 ಸಾವಿರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರಿಗೆ ವಿಶ್ವದರ್ಜೆಯ ತರಬೇತಿ ಕಲ್ಪಿಸಲಾಗುತ್ತದೆ. ಕ್ರೀಡಾಕೂಟದಲ್ಲಿ 18 ಕ್ರೀಡೆಗಳಲ್ಲಿ ವಿವಿಧ ರಾಜ್ಯಗಳ ಸುಮಾರು 5 ಸಾವಿರ ಕ್ರೀಡಾಪಟುಗಳು ಭಾವಹಿಸಿದ್ದರು.

    ಸೌಲಭ್ಯ ಏನು?
    ಖೇಲೋ ಇಂಡಿಯಾ ಕ್ರೀಡಾಪಟುದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ವಾರ್ಷಿಕ 5 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುಲಾಗುತ್ತದೆ.

    16 ಕ್ರೀಡೆಗಳು: ಶೂಟಿಂಗ್, ವೇಟ್ ಲಿಫ್ಟಿಂಗ್, ಜುಡೋ, ಕುಸ್ತಿ, ಬಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಖೋ-ಖೋ, ವಾಲಿಬಾಲ್, ಜಿಮ್ನಾಸ್ಟಿಕ್ಸ್, ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಜು.

    ಫೆಬ್ರವರಿಯಲ್ಲಿ ಒಂದು ವಾರದ ಕಾಲ ನಡೆದ ಕ್ರೀಡಾಕೂಟಕ್ಕೆ ಅಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ವೇಳೆ ಕ್ರೀಡಾಕೂಟದಲ್ಲಿ ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡೆಗಳನ್ನು ಖೇಲೋ ಇಂಡಿಯಾ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಘೋಷಿಸಿದ್ದರು. ಅಲ್ಲದೇ ಭವಿಷ್ಯದ ಚಾಂಪಿಯನ್ ಕ್ರೀಡಾಪಟುಗಳನ್ನು ಗುರುತಿಸುವ ಅವರಿಗೆ ಉತ್ತಮ ಬೆಂಬಲ ನೀಡುವ ಉದ್ದೇಶ ಯೋಜೆನೆಯ ಹಿಂದಿದೆ ಎಂದು ತಿಳಿಸಿದ್ದರು. ಖೇಲೋ ಇಂಡಿಯಾ ಯೋಜನೆಯೂ ಈ ಹಿಂದೆ ಜಾರಿಗೆ ಮಾಡಲಾಗಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನ್, ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಣೆ ಯೋಜನೆ, ನಗರ ಕ್ರೀಡಾ ಸೌಕರ್ಯ ಯೋಜನೆಗಳ ವಿಲೀನ ರೂಪ ಇದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 15ರ ಹುಡುಗನೊಂದಿಗೆ ಮದ್ವೆಯಾದ 73ರ ಮಹಿಳೆ!

    15ರ ಹುಡುಗನೊಂದಿಗೆ ಮದ್ವೆಯಾದ 73ರ ಮಹಿಳೆ!

    ಜಕಾರ್ತ್: ಪ್ರೇಮ ಕುರುಡು, ಪ್ರೇಮಿಗಳಿಗೆ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳುವುದನ್ನು ಕೇಳಿರ್ತಿವಿ. ಇದಕ್ಕೆ ಉದಾಹರಣೆ ಎಂಬಂತೆ ಇಂಡೋನೇಷಿಯಾದಲ್ಲಿ 73 ವಯಸ್ಸಿನ ಮಹಿಳೆಯೊಬ್ಬಳು 15 ವಯಸ್ಸಿನ ಬಾಲಕನೊಂದಿಗೆ ಪ್ರೇಮ ವಿವಾಹವಾಗಿದ್ದಾಳೆ.

    15 ವರ್ಷದ ಸೇಲಾಮತ್ ಮತ್ತು 73ರ ರೋಹಯಾ ಬಿನತಿ ಮಹಮದ್ ಮದುವೆಯಾದ ಜೋಡಿಗಳು. ಕೆಲವು ದಿನಗಳ ಹಿಂದೆ ಸೇಲಾಮತ್ ಮಲೇರಿಯಾ ರೋಗದಿಂದ ಬಳಲುತ್ತಿದ್ದನು. ಈ ವೇಳೆ ಪಕ್ಕದ ಮನೆಯಲ್ಲಿದ ರೋಹಾಯ ಬಾಲಕನಿಗೆ ಆರೈಕೆ ಮಾಡಿದ್ದಾಳೆ. ಈ ಘಟನೆಯಿಂದಾಗಿ ಇಬ್ಬರ ನಡುವೆ ಪರಿಚಯವಾಗಿ ಮುಂದೆ ಸಲುಗೆ ಬೆಳೆದು ಅದು ಪ್ರೀತಿಗೆ ತಿರುಗಿದೆ.

    ಇವರಿಬ್ಬರು ಮದುವೆಯಾಗಲು ತೀರ್ಮಾನಿಸಿದಾಗ ಊರಿನ ಹಿರಿಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದ್ರಿಂದ ನೊಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಕೊನೆಗೆ ಗ್ರಾಮಸ್ಥರೇ ಮುಂದೆ ನಿಂತು ಇಬ್ಬರ ಮದುವೆಯನ್ನು ಮಾಡಿದ್ದಾರೆ. ವರ ಇನ್ನೂ ವಯಸ್ಕನಾಗದ ಕಾರಣ ಇಬ್ಬರ ಮದುವೆಯನ್ನು ತುಂಬಾ ಸರಳವಾಗಿ ಮಾಡಲಾಗಿದೆ ಊರಿನ ಹಿರಿಯರು ಹೇಳಿದ್ದಾರೆ.

    ಇದನ್ನೂ ಓದಿ: 16ರ ಪೋರನ ಜೊತೆ 31 ವರ್ಷದ ಎರಡು ಮಕ್ಕಳ ತಾಯಿಯ ಲವ್!

    ಸೇಲಾಮತ್ ತಂದೆ ಕೆಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದು, ತಾಯಿ ಎರಡನೇ ಮದುವೆಯಾಗಿದ್ದಾರೆ. ಎರಡನೇ ಮದ್ವೆಯ ನಂತ್ರ ತಾಯಿ ಸೇಲಾಮತ್‍ನಿಂದ ದೂರವಾಗಿದ್ದಾಳೆ. ಒಂಟಿಯಾಗಿದ್ದ ಸೇಲಾಮತ್ ಅನಾರೋಗ್ಯದಿಂದ ಬಳಲುತ್ತಿದ್ದಾಗ ರೋಹಯಾ ಸಹಾಯ ಮಾಡಿದ್ರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ರೋಹಯಾ ಇದಕ್ಕೂ ಮೊದಲು ಎರಡು ಮದ್ವೆಯಾಗಿದ್ದು, ಆಕೆಗೊಂದು ಮಗು ಸಹ ಇದೆ.

    ಇದನ್ನೂ ಓದಿ: 19ರ ಯುವಕ, 24ರ ಯುವತಿ – ಮೈಸೂರಿನ ದೇಗುಲದಲ್ಲಿ ನಡೆದೇ ಹೋಯ್ತು ಮದುವೆ