Tag: ಇಂಡಿಯಾ ಎ

  • ರಹಾನೆ ಶತಕ ಸಂಭ್ರಮವನ್ನ ತಡೆದ ರೈನಾ, ಕಾರಣವೇನು ಗೊತ್ತಾ?- ವಿಡಿಯೋ ನೋಡಿ

    ರಹಾನೆ ಶತಕ ಸಂಭ್ರಮವನ್ನ ತಡೆದ ರೈನಾ, ಕಾರಣವೇನು ಗೊತ್ತಾ?- ವಿಡಿಯೋ ನೋಡಿ

    ದೆಹಲಿ: ಇಂಡಿಯಾ ಸಿ ತಂಡದ ನಾಯಕ ಅಜಿಂಕ್ಯ ರಹಾನೆ ಶತಕ ಸಿಡಿಸಲು 3 ರನ್ ಬಾಕಿ ಇರುವಂತೆ ಸಂಭ್ರಮಿಸಿದ್ದು, ಈ ವೇಳೆ ರೈನಾ ಸೂಚನೆ ನೀಡಿ ಸಂಭ್ರಮಾಚರಣೆಯನ್ನು ತಡೆದ ಘಟನೆ ದೇವಧರ್ ಕ್ರಿಕೆಟ್ ಟೂರ್ನಿಯ ಇಂಡಿಯಾ ಬಿ ವಿರುದ್ಧದ ಪಂದ್ಯದ ವೇಳೆ ನಡೆದಿದೆ.

    ಪಂದ್ಯದಲ್ಲಿ ರಹಾನೆ 156 ಎಸೆತಗಳಲ್ಲಿ 144 ರನ್ ಸಿಡಿಸಿ ಮಿಂಚಿದರು. ಆದರೆ ಇದಕ್ಕೂ ಮುನ್ನ ಪಂದ್ಯದ 37ನೇ ಓವರ್ ನಲ್ಲಿ 97 ರನ್ ಗಳಿಸಿದ್ದ ರಹಾನೆ ಶತಕ ಪೂರ್ಣಗೊಂಡಿದೆ ಎಂದು ಸಂಭ್ರಮಿಸಿದ್ದರು. ಶತಕ ಗಳಿಸಲು 3 ರನ್ ಅಗತ್ಯವಿದ್ದರು ಪಂದ್ಯದ ಸ್ಕೋರರ್ಸ್ 100 ರನ್ ಪೂರ್ಣಗೊಂಡಿದೆ ಎಂದು ಬೋರ್ಡ್ ನಲ್ಲಿ ಪ್ರದರ್ಶಿಸಿ ಎಡವಟ್ಟು ಮಾಡಿದ್ದರು.

    ಪಂದ್ಯದಲ್ಲಿ ಇಂಡಿಯಾ ಸಿ ತಂಡ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದ್ದರೆ. ಸಿ ತಂಡದ ಗುರಿ ಬೆನ್ನತ್ತಿದ ಬಿ ತಂಡ 46.1 ಓವರ್ ಗಳಲ್ಲಿ 323 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಇದೇ ಪಂದ್ಯದಲ್ಲಿ ಯುವ ಆಟಗಾರ ಇಶಾನ್ ಕಿಶನ್ 87 ಎಸೆತಗಳಲ್ಲಿ 144 ರನ್ ಸಿಡಿಸಿದರು. ಇಂಡಿಯಾ ಬಿ ತಂಡವನ್ನು ಶ್ರೇಯರ್ ಐಯ್ಯರ್ ಮುನ್ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv