Tag: ಇಂಡಿಯಾ

  • ಉಪರಾಷ್ಟ್ರಪತಿ ಚುನಾವಣೆ | ನಮ್ಮ ಅಭ್ಯರ್ಥಿ ಪರ ಆತ್ಮಸಾಕ್ಷಿಯ ಮತಗಳನ್ನು ಕೇಳಿದ್ದೇವೆ: ಡಿಕೆಶಿ

    ಉಪರಾಷ್ಟ್ರಪತಿ ಚುನಾವಣೆ | ನಮ್ಮ ಅಭ್ಯರ್ಥಿ ಪರ ಆತ್ಮಸಾಕ್ಷಿಯ ಮತಗಳನ್ನು ಕೇಳಿದ್ದೇವೆ: ಡಿಕೆಶಿ

    ಚೆನ್ನೈ: ಇಂಡಿಯಾ (INDIA) ಒಕ್ಕೂಟ ಒಟ್ಟಾಗಿ ಉಪರಾಷ್ಟ್ರಪತಿ ಚುನಾವಣೆ ಎದುರಿಸಲಿದೆ. ನಾವು ಆತ್ಮಸಾಕ್ಷಿಯ ಮತಗಳನ್ನು ಕೋರಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಎಂದು ಹೇಳಿದರು.

    ತಮಿಳುನಾಡಿನ (Tamilnadu) ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಕುರಿತಾಗಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಮತ್ತು ವಿರೋಧ ಪಕ್ಷಗಳು ಎನ್‌ಡಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ವಿರುದ್ಧ ಮತ ಚಲಾಯಿಸುತ್ತವೆ. ಅಡ್ಡ ಮತದಾನವಾಗುವ ಸಾಧ್ಯತೆ ಇರುತ್ತೆ. ಆದರೆ ನಾನು ಆತ್ಮಸಾಕ್ಷಿಯ ಮತಗಳ ಬಗ್ಗೆ ನಂಬಿಕೆಯಿಟ್ಟಿದ್ದೇನೆ. ಅಡ್ಡ ಮತದಾನದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

    ಸುಪ್ರೀಂ ಕೋರ್ಟ್ ಆಧಾರ್ ಗುರುತಿನ ಚೀಟಿಯನ್ನು 12ನೇ ದಾಖಲೆ ಎಂದು ಪರಿಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಧಾರ್ ಗುರುತಿನ ಚೀಟಿ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯವಾದ ದಾಖಲೆ. ಈ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲ ಮಾಡಿದೆ ಎಂದು ತಿಳಿಸಿದರು.

  • ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

    ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

    ಪಾಟ್ನಾ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ (Reservation) ಕೋಟಾವನ್ನು 85%ಗೆ ಏರಿಕೆ ಮಾಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.

    ಬಿಹಾರದ (Bihar) ಮೋತಿಹಾರಿಯಲ್ಲಿ (Motihari) ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯ (Voter Adhikar Yatra) ಅಂಗವಾಗಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ (Samvidhaan Suraksha Samelan) ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು ಎಂದು ಹೇಳಿದರು. ಈಗ ಮತ ಕಳ್ಳತನ, ಮುಂದೆ ಸರ್ಕಾರದ ಕ್ರಮಗಳು ಕ್ರಮೇಣ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಬಹುದು. ಮೊದಲು, ಅವರು ನಿಮ್ಮ ಮತವನ್ನು, ನಂತರ ನಿಮ್ಮ ಪಡಿತರವನ್ನು, ನಂತರ ನಿಮ್ಮ ಪಿಂಚಣಿಯನ್ನು ಮತ್ತು ಅಂತಿಮವಾಗಿ ನಿಮ್ಮ ಆಸ್ತಿಗಳನ್ನು ಕಸಿದುಕೊಳ್ಳುತ್ತಾರೆ. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ಬದಲಾಯಿಸಲಾಗುತ್ತದೆ ಎಂದರು. ಇದನ್ನೂ ಓದಿ: ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್

    ಇದೇ ವೇಳೆ ಮೀಸಲಾತಿ ಸೌಲಭ್ಯಗಳನ್ನು ಹೆಚ್ಚಿಸುವ ತಮ್ಮ ಪಕ್ಷದ ಭರವಸೆಯನ್ನು ಪುನರುಚ್ಛರಿಸಿದ ತೇಜಸ್ವಿ ಯಾದವ್, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು 85%ಗೆ ಏರಿಕೆ ಮಾಡುತ್ತೇವೆ ಎಂದರು. ಅಂತೆಯೇ ಜನರ ಹಕ್ಕುಗಳ ಅಡಿಪಾಯ ಸಂವಿಧಾನ ಎಂದು ಕರೆದ ತೇಜಸ್ವಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದರೆ ಅಧಿಕಾರದಲ್ಲಿರುವವರನ್ನು ತೆಗೆದುಹಾಕುವಂತೆ ನಾಗರಿಕರನ್ನು ಒತ್ತಾಯಿಸಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಅವರು, ಚಾಚಾ ಸಿಲುಕಿಕೊಂಡಿದ್ದಾರೆ. ಅವರು ಮೊದಲಿನಂತೆಯೇ ಇಲ್ಲ. ಅವರು ಇನ್ನು ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ ಎಂದರು. ಇದೇ ವೇಳೆ, ಇವರು ನನ್ನ ದೇಹದಲ್ಲೂ ಹರಿಯುತ್ತಿರುವುದು ಲಾಲೂ ಪ್ರಸಾದ್ ಯಾದವ್ ಅವರ ರಕ್ತ ಎಂಬುದನ್ನು ಮರೆತಿದ್ದಾರೆ. ಲಾಲೂ ಜಿ ಸಕ್ರಿಯವಾಗಿಲ್ಲದಿದ್ದರೂ ಅವರ ಪರವಾಗಿ ನಾನು ಹೋರಾಡುತ್ತೇನೆ. ಲಾಲೂ ಪ್ರಸಾದ್ ಯಾದವ್ ತಗ್ಗಿರಬಹುದು. ಅವರ ಮಕ್ಕಳಾದ ನಾವು ಎದ್ದಿದ್ದೇವೆ. ನಾವು ಹೋರಾಟಗಾರರು. ಎಲ್ಲರೂ ಒಂದಾಗಿ. ಇಲ್ಲದಿದ್ದರೆ, ಅವರು ನಿಮ್ಮ ಅಸ್ತಿತ್ವವನ್ನು ಕೊನೆಗೊಳಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

  • ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    – ಎನ್‌ಡಿಎ, ಇಂಡಿಯಾ ಒಕ್ಕೂಟಗಳ ನಡುವೆ ವಾಕ್ಸಮರ, ಜಟಾಪಟಿಗೆ ವೇದಿಕೆ ಸಜ್ಜು

    ನವದೆಹಲಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ (Parliament Mansoon Session) ಆರಂಭವಾಗಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಸಭೆಗೆ ವೇದಿಕೆಯಾಗಲಿದೆ.

    ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನವು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ, ಮತ್ತು ಟಿಎಂಸಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತ, ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಸ್ಥಿಕೆಯ ಬಗ್ಗೆ ಆಡಳಿತ ಪಕ್ಷವನ್ನು ತೀವ್ರವಾಗಿ ಪ್ರಶ್ನಿಸಲು ಸಿದ್ಧವಾಗಿವೆ. ಇದರ ಜೊತೆಗೆ, ಪಹಲ್ಗಾಮ್‌ನ ಭಯೋತ್ಪಾದಕ ದಾಳಿ ಮತ್ತು ವಿದೇಶಾಂಗ ನೀತಿಯಂತಹ ವಿಷಯಗಳನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು

    ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಈ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ತನ್ನ ಸಾಧನೆಗಳನ್ನು ಮಂಡಿಸಿ ವಿರೋಧ ಪಕ್ಷಗಳ ವಿಮರ್ಶೆಗೆ ಉತ್ತರ ನೀಡಲು ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಎಂಟು ಮಸೂದೆಗಳನ್ನು ಮಂಡಿಸುವ ಲೆಕ್ಕಚಾರದಲ್ಲಿದೆ. ಆದಾಯ ತೆರಿಗೆ ಮಸೂದೆ 2025 ಕೂಡ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯ ಆಯ್ದ ಸಮಿತಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಆಪರೇಷನ್‌ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್‌ ರಿಜಿಜು

    ಮಣಿಪುರದಲ್ಲಿ ಫೆಬ್ರವರಿ 13ರಂದು ಜಾರಿಗೊಂಡ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆಗೆ ಸಂಸತ್‌ನ ಅನುಮೋದನೆಯನ್ನು ಸರ್ಕಾರ ಕೋರಲಿದೆ. ಈ ವಿಷಯವು ವಿರೋಧ ಪಕ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಲಿದೆ. ಸಂಸತ್‌ನ ಈ ಮುಂಗಾರು ಅಧಿವೇಶನವು ಒಟ್ಟು 21 ಕಲಾಪಗಳನ್ನು ಒಳಗೊಂಡಿದ್ದು, ಆಗಸ್ಟ್ 12ರಿಂದ 18ರವರೆಗೆ ರಕ್ಷಾಬಂಧನ ಮತ್ತು ಸ್ವಾತಂತ್ರ‍್ಯ ದಿನಾಚರಣೆಗಾಗಿ ವಿರಾಮ ಘೋಷಿಸಲಾಗಿದೆ. ಈ ಅವಧಿಯಲ್ಲಿ, ಗೋವಾದ ಶಾಸಕಾಂಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2024, ವಾಣಿಜ್ಯ ನೌಕಾಯಾನ ಮಸೂದೆ 2024, ಮತ್ತು ಭಾರತೀಯ ಬಂದರು ಮಸೂದೆ 2025 ಕೂಡ ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಪ್ರಮುಖ ಮಸೂದೆಗಳು:
    *ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2025: ರಾಜ್ಯದ ಜಿಎಸ್‌ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಗುರಿ.
    *ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025: ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ ಅನುಸರಣೆಯನ್ನು ಸುಧಾರಿಸುವ ಉದ್ದೇಶ.
    *ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ, 2025: ಐಐಎಂ ಗುವಾಹಟಿಯನ್ನು ಐಐಎಂ ಕಾಯ್ದೆಯ ಅಡಿಯಲ್ಲಿ ಔಪಚಾರಿಕವಾಗಿ ಒಳಗೊಳ್ಳುವ ಗುರಿ.
    *ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025: ತೆರಿಗೆ ಕಾನೂನುಗಳ ಸರಳೀಕರಣಕ್ಕೆ ಒತ್ತು.
    *ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ; ಭೂವೈಜ್ಞಾನಿಕ ತಾಣಗಳ ಸಂರಕ್ಷಣೆ.
    *ಕಲ್ಲುಗಣಿ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ.
    *ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ: ಕ್ರೀಡಾ ಆಡಳಿತದಲ್ಲಿ ಸುಧಾರಣೆಗೆ ಒತ್ತು.
    *ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ: ಕ್ರೀಡೆಯಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಕ್ರಮ

  • ಸ್ವಾತಂತ್ರ್ಯ ನಂತರ ಸ್ಪೀಕರ್‌ ಹುದ್ದೆಗೆ ಫಸ್ಟ್‌ ಟೈಂ ಚುನಾವಣೆ – INDIA ಒಕ್ಕೂಟ ಆಡಳಿತ ಇರೋ ರಾಜ್ಯಗಳಲ್ಲಿ ಯಾರಿಗೆ ನೀಡಿವೆ?

    ಸ್ವಾತಂತ್ರ್ಯ ನಂತರ ಸ್ಪೀಕರ್‌ ಹುದ್ದೆಗೆ ಫಸ್ಟ್‌ ಟೈಂ ಚುನಾವಣೆ – INDIA ಒಕ್ಕೂಟ ಆಡಳಿತ ಇರೋ ರಾಜ್ಯಗಳಲ್ಲಿ ಯಾರಿಗೆ ನೀಡಿವೆ?

    ನವದೆಹಲಿ: ಸಂಪ್ರದಾಯದಂತೆ ಸರ್ವಾನುಮತದಿಂದ ಸ್ಪೀಕರ್ (Spekaer) ಆಯ್ಕೆ ಮಾಡಲು ಎನ್‌ಡಿಎ (NDA) ನಡೆಸಿದ ಪ್ರಯತ್ನ ಫಲ ನೀಡದ ಕಾರಣ ಲೋಕಸಭೆ ಸ್ಪೀಕರ್ ಹುದ್ದೆಗೆ ಸ್ವಾತಂತ್ರ್ಯ ನಂತರ ಮೊಟ್ಟ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ.

    ಸರ್ವಾನುಮತದಿಂದ ಸ್ಪೀಕರ್ ಆಯ್ಕೆಗೆ INDIA ಕೂಟ ಷರತ್ತನ್ನು ವಿಧಿಸಿತ್ತು. ವಿಪಕ್ಷಗಳಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡುವ ಯಾವುದೇ ಭರವಸೆಯನ್ನು ಎನ್‌ಡಿಎ ನೀಡದ ಕಾರಣ ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸಿದೆ.

    ವಿಪಕ್ಷಗಳೊಡನೆ ರಕ್ಷಣಾಮಂತ್ರಿ ರಾಜನಾಥ್ ಸಿಂಗ್ ಮಂಥನ ನಡೆಸಿದರೂ ಪ್ರಯೋಜನ ಆಗಲಿಲ್ಲ. ಎನ್‌ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ (Om Birla), ಇಂಡಿ ಕೂಟದ ಅಭ್ಯರ್ಥಿಯಾಗಿ ಕೆ ಸುರೇಶ್ (K Suresh) ನಾಮಪತ್ರ ಸಲ್ಲಿಸಿದ್ದು ನಾಳೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಸೂರಜ್‌ ಪರ ದೂರು ನೀಡಿದ್ದ ಶಿವಕುಮಾರ್‌ ವಿರುದ್ಧ ಹಣ ದುರುಪಯೋಗ ಆರೋಪ, ಎಫ್‌ಐಆರ್‌ ದಾಖಲು

    INDIA ಕೂಟದ ಅಭ್ಯರ್ಥಿಗೆ ಈವರೆಗೂ ಟಿಎಂಸಿ (TMC) ಬೆಂಬಲ ಸೂಚಿಸಿಲ್ಲ. ನಮ್ಮನ್ನು ಸಂಪರ್ಕಿಸದೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

    ಇಂದು ರಾತ್ರಿ ಖರ್ಗೆ ನೇತೃತ್ವದಲ್ಲಿ ಇಂಡಿ ಕೂಟದ ನಾಯಕರು ಸಭೆ ಸೇರಿದ್ದಾರೆ. ಉಭಯ ಕೂಟಗಳು ತಮ್ಮ ಸಂಸದರಿಗೆ ವಿಪ್ ಜಾರಿ ಮಾಡಿವೆ. ವೈಎಸ್‌ಆರ್ ಪಕ್ಷ ಎನ್‌ಡಿಎ ಅಭ್ಯರ್ಥಿ ಬೆಂಬಲಿಸುವ ಸಂಭವ ಇದೆ. ಬೆಂಬಲ ನೀಡಿದರೆ 4 ಸದಸ್ಯರ ಮತ ಓಂ ಬಿರ್ಲಾ ಅವರಿಗೆ ಬೀಳುವ ಸಾಧ್ಯತೆಯಿದೆ.

    ಲೋಕಸಭೆಯಲ್ಲಿ ಉಪ ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ವಿಪಕ್ಷಗಳು ಆಡಳಿತದಲ್ಲಿರುವ ಯಾವುದೇ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಗೆ ಡೆಪ್ಯೂಟಿ ಸ್ಥಾನ ನೀಡಿಲ್ಲ. ಸ್ಪೀಕರ್‌ ಮತ್ತು ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿವೆ.

    ಎಲ್ಲಿ ಯಾರಿಗೆ ನೀಡಲಾಗಿದೆ?
    ತಮಿಳುನಾಡು (ಡಿಎಂಕೆ) , ಕರ್ನಾಟಕ ಕಾಂಗ್ರೆಸ್‌), ಕೇರಳ (ಎಲ್‌ಡಿಎಫ್‌),ಪಂಜಾಬ್‌ ಮತ್ತು ದೆಹಲಿ (ಆಪ್‌), ಹಿಮಾಚಲ ಪ್ರದೇಶ (ಕಾಂಗ್ರೆಸ್‌) ಪಶ್ಚಿಮ ಬಂಗಾಳದಲ್ಲಿ(ಟಿಎಂಸಿ) ಆಡಳಿತ ಪಕ್ಷದ ಸದಸ್ಯರೇ ಎರಡು ಸ್ಥಾನವನ್ನು ಆಲಂಕರಿಸಿದ್ದಾರೆ. ತೆಲಂಗಾಣದಲ್ಲಿ ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ ಬಳಿಯಿದ್ದರೆ ಡೆಪ್ಯೂಟಿ ಸ್ಪೀಕರ್‌ ಸ್ಥಾನ ಇನ್ನೂ ನೇಮಕವಾಗಿಲ್ಲ. ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರವಿದ್ದು ಜೆಎಂಎಂ ಸ್ಪೀಕರ್‌ ಸ್ಥಾನ ಹೊಂದಿದೆ. ಡೆಪ್ಯೂಟಿ ಸ್ಥಾನಕ್ಕೆ ಇನ್ನೂ ನೇಮಕವಾಗಿಲ್ಲ.

    ಹಿಂದೆ ಏನಾಗಿತ್ತು?
    1925 – ಆಗಿನ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಎಲೆಕ್ಷನ್, ಸ್ಪೀಕರ್ ಸ್ಥಾನಕ್ಕೆ ಟಿ.ರಂಗಾಚಾರಿಯಾರ್, ವಿಠಲ್‌ಭಾಯ್ ಪಟೇಲ್ ಸ್ಪರ್ಧೆ ನಡೆದು ಸ್ವರಾಜ್ ಪಕ್ಷದ ವಿಠಲ್‌ಭಾಯ್ ಜೆ ಪಟೇಲ್ 2 ಮತದಿಂದ ಗೆಲುವು
    1925-1946 – ಸ್ಪೀಕರ್ ಸ್ಥಾನಕ್ಕೆ ಆರು ಬಾರಿ ಚುನಾವಣೆ
    1946 – ಕೊನೆಯ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಜಿವಿ ಮಾಳವಂಕರ್
    1956 – ಮಾಳವಂಕರ್ ನಿಧನದಿಂದ ಸ್ಪೀಕರ್ ಆಗಿ ಡೆಪ್ಯೂಟಿ ಸ್ಪೀಕರ್ ಎಂಎ ಅಯ್ಯಂಗಾರ್ ಆಯ್ಕೆ
    1957- 2ನೇ ಸಾರ್ವತ್ರಿಕ ಚುನಾವಣೆ ನಂತರ ಸರ್ವಾನುಮತದಿಂದ ಎಂಎ ಅಯ್ಯಂಗಾರ್ ಆಯ್ಕೆ. ಅಲ್ಲಿಂದ ಈವರೆಗೂ ಲೋಕಸಭೆ ಸ್ಪೀಕರ್ ಚುನಾವಣೆ ನಡೆದಿರಲ್ಲ ಸರ್ವಾನುಮತದ ಆಯ್ಕೆ ನಡೆದಿತ್ತು.

     

  • India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

    India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

    ಇಸ್ಲಾಮಾಬಾದ್:‌ ಟಿ20 ವಿಶ್ವಕಪ್ (T20 World Cup) ಟೂರ್ನಿ ನಡೆಯುತ್ತಿದೆ. ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಪಾಕಿಸ್ತಾನ ಸೋಲನ್ನು ಎದುರಿಸಬೇಕಾಯಿತು. ಎರಡೂ ತಂಡಗಳ ಬೆಂಬಲಿಗರು ತಮ್ಮ ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಇದೇ ವೇಳೆ ಪಾಕ್‌ ಅಭಿಮಾನಿಯೊಬ್ಬ ತನ್ನ ಟ್ರ್ಯಾಕ್ಟರ್ ಮಾರಾಟ ಮಾಡಿ ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ. ಆದರೆ ಅವರ ತಂಡವು ಸೋತಿದ್ದು, ಇದರಿಂದ ಆತ ನಿರಾಸೆಗೊಂಡ ಪ್ರಸಂಗ ನಡೆದಿದೆ.

    ಈ ಸಂಬಂಧ ಅಭಿಮಾನಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ಪಂದ್ಯವನ್ನು ವೀಕ್ಷಿಸಲು 2.50 ಲಕ್ಷ ರೂ. (3000 ಡಾಲರ್‌)ಗೆ ತನ್ನ ಟ್ರ್ಯಾಕ್ಟರ್‌ ಮಾರಿ ಟಿಕೆಟ್‌ ಖರೀದಿಸಿದ್ದೇನೆ. ಮೊದಲು ಭಾರತದ ಸ್ಕೋರ್ ನೋಡಿದಾಗ ನಾವು ಈ ಪಂದ್ಯದಲ್ಲಿ ಸೋಲುತ್ತೇವೆ ಎಂದು ನಾವು ಭಾವಿಸಿರಲಿಲ್ಲ. ಆದರೆ ಬಾಬರ್ ಅಜಮ್ ಔಟಾದ ನಂತರ ಎಲ್ಲರೂ ನಿರಾಶೆಗೊಂಡೆವು . ಪಾಕಿಸ್ತಾನ ತಂಡ ಇನ್ನೂ ಹೆಚ್ಚು ಶ್ರಮಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಇದೇ ವೇಳೆ ನಾನು ಭಾರತ ತಂಡ ಮತ್ತು ಅವರ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ ಎಂದರು.

    ಭಾರತ ಮತ್ತು ಪಾಕಿಸ್ತಾನ (Team India Vs Pakistan) ನಡುವಿನ ಟಿ20 ವಿಶ್ವಕಪ್‌ನ ಅಮೋಘ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ 119 ರನ್ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಟೀಂ ಇಂಡಿಯಾ 6 ರನ್‌ಗಳಿಂದ ಗೆದ್ದುಕೊಂಡಿತು. ಇದನ್ನೂ ಓದಿ: ಬುಮ್ರಾ ಬೆಂಕಿ ಬೌಲಿಂಗ್‌, ಭಾರತಕ್ಕೆ ರೋಚಕ 6 ರನ್‌ ಜಯ – ಗುಂಪು ಹಂತದಲ್ಲೇ ಪಾಕ್‌ ಹೊರಕ್ಕೆ?

  • ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಒಂದು ಕ್ಷೇತ್ರದ ಸೋಲು – ಮತ್ತೆ ಎನ್‌ಡಿಎಗೆ ಸೇರ್ತಾರಾ ಉದ್ಧವ್‌?

    ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಒಂದು ಕ್ಷೇತ್ರದ ಸೋಲು – ಮತ್ತೆ ಎನ್‌ಡಿಎಗೆ ಸೇರ್ತಾರಾ ಉದ್ಧವ್‌?

    ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ಮತ್ತು ಉದ್ಧವ್‌ ಠಾಕ್ರೆ ಅವರ ಶಿವಸೇನೆ (Shiv Sena) ಮತ್ತೆ ಒಂದಾಗುತ್ತಾ? ಶಿವಸೇನೆ ಮತ್ತೆ ಎನ್‌ಡಿಎ ಮೈತ್ರಿ ಸೇರುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಇಂದು ದೆಹಲಿಯಲ್ಲಿ ಇಂಡಿಯಾ (INDIA) ಒಕ್ಕೂಟದ ಸಭೆ ನಡೆಯಲಿದೆ. ಈ ಸಭೆಗೆ ಉದ್ಧವ್‌ ಠಾಕ್ರೆ (Uddhav Thackeray) ಗೈರಾಗಲಿದ್ದಾರೆ. ಉದ್ಧವ್‌ ಠಾಕ್ರೆ ಗೈರಾಗುತ್ತಿರುವ ಬೆನ್ನಲ್ಲೇ ಮತ್ತೆ ಎನ್‌ಡಿಎ ಸೇರುತ್ತಾರಾ ಪ್ರಶ್ನೆಗಳು ಹುಟ್ಟಿಕೊಂಡಿದೆ.

    ಮಾಧ್ಯಮಗಳ ವರದಿ ಪ್ರಕಾರ ಉದ್ಧವ್‌ ಠಾಕ್ರೆ ಅವರು ಎನ್‌ಸಿಪಿ (NCP) ಮತ್ತು ಕಾಂಗ್ರೆಸ್‌ (Congress) ವಿರುದ್ಧ ಮುನಿಸಿಕೊಂಡಿದ್ದಾರೆ. ಈ ಮುನಿಸಿಗೆ ಕಾರಣ ಸಾಂಗ್ಲಿ ಕ್ಷೇತ್ರದಲ್ಲಿನ ಸೋಲು.

    Uddhav Thackeray

    ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಅವರ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಸಾಂಗ್ಲಿಯಲ್ಲಿ ಉದ್ಧವ್‌ ಠಾಕ್ರೆ ಅವರ ಪಕ್ಷದಿಂದ ಚಂದ್ರಹರ ಸುಭಾಶ್‌ ಪಾಟೀಲ್‌ ಕಣಕ್ಕೆ ಇಳಿದಿದ್ದರು. ಆದರೆ ಫಲಿತಾಂಶ ಪ್ರಕಟವಾದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವಿಶಾಲ್‌ ಪ್ರಕಾಶ್‌ಬಾಪು ಪಟೀಲ್‌ 1,00,053 ಮತಗಳ ಅಂತರದಿಂದ ಜಯಗಳಿಸಿದ್ದರು.  ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರು ಸೇರಿ 9 ಮಂದಿ ಸಾವು

    ವಿಶಾಲ್‌ ಪ್ರಕಾಶ್‌ಬಾಪು 5,71,666 ಮತಗಳನ್ನು ಪಡೆದರೆ ಬಿಜೆಪಿಯ ಸಂಜಯ್‌ ಪಾಟೀಲ್‌ 4,71,613 ಮತಗಳನ್ನು ಪಡೆದಿದ್ದಾರೆ.  ಶಿವಸೇನಾ ಅಭ್ಯರ್ಥಿಗೆ 60,860 ಮತಗಳು ಮಾತ್ರ ಬಿದ್ದಿದ್ದವು. ಎನ್‌ಸಿಪಿ, ಕಾಂಗ್ರೆಸ್‌ ಬೆಂಬಲ ನೀಡಿದ್ದರೆ ಕನಿಷ್ಟ 3 ಲಕ್ಷ ಮತಗಳಾದರೂ ಬೀಳಬೇಕಿತ್ತು. ಆದರೆ ಇಷ್ಟೊಂದು ಕಡಿಮೆ ವೋಟ್‌ ಬಿದ್ದಿದ್ದಕ್ಕೆ ಉದ್ಧವ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶಾಲ್‌ ಪ್ರಕಾಶ್‌ ಪಾಟೀಲ್‌ ಅವರು ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದರು. ಆದರೆ ಮೈತ್ರಿ ಭಾಗವಾಗಿರುವ ಕಾರಣ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹಿಂದುಗಡೆಯಿಂದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಕ್ಕೆ ಉದ್ಧವ್‌ ಠಾಕ್ರೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

     

    ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿಂಧೆ ಬಣಕ್ಕೆ ಸೋಲಾಗಿದ್ದು ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 13, ಬಿಜೆಪಿ 9, ಶಿವಸೇನೆ (ಉದ್ಧವ್‌ ಠಾಕ್ರೆ) 9, ಎನ್‌ಸಿಪಿ( ಶರಾದ್‌ ಪವಾರ್‌) 8, ಶಿಂಧೆ(ಶಿವಸೇನೆ) 7 ಸ್ಥಾನವನ್ನು ಗೆದ್ದುಕೊಂಡಿದೆ. 2019 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿ 43 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ ಮೈತ್ರಿ ಕೇವಲ 5 ಸ್ಥಾನ ಮಾತ್ರ ಗೆದ್ದುಕೊಂಡಿತ್ತು.

    ಮುಂದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ಮೈತ್ರಿ ಅನಿವಾರ್ಯ. ಹೀಗಾಗಿ ಉದ್ಧವ್‌ ಠಾಕ್ರೆ ಮರಳಿ ಎನ್‌ಡಿಎ ಸೇರುತ್ತಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಚುನಾವಣೆಯಲ್ಲಿ ಸೋತ್ರೂ ನೈತಿಕವಾಗಿ ನಾವು ಗೆದ್ದಿದ್ದೇವೆ: ರಮಾನಾಥ ರೈ

    ಚುನಾವಣೆಯಲ್ಲಿ ಸೋತ್ರೂ ನೈತಿಕವಾಗಿ ನಾವು ಗೆದ್ದಿದ್ದೇವೆ: ರಮಾನಾಥ ರೈ

    ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋತರೂ ನಾವು ನೈತಿಕವಾಗಿ ಗೆದ್ದಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ (Ramanatha Rai) ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನೈತಿಕವಾಗಿ ಸೋತಿದ್ದಾರೆ. ಚಾರ್ ಸೊ ಪಾರ್ ಅನ್ನುತ್ತಿದ್ದವರು ಈಗ ಅಧಿಕಾರ ಉಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದರು.

    ಬೇರೆ ಬೇರೆ ರೀತಿಯಲ್ಲಿ ನಮ್ಮ ಒಕ್ಕೂಟವನ್ನ ಸೋಲಿಸುವ ಕೆಲಸ ಮಾಡಿದ್ದಾರೆ. ಇಡಿ, ಐಟಿ ಬಳಸಿ ನಮ್ಮ ಬ್ಯಾಂಕ್ ಖಾತೆ, ಹಣವನ್ನ ಫ್ರೀಜ್ ಮಾಡುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಎನ್‌ಡಿಎ 293, ಇಂಡಿಯಾ ಒಕ್ಕೂಟ 232 ಮತ್ತು ಇತರರು 18 ಸ್ಥಾನಗಳನ್ನು ಗೆದ್ದಿದ್ದಾರೆ. ಬಹುಮತಕ್ಕೆ 272 ಸದಸ್ಯರ ಅಗತ್ಯವಿದೆ.

  • ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

    ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

    ನವದೆಹಲಿ: ಬಿಹಾರ ಸಿಎಂ ನಿತೀಶ್‌ ಕುಮಾರ್‌ (Nitish Kumar) ಮತ್ತು ಆರ್‌ಜೆಡಿ (RJD) ನಾಯಕ ತೇಜಸ್ವಿ ಯಾದವ್‌ (Tejashwi Yadav) ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದಾರೆ.

    ಇಂಡಿಯಾ ಒಕ್ಕೂಟ ನಿತೀಶ್‌ ಕುಮಾರ್‌ ಅವರನ್ನು ಮೈತ್ರಿ ಸೇರುವಂತೆ ಈಗಾಗಲೇ ಆಹ್ವಾನ ನೀಡಿದೆ. ಹೀಗಿದ್ದರೂ ನಿತೀಶ್‌ ಕುಮಾರ್‌ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

    ಇಂದು ಇಂಡಿಯಾ (INDIA) ಮತ್ತು ಎನ್‌ಡಿಎ (NDA) ಒಕ್ಕೂಟದ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಭಾಗವಹಿಸಲು ಇಬ್ಬರೂ ನಾಯಕರು ಒಂದೇ ವಿಮಾನ ಹತ್ತಿದ್ದಾರೆ.

    ವಿಮಾನದಲ್ಲಿ ನಿತೀಶ್‌ ಕುಮಾರ್‌ ಮುಂದುಗಡೆ ಸೀಟ್‌ ಕುಳಿತುಕೊಂಡಿದ್ದರೆ ಹಿಂದುಗಡೆ ತೇಜಸ್ವಿ ಯಾದವ್‌ ಆಸೀನರಾಗಿದ್ದಾರೆ. ಇಬ್ಬರು ನಾಯಕರು ವಿಮಾನದಲ್ಲಿ ಮಾತನಾಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

    ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಎನ್‌ಡಿಎ 293, ಇಂಡಿಯಾ 232 ಮತ್ತು ಇತರರು 18 ಸ್ಥಾನಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಂಗರಕ್ಷಕನ ಪುತ್ರನಿಗೆ ಜಯ

    ಬಹುಮತಕ್ಕೆ 272 ಸದಸ್ಯರ ಅಗತ್ಯವಿದೆ. ಬಿಹಾರದಲ್ಲಿ ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಪರಸ್ಪರ ವಿರೋಧಿಗಳು. ಹೀಗಿದ್ದರೂ ಎನ್‌ಡಿಎ ತೊರೆದು ನಿತೀಶ್‌ ಕುಮಾರ್‌ ಇಂಡಿಯಾ ಮೈತ್ರಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ:  ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

    ಬಿಹಾರ ಚುನಾವಣೆಯಲ್ಲಿ (Bihar Election) ಜೆಡಿಯು ಮತ್ತು ಬಿಜೆಪಿ ತಲಾ 12 ಸ್ಥಾನಗಳನ್ನು ಗೆದ್ದುಕೊಂಡಿವೆ. ಎಲ್‌ಜಿಪಿಆರ್‌ವಿ 5 ಆರ್‌ಜೆಡಿ 4, ಕಾಂಗ್ರೆಸ್‌ 3, ಸಿಪಿಐ(ಎಂ) 2, ಇತರರು 1 ಸ್ಥಾನವನ್ನು ಗೆದ್ದುಕೊಂಡಿದ್ದಾರೆ.

  • ಇಂದು ನಾವು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ: ಉದ್ಧವ್‌ ಠಾಕ್ರೆ

    ಇಂದು ನಾವು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ: ಉದ್ಧವ್‌ ಠಾಕ್ರೆ

    ನವದೆಹಲಿ: ಇಂದು ದೆಹಲಿಯಲ್ಲಿ ಸಭೆ ಸೇರಿ ಇಂಡಿಯಾ (INDIA) ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ (Uddhav Thackeray) ಹೇಳಿದ್ದಾರೆ.

    ನಮ್ಮ ಭಾರತ ಮೈತ್ರಿಕೂಟ ರಚನೆಯಾದ ದಿನವೇ ನಾವು ದೇಶದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸಿ ಸಂವಿಧಾನವನ್ನು ಉಳಿಸಬೇಕೆಂದು ನಿರ್ಧರಿಸಿದ್ದೇವೆ. ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ. ಎಲ್ಲಾ ದೇಶಭಕ್ತರು ಮತ್ತು ಬಿಜೆಪಿಯಿಂದ ಕಿರುಕುಳಕ್ಕೊಳಗಾದ ಎಲ್ಲರೂ ಸಭೆ ಸೇರುತ್ತೇವೆ. ಚಂದ್ರಬಾಬು ನಾಯ್ಡು (Chandrababu Naidu) ಕೂಡ ಬಿಜೆಪಿ ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

     

    ಇಂಡಿಯಾ ಮೈತ್ರಿಯು ಮಹಾರಾಷ್ಟ್ರದಲ್ಲಿ (Maharashtra) ಮತ್ತು ರಾಷ್ಟ್ರದಾದ್ಯಂತ ನಿಜವಾಗಿಯೂ ಉತ್ತಮವಾಗಿ ಕೆಲಸ ಮಾಡಿದೆ. ಭಾರತದಲ್ಲಿ ದುರಹಂಕಾರಕ್ಕೆ ಸ್ಥಾನವಿಲ್ಲ ಎಂದು ನಾವು ತೋರಿಸಿದ್ದೇವೆ. ಸಂವಿಧಾನ ವಿರೋಧಿ ಶಕ್ತಿಗಳು, ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದರು.

    ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಬಣಕ್ಕೆ ಸೋಲಾಗಿದ್ದು ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ.  ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 13, ಬಿಜೆಪಿ 9, ಶಿವಸೇನೆ (ಉದ್ಧವ್‌ ಠಾಕ್ರೆ) 9, ಎನ್‌ಸಿಪಿ( ಶರಾದ್‌ ಪವಾರ್‌) 8, ಶಿಂಧೆ(ಶಿವಸೇನೆ) 7 ಸ್ಥಾನವನ್ನು ಗೆದ್ದುಕೊಂಡಿದೆ. ಇದನ್ನೂ ಓದಿ: ಮೊದಲ ಹಂತದಲ್ಲೇ ಬಿಜೆಪಿಗೆ ಭಾರೀ ಹಿನ್ನಡೆ – ಮಿಡಲ್‌ ಓವರ್‌ನಲ್ಲಿ ಹೆಚ್ಚು ಸ್ಕೋರ್‌ – ಯಾವ ಹಂತದಲ್ಲಿ ಯಾರಿಗೆ ಎಷ್ಟು ಸ್ಥಾನ?

    2019 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿ 43 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ ಮೈತ್ರಿ ಕೇವಲ 5 ಸ್ಥಾನ ಮಾತ್ರ ಗೆದ್ದುಕೊಂಡಿತ್ತು.

     

  • ಮೊದಲ ಹಂತದಲ್ಲೇ ಬಿಜೆಪಿಗೆ ಭಾರೀ ಹಿನ್ನಡೆ – ಮಿಡಲ್‌ ಓವರ್‌ನಲ್ಲಿ ಹೆಚ್ಚು ಸ್ಕೋರ್‌ – ಯಾವ ಹಂತದಲ್ಲಿ ಯಾರಿಗೆ ಎಷ್ಟು ಸ್ಥಾನ?

    ಮೊದಲ ಹಂತದಲ್ಲೇ ಬಿಜೆಪಿಗೆ ಭಾರೀ ಹಿನ್ನಡೆ – ಮಿಡಲ್‌ ಓವರ್‌ನಲ್ಲಿ ಹೆಚ್ಚು ಸ್ಕೋರ್‌ – ಯಾವ ಹಂತದಲ್ಲಿ ಯಾರಿಗೆ ಎಷ್ಟು ಸ್ಥಾನ?

    ನವದೆಹಲಿ: 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಮಿಡಲ್‌ ಓವರ್‌ನಲ್ಲಿ ಹೆಚ್ಚು ಸ್ಕೋರ್‌ ಮಾಡಿದ ಕಾರಣ ಎನ್‌ಡಿಎ (NDA) ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಹಿಡಿದಿದೆ.

    ಹೌದು. ಬಿಜೆಪಿಗೆ ಮೊದಲ ಹಂತದಲ್ಲಿ ಭಾರೀ ಹಿನ್ನಡೆಯಾಗಿತ್ತು. ನಂತರ ನಿಧಾನವಾಗಿ ಎಚ್ಚೆತ್ತುಕೊಂಡು ಸರಿಯಾದ ತಂತ್ರವನ್ನು ಅನುಸರಿಸಿದ ಪರಿಣಾಮ ಹಲವು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

    ಮೊದಲ ಹಂತದ ಚುನಾವಣೆಯಲ್ಲಿ ಇಂಡಿಯಾ (INDIA) ಕೂಟ ಅತ್ಯತ್ತಮ ಸಾಧನೆ ಮಾಡಿದ ಪರಿಣಾಮ ಬಿಜೆಪಿ ಈಗ ಬಾರಿ ಏಕಾಂಗಿಯಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

    ಯಾವ ಹಂತದಲ್ಲಿ ಯಾರಿಗೆ ಎಷ್ಟು?

    ಮೊದಲ ಹಂತ
    ಏಪ್ರಿಲ್‌ 19, ಒಟ್ಟು 102 ಕ್ಷೇತ್ರಗಳು
    ಬಿಜೆಪಿ -30
    ಕಾಂಗ್ರೆಸ್‌ -27
    ಡಿಎಂಕೆ -22
    ಎಸ್‌ಪಿ -04
    ಸಿಪಿಐ- 2
    ಇತರರು – 17

    ಎರಡನೇ ಹಂತ
    ಏಪ್ರಿಲ್‌ 26, ಒಟ್ಟು 87 ಕ್ಷೇತ್ರ
    ಬಿಜೆಪಿ – 46
    ಕಾಂಗ್ರೆಸ್‌ – 17
    ಸೇನಾ- ಉದ್ಧವ್‌ ಠಾಕ್ರೆ -03
    ಐಯುಎಂಎಲ್‌ -02
    ಜೆಡಿಎಸ್‌ – 02
    ಇತರರು – 17

    ಮೂರನೇ ಹಂತ
    ಮೇ 07, ಒಟ್ಟು 94 ಕ್ಷೇತ್ರಗಳು
    ಬಿಜೆಪಿ – 57
    ಕಾಂಗ್ರೆಸ್‌ – 15
    ಎಸ್ಪಿ -06
    ಜೆಡಿಯು – 03
    ಟಿಎಂಸಿ – 02
    ಇತರರು -11

    ನಾಲ್ಕನೇ ಹಂತ
    ಮೇ 13, ಒಟ್ಟು 96 ಕ್ಷೇತ್ರಗಳು
    ಬಿಜೆಪಿ – 39
    ಕಾಂಗ್ರೆಸ್‌ – 14
    ಟಿಡಿಪಿ -16
    ಟಿಎಂಸಿ -07
    ವೈಎಸ್‌ಆರ್‌ಸಿಪಿ – 04
    ಇತರರು – 16

    ಐದನೇ ಹಂತ
    ಮೇ 20, ಒಟ್ಟು 49 ಕ್ಷೇತ್ರಗಳು
    ಬಿಜೆಪಿ – 19
    ಕಾಂಗ್ರೆಸ್‌ 05
    ಎಸ್‌ಪಿ – 07
    ಟಿಎಂಸಿ – 06
    ಸೇನಾ(ಉದ್ಧವ್‌ ಠಾಕ್ರೆ) -04
    ಇತರರು – 8

    ಆರನೇ ಹಂತ
    ಮೇ 25, 58 ಕ್ಷೇತ್ರಗಳು
    ಬಿಜೆಪಿ -31
    ಕಾಂಗ್ರೆಸ್‌ – 06
    ಎಸ್‌ಪಿ -10
    ಟಿಎಂಸಿ – 04
    ಜೆಡಿಯು – 04
    ಇತರರು – 03

    ಏಳನೇ ಹಂತ
    ಜೂನ್‌ 01, ಒಟ್ಟು 57 ಕ್ಷೇತ್ರಗಳು
    ಬಿಜೆಪಿ – 17
    ಕಾಂಗ್ರೆಸ್‌ 09
    ಟಿಎಂಸಿ – 09
    ಎಸ್‌ಪಿ – 06
    ಎಎಪಿ – 03
    ಇತರರು – 13