Tag: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

  • ಮುಸ್ಲಿಂ ಲೀಗ್ ಜಾತ್ಯಾತೀತ ಪಕ್ಷ ಎಂದ ರಾಹುಲ್ – ಬಿಜೆಪಿ ಕೆಂಡಾಮಂಡಲ

    ಮುಸ್ಲಿಂ ಲೀಗ್ ಜಾತ್ಯಾತೀತ ಪಕ್ಷ ಎಂದ ರಾಹುಲ್ – ಬಿಜೆಪಿ ಕೆಂಡಾಮಂಡಲ

    ನವದೆಹಲಿ: ಕೇರಳದಲ್ಲಿ ಅಸ್ತಿತ್ವದಲ್ಲಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷವನ್ನು ಜಾತ್ಯಾತೀತ ಪಕ್ಷ (Secular Party) ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gamdhi) ಬಣ್ಣಿಸಿರುವುದು ಬಿಜೆಪಿ (BJP) ಆಕ್ರೋಶಕ್ಕೆ ಕಾರಣವಾಗಿದೆ.

    ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ಸಂಪೂರ್ಣವಾಗಿ ಲೌಕಿಕವಾದದ ಪಕ್ಷವಾಗಿದೆ. ಮುಸ್ಲಿಂ ಲೀಗ್‌ನಲ್ಲಿ ನಾನ್ ಸೆಕ್ಯುಲರ್ ಅಂಶಗಳು ಇಲ್ಲ ಎಂದು ತಿಳಿಸಿದ್ದಾರೆ. ಈ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿಬಿದ್ದಿದೆ.

    ನಮ್ಮ ದೇಶ ಧಾರ್ಮಿಕವಾಗಿ ಬೇರ್ಪಡಲು ಕಾರಣಕರ್ತರಾದ ಮಹ್ಮದ್ ಆಲಿ ಜಿನ್ನಾಗೆ ಸಂಬಂಧಿಸಿದ ಮುಸ್ಲಿಂ ಲೀಗ್ ಅನ್ನು ರಾಹುಲ್ ಗಾಂಧಿ ಜಾತ್ಯಾತೀತ ಎನ್ನುತ್ತಿದ್ದಾರೆ. ಅವರ ಮಾತುಗಳಲ್ಲಿ ಕಪಟತ್ವವೇ ತುಂಬಿದೆ. ವಯನಾಡ್ ಸಂಸದ ಸ್ಥಾನವನ್ನು ಮರುಸ್ಥಾಪಿಸಿಕೊಳ್ಳಲು ಹೀಗೆಲ್ಲಾ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ ರೈಲಿಗೆ ಯಶವಂತಪುರದಿದ ಸಾಗುತ್ತಿದ್ದ ರೈಲು ಡಿಕ್ಕಿ – 50 ಸಾವು

    ಇದಕ್ಕೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಏನ್ ಬ್ರದರ್ ಓದಿಕೊಂಡಿಲ್ವಾ? ಕೇರಳದ ಮುಸ್ಲಿಂ ಲೀಗ್‌ಗೂ, ಜಿನ್ನಾ ಸ್ಥಾಪಿಸಿದ್ದ ಮುಸ್ಲಿಂ ಲೀಗ್‌ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. 2012ರಲ್ಲಿ ನಾಗ್ಪುರ ಪಾಲಿಕೆಯಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಇದೇ ಐಯುಎಂಎಲ್ ಜೊತೆ ಕೈಜೋಡಿಸಿರಲಿಲ್ವಾ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಅಮಿತ್ ಮಾಳವೀಯ ಸುಳ್ಳು ಸುದ್ದಿ ಹಬ್ಬಿಸುವ ವ್ಯಕ್ತಿ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ – ವಾರ್ಷಿಕ ಸರಾಸರಿ ಅಸ್ತ್ರ ಬಳಸಿ ಬಿಲ್ ವಸೂಲಿ

  • RSS ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಾದರ್‌ಗೆ ಎಚ್ಚರಿಕೆ

    RSS ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಾದರ್‌ಗೆ ಎಚ್ಚರಿಕೆ

    ತಿರುವನಂತರಪುರಂ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರ್‌ಎಸ್‍ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಭಾಷಣ ಮಾಡಿದ್ದ ಐಯುಎಂಎಲ್ ಹಿರಿಯ ಮುಖಂಡರಾದ ಮಾಜಿ ಶಾಸಕ ಕೆ.ಎನ್.ಎ. ಖಾದರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಎಚ್ಚರಿಕೆ ನೀಡಿದೆ.

    ದಾರ್ಶನಿಕ ಮತ್ತು ಖ್ಯಾತ ವಾಗ್ಮಿಯಾದ ಖಾದರ್ ಅವರನ್ನು ಕೆಲವು ದಿನಗಳ ಹಿಂದೆ ಕೋಝಿಕ್ಕೋಡ್‍ನ ಕೇಸರಿ ಭವನದಲ್ಲಿ ಸ್ನೇಹಬೋಧಿ ಸಾಂಸ್ಕೃತಿಕ ಸಭೆಯಲ್ಲಿ ಗೌರವಿಸಲಾಗಿತ್ತು. ಇದು ಆರ್‌ಎಸ್‍ಎಸ್ ಪ್ರಾಯೋಜಿತ ಕಾರ್ಯಕ್ರಮವಾಗಿ. ಅಲ್ಲಿ ಮಾತನಾಡಿದ್ದ ಖಾದರ್ ಅವರು, ಗುರುವಾಯೂರು ಶ್ರೀಕೃಷ್ಣ ದೇವಸ್ಥಾನವನ್ನು ಪ್ರವೇಶಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

    ಉತ್ತರ ಭಾರತದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಆದರೆ ಗುರುವಾಯೂರ್‌ನಲ್ಲಿರುವ ಶ್ರೀಕೃಷ್ಣ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಅವರು ಆರ್‌ಎಸ್‍ಎಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ಹೀಗಾಗಿ ಪಕ್ಷದ ನಾಯಕತ್ವವು ಖಾದರ್ ಅವರಿಂದ ವಿವರಣೆ ಕೇಳಿತ್ತು. ಖಾದರ್ ನೀಡಿದ ವಿವರಣೆಯ ಬಗ್ಗೆ ಚರ್ಚಿಸಿದ ಪಕ್ಷದ ಹೈಪವರ್ ಕಮಿಟಿಯು ಪಕ್ಷದ ಸಂಪ್ರದಾಯವನ್ನು ಕಡೆಗಣಿಸಿರುವ ಬಗ್ಗೆ ಎಚ್ಚರಿಕೆ ನೀಡಲು ನಿರ್ಧರಿಸಿದೆ ಎಂದು ಲೀಗ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು

    ಖಾದರ್ ಅವರು ಹೆಚ್ಚು ಜಾಗರೂಕರಾಗಿರಬೇಕು. ಅವರು ಮಾಡುವ ಭಾಷಣಗಳು ಮತ್ತು ಸಾರ್ವಜನಿಕ ಹೇಳಿಕೆಗಳು ಪಕ್ಷದ ನೀತಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಪಕ್ಷವು ಅವರಿಗೆ ಎಚ್ಚರಿಕೆ ನೀಡಿದೆ. ವೆಂಗಾರ ಮಾಜಿ ಶಾಸಕ ಖಾದರ್ 2021ರ ವಿಧಾನಸಭೆ ಚುನಾವಣೆಯಲ್ಲಿ ಗುರುವಾಯೂರಿನಿಂದ ಸೋತಿದ್ದರು.

    Live Tv