Tag: ಇಂಡಿಯನ್ ಪ್ರೀಮಿಯರ್ ಲೀಗ್

  • 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

    43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಉಸಿರು ಅಂದ್ರೆ ಅದು ಎಂ.ಎಸ್ ಧೋನಿ. ಕಳೆದ ಎರಡು ವರ್ಷಗಳಿಂದಲೂ ಅವರ ನಿವೃತ್ತಿಯ ಮಾತುಗಳು ಕೇಳಿಬರುತ್ತಲೇ ಇದ್ದರೂ, ಐಪಿಎಲ್ (IPL) ಅಖಾಡದಲ್ಲಿ ಧೋನಿಯ (MS Dhoni) ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಬ್ಯಾಟ್ ಬೀಸಿದಾಗೆಲ್ಲ ಒಂದೊಂದು ದಾಖಲೆಗಳನ್ನು ಸರಿಗಟ್ಟುತ್ತಿದ್ದಾರೆ. 43ನೇ ವಯಸ್ಸಿನಲ್ಲೂ ಚಿರಯುವಕನಂತೆ ಸಿಕ್ಸರ್, ಬೌಂಡರಿ ಬಾರಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದಾರೆ.

    ಶುಕ್ರವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯಲ್ಲಿ ಬಂದರೂ 16 ಎಸೆತಗಳಲ್ಲಿ 30 ರನ್ ಸಿಡಿಸಿದ ಧೋನಿ, ಐತಿಹಾಸಿಕ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡರು.ಇದನ್ನೂ ಓದಿ:17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ

    ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 50ರನ್‌ಗಳಿಂದ ಸೋಲನುಭವಿಸಿತು. ಆದರೆ ಪಂದ್ಯದ ಕೊನೆಯ ಓವರ್‌ನಲ್ಲಿ ಕ್ರುನಾಲ್ ಪಾಂಡ್ಯ ಬೌಲಿಂಗ್‌ಗೆ ಧೋನಿ ಭರ್ಜರಿ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದರು. ಈ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲವಾದರೂ ಈ ಮೂಲಕ ಧೋನಿ ಐತಿಹಾಸಿಕ ದಾಖಲೆ ನಿರ್ಮಿಸಿದರು.

    ಈ ಮೂಲಕ ಸುರೇಶ್ ರೈನಾ (Suresh Raina) ಅವರನ್ನು ಹಿಂದಿಕ್ಕಿ ಎಂ.ಎಸ್ ಧೋನಿ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು. ಈ ಮೊದಲು ಸುರೇಶ್ ರೈನಾ 4,687 ರನ್‌ಗಳೊಂದಿಗೆ ದೀರ್ಘ ಕಾಲದಿಂದಲೂ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿದ್ದರು. ಈ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಧೋನಿಗೆ 19 ರನ್‌ಗಳ ಅಗತ್ಯವಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಧೋನಿ ದಾಖಲೆಯನ್ನು ಹಿಂದಿಕ್ಕಿ, ಸಿಎಸ್‌ಕೆ ಪರ ಆಡಿದ ಒಟ್ಟು 236 ಪಂದ್ಯಗಳಲ್ಲಿ 4,699 ರನ್ ಗಳಿಸಿದ್ದಾರೆ.

    ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
    ಎಂಎಸ್ ಧೋನಿ – 4,699
    ಸುರೇಶ್ ರೈನಾ – 4,687
    ಫಾಫ್ ಡು ಪ್ಲೆಸಿಸ್ – 2,721
    ರುತುರಾಜ್ ಗಾಯಕ್ವಾಡ್ – 2,433
    ಅಂಬಟಿ ರಾಯುಡು – 1,932

    ಆರ್‌ಸಿಬಿ ನೀಡಿದ್ದ 197 ರನ್‌ಗಳ ಗೆಲುವಿನ ಗುರಿಯನ್ನು ಸಾಧಿಸುವಲ್ಲಿ ವಿಫಲವಾದ ಸಿಎಸ್‌ಕೆ, ಒಟ್ಟು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಇದನ್ನೂ ಓದಿ:ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL) ಅದ್ಭುತ ಪ್ರದರ್ಶನ ತೋರುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವೆಂಕಟೇಶ್ ಅಯ್ಯರ್ (Venkatesh Iyer), ಇದೀಗ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದು, ಬಹುಕಾಲದ ಗೆಳತಿ ಶೃತಿ ರಘುನಾಥನ್ (Shruti Raghunathan) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವೆಂಕಟೇಶ್ ಅಯ್ಯರ್ ಹಾಗೂ ಶೃತಿಯವರ ಎಂಗೇಜ್‍ಮೆಂಟ್ 2023ರ ನ.21ರಂದು ನೆರವೇರಿತ್ತು. ಇದೀಗ ಅವರ ಮದುವೆ ನೆರವೇರಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ವೆಂಕಟೇಶ್ ಅಯ್ಯರ್ 15 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 370 ರನ್ ಸಿಡಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

    ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

  • ಲಕ್ನೋ ಬಿಟ್ಟು ಕೋಲ್ಕತ್ತ ಸೇರಿದ ಗಂಭೀರ್‌

    ಲಕ್ನೋ ಬಿಟ್ಟು ಕೋಲ್ಕತ್ತ ಸೇರಿದ ಗಂಭೀರ್‌

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ಗೆ (Lucknow Super Giants) ಗುಡ್‌ಬೈ ಹೇಳಿದ್ದಾರೆ.

    ಅಧಿಕೃತವಾಗಿ ಎಲ್‌ಎಸ್‌ಜಿ (LSG) ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೆ ಮರಳಿದ್ದಾರೆ. ಕೆಕೆಆರ್‌ ತಂಡದಲ್ಲಿದ್ದಾಗ ನಾಯಕರಾಗಿ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕೆಕೆಆರ್‌ನ ಸಿಇಒ ವೆಂಕಿ ಮೈಸೂರು (Venky Mysuru) ಅವರು ಬುಧವಾರ ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ಗಂಭೀರ್‌ ಮೆಂಟರ್‌ ಆಗಿ ಬರುತ್ತಿರುವುದನ್ನು ಕೆಕೆಆರ್‌ ಸಹ-ಮಾಲೀಕ ಶಾರುಖ್‌ ಖಾನ್‌ ಸ್ವಾಗತಿಸಿದ್ದಾರೆ. ಫ್ರಾಂಚೈಸಿಗೆ ಗಂಭೀರ್ ಆಗಮನವನ್ನು ‘ನಾಯಕನ ಹಿಂತಿರುಗುವಿಕೆ’ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಗಂಭೀರ್ ಎರಡು ವರ್ಷಗಳ ಕಾಲ LSG ಯ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ್ದರು. IPL 2022 ಆವೃತ್ತಿಯಲ್ಲಿ ತಂಡ ಫೈನಲ್ ತಲುಪಲು ಅಪಾರ ಶ್ರಮಿಸಿದ್ದರು. 2023 ರ ಆವೃತ್ತಿಯಲ್ಲಿ LSG ಲೀಗ್ ಸ್ಟ್ಯಾಂಡಿಂಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತು. ಆದರೆ ಸತತವಾಗಿ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ಭಾವನಾತ್ಮಕ ಪೋಸ್ಟ್ ಮೂಲಕ ಗಂಭೀರ್‌ ಲಕ್ನೋ ತಂಡದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. “ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ನನ್ನ ಪ್ರಯಾಣದ ಅಂತ್ಯವನ್ನು ನಾನು ಘೋಷಿಸುತ್ತಿದ್ದೇನೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರ ಬಗ್ಗೆಯೂ ಅಪಾರ ಪ್ರೀತಿಯಿದ್ದು, ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಈ ಗಮನಾರ್ಹ ಫ್ರಾಂಚೈಸ್ ಅನ್ನು ರಚಿಸುವಾಗ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಮತ್ತು ನನ್ನ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾನು ಡಾ. ಸಂಜೀವ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪ್ರತಿಯೊಬ್ಬ LSG ಅಭಿಮಾನಿಯನ್ನು ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಆಲ್ ದಿ ಬೆಸ್ಟ್ LSG ಬ್ರಿಗೇಡ್” ಎಂದು ಎಕ್ಸ್‌ನಲ್ಲಿ ಗಂಭೀರ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

  • ಸಹಾಯಕ ಕೋಚ್‍ಗಳಿಗೆ ಗೇಟ್‍ಪಾಸ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

    ಸಹಾಯಕ ಕೋಚ್‍ಗಳಿಗೆ ಗೇಟ್‍ಪಾಸ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ (IPL) 2022 ಮತ್ತು 2023ರ ಋತುಗಳಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಸಹಾಯಕ ಕೋಚ್‍ಗಳಾದ ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರನ್ನು ಕೈ ಬಿಡಲಾಗಿದೆ.

    2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದ್ದರೆ, 2023 ರಲ್ಲಿ 9 ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 5 ಗೆಲುವುಗಳನ್ನು ದಾಖಲಿಸಿತು. ರಿಷಭ್ ಪಂತ್ ಹೊರಗುಳಿದಿದ್ದರಿಂದ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ ಗೆಲುವಿಗಾಗಿ ಹೋರಾಟ ನಡೆಸಿತ್ತು. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    2022ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದಿದೆ. ಆದರೆ ಲೀಗ್‍ನಲ್ಲಿ 8 ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್‍ಗಿಂತ (RCB) ಉತ್ತಮ ರನ್ ರೇಟ್ ಹೊಂದಿದ್ದರೂ ಸಹ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯಲು ಡೆಲ್ಲಿ ವಿಫಲವಾಗಿತ್ತು.

    ಡೆಲ್ಲಿ ಕ್ಯಾಪಿಟಲ್ಸ್‌ನ ಇತ್ತೀಚಿನ ಪ್ರಕಟಣೆಯಲ್ಲಿ ರಿಕಿ ಪಾಂಟಿಂಗ್ ಅವರು ಮುಖ್ಯ ಕೋಚ್ ಆಗಿ ತಮ್ಮ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಸೌರವ್ ಗಂಗೂಲಿ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ. ಪಾಂಟಿಂಗ್ ಅವರು ಐಪಿಎಲ್ 2018ರ ಮೊದಲು ಮುಖ್ಯ ತರಬೇತುದಾರರಾಗಿದ್ದಾರೆ. ಐಪಿಎಲ್ 2024ಕ್ಕೆ ಎದುರು ನೋಡುತ್ತಿರುವ ತಂಡ, ರಿಷಬ್ ಪಂತ್ ನಾಯಕತ್ವದ ನಿರೀಕ್ಷೆಯಲ್ಲಿದೆ. ಈ ನಡುವೆ ಅಜಿತ್ ಅಗರ್ಕರ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಆಯ್ಕೆದಾರರಾಗಬಹುದು ಎಂಬ ವರದಿ ಪ್ರಕಟವಾಗಿದೆ. ಇದನ್ನೂ ಓದಿ: Asian Games 2023 – ಶಿಖರ್‌ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಯಾವಾಗಲೂ ಮುಂಬೈ ಇಂಡಿಯನ್ಸ್‌ಗಾಗಿ ಆಡಲು ಬಯಸುತ್ತೇನೆ: ಜೋಫ್ರಾ ಆರ್ಚರ್

    ನಾನು ಯಾವಾಗಲೂ ಮುಂಬೈ ಇಂಡಿಯನ್ಸ್‌ಗಾಗಿ ಆಡಲು ಬಯಸುತ್ತೇನೆ: ಜೋಫ್ರಾ ಆರ್ಚರ್

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಲು ನಾನು ಯಾವಾಗಲೂ ಬಯಸುತ್ತೇನೆ. ಅಂತಿಮವಾಗಿ ಮುಂಬೈ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನ 2ನೇ ದಿನದಂದು ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ 8 ಕೋಟಿ ರೂ.ಗೆ ಖರೀದಿಸಿದೆ. ಆರ್ಚರ್ ಐಪಿಎಲ್ 2022 ಸೀಸನ್‍ಗೆ ಲಭ್ಯವಿರುವುದಿಲ್ಲ. ಆದರೆ ಅವರು ಮುಂದಿನ 2023ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮುಂಬೈ ತಂಡವು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುವ ಫ್ರಾಂಚೈಸಿ ಆಗಿದೆ. ನಾನು ಯಾವಾಗಲೂ ಮುಂಬೈ ತಂಡಕ್ಕಾಗಿ ಆಡಲು ಬಯಸುತ್ತೇನೆ. ಅಂತಿಮವಾಗಿ ಫ್ರಾಂಚೈಸಿಗಾಗಿ ಆಡಲು ಮತ್ತು ಕ್ರಿಕೆಟ್‍ನ ದೊಡ್ಡ ತಾರೆಗಳೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮುಂಬೈ ತಂಡದೊಂದಿಗಿನ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಿಜವಾಗಿಯೂ ನಾನು ಎದುರು ನೋಡುತ್ತಿದ್ದೇನೆ ಎಂದು ಮುಂಬೈ ಇಂಡಿಯನ್ಸ್‌ನ ಯುಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಜೋಫ್ರಾ ಆರ್ಚರ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಮುಂಬೈ ತಂಡದಲ್ಲಿ ಒಟ್ಟಿಗೆ ಬೌಲಿಂಗ್ ಮಾಡುವುದನ್ನು ನೋಡಲು ಬಯಸುತ್ತಿದೆ ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಜಹೀರ್ ಖಾನ್ ಹೇಳಿದ್ದಾರೆ.

    ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಿಂಗಾಪುರದ ಟಿಮ್ ಡೇವಿಡ್ ಅವರಿಗೆ 8.25 ಕೋಟಿ ರೂ. ಇಶಾನ್ ಕಿಶನ್ ಅವರಿಗೆ 15.25 ಕೋಟಿ ರೂ. ಮತ್ತು ಅರ್ಜುನ್ ತೆಂಡೂಲ್ಕರ್ ಅವರಿಗೆ 30 ಲಕ್ಷ ರೂ. ನೀಡಿ ಅವರನ್ನು ಖರೀದಿಸಿದೆ.

  • ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ- ರೋಹಿತ್

    ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ- ರೋಹಿತ್

    ಮುಂಬೈ: ಹಿಟ್‍ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ‘ಹೀಗೆ ಆಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ರೋಹಿತ್ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ಪರ ಸಿಕ್ಸರ್ ಗಳನ್ನು ಸಿಡಿದ್ದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಆಫ್‍ಸೈಡ್, ಲೆಗ್ ಸೈಡ್ ಹಾಗೂ ಸ್ಟ್ರೇಟ್ ಹಿಟ್ ಸಿಕ್ಸರ್ ಬಾರಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಅನ್ನು 3 ಲಕ್ಷಕ್ಕೂ ಅಧಿಕ ನೆಟ್ಟಿಗರು ವೀಕ್ಷಿಸಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    https://www.instagram.com/tv/CBSbhreB6Vd/?utm_source=ig_embed

    ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಎಲ್ಲಾ ಕ್ರಿಕೆಟ್ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿತ್ತು. ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಆಟಗಾರರು ತಮ್ಮ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಏಕಾಏಕಿ ಟೂರ್ನಿಯನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಲಾಗಿದೆ.

    ರೋಹಿತ್ ಅವರು ಪ್ರಕೃತಿಯ ಮೇಲಿನ ಪ್ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಸೋಮವಾರ ‘ವಿಶ್ವ ಸಾಗರ ದಿನದಂದು’ ಸಾಗರಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕೆಂದು ಅವರು ನೆಟ್ಟಿಗರನ್ನು ಒತ್ತಾಯಿಸಿದ್ದರು.