Tag: ಇಂಡಿಯನ್ ಅರ್ಮಿ

  • ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ: ಕಾಶ್ಮೀರಿ ಉಗ್ರರಿಗೆ ಸೇನೆಯಿಂದ ಖಡಕ್ ವಾರ್ನಿಂಗ್

    ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ: ಕಾಶ್ಮೀರಿ ಉಗ್ರರಿಗೆ ಸೇನೆಯಿಂದ ಖಡಕ್ ವಾರ್ನಿಂಗ್

    ಶ್ರೀನಗರ: ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ.

    ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೇರಿ ಯಾರೇ ಬಂದೂಕು ಹಿಡಿದಿದ್ದರೂ ಅವರನ್ನು ಹತ್ಯೆ ಮಾಡಲಾವುದು ಎಂದು ಸೇನೆಯ ಹಿರಿಯ ಅಧಿಕಾರಿಗಳು ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದರು.

    ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದರು.

    ಕಾಶ್ಮೀರಿ ಸಮಾಜದಲ್ಲಿ ಮಕ್ಕಳ ತಾಯಂದಿರು ವಿಶೇಷ ಪಾತ್ರವಹಿಸುತ್ತಾರೆ. ಹೀಗಾಗಿ ಮಾಧ್ಯಮಗಳ ಮೂಲಕ ಅವರಲ್ಲಿ ಮನವಿ ಮಾಡುತ್ತಿದ್ದೇವೆ. ಉಗ್ರರ ಜೊತೆ ಕೈ ಜೋಡಿಸಿರುವ ಮಕ್ಕಳನ್ನು ಶರಣಾಗುವಂತೆ ಮನವೊಲಿಸಿ ಮುಖ್ಯವಾಹಿನಿಗೆ ಮರಳುವಬಂತೆ ಮಾಡಬೇಕು. ಒಂದು ವೇಳೆ ಶರಣಾಗದೇ ಗನ್ ಹಿಡಿದರೆ ಅವರನ್ನು ಸೇನೆ ನಿರ್ಮೂಲನೆ ಮಾಡುತ್ತದೆ ಎಂದರು.

    ಸೋಮವಾರ ನಡೆದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಸೇರಿದಂತೆ ಒಬ್ಬ ಪೊಲೀಸ್ ಪೇದೆ ಹುತಾತ್ಮರಾಗಿದ್ದರು. ಕಾರ್ಯಾಚರಣೆಯಲ್ಲಿ ಜೈಶ್ ಉಗ್ರ ಸಂಘಟನೆಯ ಕಮಾಂಡರ್ ಕಮ್ರಾನ್ ಸೇರಿದಂತೆ ಮೂವರನ್ನ ಸೇನಾಪಡೆ ಹೊಡೆದುರುಳಿಸಿತ್ತು. ಉಗ್ರ ಕಮ್ರಾನ್ ಪುಲ್ವಾಮಾ ದಾಳಿಯ ಹಿಂದಿದ್ದ ಪ್ರಮುಖ ಸಂಚುಕೋರ ಎಂದು ಸೇನೆ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡದಿಂದ ವೀರಯೋಧ ಗುರು ಕುಟುಂಬಕ್ಕೆ ಧನಸಹಾಯ

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡದಿಂದ ವೀರಯೋಧ ಗುರು ಕುಟುಂಬಕ್ಕೆ ಧನಸಹಾಯ

    ಮಂಡ್ಯ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ವೀರಯೋಧ ಎಚ್ ಗುರು ಅವರ ಕುಟುಂಬದವರನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದೆ. ಇದೇ ವೇಳೆ ಭಾನುವಾರದ ಚಿತ್ರಮಂದಿರದ ಕಲೆಕ್ಷನ್ ಮೊತ್ತದ ಹಣವನ್ನು ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ನೀಡಿದೆ.

    ಚಿತ್ರದ ಪ್ರಮುಖ ನಟರಾದ ತಬಲಾ ನಾಣಿ, ಅಪೂರ್ವಶ್ರೀ, ಸಂಜನಾ ಆನಂದ್, ನಿರ್ದೇಶಕ ಕುಮಾರ್, ನಿರ್ಮಾಪಕರಾದ ಡಾ.ಡಿ.ಎಸ್.ಮಂಜುನಾಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಅವರು ಗುರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

    ಈ ವೇಳೆ ಮಾತನಾಡಿದ ಹಿರಿಯ ನಟ ತಬಲ ನಾಣಿ ಅವರು, ದೇಶ ಕಾಯುವವರು ದೇವರು ಎಂಬ ಭಾವನೆ ನಮ್ಮದು. ಗುರು ಅವರ ಅಂತಿಮ ದರ್ಶನ ಪಡೆಯಲು ಕೂಡ ಅಂದು ಆಗಮಿಸಿದ್ದೇವು. ಆದರೆ ಆ ವೇಳೆ ಕುಟುಂಬಸ್ಥರನ್ನು ಮಾತನಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಇಡೀ ತಂಡ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಅದಕ್ಕಿಂತ ನಮ್ಮಿಂದ ಹೆಚ್ಚೇನು ಮಾಡಲು ಸಾಧ್ಯ, ನಮ್ಮ ತಂಡದಿಂದ ಕಿರು ಸಹಾಯವನ್ನು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದರು.

    ಬಳಿಕ ಮಾತನಾಡಿದ ನಟಿ ಅಪೂರ್ವ ಶ್ರೀ ಅವರು, ಸಾವು ಎಲ್ಲರಿಗೂ ಬರುತ್ತದೆ. ಆದರೆ ಇಡೀ ದೇಶವೇ ನೆನೆಯುವಂತಹ ರೀತಿಯಲ್ಲಿ ಗುರು ಅವರ ಸಾವಿನ ಘಟನೆ ನಡೆದಿದೆ. ಪ್ರತಿಕ್ಷಣಾ ನಮ್ಮನ್ನು ಕಾಯುವ ಯೋಧರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಇನ್ನು ಮುಂದಾದರು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಭಾವುಕರಾದರು.

    ನಿರ್ಮಾಪಕ ಮಂಜುನಾಥ್ ಅವರು ಮಾತನಾಡಿ, ನಮ್ಮ ಸಿನಿಮಾ ಬಿಡುಗಡೆಯ ದಿನವೇ ದುರಂತ ನಡೆದಿತ್ತು. ನಮಗೆ ತೀರ ನೋವು ತಂದಿತ್ತು. ನಾನು ಸೈನ್ಯಕ್ಕೆ ಸೇರಲು ಹೋಗಿ ಫೇಲ್ ಆಗಿ ವಾಪಸ್ ಬಂದೆ. ಸಿನಿಮಾದಲ್ಲಿ ಸೈನಿಕರ ಬಗ್ಗೆ ಹೇಳಲು ಯತ್ನಿಸಿದ್ದೆ. ನನ್ನ ಹಿಂದಿನ ಸಿನಿಮಾ ಸಂಯುಕ್ತ 2 ಸಿನಿಮಾ ಕೂಡ ಯೋಧರ ಹಿನ್ನೆಲೆಯಲ್ಲಿ ಆಯ್ಕೆ ಮಾಡಿಕೊಂಡಿದ್ದೆ. ಅಂದು ಕೂಡ ಸಿನಿಮಾದಲ್ಲಿ ಬಂದ ಸ್ವಲ್ಪ ಹಣವನ್ನು ಯೋಧರಿಗೆ ನೀಡಿದ್ದೆ. ಅದೇ ರೀತಿ ಇಂದು ಕೂಡ ಮಾಡಿದ್ದೇನೆ. ಯೋಧರ ಬೆಂಬಲಕ್ಕೆ ನಿಲ್ಲುವ ನಮ್ಮ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv