Tag: ಇಂಡಿಗೋ ವಿಮಾನ

  • ಬ್ಯಾಗ್‍ನಲ್ಲಿ ಬಾಂಬ್ ಇದೆ  ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ಪಾಟ್ನಾ: ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ನನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ರಂಪಾಟ ಮಾಡಿರುವ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ.

    ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ 6E- 2126 ಪ್ರಯಾಣಿಸುತ್ತಿದ್ದ ರಿಷಿ ಚಂದ್ ಸಿಂಗ್ ಬೇಡಿ ನನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಸಹಪ್ರಯಾಣಿಕರಿಗೆ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ವಿಮಾನವನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬಳಿಕ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದಾಗ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದಿದೆ. ಇದನ್ನೂ ಓದಿ: ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ರಿಷಿ ಚಂದ್ ಸಿಂಗ್ ಬೇಡಿ ಹುಸಿ ಬಾಂಬ್ ಬೆದರಿಕೆ ಬಳಿಕ ಅತನೊಂದಿಗೆ ಪ್ರಯಾಣಿಸುತ್ತಿದ್ದ ಕುಟುಂಬಸ್ಥರು ಆತನಿಗೆ ಥಳಿಸಿದ್ದಾರೆ. ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ರಿಷಿ ಚಂದ್ ಸಿಂಗ್ ಬೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ

    Live Tv
    [brid partner=56869869 player=32851 video=960834 autoplay=true]

  • ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಟಯರ್ ಬ್ಲಾಸ್ಟ್ ಆದ ಘಟನೆ ಸೀಮವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ಕಣ್ಣೂರು- ಹುಬ್ಬಳ್ಳಿ ಬೆಂಗಳೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ಚಕ್ರ ಬ್ಲಾಸ್ಟ್ ಆಗಿದೆ. ವಿಮಾನದ ಚಕ್ರ ಬ್ಲಾಸ್ಟ್ ಆದರೂ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

    ನಿನ್ನೆ ಸಂಜೆ ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ವಿಮಾನ, ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ 8:30ಕ್ಕೆ ಲ್ಯಾಂಡಿಂಗ್ ಆಗುವ ವೇಳೆ ರನ್ ವೇ ಯಿಂದ 300 ಮೀಟರ್ ದೂರ ಮುಂದೆ ಸಾಗಿ ಲ್ಯಾಂಡಿಂಗ್ ಆಗಿದೆ. ಈ ವೇಳೆ ಕ್ರಾಪ್ ವಿಂಡ್ ಪರಿಣಾಮದಿಂದ ವಿಮಾನದ ಮುಂದಿನ ಟಯರ್ ಬ್ಲಾಸ್ಟ್ ಆದ ಕೂಡಲೇ ಎಚ್ಚೆತ್ತ ಪೈಲಟ್ ಗಳು ವಿಮಾನವನ್ನುಸ ಮತ್ತೆ ಟೇಕಾಫ್ ಮಾಡಿ ಮತ್ತೊಮ್ಮೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

    ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಈ ವಿಮಾನದಲ್ಲಿ 7 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಲ್ಲದೇ ವಿಮಾನದಲ್ಲಿ ಇಬ್ಬರು ಪೈಲೆಟ್ ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ

    ಇದೇ ವಿಮಾನದ ಮೂಲಕ ಹುಬ್ಬಳ್ಳಿಯಿಂದ 18 ಜನರು ಬೆಂಗಳೂರಿಗೆ ಪ್ರಯಾಣ ಮಾಡಬೇಕಾಗಿತ್ತು. ಟಯರ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣವನ್ನ ರದ್ದು ಮಾಡಲಾಗಿದ್ದು, ಕಣ್ಣೂರಿನಿಂದ ಬಂದ ಪ್ರಯಾಣಿಕರಿಗೆ ಖಾಸಗಿ ಹೊಟೇಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

    ಇಂಡಿಗೋ ವಿಮಾನದ ಟಯರ್ ಬ್ಲಾಸ್ಟ್ ಆದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಂಡ ಇಂದು ಪರಿಶೀಲನೆ ನಡೆಸಲಿದ್ದು. ಇಂಡಿಗೋ ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ವಿಮಾನದ ಟೈಯರ್ ಬದಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

  • ಒಂದು ಗಂಟೆ ಕಾಲ ಆಗಸದಲ್ಲಿ ಸುತ್ತು ಹೊಡೆದ ವಿಮಾನ

    ಒಂದು ಗಂಟೆ ಕಾಲ ಆಗಸದಲ್ಲಿ ಸುತ್ತು ಹೊಡೆದ ವಿಮಾನ

    – 9 ಸುತ್ತು ಹೊಡೆದ ಇಂಡಿಗೋ ವಿಮಾನ

    ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗಲು ಸಾಧ್ಯವಾಗದೆ ಒಂದು ಗಂಟೆ ಕಾಲ ಆಗಸದಲ್ಲಿಯೇ ಸುತ್ತು ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೇರಳದಲ್ಲಿನ ವಿಮಾನ ದುರಂತ ಮಾಸುವ ಮುನ್ನವೇ ಹವಾಮಾನ ವೈಪರೀತ್ಯದಿಂದ ಮತ್ತೊಂದು ಆತಂಕ ಇಂಡಿಗೋ ವಿಮಾನಕ್ಕೆ ಎದುರಾಗಿತ್ತು. ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡಿಂಗ್ ಆಗದೆ ಕೇರಳದಲ್ಲಿ ವಿಮಾನ ಪತನ ಸಂಭವಿಸಿತ್ತು. ಇದರ ಬೆನ್ನಲ್ಲೆ ಇಂದು ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನ ಒಂದು ಗಂಟೆಯ ಕಾಲ ಆಗಸದಲ್ಲಿ ಸುತ್ತು ಹೊಡೆದಿದೆ.

    ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಆಗದೆ ಆಗಸದಲ್ಲಿ 9 ಸುತ್ತು ಹೊಡೆದಿದೆ. 60 ಪ್ರಯಾಣಿಕರನ್ನ ಹೊತ್ತು ಆಗಮಿಸಿದ ವಿಮಾನ ಮುಂಜಾನೆ 8.55ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಲ್ಯಾಂಡಿಂಗ್‍ಗೆ ಅನುಮತಿ ನೀಡದ ಪರಿಣಾಮ ಒಂದು ಗಂಟೆಯ ಕಾಲ ವಿಮಾನ ಆಗಸದಲ್ಲಿ ಸುತ್ತು ಹೊಡೆಯಿತು.

    ಒಂದು ಗಂಟೆ ನಂತರ ಇಂಡಿಗೋ 6E7162 ಎಟಿಆರ್ ವಿಮಾನ ಲ್ಯಾಂಡಿಗ್ ಆಗುವ ಮೂಲಕ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದ್ದಾರೆ. ಇದೇ ವಿಮಾನದಲ್ಲಿ ಅನಂತ್ ಕುಮಾರ್ ಹೆಗಡೆ ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಕಾರವಾರಕ್ಕೆ ತೆರಳಿದ್ದರು. ವಿಮಾನದ ಲ್ಯಾಂಡಿಂಗ್ ಸಮಸ್ಯೆಯಾದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಕ್ಕೂ ಸಹ ಒಳಗಾಗಿದ್ದರು.

  • ಬಾರದ ಇಂಡಿಗೋ ವಿಮಾನ – ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

    ಬಾರದ ಇಂಡಿಗೋ ವಿಮಾನ – ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

    ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡಬೇಕಿದ್ದ ಇಂಡಿಗೋ 6ಇ-413 ವಿಮಾನ ಹಾರಾಟ ವಿಳಂಬವಾಗಿದೆ.

    ಇಂದು ಬೆಳಗ್ಗೆ 9 ಗಂಟೆ 5 ನಿಮಿಷಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಇದುವರೆಗೂ ಕೂಡ ಹಾರಾಟ ನಡೆಸಿಲ್ಲ. ಹೀಗಾಗಿ ಮಂಗಳೂರಿಗೆ ತೆರಳಲು 7:00 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪರದಾಡುವಂತಾಗಿದೆ.

    ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿಮಾನ ಹಾರಾಟದಲ್ಲಿ ವಿಳಂಬವಾಗುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಕಾಫಿ ತಿಂಡಿ ಸಹಾಯ ಇಲ್ಲದೆ ಏರ್ ಪೋರ್ಟ್ ನಲ್ಲಿ ನಾವು ಪರದಾಡುವಂತಾಗಿದೆ ಅಂತ ಇಂಡಿಗೋ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟ!

    ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟ!

    ಹೈದರಾಬಾದ್: ನಟಿ ಮತ್ತು ವೈಎಸ್‍ಆರ್ ಶಾಸಕಿ ರೋಜಾ ಮತ್ತು ನಾಲ್ಕು ಸಿಬ್ಬಂದಿಗಳು ಸೇರಿದಂತೆ 72 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟಗೊಂಡಿರುವ ಘಟನೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಈ ಘಟನೆ ಬುಧವಾರ ರಾತ್ರಿ 11.25 ಕ್ಕೆ ಸಂಭವಿಸಿದ್ದು, ಸದ್ಯಕ್ಕೆ ವಿಮಾನದಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಅಲ್ಲಿನ ಜನರು ಭಯಗೊಂಡಿದ್ದರು. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ತಂಡವು ಧಾವಿಸಿ ಯಾರಿಗೂ ತೊಂದರೆಯಾಗದಂತೆ ಪ್ರಯಾಣಿಕರನ್ನ ರಕ್ಷಿಸಿದ್ದಾರೆ.

    ಫ್ಲೈಟ್ 6ಎಫ್ 7117 ಎಟಿಆರ್(ಏಕ್ರಾಫ್ಟ್) ತಿರುಪತಿಯಿಂದ ಹೈದರಾಬಾದ್ ಗೆ ಪ್ರಯಾಣ ಬೆಳೆಸಿತ್ತು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕದಾಗ ಸಂದರ್ಭದಲ್ಲಿ ವಿಮಾನದ ಟೈರ್ ಸ್ಫೋಟಗೊಂಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಪ್ರಯಾಣಿಕರು, ಒಂದು ಮಗು ಮತ್ತು ನಾಲ್ಕು ಸಿಬ್ಬಂದಿಗಳನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.

    ಪೈಲಟ್ ಪ್ರಯಾಣಿಕರನ್ನು ಶಾಂತವಾಗಿರಲು ಮತ್ತು ಕುಳಿತುಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ವಿಮಾನದಿಂದ ಸುರಕ್ಷಿತವಾಗಿ ಬಂದ ಪ್ರಯಾಣಿಕರು ತಿಳಿಸಿದ್ದಾರೆ.

    ಬೆಂಗಳೂರಿನಿಂದ ವಿಜಯವಾಡಕ್ಕೆ ಬರುತ್ತಿದ್ದ ಮತ್ತೊಂದು ಇಂಡಿಗೋ ವಿಮಾನ 6ಇ-7204, ಕಳೆದ ರಾತ್ರಿ ರನ್ ವೇ ಯಲ್ಲಿ ಸ್ಕೀಡ್ ಆಗಿತ್ತು ಎಂದು ಖಾಸಗಿ ಮಾಧ್ಯಮವೊಂದು ತಿಳಿಸಿದೆ.