Tag: ಇಂಡಸ್ ಇಂಡ್ ಬ್ಯಾಂಕ್

  • ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಇಂಡಸ್‍ಇಂಡ್ ಬ್ಯಾಂಕ್

    ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಇಂಡಸ್‍ಇಂಡ್ ಬ್ಯಾಂಕ್

    ದಾವಣಗೆರೆ: ಶಾರ್ಟ್ ಸರ್ಕ್ಯೂಟ್‍ನಿಂದಾಗಿ ನಗರದಲ್ಲಿಯ ಇಂಡಸ್‍ಇಂಡ್ ಬ್ಯಾಂಕ್ ಬೆಂಕಿಗಾಹುತಿಯಾಗಿದೆ. ನಗರದ ಬಾಪೂಜಿ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಇಂಡಸ್ ಇಂಡ್ ಬ್ಯಾಂಕ್‍ಗೆ ಬೆಂಕಿ ಹತ್ತಿಕೊಂಡಿದೆ.

    ಭಾನುವಾರ ತಿಂಗಳ ಕೊನೆಯಾದ್ದರಿಂದ ಬ್ಯಾಂಕ್ ಸಿಬ್ಬಂದಿ ರಾತ್ರಿ 9 ಗಂಟೆಯವರೆಗೂ ಕೆಲಸ ಮಾಡಿದ್ದಾರೆ. ಸುಮಾರು 9.30ಕ್ಕೆ ಬ್ಯಾಂಕ್ ಮುಚ್ಚಿ ಹೊರಬಂದಿದ್ದಾರೆ. ಈ ವೇಳೆ ಬ್ಯಾಂಕ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್‍ಗೆ ಮಾಹಿತಿ ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

    ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬ್ಯಾಂಕ್‍ನಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಬೆಂಕಿಯಲ್ಲಿ ಸುಟ್ಟುಕರಕಲಾಗಿವೆ. ಇನ್ನೂ ಲಾಕರ್‍ನಲ್ಲಿ ಇಟ್ಟಿದ್ದ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಯೋಗೇಂದರ್ ತಿಳಿಸಿದ್ದಾರೆ.