ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾನುವಾರ ಮಧ್ಯರಾತ್ರಿಯಾಗುವ ಮುನ್ನವೇ ದೇಶದಾದ್ಯಂತ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಪಾಕ್ ದೇಶ ಕತ್ತಲಲ್ಲಿ ಮುಳುಗಿತು. ಅದರಲ್ಲೂ ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಮುಲ್ತಾನ್‍ನಲ್ಲಿ ಕತ್ತಲೆ ತೀವ್ರವಾಗಿ ಆವರಿಸಿತು.
ವಿದ್ಯುತ್ ಸ್ಥಗಿತ ವಿಚಾರವಾಗಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದ್ಯುತ್ ಸಚಿವ ಅಯೂಬ್ ಖಾನ್, ವಿದ್ಯುತ್ ಸ್ಥಗಿತಕ್ಕೆ ಕಾರಣವೆನೆಂಬುವುದನ್ನು ತಿಳಿದುಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ರಾಷ್ಟ್ರೀಯ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿನ ಆವರ್ತನದಲ್ಲಿ ಗುಡುವಿನ ಗ್ರಿಡ್ ಇದ್ದಕ್ಕಿದ್ದಂತೆ 50 ರಿಂದ ಶೂನ್ಯಕ್ಕೆ ಇಳಿದಿದೆ. ಇದರಿಂದಾಗಿ ಧಿಡೀರ್ ವಿದ್ಯುತ್ ಪ್ರಸರಣ ವ್ಯವಸ್ಥೆಯ ಆವರ್ತನ ಸ್ಥಗಿತಗೊಂಡ ಪರಿಣಾಮ ದೇಶಾದ್ಯಂತ ವಿದ್ಯುತ್ ಸ್ಥಗಿತವಾಗಿದೆ. ಹಾಗಾಗಿ ಜನರು ಶಾಂತಿಯಾಗಿರಬೇಕೆಂದು ಎಂದು ಹೇಳಿದರು.

ಪಾಕಿಸ್ತಾನದಲ್ಲಿ ವಿದ್ಯುತ್ ಸ್ಥಗಿತ ವಿಚಾರವಾಗಿ ಟ್ವೀಟ್ ಮಾಡಿರುವ ಇಸ್ಲಾಮಾಬಾದ್ ಜಿಲ್ಲಾಧಿಕಾರಿ ಹಮ್ಜಾ ಶಫ್ಕಾತ್, ನ್ಯಾಷನಲ್ ಟ್ರಾನ್ಸ್‍ಮಿಷನ್ ಡೆಸ್ಪ್ಯಾಚ್ ಕಂಪನಿಯ ಮಾರ್ಗಗಳು ವಿಫಲಗೊಂಡ ಪರಿಣಾಮ ವಿದ್ಯುತ್ ಸ್ಥಗಿತಗೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಬರಲು ಕೆಲವು ಸಮಯಬೇಕಾಗುತ್ತದೆ ಎಂದು ತಿಳಿಸಿದರು.
ವಿದ್ಯುತ್ ಸ್ಥಗಿತದಿಂದ ಪಾಕಿಸ್ತಾನದಲ್ಲಿ ಮೊಬೈಲ್ ಮತ್ತು ಇಂಟರ್‍ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಿತು. ಅಲ್ಲದೆ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಕತ್ತಲೆ ಆವರಿಸಿತು. ಇಡೀ ದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಈವರೆಗೂ 68,000 ಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ ಎಂದು ಭಾರತ ಮತ್ತು ಪಾಕಿಸ್ತಾನದ ಉನ್ನತ ಟ್ವೀಟರ್ ಪ್ರವೃತ್ತಿ ತಿಳಿಸಿದೆ.
https://twitter.com/OmarAyubKhan/status/1348003204315959298
ವಿದ್ಯುತ್ ಸ್ಥಗಿತವನ್ನು ಕೆಲವರು ಅಪಹಾಸ್ಯ ಮಾಡಿದರೆ ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ವಿದ್ಯುತ್ ಬರಲೆಂದು ದೇವರಿಗೆ ಪ್ರಾರ್ಥಿಸಿದ್ದಾರೆ.











