Tag: ಇಂಟರ್ನೆಟ್ ಎಕ್ಸ್‌ಪ್ಲೋರರ್

  • 27 ವರ್ಷಗಳ ಸೇವೆ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ

    27 ವರ್ಷಗಳ ಸೇವೆ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ

    ವಾಷಿಂಗ್ಟನ್: ಮೈಕ್ರೋಸಾಫ್ಟ್‌ನ ಹಳೆಯ ಬ್ರೌಸರ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ತನ್ನ ನಿವೃತ್ತಿಯನ್ನು ಘೋಷಿಸಿದೆ. 27 ವರ್ಷಗಳ ಸುದೀರ್ಘ ಸೇವೆಯ ಬಳಿಕ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅಂತಿಮವಾಗಿ ಜೂನ್ 15ರಂದು ಸ್ಥಗಿತಗೊಳ್ಳಲಿದೆ.

    ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಮೊದಲು 1995 ರಲ್ಲಿ ವಿಂಡೋಸ್ 95 ಗಾಗಿ ಆಡ್ ಆನ್ ಪ್ಯಾಕೇಜ್ ಆಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಕಂಪನಿ ಪ್ಯಾಕೇಜ್‌ನ ಭಾಗವಾಗಿ ಬ್ರೌಸರ್ ಅನ್ನು ಉಚಿತವಾಗಿ ನೀಡಲು ಪ್ರಾರಂಭಿಸಿತು.

    2003ರಲ್ಲಿ ಶೇ.95 ರಷ್ಟು ಬಳಕೆಯನ್ನು ಮಾಡಲಾಗುತ್ತಿದ್ದು, ಇಂಟರ್‌ನೆಟ್ ಲೋಕದಲ್ಲೇ ಉತ್ತುಂಗಕ್ಕೇರಿತ್ತು. ಬಳಿಕ ಇತರ ಬ್ರೌಸರ್‌ಗಳು ಪ್ರಸಿದ್ಧಿ ಪಡೆದು, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಹಿಂದಿಕ್ಕಿದವು. ಈ ಕಾರಣ ಅದು ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಅನೇಕ ಬ್ರೌಸರ್‌ಗಳು ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಬಳಿಕ ಹುಟ್ಟಿಕೊಂಡಿದ್ದು, ಅವು ಬಳಕೆದಾರರಿಗೆ ಉತ್ತಮ ಇಂಟರ್‌ಫೇಸ್, ವೇಗದ ಇಂಟರ್‌ನೆಟ್ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನೂ ನೀಡಲು ಪ್ರಾರಂಭಿಸಿತು. ಈ ಕಾರಣ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಇತರ ಬ್ರೌಸರ್‌ಗಳೊಂದಿಗೆ ಸ್ಪರ್ಧೆಯನ್ನು ಮುಂದುವರಿಸಲು ಸಾಧ್ಯವಾಗದೇ ಕೇವಲ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

    ಇದೀಗ ವಿಂಡೋಸ್ 10ನ ಕೆಲವು ನಿರ್ದಿಷ್ಟ ಆವೃತ್ತಿಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕಾರ್ಯನಿರ್ವಹಿಸುವುದು ಸ್ಥಗಿತಗೊಳ್ಳಲಿದ್ದು, ಇನ್ನೂ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಮೈಕ್ರೋಸಾಫ್ಟ್ ಎಡ್ಜ್‌ಗೆ ವರ್ಗಾವಣೆಯಾಗುವಂತೆ ಸೂಚಿಸಿದೆ.