Tag: ಇಂಜೆಕ್ಷನ್

  • ನೀವಾದ್ರೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡಿಸಿ- ಸಚಿವರ ಮುಂದೆ ರೋಗಿ ಸಂಬಂಧಿಯ ಅಳಲು

    ನೀವಾದ್ರೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡಿಸಿ- ಸಚಿವರ ಮುಂದೆ ರೋಗಿ ಸಂಬಂಧಿಯ ಅಳಲು

    – 30 ಸಾವಿರ ಹಣ ಕೊಡ್ತೀನಿ, ಇಂಜೆಕ್ಷನ್ ನೀಡಿ

    ಬೀದರ್: ಜಿಲ್ಲೆಯಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬರಿಗೆ ರೆಮ್‍ಡಿಸಿವರ್ ಇಂಜೆಕ್ಷನ್ ಸಿಗದೆ ಕಷ್ಟಪಡುತ್ತಿರುವುದರ ಕುರಿತು ರೋಗಿಯ ಸಂಬಂಧಿಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಮುಂದೆ ಕೈಮುಗಿದು ಅಳಲು ತೋಡಿಕೊಂಡಿದ್ದಾರೆ.

    ತೀವ್ರವಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಕಾರಕಾರಪಳ್ಳಿಯ ಪ್ರದೀಪ್ ಎಂಬ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರದೀಪ್ ಅವರ ಕೊರೊನಾ ವರದಿ ನೆಗೆಟಿವ್ ಇದ್ದರು ಉಸಿರಾಟದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ. ಹೀಗಾಗಿ ಇಂದು ರೆಮ್‍ಡಿಸಿವರ್ ಇಂಜೆಕ್ಷನ್ ಸಿಗುತ್ತಿಲ್ಲಾ. ನಾನು ರೆಮ್‍ಡಿಸಿವರ್ ಇಂಜೆಕ್ಷನ್ ಗಾಗಿ 30 ಸಾವಿರ ಹಣ ಇಟ್ಟುಕೊಂಡು ಓಡಾಡುತ್ತಿದ್ದೇನೆ ಆದರೂ ಸಿಗುತ್ತಿಲ್ಲಾ. ನೀವಾದ್ರೂ ಇಂಜೆಕ್ಷನ್ ಕೊಡಿಸಿ ಎಂದು ಪ್ರಭು ಚವ್ಹಾಣ್ ಗೆ ಕೈಮುಗಿದು 30 ಸಾವಿರ ರೂಪಾಯಿಯ ಹಣದ ಕಂತೆಯನ್ನು ರೋಗಿಯ ಸಂಬಂಧಿ ತೋರಿಸಿದ್ದಾರೆ.

    ಕೂಡಲೇ ಪ್ರಭು ಚವ್ಹಾಣ್ ಅವರು ಜಿಲ್ಲಾಡಳಿತಕ್ಕೆ ತಿಳಿಸಿ ಇಂಜೆಕ್ಷನ್ ಕೊಡಿಸುತ್ತೇನೆ ಎಂದು ಸಮಾಧಾನ ಪಡಿಸಿದರು. ಎಲ್ಲರೂ ಕೂಡ ಹೀಗೆ ಹೇಳುತ್ತಿದ್ದಾರೆ. ನೀವಾದರೂ ಸಮಸ್ಯೆ ಬಗೆಹರಿಸಿ ಎಂದು ಸಚಿವರೊಂದಿಗೆ ರೋಗಿಯ ಸಂಬಂಧಿ ಮನವಿ ಮಾಡಿಕೊಂಡಿದ್ದಾರೆ.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರತೀಶ್ ಕುಮಾರ್, ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಗಡಿ ಜಿಲ್ಲೆ ಬೀದರ್ ನಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ? ಎಂಬ ಅನುಮಾನ ಕೂಡ ಕಾಡತೊಡಗುತ್ತಿದೆ. 25 ರಿಂದ 30 ಸಾವಿರಕ್ಕೆ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟವಾಗುತ್ತಿದ್ದು, ಇದೊಂದು ದೊಡ್ಡ ಮೆಡಿಕಲ್ ಮಾಫಿಯಾ ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಂದು ರೋಗಿಗಳು ಹಣ ಹಿಡಿದು ಕೊಂಡು ಇಂಜೆಕ್ಷನ್ ಗಾಗಿ ಓಡಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

  • ವೈದ್ಯರ ಒಂದು ಇಂಜೆಕ್ಷನ್‍ಗೆ ಯುವಕ ಬಲಿ: ಪೋಷಕರ ಆರೋಪ

    ವೈದ್ಯರ ಒಂದು ಇಂಜೆಕ್ಷನ್‍ಗೆ ಯುವಕ ಬಲಿ: ಪೋಷಕರ ಆರೋಪ

    ದಾವಣಗೆರೆ: ನಾಲ್ಕು ದಿನದ ಹಿಂದೆ ಜ್ವರ ಬಂದಿದೆ ಎಂಬ ಕಾರಣಕ್ಕೆ ವೈದ್ಯರ ಬಳಿ ಇಂಜೆಕ್ಷನ್‍ ಮಾಡಿಸಿಕೊಂಡಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ತಾಲೂಕು ಹಳೇ ಕುಂದುವಾಡ ಗ್ರಾಮ ಪ್ರವೀಣ್ ಮೃತ ಯುವಕ. ಪ್ರವೀಣ್‍ಗೆ ಕಳೆದ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಗ್ರಾಮದಲ್ಲಿದ್ದ ಆಯುಷ್ ಆಯುರ್ವೇದ ವೈದ್ಯಾಧಿಕಾರಿ ಡಾ.ಶಿವಲಿಂಗ ರುದ್ರಪ್ಪ ಜವಳಿ ಅವರ ಕ್ಲಿನಿಕ್‍ಗೆ ಹೋಗಿ ಇಂಜೆಕ್ಷನ್‍ ಮಾಡಿಸಿಕೊಂಡು ಬಂದಿದ್ದ.

    ಇಂಜೆಕ್ಷನ್‍ ಮಾಡಿಸಿಕೊಂಡ ಕೇವಲ ಎರಡು ಗಂಟೆಗೆ ಪ್ರವೀಣ್ ಕೈ ಕಾಲು, ದೇಹ ಊದಿಕೊಳ್ಳಲು ಆರಂಭಿಸಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಪ್ರವೀಣ್‍ನನ್ನು ಡಾ. ಶಿವಲಿಂಗ ಅವರ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯ ಶಿವಲಿಂಗ ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳಿ, ಪ್ರವೀಣ್‍ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ಮೃತಪಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವಿಗೆ ವೈದ್ಯ ಶಿವಲಿಂಗ ಅವರೇ ನೇರ ಕಾರಣ ಎಂದು ಪ್ರವೀಣ್ ಪೋಷಕರು ಆರೋಪಿಸಿದ್ದಾರೆ.

    ವೈದ್ಯ ಶಿವಲಿಂಗ ಜವಳಿ ಮೂರು ವರ್ಷದ ಹಿಂದೆ ಹಳೇ ಕುಂದುವಾಡ ಗ್ರಾಮದಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದರು. ಇಲ್ಲಿ ಚಿಕಿತ್ಸೆ ಪಡೆದ ಅನೇಕರು ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಯಾರೊಬ್ಬರೂ ವೈದ್ಯರ ಬಳಿ ಯಾವುದೇ ಪ್ರಶ್ನೆ ಮಾಡದೆ ಸುಮ್ಮನಿದ್ದರು. ಆದರೆ ಪ್ರವೀಣ್ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಸಂಬಂಧ ಪ್ರವೀಣ್ ಪೋಷಕರು ವೈದ್ಯ ಶಿವಲಿಂಗ ಜವಳಿ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ತನಿಖೆ ಆರಂಭಿಸಿದ್ದಾರೆ.

  • ಎಂಜೆಕ್ಷನ್ ಚುಚ್ಚಿ ಆಟೋದಲ್ಲಿ ಹೋಗುತ್ತಿದ್ದಾಗ ಮಗು ಸಾವು

    ಎಂಜೆಕ್ಷನ್ ಚುಚ್ಚಿ ಆಟೋದಲ್ಲಿ ಹೋಗುತ್ತಿದ್ದಾಗ ಮಗು ಸಾವು

    ಮಡಿಕೇರಿ: ಇಂಜೆಕ್ಷನ್ ರಿಯಾಕ್ಷನ್ ಆಗಿ ಎರಡು ತಿಂಗಳ ಮಗು ಸಾವನ್ನಪಿದೆ ಎಂಬ ಆರೋಪ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಕೇಳಿ ಬಂದಿದೆ.

    ಹಾಕತ್ತೂರಿನ ನಿವಾಸಿ ಅಶೋಕ್ ಪತ್ನಿ ತೇಜಸ್ವಿನಿ ಬಾಣಂತಿತನಕ್ಕಾಗಿ ಭಾಗಮಂಡಲದ ತವರು ಮನೆಯಲ್ಲಿದ್ದರು. ಈ ವೇಳೆ ತನ್ನ ಎರಡು ತಿಂಗಳ ಮಗುವಿಗೆ ಚುಚ್ಚುಮದ್ದು ಕೊಡಿಸಿದ್ದಾರೆ. ಚುಚ್ಚುಮದ್ದು ರಿಯಾಕ್ಷನ್ ಆಗಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.

    ಚುಚ್ಚುಮದ್ದು ಕೊಡಿಸಿ ಆಟೋದಲ್ಲಿ ಮನೆಗೆ ಹೋಗುವಷ್ಟಲ್ಲಿ ಮಗು ಸಂಪೂರ್ಣ ನಿತ್ರಾಣಗೊಂಡಿತ್ತು. ತಕ್ಷಣವೇ ಭಾಗಮಂಡಲದ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಆದರೂ ಭಾಗಮಂಡಲದ ವೈದ್ಯರು ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

    ದಂಪತಿ ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಪರಿಶೀಲಿಸಿ ಒಂದು ಗಂಟೆಯ ಹಿಂದೆಯೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯರು ನಿರ್ಲಕ್ಷ್ಯ ವಹಿಸಿ ಚುಚ್ಚುಮದ್ದು ನೀಡಿದ್ದೇ ಮಗು ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೆಡಿಕಲ್ ಶಾಪ್ ಮಾಲೀಕನಿಂದ ಇಂಜೆಕ್ಷನ್ – ರಕ್ತಕಾರಿ ಸತ್ತ 2ರ ಬಾಲಕಿ

    ಮೆಡಿಕಲ್ ಶಾಪ್ ಮಾಲೀಕನಿಂದ ಇಂಜೆಕ್ಷನ್ – ರಕ್ತಕಾರಿ ಸತ್ತ 2ರ ಬಾಲಕಿ

    ನವದೆಹಲಿ: ಮೆಡಿಕಲ್ ಶಾಪ್ ಮಾಲೀಕ ನೀಡಿದ ಇಂಜೆಕ್ಷನ್‍ಯಿಂದ 2 ವರ್ಷದ ಬಾಲಕಿ ರಕ್ತಕಾರಿ ಸಾವನ್ನಪ್ಪಿರುವ ಘಟನೆ ದೆಹಲಿಯ ಶಹದಾರಾ ಜಿಟಿವಿ ಎನ್‍ಕ್ಲೇವ್ ಪ್ರದೇಶದಲ್ಲಿ ನಡೆದಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬುಧವಾರ ಮಗುವಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದೆ. ಅದಕ್ಕೆ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮೆಡಿಕಲ್ ಶಾಪ್‍ಗೆ ತೆರಳಿ ಮಾತ್ರ ತಂದು ನೀಡಿದ್ದಾಳೆ. ಆದರೆ ಮಾತ್ರೆ ಸೇವಿಸಿದರೂ ಮಗುವಿನ ಕಾಯಿಲೆ ವಾಸಿ ಆಗಿರಲಿಲ್ಲ.

    ಮಾತ್ರೆ ನೀಡಿದರೂ ಜ್ವರ ಮತ್ತು ಕೆಮ್ಮು ಹೋಗಿಲ್ಲ ಎಂದು ಮಗುವನ್ನು ಆಕೆ ಗುರುವಾರ ಮೆಡಿಕಲ್ ಶಾಪ್‍ಗೆ ಮತ್ತೆ ಕರೆದುಕೊಂಡು ಹೋಗಿದ್ದಾಳೆ. ಆಗ ಅಲ್ಲಿ ಮೆಡಿಕಲ್ ಶಾಪ್ ಮಾಲೀಕ ಮಗುವಿಗೆ ಇಂಜೆಕ್ಷನ್ ಮಾಡಿದ್ದಾನೆ. ನಂತರ ಮನೆಗೆ ಬಂದಾಗ ಮಗು ತೀವ್ರ ಅಸ್ವಸ್ಥವಾಗಿ ರಕ್ತದ ವಾಂತಿ ಮಾಡಲು ಶುರು ಮಾಡಿದೆ. ಆಗ ಹೆದರಿದ ತಾಯಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ ಅಲ್ಲಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ

  • ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟ ನರ್ಸ್

    ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟ ನರ್ಸ್

    ಕೋಲಾರ: ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟು ಸರ್ಕಾರಿ ಆಸ್ಪತ್ರೆಯ ನರ್ಸ್ ಎಡವಟ್ಟು ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    5 ವರ್ಷದ ಅಭಿಲಾಷ್ ಎನ್ನುವ ಬಾಲಕನ ಸೊಂಟಕ್ಕೆ ನರ್ಸ್ ಇಂಜೆಕ್ಷನ್ ನೀಡಿದ್ದಾರೆ. ಅಭಿಲಾಷ್ ಜ್ವರದಿಂದ ಬಳಲುತ್ತಿದ್ದನು. ಹೀಗಾಗಿ ಆತನ ಪೋಷಕರು ಚಿಕಿತ್ಸೆಗೆಂದು ಶನಿವಾರ ಸಂಜೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

    ವೈದ್ಯರು, ಅಭಿಲಾಷ್‍ನನ್ನು ತಪಾಸಣೆ ಮಾಡಿದ ನಂತರ ನರ್ಸ್ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಇಂಜೆಕ್ಷನ್‍ನ ಸೂಜಿ ಮುರಿದು ನರ್ಸ್ ಬಾಲಕನ ದೇಹದೊಳಗೆ ಬಿಟ್ಟಿದ್ದಾಳೆ. ಆದರೆ ನೀಡಲ್ ಕಟ್ ಆದ ಮಾಹಿತಿಯನ್ನೂ ನೀಡದೆ ಸಿಬ್ಬಂದಿ ಹಾಗೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ.

    ಅಭಿಲಾಷ್ ಸೊಂಟ ನೋವಿನಿಂದ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸತ್ಯ ಬಯಲಾಗಿದೆ. ಬಳಿಕ ಪೋಷಕರು ಕೆಜಿಎಫ್ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಭಿಲಾಷ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಕಸ ಗುಡಿಸುವ ಮಹಿಳೆಯಿಂದ ರೋಗಿಗೆ ಇಂಜೆಕ್ಷನ್

    ಕಸ ಗುಡಿಸುವ ಮಹಿಳೆಯಿಂದ ರೋಗಿಗೆ ಇಂಜೆಕ್ಷನ್

    ನವದೆಹಲಿ: ಕಸ ಗುಡಿಸುವ ಮಹಿಳೆಯೊಬ್ಬಳು ರೋಗಿಗೆ ಇಂಜೆಕ್ಷನ್ ನೀಡಲು ಮುಂದಾದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಹರಿನಗರದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆದಿದೆ.

    ಮಹಿಳೆ ರೋಗಿಗೆ ಇಂಜೆಕ್ಷನ್ ನೀಡಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ರೋಗಿಯ ಕೈಹಿಡಿದುಕೊಂಡು ಇಂಜೆಕ್ಷನ್ ನೀಡಲು ಮುಂದಾಗುತ್ತಾಳೆ. ಈ ವೇಳೆ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮಹಿಳೆ ಇಂಜೆಕ್ಷನ್ ನೀಡದೇ ಸುಮ್ಮನಾಗುತ್ತಾಳೆ.

    ಈ ವಿಡಿಯೋ ನೋಡಿದವರು ಆಘಾತಗೊಂಡಿದ್ದಾರೆ. ಅಲ್ಲದೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಮುಖ್ಯಸ್ಥ ತನಿಖೆ ಶುರು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್, ನಾನು ಕೂಡ ಈ ವಿಡಿಯೋವನ್ನು ನೋಡಿದ್ದೇನೆ. ಅಲ್ಲದೆ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್ ಡ್ಯೂಟಿ ನರ್ಸ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ರೋಗಿಯ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಆದರೆ ಘಟನೆ ಬಗ್ಗೆ ಮಾಹಿತಿ ಪಡೆಯಲು ತನಿಖೆ ಶುರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ವಿಡಿಯೋವನ್ನು ವಾರ್ಡ್ ನಂಬರ್ 4ರಲ್ಲಿ ಸೆರೆ ಹಿಡಿಯಲಾಗಿದ್ದು, ಈ ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಲ್ಲದೆ ಈ ಘಟನೆಗೆ ಕಾರಣ ಆಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ.

  • 9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    ನವದೆಹಲಿ: ಬಡ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‍ಪಿಪಿಎ) 9 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು 87%ದಷ್ಟು ಇಳಿಕೆ ಮಾಡಿದೆ.

    ಈ ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ. ಹಾಗೆಯೇ 100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.

    ಅದೇ ರೀತಿ, ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.

    ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.

    ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

    ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಎನ್‍ಪಿಪಿಎ ದೇಶದಲ್ಲಿ ಔಷಧಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಯೂನಿಯನ್ ಸಚಿವಾಲಯವಾದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.

  • ತಾಯಿ, ತಂಗಿಯನ್ನ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

    ತಾಯಿ, ತಂಗಿಯನ್ನ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

    ಬೆಂಗಳೂರು: ತಾಯಿ ಮತ್ತು ತಂಗಿಗೆ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

    ತಾಯಿ ಶ್ಯಾಮಲಾ ಮತ್ತು ತಂಗಿ ಮೂಕಾಂಬಿಕಾ ಸಾವನ್ನಪ್ಪಿದ ದುರ್ದೈವಿಗಳು. ತಾಯಿ ಮತ್ತು ತಂಗಿ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದು, ವೈದ್ಯ ಗೋವಿಂದರಾಜು ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ವೈಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

    ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ತಾನೋರ್ವ ವೈದ್ಯನಾಗಿದ್ದರೂ, ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಈ ಎಲ್ಲ ತೊಂದರೆಗಳಿಂದ ಬೇಸತ್ತ ಗೋವಿಂದರಾಜು ತಾಯಿ ಮತ್ತು ತಂಗಿಗೆ ಓವರ್ ಡೋಸ್ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ, ತಾನು ಅದೇ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗೋವಿಂದರಾಜು ಸಂಬಂಧಿಕರು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಂಬಂಧಿಕರು ಬರುವಷ್ಟರಲ್ಲಿ ತಾಯಿ ಮತ್ತು ತಂಗಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ತೀವ್ರ ಅಸ್ವಸ್ಥನಾಗಿದ್ದ ಗೋವಿಂದರಾಜುನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Eqq6OdIyUYI

  • ಬಟ್ಟೆನೂ ತೆಗೆಯಲ್ಲ, ಸ್ಪಿರಿಟ್ಟೂ ಹಚ್ಚಲ್ಲ, ಡೈರೆಕ್ಟಾಗಿ ಇಂಜೆಕ್ಷನ್- ವಿಜಯಪುರದಲೊಬ್ಬ ವಿಚಿತ್ರ ಡಾಕ್ಟರ್

    ಬಟ್ಟೆನೂ ತೆಗೆಯಲ್ಲ, ಸ್ಪಿರಿಟ್ಟೂ ಹಚ್ಚಲ್ಲ, ಡೈರೆಕ್ಟಾಗಿ ಇಂಜೆಕ್ಷನ್- ವಿಜಯಪುರದಲೊಬ್ಬ ವಿಚಿತ್ರ ಡಾಕ್ಟರ್

    ವಿಜಯಪುರ: ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ವೈದ್ಯರೊಬ್ಬರು ಡೈರೆಕ್ಟಾಗಿ ಇಂಜೆಕ್ಷನ್ ನೀಡಿ ರೋಗಿಗಳ ಜೀವನದಲ್ಲಿ ಚೆಲ್ಲಾಟವಾಡಿದ ಘಟನೆ ವಿಜಯಪುರದ ಸ್ಟೇಷನ್ ರಸ್ತೆಯ ಬಳಿ ನಡೆದಿದೆ.

    ಡಾ. ಸಚಿನ್ ವಿಚಿತ್ರ ವೈದ್ಯ. ಸಚಿನ್ ರೋಗಿಗಳ ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ಡೈರೆಕ್ಟಾಗಿ ಬಟ್ಟೆ ಮೇಲಿಂದಾನೆ ನರ ಗುರುತಿಸಿ ಇಂಜೆಕ್ಷನ್ ನೀಡುತ್ತಿದ್ದಾನೆ. ವೈದ್ಯರು ಈ ರೀತಿ ಇಂಜೆಕ್ಷನ್ ನೀಡುತ್ತಿರುವುದನ್ನು ಗಮನಿಸಿದ ರೋಗಿಗಳು ಹೀಗೆ ಮಾಡಬೇಡಿ ಅಂತಾ ಹೇಳಿದ್ರು ಅವರ ಮಾತನ್ನು ಕೇಳುತ್ತಿಲ್ಲ.

    ಈ ಆಸ್ಪತ್ರೆಗೆ ಬರಲು ರೋಗಿಗಳು ಹೆದರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಡಾ. ಸಚಿನ್ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೇ ಇನ್ಫೆಕ್ಷನ್ ಆಗುವುದಿಲ್ಲ ಎಂದು ರೋಗಿಗಳು ಕೇಳಿದ್ದರೆ ಇಲ್ಲ ಎಂದು ವೈದ್ಯ ಪ್ರತಿಕ್ರಿಯೆ ನೀಡುತ್ತಾರೆ.

    ಈ ಪ್ರಕರಣದ ಬಗ್ಗೆ ಮೈಸೂರಿನ ಕೆ. ಆರ್ ಆಸ್ಪತ್ರೆಯ ಡಾ. ಯೋಗೇಶ್ ಮಾತನಾಡಿ, ಬಟ್ಟೆ ತೆಗೆಯದೇ ಇಂಜೆಕ್ಷನ್ ಹಾಗೇ ನೀಡುವುದರಿಂದ ಬಟ್ಟೆಯಲ್ಲಿರುವ ಧೂಳು, ಬ್ಯಾಕ್ಟೀರಿಯಾ, ಸೋಂಕು ಎಲ್ಲ ದೇಹದೊಳಗೆ ಹೋಗುತ್ತದೆ. ಇದರಿಂದ ಆ ಜಾಗದಲ್ಲಿ ಪ್ಯಾರಲಿಸೀಸ್, ಒಬ್ಸೆಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡೆಡ್ಲಿ ಇನ್ಫೆಕ್ಷನ್‍ಗಳಾದ ಸ್ಟೇಟನಸ್, ಗ್ಯಾಸ್ ಗ್ಯಾಂಗ್ರಿನ್ ಆದರೆ ಬದುಕುವುದು ಕಷ್ಟ ಎಂದು ಹೇಳಿದ್ದಾರೆ.

    ಇಂಜೆಕ್ಷನ್ ಅನ್ನು ಇದೇ ಜಾಗದಲ್ಲೇ ಕೊಡಬೇಕು ಎಂದು ಎಂಬಿಬಿಎಸ್ ನಲ್ಲಿ ಹೇಳಿಕೊಡುತ್ತಾರೆ. ಆ ನರಗಳಿಗೆ ಗಾಯಗಳಾಗಬಾರದು ಎಂದು ನರಗಳ ಮೇಲೆ ಇಂಜೆಕ್ಷನ್ ನೀಡಲಾಗುತ್ತದೆ. ಎಲ್ಲಿ ಆ ನರ ಓಡಾಡುತ್ತೆ ಆ ನರಗಳಿಗೆ ಇಂಜೆಕ್ಷನ್ ಕೊಡಿ ಎಂದು ಹೇಳಿಕೊಡಲಾಗುತ್ತದೆ ಎಂದು ಯೋಗೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಇಂಪ್ಯಾಕ್ಟ್:
    ವೈದ್ಯನ ಚೆಲ್ಲಾಟದ ವರದಿ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತಿದ್ದಂತೆಯೇ ವೈದ್ಯ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಎಚ್‍ಒ ರಾಜ್ ಕುಮಾರ್ ಭರವಸೆ ನೀಡಿದ್ದು, ಇಂದೇ ಈ ಕುರಿತು ಪರಿಶೀಲನೆಗೆ ತಂಡ ಕಳುಹಿಸೋದಾಗಿ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜ್ವರಕ್ಕೆ ಅಂತಾ ಡಾಕ್ಟರ್ ಇಂಜೆಕ್ಷನ್ ಕೊಟ್ರು- ವ್ಯಕ್ತಿಯ ಇಡೀ ದೇಹದ ಚರ್ಮವೇ ಕಪ್ಪಾಯ್ತು!

    ಜ್ವರಕ್ಕೆ ಅಂತಾ ಡಾಕ್ಟರ್ ಇಂಜೆಕ್ಷನ್ ಕೊಟ್ರು- ವ್ಯಕ್ತಿಯ ಇಡೀ ದೇಹದ ಚರ್ಮವೇ ಕಪ್ಪಾಯ್ತು!

    ಮೈಸೂರು: ಜ್ವರಕ್ಕೆ ಕೊಟ್ಟ ಇಂಜೆಕ್ಷನ್ ಅಡ್ಡಪರಿಣಾಮದಿಂದ ವ್ಯಕ್ತಿಯೊಬ್ಬನ ಚರ್ಮಕ್ಕೆ ಹಾನಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸುರೇಶ್ ಎಂಬವರಿಗೆ ಇಂತಹ ಅನುಭವವಾಗಿದ್ದು, ಇದೀಗ ಅವರು ಆತಂಕಕ್ಕೆ ಒಳಗಾಗಿದ್ದಾರೆ.

    ನಂಜನಗೂಡಿನ ಹೋಟೆಲೊಂದರಲ್ಲಿ ನೌಕರನಾಗಿರುವ ಸುರೇಶ್, ಕೆಲವು ದಿನಗಳ ಹಿಂದೆ ಜ್ವರಕ್ಕಾಗಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.ಈ ವೇಳೆ ಅಲ್ಲಿನ ವೈದ್ಯರಾದ ಡಾ. ಚಿದಾನಂದ ಮೂರ್ತಿ, ಸುರೇಶ್ ಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಸ್ವಲ್ಪ ಸಮಯಕ್ಕೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಬಳಿಕ ಇಡೀ ದೇಹ ಆವರಿಸಿದೆ. ಯಾವುದೋ ಕಾಯಿಲೆ ಬಂದಿರಬಹುದೆಂದು ತಿಳಿದುಕೊಂಡು ಮಾನಸಿಕವಾಗಿ ಸುರೇಶ್ ಕುಗ್ಗಿದ್ದಾರೆ.

    ಸುರೇಶ್ ಪರಿಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ ಮಂಜು ಕೂಡಲೇ ವೈದ್ಯ ಚಿದಾನಂದಮೂರ್ತಿ ಅವರನ್ನ ಸಂಪರ್ಕಿಸಿದಾಗ ತಾವು ಕೊಟ್ಟ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಆಗಿದೆ. ನಾನೇ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ. ವೈದ್ಯರ ಎಡವಟ್ಟಿನಿಂದ ಸುರೇಶ್ ಗೆ ಇಲ್ಲವಾಗಿದ್ದ ಕಾಯಿಲೆ ಬಂದಿದ್ದು, ಮಾಡದ ತಪ್ಪಿಗೆ ಅಮಾಯಕ ಶಿಕ್ಷೆ ಅನುಭವಿಸುವಂತಾಗಿದೆ.