Tag: ಇಂಗ್ಲೆಂಡ್ ಕ್ರಿಕೆಟ್

  • WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಫೈನಲ್‌ (WTC Finals) ಪಂದ್ಯಗಳನ್ನು 2031ರ ವರೆಗೆ ಇಂಗ್ಲೆಂಡ್‌ನಲ್ಲೇ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನಿರ್ಧರಿಸಿದೆ. ಈ ಕುರಿತು ಐಸಿಸಿ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

    ಹೌದು. ಸಿಂಗಾಪುರದಲ್ಲಿ ನಡೆದ ಮಹತ್ವದ ಸಭೆಯ ನಂತರ ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲೇ (England) ನಡೆಸಲು ತೀರ್ಮಾನಿಸಿದ್ದು, ಅನುಮೋದನೆಯನ್ನೂ ನೀಡಲಾಗಿದೆ. ಕಳೆದ ಮೂರು ಆವೃತ್ತಿಯ WTC ಫೈನಲ್‌ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆದಿದೆ ಅನ್ನೋದು ವಿಶೇಷ.

    ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (England Cricket Board)ಯೇ ಮೊದಲ ಆವೃತ್ತಿಯಿಂದಲೂ WTC ಫೈನಲ್‌ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಈಗ ಮುಂದೆ 2027, 2029, 2031ರ ಆವೃತ್ತಿಗಳೂ ಇಂಗ್ಲೆಂಡ್‌ನಲ್ಲೇ ನಡೆಸಲು ಅನುಮತಿ ಪಡೆದಿದೆ. ಇಂಗ್ಲೆಂಡ್‌ನಲ್ಲಿ ವ್ಯವಸ್ಥೆಗಳ ಅನುಕೂಲ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಐಸಿಸಿ ಹೇಳಿದೆ. ಆದ್ರೆ ಇನ್ನೂ ಸ್ಥಳಗಳನ್ನ ನಿಗದಿಪಡಿಸಿಲ್ಲ.

    2021ರಲ್ಲಿ ಚೊಚ್ಚಲ ಆವೃತ್ತಿಯ ಫೈನಲ್‌ ಪಂದ್ಯವನ್ನು ಇಂಗ್ಲೆಂಡ್‌ನ ಸೌತಾಂಪ್ಟನ್, 2023ರಲ್ಲಿ ದಿ ಓವಲ್ ಹಾಗೂ ಪ್ರಸಕ್ತ ವರ್ಷ ಲಾರ್ಡ್ಸ್ ನಲ್ಲಿ WTC ಫೈನಲ್‌ ಪಂದ್ಯ ನಡೆದಿತ್ತು. ಮೊದಲೆರಡು ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಚಾಂಪಿಯನ್‌ ಆಗಿದ್ದರೆ, ಭಾರತ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯಲ್ಲಿ ಭಾರತ ನಾಕೌಟ್‌ನಿಂದ ಹೊರಗುಳಿದ ಕಾರಣ ದಕ್ಷಿಣ ಆಫ್ರಿಕಾ ಹಾಗೂ ಆಸೀಸ್‌ ನಡುವೆ ಫೈನಲ್‌ ಪಂದ್ಯ ನಡೆದಿತ್ತು. ಲಾರ್ಡ್‌ ಅಂಗಳದಲ್ಲಿ ಚಾಂಪಿಯನ್‌ ಆದ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿ ಚೋಕರ್ಸ್‌ ಹಣೆಪಟ್ಟಿಯನ್ನೂ ಕಳಚಿತು.

  • ಟೆಸ್ಟ್ ಕ್ರಿಕೆಟ್‍ನಲ್ಲಿ ಕೊರೊನಾ ಸಬ್‍ಸ್ಟಿಟ್ಯೂಟ್?- ಐಸಿಸಿಗೆ ಇಸಿಬಿ ಮನವಿ

    ಟೆಸ್ಟ್ ಕ್ರಿಕೆಟ್‍ನಲ್ಲಿ ಕೊರೊನಾ ಸಬ್‍ಸ್ಟಿಟ್ಯೂಟ್?- ಐಸಿಸಿಗೆ ಇಸಿಬಿ ಮನವಿ

    ಲಂಡನ್: ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ವಿಶೇಷ ಬದಲಾವಣೆಯೊಂದನ್ನು ತರಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಚಿಂತನೆ ನಡೆಸಿದೆ. ಇದುವರೆಗೂ ಪಂದ್ಯದ ಸಮಯದಲ್ಲಿ ಆಟಗಾರ ಗಾಯಗೊಂಡರೆ ಕನ್ಕೂಷನ್ ಸಬ್‍ಸ್ಟಿಟ್ಯೂಟ್ ಪ್ಲೇಯರ್ ಅಥವಾ ಸಬ್‍ಸ್ಟಿಟ್ಯೂಟ್ ಫಿಲ್ಡರನ್ನು ತೆಗೆದುಕೊಳ್ಳಲು ಐಸಿಸಿ ನಿಯಮಗಳ ಅಡಿ ಅವಕಾಶ ನೀಡಲಾಗಿದೆ. ಆದರೆ ಈಗ ಕೊರೊನಾ ವೈರಸ್ ರಿಪ್ಲೇಸ್ಮೆಂಟ್ (ಸಬ್‍ಸ್ಟಿಟ್ಯೂಟ್)ಗೆ ಅವಕಾಶ ನೀಡಬೇಕು ಎಂದು ಐಸಿಸಿಗೆ ಇಸಿಬಿ ಮನವಿ ಮಾಡಿದೆ. ಅಲ್ಲದೇ ತಮ್ಮ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿದೆ ಎಂಬ ವಿಶ್ವಾಸವನ್ನು ಇಸಿಬಿ ವ್ಯಕ್ತಪಡಿಸಿದೆ.

    ಕೋವಿಡ್-19 ಸಬ್‍ಸ್ಟಿಟ್ಯೂಟ್ ಕುರಿತ ಅಂಶಗಳ ಬಗ್ಗೆ ಐಸಿಸಿ ಇನ್ನು ಕೆಲ ಅಂಶಗಳನ್ನು ಪರಿಗಣೆಗೆ ತೆಗೆದುಕೊಳ್ಳಬೇಕಿದೆ. ಅಲ್ಲದೇ ನಮ್ಮ ಮನವಿಗೆ ಅಂಗೀಕಾರ ನೀಡುವ ಅಗತ್ಯವಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಟೂರ್ನಿಗೂ ಮುನ್ನವೇ ಈ ಮನವಿಯನ್ನು ಜಾರಿ ಮಾಡುವ ಪ್ರಯತ್ನ ಸಾಗುತ್ತದೆ ಎಂದು ಇಸಿಬಿ ಈವೆಂಟ್ ಡೈರೆಕ್ಟರ್ ಸ್ಟೀವ್ ಎಲ್ವರ್ತಿ ತಿಳಿಸಿದ್ದಾರೆ. ಅಲ್ಲದೇ ಏಕದಿನ ಮತ್ತು ಟಿ20 ಕ್ರಿಕೆಟ್‍ನಿಂದ ಈ ಬದಲಾವಣೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.

    ಕೊರೊನಾ ಕಾರಣದಿಂದ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ ನಿಂದ ಇಸಿಬಿ ಪ್ರಾರಂಭಿಸಲಿದೆ. ಬಯೋ ಸೆಕ್ಯೂಲರ್ ವಾತಾವರಣದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧದ ಟೂರ್ನಿಗಳನ್ನು ಆಯೋಜಿಸುವುದಾಗಿ ಇಸಿಬಿ ಈ ಹಿಂದೆಯೇ ತಿಳಿಸಿತ್ತು. ಇಂಗ್ಲೆಂಡ್ ಸರ್ಕಾರ ಅನುಮತಿ ಮತ್ತು ಮಾರ್ಗದರ್ಶಗಳ ಅನ್ವಯ ಟೂರ್ನಿಯನ್ನು ಏರ್ಪಡಿಸುವುದಾಗಿ ಇಸಿಬಿ ಸ್ಪಷ್ಟಪಡಿಸಿದೆ. ಜೂನ್ ಮೊದಲ ವಾರದವರೆಗೂ ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ಇಂಗ್ಲೆಂಡ್ ಸರ್ಕಾರ ನಿಷೇಧ ಮಾಡಿದೆ. ಜುಲೈ 1 ರಿಂದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ಇದನ್ನು ಓದಿ: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಲೋಚನೆ ಅವಾಸ್ತವಿಕ: ರಾಹುಲ್ ದ್ರಾವಿಡ್

    ಐಸಿಸಿ ನಿಯಮಗಳ ಅನ್ವಯ ಟೆಸ್ಟ್ ಪಂದ್ಯವೊಂದರ ಸಮಯದಲ್ಲಿ ಆಟಗಾರ ಗಾಯಗೊಂಡ ಸಂದರ್ಭದಲ್ಲಿ ಆತನ ಬದಲಿಗೆ ಮತ್ತೊಬ್ಬ ಆಟಗಾರರನ್ನು (ಕನೂಷ್ಕನ್ ಸಬ್‍ಸ್ಟಿಟ್ಯೂಟ್) ಆಡಿಸಬಹುದು. ಬದಲಿ ಆಟಗಾರ ಬ್ಯಾಟ್ ಅಥವಾ ಬೌಲ್ ಮಾಡಬಹುದು. ಆದರೆ ಎರಡೂ ಮಾಡಲು ಸಾಧ್ಯವಿಲ್ಲ. ಉಳಿದಂತೆ ಸಬ್‍ಸ್ಟಿಟ್ಯೂಟ್ ಫಿಲ್ಡರನ್ನು ತೆಗೆದುಕೊಳ್ಳಲು ಅವಕಾಶವಿದೆ.