Tag: ಆ್ಯಸಿಡ್ ನಾಗೇಶ್

  • ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

    ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

    ಬೆಂಗಳೂರು: ಈಗಲೂ ಕೊಟ್ಟರೆ ಅವಳನ್ನೇ ಮದುವೆ ಆಗುತ್ತೇನೆ ಎಂದು ಆ್ಯಸಿಡ್ ನಾಗೇಶ್ ಹೇಳಿದ್ದಾರೆ.

    ಶುಕ್ರವಾರ ಆ್ಯಸಿಡ್ ನಾಗೇಶನನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುವ ಸಂದರ್ಭದಲ್ಲಿ ಯಾಕೋ ಆ್ಯಸಿಡ್ ಹಾಕಿದೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ನಾನು ಆ್ಯಸಿಡ್ ಹಾಕಬೇಕು ಅಂತ ಅಂದುಕೊಂಡಿರಲಿಲ್ಲ. ಆದರೆ ಅವರ ಮನೆಯವರೇ ಆ್ಯಸಿಡ್ ಹಾಕುತ್ತಾನಂತೆ ಅಂತ ಊರು ತುಂಬಾ ಹೇಳಿಕೊಂಡು ಬಂದರು. ಆ್ಯಸಿಡ್ ಹಾಕುವ ಹಿಂದಿನ ದಿನ ಕೂಡ ಆಕೆಯನ್ನು ಭೇಟಿಯಾಗಿದ್ದೆ. ಆದರೆ ನಾನು ಆ್ಯಸಿಡ್ ಹಾಕಬೇಕು ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಎಲ್ಲಾ ಕಡೆ ಹೇಳಿಕೊಂಡು ಬಂದರೋ ಆಗ ಆ್ಯಸಿಡ್ ಹಾಕಿದೆ. ಈಗಲೂ ಅವಳನ್ನು ಕೊಡುತ್ತಾರಾ ಕೇಳಿ ನೋಡಿ ಸರ್. ಅವಳನ್ನೇ ಮದುವೆಯಾಗುತ್ತೇನೆ ಎಂದು ಪೊಲೀಸರ ಮುಂದೆಯೇ ದುರಹಂಕಾರದ ಮಾತುಗಳನ್ನು ಆಡಿದ್ದಾನೆ. ಇದನ್ನೂ ಓದಿ: ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

    ಘಟನೆ ಬಳಿಕ ಹೊಸಕೋಟೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಆಟೋ ಹತ್ತಿ ಹೋಗಿದ್ದೆ. ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಆ್ಯಸಿಡ್ ಎರಚುವ ವೇಳೆ ನಾಗೇಶನ ಕೈಗೂ ಗಾಯಗಳಾಗಿದ್ದು, ತನ್ನ ಕೈ ನೋಡಿದಾಗಲೆಲ್ಲ ಅವಳು ಅಳುವುದೇ ನೆನಪಾಗುತ್ತದೆ ಎಂದು ವಿಕೃತ ಮನಸ್ಸಿನ ಭಾವನೆಯನ್ನು ಹೊರಹಾಕಿದ್ದಾನೆ. ಇದನ್ನೂ ಓದಿ: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

  • ಆ್ಯಸಿಡ್ ಆರೋಪಿಗೆ ಎನ್‍ಕೌಂಟರ್ ಮಾಡಿ, ನರಳಿ ನರಳಿ ಸಾಯ್ಬೇಕು- ಸಂತ್ರಸ್ತೆ ಪೋಷಕರ ಆಗ್ರಹ

    ಆ್ಯಸಿಡ್ ಆರೋಪಿಗೆ ಎನ್‍ಕೌಂಟರ್ ಮಾಡಿ, ನರಳಿ ನರಳಿ ಸಾಯ್ಬೇಕು- ಸಂತ್ರಸ್ತೆ ಪೋಷಕರ ಆಗ್ರಹ

    ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಕೊಂಚ ಚೇತರಿಸಿಕೊಂಡಿದ್ದಾಳೆ. ಆದರೆ ಕಳೆದ 16 ದಿನಗಳಿಂದ ನರಳಾಡ್ತಿದ್ದಾಳೆ. ಇತ್ತ ದಾಳಿಕೋರನಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಆರೋಪಿಯನ್ನು ಚಿತ್ರಹಿಂಸೆ ನೀಡಿ ಸಾಯಿಸ್ಬೇಕು ಅಂತ ಕುಟುಂಬಸ್ಥರು ಆಗ್ರಹಿಸ್ತಿದ್ದಾರೆ.

    ಹೌದು. 16 ದಿನಗಳ ಬಳಿಕ ಆ್ಯಸಿಡ್ ಸೈಕೋ ನಾಗೇಶ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇತ್ತ ಮಗಳ ಸ್ಥಿತಿ ಕಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಯುವತಿಯ ಕುಟುಂಬಸ್ಥರು ಆ್ಯಸಿಡ್ ನಾಗನಿಗೆ ತಕ್ಕ ಶಿಕ್ಷೆ ಆಗಬೇಕು. ಅವನು ಒಂದೇ ಸಲ ಅಲ್ಲ, ನರಳಿ ನರಳಿ ಸಾಕಬೇಕು. ಅಂತಹ ಶಿಕ್ಷೆ ಕೊಡಿ ಅಂತ ಆಗ್ರಹಿಸಿದ್ದಾರೆ.

    ಆ್ಯಸಿಡ್ ಸಂತ್ರಸ್ತೆಯ ಕುಟುಂಬಸ್ಥರು ಪಬ್ಲಿಕ್ ಟಿವಿ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ. ಯುವತಿಯ ದೊಡ್ಡಮ್ಮ ಮಾತಾಡಿ, ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನ ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ, ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರಾತೀ ಕ್ರೂರ ಶಿಕ್ಷೆ ಕೊಡಬೇಕು ಅಂತಾ ಆಗ್ರಹಿಸಿದ್ರು. ಅವನ ಕಾಲು ಮುರಿದು ಭಿಕ್ಷೆ ಬೇಡಲು ಹಾಕ್ಬೇಕು. ನನ್ನ ಮಗಳ ಮುಖ ನೋಡಿ 15 ದಿನಗಳಾಯ್ತು ಅಂತ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ಆ ಪಾಪಿ ನಾಗೇಶ್ ಬೇರೆ ಹೆಣ್ಣು ಮಗಳನ್ನಲ್ಲ, ಅವನ ತಾಯಿ ಮುಖ ನೋಡೋದಕ್ಕೂ ಹೆದರಬೇಕು. ಅಂತಹ ಶಿಕ್ಷೆ ಅವನಿಗೆ ಆಗಬೇಕು ಅಂತ ಯುವತಿ ಚಿಕ್ಕಮ್ಮ ಆಗ್ರಹಿಸಿದರು. ಸಂತ್ರಸ್ತೆಯ ಚಿಕ್ಕಪ್ಪ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ರು. ಪೊಲೀಸ್ ಇಲಾಖೆಗೆ ತುಂಬಾ ಧನ್ಯವಾದ, ಪೊಲೀಸರು ಧೈರ್ಯ ತುಂಬಿದ್ರು. ಹೇಳಿದಂತೆ ಅವನನ್ನ ಅರೆಸ್ಟ್ ಮಾಡಿದ್ದಾರೆ ಧನ್ಯವಾದ ಅಂದ್ರು. ಇತ್ತ ಯುವತಿಯ ಸಹೋದರಿ, ನನ್ನ ತಂಗಿ ಅಲ್ಲಿ ನರಳಾಡ್ತಿದ್ದಾಳೆ. ಅವನು ನನ್ನ ತಂಗಿ ಕಣ್ಣ ಮುಂದೆಯೇ ಸಾಯ್ಬೇಕು ಅಂತ ಒತ್ತಾಯಿಸಿದರು.

    ಯುವತಿಯ ತಂದೆ, ನಾನು ನಾಗೇಶ್ ಜೊತೆ ನಾಲ್ಕು ಮಾತಾಡಬೇಕು. ಅವನು ಹೀಗೆ ಮಾಡಿದ್ದೇಕೆ ಅಂತ ಕೇಳಬೇಕು. ಇನ್ನೂ ಅವಳು ಊಟ ತಿಂತಿಲ್ಲ. ಪೈಪ್ ಮೂಲಕವೇ ಲಿಕ್ವಿಡ್ ಫುಡ್ ಕೊಡ್ತಿದ್ದೀವಿ ಅಂತ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಬೆಂಗಳೂರಿಗೆ ಕರೆತರುವಾಗ ಎಸ್ಕೇಪ್ ಆಗಲು ಯತ್ನ- ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು

    ಒಟ್ಟಿನಲ್ಲಿ ಕಿರಾತಕ ಆ್ಯಸಿಡ್ ನಾಗ ಯುವತಿ ಹಾಗೂ ಕುಟುಂಬ ಜೀವನ ಪೂರ್ತಿಯಾಗಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿ ತಾನು ಕಾವಿಧಾರಿ ವೇಷ ಹಾಕಿಕೊಂಡು ನಾಟಕ ಆಡುತ್ತಿದ್ದ ಆರೋಪಿಗೆ ಪೊಲೀಸರು ತಕ್ಕ ಶಿಕ್ಷೆ ನೀಡಲಿ ಅನ್ನೋದೆ ಎಲ್ಲರ ಆಶಯ.