Tag: ಆ್ಯಸಿಡ್ ದಾಳಿ

  • ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ್ರು!

    ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ್ರು!

    ಬೀದರ್: ಅಪರಿಚಿತ ವ್ಯಕ್ತಿಗಳು ಯುವಕನೊಬ್ಬನ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಘಟನೆ ಬೀದರ್‍ನ ಹನುಯಮಾನ್ ನಗರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಆಸೀಫ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಆಸೀಫ್ ಮುಖದ ಮೇಲೆ ಆ್ಯಸಿಡ್ ಬಿದ್ದ ಪರಿಣಾಮ ಮುಖದ ಮೇಲೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಆಸೀಫ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಆ್ಯಸಿಡ್ ದಾಳಿ ನಡೆಸಿದ ದುಷ್ಕರ್ಮಿಗಳು ಯಾರು ಹಾಗೂ ಏಕೆ ದಾಳಿ ನಡೆಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಗಾಂಧಿ ಗಂಜ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ವಿವಾಹಿತ ಮಹಿಳೆ ಮೇಲೆ ಆಟೋ ಡ್ರೈವರ್ ನಿಂದ ಆ್ಯಸಿಡ್ ದಾಳಿ

    ವಿವಾಹಿತ ಮಹಿಳೆ ಮೇಲೆ ಆಟೋ ಡ್ರೈವರ್ ನಿಂದ ಆ್ಯಸಿಡ್ ದಾಳಿ

    ವಾರಂಗಲ್: ವಿವಾಹಿತ ಮಹಿಳೆಯ ಮೇಲೆ ಆಟೋ ಡ್ರೈವರ್‍ವೊಬ್ಬ ಆ್ಯಸಿಡ್ ದಾಳಿ ನಡೆಸಿರೋ ಘಟನೆ ಬುಧವಾರದಂದು ತೆಲಂಗಾಣದಲ್ಲಿ ನಡೆದಿದೆ. ಕೃತ್ಯ ನಡೆದ ಕೆಲವು ಗಂಟೆಗಳ ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

    ರಿಕ್ಷಾ ಚಾಲಕ ಚಂದು ಬಂಧಿತ ಆರೋಪಿ. ಈತನಿಗೆ ಸಹಕರಿಸಿದ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 24 ವರ್ಷದ ಮಾಧುರಿ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ. ಇವರು ಈ ಹಿಂದೆ ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಚಂದು ಈಕೆಯ ಮೇಲೆ ಕಣ್ಣು ಹಾಕಿದ್ದ. ಆದ್ದರಿಂದ ಮಾಧುರಿ ಕಳೆದ ತಿಂಗಳು ಕೆಲಸ ಬಿಟ್ಟಿದ್ದರು. ನನಗೆ ಈಗಾಗಲೇ ಮದುವೆಯಾಗಿ ಒಬ್ಬಳು ಮಗಳಿದ್ದಾಳೆ ಎಂದರೂ ಚಂದು ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ವರದಿಯಾಗಿದೆ.

    ಬುಧವಾರದಂದು ಮಾಧುರಿ ಕೆಲಸ ಹುಡುಕಿಕೊಂಡು ಹೋಗಿದ್ದರು. ಸ್ವಲ್ಪ ಸಮಯದ ನಂತರ ಆಕೆಯ ತಾಯಿ ಕರೆ ಮಾಡಿದಾಗ ಮಾಧುರಿ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸಂಜೆ ವೇಳೆಗೆ ಗರಿಮಿಲಪಲ್ಲಿ ಮಂಡಲ್‍ನ ಐನವೋಲುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಾಧುರಿ ಬಿದ್ದಿದ್ದನ್ನು ಸ್ಥಳೀಯರು ನೋಡಿದ್ದರು. ಮಾಧುರಿ ಅವರ ಕೈ-ಕಾಲುಗಳನ್ನ ಕಟ್ಟಲಾಗಿದ್ದು, ಮುಖ ಮತ್ತು ಎದೆಯ ಭಾಗ ಆ್ಯಸಿಡ್‍ನಿಂದ ಸುಟ್ಟಿತ್ತು. ಕೂಡಲೇ ಮಾಧುರಿ ಅವರನ್ನ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ.

    ಆರೋಪಿ ಚಂದು ಹಾಗೂ ಆತನಿಗೆ ನೆರವಾದ ಇಬ್ಬರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ತನನ್ನು ಮದುವೆಯಾಗದಿದ್ದರೆ ಕೊಲ್ಲುವುದಾಗಿ ಆರೋಪಿ ಈ ಹಿಂದೆಯೂ ಹಲವು ಬಾರಿ ಮಹಿಳೆಗೆ ಬೆದರಿಕೆ ಹಾಕಿದ್ದ. ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಆತನಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು. ಘಟನೆಗೆ ಒಂದು ದಿನ ಮುಂಚೆ ಆರೋಪಿ ಚಂದು ಮಾಧುರಿ ಅವರ ತಾಯಿ ಹಾಗೂ ಸಹೋದರಿ ಮೇಲೂ ದಾಳಿ ಮಾಡಿದ್ದ ಎನ್ನಲಾಗಿದೆ.

    ಚಿನ್ನ ಕರಗಿಸಲು ಬಳಸುವ ಆ್ಯಸಿಡ್ ತೆಗೆದುಕೊಂಡ ಹೋಗಿದ್ದ ಚಂದು ಮಾಧುರಿ ಅವರ ಮೇಲೆ ಎರಚಿದ್ದಾನೆ. ಐನವೋಲುದಂತಹ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ಹೇಗೆ ನಡೆಯಿತು ಎಂಬ ಬಗ್ಗೆ ತಿಳಿಯಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆರೋಪಿ ಆ್ಯಸಿಡ್ ದಾಳಿ ಮಾಡಲು ತನ್ನ ಆಟೋದಲ್ಲೇ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನಾ? ಮಹಿಳೆಗೆ ವಿಪರೀತ ಬೆದರಿಕೆ ಇದ್ದರೂ ಆತನ ಜೊತೆ ಹೇಗೆ ಹೋದರು? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

    ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

    ಮುಂಬೈ: ಮಹಿಳೆಯೊಬ್ಬರು ತೂಕ ಕಡಿಮೆ ಮಾಡಿಕೊಂಡು ಸಣ್ಣ ಆಗ್ಬೇಕು ಅಂತ ಬಯಸಿದ ಕಾರಣ ಆಕೆ ತನಗೆ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಪತಿರಾಯ ಆ್ಯಸಿಡ್ ದಾಳಿ ಮಾಡಿರೋ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ಮಾಲ್ವಾನಿ ನಿವಾಸಿಯಾದ ರುವಾಬ್ ಆಲಿ ಶೇಕ್(30) ತನ್ನ ಪತ್ನಿ ಝಾಕೀರಾ ಶೇಕ್(26) ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ಘಟನೆ ಗುರುವಾರ ನಡೆದಿದ್ದು, ಘಟನೆಯಲ್ಲಿ ಈಕೆಯ ಇಬ್ಬರು ಮಕ್ಕಳಾದ ಅಫೀಪಾ(7) ಹಾಗೂ ಅತೀಫಾ(5) ಕೂಡ ಗಾಯಗೊಂಡಿದ್ದಾರೆ.

    ಘಟನೆ ವಿವರ: ರುವಾಬ್ ಆಟೋ ಚಾಲಕನಾಗಿದ್ದು, ಝಾಕೀರಾ ಮನೆಯಲ್ಲೇ ಇದ್ದಳು. ಆದ್ರೆ ಮನೆ ಖರ್ಚಿಗೆ ರುವಾಬ್ ಝಾಕೀರಾಳಿಗೆ ಹಣ ನೀಡುತ್ತಿರಲಿಲ್ಲ. ಅಲ್ಲದೇ ರುವಾಬ್ ಮಾಟ, ಮಂತ್ರವನ್ನು ನಂಬುತ್ತಿದ್ದನು. ಅಂದ ಹಾಗೆ ಒರ್ವ ಮಂತ್ರವಾದಿ `ನೀನು ಈ ಮನೆಯಲ್ಲಿ ಈ ಪೂಜೆಯನ್ನು ಮಾಡಿದ್ರೆ ನಿಧಿ ಸಿಗತ್ತೆ ಅಂತ ನಂಬಿಸಿದ್ದ. ಒಟ್ಟಿನಲ್ಲಿ ಗಂಡನ ನಡವಳಿಕೆಗಳಿಂದ ಬೇಸತ್ತ ಝಾಕೀರಾ ಒಂದು ಸೇಲ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ರುವಾಬ್ ಹಾಗೂ ಝಾಕೀರ್ 2008ರಲ್ಲಿ ಮದುವೆಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಚೆನ್ನಾಗಿಯೇ ಇದ್ದ ದಂಪತಿಯ ಮಧ್ಯೆ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಸಂಬಧಿಸಿದಂತೆ ಜಗಳಗಳಾಗುತ್ತಿತ್ತು ಅಂತ ಝಾಕೀರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

    ತೂಕ ಇಳಿಸಲು ಚಿಕಿತ್ಸೆ: ಝಾಕೀರಾ ಡುಮ್ಮಿಯಾಗಿದ್ದಳು. ಹೀಗಾಗಿ ತಾನು ಸ್ವಲ್ಪ ಸಣ್ಣ ಆಗ್ಬೇಕು ಅಂತಾ ತೂಕ ಕಡಿಮೆ ಮಾಡೋ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತ ಝಾಕೀರಾ ಸಣ್ಣ ಆಗುತ್ತಿರುವುದನ್ನು ಗಮನಿಸಿದ ಪತಿ ರುವಾಬ್ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದನು. ಯಾರಿಗಾಗಿ ನೀನು ಇದನ್ನೆಲ್ಲಾ ಮಾಡ್ತಾ ಇದ್ದೀಯಾ? ಯಾರಿಗೋಸ್ಕ ಸಣ್ಣ ಆಗ್ತಾ ಇದ್ದೀಯಾ? ಏನ್ ನಡೀತಾ ಇದೆ ಇಲ್ಲಿ ಅಂತೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾನೆ.

    ನೆರೆಮನೆಯಾತ ಹೇಳಿದ್ದೇನು?: ಗುರುವಾರ ಮುಂಜಾನೆ ನಾನು ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಜೋರಾಗಿ ಕಿರುಚೋ ಶಬ್ದ ಕೇಳಿಸಿತ್ತು. ಏನಾಯ್ತು ಅನ್ನೋವಷ್ಟರಲ್ಲೇ ಝಾಕೀರಾ ಸಹಾಯ ಮಾಡಿ ಅಂತಾ ಕಿರುಚಿತ್ತಾ ಮನೆಯಿಂದ ಹೊರಗಡೆ ಓಡಿ ಬರುತ್ತಿರುವುದು ಕಂಡಿತು. ಅಲ್ಲೇ ಪಕ್ಕದಲ್ಲೇ ಆಕೆಯ ಸಹೋದರನ ಅಂಗಡಿಯಿತ್ತು. ಆತ ಅದರಲ್ಲೇ ಮಲಗುತ್ತಿದ್ದನು. ಹೀಗಾಗಿ ರಕ್ಷಣೆಗಾಗಿ ಸಹೋದರರನ್ನು ಕರೆಯುತ್ತಾ ಓಡಿ ಬಂದಿದ್ದಳು.

    ಅಂತೆಯೇ ಸಹೋದರನ ಅಂಗಡಿಗೆ ಬಂದ ಝಾಕೀರಾ, ಶಟರ್ ಎಳೆಯುವಂತೆ ಬೇಡಿಕೊಳ್ಳುತ್ತಾಳೆ. ಆ ಕಡೆ ಸಹೋದರನೂ ಏನಾಯ್ತು ಅಂತಾ ಕೇಳಿ ಶಟರ್ ಎಳೆಯಲು ಹೋದ್ರೆ, ಅದನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ನಾನು ಕೂಡ ಅಲ್ಲಿಗೆ ತೆರಳಿ ಲಾಕ್ ಮುರಿದು ಸಹೋದರ ಹೊರಬರುವಂತೆ ಮಾಡಿದ್ವಿ. ಈ ಸಂದರ್ಭದಲ್ಲಿ ಝಾಕೀರಾ ಮೈ ನನ್ನ ಮೈಗೆ ತಾಗಿತ್ತು. ಪರಿಣಾಮ ಮೈ ಉರಿದ ಅನುಭವವಾಯ್ತು. ತಕ್ಷಣ ನೋಡಿದಾಗ ಆಕೆಯ ಮೇಲೆ ಆ್ಯಸಿಡ್ ದಾಳಿಯಾಗಿರುವುದು ತಿಳಿದುಬಂತು ಅಂತ ನೆರೆಮನೆಯ ಸಲೀಂ ಶೇಕ್ ಎಂಬಾತ ಮಾಧ್ಯಮಕ್ಕೆ ವಿವರಿಸಿದ್ದಾನೆ.

    ಬಳಿಕ ಝಾಕೀರಾ ತನ್ನ ಮೇಲೆ ರುವಾಬ್ ಆ್ಯಸಿಡ್ ದಾಳಿ ಮಾಡಿರುವ ಕುರಿತು ಹೇಳಿದ್ದಾಳೆ. ದಾಳಿ ವೇಳೆ ಅಚಾನಕ್ ಆಗಿ ಮಕ್ಕಳ ಮೇಲೂ ಬಿದ್ದಿದೆ. ಬಳಿಕ ಆತ ಮನೆಯ ಹಿಂದಿನ ಬಾಗಿಲಿನ ಮೂಲಕ ಪರಾರಿಯಾಗಿರುವುದಾಗಿ ವಿವರಿಸಿದ್ದಾಳೆ.

    ರುವಾಬ್ ಮೊದಲೇ ಈ ಯೋಜನೆ ಹಾಕಿದ್ದನು. ದಾಳಿ ಬಳಿಕ ಝಾಕೀರಾ ಸಹೋದರ ಆಸ್ಪತ್ರೆಗೆ ಕೂಡಲೇ ದಾಖಲಿಸಬಾರದೆಂದು ಆಕೆಯ ಸಹೋದರನ ಶಾಪ್ ಗೆ ಹೊರಗಡೆಯಿಂದ ಲಾಕ್ ಮಾಡಿದ್ದಾನೆ. ಘಟನೆಯ ನಂತ್ರ ಕುಟುಂಬಸ್ಥರು, ಝಾಕೀರಾ ಹಾಗೂ ಆಕೆಯ ಮಕ್ಕಳನ್ನು ಚಿಕಿತ್ಸೆಗಾಗಿ ಶತಾಬ್ಧಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಝಾಕೀರಾ ಸಹೋದರಿ ಸೈಮಾ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

    ಪೊಲೀಸರಿಗೆ ಶರಣಾದ: ಪತ್ನಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ ರುವಾಬ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲಿಸರಿಗೆ ಶರಣಾಗಿದ್ದಾನೆ. ರುವಾಬ್ ಬೆಳಗ್ಗೆ ಸುಮಾರು 6 ಗಂಟೆಯ ವೇಳೆ ಪೊಲೀಸ್ ಠಾಣೆ ಬಂದಿದ್ದು, ನನ್ನ ಮೇಲೆ ಪತ್ನಿ ಆ್ಯಸಿಡ್ ದಾಳಿ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ನಾನು ತಪ್ಪಿಸಿಕೊಂಡಿದ್ದು, ಪರಿಣಾಮ ಅದು ಅವಳ ಹಾಗೂ ಮಕ್ಕಳ ಮೇಲೆ ಬಿದ್ದಿದೆ ಅಂತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಝಾಕೀರಾ ಮುಖ ಶೇ.80ರಷ್ಟು ಸುಟ್ಟಿದ್ದು, ಚಿಕಿತ್ಸೆ ಮುಂದುವರೆದಿದೆ. ಮಕ್ಕಳು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಅವರಿಂದ ಹೇಳಿಕೆ ಪಡೆಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದುರುಗುಟ್ಟಿ ನೋಡಿದ ನೆರೆ ಮನೆಯ ಯುವತಿಗೆ ಪಾಠ ಕಲಿಸಲು ಆ್ಯಸಿಡ್ ಹಾಕ್ದ!

    ದುರುಗುಟ್ಟಿ ನೋಡಿದ ನೆರೆ ಮನೆಯ ಯುವತಿಗೆ ಪಾಠ ಕಲಿಸಲು ಆ್ಯಸಿಡ್ ಹಾಕ್ದ!

    ಮುಂಬೈ: ದುರುಗುಟ್ಟಿ ನೋಡಿದ್ದಕ್ಕೆ ಯುವಕನೊಬ್ಬ ನೆರೆ ಮನೆಯ ಯುವತಿಗೆ ಆ್ಯಸಿಡ್ ಹಾಕಿರುವ ಘಟನೆ ಮುಂಬೈನ ದಷೀರ್‍ನಲ್ಲಿ ನಡೆದಿದೆ.

    ಹೇಮಂತ್(25) ಆ್ಯಸಿಡ್ ಎರಚಿದ ಆರೋಪಿ. ಗುರುವಾರ ಈ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    ಗುರುವಾರ ರಾತ್ರಿ 10.45ರ ವೇಳೆ ರಾಮನಗರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಯುವತಿ ತೆರಳುತ್ತಿದ್ದಾಗ ಆಕೆಯನ್ನು ಹೇಮಂತ್ ಹಿಂಬಾಲಿಸಿ ಆ್ಯಸಿಡ್ ಹಾಕಿದ್ದಾನೆ. ಶೌಚಾಲಯ ಸ್ವಚ್ಚಗೊಳಿಸುವ ಪುಡಿಯನ್ನು ಹಾಗೂ ನೀರನ್ನ ಬಳಸಿ ಯುವತಿ ಮೇಲೆ ಎರಚಿದ್ದಾನೆ. ದಾಳಿಯಲ್ಲಿ ಯುವತಿ ಮುಖ ಮತ್ತು ತುಟಿಗಳು ಸಂಪೂರ್ಣ ಸುಟ್ಟು ಹೋಗಿದೆ.

    ಯುವತಿ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಗಾಯಗೊಂಡ ಯುವತಿಯನ್ನ ಹತ್ತಿರದ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆರೋಪಿ ಹೇಮಂತ್ ನಿರುದ್ಯೋಗಿಯಾಗಿದ್ದು ತನ್ನ ತಾಯಿ ಹಾಗೂ ತಂಗಿ ಜೊತೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಯುವಕನನ್ನು ಕೋರ್ಟ್ ಗೆ ಹಾಜರು ಪಡಿಸಿದ್ದು, ಕೋರ್ಟ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

    ವಿಚಾರಣೆ ವೇಳೆ ನನ್ನನ್ನು ಆಕೆ ಯಾವಾಗಲೂ ನನ್ನನ್ನು ಕೋಪ ಮತ್ತು ದ್ವೇಷದಿಂದ ದುರುಗುಟ್ಟಿ ನೋಡುತ್ತಿದ್ದಳು. ಇದಕ್ಕೆ ಆಕೆಗೆ ಪಾಠ ಕಲಿಸಲು ಈ ಕೃತ್ಯ ಎಸಗಿದ್ದೇನೆ ಎಂಬುದಾಗಿ ಹೇಮಂತ್ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮರಗಳಲ್ಲಿ ಜೀವಕಳೆ!

    ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮರಗಳಲ್ಲಿ ಜೀವಕಳೆ!

    ಬೆಂಗಳೂರು: ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮೂರು ಮರಗಳು ಹೂವು, ಹಣ್ಣು ಬಿಡೋ ಮೂಲಕ ಜೀವ ಕಳೆ ತುಂಬಿವೆ.

    ಮಾರತ್‍ಹಳ್ಳಿಯ ರಸ್ತೆ ಬದಿ ಮರಗಳು ಇದೀಗ ಅರಳಿ ನಿಂತಿವೆ. ಹೀಗಾಗಿ ಪರಿಸರ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಮರಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.

    ಕೆಲದಿನಗಳ ಹಿಂದಷ್ಟೆ ಭಿತ್ತಿಪತ್ರ ಅಂಟಿಸಲು ಕಿಡಿಗೇಡಿಗಳು ಆ್ಯಸಿಡ್ ಹಾಕಿದ್ದರು. ಸುಮಾರು 17 ಮರಕ್ಕೆ ಆ್ಯಸಿಡ್ ಎರಚಿದ್ದರು. ಇದರಿಂದ ಬೇಸರಗೊಂಡ ಪರಿಸರ ಪ್ರೇಮಿಗಳು ಮೂರು ಮರಕ್ಕೆ ಚಿಕಿತ್ಸೆ ನೀಡಿದ್ದರು. ಹೀಗಾಗಿ ಇದೀಗ ಮೂರು ಮರಗಳಲ್ಲಿ ಮತ್ತೆ ಜೀವಕಳೆ ತುಂಬಿವೆ.

  • ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!

    ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!

    ಬೆಂಗಳೂರು: ತನ್ನ ಹೆಂಡತಿ ಸುಂದರವಾಗಿದ್ದಾಳೆ, ಆಕೆ ಬೇರೆ ಯಾರೊಂದಿಗೋ ಮಾತಾಡ್ತಿದ್ದಾಳೆ ಅಂತಾ ಅನುಮಾನಗೊಂಡ ವ್ಯಕ್ತಿ ಹೆಂಡತಿಗೆ ಆ್ಯಸಿಡ್ ಎರಚಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಇಲ್ಲಿನ ಕೆಂಪೇಗೌಡ ನಗರದ ಸನ್ಯಾಸಿಪಾಳ್ಯದ ಚೆನ್ನೇಗೌಡ ಕೃತ್ಯವೆಸಗಿರುವ ಪಾಪಿ ಪತಿ. ಆ್ಯಸಿಡ್ ದಾಳಿಯಿಂದಾಗಿ ಪತ್ನಿ ಮಂಜುಳಾ ಕೈ, ಕಾಲು, ಮುಖ ಹಾಗೂ ಹೊಟ್ಟೆ ಭಾಗ ಸುಟ್ಟು ಹೋಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಂಡನ ಕಾಟ ತಾಳಲಾರದೇ ನಾಲ್ಕು ದಿನಗಳ ಹಿಂದೆ ಮಂಜುಳಾ ಕೆಲಸ ಬಿಟ್ಟಿದ್ದರು. ಈ ನಡುವೆ ಶುಕ್ರವಾರ ಮನೆಯಲ್ಲಿ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಈ ವೇಳೆ ಪತಿ ಚೆನ್ನೇಗೌಡ ಆ್ಯಸಿಡ್ ದಾಳಿ ನಡೆಸಿದ್ದಾನೆ.

    ಕೃತವೆಸಗಿದ ಬಳಿಕ ಪತಿ ಪರಾರಿಯಾಗಿದ್ದಾನೆ. ಈ ಸಂಬಂಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 9 ವರ್ಷಗಳ ಹಿಂದೆ ಗ್ಯಾಂಗ್ ರೇಪ್ ಗೊಳಗಾದ ಮಹಿಳೆ ಮೇಲೆ 4ನೇ ಬಾರಿ ಆ್ಯಸಿಡ್ ದಾಳಿ!

    9 ವರ್ಷಗಳ ಹಿಂದೆ ಗ್ಯಾಂಗ್ ರೇಪ್ ಗೊಳಗಾದ ಮಹಿಳೆ ಮೇಲೆ 4ನೇ ಬಾರಿ ಆ್ಯಸಿಡ್ ದಾಳಿ!

    – ಸೆಕ್ಯೂರಿಟಿ ಗಾರ್ಡ್ ಎದುರಲ್ಲೇ ಆ್ಯಸಿಡ್ ಎರಚಿ ಪರಾರಿಯಾದ ದುಷ್ಕರ್ಮಿಗಳು

    ಲಕ್ನೋ: ಒಂಬತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು 4 ನೇ ಬಾರಿ ಆ್ಯಸಿಡ್ ದಾಳಿ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    35 ವರ್ಷದ ಸಂತ್ರಸ್ತೆಯ ಮೇಲೆ ಶನಿವಾರ ರಾತ್ರಿ ಸುಮಾರು 8 ರಿಂದ 9 ಗಂಟೆಯೊಳಗೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದು, ಸದ್ಯ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಏನಿದು ಪ್ರಕರಣ?: ಸಂತ್ರಸ್ತೆ ಲಕ್ನೋದ ಆಲಿಗಂಜ್ ಪ್ರದೇಶಲ್ಲಿರೋ ಹಾಸ್ಟೆಲ್‍ನಲ್ಲಿ ವಾಸವಾಗಿದ್ದು, ಶನಿವಾರ ರಾತ್ರಿ ನೀರು ತರಲೆಂದು ಹೊರಬಂದಿದ್ದ ವೇಳೆ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ ಎದುರಲ್ಲೇ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.

    ಘಟನೆಯಿಂದ ಆಕೆಯ ಮುಖದ ಬಲಭಾಗಕ್ಕೆ ಹಾನಿಯಾಗಿದ್ದು, ತಕ್ಷಣವೇ ಆಕೆಯನ್ನು ಲಕ್ನೋದಲ್ಲಿರೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಗೆ ದಾಖಲಿಸಿಲಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಭಯ್ ಕುಮಾರ್ ಪ್ರಸಾದ್ ತಿಳಿಸಿದ್ದಾರೆ. ಪ್ರಕರಣ ಬಗ್ಗೆ ಈವರೆಗೆ ದೂರು ದಾಖಲಿಸಿಕೊಂಡಿಲ್ಲ. ಆಕೆಯ ಕುಟುಂಬ ದೂರು ದಾಖಲಿಸಲು ಕಾಯುತ್ತಿದ್ದೇವೆ ಅಂತಾ ಪೊಲೀಸರು ಹೇಳಿದ್ದಾರೆ.

    ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಯ್ ಬರೇಲಿಯಲ್ಲಿರುವ ತನ್ನ ಗ್ರಾಮದಿಂದ ಲಖನೌಗೆ ರೈಲಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಒತ್ತಾಯಿಸಿ ಆ್ಯಸಿಡ್  ಕುಡಿಸಿದ್ದರು. ಪರಿಣಾಮ ಆಕೆಯ ಕುತ್ತಿಗೆ ಭಾಗಕ್ಕೆ ಹಾನಿಯಾಗಿತ್ತು. ಘಟನೆಯ ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಬಿದ್ದಿರುವುದನ್ನು ಕಂಡು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಅವರು ಆಸ್ಪತ್ರೆಗೆ ತೆರಳಿ ಮಹಿಳೆ ಸಾಂತ್ವನ ಹೇಳಿದ್ದರು. ಅಲ್ಲದೇ ಪರಿಹಾರ ಕೂಡ ನೀಡಿದ್ದರು. ಪ್ರಕರಣ ಕುರಿತು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.

    ಪ್ರಸ್ತುತ 2 ಮಕ್ಕಳ ತಾಯಿಯಾಗಿರುವ ಮಹಿಳೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, 2008ರಲ್ಲಿ ಆಕೆಯ ಗ್ರಾಮದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ಇಂದಿಗೂ ನಡೆಯುತ್ತಿದೆ. ಆ ಬಳಿಕ 2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. 2013ರಲ್ಲಿ ಮತ್ತು ಇದೇ ವರ್ಷದ ಮಾರ್ಚ್ ತಿಂಗಳಲ್ಲಿಯೂ ಆ್ಯಸಿಡ್ ದಾಳಿಯಾಗಿತ್ತು.

    ನಿನ್ನೆ ಮತ್ತೆ ಅದೇ ಮಹಿಳೆಯ ಮೇಲೆ ಆ್ಯಸಿಡ್ ದಾಳಿಯಾಗಿರುವುದರಿಂದ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಕಳೆದರೂ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಒಟ್ಟಿನಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಕಿಡಿಕಾರಿದ್ದಾರೆ.

    ಇದೀಗ ಮತ್ತೆ ನಾಲ್ಕನೇ ಬಾರಿ ದಾಳಿ ಮಾಡಲಾಗಿದ್ದು, ಮಹಿಳೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳೇ ಈ ದಾಳಿ ನಡೆಸಿರಬಹುದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

  • ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

    ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

    ಮುಂಬೈ: 25 ವರ್ಷದ ಯುವತಿಯೊಬ್ಬಳು ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಪ್ರಿಯಕರನಿಗೆ ಆ್ಯಸಿಡ್ ಎರಚಿರುವ ಘಟನೆ ಮುಂಬೈನ ಗೋರೆಗಾಂವ್‍ನಲ್ಲಿ ನಡೆದಿದೆ.

    26 ವರ್ಷದ ಓಂ ಸಿಂಗ್ ಸೋಲಂಕಿ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಓಂ ಸಿಂಗ್ ಅವರ ಮುಖ ಮತ್ತು ಕುತ್ತಿಗೆ ಭಾಗಗಳಲ್ಲಿ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಓ ಸಿಂಗ್ ಮೇಲೆ ಆ್ಯಸಿಡ್ ಮಾಡಿದ್ದ ಮೀರಾ ಪ್ರಕಾಶ್ ಶರ್ಮಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೀರಾ ಥಾಣೆ ಜಿಲ್ಲೆಯ ನಲ್ಲಸೊಪರಾ ನಿವಾಸಿಯಾಗಿದ್ದು, ಶನಿವಾರ ಸಂಜೆ ಸುಮಾರು 6ಗಂಟೆಗೆ ಪಶ್ಚಿಮ ಗೋರೆಗಾಂವ್‍ನ ಎಂ.ಜಿ.ರೋಡ್ ಬಳಿಯ ಹಿರೇನ್ ಶಾಪಿಂಗ್ ಸೆಂಟರ್‍ನಲ್ಲಿ ಮೀರಾ ತನ್ನ ಮಾಜಿ ಪ್ರಿಯಕರ ಓಂ ಸಿಂಗ್ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

    ಇದನ್ನೂ ಓದಿ:  ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಕೆಲವು ದಿನಗಳಿಂದ ಓಂ ಸಿಂಗ್ ತನ್ನ ಗೆಳತಿ ಮೀರಾಳನ್ನು ಕಡೆಗಣಿಸುತ್ತಿದರು. ಮೀರಾ ಹಲವು ಕಾರ್ಯಕ್ರಮಗಳಲ್ಲಿ ಓಂ ನನ್ನು ಭೇಟಿಯಾಗಲು ಪ್ರಯತ್ನಿಸಿದ್ದಳು. ಆದರೆ ಓಂ ಆಕೆಯನ್ನು ಭೇಟಿಯಾಗಲು ನಿರಾಕರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಿಯಕರನ ನಡವಳಿಕೆಯಿಂದ ಬೇಸತ್ತ ಮೀರಾ ಶನಿವಾರ ಸಂಜೆ ಓಂ ಸಿಂಗ್ ಅವರ ಅಂಗಡಿಗೆ ಬಂದಿದ್ದಾಳೆ. ಈ ಮಧ್ಯೆ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದಿದೆ. ಕೊನೆಗೆ ಮೀರಾ ತನ್ನ ಹ್ಯಾಂಡ್ ಬ್ಯಾಗ್‍ನಿಂದ ಆ್ಯಸಿಡ್ ತೆಗೆದು ಓಂ ಮೇಲೆ ಎರಚಿದ್ದಾಳೆ.

    ಈ ಸಂಬಂಧ ಮೀರಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 326 (ಎ), 323 ಹಾಗು 504 ಕಲಂಗಳನ್ವಯ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!