Tag: ಆ್ಯಸಿಡ್ ದಾಳಿ

  • ಪಬ್ಲಿಕ್ ಟಿವಿ ಸುದ್ದಿ ನೋಡಿ ಆ್ಯಸಿಡ್ ಸಂತ್ರಸ್ತೆ ಸಹಾಯಕ್ಕೆ ನಿಂತ ವಿದ್ಯಾರ್ಥಿನಿ

    ಪಬ್ಲಿಕ್ ಟಿವಿ ಸುದ್ದಿ ನೋಡಿ ಆ್ಯಸಿಡ್ ಸಂತ್ರಸ್ತೆ ಸಹಾಯಕ್ಕೆ ನಿಂತ ವಿದ್ಯಾರ್ಥಿನಿ

    ಮೈಸೂರು: ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವತಿಗೆ ಮೈಸೂರು ವಿದ್ಯಾರ್ಥಿನಿ ಸಹಾಯಹಸ್ತ ಚಾಚಿದ್ದಾರೆ.

    ಇಂಗ್ಲೆಂಡ್‍ನಲ್ಲಿ ಓದುತ್ತಿರುವ ಮೈಸೂರು ಮೂಲದ ವಿದ್ಯಾರ್ಥಿನಿ ಸೃಷ್ಟಿ ಯುವತಿಯ ಚಿಕಿತ್ಸೆಗೆ 50 ಸಾವಿರ ರೂಪಾಯಿ ನೀಡಿದ್ದಾರೆ. ಮೈಸೂರಿನ ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕರಾದ ಸ್ವೀಟ್ ಮಹೇಶ್ ಅವರ ಪುತ್ರಿ ಸೃಷ್ಟಿ, ಈ ಘಟನೆಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ತಂದೆ ಓದಿದಾಗಿ ನೀಡುತ್ತಿದ್ದ ಹಣದಲ್ಲಿ ಉಳಿಸಿದ್ದ 50 ಸಾವಿರ ರೂಪಾಯಿಯನ್ನು ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಚಿಕಿತ್ಸೆಗೆ ನೀಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಈ ಸಂಬಂಧ ವೀಡಿಯೋ ಮಾಡಿರುವ ಸೃಷ್ಟಿ, ಬೆಂಗಳೂರಿನಲ್ಲಿ ನಡೆದ ಆ್ಯಸಿಡ್ ದಾಳಿ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಈ ಸುದ್ದಿಯನ್ನು ಪಬ್ಲಿಕ್ ಟಿವಿಯಲ್ಲಿ ನೋಡಿದೆ. ಹೆಣ್ಣು ಮಕ್ಕಳ ಮೇಲೆ ಅಷ್ಟೊಂದು ಕ್ರೈಂಗಳು ನಡೆಯುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ತುಂಬಾ ಕೋಪ ಬಂತು. ಹೀಗಾಗಿ ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳುತ್ತಾ ಶೀಘ್ರವೇ ಸಂತ್ರಸ್ತೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿಕೊಂಡರು.

    ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ. ತಮ್ಮ ತಂದೆ ಓದಿದಾಗಿ ನೀಡುತ್ತಿದ್ದ ಹಣದಲ್ಲಿ ಉಳಿಸಿದ್ದ 50 ಸಾವಿರ ರೂಪಾಯಿಯನ್ನು ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಚಿಕಿತ್ಸೆಗೆ ನೀಡುವುದಾಗಿ ತಿಳಿಸಿದರು. ಇಂದು ನಾವು ಸಂತ್ರಸ್ತೆ ಪರವಾಗಿ ಹೋರಾಡಬೇಕಿದೆ. ನಿಮಗೆ ಎಷ್ಟು ಸಹಾಯ ಮಾಡಲು ಸಾಧ್ಯವಾಗುತ್ತೋ ಅಷ್ಟು ಸಹಾಯ ಮಾಡಿ ಎಂದು ಇದೇ ವೇಳೆ ಸೃಷ್ಟಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ 

     

  • ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಗೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಲುಕ್‍ಔಟ್ ನೊಟೀಸ್ ಜಾರಿ ಮಾಡಿದ್ದಾರೆ.

    ಎಲ್ಲಾ ರಾಜ್ಯಗಳಿಗೆ ಹಾಗೂ ಎಲ್ಲಾ ಭಾಷೆಗಳಲ್ಲೂ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ಏರ್ ಪೋರ್ಟ್, ರೈಲ್ವೇ ನಿಲ್ದಾಣಗಳಿಗೂ ರವಾನೆ ಮಾಡಿದ್ದಾರೆ. ಸದ್ಯ ಆಶ್ರಮ, ಧ್ಯಾನಮಂದಿರಗಳಲ್ಲಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

    ನಾಗೇಶ್ ತಮಿಳುನಾಡಿನಲ್ಲಿ ಅವಿತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಇದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ತಮಿಳುನಾಡಿನ ದೇಗುಲಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

  • ಆ್ಯಸಿಡ್ ದಾಳಿ ಮಾಡಿದವರಿಗೆ ಮರಣ ದಂಡನೆ ನೀಡಿ: ಬಾಲಕಿ ಆಕ್ರೋಶ

    ಆ್ಯಸಿಡ್ ದಾಳಿ ಮಾಡಿದವರಿಗೆ ಮರಣ ದಂಡನೆ ನೀಡಿ: ಬಾಲಕಿ ಆಕ್ರೋಶ

    ಬೆಂಗಳೂರು: ಆ್ಯಸಿಡ್ ಹಾಗೂ ಅತ್ಯಾಚಾರ ಮಾಡಿದವರಿಗೆ ಮರಣ ದಂಡನೆ ನೀಡಬೇಕು ಎಂದು ನಿಸರ್ಗ ಶಾಲೆಯ ವಿದ್ಯಾರ್ಥಿನಿ ಒತ್ತಾಯಿಸಿದರು.

    ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿ ಓದಿದ್ದ ನಿಸರ್ಗ ಶಾಲೆಯ ಶಾಲಾ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಮಾತನಾಡಿದ ಅವರು, ಆ್ಯಸಿಡ್ ದಾಳಿ ಮಾಡಿದವರನ್ನು ಜೈಲಿಗಷ್ಟೇ ಹಾಕಬಾರದು. ಅವರಿಗೆ ಮರಣದಂಡನೆಯನ್ನು ವಿಧಿಸಬೇಕು. ಅಂತವರನ್ನು ಜೈಲಿಗೆ ಹಾಕಿದರೆ ವ್ಯರ್ಥ. ನಂತರ ಅಂತಹವರು ಮತ್ತೆ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ ಎಂದು ಕಿಡಿಕಾರಿದರು.

    ಆರೋಪಿಗಳ ಕುಟುಂಬ ಅವರ ಸ್ನೇಹಿತರೆಲ್ಲರೂ ಇಂತಹದ್ದನ್ನೆಲ್ಲಾ ನೋಡುವುದೇ ಇಲ್ಲವಾ ಎನ್ನುವುದು ತಿಳಿಯುತ್ತಲೇ ಇಲ್ಲ. ಪೊಲೀಸ್ ಇಲಾಖೆ ಅಂತಹವರನ್ನು ಎನ್‍ಕೌಂಟರ್ ಮಾಡಬೇಕು. ಈ ರೀತಿ ಆಗುವುದನ್ನೆಲ್ಲಾ ತಡೆಗಟ್ಟಬೇಕು ಎಂದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಡೀ ಸಮಾಜದ ಹೆಣ್ಣುಮಕ್ಕಳ ರಕ್ಷಣೆಯನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿ ಓದಿದ್ದ ಹೆಗ್ಗನಹಳ್ಳಿ ಬಳಿಯ ನಿಸರ್ಗ ಶಾಲೆಯ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. 2013ರಲ್ಲಿ ಇದೇ ಶಾಲೆಯಲ್ಲಿ ಯುವತಿ ಹತ್ತನೇ ತರಗತಿ ಓದಿದ್ದರು. ಇದನ್ನೂ ಓದಿ: ಮುಸ್ಲಿಮರು ಮಾರುವ ಪಾನೀಯಗಳಲ್ಲಿ ದುರ್ಬಲಕಾರಕ ಔಷಧಿಯ ಅಂಶವಿರುತ್ತೆ: ಕಾಂಗ್ರೆಸ್ ಮಾಜಿ ನಾಯಕ

  • ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ನ್ಯಾಯ ಸಿಗಬೇಕು ಎಂದು ಇಡೀ ಕರ್ನಾಟಕದ ಜನರು ಕೇಳಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಾಳಿ ಮಾಡಿದ ಆರೋಪಿದ ಸುಳಿವು ಇನ್ನೂ ಪೊಲೀಸರಿಗೆ ಸಿಕ್ಕದಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚು ಮಾಡುತ್ತಿದೆ. ಯುವತಿಗೆ ನ್ಯಾಯ ಸಿಗಬೇಕು ಎಂದು ಆಕೆ ಓದಿದ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

    ಬಡ ಕುಟುಂಬದಿಂದ ಬಂದ ಯುವತಿಯ ಚಿಕಿತ್ಸೆಗೆ ರಾಜಕೀಯ ಗಣ್ಯರು ಸೇರಿದಂತೆ ಸಾರ್ವಜನಿಕರು ಸಹಾಯಹಸ್ತ ಚಾಚಿದ್ದಾರೆ. `ಪಬ್ಲಿಕ್ ಟಿವಿ’ ಎಲ್ಲ ರಾಜಕೀಯ ಗಣ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದು, ಎಲ್ಲರೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಪಬ್ಲಿಕ್ ಟಿವಿಯೂ ಸಹ  ಸಂತ್ರಸ್ತೆಗೆ 50 ಸಾವಿರ ರೂ. ಸಹಾಯಧನ ನೀಡಿದೆ. ಇದನ್ನೂ ಓದಿ: ಆಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ  BBMP 

    ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಅವರು ತಮ್ಮ ಕಂಪನಿಯಲ್ಲಿಯೇ ಕೆಲಸದ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಇದರ ಜೊತೆಗೆ 1 ಲಕ್ಷ ರೂ. ಕೊಟ್ಟಿದ್ದಾರೆ. ಆರೋಗ್ಯ ಸಚಿವ ಕೆ.ಸುಧಾಕರ್‌ 5 ಲಕ್ಷ ರೂ. ಸಹಾಯ ಮಾಡಿದರು.

    ಬಿಜೆಪಿ ಸಚಿವ ಮುರುಗೇಶ್ ನಿರಾಣಿ 1 ಲಕ್ಷ, ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಲಾ 50 ಸಾವಿರ ರೂ., ಮಾಜಿ ಶಾಸಕ ಮಾನಪ್ಪ ವಜ್ಜಲ್ 1 ಲಕ್ಷ ರೂ., ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ 1 ಲಕ್ಷ ರೂ., ಶಾಸಕ ಗೂಳಿಹಟ್ಟಿ ಶೇಖರ್ 2 ಲಕ್ಷ ರೂ., ಮಾಜಿ ಶಾಸಕ ಮುನಿರಾಜು 50 ಸಾವಿರ ರೂ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    ನೀವು ಇವರಿಗೆ ಸಹಾಯ ಮಾಡಲು ಇಚ್ಛಿಸಿದರೆ ಈ ಕೆಳಗಿನ ಬ್ಯಾಂಕ್‍ ಖಾತೆಗೆ ಹಣ ಹಾಕಬಹುದು.
    ಹೆಸರು: LAKSHMAMMA B
    ಖಾತೆ ನಂ: 3196101011122
    ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
    IFSC ಕೋಡ್: CNRB0003196
    ಬ್ರಾಂಚ್‌: HEGGANAHALL
    ಬೆಂಗಳೂರು: 560091
    PhonePay: 8105253022 (ರಾಜು, ಸಂತ್ರಸ್ಥೆ ತಂದೆ)

  • ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್

    ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್

    ಬೆಂಗಳೂರು: ಸುಂಕದಕಟ್ಟೆ ಬಳಿ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತ ಯುವತಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ 5 ಲಕ್ಷ ರೂ. ವೈಯಕ್ತಿಕ ಧನ ಸಹಾಯ ನೀಡಿದ್ದಾರೆ. ಅಮಾನುಷ ಕೃತ್ಯವೆಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.

    ನಗರದ ಸೇಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಸಚಿವ ಭೇಟಿ ಮಾಡಿ, ಯುವತಿ ಹಾಗೂ ಕುಟುಂಬಸ್ಥರು ಮಾನಸಿಕ ಧೈರ್ಯ ತಂದುಕೊಳ್ಳಬೇಕು. ಸರ್ಕಾರ ಸಂತ್ರಸ್ತೆಯ ಜೊತೆ ಇರಲಿದೆ. ಎಲ್ಲಾ ರೀತಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

    ಸಂತ್ರಸ್ತೆಯ ಜೊತೆ ಸರ್ಕಾರ, ಆರೋಗ್ಯ ಇಲಾಖೆ ಇರಲಿದೆ. ಯುವತಿಯ ಪೋಷಕರ ನೋವು ಸರ್ಕಾರಕ್ಕೆ ಅರ್ಥವಾಗುತ್ತದೆ. ಘಟನೆಯ ವಿಷಯ ತಿಳಿದು ಅತೀವ ದು:ಖವಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಇಂತಹ ಮಹಾ ಕ್ರೌರ್ಯವನ್ನು ಒಬ್ಬ ವ್ಯಕ್ತಿ ಹೇಗೆ ಮಾಡುತ್ತಾನೆ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

    ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ. ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಮೂಲಕ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ, ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ

    ಸೇಂಟ್ ಜಾನ್ ಆಸ್ಪತ್ರೆಯ ಜೊತೆ ಬೆಂಗಳೂರು ಮೆಡಿಕಲ್ ಕಾಲೇಜು ಕೂಡ ಯುವತಿಯ ಶಸ್ತ್ರಚಿಕಿತ್ಸೆಗೆ ನೆರವು ನೀಡಲಿದೆ. ಸಂತ್ರಸ್ತ ಯುವತಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಯುವತಿಗೆ ಅಗತ್ಯವಿರುವ ಚರ್ಮ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

    ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೇ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲಾ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ರೀತಿಯ ಅಮಾನವೀಯ ದುಷ್ಕೃತ್ಯಗಳು ಮರುಕಳಿಸದಂತೆ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ, ಯುವತಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸುವತ್ತ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ ಎಂದರು.

  • ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

    ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

    ಬೆಂಗಳೂರು: ನಗರದಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ಪೊಲೀಸರು ಡೈಯಿಂಗ್ ಡಿಕ್ಲರೇಶನ್ ಪಡೆದಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಆಸ್ಪತ್ರೆ ಬಳಿ ತೆರಳಿದ ಪೊಲೀಸರು ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್(ತಹಶೀಲ್ದಾರ್) ಸಮ್ಮುಖದಲ್ಲಿ ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆ್ಯಸಿಡ್ ದಾಳಿಕೋರ ಯಾರು? ಎಷ್ಟೊತ್ತಿಗೆ ಘಟನೆ ನಡೆಯಿತು? ದಾಳಿ ಮಾಡಿದ್ದು ಹೇಗೆ? ಆ್ಯಸಿಡ್ ಯಾವುದರಲ್ಲಿ ತಂದಿದ್ದ? ಆ್ಯಸಿಡ್ ದಾಳಿಗೊಳಗಾದ ಬಳಿಕ ಏನಾಯಿತು? ದೇಹದ ಯಾವ ಭಾಗಗಳು ಆ್ಯಸಿಡ್‍ನಿಂದ ಗಾಯಗಳಾಗಿವೆ? ಹೀಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಯುವತಿ ಉತ್ತರ ನೀಡಿದ್ದಾಳೆ. ಇದನ್ನೂ ಓದಿ:  ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು

    ವ್ಯಕ್ತಿ ಸಾಯುವ ಮುನ್ನ ತನ್ನ ಸಾವಿಗೆ ಕಾರಣವನ್ನು ತಿಳಿಸುವುದನ್ನು ಡೈಯಿಂಗ್ ಡಿಕ್ಲರೇಶನ್ ಸ್ಟೇಟ್‍ಮೆಂಟ್ ಎಂದು ಕರೆಯಲಾಗುತ್ತದೆ. ಇದು ಬಲವಾದ ಸಾಕ್ಷ್ಯವಾಗಿ ಆರೋಪಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ. ಸದ್ಯ ಪೊಲೀಸರು ಯುವತಿಯಿಂದ ಪಡೆದ ಸ್ಟೇಟ್‍ಮೆಂಟ್‍ಗೆ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‍ನಿಂದ ಸಹಿ ಪಡೆದುಕೊಂಡಿದ್ದಾರೆ. ಒಟ್ಟಾರೆ ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವತಿ ಗುಣಮುಖರಾಗಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ. ಇದನ್ನೂ ಓದಿ: ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ – ಬಿಜೆಪಿಗೆ ಸಿದ್ದು ಪ್ರಶ್ನೆ

  • ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

    ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

    – ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ

    ಬೆಂಗಳೂರು: ಆ್ಯಸಿಡ್ ದಾಳಿಗೆ ಬಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಾಗಿ ಪೊಲೀಸರು ಇನ್ನೂ ಹುಡುಕಾಟ ಮಾಡುತ್ತಿದ್ದು, ಇಂದು ನಾಗೇಶ್ ಅವರ ಅಣ್ಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ತನ್ನ ಅಳಲನ್ನು ತೊಡಿಕೊಂಡಿದ್ದಾರೆ.

    ಆ್ಯಸಿಡ್ ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಮಾತನಾಡಿದ್ದು, ನನಗೆ ಏನೂ ತಿಳಿಯುವುದಿಲ್ಲವೆಂದು ಯಾವುದೇ ರೀತಿ ಮಾಹಿತಿಯನ್ನು ನನಗೆ ಕೊಡುತ್ತಿಲ್ಲ. ನನ್ನ ಅಕ್ಕ ಮತ್ತು ಭಾವನೇ ಇದನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಏನೂ ಹೇಳುತ್ತಿಲ್ಲ. ಆದರೆ ಈಗ ನಾನು ಸಹಿ ಮಾಡಬೇಕು ಎಂದು ಹೇಳಿ ಆಸ್ಪತ್ರೆಯಿಂದ ಕರೆಬಂದಿದೆ, ಹೋಗಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

    ಆಸ್ಪತ್ರೆಗೆ ದಾಖಲಾದ ಮೇಲೆ ಆಸ್ಪತ್ರೆಯವರು ನನ್ನ ಮಗಳನ್ನು ನೋಡಲು ಬಿಡುತ್ತಿರಲಿಲ್ಲ. ಆದರೆ ನಿನ್ನೆ ಬಿಟ್ಟಿದ್ರು. ನನ್ನ ಮಗಳನ್ನು ನೋಡುವುದಕ್ಕೆ ಆಗುತ್ತಿಲ್ಲ. ನನ್ನ ಮಗಳು ಈ ರೀತಿ ಮಲಗಿಕೊಂಡಿದ್ದಾಳೆ ಎಂದರೆ ನನಗೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು. ಆದರೆ ಈಗ ಈ ರೀತಿ ನೋಡಿ ನನಗೆ ದುಃಖ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಕಣ್ಣೀರು ಹಾಕಿದರು.

    ನನ್ನ ಮಗಳು ನಿನ್ನೆ ಸ್ವಲ್ಪ ಕಣ್ಣು ಬಿಟ್ಟು ನೋಡಿ, ಅಮ್ಮ, ಅಮ್ಮ ಎಂದು ಕರೆದ್ಳು. ಅಮ್ಮ ನನ್ನನ್ನು ಉಳಿಸಿಕೊಳ್ಳಿ, ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಅವನನ್ನು ಮಾತ್ರ ಸುಮ್ಮನೆ ಬಿಡಬೇಡಿ ಎಂದು ಬೇಡಿಕೊಂಡಿದ್ದಾಳೆ. ನಾನು ಪೊಲೀಸರ ಬಳಿ ಮಾತನಾಡಿಲ್ಲ. ಎಲ್ಲವನ್ನೂ ನನ್ನ ಅಕ್ಕ ಮತ್ತು ಭಾವ ನೋಡಿಕೊಳ್ಳುತ್ತಿದ್ದಾರೆ. ನಾನು 1ನೇ ಕ್ಲಾಸ್ ಸಹ ಓದಿಲ್ಲ. ನನ್ನ ಅಕ್ಕ-ಭಾವ ಓದಿದ್ದಾರೆ. ಡಾಕ್ಟರ್ ಮತ್ತು ಪೊಲೀಸರು ಏನೇ ಮಾತನಾಡಿದ್ರೂ ನನಗೆ ಅರ್ಥವಾಗುವುದಿಲ್ಲ. ಅದಕ್ಕೆ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ರೋದಿಸಿದರು.

    ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ
    ನಾಗೇಶ್ ನಮ್ಮ ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ. ಆದರೆ ವಿಷಯ ತಿಳಿದ ಮೇಲೆ 3 ವರ್ಷಗಳ ಹಿಂದೆಯೇ ಅವನನ್ನು ಮನೆಯಿಂದ ಖಾಲಿ ಮಾಡಿಸಿದ್ದೇವೆ. ಬ್ಯಾಂಕ್ ಬಳಿ ಬಂದು ಪ್ರೀತಿ ವಿಚಾರವನ್ನು ಹೇಳಿದ್ದ. ಆದರೆ ನನ್ನ ಮಗಳು ನಾನು ಮದುವೆಯಾಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಈ ವಿಷಯವನ್ನು ಮನೆಯವರ ಬಳಿಯೂ ಹೇಳಿದ್ದಳು. ಅಲ್ಲದೇ ಅವನು ಮನೆ ಬಳಿಯೇ ಬಂದು, ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ. ಆದರೆ ನಾವು ಮತ್ತೆ ನಮ್ಮ ಭಾವ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದೆವು ಎಂದು ತಿಳಿಸಿದರು.

    6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು
    ನಾಗೇಶ್ ಅವರ ಅಣ್ಣನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಎಂಬುದಷ್ಟೇ ನನಗೆ ಗೊತ್ತು. ನನ್ನ ಮಗಳು 6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು. ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ. ಈ ಕೆಲಸಕ್ಕಾಗಿ ಹಲವು ಎಕ್ಸಾಂ ಸಹ ಬರೆದಿದ್ದಾಳೆ. ಅಲ್ಲದೇ ಇತ್ತೀಚೆಗೆ ಪೋಸ್ಟ್ ಆಫೀಸ್ ಕೆಲಸಕ್ಕೆ ಎಕ್ಸಾಂ ಬರೆಯಬೇಕು ಎಂದು ಕೇಳಿದ್ದಳು. ನಾವು ತರಕಾರಿ ವ್ಯಾಪಾರ ಮಾಡಿ ನನ್ನ ಮಕ್ಕಳನ್ನು ಬೆಳೆಸಿದ್ದೇವೆ ಎಂದು ಅತ್ತರು. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಅವನ ಅಣ್ಣನನ್ನು ಜೈಲಿಗೆ ಹಾಕಿ
    ನನ್ನ ದೊಡ್ಡ ಮಗಳ ಮದುವೆ ಇದ್ದ ಸಂದರ್ಭದಲ್ಲಿ ನಾಗೇಶ್ ಅಣ್ಣನಿಗೆ ಪತ್ರಿಕೆ ಕೊಡಲು ಹೋಗಿದ್ದಾಗಲೂ ನಮ್ಮ ಮನೆಯವರು ನಾಗೇಶ್ ವಿರುದ್ಧ ದೂರು ಕೊಡುವುದಾಗಿ ಹೇಳಿದ್ದರು. ಆದರೆ ಅವರ ಅಣ್ಣ ನನ್ನ ತಮ್ಮನಿಗೆ ಅಷ್ಟು ಧೈರ್ಯವಿಲ್ಲ, ಅವನಿಗೆ ನಾನು ಬುದ್ಧಿ ಹೇಳುತ್ತೇನೆ ಎಂದು ಹೇಳಿದ್ದರು. ಆಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ರೆ ಈ ಪರಿಸ್ಥಿತಿ ನನ್ನ ಮಗಳಿಗೆ ಬರುತ್ತಿರಲಿಲ್ಲ. ಅವನ ಅಣ್ಣನನ್ನು ಜೈಲಿಗೆ ಹಾಕಿ ಎಂದು ಬೇಡಿಕೊಂಡರು.

  • ಸ್ಕಿನ್ ತರಿಸಿ ಸರ್ಜರಿ ಮಾಡಬೇಕಿದೆ: ಆ್ಯಸಿಡ್ ಸಂತ್ರಸ್ತೆ ಚಿಕಿತ್ಸೆ ಬಗ್ಗೆ ವೈದ್ಯರ ಮಾತು

    ಸ್ಕಿನ್ ತರಿಸಿ ಸರ್ಜರಿ ಮಾಡಬೇಕಿದೆ: ಆ್ಯಸಿಡ್ ಸಂತ್ರಸ್ತೆ ಚಿಕಿತ್ಸೆ ಬಗ್ಗೆ ವೈದ್ಯರ ಮಾತು

    ಬೆಂಗಳೂರು: ಸ್ಕಿನ್ ಬ್ಯಾಂಕ್‍ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ ಎಂದು ಆ್ಯಸಿಡ್ ಸಂತ್ರಸ್ತೆಯ ಚಿಕಿತ್ಸೆ ಕುರಿತು ಸೇಂಟ್ ಜಾನ್ಸ್ ವೈದ್ಯರ ತಂಡ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಸಿಡ್ ಸಂತ್ರಸ್ತೆ ಮೂರು ದಿನಗಳ ಹಿಂದೆ ದಾಖಲಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಶೇ. 36ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಆದರೆ ನಮ್ಮ ತಂಡವು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇವೆ ಎಂದರು.

    ಸಂತ್ರಸ್ತೆಯನ್ನು ಪ್ಲಾಸ್ಟಿಕ್ ಸರ್ಜರಿ ತಂಡವು ನೋಡಿಕೊಳ್ಳುತ್ತಿದೆ. ಅವರಿಗೆ ಹಂತ ಹಂತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಮುಖ, ಕೈ ಕಾಲುಗಳ ಮೇಲೆ ಗಾಯಗಳಾಗಿದೆ. ಇದರಿಂದಾಗಿ ಅನೇಕ ಸರ್ಜರಿಗಳಾಗಬೇಕಿದೆ. ಕ್ರಮೇಣವಾಗಿ ಸ್ವಂತ ಚರ್ಮದಿಂದ ಕವರ್ ಆಗಬೇಕಾಗುತ್ತದೆ. ಚಿಕಿತ್ಸೆ ಮುಗಿಯಲು ಸರಿಸುಮಾರು 2 ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP

    ಆ್ಯಸಿಡ್ ದಾಳಿ ಆಗಿರುವುದರಿಂದ ದೇಹದಲ್ಲಿ ಡೀಪ್ ಗಾಯಗಳಾಗಿದೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆಕೆಗೆ ಕಾನ್ಶಿಯಸ್ ಇದೆ. ಯುವತಿ ಮಾತನಾಡುತ್ತಿದ್ದಾಳೆ. ವೈದ್ಯರ ತಂಡ ನಿರಂತರವಾಗಿ ಯುವತಿಯ ಚಿಕಿತ್ಸೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ

  • ಆ್ಯಸಿಡ್ ದಾಳಿಯಿಂದ ಯುವತಿಯ ದೇಹ ಶೇ.50ರಷ್ಟು ಸುಟ್ಟಿದೆ: ವೈದ್ಯ ಕಾರ್ತಿಕ್

    ಆ್ಯಸಿಡ್ ದಾಳಿಯಿಂದ ಯುವತಿಯ ದೇಹ ಶೇ.50ರಷ್ಟು ಸುಟ್ಟಿದೆ: ವೈದ್ಯ ಕಾರ್ತಿಕ್

    ಬೆಂಗಳೂರು: ಆ್ಯಸಿಡ್ ದಾಳಿಗೊಳಗಾದ ಯುವತಿಯ ದೇಹ ಶೇ.42ರಿಂದ 50ರಷ್ಟು ಸುಟ್ಟು ಹೋಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯ ಕಾರ್ತಿಕ್ ಹೇಳಿದ್ದಾರೆ.

    ಯುವತಿಗೆ ಚಿಕಿತ್ಸೆ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಆ್ಯಸಿಡ್ ಅಟ್ಯಾಕ್ ಆಗಿ ಯುವತಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ರು. ಸುಟ್ಟ ಗಾಯದ ಕಂಟೆಂಟ್ ಚೆಕ್ ಮಾಡುತ್ತಿದ್ದೇವೆ. ಇನ್ನೂ ಗೊತ್ತಾಗ್ತಿಲ್ಲ ಎಂದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಪ್ರಕರಣ, ಯುವತಿ ಪರಿಸ್ಥಿತಿ ಗಂಭೀರವಾಗಿದೆ: ಡಿಸಿಪಿ ಸಂಜೀವ್ ಪಾಟೀಲ್

    ಆಸ್ಪತ್ರೆಗೆ ಕರೆತಂದಾಗ ಆಕೆಗೆ ಬಿಪಿ ಲೋ ಇತ್ತು. ಕೂಡಲೇ ಚಿಕಿತ್ಸೆ ನೀಡಲಾಗಿದೆ. ಈಗ ಸ್ವಲ್ಪ ಇಂಪ್ರುಮೆಂಟ್ ಆಗಿದೆ. ದೇಹವು ಶೇಕಡ 42 ರಿಂದ 50 ರಷ್ಟು ಸುಟ್ಟಿದೆ. ತುರ್ತು ಚಿಕಿತ್ಸೆ ಏನ್ ಕೊಡಬೇಕೋ ಅದನ್ನ ನೀಡಲಾಗಿದೆ. ಅವರ ಪೋಷಕರು ಒತ್ತಾಯದ ಮೇರೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕಾತೀಕ್ ತಿಳಿಸಿದರು.

    ನಡೆದಿದ್ದೇನು..?
    7 ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗೇಶ್ ಎಂಬಾತ ಇಂದು ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಪ್ರೀತಿ ನಿರಾಕರಿಸಿದ್ದಕ್ಕಾಗಿಯೇ ನಾಗೇಶ್ ಯುವತಿ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇಂದು ಬೆಳಗ್ಗೆ ಎಂಟೂವರೆ ಸುಮಾರಿಗೆ ಕೆಲಸಕ್ಕೆಂದು ಯುವತಿ ತಂದೆ ಬೈಕ್‍ನಲ್ಲಿ ಕರೆದುಕೊಂಡು ಬಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಡ್ರಾಪ್ ಮಾಡಿ ಹೋಗಿದ್ರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ನಾಗೇಶ್ ಸೇಡು ತೀರಿಸಿಕೊಂಡಿದ್ದಾನೆ.

    ಘಟನೆಯಿಂದ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಬಳಿಕ ನಾಗೇಶ್ ಸ್ಥಳದಿಂದ ಪರಾರಿಯಾಗಿದ್ದು. ನಾಗೇಶ್‍ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

  • ಆ್ಯಸಿಡ್ ದಾಳಿ ಪ್ರಕರಣ, ಯುವತಿ ಪರಿಸ್ಥಿತಿ ಗಂಭೀರವಾಗಿದೆ: ಡಿಸಿಪಿ ಸಂಜೀವ್ ಪಾಟೀಲ್

    ಆ್ಯಸಿಡ್ ದಾಳಿ ಪ್ರಕರಣ, ಯುವತಿ ಪರಿಸ್ಥಿತಿ ಗಂಭೀರವಾಗಿದೆ: ಡಿಸಿಪಿ ಸಂಜೀವ್ ಪಾಟೀಲ್

    ಬೆಂಗಳೂರು: ಆ್ಯಸಿಡ್ ದಾಳಿ ಪ್ರಕರಣ ಸಂಬಂಧಿಸಿದಂತೆ ಯುವತಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

    ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡ್ತಿದ್ದಳು. ಇಂದು ಬೆಳಗ್ಗೆ ಎಂಟೂವರೆ ಸುಮಾರಿಗೆ ಯುವತಿ ತಂದೆ ಬೈಕ್‍ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಆರೋಪಿ ನಾಗೇಶ್, ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಮೊದಲೇ ಆ್ಯಸಿಡ್ ಹಾಕಲು ಆರೋಪಿ ಸಿದ್ಧತೆ ಮಾಡ್ಕೊಂಡು ಬಂದಿದ್ದ. ಸದ್ಯ ಯುವತಿ ಪರಿಸ್ಥಿತಿ ಗಂಭೀರವಾಗಿದೆ. ಒಂದು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶೌಚಾಲಯಕ್ಕೆ ಬಳಸುವ ಆ್ಯಸಿಡ್‍ನಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೃತ್ಯಕ್ಕೆ ಬಳಸಿದ್ದ ಆ್ಯಸಿಡ್ ಯಾವುದು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.