Tag: ಆ್ಯಪಲ್ ಕಂಪನಿ

  • iPhone ಕಾರ್ಖಾನೆ ಆಹಾರ ಸೇವಿಸಿ 150 ಮಂದಿ ಅಸ್ವಸ್ಥ

    iPhone ಕಾರ್ಖಾನೆ ಆಹಾರ ಸೇವಿಸಿ 150 ಮಂದಿ ಅಸ್ವಸ್ಥ

    ಚೆನ್ನೈ: ಐಫೋನ್ ಕಾರ್ಖಾನೆಯಲ್ಲಿ ಕಲುಷಿತ ಆಹಾರವನ್ನು ಸೇವಿಸಿ 150 ಮಂದಿ ಅಸ್ವಸ್ಥರಾಗಿದ್ದಾರೆ.

    ಆ್ಯಪಲ್ ಕಂಪನಿಯ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯಲ್ಲಿ ನೀಡಿದ ಕಲುಷಿತ ಆಹಾರ ಸೇವೆಯಿಂದಾಗಿ ಅಸ್ವಸ್ಥಗೊಂಡು, 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 256  ನ್ನು ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದ್ದು, 159 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 155 ಮಂದಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್

    ಈ ವಿಚಾರವಾಗಿ ಕೋಪಗೊಂಡ ಸಿಬ್ಬಂದಿ ಬೆಂಗಳೂರು-ಚೆನ್ನೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಸ್ವಸ್ಥರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಕಂಪನಿ ಸಹಾಯ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ರಸ್ತೆತಡೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

  • ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.

    ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ ಕಂತು ಕಡಿಮೆಯಾಗಲಿದೆ. ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಒಂದು ತಿಂಗಳಿನಿಂದ ಐ-ಫೋನ್ ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ಹೊಸ ಸ್ಕೀಮ್ ನಿಂದಾಗಿ ಐ-ಫೋನ್ ಚೇತರಿಸಿಕೊಳ್ಳುತ್ತಿದೆ.

    ಐ-ಫೋನ್ ಗಾಗಿ ಬಡ್ಡಿ ರಹಿತ ಸಾಲ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಕೊಳ್ಳಬೇಕೆಂದು ಚೀನಾದ ಮೂರು ದೊಡ್ಡ ಬ್ಯಾಂಕ್ ಗಳು ತಿಳಿಸಿವೆ. 12 ರಿಂದ 24 ಕಂತುಗಳಲ್ಲಿ ಗ್ರಾಹಕರು ಹಣವನ್ನು ಪಾವತಿಸಬೇಕಾಗುತ್ತದೆ.

    24 ತಿಂಗಳು ಕಂತಿನ ಸೌಲಭ್ಯ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ. ಇನ್ನು ಐ-ಫೋನ್ ಬಳಕೆ ಮಾಡುತ್ತಿರುವ ಬಳಕೆದಾರರು ತಮ್ಮ ಹಳೆ ಫೋನ್ ಬದಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಳೆ ಫೋನ್ ಗಳನ್ನು ಬದಲಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯ್ತಿಯನ್ನು ಆ್ಯಪಲ್ ಕಂಪನಿ ನೀಡಲು ಮುಂದಾಗಿದೆ. ಈ ವಿಶೇಷ ಆಫರ್ ನಿಂದ 2018ರ ಡಿಸೆಂಬರ್ ನಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಕಂಪನಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv