Tag: ಆ್ಯಂಬುಲೆನ್ಸ್

  • ಅಂಬುಲೆನ್ಸ್‌ನಲ್ಲಿ ಮೃತದೇಹ ಹೊತ್ತು ಹೋಗುತ್ತಿದ್ದ ಸಂಬಂಧಿಕರು ಆಸ್ಪತ್ರೆ ಪಾಲು

    ಅಂಬುಲೆನ್ಸ್‌ನಲ್ಲಿ ಮೃತದೇಹ ಹೊತ್ತು ಹೋಗುತ್ತಿದ್ದ ಸಂಬಂಧಿಕರು ಆಸ್ಪತ್ರೆ ಪಾಲು

    ಚಿಕ್ಕಬಳ್ಳಾಪುರ: ಮೃತದೇಹ ಹೊತ್ತು ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತಕ್ಕೀಡಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ.

    ಯಾದಗಿರಿ ಮೂಲದ ವ್ಯಕ್ಯಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಮೃತನ ಕುಟುಂಬ ಬೆಂಗಳೂರಿನಿಂದ ಅಂಬುಲೆನ್ಸ್‌ ಮುಖಾಂತರ ಸ್ವಗ್ರಾಮ ಯಾದಗಿರಿಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಯೂ-ಟರ್ನ್ ಮಾಡಲು ಟಿಪ್ಪರ್ ಲಾರಿಯೊಂದು ತಕ್ಷಣ ಬ್ರೇಕ್ ಹಾಕಿ ತಿರುವು ಪಡೆದಿದೆ. ಇದನ್ನೂ ಓದಿ:  ಪ್ರವೀಣ್ ನೆಟ್ಟಾರು ಹತ್ಯೆ – ಕರ್ನಾಟಕ ಕಾಂಗ್ರೆಸ್ SDPI, PFI ಗೆ ಪ್ರೋತ್ಸಾಹ ನೀಡುತ್ತಿದೆ: ಜೋಶಿ

    ಈ ವೇಳೆ ಟಿಪ್ಪರ್ ಹಾಗೂ ಅಂಬುಲೆನ್ಸ್‌ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಂಬುಲೆನ್ಸ್‌ನಲ್ಲಿದ್ದ ಮೃತನ ಸಂಬಂಧಿಕರು ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೋಗಿ ಕರೆದೊಯ್ಯಲು 1.20 ಲಕ್ಷ ಬಿಲ್ ಮಾಡಿದ ಅಂಬ್ಯುಲೆನ್ಸ್

    ರೋಗಿ ಕರೆದೊಯ್ಯಲು 1.20 ಲಕ್ಷ ಬಿಲ್ ಮಾಡಿದ ಅಂಬ್ಯುಲೆನ್ಸ್

    ಚಂಡೀಗಢ: ಕೋವಿಡ್ ಸಂದರ್ಭದಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ,ಅಂಬ್ಯುಲೆನ್ಸ್‍ನವರು ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಆರೋಪಕ್ಕೆ ಇದೀಗ ದೆಹಲಿಯಲ್ಲಿ ನಡೆದ ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ.

    ಗುರುಗಾಂನಿಂದ ಪಂಜಾಬ್‍ನ ಲೂಧಿಯಾನಕ್ಕೆ (350 ಕಿ.ಮೀ) ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗಲು ಖಾಸಗಿ ಅಂಬ್ಯುಲೆನ್ಸ್ ಏಜೆನ್ಸಿಯೊಂದು ಬರೋಬ್ಬರಿ 1.20 ಲಕ್ಷ ರೂಪಾಯಿ ಬಿಲ್ ಮಾಡಿದೆ. ಕೊರೊನಾ ಸೋಂಕಿನಿಂದ ನರಳುತ್ತಿದ್ದ ವಯಸ್ಸಾದ ವೃದ್ಧಯೊರ್ವಳಿಗೆ ಗುರುಗಾಂವ್ ಆಸ್ಪತ್ರೆಗಳಲ್ಲಿ ಬೆಡ್ ದೊರೆತಿರಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಬೆಡ್ ಸಿಗದೆ ಇದ್ದಾಗ ಪಂಜಾಬ್‍ನ ಲೂಧಿಯಾನಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಈ ವೇಳೆಯೂ ಅಂಬುಲೆನ್ಸ್ ಕೊರತೆ ಎದುರಾಗಿತ್ತು. ಕೊನೆಗೆ ದೆಹಲಿ ಮೂಲದ ಖಾಸಗಿ ಅಂಬುಲೆನ್ಸ್ ಸಿಕ್ಕಿತ್ತು. 350ಕಿ.ಮೀ ಪ್ರಯಾಣಕ್ಕೆ ಅಂಬುಲೆನ್ಸ್ ಆಪರೇಟರ್ 1 ಲಕ್ಷದಾ 40 ಸಾವಿರ ರೂಪಾಯಿ ಪಾವತಿಸುವಂತೆ ಕೇಳಿದ್ದಾನೆ. ಕೊನೆಗೂ ಮನವಿ ಮಾಡಿಕೊಂಡಾಗ 20 ಸಾವಿರ ರೂಪಾಯಿ ಕಡಿಮೆ ಮಾಡಿದ್ದಾರೆ.

    ಪ್ರಯಾಣ ಆರಂಭಕ್ಕೂ ಮುನ್ನವೇ 95,000 ರೂಪಾಯಿ ಕಟ್ಟಲಾಗಿದೆ. ಆಸ್ಪತ್ರೆ ತಲುಪಿದ ಬಳಿಕ ಬಾಕಿ ಮೊತ್ತವನ್ನು ಸಂದಾಯ ಮಾಡಲಾಗಿದೆ. ಹಣ ಪಡೆದಿದ್ದಕ್ಕೆ ಏರ್ ಅಂಬ್ಯುಲೆನ್ಸ್‍ನವರು ಪಾವತಿಯನ್ನು ನೀಡಿದ್ದಾರೆ. ಲೂಧಿಯಾನದಲ್ಲಿ ವೃದ್ಧೆಗೆ ಬೇಡ್ ದೊರೆತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬ್ಯುಲೆನ್ಸ್‍ನವರಿಗೆ ನೀಡಲಾದ 1.20 ಲಕ್ಷ ರೂ. ಬಿಲ್ ವೃದ್ಧೆಯ ಕುಟುಂಬದವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸರು ಅಂಬ್ಯುಲೆನ್ಸ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ರೋಗಿಗಳ ರಕ್ಷಣೆಗೆ ಆಟೋ ಅಂಬ್ಯುಲೆನ್ಸ್

    ಕೊರೊನಾ ರೋಗಿಗಳ ರಕ್ಷಣೆಗೆ ಆಟೋ ಅಂಬ್ಯುಲೆನ್ಸ್

    ನವದೆಹಲಿ: ಕೊರೊನಾ ರೋಗಿಗಳ ರಕ್ಷಣೆಗೆ ಆಟೋರಿಕ್ಷಾ ಅಂಬ್ಯುಲೆನ್ಸ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೋಡಿಗಿಳಿದಿವೆ.

    ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟಿವೈಸಿಐಎ ಪೌಂಡೇಷನ್ ಸಹಯೋಗದಲ್ಲಿ 10 ಆಟೋಗಳನ್ನು ಆಟೋ ಅಂಬ್ಯುಲೆನ್ಸ್ ನ್ನಾಗಿ ಪರಿವರ್ತಿಸಿ ಸೇವೆಗೆ ಲಭ್ಯವಾಗುವಂತೆ ಮಾಡಿದ್ದಾರೆ.

    ಪ್ರಾರಂಭಿಕ ಹಂತದ ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ, ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

    ಆಟೋ  ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಸಿಲೆಂಡರ್ ಹಾಗೂ ಸ್ಯಾನಿಟೈಸರ್‍ಗಳ ಸೌಲಭ್ಯಗಳು ಇರಲಿವೆ ಎಂದು ಪ್ರಕಟಣೆಯಲ್ಲಿತಿಳಿಸಲಾಗಿದೆ. ಮೊದಲ ಹಂತದಲ್ಲಿ 10 ಆಟೋಗಳನ್ನು ಅಂಬ್ಯುಲೆನ್ಸ್ ಗಳಾಗಿ ಪರಿವರ್ತಿಸಲಾಗಿದೆ. ಜನರಿಂದ 25 ಲ್ಷದವರೆಗೆ ಫಂಡ್ ಕಲೆಕ್ಟ್ ಮಾಡಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಟೋ ಅಂಬ್ಯುಲೆನ್ಸ್ ಸೇವೆ ವಿಸ್ತರಿಸುವುದಾಗಿ ಟಿವೈಸಿಐಎ ಪೌಂಡೇಷನ್ ತಿಳಿಸಿದೆ.

  • ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಇತರೆ ಅವಘಡಗಳು ಸಂಭವಿಸಬಹುದು ಎಂಬ ಉದ್ದೇಶದಿಂದ ಮುನ್ನಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 108 ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

    ಜಿಲ್ಲೆಯ 16 ಆರೋಗ್ಯ ಕವಚ ಅಂಬುಲೆನ್ಸ್ ಗಳು ಸೇವೆಗೆ ಸಿದ್ಧವಾಗಿದ್ದು, ಸಿಬ್ಬಂದಿ ಸಹ ಜನರ ಸೇವೆಗೆ ನಾವಿದ್ದೇವೆ ಅಂತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಉಳಿದ ದಿನಕ್ಕಿಂತ ಶೇ.30 ರಿಂದ 35 ರಷ್ಟು ಹೆಚ್ಚಿನ ಅಪಘಾತ ಸಂಭವಿಸುತ್ತವೆ ಎಂದು ಹಿಂದಿನ ಅಂಕಿ ಅಂಶಗಳಿಂದ ಋಜುವಾತಾಗಿದೆ. ಹೀಗಾಗಿ ಹೊಸ ವರ್ಷಾಚರಣೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸಲು 108 ಆರೋಗ್ಯ ಕವಚ ಸೇವೆ ಸನ್ನದ್ಧಗೊಂಡಿದೆ.

    ಹೊಸ ವರ್ಷಾಚರಣೆ ನಡೆಯುವ ಸ್ಥಳ ಹಾಗೂ ಪ್ರಮುಖವಾಗಿ ಆಕ್ಸಿಡೆಂಟಲ್ ಜೋನ್ ಸೇರಿದಂತೆ ಹೈವೇಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಸೇವೆಗಾಗಿ 108 ಅಂಬುಲೆನ್ಸ್ ಸಿಬ್ಬಂದಿಗಳು ಹೆಚ್ಚಿನ ಕೆಲಸ ಮಾಡುವಂತೆ ಪ್ರೇರೇಪಿಸಿ, ಕಾಲ್ ಸೆಂಟರ್ ಹಾಗೂ ಇತರೆ ಸಿಬ್ಬಂದಿಯ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ನಂದಿ ಗಿರಿಧಾಮ ತಪ್ಪಲು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಅಪಘಾತ ನಡೆಯುಬಹುದಾದ ರಸ್ತೆಗಳ ಬಳಿ ಅಂಬುಲೆನ್ಸ್ ಗಳನ್ನ ನಿಯೋಜಿಸಲಾಗುವುದು. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭಸಲ್ಲಿ ಟೋಲ್ ಫ್ರೀ ನಂಬರ್ 108 ಗೆ ಕರೆ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಕವಚ ಸೇವೆಯ 108 ಅಂಬುಲೆನ್ಸ್‍ಗಳ ಜಿಲ್ಲಾ ವ್ಯವಸ್ಥಾಪಕ ಕಪಿಲ್ ತಿಳಿಸಿದ್ದಾರೆ.