Tag: ಆ್ಯಂಡಿ

  • ಗೆಳೆತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಆ್ಯಂಡಿ

    ಗೆಳೆತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಆ್ಯಂಡಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-6 ಸ್ಪರ್ಧಿ ಆಂಡ್ರ್ಯೂ ಜಯಪಾಲ್ ಅವರು ತಮ್ಮ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಆ್ಯಂಡಿ ತಮ್ಮ ಗೆಳತಿ ಜನನಿ ಗಣೇಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಡಲಿದ್ದಾರೆ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಜನನಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಕುಟುಂಬದವರು ಅನೇಕ ವರ್ಷಗಳಿಂದ ಪರಿಚಯವಿದ್ದು, ಜನನಿ ಹಾಗೂ ಆ್ಯಂಡಿ ಫ್ಯಾಮಿಲಿ ಫ್ರೆಂಡ್ ಆಗಿದ್ದಾರೆ.

    ಮೊದಲು ಆ್ಯಂಡಿ ಹಾಗೂ ಜನನಿ ಸ್ನೇಹಿತರಾಗಿದ್ದರು. ಬಳಿಕ ಸ್ವತಃ ಆ್ಯಂಡಿ ರೊಮ್ಯಾಂಟಿಕ್ ಆಗಿ ಜನನಿಯ ಬಳಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡಿದ್ದಾರೆ. ಜನನಿ ಕೂಡ ಆ್ಯಂಡಿ ಪ್ರೀತಿ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಇಬ್ಬರು ತಮ್ಮ ಮನೆಯವರಿಗೆ ಒಪ್ಪಿಸಿ 2020ರಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.

    ಆ್ಯಂಡಿ ತನ್ನ ಮದುವೆಯ ವಿಷಯ ಮಾತನಾಡಿ, ನಮ್ಮಿಬ್ಬರ ಕುಟುಂಬದವರು ನಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆ. ಜನನಿ ನೋಡಲು ಮಾಡೆಲ್ ರೀತಿ ಇದ್ದಾರೆ. ಆದರೆ ನಾನು ಹೀಗೆ ಇದ್ದೇನೆ. ಆದರೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗುತ್ತಿದ್ದೇವೆ. ಮದುವೆಗಾಗಿ ಖರ್ಚು ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಸಿಂಪಲ್ ಆಗಿ ಮದುವೆ ಆಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಆ್ಯಂಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಆ್ಯಂಡಿ ಈಗ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಬಿಗ್‍ಬಾಸ್ ಮನೆಗೆ ಹೋದಾಗ ಆ್ಯಂಡಿ 145 ಕೆಜಿ ತೂಕ ಇದ್ದರು. ಆದರೆ ಈಗ ಅವರು ಜಿಮ್‍ಗೆ ಹೋಗಿ ಬರೋಬ್ಬರಿ 27 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

  • ಕವಿತಾಗೆ ಲೈಂಗಿಕ ಕಿರುಕುಳ ಪ್ರಕರಣ- ವಿಚಾರಣೆಗೆ ಹಾಜರಾದ ಆ್ಯಂಡಿ

    ಕವಿತಾಗೆ ಲೈಂಗಿಕ ಕಿರುಕುಳ ಪ್ರಕರಣ- ವಿಚಾರಣೆಗೆ ಹಾಜರಾದ ಆ್ಯಂಡಿ

    ಬೆಂಗಳೂರು: ಬಿಗ್ ಬಾಸ್ ಸೀಸನ್ ಸ್ಪರ್ಧಿ ಕವಿತಾ ಗೌಡಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆ್ಯಂಡಿ ಇಂದು ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.

    ರಾಜ್ಯ ಮಹಿಳಾ ಆಯೋಗವು ಕವಿತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಆ್ಯಂಡಿ ಹಾಗೂ ಕವಿತಾರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಆ್ಯಂಡಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಕವಿತಾ ಹಾಜರಾಗಬೇಕಿದೆ.

    ಏನಿದು ಪ್ರಕರಣ?
    ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿ ವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟು ಮಾಡಿತು ಎಂದು ಕವಿತಾ ಅವರು ಆ್ಯಂಡಿ ಮೇಲೆ ಆರೋಪಿಸಿದ್ದರು.

    ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಆ್ಯಂಡಿ, “ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದ್ದವು. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕವಿತಾ ಆರೋಪಕ್ಕೆ ತಿರುಗೇಟು ಕೊಟ್ಟ ಆ್ಯಂಡಿ

    ಕವಿತಾ ಆರೋಪಕ್ಕೆ ತಿರುಗೇಟು ಕೊಟ್ಟ ಆ್ಯಂಡಿ

    -ಮನೆಯಿಂದ ಹೊರ ಬಂದ್ಮೇಲೆ ಇವಾಗ ನೆನಪಾಯ್ತಾ?

    ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಆ್ಯಂಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನು ಕವಿತಾ ಅವರನ್ನು ಭೇಟಿ ಮಾಡಿಲ್ಲ, ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಇದುವರೆಗೂ ನಾನು ಅವರಿಗೆ ಮೆಸೇಜ್ ಕೂಡ ಮಾಡಿಲ್ಲ ಹಾಗೂ ಅವರ ಸಂಪರ್ಕದಲ್ಲೇ ಇಲ್ಲ. ಬೆಳಗ್ಗೆಯಿಂದ ನನಗೆ ಸುಮಾರು ಕರೆ ಬಂದಿದೆ. ಆದರೆ ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ಅವರು ಏನೂ ದೂರು ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಆ್ಯಂಡಿ ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಲ್ಲೂ ಒಬ್ಬನೇ ಇದ್ದೆ. ಈಗ ಕೂಡ ಒಬ್ಬನೇ ಇದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಟಾಸ್ಕ್‍ಗಾಗಿ ನಾನು ಕವಿತಾ ಜೊತೆ ಮಾತನಾಡಲು 10 ನಿಮಿಷ ಕೇಳಿದೆ. ಇದಕ್ಕೆ ಕವಿತಾ ಅವರು ಒಪ್ಪಿಕೊಂಡು 2 ದಿನ ನಂತರ ಇಲ್ಲ ಎಂದು ಹೇಳುತ್ತಾರೆ. ಅದೇ ವಾರ ಸುದೀಪ್ ಅವರು ನನ್ನನ್ನು ಪ್ರೀತಿಸಿ ಎಂದು ಹೇಳಿದ್ದರು. ಆಗಿನಿಂದ ನಾನು ಅವರ ಜೊತೆ ಮಾತನಾಡಲು ಕಡಿಮೆ ಮಾಡಿದೆ. ನಾನು ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ನನಗೆ ಫೋನ್ ಮಾಡುತ್ತೀನಿ ಎಂದು ಹೇಳಿದ್ದರು. ಮತ್ತೆ ಪ್ರಥಮ್ ಅವರು ಬಂದಾಗ ಕೂಡ ಅಣ್ಣ-ತಂಗಿ ಎಂದು ಹೇಳುತ್ತಿದ್ದರು. ಆಗ ನಾನು ಸರಿ ಅಣ್ಣ- ತಂಗಿ ಎಂದು ಸುಮ್ಮನೆ ಇದೆ.

    ಕೆರಿಯರ್ ಹಾಳಾಗ್ತಿದೆ:
    ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಎಲ್ಲರು ಒಂದೊಂದು ಕೆಲಸ ಮಾಡುತ್ತಾರೆ. ನಾನು ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಪಾಠಗಳನ್ನು ಕಲಿತ್ತಿದ್ದೇನೆ. ನಾನು ಇನ್ಮುಂದೆ ಜೀವನದಲ್ಲಿ ಹೀಗೆ ಇರಲ್ಲ, ನಾನು ಬದಲಾಗಿದ್ದೇನೆ ಎಂದು ಹೇಳಿ ಬಂದೆ. ಆದರೆ ಇವರು ಬಿಡಲ್ಲ. ನನ್ನನ್ನು ಸಾಯಿಸುತ್ತಿದ್ದಾರೆ. ಮನೆಯಿಂದ ಹೊರ ಬಂದ್ಮೇಲೆ ಕವಿತಾ ಜೊತೆ ಮಾತು ಕೂಡ ಆಡಲಿಲ್ಲ. ಕಷ್ಟಪಟ್ಟು ನಾನು ಒಂದು ಕಾರ್ಯಕ್ರಮ ಮಾಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ನನಗೆ ಕಾಲ್ ಮಾಡಿ ಈ ವಿಷಯ ತಿಳಿಸಿದ್ದರು. ನಾನು ಆ ಶೋನಲ್ಲಿ ಸರಿಯಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನನ್ನ ಕೆರಿಯರ್ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ಫೋನ್ ಮಾಡುತ್ತೀನಿ ಎಂದು ಹೇಳಿದರು. ಆದರೆ ನಾನು ಅವರಿಗೆ ಕರೆ ಮಾಡುತ್ತೇನೆ ಎಂದು ಹೇಳಲಿಲ್ಲ. ಬಳಿಕ ಬಿಗ್ ಬಾಸ್ ಮನೆಯ ಪಾರ್ಟಿಯಲ್ಲಿ ನೀನು ಮಾಡಿದನ್ನು ನಾನು ಮರೆಯುವುದಿಲ್ಲ. ನಿನಗೆ ಮುಂದೆ ಇಟ್ಟಿದ್ದೀನಿ ಎಂದು ಹೇಳಿದ್ದರು. ಬಳಿಕ ಮತ್ತೊಮ್ಮೆ ನನಗೆ ಒಪನ್ ವಾರ್ನಿಂಗ್ ನೀಡಿದ್ದರು. ಅದಾದ ಬಳಿಕ ನಾನು ಅವರ ಜೊತೆ ಮಾತನಾಡಿಲ್ಲ. ಕವಿತಾ ಅವರು ಹಿಂದೆ ನಡೆಯುತ್ತಿರುವುದನ್ನು ಮತ್ತೆ ಈಗ ತೆಗೆದುಕೊಂಡು ಬರುತ್ತಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟಾ? ಎಂದು ಹೇಳಬೇಕಾ ಬೇಡ್ವಾ ಎಂದು ಗೊತ್ತಾಗುತ್ತಿಲ್ಲ ಎಂದು ಆ್ಯಂಡಿ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು

    ಸೋತ ಹತಾಶೆಯಲ್ಲಿ ಕವಿತಾ:
    ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದೆ. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು, ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ.

    ನಾನು ಕಿರಿಕಿರಿ ಮಾಡಿದರೆ ಅದು ಕೇವಲ ಟಾಸ್ಕ್ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಎಲ್ಲರು ಮಾಡುತ್ತಾರೆ. ಬಿಗ್ ಬಾಸ್ ಮುಗಿದ ನಂತರ ಹೊರ ಬಂದ್ಮೇಲೆ ನಾನು ಅವರಿಗೆ ಕಿರಿಕಿರಿ ಮಾಡಿಲ್ಲ. ನಾನು ಅವರ ವಿರುದ್ಧ ಪ್ರತಿ ದೂರು ನೀಡುವುದಿಲ್ಲ. ಅಲ್ಲಿ ಆಗಿರುವ ವಿಷಯಗಳಿಗೆ ನಾನು ಸುದೀಪ್ ಅವರ ಮುಂದೆಯೇ ಪಬ್ಲಿಕ್ ಅಲ್ಲಿ ಕ್ಷಮೆ ಕೇಳಿದ್ದೀನಿ. ವೇದಿಕೆ ಮೇಲೆ ನಿಂತುಕೊಂಡು ಕರ್ನಾಟಕದ ಜನತೆ ಮುಂದೆ ಸಾರಿ ಕೇಳಿದ್ದೇನೆ. ಕವಿತಾ ಮಾಡಿರುವ ಆರೋಪಗಳು ಸುಳ್ಳು. ನಾನು ಅವರ ಹಿಂದೆ ತಿರುಗಿಲ್ಲ. ಅವರಿಗೆ ತೊಂದರೆ ಆದಾಗ ಅಲ್ಲೇ ಏಕೆ ಹೇಳಲಿಲ್ಲ. 20 ದಿನದ ನಂತರ ಅವರು ನೆನಪಾಯಿತಾ ಎಂದು ಆ್ಯಂಡಿ ಪ್ರಶ್ನೆ ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಸ್ವಲ್ಪ ಜನ ನನ್ನನ್ನು ದ್ವೇಷ ಮಾಡುವವರು ಇದ್ದಾರೆ, ತುಂಬಾ ಜನ ಪ್ರೀತಿ ಮಾಡುವವರು ಇದ್ದಾರೆ. ನಾನು ಈಗ ನನ್ನ ಸಿನಿಮಾಗಳಲ್ಲಿ ಅವಕಾಶ ಪಡೆದು ನನ್ನ ಕೆರಿಯರ್ ಶುರು ಮಾಡಬೇಕು ಎಂದುಕೊಂಡೆ. ಆದರೆ ಅವರು ಇವನನ್ನು ಬೆಳೆಯಲು ಬಿಡಬಾರದು ತುಳಿದು ಸಾಯಿಸಬೇಕು ಎಂದುಕೊಂಡಿದ್ದಾರೋ ಎನೋ ಗೊತ್ತಿಲ್ಲ. ನಾನು ಕವಿತಾ ಅವರ ಮೇಲೆ ದೂರು ನೀಡುವುದಿಲ್ಲ. ಅಲ್ಲಿ ಏನೇ ನಡೆದಿದ್ದರು, ಕೇವಲ ಟಾಸ್ಕ್ ಅಷ್ಟೇ. ಕವಿತಾ ಅವರು ಫೈನಲ್‍ನಲ್ಲಿ ವಿನ್ ಆಗಿಲ್ಲ ಎಂದು ಅವರ ತಾಯಿ ಮೈಕ್ ತೆಗೆದುಕೊಂಡು ಮಾತಾಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು

    ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು

    – ಖಾಸಗಿ ವಾಹಿನಿಯ ಶೋನಲ್ಲಿಯೂ ಆ್ಯಂಡಿಯಿಂದ ಕಿರುಕುಳ

    ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

    ನಗರದ ಕೆ.ಜಿ.ರಸ್ತೆಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತಾಯಿಯ ಜೊತೆಗೆ ಹೋಗಿ ಕವಿತಾ ಅವರು ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದೆ ಎಂದರು.

    ಪ್ರೋಗ್ರಾಂ ಪ್ರೊಡ್ಯೂಸರ್ ಗುರುದಾಸ್ ಶಣೈ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಉಂಟಾಗಿದ್ದ ಅಹಿತಕರ ಘಟನೆಯ ಕುರಿತು ಹೇಳಿಕೊಂಡು ದೂರು ನೀಡುವ ವಿಚಾರವನ್ನು ಗುರುದಾಸ್ ಶಣೈ ತಿಳಿಸಿದ್ದೆ. ಅವರು ಕೂಡ ಬೆಂಬಲ ಕೊಡುತ್ತೇವೆಂದು ತಿಳಿಸಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಬಂದು ಯೋಜನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರುವೆ ಎಂದು ಸ್ಪಷ್ಟನೆ ನೀಡಿದರು.

    ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟುಮಾಡಿತು ಎಂದರು.

    ಬಿಗ್‍ಬಾಸ್ ಮನೆಯಲ್ಲಿ ದೂರು ನೀಡದ ಕುರಿತು ಪ್ರತಿಕ್ರಿಯೆ ನೀಡಿದ ಕವಿತಾ, ಸ್ಪರ್ಧಿಗಳ ಪ್ರತಿ ಚಲನವಲವನ್ನು ನಟ ಸುದೀಪ್, ಗುರುದಾಸ್ ಶಣೈ, ಪರಮೇಶ್ ಗುಂಡಕಲ್ ಅವರನ್ನು ಒಳಗೊಂಡಂತೆ ಬಿಗ್‍ಬಾಸ್ ಮನೆ ಸಿಬ್ಬಂದಿ ನೋಡುತ್ತಿರುತ್ತಾರೆ. ಕೆಲವು ಬಾರಿ ಕನ್ಫೆಷನ್ ರೂಮ್‍ಗೆ ಹೋಗಿ ಆ್ಯಂಡಿ ವಿರುದ್ಧ ದೂರು ನೀಡಿದ್ದೇನೆ. ಅವರು ಕ್ರಮ ಕೈಗೊಂಡರೋ ಬಿಟ್ಟರೋ ನನಗೆ ಗೊತ್ತಿಲ್ಲ. ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ಬಳಿಕ ಮತ್ತೆ ಕನ್ಫೆಷನ್ ರೂಮ್‍ಗೆ ಹೋಗಿ ಮನೆಯಿಂದ ಹೊರಗೆ ಹೋದ ಮೇಲೆ ಆ್ಯಂಡಿ ವಿರುದ್ಧ ದೂರು ನೀಡುತ್ತೇವೆ ಎಂದು ತಿಳಿಸಿದ್ದೆ. ಅವರು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕವಿತಾ ಹೇಳಿದರು.

    ಬಿಗ್‍ಬಾಸ್ ಮನೆಗೆ ಹೋದ ಕೆಲವೇ ದಿನಗಳಲ್ಲಿ ಆ್ಯಂಡಿ ಬಗ್ಗೆ ಗೊತ್ತಾಯಿತು. ಹೀಗಾಗಿ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇರುತ್ತಿದ್ದೆ. ಆದರೂ ಅವರೇ ಬಂದು ಮಾತನಾಡಿಸುತ್ತಿದ್ದರು. ಟಾಸ್ಕ್ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರು ಬರುತ್ತಿದ್ದ ಕಾರ್ಯಕ್ರಮಕ್ಕೆ ಗೈರು ಆಗುತ್ತಿದೆ ಎಂದರು.

    ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಹೋಗಲೆಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೆ ನನಗೆ ಪರಿಚಿತರು ಬರುವಂತೆ ಒತ್ತಾಯ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಆ್ಯಂಡಿ ಮೈಕ್ ಅನ್ನು ಪಕ್ಕಕ್ಕೆ ಇಟ್ಟು ಬೈದರು ಎಂದು ಕವಿತಾ ದೂರಿದರು.

    ಮುಂದಿನ ಸೀಸನ್‍ನಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸಬಾರದು ಎನ್ನುವ ಕಾಳಜಿ ಇದೆ. ಜೊತೆಗೆ ಆ್ಯಂಡಿ ಬಿಗ್‍ಬಾಸ್ ಮನೆಯಿಂದ ಹೊರಬಂದರೂ ಬದಲಾಗಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಮೈಕ್ ಅನ್ನು ಹಿಡಿದು, ಯಾರಿಗೂ ಕೇಳದಂತೆ ಆ್ಯಂಡಿ ಬೈಯುತ್ತಿದ್ದರು. ಇದು ಎಲ್ಲಾ ಸ್ಪರ್ಧಿಗಳ ಅನುಭವಕ್ಕೆ ಬಂದಿದೆ. ಆದರೆ ಇಲ್ಲಿ ನಾನು ನನಗೆ ಆಗಿರುವ ಸಮಸ್ಯೆ ಬಗ್ಗೆ ಮಾತ್ರ ದೂರು ನೀಡಲು ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಥಮ್ ಆರ್ಡರ್ ಕೇಳಿದ ಆ್ಯಂಡಿಯ ಮನಸ್ಸು ವಿಲವಿಲ

    ಪ್ರಥಮ್ ಆರ್ಡರ್ ಕೇಳಿದ ಆ್ಯಂಡಿಯ ಮನಸ್ಸು ವಿಲವಿಲ

    ಬೆಂಗಳೂರು: ಬಿಗ್ ಬಾಸ್ ಸೀಸನ್-6 ಮುಗಿಯಲು ಕೆಲವು ದಿನಗಳು ಮಾತ್ರ ಬಾಕಿ ಇದೆ. ಇಷ್ಟು ದಿನ ಆ್ಯಂಡಿ, ಕವಿತಾ ಮೇಲೆ ಒಂದು ಫೀಲಿಂಗ್ ಇದೆ ಎಂದು ಹೇಳುತ್ತಿದ್ದರು. ಆದರೆ ಈಗ ಕವಿತಾ ಅವರನ್ನು ತಂಗಿ ಎಂದು ಕರೆಯಬೇಕೆಂದು ಹೇಳಿದಕ್ಕೆ ಎಸ್ ಬಾಸ್ ಎಂದು ಆ್ಯಂಡಿ ಹೇಳಿದ್ದಾರೆ.

    ಬಿಗ್ ಬಾಸ್ ಮನೆಗೆ ಈ ವಾರದಲ್ಲಿ ಅತಿಥಿಗಳಾಗಿ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ಮತ್ತು ಸಮೀರ್ ಆಚಾರ್ಯ ಅವರು ಆಗಮಿಸಿದ್ದಾರೆ. ಈ ಹಳೆಯ ಸ್ಪರ್ಧಿಗಳನ್ನು ವಿಶೇಷವಾದ ಕೋಣೆಯಲ್ಲಿರಿಸಿದ್ದು, ಟಿವಿ ಹಾಗೂ ಫೋನ್ ಮೂಲಕ ಬಿಗ್ ಬಾಸ್ ಹೇಳಿದಂತೆ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಗಳನ್ನು ನೀಡುತ್ತಿದ್ದಾರೆ.

    ಇಂದಿನ ಸಂಚಿಕೆಯಲ್ಲೂ ಪ್ರಥಮ್ ಅವರು ಇನ್ನು ಮುಂದೆ ನೀವು ಕವಿತಾ ಅವರನ್ನು ತಂಗಿ ಕವಿತಾ ಎಂದೇ ಕರೆಯಬೇಕೆಂದು ಆ್ಯಂಡಿಗೆ ಹೇಳಿದ್ದಾರೆ. ಈ ವೇಳೆ ಆ್ಯಂಡಿ ‘ಬಾಸ್’ ಎಂದು ರಾಗಾ ಎಳೆದಾಗ ಪ್ರಥಮ್ ‘ಆರ್ಡರ್ ಇಸ್ ಪಾಸ್’ ಎಂದು ಹೇಳಿದ್ದಾರೆ. ಆಗ ಆ್ಯಂಡಿ ‘ಎಸ್ ಬಾಸ್’ ಎಂದು ದಿಂಬಿನಿಂದ ತಮ್ಮ ತಲೆಯನ್ನು ಚಚ್ಚಿಕೊಂಡಿದ್ದಾರೆ.

    ಸೋಮವಾರ ಗಾರ್ಡನ್ ಏರಿಯಾದಲ್ಲಿ ಶಶಿ ಮತ್ತು ಕವಿತಾ ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ ಭಾಗಿಯಾಗಿದ್ದರು. ಆ್ಯಂಡಿ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ್ಯಂಡಿ ಮಾತ್ರ ಬಾಗಿಲ ಬಳಿ ಬೆಡ್ ಶೀಟ್ ಹೊದ್ದುಕೊಂಡು ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು.

    ಕಳೆದ ವಾರ ಬಿಗ್ ಬಾಸ್ ಮನೆಗೆ ಆ್ಯಂಡಿ ಅವರ ತಂದೆ ಎಂಟ್ರಿ ನೀಡಿದ್ದರು. ಬಿಗ್ ಬಾಸ್ ಮನೆಗೆ ಬಂದು ಎಲ್ಲ ಸ್ಪರ್ಧಿಗಳು ಹಾಗೂ ತಮ್ಮ ಮಗ ಆ್ಯಂಡಿ ಜೊತೆ ಮಾತನಾಡಿ ಮನೆಯಿಂದ ಹೊರಡುವಾಗ ನಿನ್ನ ತಂಗಿ ಕವಿತಾರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಾರೆ.

    ಆ್ಯಂಡಿ ಅವರು ಪ್ರಥಮ್ ಅವರ ಆರ್ಡರ್ ರನ್ನು ಪಾಲಿಸುತ್ತಾರಾ? ಇಲ್ಲವಾ? ತಂಗಿ ಎಂದು ಕರೆದಾಗ ಕವಿತಾ ಹಾಗೂ ಮನೆಯ ಉಳಿದ ಸದಸ್ಯರ ಪ್ರತಿಕ್ರಿಯೆ ಹೇಗೆ ಇರಲಿದೆ ಎಂಬುದು ಇಂದಿನ (ಮಂಗಳವಾರ) ಸಂಚಿಕೆಯಲ್ಲಿ ತಿಳಿದು ಬರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟ ಆ್ಯಂಡಿ ತಂದೆ!

    ಬಿಗ್ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟ ಆ್ಯಂಡಿ ತಂದೆ!

    ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಆ್ಯಂಡಿ ಅವರ ತಂದೆ ಎಂಟ್ರಿ ಕೊಟ್ಟು ಮಗನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಗೆ ರಿಮೋಟ್ ಕಂಟ್ರೋಲ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ `ಪಾಸ್’ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಆಗಮಿಸುತ್ತಾರೆ.

    ಆ್ಯಂಡಿ ಅವರನ್ನು ಭೇಟಿ ಮಾಡಲು ಅವರ ತಂದೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಂದ ತಕ್ಷಣ ಲಿವಿಂಗ್ ಏರಿಯಾದಲ್ಲಿ ಕುಳಿತ್ತಿದ್ದ ಆ್ಯಂಡಿ ಅವರ ಕೈ ಹಿಡಿದುಕೊಂಡು ಒಂದು ನಿಮಿಷ ಬಾ ಎಂದು ಹೇಳಿ ಉಳಿದ ಸ್ಪರ್ಧಿಗಳ ಬಳಿ ಕ್ಷಮೆ ಕೋರಿದ್ದಾರೆ.

    ಈ ವೇಳೆ ಧನರಾಜ್ ಅವರು ಅಂಕಲ್ ನೀವು ಅಂದುಕೊಂಡಂತೆ ಏನಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿಮಗೆಲ್ಲ ಇವನು ಎಷ್ಟು ತೊಂದರೆ ಮಾಡಿದ್ದಾನೆ. ನಾನು ಯಾಕೆ ಈತನನ್ನು ಇಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.

    ಬಳಿಕ ಕ್ಯಾಮೆರಾ ಮುಂದೆ ಹೋದ ಆ್ಯಂಡಿ ತಂದೆ, ಬಿಗ್ ಬಾಸ್ ನಾನು ಮಗನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಆಗ ಆ್ಯಂಡಿ “ಡ್ಯಾಡಿ ನಾನು ಕಷ್ಟಪಟ್ಟು ಆಡಿದ್ದೇನೆ” ಎಂದು ಹೇಳಿದಾಗ ಅವರ ತಂದೆ ಕೋಪದಿಂದ ಇಲ್ಲ. ನೀನು ಎಲ್ಲರ ಬಳಿ ಪ್ರೀತಿಯನ್ನು ಸಂಪಾದಿಸಬೇಕು ಎಂದು ಹೇಳಿ ಆ್ಯಂಡಿ ಕೈ ಹಿಡಿದುಕೊಂಡು ಮನೆಯ ಮುಖ್ಯದ್ವಾರದ ಬಳಿ ಕರೆದುಕೊಂಡು ಹೋಗಿದ್ದಾರೆ.

    ಆ್ಯಂಡಿ ಅವರ ತಂದೆಯ ವರ್ತನೆ ನೋಡಿ ಮನೆಯವರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೇ ಆ್ಯಂಡಿ ಅವರನ್ನು ಲಿವಿಂಗ್ ಏರಿಯಾದಿಂದ ಕರೆದುಕೊಂಡು ಹೋಗುವಾಗ ಸ್ಪರ್ಧಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.

    ಇದು ಕೇವಲ ಪ್ರೋಮೋ ಆಗಿದ್ದು, ಆ್ಯಂಡಿ ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಾ, ಇಲ್ಲವಾ ಎಂಬುದು ಇಂದಿನ(ಗುರುವಾರ) ಸಂಚಿಕೆಯಲ್ಲಿ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ದೂರು ದಾಖಲು- ತರಲೆ ಆ್ಯಂಡಿಯ ಬಂಧನವಾಗುತ್ತಾ?

    ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ದೂರು ದಾಖಲು- ತರಲೆ ಆ್ಯಂಡಿಯ ಬಂಧನವಾಗುತ್ತಾ?

    ಬೆಂಗಳೂರು: ಕನ್ನಡ ಬಿಗ್‍ಬಾಸ್-6 ಸ್ಪರ್ಧಿ ಆ್ಯಂಡ್ರೂ (ಆ್ಯಂಡಿ) ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬೆಂಗಳೂರಿನ ಆಡುಗೋಡಿಯ ರೋಲ್ಯಾಂಡ್ ರೋಲ್ಸ್ ಎಂಬವರು ದೂರು ದಾಖಲಿಸಿದ್ದಾರೆ. ಫ್ಯೂಚರ್ ಇಂಡಿಯಾ ಆರ್ಗನೈಜೇಷನ್ ಸಂಸ್ಥೆಯ ಅಧ್ಯಕ್ಷರಾಗಿರುವ ರೋಲ್ಯಾಂಡ್ ದೂರು ದಾಖಲಾಸಿದ್ದು, ವಿಚಾರಣೆ ಹಿನ್ನೆಲೆಯಲ್ಲಿ ಆ್ಯಂಡಿಯನ್ನು ಬಿಗ್‍ಬಾಸ್ ಮನೆಯಿಂದ ಹೊರ ಕರೆತರಲಾಗುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದನ್ನೂ ಓದಿ: ಮದ್ವೆ ವಾರ್ಷಿಕೋತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿಗೆ ಬಂತು ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ದೂರು ದಾಖಲಿಸಿದ್ದು ಯಾಕೆ?
    ಡಿಸೆಂಬರ್ 26ರಂದು ಪ್ರಸಾರವಾದ ಸಂಚಿಕೆಯ ಟಾಸ್ಕ್ ನಲ್ಲಿ ಇತರೆ ಸ್ಪರ್ಧಿಗಳ ಕಣ್ಣಿಗೆ ಆ್ಯಂಡಿ ಹಾನಿಕಾರಕ ಪರ್ಪ್ಯೂಮ್ ಸ್ಪ್ರೇ ಮಾಡಿದ್ದರು. ಟಾಸ್ಕ್ ನಲ್ಲಿ ಉದ್ದೇಶಪೂರ್ವಕವಾಗಿಯೇ ಇತರೆ ಸ್ಪರ್ಧಿಗಳ ಕಣ್ಣಿಗೆ ಸ್ಪ್ರೇ ಮಾಡಿದ್ದಾನೆ. ಇದರಿಂದ ಸ್ಪರ್ಧಿಗಳ ಕಣ್ಣಿಗೆ ಹಾನಿಯಾಗಿದೆ. ಬಿಗ್ ಬಾಸ್ ಎಂದು ಸ್ಪರ್ಧಿಗಳನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಕೂಡಲೇ ಆ್ಯಂಡಿಯನ್ನ ಹೊರಗೆ ತಂದು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಮುತ್ತು ಕೊಟ್ಟ ಸೋನು – ಕಿಸ್ ಪಡೆದವ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ

    ರಾಮನಗರ ತಾಲೂಕಿನ ಇನ್ನೋವೇಟಿವ್ ಫಿಲ್ಮ್ ಸಿಟಿ ಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv