Tag: ಆ್ಯಂಕರ್ ಅನುಶ್ರೀ

  • ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    – ಅನುಶ್ರೀಗಾಗಿ ಬಿರಿಯಾನಿ, ಫಿಶ್‌ ಫ್ರೈ ಮಾಡ್ತಾರಂತೆ ಪತಿ ರೋಷನ್‌

    ಟಿ ನಿರೂಪಕಿ, ಮಾತಿನ ಮಲ್ಲಿ ಅನುಶ್ರೀ (Anchor Anushree) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಮದುವೆಯಾದ ಹುಡುಗ ರೋಷನ್ ಬಗ್ಗೆ ಈ ಹಿಂದೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಅದರಲ್ಲಿ ಪ್ರಮುಖವಾಗಿ ನಟಿ ಅನುಶ್ರೀ ಮದುವೆಯಾಗಿರುವ ರೋಷನ್ ನೂರಾರು ಕೋಟಿಯ ಒಡೆಯ. ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದೆಲ್ಲ ಸುದ್ದಿಯಾಗಿತ್ತು. ಈ ಬಗ್ಗೆ ಅನುಶ್ರಿಜ ಹಾಗೂ ರೋಷನ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    ಇಂದು ಆ.28 ರಂದು ಮದುವೆ ಬಳಿಕ ನವಜೋಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದೆ. ಈ ವೇಳೆ 300 ಕೋಟಿ, 600 ಕೋಟಿ ಒಡೆಯ ರೋಷನ್ ಅನ್ನೋ ವಿಚಾರದ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ರೋಷನ್ ಅವರು ಐಟಿ ಉದ್ಯೋಗಿಯಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವರು ಎಂದು ಹೇಳಿದ್ದಾರೆ. ಇನ್ನು ರೋಷನ್ ಮಾತಾಡಿ ನಿಮ್ಮ ಹರಕೆಯಿಂದ ನಾನು ಕೋಟಿ ಕೋಟಿ ಒಡೆಯ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾತಿನ ಮಲ್ಲಿ ಅನುಶ್ರೀ ಹೊಸ ಗಾಯನ.. ನವಜೋಡಿಗೆ ಹಾರೈಸಿದ ತಾರಾಗಣ..!

    ರೋಷನ್ ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದು, ಬೆಂಗಳೂರಿನ ಐಟಿಬಿಟಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಅನುಶ್ರೀಗಾಗಿ ಬಿರಿಯಾನಿ, ಫಿಶ್ ಪ್ರೈ ಜೊತೆಗೆ ವಿವಿಧ ಖಾದ್ಯಗಳನ್ನ ಮಾಡಿ ಕೊಡ್ತಾರಂತೆ. ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದಾರೆ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಅನುಶ್ರೀಯ ಉತ್ತರ ಸಿಕ್ಕಿದೆ. ಬೆಂಗಳೂರಿನ ಹೊರವಲಯದಲ್ಲಿ ಅನುಶ್ರೀ-ರೋಷನ್ ಮದುವೆ ಸರಳವಾಗಿ ನೆರವೇರಿದೆ.

  • ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ (Anchor Anushree) ಇಂದು (ಆ.28) ಕೊಡಗು ಮೂಲದ ರೋಷನ್ ಹೊಸ ಮನ್ವಂತರಕ್ಕೆ ಕಾಲಿಟ್ಟಿದ್ದಾರೆ.

    ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿರುವ ಅನುಶ್ರೀ

    ಬೆಂಗಳೂರಿನ (Bengaluru) ಕಗ್ಗಲಿಪುರ (Kaggalipura) ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನೂ ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿಬಿಟ್ಟಿದೆ.

    ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಇದನ್ನೂ ಓದಿ: ಅಮೆರಿಕದಲ್ಲಿ ಕುಳಿತು ಮುಧೋಳದ ಮನೆ ಕಳ್ಳತನ ತಪ್ಪಿಸಿದ ಟೆಕ್ಕಿ ಪುತ್ರಿ!

  • ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಬೆಂಗಳೂರು: ನಿರೂಪಕಿ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಚಿನಕುರಳಿ ಮಾತುಗಳಿಂದ ಮನೆ ಮಾತಾಗಿರುವ ಎಳ್ಳು ಹುರಿದಂತೆ ಮಾತನಾಡುವ ಅನುಶ್ರೀ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶೋನಲ್ಲಿ ಭಾಗವಹಿಸಿದ್ದಾಗ ಕಾರ್ಯಕ್ರಮದ ನಿರೂಪಕಿ ಸುಷ್ಮಾ, ಅತಿಥಿಯಾಗಿ ಆಗಮಿಸಿದ್ದ ಅನುಶ್ರೀ ಅವರಿಗೆ 250 ರೂ. ಹಣವಿರುವ ಲಕೋಟೆ ನೀಡುತ್ತಾರೆ. ಹಣ ನೋಡಿದ ಕೂಡಲೇ ಅನುಶ್ರೀ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಯಾವುದೇ ಇವೆಂಟ್ ಇರಲಿ, ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮಗಳಿಗೆ ಅನುಶ್ರೀಯವರ ನಿರೂಪಣೆ ಇರಬೇಕು. ಹಾಗೆಯೇ ಖಾಸಗಿ ವಾಹಿನಿಯಲ್ಲಿ ಮೂಡಿ ಬರುವ ಸಂಗೀತ ಕಾರ್ಯಕ್ರಮಕ್ಕೂ ಅನುಶ್ರೀ ಆ್ಯಂಕರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

    ಅದೇ ವಾಹಿನಿಯ ಮತ್ತೊಂದು ರಿಯಾಲಿಟಿ ಶೋನಲ್ಲಿ ತಮ್ಮ ಪ್ರೀತಿಯ ತಮ್ಮ ಸಿಂಗರ್ ಹನುಮಂತನ ಜೊತೆಯಲ್ಲಿ ಅನುಶ್ರೀ ಭಾಗವಾಹಿಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದರೆ 10 ಲಕ್ಷ ರೂ. ಹಣ ಗಳಿಸಬಹುದು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಸುಷ್ಮಾ 250 ರೂ. ಹಣದ ಲಕೋಟೆ ನೀಡುತ್ತಿದ್ದಂತೆ ಅನುಶ್ರೀ ತಮ್ಮ ಮೊದಲ ಸಂಬಳ ಇದಾಗಿತ್ತು ಎಂದು ಹೇಳುತ್ತಾ ಕಣ್ಣೀರು ಹಾಕಿದರು.

    ಮಂಗಳೂರಿನ ಸ್ಥಳೀಯ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ 800 ರೂ. ಸಂಬಳ ಸಿಗುತ್ತಿತ್ತು. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದ್ರೆ ಹೆಚ್ಚು ಹಣ ಸಿಗುತ್ತೆ ಅಂತ ಬಂದೆ. ಮೊದಲಿಗೆ ಬಂದ ಕೂಡಲೇ ಕಾರ್ಯಕ್ರಮದ ಆಯೋಜಕರು ಪ್ರತಿ ಸಂಚಿಕೆಗೆ 250 ರೂ. ಎಂದು ನಿಗದಿ ಮಾಡಿದರು. ನಾನು ಪ್ರತಿದಿನ ಸಂಚಿಕೆ ಸಿಗಬಹುದು ಅಂತ ತಿಳಿದಿದ್ದೆ. ಆದ್ರೆ ನನ್ನ ರೀತಿಯಲ್ಲಿ ಎಂಟು ಜನ ನಿರೂಪಕಿಯರಿದ್ದರು. ತಿಂಗಳಿಗೆ ನಾಲ್ಕು ಸಂಚಿಕೆ ಸಿಗೋದು. ಮೊದಲ ಸಂಚಿಕೆ ಮಾಡಿದಾಗ ನನಗೆ ಸಿಕ್ಕ ಸಂಭಾವನೆ ಇದೇ 250 ರೂಪಾಯಿ ಎಂದರು.

    ಈಗ ಎಷ್ಟೇ ಕಾರ್ಯಕ್ರಮ ಮಾಡಬಹುದು, ಎಷ್ಟೇ ಹಣದ ಚೆಕ್ ಪಡೆದ್ರೂ ಆವಾಗ 250 ರೂ. ಸಿಕ್ಕಾಗ ಆಗುತ್ತಿದ್ದ ಖುಷಿ ಇವತ್ತು ಸಿಗಲ್ಲ. ಅಂದಿನ 250 ರೂ. ಕೊಡುತ್ತಿದ್ದ ನೆಮ್ಮದಿ, ಇವತ್ತಿನ ಬದುಕು ಕೊಡಲ್ಲ. ಇವತ್ತು ಗೆಲ್ಲುವ ಹಣಕ್ಕಿಂತ 250 ರೂ. ಮೌಲ್ಯ ನನಗೆ ಹೆಚ್ಚು ಎಂದು ಹಣಕ್ಕೆ ನಮಸ್ಕರಿಸಿದರು.