Tag: ಆ್ಯಂಕರ್

  • ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರಿಯಾದ ಅಫ್ಘಾನಿಸ್ತಾನದ ಫೇಮಸ್ ಟಿವಿ ಆ್ಯಂಕರ್

    ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರಿಯಾದ ಅಫ್ಘಾನಿಸ್ತಾನದ ಫೇಮಸ್ ಟಿವಿ ಆ್ಯಂಕರ್

    ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕವಂತೂ ಅಲ್ಲಿನ ಜನರ ಪರಿಸ್ಥಿತಿ ಹೇಳ ತೀರದಂತಾಗಿದೆ. ಮಹಿಳೆಯರ ಮೇಲೆ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ಪುರುಷರೂ ಅಲ್ಲಿನ ಸಂಕಷ್ಟಕ್ಕೆ ಹೊರತಾಗಿಲ್ಲ. ಈ ಪರಿಸ್ಥಿತಿಗೆ ಸಾಕ್ಷಿ ಎಂಬಂತೆ ಪತ್ರಕರ್ತನೊಬ್ಬನ ಫೋಟೋಗಳು ವೈರಲ್ ಆಗಿವೆ.

    ವಿವಿಧ ಟಿವಿ ಚಾನೆಲ್‌ಗಳಲ್ಲಿ ಆ್ಯಂಕರ್ ಹಾಗೂ ವರದಿಗಾರನಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದ ಅಫ್ಘಾನಿಸ್ತಾನದ ಮೂಸಾ ಮೊಹಮ್ಮದಿ ಈಗ ತನ್ನ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದ ಸಂದರ್ಭ ಬಂದೊದಗಿದೆ. ಅಫ್ಘಾನಿಸ್ತಾನದ ಭೀಕರ ಬಡತನದಿಂದಾಗಿ ಮೊಹಮ್ಮದಿಯೂ ಬೀದಿಪಾಲಾಗಿದ್ದು, ತನ್ನ ಕುಟುಂಬವನ್ನು ಪೋಷಿಸಲು ಇದೀಗ ಬೀದಿ ಬೀದಿಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

    ಈ ಫೋಟೋವನ್ನು ಟ್ವಿಟ್ಟರ್ ಬಳಕೆದಾರ ಕಬೀರ್ ಹಕ್ಮಲ್ ಫೋಸ್ಟ್ ಮಾಡಿದ್ದು, ಶೀರ್ಷಿಕೆಯಲ್ಲಿ ಇಲ್ಲಿನ ಗಣರಾಜ್ಯ ಪತನವಾದ ಬಳಿಕ ಅಫ್ಘನ್ನರು ಭೀಕರ ಬಡತನವನ್ನು ಅನುಭವಿಸುತ್ತಿದ್ದಾರೆ. ವಿವಿಧ ಟಿವಿ ಚಾನೆಲ್‌ಗಳಲ್ಲಿ ಆ್ಯಂಕರ್ ಹಾಗೂ ವರದಿಗಾರನಾಗಿ ವರ್ಷಗಳಿಂದ ಕೆಲಸ ಮಾಡಿದ ಮೂಸಾ ಮೊಹಮ್ಮದಿ ಈಗ ತಮ್ಮ ಕುಟುಂಬವನ್ನು ಮುನ್ನಡೆಸಲು ಕೈಯಲ್ಲಿ ಹಣವಿಲ್ಲ. ಅಲ್ಪ ಸ್ವಲ್ಪ ಹಣ ಗಳಿಸಲು ಈಗ ಅವರು ಬೀದಿಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ರವಾದಿ ಕುರಿತ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಅಮೆರಿಕ

    ಮೂಸಾ ಮೊಹಮ್ಮದಿ ಅವರ ಫೋಟೋಗಳು ವೈರಲ್ ಆದ ಬಳಿಕ ಇದು ಅಫ್ಘಾನಿಸ್ತಾನದ ರಾಷ್ಟ್ರೀಯ ರೇಡಿಯೋ ಹಾಗೂ ದೂರದರ್ಶನ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನಕ್ಕೆ ಬಂದಿದೆ. ಮಾಜಿ ದೂರದರ್ಶನದ ಆ್ಯಂಕರ್ ಹಾಗೂ ವರದಿಗಾರನನ್ನು ತಮ್ಮ ಏಜೆನ್ಸಿಗೆ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

    Live Tv

  • ಡ್ರಗ್ಸ್ ಕೇಸ್ ಪ್ರಕರಣ – ಡ್ಯಾನ್ಸರ್ ಕಿಶೋರ್ ಕೇಸ್ ಕೈ ಬಿಡುವಂತೆ ಕರಾವಳಿ ಶಾಸಕನಿಂದ ಒತ್ತಡ

    ಡ್ರಗ್ಸ್ ಕೇಸ್ ಪ್ರಕರಣ – ಡ್ಯಾನ್ಸರ್ ಕಿಶೋರ್ ಕೇಸ್ ಕೈ ಬಿಡುವಂತೆ ಕರಾವಳಿ ಶಾಸಕನಿಂದ ಒತ್ತಡ

    ಮಂಗಳೂರು: ಆ್ಯಂಕರ್ ಕಂ ನಟಿ ಅನುಶ್ರೀ ಡ್ರಗ್ಸ್ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ದೊರೆತಿದೆ. ಅನುಶ್ರೀ ಹೆಸರು ಹೇಳಿದ್ದ ಡ್ಯಾನ್ಸರ್ ಕಿಶೋರ್ ರಕ್ಷಣೆಗೆ ಭಾರೀ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಡ್ಯಾನ್ಸರ್ ಕಿಶೋರ್ ಅರೆಸ್ಟ್ ಆದ ದಿನವೇ ದೊಡ್ಡ ಲಾಬಿ ನಡೆದಿತ್ತು. ಪ್ರಕರಣದಿಂದ ಕಿಶೋರ್‍ನನ್ನು ಕೈ ಬಿಡುವಂತೆ ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ. ಶಾಸಕನ ಒತ್ತಡ ಸಫಲ ಆಗಿದ್ದರೆ ಅನುಶ್ರೀ ಸೇರಿದಂತೆ ಎಲ್ಲರು ಬಚಾವ್ ಆಗುತ್ತಿದ್ದರು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

    ಡ್ರಗ್ ಪೆಡ್ಲರ್ ಗೂ ಶಾಸಕನಿಗೂ ಇರೋ ಸಂಬಂಧ ಏನು..?
    ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಆ ಶಾಸಕನಿಗೆ ಆಪ್ತರಾಗಿದ್ದಾರೆ. ಆ ಪ್ರತಿಷ್ಠಿತ ವ್ಯಕ್ತಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ರೂವಾರಿ. ಕಿಶೋರ್ ಕೂಡ ಆತನ ಅಣತಿಯಂತೆ ಬುಕ್ಕಿಗಳಿಗೆ ಡ್ರಗ್ಸ್ ಪಾರ್ಟಿ ಕೊಟ್ಟಿದ್ದ. ಆ ಪ್ರತಿಷ್ಠಿತ ವ್ಯಕ್ತಿ ರಾಜಕೀಯ ಒತ್ತಡ ತಂದು ಕಿಶೋರ್ ನನ್ನು ಪ್ರಕರಣದಿಂದ ಕೈ ಬಿಡುವ ಯೋಜನೆ ಹಾಕಿದ್ದ. ಆದರೆ ಆ ಯೋಜನೆಯನ್ನು ಸಿಸಿಬಿ ಪೊಲೀಸರು ಸಂಪೂರ್ಣ ಪ್ಲಾಪ್ ಮಾಡಿದ್ದಾರೆ ಎನ್ನಲಾಗಿದೆ.

    ಮತ್ತೋರ್ವ ಕೋರಿಯೋಗ್ರಾಫರ್ ಅರೆಸ್ಟ್:
    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಕೋರಿಯೋಗ್ರಾಫರ್‍ನನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಸ್ಯಾಮ್ ಫರ್ನಾಂಡೀಸ್ ನನ್ನು ಅರೆಸ್ಟ್ ಮಾಡಲಾಗಿದ್ದು, ಈತ ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಅನುಶ್ರೀ ಸೇರಿದಂತೆ ಸ್ಯಾಂಡಲ್ ವುಡ್ ನಟ-ನಟಿಯರ ಹೆಸರುಗಳನ್ನು ಹೇಳಿದ್ದಾನೆ. ಬೆಂಗಳೂರು, ಮಂಗಳೂರಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಕಿರುತೆರೆ ಕಲಾವಿದರು, ಡ್ಯಾನ್ಸರ್ ಗಳು ಭಾಗಿಯಾಗಿದ್ರು. ವಿಶೇಷವಾಗಿ ಕಿರುತೆರೆ ಸ್ಟಾರ್ ಗಳು ಪಾರ್ಟಿಯಲ್ಲಿ ಭಾಗಿರುವುದಾಗಿ ಹೇಳಿದ್ದಾನೆ. ಸದ್ಯ ಸ್ಯಾಮ್ ಹೇಳಿಕೆಯಿಂದ ಕಿರುತೆರೆ, ರಿಯಾಲಿಟಿ ಶೋಗಳ ಸ್ಟಾರ್ ಗಳಿಗೆ ಢವ ಢವ ಶುರುವಾಗಿದೆ.

    ಅನುಶ್ರೀ ವಿಚಾರಣೆ:
    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕಿಶೋರ್, ತರುಣ್ ಹಾಗೂ ನೌಶೀನ್ ಎಂಬವರನ್ನು ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ತರುಣ್, ಅನುಶ್ರೀ ಕುಡಿತಿದ್ದಳು ಅಂತ ಮಾತ್ರ ಹೇಳಿದ್ದ. ಆದರೆ ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಒಂದೊಂದೇ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಾವು ಡ್ರಗ್ ಪಾರ್ಟಿ ಮಾಡುತ್ತಿದ್ವಿ, ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳತ್ತಿದ್ದಳು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿತ್ತು. ಡ್ರಗ್ಸ್ ಪೆಡ್ಲರ್‍ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಈ ಹಿಂದೆ ಸಿಸಿಬಿ ನೋಟಿಸ್ ನೀಡಿತ್ತು. ಹೀಗಾಗಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು.

  • ಪಾಕ್ ಟೀಂ ಗೆಲುವನ್ನು ಅಸಭ್ಯವಾಗಿ ಸಂಭ್ರಮಿಸಿದ ಆ್ಯಂಕರ್- ವಿಡಿಯೋ ನೋಡಿ

    ಪಾಕ್ ಟೀಂ ಗೆಲುವನ್ನು ಅಸಭ್ಯವಾಗಿ ಸಂಭ್ರಮಿಸಿದ ಆ್ಯಂಕರ್- ವಿಡಿಯೋ ನೋಡಿ

    ಇಸ್ಲಾಮಾಬಾದ್: ಪಾಕ್ ತಂಡದ ಗೆಲುವನ್ನು ಪಾಕಿಸ್ತಾನದ ಟಿವಿ ಚಾನೆಲ್‍ವೊಂದರ ಆ್ಯಂಕರ್ ಅಸಭ್ಯವಾಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಶುಕ್ರವಾರ ಪಾಕಿಸ್ತಾನ ತಂಡವು ಅಫ್ಘಾನಿಸ್ಥಾನ ವಿರುದ್ಧ 3 ವಿಕೆಟ್ ಅಂತರದ ಗೆಲವು ಸಾಧಿಸಿತ್ತು. ಈ ವೇಳೆ ತಮ್ಮ ದೇಶದ ಆಟಗಾರರ ಗೆಲುವವನ್ನು ನ್ಯೂಸ್ ಬುಲೆಟಿನ್‍ನಲ್ಲಿ ಹೇಳುತ್ತಿದ್ದಾಗ ಆ್ಯಂಕರ್ ಅಸಭ್ಯವಾಗಿ ಸನ್ನೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಪಾಕಿಸ್ತಾನದ ಟಿವಿ ಚಾನೆಲ್‍ವೊಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಈ ವೇಳೆ ಮಹಿಳಾ ಆ್ಯಂಕರ್ ಜೊತೆಗೆ ಕುಳಿತಿದ್ದ ಆ್ಯಂಕರ್, ತಮ್ಮ ಎರಡೂ ಕೈಗಳ ಮಧ್ಯದ ಬೆರಳು ತೋರಿಸಿ, ಡಾನ್ಸ್ ಮಾಡಿದ್ದಾರೆ. ಈ ಮೂಲಕ ಪಾಕ್ ಟೀಂ ಸಾಧನೆಯ ಸುದ್ದಿಯನ್ನು ನಗುತ್ತಲೇ ಹೇಳಿದ್ದಾರೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಶನಿವಾರ ನಡೆದ ಇಂಡೊ ಪಾಕ್ ವಿರುದ್ಧ ಕದನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಧವನ್‍ರ ಅಬ್ಬರದ ಶತಕಗಳ ನೆರವಿನಿಂದ ಭಾರತ 9 ವಿಕೆಟ್ ಗಳ ಭರ್ಜರಿ ಜಯ ಪಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಬೆಂಗಳೂರು: ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಪರ್ಧಿಯೊಬ್ಬರ ಹುಟ್ಟುವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

    ಬೆಳಗಾವಿ ಮೂಲದ ಲಕ್ಷ್ಮೀ ಎಂಬವರ ಹುಟ್ಟುಹಬ್ಬವನ್ನು ಶೋನಲ್ಲಿ ಆಚರಿಸಿಕೊಳ್ಳಲಾಯಿತು. ಈ ವೇಳೆ ಅನುಶ್ರೀ ಅವರು ಲಕ್ಷ್ಮೀ ಅವರಿಗೆ ಶಾಲೆಗೆ ಹೋಗಲು ಬ್ಯಾಗ್ ನೀಡಿ ಬಳಿಕ ತನ್ನ ಶಾಲೆಯ ದಿನಗಳ ಬಗ್ಗೆ ನೆನಪಿಸಿಕೊಂಡರು.

    ನಾನು ಶಾಲೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಬ್ಯಾಗ್ ಇರಲಿಲ್ಲ. ಅವಾಗ ನಮಗೆ ಬ್ಯಾಗ್ ಕೊಡಿಸುವವರೂ ಯಾರೂ ಇರಲಿಲ್ಲ. ಹೀಗಾಗಿ ನಾನು ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುತ್ತಿದ್ದೆ. ಆದ್ರೆ ಈಗ ಹಾಗೆ ಅಲ್ಲ. ಮಕ್ಕಳಿಗೆ ಬೇಕಾದಂತಹ ವೈರಟಿಯ ಬ್ಯಾಗ್ ಗಳು ಬಂದಿವೆ ಅಂತ ಹೇಳಿದ್ರು.

    ತನ್ನದೇ ಶೈಲಿಯಲ್ಲಿ ಹಾಡುತ್ತಾ ಜನರ ಮನಗೆದ್ದಿರುವ ಲಕ್ಷ್ಮೀ ಅವರ ಹುಟ್ಟುಹಬ್ಬವನ್ನು ಆಚರಿಸಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ನಾನು ಕೇಕ್ ಕಟ್ ಮಾಡುತ್ತಿರುವುದಾಗಿ ಹೇಳಿ ಲಕ್ಷ್ಮೀ ಕೂಡ ಭಾವುಕರಾದ್ರು. ಕೇಕ್ ಕಟ್ ಮಾಡಿದ ಬಳಿಕ ಸರಿಗಮಪದ ಜಡ್ಜ್ ಗಳು ಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಅವರು ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಪಡೆದಿದ್ದ ಅನುಶ್ರೀ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.

  • ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ಟಿವಿ ವಾಹಿನಿಯ ನೇರ ಪ್ರಸಾರದಲ್ಲಿ ತಮಾಷೆಯ ಸಂಗತಿಯೊಂದು ನಡೆದಿದ್ದು, ಪಕ್ಷಿಯೊಂದು ನೇರಪ್ರಸಾರದ ವೇಳೆ ನಿರೂಪಕಿಯ ತಲೆಯ ಮೇಲೆ ಬಂದು ಕುಳಿತುಕೊಂಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದ ಪಕ್ಷಿ ಇದಾಗಿದೆ. ಕಾರ್ಯಕ್ರಮಕ್ಕಾಗಿ ಪಕ್ಷಿಯನ್ನ ಸೆಟ್‍ಗೆ ತರಲಾಗಿತ್ತು. ಇಲ್ಲಿನ ಕೆಎಫ್‍ಎಂಬಿ ಟಿವಿಯಲ್ಲಿ ಬೆಳಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಅಂದು “ಝೂ ಡೇ” ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಿರೂಪಕರಾದ ನಿಚೆಲ್ ಮೆಡೆನಾ ಹಾಗೂ ಎರಿಕ್ ಕಹ್ನೆಟ್ ಸುದ್ದಿ ಓದುತ್ತಿದ್ದರು.

    ಇಬ್ಬರು ನಿರೂಪಕರು ಕಾರ್ಯಕ್ರಮದ ಮಧ್ಯೆ ಬ್ರೇಕ್ ತೆಗೆದುಳ್ಳಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಲೆಟ್ ಹಕ್ಕಿ ಬಂದು ನಿರೂಪಕಿ ನಿಚೆಲ್ ತಲೆ ಮೇಲೆ ಕುಳಿತುಕೊಂಡಿದೆ. ಹಕ್ಕಿಯ ಅನಿರೀಕ್ಷಿತ ಪ್ರವೇಶದಿಂದ ಅಚ್ಚರಿಯಾದರೂ ಅವರು ಭಯಪಡಲಿಲ್ಲ. ಆದರೆ ಪಕ್ಕದಲ್ಲಿ ಕುಳಿತಿದ್ದ ಸಹ ನಿರೂಪಕ ಎರಿಕ್ ಕಹ್ನೆಟ್ ನಗು ತಡೆಯಲು ಸಾಧ್ಯವಾಗದೆ ಜೋರಾಗಿ ನಕ್ಕಿದ್ದಾರೆ. ಬಳಿಕ ಕೆಲವು ಸೆಂಕೆಡ್ ಆದ ನಂತರ ಆ ಪಕ್ಷಿ ಎರಿಕ್ ಕಹ್ನೆಟ್ ತಲೆ ಮೇಲೂ ಹಾರಿದೆ.

    ಈ ವಿಡಿಯೋವನ್ನು ಎರಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.